ಹೌದಾದರೆ ಹೌದೆನ್ನಿ...

5

ಬೆಂಗಳೂರು ಅಂದ್ರೆ ನನಗೆ ಮೊದಲಿಂದಲೂ ಅಚ್ಚರಿ. ಚಿಕ್ಕವನಿರುವಾಗ  ಇಲ್ಲಿನ ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿಯೇ ಎದೆಯಲ್ಲಿ ಅವಲಕ್ಕಿ ಕಟ್ಟಿದ ಅನುಭವ. ಮೆಜೆಸ್ಟಿಕ್ ನಲ್ಲಿ ಬಸ್ಸಿನಿಂದ ಇಳಿದ ತಕ್ಷಣವೇ ಅಪ್ಪ ಅಮ್ಮನ ಕೈಯನ್ನು ಗಟ್ಟಿಯಾಗಿ  ಹಿಡಿದುಕೊಂಡು ಇರುತ್ತಿದ್ದೆ.  ಘಳಿಗೆ ಘಳಿಗೆಗೆ  ಬುರ್ರೆಂದು ಬರುವ ಬಸ್ಸುಗಳು, ಮಹಡಿ ಬಸ್ಸು, ನೂರಾರು ಜನಗಳು, .. ಅಬ್ಬ ಒಂದೇ ಎರಡೇ. ಎಷ್ಟೊಂದು ಜನ ಇಲ್ಲಿ ಯಾರು ನಮ್ಮೋರು ಅನ್ನುವ ಭಾವ. ಬರುವ ನೂರಾರು ಬಸ್ಸುಗಳ ಮೇಲೆ ನಂಬರ್ ಇರುತ್ತಾ ಇದ್ದುದ್ದು ನನಗೆ ವಿಚಿತ್ರವೆನಿಸುತ್ತಿತ್ತು. ಅಪ್ಪ  ಬಸ್ಸಿನಲ್ಲಿ ನಮ್ಮನ್ನು ದೊಡ್ಡಪ್ಪನ ಮನೆಗೆ ಸರಿಯಾಗಿ ಕರೆದುಕೊಂಡು ಹೋಗುವ ರೀತಿ ಸೋಜಿಗ ಅನ್ನಿಸುತ್ತಿತ್ತು.  ಆವಾಗ ಆವಾಗ ನಾನು ಕಳೆದು ಹೋಗುತ್ತೇನೆಂಬ ಭಯ ಕಾಡುತ್ತಿತ್ತು. ಯಾವಾಗಲೂ ಏನೋನೋ ತರೆಹೆವಾರಿ ಕಥೆ ಹೇಳಿ ನನ್ನ ಗೆಳೆಯರು ನನ್ನನ್ನು ಇಷ್ಟು ಹೆದರಿಸಿ ಇಟ್ಟಿದ್ದರು.


     ಅಲ್ಲದೇ ಇಲ್ಲಿ ನಮ್ಮ ಬೆಂಗಳೂರು ದೊಡ್ಡಪ್ಪನ ಮನೆ ಇದೆ. ನನ್ನ ದೊಡ್ಡಪ್ಪಂದಿರು ಬೇರೆ ಬೇರೆ ಊರುಗಳಲ್ಲಿ ಇರುವುದರಿಂದ ಅದೇ ಊರಿನ ಹೆಸರಿನಿಂದ ದೊಡ್ಡಪ್ಪನನ್ನು ಗುರುತಿಸುವುದು ರೂಢಿ. ದೊಡ್ಡಪ್ಪನೆಂದರೆ ಎಲ್ಲಿಲ್ಲದ ಭಯ. ಅವರ ಮನೆಯಲ್ಲಿ ಮಗ್ಗಿ ಹೇಳಿಸುತ್ತಾರೆಂಬ ಭಯ ಇನ್ನೊಂದು ಕಡೆ.  ಹೀಗಾಗಿ ಬೆಂಗಳೂರೆಂದರೆ ಅಷ್ಟಕಷ್ಟೇ. ಚಿಕ್ಕಂದಿನ ಅನುಭವಗಳೂ ಬಹಳ ಬೇಗ ಬದಲಾಗುವುದಿಲ್ಲ.

