ಬದುಕ ಬದಲಿಸುವ ತಾಕತ್ತು ಯಾರಿಗಿದೆ ?

5

            ಇಂಥ ಒಂದು ಪ್ರಶ್ನೆಗೆ ಉತ್ತರಕ್ಕಾಗಿ ತಡಕಾಡಿ ಕಡೆಗೆ ಬಂದು ನಿಲ್ಲುವುದು 'ಸಾಂದರ್ಭಿಕ ಘಟನೆಗಳು ಮತ್ತು ಪುಸ್ತಕಗಳ' ಹತ್ತಿರ. ಹೌದು, ಅಕ್ಬರ್ ಬಾದಷಹ ಸಹ ಹುಟ್ಟಿದಾಗ ಮಗುವೇ ಆಗಿದ್ದ. ಬದುಕು ಸಾಕಷ್ಟು ಕಲಿಸಿತು. ಚಕ್ರವರ್ತಿಯಾದ. ಜೀವನದ ನೂರಾರು ಅನುಭವಗಳನ್ನು ಒಂದು ಹೊತ್ತಿಗೆ ಸಂಗ್ರಹಿಸಿಟ್ಟುಕೊಂಡಿರುತ್ತದೆ. ಎಲ್ಲವನ್ನೂ ನಾವೇ ಅನುಭವಿಸಿ ಕಲಿಯಬೇಕಿಲ್ಲ. ಇನ್ನೊಬ್ಬರ ಅನುಭವಗಳು ನಮ್ಮ ಜೀವನಕ್ಕೆ ದಾರಿಯಾಗಬಲ್ಲವು. ಬೆಂಕಿ ಮುಟ್ಟಿದರೆ ಸುಡುತ್ತೆ ಅಂತ ಅಮ್ಮ ಹೇಳ್ತಾಳೆ ಯಾಕಂದರೆ ಆಕೆಗೆ ಅದರ ಅನುಭವವಿದೆ. ನಾವು ಯಾವತ್ತೂ ಅದನ್ನು ಪರೀಕ್ಷಿಸಹೋಗುವುದಿಲ್ಲ.


           ಇರಲಿ, ನಿಮ್ಮನ್ನು ತೀವ್ರವಾಗಿ ಕಾಡಿದ, ಕೆಣಕಿದ, ಸತಾಯಿಸಿ ಸೋಲೋಪ್ಪಿದ ಪುಸ್ತಕಗಳು ನಿಮ್ಮ ಮಸ್ತಕದಲ್ಲಿರಬಹುದು. ಅವುಗಳ ವಿಶೇಷತೆಯೊಂದಿಗೆ ಅದರ ಪರಿಚಯ ಮಾಡಿಸಿದರೆ ಇತರ ಸಂಪದಿಗರು ಅವುಗಳನ್ನು ಓದಬಹುದು. ಸಾಕಷ್ಟು ಸಾಧನೆ ಮಾಡಿದ ಮಹನೀಯರು ಸಂಪದದಲ್ಲಿದ್ದಾರೆ. ಅವರನ್ನು ಧನಾತ್ಮಕವಾಗಿ ಪ್ರೇರಿಪಿಸಿದ ಪುಸ್ತಕಗಳ ಅಥವಾ ಘಟನೆಗಳ ಬಗ್ಗೆ ಮಾಹಿತಿ ಕೊಟ್ಟರೆ ಕಿರಿಯರಿಗೆ ಸಹಾಯವಾಗುತ್ತದೆ. ನೋಡೋಣ ಯಾವ ಪುಸ್ತಕ ಯಾರನ್ನು ಎಷ್ಟು ಕಾಡಿದೆ ಅಂತ...  ಎಲ್ಲರಿಗೂ ಮುಕ್ತ ಆಹ್ವಾನ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿ ಮನುಜನ ಬಾಳೊಂದು ಪುಸ್ತಕ............, ದಿನದ ಪ್ರತಿ ನಿಮಿಷಗಳು ಪುಟಗಳ ತಿರುವು, ಪ್ರತಿ ಪದಗಳ ಕೂಟ, ಚದುರಂಗದಾಟ, ಏನ ಹೇಳಲಿ ಪುಸ್ತಕಗಳು ಬದಲಿಸಿದವು ಎನ್ನೆನೆಂದು, ಬದಲಿಸಿದ್ದು ತಪ್ಪು ಹೆಜ್ಜೆಗಳ ತೊಡರು, ದಿಟ್ಟ ಹೆಜ್ಜೆಗಳ ತಿಮಿರು ಅವು ನನ್ನದೇ ಪುಸ್ತಕದ ಕಂತೆ .............. ಹೊತ್ತು ತಿರುಗುತಿಹೆ, ಒಗೆಯುವವರೆಗೂ ಕಂತೆ............. ಅರವಿಂದ್

