೬೦೦೦ದ ಗಡಿ ದಾಟಿದ ಕನ್ನಡ ವಿಕಿ

0

ನಿನ್ನೆ ದುರ್ಗಾಷ್ಟಮಿಯ ಶುಭ ದಿನದಂದು ಕನ್ನಡ ವಿಕಿಪೀಡಿಯಾ ೬೦೦೦ ಲೇಖನಗಳ ಗಡಿಯನ್ನು ದಾಟಿದೆ.

ಕೆಲ ದಿನಗಳ ಹಿಂದೆ ಸಂಪದದಲ್ಲಿ ನನ್ನ ಮತ್ತು ಹರಿ ನಾಡಿಗರ ಲೇಖನಗಳ ನಂತರ ಸದಸ್ಯರ ಸಂಖ್ಯೆ ಗಣನೀಯ ಹೆಚ್ಚಳ ಉಂಟಾಗಿದೆ, ಅದೇ ರೀತಿ ಹೊಸ ಸದಸ್ಯರು ಬರೆದ ಲೇಖನಗಳ ಸಂಖ್ಯೆಯಲ್ಲಿ ಹೆಚ್ಚಿನ ಬೆಳವಣಿಗೆ ಸಾಧ್ಯವಾಗಿಲ್ಲ. ಕೆಲವೇ ಸದಸ್ಯರು ನಿರಂತರವಾಗಿ ಹೊಸ ಲೇಖನಗಳನ್ನು ಬರೆಯುತ್ತಿದ್ದಾರೆ. ನಿರಂತರ ಹೊಸತನಕ್ಕಾಗಿ ಹೊಸ ವಿಷಯಗಳ ಲೇಖನಗಳಿಗಾಗಿ ಹೆಚ್ಚು ಜನರು ಬರೆದಷ್ಟು ಒಳ್ಳೆಯದು. ಬನ್ನಿ ಬರೆಯೋಣ, ಕನ್ನಡ ವಿಕಿಯನ್ನು ಬೆಳೆಸೋಣ...

ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.