ಇಂಗ್ಲೀಷ್ ಹೋಯ್ತು ಹಿಂದಿ ಬಂತು ಢುಂ ಢುಂ ಢುಂ...

5

    ನಾನು ಮೊದಲೇ ಒಂದು ವಿಷಯ ಸ್ಪಷ್ಟಪಡಿಸಿ ಬರಹವನ್ನು ಮುಂದುವರೆಸುತ್ತೇನೆ. ನನಗೆ ಕನ್ನಡ ಬಿಟ್ಟು ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ. ಇಂಗ್ಲಿಷ್ 'ಕೊಂಚ ಕೊಂಚ' ಅರ್ಥವಾದರೂ, ಹಿಂದಿ 'ಸುಟ್ಟು ತಿನ್ನಲಿಕ್ಕೂ' ಬರುವುದಿಲ್ಲ. ಬರುವುದಿಲ್ಲ ಎಂಬುದು ಹೆಮ್ಮೆಯ ವಿಷಯವಲ್ಲದಿದ್ದರೂ ಕಲಿಯಲು ಪ್ರಯತ್ನಿಸಿ ಸೋತಿದ್ದೇನೆ. ಇರಲಿ ಈಗ ನೇರ ವಿಷಯಕ್ಕೆ ಬರೋಣ. ಹಿಂದೆ ಒಮ್ಮೆ ಲೇಖನವೊಂದನ್ನು  ಓದುವಾಗ- ಹಿಂದಿ ರಾಷ್ಟ್ರಭಾಷೆ, ಅದನ್ನು ಕಲಿಯುವುದು ನಮ್ಮ ದೇಶದ ಏಕತೆಯ ಸಂಕೇತ. ಇಂಗ್ಲೀಷ್ ಎಂಬುದು ಪರಕೀಯ ಭಾಷೆ. ಅದನ್ನು ಉಪಯೋಗಿಸಿಯೇ ಬ್ರಿಟಿಷರು ನಮ್ಮನ್ನು ೨೦೦ ಹೆಚ್ಚು ವರ್ಷ ಆಳಿದರು. ಇಂಥ ದಾಸ್ಯದ ಸಂಕೇತವನ್ನು ಒಪ್ಪಬೇಕೆ? ಅಂತೆಲ್ಲ ಬರೆದಿದ್ದರು.
    ನನಗೆ ಅರ್ಥವಾಗದೇ ಇರುವುದು ಯಾವುದು ನಮ್ಮ ರಾಷ್ಟ್ರ ಭಾಷೆ? ಹಿಂದಿಗೂ ದೇಶಪ್ರೇಮಕ್ಕೂ ಏನು ಸಂಬಂಧ? ಸಮಾನತೆಯ ತಳಹದಿಯ ಮೇಲೆ ನಿಂತಿರುವ  ಸಂವಿಧಾನವಿರುವ ಭಾರತದಲ್ಲಿ ಹೆಚ್ಚು ಜನ ಒಂದು ಭಾಷೆಯನ್ನು ಮಾತಾಡುತ್ತಾರೆಂಬ ಕಾರಣಕ್ಕೆ ಅದನ್ನು ರಾಷ್ಟ್ರ ಭಾಷೆ ಎಂದು ಕರೆದು ಉಳಿದ ಭಾಷೆಗಳನ್ನು ಅಧೀನ ಭಾಷೆಗಳೆಂದು ಘೋಷಿಸಲು ಸಾಧ್ಯವೇ? (ಹಿಂದಿ ನಮ್ಮ ಸೇನೆಯ ಭಾಷೆಯಾಗಿದೆ. ಅದು ಅಗತ್ಯ. ಹಲವಾರು ರಾಜ್ಯಗಳಿಂದ ಬಂದ ಸಿಪಾಯಿಗಳು ಅಲ್ಲಿದ್ದು ಅವರು ಇಂಗ್ಲೀಷ್ ಗಿಂತ ಹಿಂದಿಯನ್ನು ಸುಲಭವಾಗಿ ಕಲಿಯಬಲ್ಲರೆಂಬ ಕಾರಣವಿರಬಹುದು. ಇದನ್ನು ನಮ್ಮ ಚರ್ಚೆಯಿಂದ ಹೊರಗಿಡುವ) ಹಿಂದಿಯನ್ನು ನಾವು ತೃತೀಯ ಭಾಷೆಯಾಗಿ ಕಲಿಯುತ್ತೇವೆ, ಯಾವ ಹಿಂದಿಯಾಡುವ ರಾಜ್ಯ, ಇತರೆ ಭಾರತೀಯ ಭಾಷೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುತ್ತಿದೆ? ಈ ದ್ವಂದ್ವ ನಿಲುವು ಯಾಕೆ? ಇದು ಹಿಂದಿಯೇತರ ವಿದ್ಯಾರ್ಥಿಗಳಿಗೆ ಹೊರೆಯಲ್ಲವೇ? ಸ್ವಲ್ಪ ಯೋಚಿಸಿ. ಭಾಷೆ ಎಂಬುದು ಕೇವಲ ಮಾಧ್ಯಮ ಮಾತ್ರ ಅಲ್ಲ. ಅದೊಂದು ಸಂಸ್ಕೃತಿವಾಹಕ ಕೂಡ. ಒಂದು ಭಾಷೆ ಬಂತು ಎಂದಾದರೆ ಅದರ ಜೊತೆಯಲ್ಲೇ ಅಲ್ಲಿನ ಸಂಸ್ಕೃತಿಯ ತುಣುಕುಗಳನ್ನು ಕಲಿಯುವ ವ್ಯಕ್ತಿಗಳಲ್ಲಿ ತುರುಕುತ್ತದೆ.
    ನನ್ನ ಗೆಳೆಯರಲ್ಲೂ ಕೂಡ ಹಲವರು ಹಿಂದಿಯ ಅಗತ್ಯದ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಾರೆ. ನನ್ನದು ಒಂದೇ ಪ್ರಶ್ನೆ. ಭಾಷೆಯೊಂದನ್ನು ನಮ್ಮ ಅಗತ್ಯಕ್ಕಾಗಿ ಕಲಿಯಬೇಕಾ ಇಲ್ಲ ಇಂಗ್ಲೀಷ್ ಗೆ ಬದಲಿಯಾಗಿ ಇರಲಿ ಅಂತಲಾ? ಜಾಗತೀಕರಣದ ಇಂದಿನ ದಿನಮಾನಗಳಲ್ಲಿ ಹೆಚ್ಚೆಚ್ಚು ಭಾಷೆಗಳನ್ನು ಕಲಿತಷ್ಟು ಒಳ್ಳೆಯದು ಎಂಬ ವಾದವೂ ಇದೆ. ಆದರೆ ಯಾವ ಭಾಷೆ ಕಲಿಯಬೇಕು? ಇಂಗ್ಲೀಷ್, ಹಿಂದಿ, ಫ್ರೆಂಚ್, ಜರ್ಮನ್ ಯಾವುದು?
    ಇಲ್ಲಿ ಇನ್ನೊಂದು ವಿಶೇಷವಿದೆ. ಅಧಿಕಾರ ಸಂಬಂಧಗಳಷ್ಟೇ ಭಾಷೆಯೂ ಕೂಡ ಒಂದು ಪವರ್ ಫುಲ್ ವೆಪನ್. ಎಲ್ಲ ಭಾಷೆಗಳ ನಡುವೆಯೂ ಇಂಥ ಏಣಿಶ್ರೇಣಿಗಳಿರುತ್ತವೆ. ಅಧಿಕಾರ ಕೇಂದ್ರಕ್ಕೆ ಹತ್ತಿರವಾಗಿರುವ ಭಾಷೆ ಪ್ರಧಾನ ಸ್ಥಾನದಲ್ಲಿದ್ದರೆ ಉಳಿದ ಭಾಷೆಗಳು ಅಧೀನದಲ್ಲಿರುತ್ತವೆ. ಹೇರಿಕೆಯ ಮೂಲಕ ಒಂದು ಭಾಷೆ ಇನ್ನೊಂದು ಭಾಷೆಯ ಮೇಲೆ ಅಧಿಕಾರ ಸ್ಥಾಪಿಸುತ್ತದೆ. ಭಾಷೆ ಎಂಬುದು ಒಂದು ಜನಸಮುದಾಯವನ್ನು ರೆಪ್ರೇಸೆಂಟ್ ಮಾಡುವುದರಿಂದ ಒಂದು ಸಮುದಾಯ ಇನ್ನೊಂದು ಸಮುದಾಯದ ನಡುವೆ ಚಿಕ್ಕ ಅಂತರವೇರ್ಪಡುತ್ತದೆ. ಇಷ್ಟು ನನ್ನ ವಿಚಾರ ನಿಮ್ಮ ಅಭಿಪ್ರಾಯಗಳಿಗೂ ಸ್ವಾಗತ.
