ಹಾಡಿಗೊಂದು ಹಾಡು

2.75

ಡಾ.ರಾಜ್ ಅಂದರೆ ಅವರೊಂದು ಅದ್ಭುತ. ಅಭಿಮಾನಿಗಳ ಪಾಲಿನ ಅಮೃತ. ಅಂಥ ಮಹಾನ್ ನಟ, ಗಾಯಕರ ಜನ್ಮದಿನವಿಂದು. ಈ ಪ್ರಯುಕ್ತ ಅವರ ಹಾಡೊಂದನ್ನು ಗನುಗುವ ಮೂಲಕ ಮತ್ತೆ ಮತ್ತೆ ಅವರನ್ನು ನೆನಪು ಮಾಡಿಕೊಳ್ಳೋಣ. ನಿಮಗೆ ರಾಜಣ್ಣ ಅವರ ನೆನಪು ಬಂದ ತಕ್ಷಣ ನೆನಪಾಗೋ ಅವರೇ ಹಾಡಿದ ಅಥವಾ ಅವರ ಅಭಿನಯದ ಹಾಡು ಯಾವುದು ? ಇಲ್ಲಿ ಬರೆದು ಹಂಚಿಕೊಳ್ಳುತ್ತಿರಲ್ವಾ?‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ ಸೂತ್ರವ ಹರಿದ ಬೊಂಬೆಯಾ ಮುರಿದ ಮಣ್ಣ ಆಗಿಸಿದ, ಕಂಬನಿ ಧಾರೆ ಸುರಿಸಲು ನನ್ನ ಜೀವ ಉಳಿಸಿದ, ನನ್ನ ಜೀವ ಉಳಿಸಿದ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು, ಏನೇ ಬರಲಿ ಮನಸಿಗೆ ಎಂದು ಶಾಂತಿ ದೊರಕದು, ಕಣ್ಣೀರಿಡುವ ನನ್ನೀ ಕಥೆಯು ಏಕೋ ಮುಗಿಯದು, ಅಯ್ಯೋ, ಏಕೋ ಮುಗಿಯದು ಆಡಿಸಿ ನೋಡು ಬೀಳಿಸಿ ನೋಡು ಉರುಳಿಹೊಗದು !!!!! ಇನ್ನೆಲ್ಲಿಯ ರಾಜ್, ಇನ್ನೆಲ್ಲಿಯ ಅಭಿನಯ :( ಅರವಿಂದ್

ಚಿತ್ರ : ಕಣ್ತೆರೆದು ನೋಡು ಲೀಲಾವತಿ ಮತ್ತು ರಾಜಕುಮಾರ್, ಬಾಲಕೃಷ್ಣ ಬಂಗಾರದೊಡವೆ ಬೇಕೇ ನೀರೆ, ಬಂಗಾರದೊಡವೆ ಬೇಕೇ ನೀರೆ, ಅಂಗನೆ ನಿನ್ನಂಗ ಶೃಂಗಾರಕೊಪ್ಪುವ , ಅಂಗನೆ ನಿನ್ನಂಗ ಶೃಂಗಾರಕೊಪ್ಪುವ, ಬಂಗಾರದೊಡವೆ ಬೇಕೇ ನೀರೆ, ಅರವಿಂದ್

ರ ಇಂದ ಕೊನೆಗೊಂಡಿತು... ರ ಇಂದ ಶುರುವಗುವ ಅಣ್ಣವರ ಚಿತ್ರದ ಹಾಡು ಸಂಪತ್ತಿಗೆ ಸವಾಲ್ ಚಿತ್ರದಿಂದ... ರಾಜ ಮುದ್ದು ರಾಜ... ನೂಕುವಂತ ಕೋಪ ನನ್ನಲ್ಲೇಕೆ... ಮುದ್ದು ರಾಜ

ಎಲ್ಲಾ ಹಾಡೂ ಇಷ್ಟನೇ.. ಆದರೆ ಹಾಲು ಜೇನು ಚಿತ್ರದಿಂದ 'ಬಾಳು ಬೆಳಕಾಯಿತು' ಹಾಡು ತುಂಬಾನೇ ಇಷ್ಟ

>.ಬಾಳು ಬೆಳಕಾಯಿತು<, ತಂದಾನ ತಂದಾನ ಈ ಅಂದ ಚಂದಾನ ಬಾ ಬಾರೆ ಗೆದ್ದೇ ನನ್ನ ರಾಜ ಕುಮಾರಿ ........... ಅರವಿಂದ್

\\ ನನ್ನ ರಾಜ ಕುಮಾರಿ ರವಿ... ರವಿ.... ರವಿ ನೀನು ಆಗಸದಿಂದ, ಮರೆಯಾಗಿ ಹೋಗದೆ ನಿಲ್ಲು... ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ....

