ನಾನು ಸುಳ್ಳೇ ಹೇಳಿಲ್ಲ ಗೊತ್ತಾ?

5

ನಮ್ಮಲ್ಲಿ ಯಾರಿಗೆ ಅದ್ಭುತ ಸುಳ್ಳನ್ನು ಹೇಳೋಕೆ ಬರುತ್ತೆ ಅಂತ ನೋಡೋಣ. ಎಲ್ಲರೂ ಒಬ್ಬರನ್ನು ಮೀರಿಸೋ ಹಾಗೆ ಇನ್ನೊಬ್ಬರು ಸುಳ್ಳು ಹೇಳಬೇಕು. ಸುಳ್ಳೂ ಹೇಳೋದು ಒಂದು ಕ್ರಿಯೇಟಿವಿಟಿ ನೆನಪಿರಲಿ. ಆದರೆ ಆ ಸುಳ್ಳುಗಳು ಯಾವ ವ್ಯಕ್ತಿಯನ್ನು ನೋಯಿಸದೇ ಇದ್ರೆ ಚೆನ್ನ. ಕಮಾನ್ ಸಾರ್ಟ್.... :)‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಂಟು : ನಮ್ಮಪ್ಪ ಕಾವೇರಿ ನದೀಲಿ ಮುಳುಗಿ ಕೃಷ್ಣಾ ನದಿಯಲ್ಲಿ ಏಳುತ್ತಾರೆ ಗೊತ್ತಾ? ಪಿಂಟು: ಅದೇನು ಮಹಾ? ನಮ್ಮಪ್ಪ ಅರಬ್ಬೀ ಸಮುದ್ರದಲ್ಲಿ ಮುಳುಗಿ ಹಿಂದೂ ಮಹಾಸಾಗರದಲ್ಲಿ ಏಳುತ್ತಾರೆ.. ಎಗೆನಂತಿಯಾ? ತಿಮ್ಮ : ಇದೇನು ಮಹಾ ಬಿಡ್ರೋ .... ನಮ್ಮಪ್ಪ ಕಾರ್ಪೋರೇಶನ್ ಟ್ಯಾಂಕ್ ಅಲ್ಲಿ ಮುಳುಗಿದರೆ.. ಎಲ್ಲರ ಮನೆ ನಲ್ಲಿಯಲ್ಲೂ ಬರ್ತಾರೆ....

ನಾನು ಇದನ್ನು ಕೀಬೊರ್ಡ್ ಇಲ್ಲದೇ ಟೈಪ್ ಮಾಡಿದೆ. ಯೂಪಿಎಸ್ ಆಫ್ ಆಗಿತ್ತು. ಮಾನಿಟರ್ ವರ್ಕ್ ಮಾಡ್ತಾ ಇರಲಿಲ್ಲ. ಇದು ನನ್ನದೇ ಐಡಿಯಾ. ನನ್ನ ಈ ಚರ್ಚೆಪುಟ ನೋಡಿ ರಾಜೇಶ್ವರಿಯವರು ಖುಷಿ ಪಟ್ಟು ಇನ್ನಷ್ಟು ಬರೆಯಲು ಹೇಳಿದರು :)

ಸುಜಾತ ಅವ್ರು ಪ್ರತಿಕ್ರಿಯೆಯನ್ನ ಕನ್ನಡದಲ್ಲಿ ಬರೆದಿದ್ದು ನೋಡಿ ತುಂಬಾ ಖುಷಿ ಆಯ್ತು ;) ಅವ್ರು ಇನ್ಮೇಲೆ ಇಂಗ್ಲಿಷ್ ಅಲ್ಲಿ ಬರ್ಯೋಕೆ ಇದನ್ನ ಬಳಸ ಬಹುದು http://google.com/tr...

ಸುಳ್ಳು ಅನ್ಕೊಂಡ್ರೆ ಸುಳ್ಳು, ನಿಜ ಅನ್ಕೊಂಡ್ರೆ ನಿಜ, ಸುಳ್ಳಾದ್ರೂ ಇದು ನಿಜ, ನಿಜವಾಗಲೂ ಇದು ಸುಳ್ಳಾ ? ಮೊನ್ನೆ ಬೆಳಗ್ಗೆ ಜಗತ್ತಿನ ಮುಕ್ಕೋಟಿ ದೇವರುಗಳು ಸಹ ನನ್ನ ದರ್ಶನಕ್ಕಾಗಿ ಮನೆ ಮುಂದೆ ಕಾದು ಕುಳಿತಿದ್ದರು.ಎಲ್ಲರೂ ನನ್ನ ಆಶೀರ್ವಾದ ಪಡೆದು ಧನ್ಯರಾದರು . :) :) ಅರವಿಂದ್

ಕಳೆದ ವರುಷ ಅದಮಾರು ಮಠದ ಹೆಣ್ಣಾನೆಯನ್ನು ಮದುವೆಯಾಗಿದ್ದ ಕೃಷ್ಣಾಪುರ ಮಠದ ಇರುವೆ ಈಗ ಅಪ್ಪನಾಗುತ್ತಿರುವ ಸಂತಸದಲ್ಲಿ ಬೀಗುತ್ತಿದ್ದಾನೆ ಅಂತ ಸುದ್ದಿ ಇದೆ.

ನಾವಡರೆ, ನಾಡಿಗ್ರು ಉತ್ತರ ಕರ್ನಾಟಕಕ್ಕೆ "ನಮ್ಮೂರು"ಪತ್ರಿಕೆ ಶುರು ಮಾಡಿದ್ರೆ, ರಾಜಿ ಬೆಂಗ್ಳೂರಿಗೆ "ಯಾವೂರು" ಅಂತ ಪತ್ರಿಕೆ ಬಿಡುಗಡೆ ಮಾಡ್ತಿದಾರಂತೆ !!! ಇಬ್ರಿಗೂ ಸಕ್ಕತ್ ಪೈಪೋಟಿ ನಡ್ದಿದೆಯಂತೆ ಕಣ್ರೀ !! -ಚೈತನ್ಯ