  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

"ದೇಶದ ಏಕತೆಯ" – ಏಕತೆ ಅಲ್ಲ ಅಇಕ್ಯತೆ, ಸಾತ್ವಿಕ್, ಕೆ. ಎಸ್. ನಿಸಾರ್ ಅಹ್ಮದ್ ಕೇಳಿಸಿಕೊಂಡಾರು. ಆಂಗ್ಲ ಭಾಷೆ ಗುಲಾಮಗಿರಿಯ ಸಂಕೆತವಾದರೂ ನಮ್ಮ ದೇಶವನ್ನು ಒಂದಾಗಿ ಹಿಡಿದಿಟ್ಟಿರುವುದು ಆಂಗ್ಲ ಭಾಷೆಯೇ ಎನ್ನಬೇಕು. ಜರ್ಮನ್, ಫ್ರೆಂಚ್, ಸ್ಪಾನಿಶ್ ಕೂಡ ಆಂಗ್ಲ ಭಾಷೆಯ ಮುಂದೆ ಸೋತು ಸೊರಗಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ದುಲ್ ಅವರೇ, >>>>ಜರ್ಮನ್, ಫ್ರೆಂಚ್, ಸ್ಪಾನಿಶ್ ಕೂಡ ಆಂಗ್ಲ ಭಾಷೆಯ ಮುಂದೆ ಸೋತು ಸೊರಗಿವೆ.>> ಮುಂದೆ ಭಾರತೀಯ ಭಾಷೆಗಳಿಗೂ ಇಂಥದ್ದೇ 'ಅವಸ್ಥೆ' ಬರಬಹುದು. ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೂ ಬರಬಹುದು ಅನ್ನೋ ನಿರೀಕ್ಷೆಯೋ, ಸಾತ್ವಿಕ್? ಬಂದಾಗಿದೆ ಮಾರಾಯ್ರೇ. ಪ್ಲೀಸ್, ಥ್ಯಾಂಕ್ಯೂ, ಇವುಗಳ ಕನ್ನಡ ಬಳಕೆ ಕೇಳಿದ್ದೀರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ದುಲ್, ನೀವು ಹೇಳ್ತಾ ಇರೋದು ಭಾಷಾ ಸ್ವೀಕರಣವನ್ನು ಕುರಿತು. ಇದು ಭಾಷೆಯೊಂದು ಬೆಳೆಯೋದಕ್ಕೆ ಅವಶ್ಯಕ. ಯಾವ ಭಾಷೆಯೂ ಇದಕ್ಕೆ ಹೊರತಲ್ಲ. ನಾನು ಹೇಳಿದ್ದು ಅಧಿಕಾರ ಪ್ರಯೋಗ ಮಾಡಿ ಹೇರ ಬಯಸುವ ಸಂಗತಿಗಳನ್ನು. ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್, ಮಾತ್ರ್ರಭಾಷೆ ಸಹಜ ಕಲಿಕೆ ಹಿಂದಿ ರಾಷ್ಟ್ರ ಭಾಷೆ ಅಲ್ಲದಿದ್ದರೂ ಎಲ್ಲ ಕಡೆ ಉಪಯೋಗಿಸುತ್ತಿರುವುದರಿಂದ ಕಲಿಯುವುದು ಒಳ್ಳೆಯದು ಹಾಗಂತ ಹೇರಿಕೆ ಒಳ್ಳೆಯದಲ್ಲ ಇಂಗ್ಲಿಷ್ ಇದು ಎಲ್ಲ ಕಡೆ ಅವಶ್ಯಕ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು, ಹಾಗೆ ಯಾವುದೇ ಭಾಷೆಗಳನ್ನು ಕಲಿಯಬಹುದು, ನಾವು ಇಷ್ಟ ಪಟ್ಟು. ಆದರೆ ನೀವು ಕಲಿಯಲೇ ಬೇಕು ಅಂದ್ರೆ. ನೀವು ಓದುವಾಗ ಯಾವೊಬ್ಬ ಹಿಂದಿ ಭಾಷಿಕನು ಕನ್ನಡ ಕಲಿತ ಉದಾಹರಣೆಗಳಿವೆಯೇ? ಅದಲ್ಲದೇ ದೇಸಿ ಭಾಷೆಗಳ ಬಗ್ಗೆ ವಿಚಿತ್ರ ತಾತ್ಸಾರ ಕೂಡ ಇರುತ್ತೆ. ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಷೆಯ ಅಗತ್ಯ ಇರುವುದು ವ್ಯಕ್ತಿಗೆ. ಭಾಷೆ ವ್ಯಕ್ತಿಯ ಮೇಲೆ ಹೇರಿಕೆ ಆಗಬಾರದು. ಅಗತ್ಯತೆಯ ಮೇಲೆಗೆ ಎಷ್ಟಾದರೂ ಭಾಷೆಗಳನ್ನು ಕಲಿಯಲಿ. ಅದು ವೈಯಕ್ತಿಕ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಅಭಿಪ್ರಾಯ ಕೂಡ ಅದೇ ಸರ್...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್, ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಬಲವ೦ತದ ಭಾಷಾ ಕಲಿಕೆ/ಹೇರಿಕೆ ಸಲ್ಲದು. ವ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಪ್ರಕಾರ ನಮಗೆ ಕಲಿಕೆಯಲ್ಲಿ ಮತ್ತು ಬಳಕೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಗಳು ಸಾಕು. ಇಷ್ಟವಿದ್ದವರು ಹಿಂದಿ ಆಗಲೀ ಇನ್ಯಾವುದೇ ನುಡಿಯನ್ನಾಗಲೀ ವೈಯಕ್ತಿಕವಾಗಿ ಕಲಿತುಕೊಳ್ಳಬಹುದು. ಆದರೆ ಶಿಕ್ಷಣದಲ್ಲಿ ಹಿಂದಿ ಎಂಬುದು ಹಿಂದಿಯೇತರ ರಾಜ್ಯಗಳ ಜನರಿಗೆ ಒಂದು ಹೊರೆ. ಅದರ ಅಗತ್ಯವಿಲ್ಲ. ಹಿಂದಿಗೂ ದೇಶದ ಐಕ್ಯತೆಗೂ ಸಂಬಂಧವಿಲ್ಲ. ಅದು ಹಿಂದಿ ಹೇರಿಕೆಯ ಹುನ್ನಾರವಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಕಾಸ್, >>>ಹಿಂದಿಗೂ ದೇಶದ ಐಕ್ಯತೆಗೂ ಸಂಬಂಧವಿಲ್ಲ. ಅದು ಹಿಂದಿ ಹೇರಿಕೆಯ ಹುನ್ನಾರವಷ್ಟೆ.>>> ಆದ್ರೆ ಪರಿಸ್ಥಿತಿ ಹಾಗಿಲ್ಲ. ವ್ಯವಸ್ಥಿತವಾಗಿ ಹೇರಿಕೆ ನಡೆಯುತ್ತಿದೆ. ಹೀಗೆ ಆಕ್ಸಿಜನ್ ಕೊಟ್ಟು ಎಷ್ಟು ದಿವಸ ಭಾಷೆಯನ್ನು ಬದುಕಿಸಲು ಸಾಧ್ಯ. ಅದಕ್ಕೆ ಸ್ವ ಸಾಮರ್ಥ್ಯ ಇದ್ರೆ ಮಾತ್ರ ಬೆಳೆಯುತ್ತೆ ಅಷ್ಟೇ. ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಹೀಗೆ ಆಕ್ಸಿಜನ್ ಕೊಟ್ಟು ಎಷ್ಟು ದಿವಸ ಭಾಷೆಯನ್ನು ಬದುಕಿಸಲು ಸಾಧ್ಯ>> ಯಾವ ಭಾಷೆಯನ್ನು ಬದುಕಿಸುವ ಬಗ್ಗೆ ಹೇಳುತ್ತಿದ್ದೀರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವುದೇ ಭಾಷೆಯನ್ನು ಇನ್ನೊಬ್ಬರ ಮೇಲೆ ಅದನ್ನು ಬದುಕಿಸುವ ಪ್ರಯತ್ನದ ಬಗ್ಗೆ ಹೇಳ್ತಾ ಇದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್, ನಿಮ್ಮ ಲೇಖನಕ್ಕೆ ನನ್ನ ಸಹಮತವಿದೆ. ಇನ್ನೊಂದು ವಿಷಯವೇನೆಂದರೆ, ಶಾಲೆಗಳಲ್ಲಿ ಮಕ್ಕಳಿಗೆ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬುದು ಹೇಳುವುದಲ್ಲದೆ, ಅದೇ ಸರಿ ಎಂದು ಮನದಟ್ಟುಮಾಡಿಬಿಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ??? ಕಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಪ್ರಕಾರ ಹಿಂದಿ ಎಂಬ ಭಾಷೆ ತನ್ನ ಸ್ವರೂಪವನ್ನು ಕಳೆದುಕೊಂಡು ಬಹು ವರ್ಷಗಳೇ ಕಳೆದಿವೆ. ಸ್ಪಷ್ಟವಾಗಿ ಗಮನಿಸಿ ನೋಡಿ.. ಪ್ರತಿಶತ ತೊಂಭತ್ತಕ್ಕಿಂತ ಅಧಿಕ ಉರ್ದುವಿನ ಶಬ್ದಗಳು ಹಿಂದಿಯ ಆಡು ಉಲಿಕೆಯಲ್ಲಿ ಸೇರಿ ಹೋಗಿವೆ. ಅಕಸ್ಮಾತ್ ಯಾರಾದರೂ ಅಪ್ಪಟ ಹಿಂದಿ ಶಬ್ದಗಳ ಪದ ಪ್ರಯೋಗ ಮಾಡಿದಲ್ಲಿ ಅವನನ್ನು ಯಾವುದೋ ಅನ್ಯ ಗ್ರಹ ಜೀವಿಯೆಂದು ಭಾವಿಸುವ ದಿನಗಳಿವು. ಮಹಾಭಾರತ ಧಾರಾವಾಹಿಯ ಬಹುಪಾಲು ಸಂಭಾಷಣೆಯಲ್ಲಿ ಉರ್ದುವಿನ ಪದಗಳೇನಕವಿವೆ. ಇತ್ತ ಬರವಣಿಗೆಯೂ ದೇವನಾಗರಿ ಲಿಪಿಯಿಂದ ತೆಗೆದುಕೊಂಡದ್ದು. ಹಾಗಾಗಿ ನನ್ನ ಪ್ರಕಾರ ’ಹಿಂದಿ’ ಭಾಷೆಯೆನ್ನುವುದು ಅಸ್ತಿತ್ವ ಕಳೆದುಕೊಂಡು, ಸಂಸ್ಕೃತದ ಹಾದಿಯನ್ನು ಹಿಡಿದು ಅದೆಷ್ಟೋ ದಿನಗಳಾಯ್ತು. ಆದ್ದರಿಂದ ಯಾರು ಎಷ್ಟು ಹೇರಿಕೆ ಮಾಡಿದರೂ ಸರಿಯೇ... ಅಗತ್ಯವಿದ್ದರೆ ಕಲಿಯಿರಿ ಇಲ್ಲಾ ನಿಮಗೆ ಬಿಟ್ಟದ್ದು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶೇಕಡಾ ತೊಂಭತ್ತಿಲ್ಲ. ಬಹುತೇಕ ಪದಗಳಿವೆ ಉರ್ದು-ಪರ್ಷಿಯನ್ ಮೂಲದ್ದು, ಇವೇ ಹಿಂದಿಗೆ ಮಾಧುರ್ಯವನ್ನೂ ಸಹ ತಂದು ಕೊಟ್ಟಿರುವುದು. ಹೌದು, ಅಡ್ವಾಣಿ, ಸುಷ್ಮಾ ರಂಥವರು ಕಷ್ಟ ಬಿದ್ದು ಶುದ್ಧ ಹಿಂದಿಯಲ್ಲಿ ಮಾತನಾಡಲು ಯತ್ನಿಸಿದಾಗ ಅದೊಂಥರಾ ಅಪರಿಚಿತ "ಬ್ರಾಹೂಯಿ" ಭಾಷೆ ಥರ ಕಾಣುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಬಹುತೇಕ ಪದಗಳಿವೆ ಉರ್ದು-ಪರ್ಷಿಯನ್ ಮೂಲದ್ದು, ಇವೇ ಹಿಂದಿಗೆ ಮಾಧುರ್ಯವನ್ನೂ ಸಹ ತಂದು ಕೊಟ್ಟಿರುವುದು<< ಹೌದೌದು.. "ಬೆರಕೆ ಸೊಪ್ಪಿನ ಸಾರ್ ಚೆಂದ.. ಬೆರಕೆ ಮಗು ಇನ್ನೂ ಚೆಂದ" ಅಂತ ನಮ್ ಹಳ್ಳಿ ಕಡೆ ಒಂದು ಗಾದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಂದಿ ಶುದ್ಧವೋ ಅಶುದ್ಧವೋ ಬೆರಕೆನೋ, ವಿಷಯ ಅದಲ್ಲ ಇಲ್ಲಿ. ಹೇಗಿದ್ದರೂ ನಮಗೆ ಹೇರಿಕೆ ಬೇಡ ಅಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾತೃಭಾಷೆ ಬಿಟ್ಟು ಯಾವುದೇ ಭಾಷೆಯ ಹೇರಿಕೆ ಬೇಡ ಅಂತ ನನ್ನ ಅನಿಸಿಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಯಾವ ಹಿಂದಿಯಾಡುವ ರಾಜ್ಯ, ಇತರೆ ಭಾರತೀಯ ಭಾಷೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುತ್ತಿದೆ?