"ಗೋಧ್ರಾ ಇನ್ನೆಷ್ಟು ದೂರ?" ಕಥಾಸಂಕಲನದ ಬಿಡುಗಡೆ

2.5

ಆತ್ಮೀಯರೇ, ನನ್ನ ಹೊಸ ಕಥಾಸಂಕಲನ "ಗೋಧ್ರಾ ಇನ್ನೆಷ್ಟು ದೂರ ಶನಿವಾರ, ಜನವರಿ ೧೯, ೨೦೧೩ರಂದು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದ ವಿವರಗಳು ಇಂತಿವೆ: ಕೃತಿ ಲೋಕಾರ್ಪಣೆ: ಡಾ. ಹೆಚ್. ಮಾಧವ ಭಟ್ (ಪ್ರಾಂಶುಪಾಲರು, ವಿವೇಕಾನಂದ ಕಾಲೇಜು, ಪುತ್ತೂರು) ಕೃತಿ ಅವಲೋಕನ: ಶ್ರೀ ಜಯದೇವ ಪ್ರಸಾದ್ ಮೊಳೆಯಾರ್, ("ಕಾಸು ಕುಡಿಕೆ" ಅಂಕಣಕಾರರು) ಸಮಾರಂಭದ ಅಧ್ಯಕ್ಷತೆ: ಶ್ರೀ ಉಪ್ಪುಂದ ಚಂದ್ರಶೇಖರ ಹೊಳ್ಳ (ಜಿಲ್ಲಾಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು) ಸಮಾರಂಭದ ಆಯೋಜಕರು: ಸುಹಾಸಂ, ಉಡುಪಿ ಮತ್ತು ಪುಸ್ತಕಯಾನ, ಮೈಸೂರು ಸಮಯ: ಸಂಜೆ ನಾಲ್ಕು ಘಂಟೆ ದಿನಾಂಕ: ಶನಿವಾರ, ಜನವರಿ ೧೯, ೨೦೧೩ ಸ್ಥಳ: ಹೋಟೆಲ್ ಕಿದಿಯೂರು, ತುದಿಮಾಳಿಗೆ ಸಭಾಂಗಣ ಬಿಡುವು ಮಾಡಿಕೊಂಡು ಬನ್ನಿ. ಒಂದಷ್ಟು ಹೊತ್ತು ಒಟ್ಟಾಗಿ ಕಳೆಯೋಣ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿರಿಯರಾದ ಪ್ರೇಮ ಶೇಖರ್ ಅವರೇ -
ನಿಮ್ಮ ಹಲವು ಕಥಾನಕಗಳನ್ನು ಇಲ್ಲಿ ಮತ್ತು ಪುಸ್ತಕ ರೂಪದಲ್ಲಿ -ಸಂಕಲನಗಳ ರೂಪದಲ್ಲಿ ಲೈಬ್ರರಿಯಲ್ಲಿ ಓದಿದ್ದೆ..
ಆಗಾಗ ದಟ್ಸ್ ಕನ್ನಡ-ಮತ್ತಿತರ ಜಾಲತಾಣಗಳಲ್ಲಿ ಮತ್ತು ಮಾಸಿಕಗಳಲ್ಲಿ ನಿಮ್ಮ ಬರಹಗಳು ಬರುವದು ಇದೆ..
ನನಗೆ ಅಚ್ಚರಿ ಆದದ್ದು-ನಿಮ್ಮ ಯಾವುದೇ ಬರಹಗಳನ್ನು ಇದುವರಗೆ ಯಾವುದೇ ವಿಶೇಷಾಂಕಗಳಲ್ಲಿ (ದೀಪಾವಳಿ-ಯುಗಾದಿ ಇತ್ಯಾದಿ)ನೋಡಿದ ನೆನಪಿಲ್ಲ.
ನೀವು ಈ ತರಹದ ಸ್ಪರ್ಧೆಗಳಿಗೆ ಬಹುಶ ಕಥೆಗಳನ್ನು ಕಳುಹಿಸುವುದಿಲ್ಲ ಅನ್ಸುತ್ತೆ...!!
ಗೋಧ್ರಾ ಇನ್ನೆಸ್ತು ದೂರ -ಹೆಸರೇ ಹೇಳುವಂತೆ ನನ್ನ ಊಹೆಯಂತೆ ಬಹುಶ ಗೋಧ್ರಾ ಘಟನೆಗಳ ಕುರಿತು ಅದರ ಸುತ್ತ ಹೆಣೆದ ಕಥೆ ಅನ್ಸುತ್ತೆ...
ಅದರ ಬಗ್ಗೆ ಸ್ವಲ್ಪ ಇಲ್ಲಿ ಹೇಳಿದ್ದರೆ ಚೆನ್ನಿತ್ತು...
ನೀವ್ ಈ ಮಧ್ಯೆ ಸಂಪದದಲ್ಲಿ ಸಿಗುವುದೇ ಅಪರೂಪವಾಗಿದೆ..
ಅಂದೊಮ್ಮೆ ನಿಮ್ಮ ಮೇಲ್ ಅಯ್ ಡಿ ಗೆ ಮೇಲ್ ಕಳಿಸಿದ್ದೆ..ನೋಡಿದಿರಾ???

ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭ ಹಾರೈಕೆಗಳು..

ಶುಭವಾಗಲಿ..

\|/

ವೆಂಕಟೇಶರವರೆ, ತಾವು ಪ್ರೇಮ ಶೇಖರರ ಬ್ಲಾಗ್ ನೋಡಿದ್ದಿರಾ. ಅದರಲ್ಲಿ ಅವರ ಲೇಖನಗಳ ಜೊತೆಗೆ, ಅವರ ಹತ್ತು ಕತೆಗಳೂ ಇವೆ.

http://premashekhara.blogspot.in/

ಪ್ರೇಮ ಶೇಖರ್ ಸರ್, ತಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸವಿ ಹಾರೈಕೆಗಳು.

ಹ್ಹಾ -ಶ್ರೀನಿವಾಸ್ ಅವರೇ -ಅವರ (ಪ್ರೇಂ ಶೇಖರ್ )ಕುರಿತ ವಿವರ ನೋಡುವಾಗ ಅವರ ಬ್ಲಾಗ್ ಲಿಂಕ್ ಸಿಕ್ಕಿ ಅಲ್ಲಿ ಹೋಗಿ ನಾನೂ ಅದ್ಕೆ ಸೇರಿ ಹಲವು ಬರಹ ಓದಿ ಪ್ರತಿಕ್ರಿಯಿಸಿದೆ..
ಹಾಗೆ ನೋಡಿದರೆ ಎಲ್ಲೂ ಸಿಗದವರು -ಕೊನೆಗೆ ತಮ್ಮ ವಯುಕ್ತಿಕ ಬ್ಲಾಗ್ನಲ್ಲಿ ಸಿಕ್ಕೇ ಸಿಗುವರು....!!
ನನ್ನಿ

ಶುಭವಾಗಲಿ.'

\\|//