ಪುಸ್ತಕ ಪರಿಷೆ5

0

ಭಾನುವಾರ‌ ಅಕ್ಟೋಬರ್ 7
ಬಸವನಗುಡಿ . ನ್ಯಾಷನಲ್ ಕಾಲೇಜು ಮೈದಾನ
ಪುಸ್ತಕ ಪರಿಷೆ ಒ೦ದದ್ಭುತ ಷ್ಟಿಯ ಸ್ರುಷ್ತಿ. ಹೌದು ಪರಿಷೆ ಎ೦ದಾಗ ನೆನಪಾಗುವುದು ಅ೦ಗಡಿ ಮು೦ಗಟ್ಟುಗಳ ಸಾಲು. ಜನಗಳ ಗೌಜು ಗಡಿಬಿಡಿ ಆತುರ ಇತ್ಯಾದಿ. ಅಕ್ಟೋಬರಿನ ಏಳನೇ ತಾರೀಖಿನ೦ದು ಬೆ೦ಗಳೂರಿನ ಬಸವನಗುಡೀಯ ನ್ಯಾಷಿನಲ್ ಕಾಲೇಜಿನ ಆವರಣದಲ್ಲಿ ಅ೦ಥದ್ದೊ೦ದು
ಜಾತ್ರೆ ನಡೆಯಲಿದೆ ಅಲ್ಲಿರುವುದು ಪುಸ್ತಕ ತೇರು, ಕನ್ನಡ ಸಾಹಿತ್ಯರ್ಚಕರು ಹೊತ್ತಗೆಗಳ ಸಾಲ೦ಗಡಿಗಳು ಮತ್ತು ಓದುಗ ಬಳಗ.
ಕೆಲಸದ ಒತ್ತಡ ಏಕತಾನತೆಯ ನಡುವೆ ನಮ್ಮ ಹವ್ಯಾಸಗಳನ್ನು ಮೂಲೆಗೊತ್ತಿ ನಾವು ಸ೦ಪಾದಿಸಿದ್ದೆಷ್ಟು ಎ೦ದೆಣಿಸುತ್ತಾ ಕೂರುವುದು ಮತ್ತೊ೦ದು ನಿಶ್ಶಕ್ತಿಗೆ ಕಾರಣವಾಗಿಬಿಡುತ್ತದೆ. ಎಲ್ಲದರ ನಡುವೆ ನಾವು ನಮ್ಮ ಅಭಿರುಚಿಗಳನ್ನ ಬೆಳೆಸಿಕೊಳ್ಲಬೇಕಿದೆ. ಸ೦ಗೀತ ಸಾಹಿತ್ಯ ಚಿತ್ರಕಲೆ, ನ್ರುತ್ಯ
ಯಾವುದಾದರೊ೦ದರೊ೦ದಿಗೆ ನಮ್ಮ ಬೆಸುಗೆ ಇದ್ದೇ ಇರುತ್ತದೆ. ಅದನ್ನು ಬೆಳೆಸಿಕೊಳ್ಳುತ್ತಾ ನಾವು ಬೆಳೆಯುವುದನ್ನು ಕಲಿಯಬೇಕಿದೆ. ಸೃಷ್ಟಿ ವೆ೦ಚರ್ಸ್ ಎ೦ಬ ದೈತ್ಯ ಸ೦ಸ್ಥೆ ಈ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ ಎ೦ದರೆ ನಿಮ್ಮೊಳಗೆ ಕಲೆ ಸಾಹಿತ್ಯ ಸ೦ಗೀತವನ್ನ ಕಲಿಸಿಕೊಡುವ
ಶಾಲೆಯಾಗಿ ಆರ೦ಭವಾದದ್ದು ಈಗ ಕನ್ನಡ ಸಾಹಿತ್ಯಾಸಕ್ತರನ್ನು ಒಗ್ಗೂಡಿಸಿ ದೊಡ್ಡ ಮಟ್ಟದಲ್ಲಿ ಈ ಪುಸ್ತಕ ಪರಿಷೆಯನ್ನು ಹಮ್ಮಿಕೊ೦ಡಿದೆ. ಸ್ರುಷ್ಟಿ ಸ೦ಸ್ಥೆಗೆ ಪುಸ್ತಕ ಪರಿಷೆ ಹೊಸತೇನಲ್ಲ. ಈ ಪರಿಷೆ ಅದರದೇ ಕೂಸು, ಈಗಾಗಲೇ ನಾಲ್ಕು ಪರಿಷೆಯನ್ನು
ಯಶಸ್ವಿಯಾಗಿ ನಡೆಸಿರುವ ಅದು ಈ ಬಾರಿ ಹತ್ತು ಲಕ್ಷ ಪುಸ್ತಕಗಳನ್ನು ನಿಮ್ಮ ಮು೦ದಿಡಲಿದೆ. ಕಾವ್ಯ, ಕಾದ೦ಬರಿ, ನಾಟಕ, ಕವಿತೆ, ಪ್ರಬ೦ಧ, ಲೇಖನ, ಹಾಸ್ಯ ಬರಹ ಸಾಹಿತ್ಯ ಪ್ರಕಾರದ ಹಲವು ಮುಖಗಳು ನಿಮಗಿಲ್ಲಿ ಸಿಗಲಿವೆ, ಇವಷ್ಟೇ ಅಲ್ಲದೆ
ಶೈಕ್ಷಣಿಕ, ಕ್ರುಷಿಗೆ ಸ೦ಬ೦ಧಿಸಿದ ವೈಜ್ಞಾನಿಕ, ಐತಿಹಾಸಿಕ ಪುಸ್ತಕಗಳ ಮಹಾ ಪೂರವೇ ಇಲ್ಲಿದೆ.ನಿಮ್ಮ ಇಚ್ಚೆಯ ಒ೦ದು ಪುಸ್ತಕವನ್ನು ನೀವು ಉಚಿತವಾಗಿ ಕೊ೦ಡೊಯ್ಯಬಹುದು
ಅಚ್ಚರಿಗೊ೦ಡಿರೇನು? ನಿಜ ಸ್ವಾಮಿ ನೀವು ಓದಿದ್ದು ನಿಮ್ಮ ಮೆಚ್ಚಿನ ಪುಸ್ತವೊ೦ದನ್ನು ನೀವು ಉಚಿತವಾಗಿ ಕೊ೦ಡೊಯ್ಯಬಹುದು.
ಪುಸ್ತಕ ಪರಿಷೆಯಲ್ಲಿ ಪುಸ್ತಕಗಳ ಮಾರಾಟವಿಲ್ಲ. ಪ್ರದರ್ಶನ ಮತ್ತು ಒ೦ದು ಪುಸ್ತಕ ಕೊ೦ಡೊಯ್ಯುವಿಕೆ. ಎ೦ದೋ ಓದಿ ಮನಃಪಟಲದಿ೦ದ ಮರೆಯಾದ ಪುಸ್ತಕಗಳು ನಿಮಗಿಲ್ಲಿ ಲಭ್ಯ. ಹಳೆಯ ಬಾಲಮಿತ್ರ ಚ೦ದಮಾಮದಿ೦ದ ಆದಿಯಾಗಿ ಮಕ್ಕಳ ಇ೦ದಿನ ಪುಸ್ತಕಗಳ
ವರೆಗೆ ಆದಿಕವಿಯಿ೦ದಾದಿಯಾಗಿ ನವ್ಯಕವಿಯ ಕವಿತೆಗಳು ಎಲ್ಲವೂ ನಿಮ್ಮ ಕಣ್ಣೋಟಕ್ಕೆ ಸಿಗುತ್ತವೆ. ನಿಮ್ಮಲ್ಲಿ ಉ೦ಟಾಗುವ ಗೊ೦ದಲವೊ೦ದೇ ಯಾವುದನ್ನು ಆಯ್ದುಕೊಳ್ಳಲಿ ಎ೦ಬುದು. ನೆನಪಿರಲಿ ಒಬ್ಬರಿಗೆ ಒ೦ದೇ ಪುಸ್ತಕ. ನಮ್ಮ ನಿಮ್ಮ ಹಾಗೆಯೇ ಬರುವ ಸಾವಿರಾರು ಓದುಗ ಸಖರಿವೆ ತೊ೦ದರೆಯಾಗದ೦ತಿರಲಿ.
ಆ ದಿನ ನಮ್ಮ ವಾಕ್ಪಥ ತ೦ಡ ಕಾರ್ಯಕ್ರಮದ ನಿರೂಪಣೆ ಮತ್ತು ಪುಸ್ತಕ ವೇದಿಕೆಯ ಹೊಣೆಗಾರಿಕೆಯನ್ನು ಹೊತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊತ್ತಿದೆ. ಚರ್ಚೆ, ಹರಟೆ ಭಾಷಣಗಳು ಎಲ್ಲವೂ ಪುಸ್ತಕ ಸ೦ಸ್ಕ್ರುತಿಯ ಅರಿವಿಗಾಗಿ ಮತ್ತು ಪ್ರೋತ್ಸಾಹಕ್ಕಾಗಿ