ಕಾಲೇಜಿನಲ್ಲಿ ಪರೀಕ್ಷೆಗೊ ಮುನ್ನ ಪಠ್ಯಪುಸ್ತಕಗಳನ್ನ ಹೇಗಪ್ಪಾ ಓದೋದು ಅನ್ನೋ ಬೇಸರಿಕೆಯಲ್ಲಿರುವಾಗ ಈ ಪುಸ್ತಕ ಕೈಗೆ ಸಿಕ್ಕಿತು. ತುಂಬಾ ಹಳೆಯ ಪುಸ್ತಕ. ಕತೆ ಬರೆದಿರುವ ಪರಿ, ಇದ್ದ ಲಾಜಿಕ್ ಎಲ್ಲಾ ತುಂಬಾ ಹಿಡಿಸಿತು ಮತ್ತು ಹಿಡಿದಿಟ್ಟಿತ್ತು, ಕಲ್ಪನೆಯಲ್ಲಿ ಮುಳುಗಿಸಿತು. ಮತ್ತೆಪಠ್ಯಪುಸ್ತಕ ಹಿಡಿದೆ. ಹೀಗೆ ಪಠ್ಯಪುಸ್ತಕ ಓದುವ ಪರಿ, ಅರ್ಥ್ಯೆಸಿಕೊಳ್ಲುವ ರೀತಿ ಬದಲಾಗುತ್ತ ಹೋಯಿತು. ತಮಾಷೆ ಅನ್ಸುತ್ತಲ್ವಾ ಸಾತ್ವಿಕ್. ;-)

The long walk ಕನ್ನಡಕ್ಕೆ ಪೂಚಂತೇ ಮಹಾಪಲಾಯನ (ಮಿಲನಿಯಮ್ ಸೀರೀಸ್) ಬಿಚ್ಚಿದ ಜೋಳಿಗೆ - ಸ.ಜ ನಾಗಲೋಟಿಮಠ್. (ಎಂಥ ಕಡುಕಷ್ಟಗಳ ನಡುವೆಯೂ ಜಗತ್ತಿನ ಕ್ರೌರ್ಯಗಳ ನಡುವೆಯೂ ಒಬ್ಬ ಮನುಷ್ಯ ತನ್ನ ಮುಗ್ಧತೆಯನ್ನು ಹೇಗೆ ಉಳಿಸಿಕೊಳ್ಳಬಹುದೆಂದು ಕಲಿಸುತ್ತದೆ.)

ಪುಸ್ತಕಗಳು ತುಂಬಾ ಇವೆ. ಅನೇಕ ವ್ಯಕ್ತಿಗಳ ಜೀವನ ಚರಿತ್ರೆಗಳು!!! ಅದಕ್ಕಿಂತಲೂ ಮಿಗಿಲಾಗಿ ಬದುಕನ್ನು ಬದಲಾಯಿಸಿದ್ದು - ನೋಡಿದ ವ್ಯಕ್ತಿಗಳಿಂದ ಕಲಿತ ಸಣ್ಣ ಸಣ್ಣ ಪಾಠಗಳು. - 'ನನ್ನಿಂದ ಸಾಧ್ಯ' ಎಂದು ಎಷ್ಟೋ ಸಲ ನಾನೇ ನನಗೆ ಬೆನ್ನು ತಟ್ಟಿಕೊಂಡು ಮಾಡಿದ ಸಾಧನೆಗಳು - 'ನನ್ನಿಂದ ಸಾಧ್ಯ' ಎಂದು ಹುರಿದುಂಬಿಸಿದ ವ್ಯಕ್ತಿಗಳು, ಬದುಕನ್ನು ಪ್ರೀತಿಯಿಂದ ನೋಡು ಎಂದು ಹೇಳಿಕೊಟ್ಟ ಅಸೀಮ ವ್ಯಕ್ತಿತ್ವಗಳು.

