ದಿನಕ್ಕೆ ನೂರು ಪದ ಬರೆಯಿರಿ!

0
ಸಂಪದದ ಓದುಗ ಮಿತ್ರರಲ್ಲಿ ವಿನಂತಿ. ನಿಮ್ಮಲ್ಲಿ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು. ಕೇವಲ ಕತೆ ಕವನ ಕಾದಂಬರಿ ವಿಚಾರ ಎಂದಲ್ಲ, ನಿಮ್ಮ ನಿಮ್ಮ ದಿನ ನಿತ್ಯದ ಅನುಭವಗಳನ್ನು, ವಿಮ್ಮನ್ನು ಕೆಣಕಿದ ಪ್ರಶ್ನೆಗಳನ್ನು ಸಂಪದ ಬಳಗದೊಂದಿಗೆ ಹಂಚಿಕೊಂಡರೆ ಈ ತಾಣ ಇನ್ನಷ್ಟು ಮೈತುಂಬುತ್ತದೆ. ತೀರ ದೊಡ್ಡ ಬರವಣಿಗೆಯೂ ಬೇಡ. ನೂರರಿಂದ ನೂರೈವತ್ತು ಪದಗಳಷ್ಟಿದ್ದರೆ ಸಾಕು. ಹಾಗೆಯೇ ಸಂಪದದಲ್ಲಿ ನೀವು ಯಾವ ಬಗೆಯ ಸಾಮಗ್ರಿ ಅಪೇಕ್ಷಿಸುತ್ತೀರಿ ಎಂಬುದನ್ನೂ ತಪ್ಪದೆ ತಿಳಿಸಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಗಳು ದಿನಚರಿ ಬರೆಯುತ್ತೀವಲ್ಲ. ಅದನ್ನೇ ಇಲ್ಲಿ ಬರೆಯಬಹುದಲ್ವಾ? ಅಲ್ಲದೇ ದಿನದ ಕೊನೆಯಲ್ಲಿ, ಬೆಳಗಿನಿಂದ ಸಂಜೆ ಒಳಗೆ ಏನಾದ್ರೂ ವಿಶೇಷ ಸಂಗತಿ ನಡೆದಿದ್ದರೆ ಅದನ್ನು ಬರೆಯಬಹುದಲ್ವಾ? ಇತರರೊಂದಿಗೆ ಹಂಚಿಕೊಂಡ ಹಾಗಾಗುವುದು. ತವಿಶ್ರೀನಿವಾಸ

ಖಂಡಿತವಾಗಿ :) ದಿನಚರಿಗಳು ಬ್ಲಾಗಿನಲ್ಲಿ ಸೇರಿಸಬಹುದು... ಬ್ಲಾಗ್ ಎಂಬುದು ಆ ಕಾರಣಕ್ಕೆ ತಾನೆ ಇಂಟರ್ನೆಟ್ಟಿನಲ್ಲಿ ಹುಟ್ಟಿಕೊಂಡದ್ದು?

ನನ್ನ ದೃಷ್ಟಿಕೋನವೇ ಕನ್ನಡ ಕುಱಿತದ್ದು. ಕನ್ನಡ ಹೀಗಿತ್ತು. ಹೀಗೆ ಬರೆದರೆ ಹೇಗೆ? ಭಾಷಾವಿಜ್ಞಾನದ ದೃಷ್ಟಿಯಲ್ಲಿ ಬರೆದಷ್ಟು ಲೇಖನವನ್ನು ಬೇಱೆ ಆಯಾಮದಲ್ಲಿ ನಾನು ಬರೆದಿದ್ದು ಕಡಿಮೆ. ಆಶ್ಚರ್ಯವೆಂದರೆ ಯಾರನ್ನೂ ಕೆಣಕದೆ ನೇರವಾಗಿ ಬರೆದಾಗ ನನ್ನ ಲೇಖನಗಳನ್ನು ಓದಿದವರು ಕಡಿಮೆ. ಇದಕ್ಕೆ ನಿದರ್ಶನ ’ದಿನಕ್ಕೊಂದು ಪದ’ ದಡಿಯಲ್ಲಿ ಬರೆದ ನನ್ನ ಲೇಖನಗಳನ್ನೋದಿದವರು ಬಹಳ ಸಾರಿ ಸೊನ್ನೆ. ಆದರೆ ನಾನು ಕೆಣಕಿ ಬರೆದಾಗ ನನ್ನ ಲೇಖನಗಳನ್ನೋದಿದವರ ಸಂಖ್ಯೆ ಒಮ್ಮೆ ೭೧ ಇನ್ನೊಮ್ಮೆ ೫೪.