    ನಾನು ಮಾಸ್ಟರ್ ಡಿಗ್ರಿಯಲ್ಲಿ ಇರುವಾಗಲೂ ಉದಾಸೀನ ಭಾವನೆ ಇತ್ತು. ಆದರೆ ಮಂಗಳೂರಲ್ಲಿದ್ದು ಯಾವಾಗ ಪೇಟೆಯ ಅನುಕೂಲಗಳು ತಿಳಿಯಲು ಆರಂಭಿಸಿತೋ ಆಗ ಬೆಂಗಳೂರು ಕೂಡ ಅಂದದೂರು ಬೆಂಗಳೂರು ಅಂತ ಅನ್ನಿಸತೊಡಗಿತು. ನನ್ನ ತಮ್ಮ ನ್ಯೂಸ್ ಚಾನೆಲ್ ಒಂದರಲ್ಲಿ ಕೆಲಸ ಮಾಡುವಾಗ ಒಮ್ಮೆ ಬೆಂಗಳೂರಿಗೆ ಬರಬೇಕಾಯಿತು. ನೋಡಿದ್ರೆ ಬೆಂಗಳೂರು ಏನೋ ಒಂಥರಾ ಚೆನ್ನಾಗಿದೆ ಅನ್ನಿಸಿತು. ಈಂಗತೂ ಸ್ನೇಹಿತರ ಜೊತೆಯಲ್ಲಿ ಬೆಂಗಳೂರು ಸುತ್ತುವುದೆಂದರೆ ಖುಷಿಯಾಗುತ್ತೆ, ಆದ್ರೆ ಧೂಳು, ಹೊಗೆ ನೋಡುವಾಗ ಬೇಡ ಅನ್ನಿಸಿಬಿಡುತ್ತೆ.


    ನನಗೆ ಕೆಲವು ಸಲ ಅನ್ನಿಸೋದು ಬೆಂಗಳೂರು ಇವತ್ತಿಗೂ ಹಳ್ಳಿತನ ಕಳಕೊಂಡಿಲ್ಲವೇನೋ ಅಂತ. ಎಲ್ಲಿ ನೋಡಿದ್ರು ದೇವಾಲಯಗಳು ಮುಖ್ಯವಾಗಿ ಗ್ರಾಮ್ಯ ದೇವತೆಗಳು, ಹೊರಗೆ ನಿಂತು ಊಟ ಮಾಡೋ ಜನ, ಮನೆ ಮುಂದೆ ರಂಗೋಲಿ ಎಲ್ಲವೂ ಹಳ್ಳಿ ಬದುಕನ್ನೇ ನೆನಪಿಸುತ್ತವೆ. ಒಂದು ಕಡೆ ಆಧುನಿಕತೆಯ ಮಹಾಸ್ಪರ್ಷ ಇದ್ರೆ ಇನ್ನೊಂದು ಕಡೆ ಹಳ್ಳಿಗರ ತಾಜಾತನ ಇದೆ.