ಸಾತ್ವಿಕ್, ನಿಜವಾಗಿ ಜೀವನದ ಅನುಭವಕ್ಕಿಂತ ದೊಡ್ದಪಾಠ ಬೇರೆ ಇಲ್ಲ. ಇದು ಸ್ವತ: ನನ್ನ ಅನುಭವ. ನನಗೆ ಪುಸ್ತಕ ಓದೋಕ್ಕಿಂತಲೂ ಭಾಷಣಗಳು, ಉಪನ್ಯಾಸಗಳನ್ನು ಕೇಳೋದೆಂದರೆ ತುಂಬಾ ಪ್ರಿಯ. ನನ್ನ ಜೀವನಕ್ಕೆ ಅನೇಕರ ಮಾತುಗಳು ಪ್ರೇರಣೆ ನೀಡಿವೆ. ಇತ್ತೀಚೆಗೆ ನನ್ನನ್ನು ಹಿಡಿದಿಟ್ಟಿರುವ ಕೆಲವರ ಹೆಸರು ಕೇಳಿ...... ೧] ಚಿನ್ಮಯಾ ಮಿಷನ್ನಿನ ಸ್ವಾಮಿ ಬ್ರಹ್ಮಾನಂದಜಿಯರ ಕಂಠದಿಂದ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ. ೨] ಡಾ. ಗೋಪಾಲಕೃಷ್ಣ ಅವರ ಉಪನ್ಯಾಸಗಳು- ವಿಷಯ: ಭಾರತೀಯ ಪರಂಪರೆ- www.iish.org ೩] ವೇದಾಧ್ಯಾಯೀ ಸುಧಾಕರ ಶರ್ಮರ "ಎಲ್ಲರಿಗಾಗಿ ವೇದ " ಉಪನ್ಯಾಸಗಳು[ಸುಧೆ-೧ ರಿಂದ ೧೦] www.binfire.com ೪] ಮಾತಾಜಿ ವಿವೇಕಮಯೀ ಇವರಿಂದ : ನಮ್ಮೊಳಗಿರುವ ಚೈತನ್ಯ ೫]ಪೂಜ್ಯ ಶ್ರೀ ನಿರ್ಭಯಾನಂದ ಸರಸ್ವತಿ ಯವರ ಉಪನ್ಯಾಸಗಳು ೬] ದಿ|| ವಿದ್ಯಾನಂದ ಶಣೈ ಇವರ ಭಾರತ ದರ್ಶನ ೭] ಮುಕುಂದೂರು ಸ್ವಾಮಿಗಳ ಬಗ್ಗೆ ಬರೆದಿರುವ -ಯೋಗದಾಗ್ ಎಲ್ಲಾ ಐತೆ-ಪುಸ್ತಕ. ನಾನು ಇಷ್ಟಪಟ್ಟ ಅನೇಕ ಉಪನ್ಯಾಸಗಳನ್ನು ಅಂತರ್ಜಲಕ್ಕೆ ಪೇರಿಸುವುದು ಇತ್ತೀಚೆಗೆ ನನ್ನ ಸ್ವಭಾವವಾಗಿಬಿಟ್ಟಿದೆ. ಇಷ್ಟಪಟ್ಟರಿಗೆ ಕೊಂಡಿ ಕೊಡುವೆ. ಅಥವಾ ಸಂಪದದಲ್ಲಿ ಪ್ರಕಟಿಸಿರೆಂದರೆ ಪ್ರಕಟಿಸುವೆ. www.vedasudhe.blogsp...