ನೀಱೆಯ ವಸ್ತ್ರವೈಖರಿ

0

ಅಂಗನೆಯುಡುವ ಸೀರೆ ಕುಪ್ಪಸ ಪ್ಯಾಂಟು ಷರ್ಟು
ಲಂಗ ಕಿಱುಲಂಗ ಱವಕೆಯ
ರಂಗಿನ ಚೂಡಿದಾರ ಪಱಕಾಱಗಳಿಗೆ
ದಂಗುವಡೆಯವೇಡ ನೀನು||೧||

ತೋಱುವಂತಿರಬೇಕು ತೋಱದಿರಬೇಕು
ಸಾಱಬೇಕು ಮೆಯ್ಮಾಟ
ಜಾಱಬಾರದು ನೀಱನೋರೆನೋಟವಿದು
ನೀಱೆಯ ಜಾಣು ಕಾಣೆಂಬೆ||೨||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.