ಹೆಸರು ಸೂಚಿಸಿ‍..

0

‍ಸಂಪದಿಗರಲ್ಲಿ ವಿನಂತಿ,

ನನ್ನ ಪರಿಚಯದವರೊಬ್ಬರು Conventional Hall ವೊಂದನ್ನು ಕಟ್ಟಿಸುತ್ತಿದ್ದಾರೆ. ಅದಕ್ಕೊಂದು ಹೆಸರು ಹುಡುಕುತ್ತಿದ್ದೇವೆ.

ಹೆಸರು ಸ್ವಲ್ಪ earthly ಆಗಿರಬೇಕೆಂದು ಅವರ ಭಾವ. ನಿಮಗೆ ತಿಳಿದಲ್ಲಿ, ಈ ಲೇಖನಕ್ಕೆ ಆ ಹೆಸರನ್ನು comment ಮೂಲಕ ಬರೆದು ತಿಳಿಸಿ.

ನೆಲ್ಮೆಯ,

ಸುಮ

Forums: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೇಡಂ ಜಿ, ನಮಸ್ತೆ.  ಈ ಕ್ಷಣಕೆ ಹೊಳೆಯುತ್ತಿರುವುದು ಹೀಗೆ. ..ಸುಸೂತ್ರ,  ಬೋಧ,  ಸಿಂಧುಶ್ರೀ, ಮುಹೂರ್ತ, ದೀಪ್ತಿ, ಬೆಳಗು,.ಪ್ರವರ್ಧ, .ಪವಮಾನ,..

Earthly ಇದ್ದರೆ ಚೆನ್ನ ಎಂದಿದ್ದೀರಿ - ಧರಣಿ, ಇಳಾ, ಧಾರಿಣಿ, ಸಹನಾ, ವಸುಧಾ, ಧರಿತ್ರಿ, ಭೂಮಿಕಾ, ಭುವನ, ವಸುಂಧರಾ, ನಿಸರ್ಗ, ಪಾವನಿ - ಹೀಗೆ ಭೂಮಿಯ (ಅಥವ ಅದಕ್ಕೆ ಸಂಬಂಧಿಸಿದ) ಹೆಸರೆ ಇಡಬಹುದೇನೊ ನೋಡಿ :-)

"ಗಣೇಶ" ಆಗಬಹುದಾ? :)

ಮೇಡಂ, ಈಗ ಟಿ.ವಿ., ಕಾರ್, ಇತ್ಯಾದಿ ಬಿಡಿ, ನೋಡುವ ಸಿನೆಮಾ, ಊಟಮಾಡುವ ಹೋಟಲ್ ಸಹ ಯಾವುದಾಗಬೇಕೆಂದು ಸಿಲೆಕ್ಟ್ ಮಾಡುವವರು ಮನೆಯಜಮಾನ, ಅಜ್ಜ,ಅಜ್ಜಿ... ಹಿರಿಯರಲ್ಲ.. ಮಕ್ಕಳು ಹೇಳಿದ್ದೇ ಕೊನೆ.

ಮೇಲೆ ನನ್ನ ಗೆಳೆಯರು ಸೂಚಿಸಿದ ಹೆಸರೆಲ್ಲಾ ಸೂಪರ್- ನಮಗೆ.

ಈಗಿನ ಮಕ್ಕಳಿಗೆ? dharini conventional hall ಬದಲಿಗೆ DHR convention hall ಅಂದರೆ ಇಷ್ಟವಾಗುವುದು.

ಧರಿತ್ರಿ, ಭೂಮಿಕಾ, ಭುವನ, ವಸುಂಧರಾ, ನಿಸರ್ಗ, ಪಾವನಿ  ಇತ್ಯಾದಿ ಹೆಸರು ಹಾಲ್‌ನ ಡೈನಿಂಗ್ ರೂಮ್, ಮೀಟಿಂಗ್ ರೂಮ್....ಗಳಿಗೆ ಇಟ್ಟರಾಯಿತು.