ಸಿಂಗಪುರ ಕನ್ನಡ ಸಂಘ : ಸಿಂಚನ ಸಾಹಿತ್ಯ ಸ್ಪರ್ಧೆ - ೨೦೧೩

5

ಪ್ರಿಯ ಸಂಪದಿಗರೆ,

ಕಳೆದ ಸಾರಿಯಂತೆ ಈ ಬಾರಿಯೂ ಸಿಂಗಪುರ ಕನ್ನಡ ಸಂಘವು 'ಸಿಂಚನ ಸಾಹಿತ್ಯ ಸ್ಪರ್ಧೆ - 2013'ಕ್ಕೆ ಬರಹಗಳನ್ನು ಆಹ್ವಾನಿಸುತ್ತಿದೆ. ಈ ಸ್ಪರ್ಧೆಯಲ್ಲಿ ವಿಶ್ವ ಕನ್ನಡಿಗರೆಲ್ಲರೂ ಭಾಗವಹಿಸಬಹುದು. ವಿವರ ಈ ಕೆಳಕಂಡಂತಿದೆ.  ಸಂಪದಿಗರು ಮತ್ತು ಇತರ ಕನ್ನಡಿಗರು ಹೆಚ್ಚಿನ ಸಂಕ್ಯೆಯಲ್ಲಿ ಭಾಗವಹಿಸಲು ಸಂಘವು ಈ ಮೂಲಕ ವಿನಮ್ರವಾಗಿ ಕೋರಿಕೊಳ್ಳುತ್ತಿದೆ.

ಸಿಂಗಪುರ ಕನ್ನಡ ಸಂಘದ ಸುದ್ದಿದೂತನಾಗಿ,
ನಾಗೇಶ ಮೈಸೂರು
 

ಸಿಂಚನ ಸಾಹಿತ್ಯ ಸ್ಪರ್ಧೆ-೨೦೧೩

 

ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಮಾಸಪತ್ರಿಕೆ ’ಸಿಂಚನ’ಕ್ಕೆ ಎರಡು ವರ್ಷ ತುಂಬಿದ ಸಂತಸ. ೨೦೧೧ರ ಆಗಸ್ಟ್‌ನಲ್ಲಿ ಹುಟ್ಟಿದ ಈ ಕನಸಿನ ಕೂಸು ಬೆಳೆದು ಪ್ರತಿ ತಿಂಗಳು ಸಿಂಗನ್ನಡಿಗರ ಜೊತೆಯಲ್ಲಿ ಮಾತನಾಡುತ್ತಾ ಹಲವು ವೈವಿಧ್ಯಮಯ ವಿಷಯಗಳನ್ನು ಹಂಚಿಕೊಂಡು ಬರುತ್ತಿದೆ. ೨೦೧೨ರಲ್ಲಿ ಆಯೋಜಿಸಿದ ’ಸಿಂಚನ ಸಾಹಿತ್ಯ ಸ್ಪರ್ಧೆ’ಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ ಕನ್ನಡ ಸಂಘ (ಸಿಂಗಪುರ) ಎರಡನೇ ವರ್ಷದ ’ಸಿಂಚನ ಸಾಹಿತ್ಯ ಸ್ಪರ್ಧೆ’ಯನ್ನು ಆಯೋಜಿಸಿದೆ.

ಈ ವರ್ಷದ ಸ್ಪರ್ಧೆಯಲ್ಲಿ ಸಣ್ಣ ಕಥೆ ಮತ್ತು ಕವನವನ್ನು ಒಳಗೊಂಡ ಎರಡು ವರ್ಗಗಳಿಗೆ ನಿಮ್ಮ ಬರಹಗಳನ್ನು ಕಳುಹಿಸಬಹುದು. ವರ್ಗಗಳ ವಿವರಗಳನ್ನು ಕೆಳಗೆ ನೀಡಲಾಗಿದೆ. ಪ್ರತಿ ವರ್ಗದಲ್ಲೂ ಆಯ್ದ ಎರಡು ಉತ್ತಮ ಬರಹಗಳಿಗೆ ಬಹುಮಾನ ಕೂಡ ಇದೆ. ಇನ್ನೇಕೆ ತಡ? ನಿಮ್ಮ ಬರಹಗಳನ್ನು ಆದಷ್ಟು ಬೇಗ ನಮಗೆ ಕಳುಹಿಸುತ್ತೀರಾ ತಾನೆ?

