ಕೊಂಕಣಿಯಲ್ಲೂ ಲೇಖನ, ದೇವರ ಹಾಡು, ಕಥೆ, ಸಂಭಾಷಣಾ ರೂಪ ಇದನ್ನು ಬರೆಯಬಹುದೇ?

3.333335

ನಮ್ಮ ಕೊಂಕಣಿಯಲ್ಲೂ ಈಗ ತುಂಬಾ ಪುಸ್ತಕಗಳು ಪ್ರಕಟವಾಗುತ್ತವೆ. ನಮ್ಮ ಕೊಂಕಣಿ ಭಾಷೆ ಮಾತನಾಡುವವರು ಎಲ್ಲಾ ಧರ್ಮದಲ್ಲೂ ಇದ್ದಾರೆ. ಕೊಂಕಣಿಗರು- ಗೌಡ ಸಾರಸ್ವತ ಬ್ರಾಹ್ಮಣರು, ಸಾರಸ್ವತರು, ಕ್ರೈಸ್ತರು, ಮುಸ್ಲಿಮರು, ಕುಡುಬಿಗಳು, ಗೋವಾದಲ್ಲಿರುವ ಎಲ್ಲರೂ ಹೀಗೆ ಕೊಂಕಣಿ ಭಾಷೆ ತುಂಬಾ ಜನಮಾತನಾಡುತ್ತಾರೆಂದು ಅದಕ್ಕೆ ಸಂವಿಧಾನದಲ್ಲೂ ಸ್ಥಾನ ಸಿಕ್ಕಿದೆ. ವಿಶ್ವಕೊಂಕಣಿ ಸಮ್ಮೇಳನ ನಡೆದಿದೆ. ಹಲವಾರು ದೇಶಗಳಲ್ಲಿ ನಮ್ಮ ಕೊಂಕಣಿ ಮಾತನಾಡುವ ಜನರು ಇದ್ದಾರೆ. ತುಳು ಕೊಂಕಣಿ ಸಾಹಿತ್ಯ ಅಕಾಡಮಿಯು ಸ್ಥಾಪನೆಯಾದಂದಿನಿಂದ ಹಲವಾರು ಕೊಂಕಣಿ ಪುಸ್ತಕಗಳು ಪ್ರಕಟವಾಗಿರುತ್ತದೆ. ನಮ್ಮ ಜಿಲ್ಲೆಯಲ್ಲಿ ಕೊಂಕಣಿಯನ್ನು ಶಾಲೆಗಳಲ್ಲೂ ಕಲಿಸುತ್ತಿದ್ದಾರೆ. ಕೊಂಕಣಿಗೆ ಕನ್ನಡಲಿಪಿ ಮತ್ತು ದೇವನಾಗರಿ ಲಿಪಿಯನ್ನು ಉಪಯೋಗಿಸುತ್ತಿದ್ದಾರೆ. ಕೊಂಕಣಿ ನಿಘಂಟನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಗಳು ನಡೆಯುತ್ತಾ ಇದೆ.
ನಾನು ಕೊಂಕಣಿಗನಾದರೂ ಕೊಂಕಣಿಯಲ್ಲಿ ಮಾತನಾಡುವುದು ಮಾತ್ರ ಗೊತ್ತಲ್ಲದೇ ಬರಹ ರೂಪದಲ್ಲಿ
ಕೊಂಕಣಿಯನ್ನು ಬರೆಯಲು ಸುರುಮಾಡು ವಿಚಾರವಿದೆ. ಆದರೆ ನಮ್ಮ ಕೊಂಕಣಿ ಭಾಷೆ ಮಾತನಾಡುವ ಎಲ್ಲಾ ಜನರು ಒಂದೇ ರೀತಿಯಲ್ಲಿ ಮಾತನಾಡುವುದಿಲ್ಲಾ. ಉಚ್ಚಾರದಲ್ಲಾಗಲೀ, ಬರಹದಲ್ಲಾಗಲೀ ಬೇರೆ ಬೇರೆ ಕಡೆ ವಾಸಿಸುವವರು ಬೇರೆ ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ಕೊಚ್ಚಿ, ಮಂಗಳೂರು , ಉಡುಪಿ, ಕುಂದಾಪುರ, ಉತ್ತರ ಕನ್ನಡ, ಗೋವಾ ದಲ್ಲಿ ವಾಸಿಸುವ ಗೌಡಸಾರಸ್ವತರು ಮಾತನಾಡುವುದರಲ್ಲಿ ವ್ಯತ್ಯಾಸಗಳಿವೆ. ಹಾಗೆ ಕ್ರೈಸ್ತರ ಕೊಂಕಣಿಗೂ ಗೌಡ ಸಾರಸ್ವತರ ಕೊಂಕಣಿಗೂ ವ್ಯತ್ಯಾಸವಿದೆ. ಭಟ್ಕಳದಲ್ಲಿರುವ ಮುಸ್ಲಿಮರು, ಉತ್ತರ ಕನ್ನಡದಲ್ಲಿರುವ ಹಲವಾರು ಪಂಗಡದವರು ಕೂಡಾ (ಕುಡುಬಿ ಜನಾಂಗ ಮುಂತಾದವರು) ಮಾತನಾಡುವ ಕೊಂಕಣಿ ಬೇರೆ ಬೇರೆಯಾಗಿರುತ್ತದೆ. ಇದಕ್ಕೆಲ್ಲಾ ಒಂದೇ ರೀತಿಯ ರೂಪಕೊಡುವ ಸಲುವಾಗಿ ಕೆಲಸಗಳು ನಡೆಯುತ್ತಿವೆ. ೧೯೯೫ರಲ್ಲಿ ಮಂಗಳೂರಿನಲ್ಲಿ ಏಳು ದಿವಸಗಳ ವಿಶ್ವಕೊಂಕಣಿ ಸಮ್ಮೇಳನ ನಡೆದಿತ್ತು. ಅದಕ್ಕೆ ಸಹಸ್ರಾರು ಕೊಂಕಣಿಗರು (ಕೊಂಕಣಿ ಮಾತನಾಡುವ ಎಲ್ಲಾ ಧರ್ಮದವರು) ಭಾಗವಹಿಸಿ ಅಲ್ಲಿ ತೆಗೆದುಕೊಂಡ ತೀರ್ಮಾನದಂತೆ ಮಂಗಳೂರಿನ ಶಕ್ತಿನಗರದಲ್ಲಿ "ಕೊಂಕಣಿ ಗಾಂವ್" ನಲ್ಲಿ ೨ ಕೋಟಿ ರೂ. ವೆಚ್ಚದಲ್ಲಿ 'ವಿಶ್ವ ಕೊಂಕಣಿ ಕೇಂದ್ರ' ಒಂದು ಬೃಹತ್ ಕಟ್ಟಡ ಎದ್ಧು ನಿಂತಿದೆ. ಉದ್ಘಾಟನೆಯ ಸಮಯಕ್ಕೆ ಕ್ಷಣಗಣನೆ ಸುರುವಾಗಿದೆ. ಕೊಂಕಣಿ ಸಾಹಿತ್ಯವನ್ನು ವಿಶ್ವದಾದ್ಯಂತ ತಲಪಿಸುವ ನಿಟ್ಟಿನಲ್ಲಿ ದೇಶದ ನಾನಾ ಕಡೆ ವಾಸಿಸಿರುವ ಅತ್ಯುತ್ತಮ ಕೊಂಕಣಿ ಸಾಹಿತಿಗಳನ್ನು ಸದಸ್ಯರನ್ನಾಗಿ ಮಾಡಿ ಹಿಂದಿ, ಇಂಗ್ಲೀಷ್ ಮತ್ತು ದೇಶದ ಇತರ ಭಾಷೆಗಳಿಗೆ ಭಾಷಾಂತರಿಸುವ ಯೋಜನೆ ಹಾಕಿಕೊಂಡಿರುವ "ವಿಶ್ವ ಸಾಹಿತ್ಯ ಕೊಂಕಣಿ ಅಕಾಡಮಿ" ರೂ.೪೦ ಲಕ್ಷ ವೆಚ್ಚದಲ್ಲಿ ' ಬೃಹತ್ ವಿಶ್ವ ಕೊಂಕಣಿ ಪರಿಚಯ ಕೋಶ'ವನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸುವ ಕಾರ್ಯವನ್ನು ಪ್ರಾರಂಭಿಸಿದೆ.
ವಿಶ್ವ ಕೊಂಕಣಿ ಅಭಿಯಾನ ಯೋಜನೆ ಮೊನ್ನೆ ದೇಶದ ರಾಜಧಾನಿ ದಿಲ್ಲಿಯಲ್ಲಿ ಉದ್ಘಾಟನೆಗೊಂಡು ಅಲ್ಲಿಂದ ದೇಶದ ಹಲವಾರು ನಗರಗಳಲ್ಲಿ ಕೊಂಕಣಿ ಸಾಹಿತಿಗಳ 'ಮುಲಾಖಾತ್' ನಡೆಸುವ ನಿಟ್ಟಿನಲ್ಲಿ
ಕಾರ್ಯವನ್ನು ಆರಂಭಿಸಿದೆ. ಇಷ್ಟೇಲ್ಲಾ ಕಾರ್ಯವು ಉತ್ಸಾಹದಿಂದ ಮಾಡುತ್ತಿರುವ ನವತರುಣ ೭೫ರ ಹರಯದ ವಿಶ್ವ ಕೊಂಕಣಿ ಕೇಂದ್ರದ ರುವಾರಿ ಬಸ್ತಿ ವಾಮನ ಶೆಣೈ ಯವರು.