೧. ಅನುರಾಗ ಏನಾಯ್ತು........ ಮನಸೇಕೆ ಕಲ್ಲಾಯ್ತು, ನಿನ್ನ ಸವಿ ಮಾತು ಕಹಿ ಏಕಾಯ್ತು, ನಿನ್ನೋಲವೆಲ್ಲ ಇಂದೆನಾಯ್ತು - ನೀ ನನ್ನ ಗೆಲ್ಲಲಾರೆ ೨. ಅಮ್ಮ ಎಂದರೆ ಏನೋ ಹರುಷವು.. ನಮ್ಮ ಬಾಳಿಗೆ ಅವಳೇ ದ್ಯೆವವು - ಕೆರಳಿದ ಸಿಂಹ ೩. ಅರಳಿದೆ ತನು ಮನ ನೋಡುತ ನಿನ್ನ... ಹೊಸತನ ನನ್ನಲ್ಲಿಯೇ ತಂದೆನು ನಾ - (ಚಿತ್ರ ಗೊತ್ತಿಲ್ಲ) ೪. ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೆತಕೆ....... ಎಲ್ಲರೆದುರು ಮಾನ ಹೋಗಿ ಕೊನೆಗೆ ಮನೆಗೆ ಓಡುವೆ - ನೀ ನನ್ನ ಗೆಲ್ಲಲಾರೆ ೫. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು - ಆಕಸ್ಮಿಕ ೬. ಪ್ರೀತಿನೆ ಆ ದ್ಯಾವುರು ತಂದ ಆಸ್ತಿ ನಮ್ಮ ಪಾಲಿಗೆ - ದೂರದ ಬೆಟ್ಟ. ೭. ಬಾಡಿ ಹೋದ ಬಳ್ಳಿಯಿಂದ, ಹೂವು ಅರಳಬಲ್ಲದೆ - ಎರಡು ಕನಸು ೮. ಅಲ್ಲಾ.. ಅಲ್ಲಾ. ನೀನೆ ಎಲ್ಲ ನಿನ್ನನು ಬಿಟ್ಟರೆ ಗತಿಯಾರಿಲ್ಲ.. ನಿನ್ನದೇ ಜಗವೆಲ್ಲ - ಗುರಿ ೯. ಮಾಣಿಕ್ಯ ವೀಣಾ ಮುಪಲಾಲಯಂತಿ ಮದಾರಸಾಂ, ಮಂಜುಳಾ ವಾದ್ಮಿಲಾಸ -- ಕವಿರತ್ನ ಕಾಳಿದಾಸ ೧೦. ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿಕೊಡಲೇ ನಾನು ತಗೋ ತಿನ್ನು - (ಚಿತ್ರ ಗೊತ್ತಿಲ್ಲ ) ಅರವಿಂದ್

೩. ಅರಳಿದೆ ತನು ಮನ ನೋಡುತ ನಿನ್ನ... ಹೊಸತನ ನನ್ನಲ್ಲಿಯೇ ತಂದೆನು ನಾ - (ಅಪೂರ್ವ ಸಂಗಮ) ೧೦. ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿಕೊಡಲೇ ನಾನು ತಗೋ ತಿನ್ನು - (ಹಾವಿನ ಹೆಡೆ)

ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ ಕಣ್ಣ ಮಿಂಚು ನೋಟದಲ್ಲೆ ಕಂಡೆ ಪ್ರೇಮ ರೂಪ ಚಿತ್ರ:ಸ್ವಯಂವರ ಜೀವ ಹೂವಾಗಿದೆ ಭಾವ ಜೇನಾಗಿದೆ ಬಾಳು ಹಾಡಾಗಿದೆ ಚಿತ್ರ:ನೀ ನನ್ನ ಗೆಲ್ಲಲಾರೆ (ಇರಬಹುದು) ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು, ಆನಂದ ತರುವ ಮನಕೆ ನೋವನ್ನು ತಂದೆ ನಾನು ಚಿತ್ರ: ಹಾವಿನಹೆಡೆ

ಸಾತ್ವಿಕ್, ನಮಸ್ಕಾರ. ರಾಜ್ ರ ಯಾವ ಹಾಡನ್ನು ಮರೆತರೂ ಅವರ ನಾದಮಯ..... ಈ ಲೋಕವೆಲ್ಲಾ... ಚಿತ್ರ- ಜೀವನಚೈತ್ರದ ಹಾಡನ್ನು ಮರೆಯೋಕ್ಕಾಗುತ್ಯೇ? ಹಾಡಿನ ಜೊತೆಗೆ ಚಿತ್ರದಲ್ಲಿ ಅವರು ತೋರಿಸುವ ಸ್ವರ ಪ್ರಸ್ಥಾರ ಎಷ್ಟು ಅಧ್ಬುತವಾಗಿದೆ ಅ೦ದ್ರೆ ಸಾಮಾನ್ಯವಾಗಿ ಒ೦ದು ಹಾಡಿನ ಆಡಿಯೋ ಮತ್ತು ವೀಡಿಯೋಗಳೆರದರಲ್ಲೂ ಒ೦ದೇ ಸಮನಾಗಿ ಸ್ವರ ಪ್ರಸ್ಥಾರವನ್ನು ತೋರಿಸ್ಲಿಕ್ಕಾಗಲ್ಲ! ಅ೦ಥ ಅದ್ಬುತವಾದ ಹಾಡು ಅದು! ನೀವು ಈ ಹೇಳಿಕೆಗಾಗಿಯಾದರೂ ಆ ಹಾಡಿನ ದ್ವೀತಿಯ ಚರಣದ ನ೦ತರ ಬರುವ ಸ್ವರ ಪ್ರಸ್ಥಾರಗಳೆರಡರ ವಿಡಿಯೋ ಕ್ಲಿಪ್ ನೋಡಿ.ಸ.ಮ.ಗ.ರಿ.ಸ.ಮ.ದ.ನಿ.ಸ. ಆ ಸ್ವರಗಳನ್ನು ಕೈಬೆರಳಲ್ಲಿ ಯಾವ ಶಾಸ್ತ್ರೀಯ ಸ೦ಗೀತಗಾರನಿಗೂ ಕಡಿಮೆ ಇಲ್ಲದ೦ತೆ ಅಧ್ಬುತವಾಗಿ ತೋರಿಸಿದ್ದಾರೆ.

ಒಲುಮೆಯ ಹೂವೇ ನೀ ಹೋದೆ ಎಲ್ಲಿಗೆ? ಉಳಿಸಿ ಕಣ್ಣ ನೀರ ನೀ ನನ್ನ ಬಾಳಿಗೇ ನಾನೇ ತಾಯಿ ನಾನೆ ತಂದೆ ನಿನ್ನ ಪಾಲಿಗೇ ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ ನಿನ್ನ ನುಡಿಯು ಹೊನ್ನ ನುಡಿಯು ಜೇನ ಹನಿಯು ಹೃದಯಕೆ ನನ್ನ ಎದೆಯ ವೀಣೆ ತಂತಿಯ ಮೀಟಿ ಓಡಿದೆ ಏತಕೆ? ಕಣ್ಣೀರ ಧಾರೆ ಇದೇಕೆ ಇದೇಕೆ ನನ್ನೊಲವಿನಾ ಹೂವೆ ಈ ಶೋಕವೇಕೆ ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ ಆರಾಧಿಸುವೇ ಮದನಾರಿ ಆ ಮೊಗವೂ ಎಂಥ ಚೆಲುವೂ ಮನವಾ ಸೆಳೆವಾ ಬಂಗಾರದ ಹೂವು ಕಮಲದ ಹೂವಿಂದ ಕೆನ್ನೆಯ ಮಾಡಿದನೋ ದುಂಬಿಗಳಿಂದ ಈ ಮುಂಗುರುಳಂದ ನಿನಗೇ ತಂದನೋ ಕಂಡೇ ನಾ ಕಂಡೇ ಕಾಣದಾ ತಾಯಿಯಾ ನಾ ಕಂಡೇ ತಾಯಿಯಾ ಪ್ರೀತಿಯಾ ಸವಿಯ ನಾ ಉಂಡೆ ಇನ್ನೂ ಎಷ್ಟು ಗೀತೆಗಳು ಬೇಕು ರಾಜಕುಮಾರ್ ಅವರ ನೆನಪು ಉಕ್ಕಿಸಲು

