ನಾಟಕ

4

ಆತ್ಮೀಯ ಸಂಪದಿಗರೇ,

ಸಂಪದಿಗರೇ ಆದ ಹರೀಶ್ ಆತ್ರೇಯ, ಬೆಳ್ಳಾಲ ಗೊಪೀನಾಥರಾಯರು, ಪ್ರಭುನಂದನ ಮೂರ್ತಿ,ಸಚೇತನ್ ಭಟ್, ರಘು.ಎಸ್.ಪಿ, ಪಾರ್ಥಸಾರಥಿ, ರಾಮ ಮೋಹನ್ ಹಾಗೂ ನಾನೂ ಮತ್ತಿತರು ಸೇರಿ ಮಾಡಿಕೊಂಡಿರುವ ತಂಡ ವಾಕ್ಪಥ. ಸಂಪದ ಸಮ್ಮಿಲನ ೫ ರಲ್ಲಿ ಹುಟ್ಟಿದ ಈ ತಂಡ ಕನ್ನಡದಲ್ಲಿ ಭಾಷಣ ಕಲೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಒಂದು ವರ್ಷ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು.

ನಂತರ ಬೇರೆ ರಂಗದಲ್ಲೂ ನಮ್ಮ ಕಲೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಹೊಮ್ಮಿದ ಯೋಚನೆಯೇ ನಾಟಕರಂಗ. ರಘು.ಎಸ್.ಪಿ ಅವರ ಕನಸಿನ ಕೂಸಾದ "ರಂಗತಂತು" ವಿನ ಸ್ಥಾಪನೆ.

ಇದೇ ತಂಡದಡಿಯಲ್ಲಿ ಮೂಡಿಬಂದ ನಾಟಕ "ಸುಳಿ". ಮನುಷ್ಯನ ಮುಖವಾಡಗಳನ್ನು ಬಿಚ್ಚಿಡುವ ವಿಭಿನ್ನ ಕಥಾನಕವನ್ನು ಒಳಗೊಂಡಿರುವ ನಾಟಕ ಎರಡು ಯಶಸ್ವಿ ಪ್ರದರ್ಶನವನ್ನು ಕಂಡು, ಈಗ ಮತ್ತೊಮ್ಮೆ ತಮ್ಮ ಮುಂದೆ ಬರುತ್ತಿದೆ.

ಇದೇ ತಿಂಗಳ ೩೧ ನೆ ತಾರೀಖಿನಂದು ಬಸವನಗುಡಿಯ "ಉದಯಭಾನು ಕಲಾಸಂಘದಲ್ಲಿ" ಸಂಜೆ ೭ ಗಂಟೆಗೆ "ಸುಳಿ" ಯ ಮೂರನೇ ಪ್ರದರ್ಶನ. ಆಸಕ್ತರು ಆಗಮಿಸಿ ಸುಳಿಯ ಸುಳಿಯಲ್ಲಿ ಸಿಲುಕಬಹುದು.

ಟಿಕೇಟುಗಳಿಗಾಗಿ ಸಂಪರ್ಕಿಸಿ : ಜಯಂತ್ - ೯೯೪೫೫ ೮೪೨೩೫

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಜಯಂತರೆ,

ಈಗಾಗಲೇ ನಾವು ಪೂರ್ವನಿಯೋಜಿತ ಕೆಲಸಗಳ ಸುಳಿಯಲ್ಲಿ ಸಿಲುಕಿರುವುದರಿಂದ ನಿಮ್ಮ ಸುಳಿಯಲ್ಲಿ ಸಿಲುಕಲಾರೆವೇನೋ? ಇರಲಿ, ನಾಟಕ ಪ್ರದರ್ಶನ ಯಶಸ್ವಿಯಾಗಿ ನೀವು ಅಭಿಮಾನಿಗಳ ಸುಳಿಯಲ್ಲಿ ಸಿಲುಕಿ ಎಂದು ಸಂಪದಿಗರ ಪರವಾಗಿ ಹಾರೈಸುತ್ತಿದ್ದೇನೆ. 

ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