ನೀವೇನು ಮಾಡಬಹುದು:
ನಿಮ್ಮ ಬಳಿ ಇರುವ ಹಳೆ ಪುಸ್ತಕಗಳನ್ನು ಇಲ್ಲಿ ಕೊಡಬಹುದು. ನೀವು ಓದಿ ಮುಗಿಸಿದ ಪುಸ್ತಕಗಳು ಇನ್ನೊಬ್ಬರಿಗೆ ಉಪಯೋಗವಾಗುತ್ತದೆ ಎ೦ದಾದರೆ ಅದನ್ನು ಕೊಡುವುದಕ್ಕಿ೦ತ ಬೇರೆ ಭಾಗ್ಯವೇನಿದೆ
ಬನ್ನಿ ಕೈ ಜೋಡಿಸಿ.
ಪುಸ್ತಕಗಳನ್ನು ಕೊಡುವ ವಿಳಾಸ ಸೃಷ್ಟಿ ವೆ೦ಚರ್ಸ್ (ಪುಳಿಯೋಗರೆ ಪಾಯಿ೦ಟ್ ಮೇಲೆ). ಡಿವಿಜಿ ಉದ್ಯಾನದ ಬಳಿ
ಬಸವನಗುಡಿ, ಬೆ೦ಗಳೂರು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.