ವರ್ಗ ೧ - ಸಣ್ಣ ಕಥೆ (ಮಿತಿ - ೪ ಪುಟಗಳು)

ವರ್ಗ ೨ - ಕವನ (ಮಿತಿ - ೧ ಪುಟ)

ಬರಹಗಾರರ ಗಮನಕ್ಕೆ:

೧. ಸ್ಪರ್ಧೆಗೆ ಕಳಿಸುವ ಕಥೆ ಮತ್ತು ಕವನಗಳು ಸ್ವಂತದ್ದಾಗಿರಬೇಕು ಮತ್ತು ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಈ ಮೊದಲು ಪ್ರಕಟವಾಗಿರಬಾರದು.

೨. ಕಥೆ ಮತ್ತು ಕವನಗಳು ’ಬರಹ’ ಅಥವ ’ನುಡಿ’ ತಂತ್ರಾಂಶದಲ್ಲಿರಬೇಕು. ಕೈ ಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.

೩. ಬಹುಮಾನಿತ ಕೃತಿಗಳನ್ನು "ಸಿಂಚನ’ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ’ಸಿಂಚನ’ ಸಂಪಾದಕ ಸಮಿತಿಯ ತೀರ್ಮಾನವೇ ಅಂತಿಮ. ಬರಹಗಳನ್ನು ಪರಿಷ್ಕರಿಸಿ ಪ್ರಕಟಿಸುವ ಹಕ್ಕು ’ಸಿಂಚನ’ ಸಂಪಾದಕ ಸಮಿತಿಗೆ ಸೇರಿದ್ದು.

೪. ಎರಡೂ ವರ್ಗಗಳಿಗೂ ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ ೫, ೨೦೧೩. ನಂತರ ಬಂದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಬಹುಮಾನ ವಿಜೇತರಿಗೆ ನವೆಂಬರ್ ತಿಂಗಳಲ್ಲಿ ಮಿಂಚಂಚೆ ಮೂಲಕ ತಿಳಿಸಲಾಗುವುದು.

೫. ಬರಹಗಾರರು ತಮ್ಮ ಕೃತಿಯ ಜೊತೆಗೆ ತಮ್ಮ ಸಂಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ಭಾವಚಿತ್ರ ಮತ್ತು EMAIL id ಯನ್ನು ತಪ್ಪದೇ ಕಳುಹಿಸಬೇಕು. ಈ ವಿವರಗಳಿಲ್ಲದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

೬. ಪ್ರತಿ ವರ್ಗಕ್ಕೆ ಒಬ್ಬರು ಒಂದಕ್ಕಿಂತ ಹೆಚ್ಚು ಲೇಖನ ಕಳುಹಿಸುವಂತಿಲ್ಲ.

೭. ನಿಮ್ಮ ಬರಹಗಳನ್ನು sinchana@singara.orgಗೆ ಮಿಂಚಂಚೆ ಮೂಲಕ ಕಳುಹಿಸಿ.

೮. ವಿಶ್ವಕನ್ನಡಿಗರೆಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಯಾವುದೇ ವಯೋಮಿತಿಯ ನಿಬಂಧನೆಯಿಲ್ಲ.

 

- ಕನ್ನಡ ಸಂಘ ಸಿಂಗಪುರ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸ್ಪರ್ಧೆಯಲ್ಲಿ ಭಾಗವಹಿಸಬಯಸುವ ಮಿತ್ರರೆ, ನಾಳೆ ಅಂದರೆ ಅಕ್ಟೋಬರ 5, ಬರಹಗಳನ್ನು ಕಳಿಸುವ ಕೊನೆಯ ದಿನಾಂಕ. ತ್ವರೆ ಮಾಡಿ ನಿಮ್ಮ ಬರಹಗಳನ್ನು ಕಳಿಸಿ !