ಭಾರತ ಮತ್ತು ಪಾಕ್ ನಡುವೆ ರೈಲು ಸಂಚಾರ ಸೂಕ್ತವೆ?

0

ಭಾರತ ಹಾಗು ಪಾಕ್ ಸ್ನೇಹ ಸೇತುವಾಗಿ ಬಸ್ ಸಂಚಾರ ಆರಂಭವಾಯ್ತು. ಇದು ಸಮಂಜಸ ನಿರ್ಧಾರ,ಒಳ್ಳೆಯ ಬೆಳವಣಿಗೆ.ಆದರೆ ಅದರ ಬೆನ್ನಹಿಂದೇ ಪ್ರಾರಂಬಿಸಿದ ರೈಲು ಸಂಚಾರ ಉತ್ತಮ ನಿರ್ಧಾರವೆಂದು ಅನಿಸುತ್ತಿಲ್ಲ.ಭಾರತ ಪಾಕ್ ಒಂದೇ ಬೀಜದ ಕುಡಿಗಳು,ಹಿಡಿ ಭೂಮಿಗಾಗಿ ಕಿತ್ತಾಡತ್ತಿದ್ದ ಅಣ್ಣ ತಮ್ಮಂದಿರು.ಇಲ್ಲಿ ಭ್ರಾತ್ರುತ್ವದ ಪ್ರೀತಿಯಾಗಲಿ ಮಾನವೀಯತೆಯ ಮಾತುಗಳಾಗಲೀ ಮರೆವ ಕ್ಷಣಗಳೇ ಜಾಸ್ತಿ.ಊಸರವಳ್ಳಿಗೆ ಅದಾವ ಬಣ್ಣ?

ನಮ್ಮಲ್ಲಿ ರಕ್ಶಣಾ ವ್ಯವಸ್ಥೆ ಅಷ್ಟೊಂದು ಸುಬಧ್ರವಾಗಿದೆಯೇ?ಅಲ್ಲಲ್ಲಿ ಕಂಡುಬರುವ ಗಲಬೆ ಸಾವು ನೋವುಗಳಿಗೆ ಉಗ್ರರ ಕೈವಾಡವಿದೆ ಎಂದು ಶಂಕಿಸುವ ನಾವು, ಹಲವು ವರುಷಗಳಿಂದ ಇಸ್ಲಾಮಿಕ್ ಉಗ್ರರು ನಮ್ಮಲ್ಲಿ ಇರುವುದನ್ನು ಸಾಬೀತು ಪಡಿಸಿಕೊಂಡ ನಾವು,ಅವರ ನಿರ್ಮೂಲನೆಯಲ್ಲಿ ಸಫಲವಾದ ಯಾವ ಕ್ರಮ ಕೈಗೊಂಡಿದ್ದೇವೆ? ಸರ್ಕಾರದ ಕೆಲವು ನಿರ್ಧಾರಗಳು ಅವರ ಬೆಳವಣಿಗೆಗೆ ಬೆಂಬಲವಾಗಿಯೇ ನಿಂತಿದ್ದಾರೇನೋ ಎಂಬ ಸಂಶಯ ಹುಟ್ಟಿಸುವಂತಿದೆ.

ಭಾರತ ಪಾಕ್ ನಡುವೆ ರೈಲು ಸಂಚಾರ ಬೇಕಿತ್ತೆ? ಅಂದು ನೆಹರು ಅವರ ಹೆಗಲಮೇಲೆ ಕೈ ಇಟ್ಟು ಹಿಂದೂ ಚೀನಿ ಬಾಯಿ ಬಾಯಿ ಅಂದಾವರೇ ಅಲ್ಲವೆ ನಮ್ಮ ಕಣ್ ಮುಚ್ಹಿಸಿ ಯುದ್ಧಕ್ಕೆ ಸನ್ನದ್ದರಾದದ್ದು. ಇನ್ನುಮುಂದೆ ಇಲ್ಲಿನೆಲೆನಿಂತ ಇಸ್ಲಾಮಿ ಉಗ್ರರಿಗೆ ಮದ್ದು ಗುಂಡುಗಳ ರವಾನೆಗೆ,ಭಯೊತ್ಪಾದಕರ ಓಡಾಟಗಳಿಗೆ ದಾರಿಮಾಡಿಕೊಟ್ಟಂತೇನೋ ಅನ್ನಿಸುವುದಿಲ್ಲವೆ?
ಸರ್ಕಾರ ಭದ್ರತೆಯ ಕೋಟೆ ನಿರ್ಮಿಸಿದ್ದೇವೆಂದು ಹೇಳಿದರೂ ಸುರಂಗ ಮಾರ್ಗವೋಂದನ್ನು ಮಾಡಿ ಬಾಗಿಲು ತೆರೆದಿಟ್ಟು ಕಣ್ಣಿಗೆ ಎಣ್ಣೆಹಾಕಿ ಕಾದಂತಲ್ಲವೆ? ಅದಕ್ಕೆ ನೀವೇನೆನ್ನುತ್ತೀರಿ ಮಿತ್ರರೆ ???

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.