ನನಗೆ ಸಾಹಿತ್ಯ ನೆನಪಿಲ್ಲದಿದ್ದರೂ ರಾಜ್ ಹಾಡುಗಳು ಅಂತಂದ ತಕ್ಷಣ ನೆನಪಾಗೋದು.. ಕವಿರತ್ನ ಕಾಳಿದಾಸ ಸಿನೆಮಾದ ಪ್ರಿಯತಮಾ ಹಾಡು..

ಸಾತ್ವಿಕ್, ಡಾ.ರಾಜ್ ಎಂದ ತಕ್ಷಣ ಎಲ್ಲಾ ಹಾಡುಗಳು ನೆನಪಿಗೆ ಬರುತ್ತದೆ. ಅದರಲ್ಲಿ ಪಟ್ ಅಂತ ನೆನಪಿಗೆ ಬಂದದ್ದು. ೧) ಅರಳುತಿದೆ ಮೋಹ ಹೃದಯದಲಿ ದಾಹ ಇಂದೇಕೇ ಹೀಗೇಕೆ ಈ ರೀತಿ ನನಗೇಕೆ ೨) ನೀನಾಡೊ ಮಾತೆಲ್ಲ ಚೆಂದ, ನಿನ್ನಿಂದ ಈ ಬಾಳೇ ಅಂದ ೩) ಕಾವೇರಿ ಏಕೆ ಓಡುವೆ ನನ್ನಲ್ಲಿ ಪ್ರೀತಿ ಇಲ್ಲವೇ ೪) ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು, ಕೋಪಿಸಲು ನಿಂದಿಸಲು ಮೌನವ ಮೀರುವನೇನು ೫) ತಂದೆ ಕೊಡಿಸೊ ಸೀರೆ, ತಂದೆ ಆಗೊವರೆಗೆ, ತಾಯಿ ಕೊಡಿಸೊ ಸೀರೆ ೬) ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ ೭) ವಸಂತಕಾಲ ಬಂದಾಗ ಮಾವು ಚಿಗುರಲೇಬೇಕು ಕೋಗಿಲೆ ಹಾಡಲೆಬೇಕು ೮) ನಗಲಾರದೇ ಅಳಲಾರದೇ ತೂಳಲಾಡಿದೆ ಜೀವ ೯) ನಾದಮಯ ಈ ಲೋಕವೆಲ್ಲ ೧೦)ಚಿನ್ನದ ಬೊಂಬೆಯಲ್ಲ ದಂತದ ಬೊಂಬೆಯಲ್ಲ ಬುದ್ಧಿ ಇರುವ ಬೊಂಬೆಯು ಕಾಲವು ಕುಣಿಸಿದಂತೆ ೧೧)ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ ರೋಷಾಗ್ನಿ ಜ್ವಾಲೆ ಉರಿದುರಿದು

ಸಾತ್ವಿಕ್, ನಂಗೆ, ಎಲ್ಲೂ ಹೋಗಲ್ಲ ಮಾಮಾ, ಎಲ್ಲೂ ಹೋಗಲ್ಲ.......... ಹಾಡು ಅಂದ್ರೆ ತುಂಬಾ ಇಷ್ಟಾರಿ. -ಅಶ್ವಿನಿ

