"ಉಳಿದವರು ಕಂಡಂತೆ" ಸಿನಿಮಾದ ಬಗ್ಗೆ ನಟ ಮತ್ತು ನಿರ್ದೇಶಕ ರಕ್ಷಿತ್ ಶೆಟ್ಟಿ ರವರಿಗೆ ಚಿತ್ರದ ವಿಮರ್ಶೆ.

0

Rakshit Shetty... (ನಟ ಮತ್ತು ನಿರ್ದೇಶಕ) 

(ಉಳಿದವರು ಕಂಡಂತೆ ಸಿನಿಮಾವನ್ನು ನಾನು ಕಂಡಂತೆ....)

ಹಾಯ್ ಸರ್,

ಉಳಿದವರು ಕಂಡಂತೆ ಸಿನಿಮಾವನ್ನು ಶನಿವಾರವೇ ನೋಡಿದೆ. ನಮ್ಮ ಗದಗ ದಲ್ಲಿ ಕೃಷ್ಣಾ ಥಿಯೇಟರ್ ನಲ್ಲಿ ಸರಿಯಾಗಿ ಸೌಂಡ್ ಕೇಳಿಸಲಿಲ್ಲವೋ ಅಥವಾ ಆ ಸಿನಿಮಾದಲ್ಲಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಜಾಸ್ತಿಯಾಯ್ತೋ ಗೊತ್ತಿಲ್ಲ, ಡೈಲಾಗ್ ಗಳು ಸರಿಯಾಗಿ ಕೇಳಿಸಲಿಲ್ಲ ಮತ್ತು ಕೆಲವು ಡೈಲಾಗ್ ಗಳು ಅರ್ಥವಾಗಲಿಲ್ಲ.

ಸಿನಿಮಾ ಶೈಲಿ ವಿಭಿನ್ನವಾಗಿದೆ. ಹೈ-ಕ್ಲಾಸ್ ಲೆವೆಲ್ ಸಿನಿಮಾ. ಆದರೆ, ನಮ್ಮ ಜನಕ್ಕೆ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಕಷ್ಟವಾಗುತ್ತೆ. ಎಲ್ಲರ ನಟನೆ ತುಂಬಾ ಚನ್ನಾಗಿದೆ. ನಿಮ್ಮ ನಟನೆ ಅದೂ ಹುಲಿ ವೇಷದಲ್ಲಿ ಡ್ಯಾನ್ಸ್ ಮಾಡೋದು ಮತ್ತು ನೀವು ನಡೆಯುವ ಸ್ಟೈಲ್ ಜಾಸ್ತಿ ಇಷ್ಟವಾಯ್ತು. 

ಇನ್ನು ಎರಡು ಹಾಡುಗಳು ಚನ್ನಾಗಿವೆ. ಪೇಪರ್ ಪೇಪರ್ ಹಾಡು ತುಂಬಾ ಚನ್ನಾಗಿ ಮೂಡಿ ಬಂದಿದೆ. ಕೆಲವೊಂದು ಕಡೆ ಸಿನಿಮಾ ಬೋರ್ ಹೊಡೆಸುತ್ತೆ. ಪ್ರಾರಂಭದ ಅಧ್ಯಾಯಗಳಲ್ಲಿ ನಿಮ್ಮ ಪಾತ್ರ ಜಾಸ್ತಿ ಕ್ರೂರವೆಂದು ತೋರಿಸೋದು ಸ್ವಲ್ಪ ಜಾಸ್ತೀನೇ ಆಯ್ತು. 

ಸಿನಿಮಾದಲ್ಲಿ ಸಖತ್ ಎಂಜಾಯ್ ಮಾಡಿದ್ದು, "ಅಯ್ಯಯ್ಯಯ್ಯೋ.. ನಗ್ತಾಳಲ್ಲೋ" ಹಾಡು. ಈ ಹಾಡಿಗಾಗಿ ಮತ್ತೆ ಸಿನಿಮಾ ನೋಡಬಹುದು. ಕಿಶೋರ್ ಕೂಡಾ ಅಭಿನಯದಿಂದ ಎಲ್ಲರಿಗೂ ಇಷ್ಟವಾಗ್ತಾರೆ.. ಡೆಮಾಕ್ರಸಿ ಹುಡುಗ ಅರ್ಧ ಸಿನಿಮಾ ಆವರಿಸಿ, ನೆನಪಿನಲ್ಲಿಟ್ಟುಕೊಳ್ಳುವಂತೆ ಅಭಿನಯಿಸಿದ್ದಾನೆ. ಆತನಿಗೆ ಒಳ್ಳೆಯ ಭವಿಷ್ಯ ಇದೆ.

ಹಾಸ್ಯದ್ದೇ ಸಿನಿಮಾದಲ್ಲಿನ ಬಹುದೊಡ್ಡ ಕೊರತೆ. ಕಥೆ ಹೇಳುವ ಭರದಲ್ಲಿ ಹಾಸ್ಯವನ್ನೇ ಮರೆತಿದ್ದೀರ ನಿರ್ದೇಶಕರೇ.. ಏನೇ ಇದ್ದರೂ ಒಂದು ಬಾರಿ ನೋಡಬಹುದಾದ ಸಿನಿಮಾ ಎಂದು ಹೇಳಲಷ್ಟೇ ಸಾಧ್ಯ. ಇನ್ನೂ ಚನ್ನಾಗಿ ಸಿನಿಮಾ ತಯಾರಿಸಬಹುದಿತ್ತು. ಒಂದೆರಡು ಚಾಪ್ಟರ್ ಗಳು ಹಿಂದು ಮುಂದಾಗಿವೆಯೇನೋ ಅನ್ನಿಸುತ್ತದೆ.

ಅದು ಏನೇ ಇರಲಿ. ಮತ್ತೆ ಹೇಳುತ್ತಿದ್ದೇನೆ, "ಉಳಿದವರು ಕಂಡಂತೆ" ಹೈ-ಕ್ಲಾಸ್ ಲೆವೆಲ್ ಸಿನಿಮಾ. ನಮ್ಮ ಜನಕ್ಕೆ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಕಷ್ಟವಾಗುತ್ತೆ.

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ. 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಆ ಸಿನಿಮಾದಲ್ಲಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಜಾಸ್ತಿಯಾಯ್ತೋ ಗೊತ್ತಿಲ್ಲ, ಡೈಲಾಗ್ ಗಳು ಸರಿಯಾಗಿ ಕೇಳಿಸಲಿಲ್ಲ ಮತ್ತು ಕೆಲವು ಡೈಲಾಗ್ ಗಳು ಅರ್ಥವಾಗಲಿಲ್ಲ...

>>ಕೆಲವೊಂದು ಕಡೆ ಸಿನಿಮಾ ಬೋರ್ ಹೊಡೆಸುತ್ತೆ..

>>ಏನೇ ಇದ್ದರೂ ಒಂದು ಬಾರಿ ನೋಡಬಹುದಾದ ಸಿನಿಮಾ ಎಂದು ಹೇಳಲಷ್ಟೇ ಸಾಧ್ಯ.

>>ಒಂದೆರಡು ಚಾಪ್ಟರ್ ಗಳು ಹಿಂದು ಮುಂದಾಗಿವೆಯೇನೋ ಅನ್ನಿಸುತ್ತದೆ.

>>ನಮ್ಮ ಜನಕ್ಕೆ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಕಷ್ಟವಾಗುತ್ತೆ.

>>ಅದು ಏನೇ ಇರಲಿ. ಮತ್ತೆ ಹೇಳುತ್ತಿದ್ದೇನೆ, "ಉಳಿದವರು ಕಂಡಂತೆ" ಹೈ-ಕ್ಲಾಸ್ ಲೆವೆಲ್ ಸಿನಿಮಾ -!! :)