>> ನಾನು ಈ ಹಿಂದೆ ಕೇರಳ ಪ್ರವಾಸಕ್ಕೆ ಹೋಗಿದ್ದಾಗ ಕೊಚ್ಚಿನ್-ನಲ್ಲಿ ಎರಡು ದಿನ ತಂಗುವ ಅವಕಾಶವಿತ್ತು. ಒಂದು ರಾತ್ರಿ ಭೋಜನದ ನಂತರ ಅಲ್ಲಿನ ನೇವಲ್ ಬೇಸ್ ಬಳಿಯ ಜಂಕ್ಷನ್-ಒಂದರಲ್ಲಿ ಬೀಡಾ ಪಡೆಯಲು ಹೋಗಿದ್ದೆ. ಯಥಾ ಪ್ರಕಾರಾ ಬೀಡಾವಾಲ ಉತ್ತರ ಪರ್ದೇಸ್-ನವನಾಗಿದ್ದ. ಹೀಗೆ ಮಾತಾಡುತ್ತಾ ನೀವು ಎಲ್ಲಿಯವರು ಎಂದು ಕೇಳಿದೆ. ನಾನು ಕರ್ಣಾಟಕದವನು ಎಂದು ಹೇಳಿದೆ. "ತೋ ಆಪ್ ಕರ್ನಾಟಕೀ ಭಾಸಾ ಬೋಲ್ತೇ ಹೋಂಗೆ" ಅಂದ.. ನೋಡಿ ಇವರಿಗೆ ತಮ್ಮ ದೇಶ ಭಾಷೆಗಳ ಮೇಲೆ ಇರುವ ಜ್ಞಾನ.. ಇವರಿಗೆ ಯಾವ ರಾಜ್ಯದಲ್ಲಿ ಯಾವುದು ಪ್ರಮುಖ ಭಾಷೆಯೆಂಬುದೂ ಗೊತ್ತಿಲ್ಲ. ಈ ಲೇಖನದ ಕುರಿತಾಗಿ ಇನ್ನೊಂದು ಪ್ರಕರಣ ನೆನಪಾಗುತ್ತಿದೆ. ಇದನ್ನು ಬಹುಶಃ ಯಾವುದೋ ಇಂಗ್ಲಿ್ಷ್ ವಾರಪತ್ರಿಕೆಯೊಂದರಲ್ಲಿ ಓದಿದ್ದು. ಒಮ್ಮೆ ಹಿಂದಿ ಕಟ್ಟರ್-ವಾದಿಯಾದ ಮುಲಾಯಂ ಸಿಂಗ್ ಯಾದವ್, ಯು.ಪಿ. ಮುಖ್ಯಮಂತ್ರಿಯಾಗಿದ್ದಾಗ ಯಾವುದೋ ವಿಷಯದ ಬಗ್ಗೆ ಕೇರಳದ ಮುಖ್ಯಮಂತ್ರಿಯಾಗಿದ್ದ ಇ.ಕೆ.ನಾಯನಾರ್-ರಿಗೆ ಅಚ್ಚ ಹಿಂದಿಯಲ್ಲಿ ಪತ್ರ ಬರೆಯುವ ಧಾರ್ಷ್ಟ್ಯ ತೋರಿದರಂತೆ. ಇದಕ್ಕೆ ಪ್ರತಿಯಾಗಿ ನಾಯನಾರ್-ರು ತಮ್ಮ ತ್ರಿಶೂರ್ ಮಲೆಯಾಳಂ-ನಲ್ಲಿ ಪ್ರತ್ಯುತ್ತರ ಪತ್ರ ಬರೆದರಂತೆ. ವಿವಿರಕ್ಕೆ ಈ ಲಿಂಕ್ ನೋಡಿ (http://www.thehindu....) ಹಿಂದಿ ಹೇರಿಕೆಯ ಇನ್ನೊಂದು ಪ್ರಮುಖ ಸಾಧನ ಹಿಂದಿ ಚಲನಚಿತ್ರಗಳು.ಐಐಎಫ್ಎ ಎಂಬ ಹೆಸರಿನಲ್ಲಿ ನೀಡುವ "ಭಾರತೀಯ ಚಲನಚಿತ್ರ ಪ್ರಶಸ್ತಿ" ಎಂಬ ಪ್ರಶಸ್ತಿಯು ಕೇವಲ ಹಿಂದಿ ಭಾಷೆಯ ಚಿತ್ರಗಳಿಗೆ ಮಾತ್ರ ಸೀಮಿತ. ಈ ಬಗ್ಗೆಯೂ ನನಗೆ ಗೊತ್ತಿರುವಂತೆ ಪ್ರತಿಭಟಿಸಿದ್ದು ಕೇವಲ ಮಲೆಯಾಳಂ ನಟರಾದ ಮಮ್ಮೂಟ್ಟಿ ಮಾತ್ರ.. ಈ ಬಾಲಿವುಡ್ ಎಂಬ ಮೂರ್ಖರ ಸಂತೆಯಲ್ಲಿ ತಯಾರಾಗುವ ಚಿತ್ರಗಳನ್ನು ನೋಡುವ ಮೂರ್ಖತನ ನಮ್ಮಲ್ಲಿ ನಿಲ್ಲದವರೆಗೆ ಹಿಂದಿ ಹೇರಿಕೆಯ ಪ್ರಮುಖ ಮಾರ್ಗವೊಂದನ್ನು ನಾವು ನಮಗೆ ಗೊತ್ತಿಲ್ಲದಂತೆಯೇ ಪ್ರೋತ್ಸಾಹಿಸುತ್ತಿರುತ್ತೇವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.