ನನಗಿಷ್ಟವಾದ ಹಾಡು... ನಿನ್ನದೇ ನೆನಪು ದಿನವು ಮನದಲ್ಲಿ.. ನೋಡುವಾ ಆಸೆಯು ತುಂಬಿದೆ ನನ್ನಲಿ ನನ್ನಲಿ... ಲವ್ ಮಿ ಆರ್ ಹೇಟ್ ಮಿ ಕಿಸ್ ಮಿ ಆರ್ ಕಿಲ್ ಮಿ ಓ ಡಾರ್ಲಿಂಗ್ ಪ್ಲೀಸ್ ಡು ಸಂಥಿಂಗ್ ಟು ಮಿ ..... ಹೇ ಏನ್ ಹೇಳೋದು ಹೋಗೋಪ ಎಲ್ಲ ಹಾಡು ಇಷ್ಟನೇ .. ಸಂದರ್ಭಕ್ಕೆ ತಕ್ಕಂತೆ ಬರ್ತಾವು ಅವು.

ಎಲ್ಲಾ ಹಾಡುಗಳೂ ಇಷ್ಟವೇ.. ಭಕ್ತಿ ಗೀತೆಯಲ್ಲಿ : - ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನೋ.. ಎಂಥ ಅಂದ ಎಂಥ ಚಂದ ಶಾರದಮ್ಮಾ.. ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ಎತ್ತಿ ತಂದೆ ಎಲ್ಲಿಂದ ರಾಯ.. ಕುಂಡಲಿನೀ ದೇವಿ ಕೊಂಡಾದುವೆ ತಾಯೆ ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮಾ ಕೊಲ್ಲು ಕೋದಂಡರಾಮ ಬೇಗ ಕೊಲ್ಲು ಕೋದಂಡರಾಮ ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮಾ ಇನ್ನು philosophy ಯಲ್ಲಿ ಬಾನಿಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆಯಿದೆ ಏನೆಂದು ನಾ ಹಾಡಲೀ..ಮಾನವನಾಸೆಗೆ ಕೊನೆಯೆಲ್ಲಿ ಯಾರೇ ಕೂಗಾಡಲಿ ಊರೇ ಹೋರಾಡಲಿ ಚಿನ್ನದ ಗೊಂಬೆಯಲ್ಲ ದಂತದ ಗೊಂಬೆಯಲ್ಲ ಬುದ್ದಿ ಇರುವ ಗೊಂಬೆಯೂ ನಾಡಗೀತೆಗಳಲ್ಲಿ ಎಲ್ಲಾದರು ಇರು ಎಂತಾದರು ಇರು ನಾವಾಡುವ ನುಡಿಯೇ ಕನ್ನಡ ನುಡಿ ನಾನಿರುವುದೇ ನಿಮಗಾಗಿ ಪ್ರೇಮ-ಭಾವಗೀತೆಗಳಲ್ಲಿ ಕಣ್ಣಿಗೆ ಬಂದವಳು ಕನಸಿಗೆ ಬಾರದಿರುವೆಯಾ? ಮಾತಿಗೆ ಬಂದವಳು ಮನಸಿಗೆ ಬಾರದಿರುವೆಯಾ? ಸುಡುಬಯಲ ಗಾಳಿ ನಾನು ಸಂಜೆಗೆನ್ನ ಪಯಣವೆಂದು ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತಾ ದಾಸರ ಪದಗಳು ಎಲ್ಲಾರು ಮಾಡುವುದು ಹೊಟ್ಟೆಗಾಗಿ.. ಗೇಣು ಬಟ್ಟೆಗಾಗಿ ತಲ್ಲಣಿಸದಿರು ಕಂಡ್ಯ ತಾಳು ಮನವೇ ಕಲ್ಲುಸಕ್ಕರೆ ಕೊಳ್ಳಿರೋ.. ನೀವೆಲ್ಲರೂ ಕಲ್ಲುಸಕ್ಕರೆ ಕೊಳ್ಳಿರೋ. ಒಂದೇ ಎರಡೇ..

ನನಗೆ ಮತ್ತೆ ಮತ್ತೆ ಮೆಲುಕು ಹಾಕುವಂತಹ ಹಾಡು ಡಾ ರಾಜಕುಮಾರ್ ಅವರ " ನಾವಾಡುವ ನುಡಿ" ಮತ್ತು " ಜೇನಿನ ಹೊಳೆಯೋ"