ಇಷ್ಟೆಲ್ಲಾ ಉತ್ಸಾಹದಿಂದ ಕೆಲಸ ಮಾಡುತ್ತಿರುವ ಇವರು ಇಂದು ಅಂದರೆ ೨೮-೧೦-೨೦೦೮ರಂದು ತಮ್ಮ ಪತ್ನಿಯನ್ನು ಅಗಲಿರುತ್ತಾರೆ. ಅವರಿಗೆ ದೇವರು ಈ ದುಃಖವನ್ನು ಸಹಿಸುವ ಮತ್ತು ಇನ್ನು ಮುಂದೆಯೂ ಕೊಂಕಣಿ ಕಾರ್ಯವನ್ನು ಮುನ್ನಡೆಸಲು ಶಕ್ತಿಯನ್ನು ಕೊಡಲಿ ಎಂದು ಕೊಂಕಣಿಗರೆಲ್ಲಾ ಹಾರೈಸುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟರಾಯರೆ,
ಕೊಂಕಣಿ ಭಾಷಿಗರ ಈ ಸ್ಫೂರ್ತಿ ಮತ್ತು ಉತ್ಸಾಹ ನಾನು ಬಹಳ ದಿನಗಳಿಂದ ಗಮನಿಸಿ ಆನಂದಪಟ್ಟಿದ್ದೇನೆ. ನಿಮ್ಮ ಎಲ್ಲ ಪ್ರಯತ್ನಗಳಿಗೆ ಶುಭಹಾರೈಕೆಗಳು. ಕೊಂಕಣಿ (ಜಿ.ಎಸ್.ಬಿ.)ಕಲಿಯುವ ನನ್ನ ಪ್ರಯತ್ನ ನನ್ನ ವಿದ್ಯಾರ್ಥಿಗಳಿಂದ ಸ್ವಲ್ಪ ಫಲಕಾರಿಯಾಗಿದೆ. ಒಂದು ಜಾಹೀರಾತನ್ನು ನೋಡಿ ಕ್ರೈಸ್ತರು ಆಡುವ ಕೊಂಕಣಿ ಪುಸ್ತಕವೊಂದನ್ನು ಮಂಗಳೂರಿನಿಂದ ತರಿಸಿದ್ದೆ. ಆದರೆ ಜಿ.ಎಸ್.ಬಿ.ಯವರು ಆಡುವ ಕೊಂಕಣಿಗಿಂತ ಭಿನ್ನವಾಗಿದೆ ಅದು. ಮಂಗಳೂರು ಆಕಾಶವಾಣಿಯ ಕೊಂಕಣಿ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು "ಸರಸ್ವತಿ, ತುಕ್ಕ ನಮನ, ಅಮ್ಮಿ ಆಯ್ಲೀಂತಿ ತುಕ್ಕ ಶರಣ" ಎಂಬ ಭಕ್ತಿಗೀತೆಯನ್ನು ಕೇಳಿದ್ದು ಇನ್ನೂ ನೆನಪಲ್ಲಿದೆ. ಹಾಗೆಯೇ ಬೆಂಗಳೂರು ದೂರದರ್ಶನದಲ್ಲೂ ಕೊಂಕಣಿ ಮಹಿಳೆಯರು ನಡೆಸಿಕೊಟ್ಟ ಒಂದು ಕಾರ್ಯಕ್ರಮ ನೋಡಿದ ನೆನಪು. ನನ್ನ ಅಭಿಪ್ರಾಯದಲ್ಲಿ ಸ್ವಂತ ಲಿಪಿ ಇಲ್ಲದೆ ದೇವನಾಗರಿ, ಕನ್ನಡ ಮರಾಠಿ ಲಿಪಿಯಲ್ಲಿ ಬರೆಯುತ್ತಿರುವುದೊಂದೇ ಇದರ ಕೊರತೆ. ಯಾರಾದರೂ ಉತ್ಸಾಹಿಗಳು ಮನಸ್ಸು ಮಾಡಿದರೆ ಇದನ್ನೂ ತುಂಬುವುದೇನೂ ಕಷ್ಟವಲ್ಲ. ಬಸ್ತಿ ವಾಮನ ಶೆಣೈ ಅವರ ಸಂಪಾದಕತ್ವದ "ಪಂಚ್ಕಾದಾಯಿ" ಅನ್ನುವ ಕೊಂಕಣಿ ಪತ್ರಿಕೆ (ಪಾಕ್ಷಿಕ ಎಂದು ನೆನಪು) ಕೂಡ ನೋಡಿದ್ದೆ.

"ಏರಿದವನು ಚಿಕ್ಕವನಿರಬೇಕು"

ಪಂಚ್ಕಾದಾಯಿ ಎಂಬುವುದು ಹಲವಾರು ವರುಷಗಳ ಹಿಂದೆ ಬಂಟ್ವಾಳ ವಾಸುದೇವ ಬಾಳಿಗಾ ಎಂಬವರು ಪ್ರಾರಂಭಿಸಿದ್ದು. ಇವರು ಕರ್ನಾಟಕ ಸರಕಾರದವರು ಪ್ರಾರಂಭಿಸಿದ ಕೊಂಕಣಿ ಸಾಹಿತ್ಯ ಅಕಾಡಮಿ ಇದರ ಪ್ರಥಮ ಅಧ್ಯಕ್ಷರು. ಮುಂದೆ ಅವರ ಆರೋಗ್ಯವು ಬಿಗಡಾಯಿಸಿದ ಕಾರಣ ಅವರು ಅಧ್ಯಕ್ಷಸ್ಥಾನಕ್ಕೆ ರಾಜಿನಾಮೆ ಕೊಟ್ಟರು. ನಂತರ ಬಸ್ತಿ ವಾಮನ ಶೆಣೈಯವರು ಅದರ ಅಧ್ಯಕ್ಷರಾದರು. ಬಂಟ್ವಾಳ ವಾಸುದೇವ ಬಾಳಿಗರು ಕೊಂಕಣಿ ಮಾಸಿಕ ಪತ್ರಿಕೆ 'ಪಂಚ್ಕಾದಾಯಿ' ಯನ್ನು ಮಣಿಪಾಲ ಕೊಂಕಣಿ ಭಾಷೋದ್ಧಾರ ಟ್ರಸ್ಟ್ ಇದಕ್ಕೆ ಹಸ್ತಾಂತರಿಸಿದರು. ಬಿ.ವಿ. ಬಾಳಿಗಾ ಎಂದೇ (ಕೊಂಕಣಿಯಲ್ಲಿ ಬ.ವಾ.ಬಾಳೊ)ಕರೆಯಲ್ಲಡುವ ಬಂಟ್ವಾಳ ವಾಸುದೇವ ಬಾಳಿಗರ ನಿಧನ ನಂತರ ಸಂಪಾದಕರಾಗಿ ಇನ್ನೊಬ್ಬ ನಮ್ಮ ಬಂಟ್ವಾಳ ಬಾಳಿಗಾ ಕುಟುಂಬದ ಬಂಟ್ವಾಳ ಶಾಂತಾರಾಮ ಬಾಳಿಗಾ ಇವರು ಮೇಲಿನ ಟ್ರಸ್ಟ್ ಮುಖಾಂತರ ಅದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಪಂಚ್ಕಾದಾಯಿಯನ್ನು ಓದುವ ಇಚ್ಛೆ ನಿಮಗಿದ್ದರೆ ನಿಮ್ಮ ವಿಳಾಸ ತಿಳಿಸಿದರೆ ನಾನು ನಿಮಗೆ ಪ್ರತಿ ತಿಂಗಳು ಅದನ್ನು ಮಣಿಪಾಲದಿಂದಲೇ ಕಳಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ. ಕೊಂಕಣಿಯಲ್ಲಿ ನೀವು ತಿಳಿಸಿರುವಂತಹ ಹಲವಾರು ದೇವರನಾಮಗಳಿವೆ.

ಕೊಂಕಣಿ ಸರದಾರನೆಂಬ ಬಿರುದನ್ನು ಪಡೆದಿರುವ ಬಸ್ತಿ ವಾಮನ ಶೆಣೈಯವರು ೧೯೬೮ರಲ್ಲಿ ರಾಯಭಾಗ ಸಿಂಡಿಕೇಟ್ ಬ್ಯಾಂಕಿನ ಮ್ಯಾನೇಜರ್ ಆಗಿದ್ದರು. ನೀವು ಉತ್ತರ ಕರ್ನಾಟಕದವರಾದರೆ ನಿಮಗೆ ಅಥವಾ ನಿಮ್ಮ ಹಿರಿಯರಿಗೆ ತಿಳಿದಿರಬಹುದು. ಇವರು ಕೊಂಕಣಿಗಾಗಿ ಈ ಇಳಿವಯಸ್ಸಿನಲ್ಲೂ ತುಂಬಾ ಶ್ರಮಪಡುತ್ತಿದ್ದಾರೆ.