 ಜನ ಹೈಟೆಕ್ ಆದ್ರೂ ಮನ ಹಳ್ಳಿದೂ ಏನಂತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನು ಹುಟ್ಟಿದಾಗಿನಿಂದ ಬೆಂಗಳೂರಲ್ಲೇ ಇದ್ರೂ ಅಪ್ಪ ಅಮ್ಮ ಇಬ್ರೂ ಹಳ್ಳಿಯವರ‍ೇ. ರಜೆಯಲ್ಲಿ ಊರಿಗೆ ಹೋಗೋದು ಮಾಮೂಲು. ಹಾಗಾಗಿ ಅವರು ನಮಗೆ ಎರಡೂ ರೀತಿಯ ಪರಿಸರಕ್ಕೆ ಹೊಂದಿಕೊಳ್ಳುವ ಹಾಗೆ ಬೆಳೆಸಿದ್ದಾರೆ. ನನ್ನ ಎಷ್ಟೋ ಜನ ಸ್ನೇಹಿತರ ವಿಷಯದಲ್ಲೂ ಇದು ನಿಜ. ಇನ್ನೂ ರಂಗೋಲಿ ದೇವಸ್ಥಾನ ಇವುಗಳ ಬಗ್ಗೆ ಹೇಳಬೇಕಂದ್ರೆ.... ನಮ್ಮ ವರ್ತನೆ ಮೇಲೆ ನಮ್ಮ ಪೋಷಕರ ಪ್ರಭಾವವಿರುವುದು ನಿಜ ತಾನೇ... ಅವರ ಆಚರಣೆಯನ್ನು ನಾವು ಪಾಲಿಸ್ತಾ ಇದ್ದೀವಿ ಅಷ್ಟೇ... ಬೆಂಗಳೂರು ಎಲ್ಲಾ ರೀತಿಯ ಜನರಿಂದ ತುಂಬಿದೆ.ಬೆಂಗಳೂರಲ್ಲಿ ನಿಮಗೆ ಹಳ್ಳಿಯ ತಾಜಾತನ ಕಂಡಿರೋದು ಇಲ್ಲಿನ ಹಳ್ಳಿಯ ಹಿನ್ನೆಲೆಯಿರುವ ಜನರಿಂದ.... ಹೈಟೆಕ್ ಜನರಿಗೂ ಇಲ್ಲಿ ಕೊರತೆಯೇನಿಲ್ಲ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇ೦ದೂ, ನಮಸ್ಕಾರ. ಚೆನ್ನಾಗಿದೀರ? ಭಾರೀ ದಿನ ಆಯ್ತು? ದೂರ ಹೋಗಿದ್ರಿ? ಇತ್ತೀಚೆಗೆ ಪಟ್ಟಣ ಮಾತ್ರವಲ್ಲ! ಹಳ್ಳಿಗಳಲ್ಲಿ ಕೂಡ ಬೆಳಿಗ್ಗೆ ಎದ್ದು, ಹೊಸಿಲು ತೊಳೆದು,ರ೦ಗೋಲಿ ಹಾಕುವ ಅಭ್ಯಾಸ ಕಡಿಮೆಯಾಗಿದೆ. ಹೊಸಿಲನ್ನು ತೊಳೆದರೂ,ರ೦ಗೋಲಿ ಹಾಕುವುದು ಈಗೀಗ ಹಬ್ಬ-ಹರಿದಿನಗಳಲ್ಲಿ ಮಾತ್ರವೇ ಅ೦ಥ ಆಗ್ಬಿಟ್ಟಿದೆ. ನಾನು ಸಣ್ಣವನಿದ್ದಾಗ,ನನ್ನ ಅಕ್ಕ೦ದಿರಿಬ್ಬರೂ ಬೆಳಿಗ್ಗೆ ಎದ್ದು, ಮನೆಯ ಮು೦ದೆ ಸಗಣಿ ಹಾಕಿ, ಅ೦ಗಳ ತೊಳೆದು, ಅದರಲ್ಲಿ ರ೦ಗವಲ್ಲಿ ಹಾಕುತ್ತಿದ್ದುದನ್ನು ನೋಡುವುದೇ ಒ೦ದು ಅಬ್ಯಾಸವಾಗಿ ಹೋಗಿತ್ತು. ಅದರಲ್ಲೂ ಬೆಳಗ್ಗಿನ ಹೊತ್ತು, ಆ ಸು೦ದರ ವಾತಾವರಣದಲ್ಲಿ, ಅ೦ಗಳಕ್ಕೆ ಹಾಕಿದ ಸಗಣಿ ನೀರಿನ ಒ೦ದು ರೀತಿಯ ಪರಿಮಳದಲ್ಲಿ ರ೦ಗವಲ್ಲಿ ಹಾಕುವುದನ್ನು ನೋಡುತ್ತಾ ಇರುವುದೇ ಒ೦ದು ಸೊಗಸು. ಏನ೦ತೀರಿ? ಈಗೀಗ ಎಲ್ಲೆಲ್ಲೂ ಅ೦ಗಳಗಳೂ ಸಣ್ಣವು. ಪಟ್ಟಣದಲ್ಲಿ ಸಗಣಿ ಸಿಗುವುದೂ ಕಡಿಮೆ. ಹೀಗಾಗಿ ರ೦ಗವಲ್ಲಿ ಹಾಕುವ ಕ್ರಿಯೆ ಅವಸಾನದತ್ತ ಸಾಗುತ್ತಿದೆ ಎ೦ದು ನನ್ನ ಅಭಿಪ್ರಾಯ.ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ತೆ... ಚೆನ್ನಾಗಿದ್ದೀನಿ.... ದೂರ ಹೋಗಿರಲಿಲ್ಲ....ಪ್ರತಿದಿನ ಸಂಪದ ಓದ್ತಾ ಇದ್ದೆ... ರಂಗವಲ್ಲಿ ಹಾಕೋಕೆ ಈಗಿನವರಿಗೆ ಸಮಯವೆಲ್ಲಿ?? ನಾನು ಎದ್ದ ತಕ್ಷಣ ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲೇ ಇರ್ತೀನಿ...ನಾನು ತಮ್ಮ ಇಬ್ರೂ ೭:೫೦ಕ್ಕೆಲ್ಲಾ ಮನೆ ಬಿಡಬೇಕು.... ಅಮ್ಮ ನನಗೆ ಮತ್ತೆ ತಮ್ಮನಿಗೆ ತಿಂಡಿ ಮಧ್ಯಾಹ್ನ ಊಟಕ್ಕೆ ಡಬ್ಬಿ ತಯಾರಿ ಮಾಡೋದರಲ್ಲೇ ಇರ್ತಾರೆ... ಹಾಗಾಗಿ ಮನೆ ಮುಂದೆ oil paint ರಂಗೋಲಿ ಜಾಗ ಪಡೆದಿದೆ... ಆದರೆ ಹಬ್ಬಗಳಲ್ಲಿ ತಪ್ಪದೇ ನಾನೇ ರಂಗೋಲಿ ಹಾಕ್ತೀನಿ ಅದೂ ಹಿಂದಿನ ದಿನ ರಾತ್ರಿ.... ನಮ್ಮೂರಲ್ಲೂ ಸಗಣಿ ಹಾಕಿ ರಂಗೋಲಿ ಇಡೋದು ಸೋಮವಾರ ಮತ್ತೆ ಶುಕ್ರವಾರವಷ್ಟೇ... ಬೇರೆ ದಿನ ಅಂಗಳ ಗುಡಿಸಿ ಮನೆ ಮುಂದೆ ಪುಟ್ಟ ರಂಗೋಲಿ ಹಾಕ್ತಾರೆ ಅಷ್ಟೇ.... ಎಲ್ಲಾ ನಮ್ಮನುಕೂಲಕ್ಕೆ ತಕ್ಕಂತೆ ನಾವು ಮಾಡಿಕೊಂಡಿರುವ ಬದಲಾವಣೆಗಳು....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಇಂದುಶ್ರೀ, ಹಳೆ ಬೆಂಗಳೂರು ಇನ್ನೂ ಉಳಿದಿದೆ. ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು! :) ಬೆಂಗಳೂರಿಗೆ ಬಂದು ಕೆಲ್ಸ ಹುಡುಕುತಿದ್ದ ಹೊಸತರಲ್ಲಿ ನಂಗೂ 'ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮವರು' ಅನ್ನಿಸ್ತ ಇತ್ತು.ಬೆಂಗಳೂರಲ್ಲಿ ನಾ ಇಂದಿಗೂ ನೋಡೋದು ಇಲ್ಲಿ ರಾತ್ರಿ ಮಲಗೋ ಸಮಯಕ್ಕೆ ರಂಗೋಲಿ ಬಿಟ್ಟು ಮಲಗಿಬಿಡ್ತಾರೆ, ಬೆಳಿಗ್ಗೆ ಸಮಯ ಸಿಗುವುದಿಲ್ಲ ಅಂತ ಇರ್ಬೇಕು. ಇಲ್ಲಿ ಗಣೇಶ,ರಾಮ ನವಮಿ ಹಬ್ಬಗಳಲ್ಲಿರ್ರೋ ಸಡಗರ ನಮ್ಮ್ ಹಾಸನದಲ್ಲೂ ಅಷ್ಟಾಗಿ ಈಗ ಕಾಣ ಸಿಗದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಹಾಸನದ ಕಥೆ ಬಿಡಿ ರಾಕೇಸಣ್ಣ. ಅದು ಅದ್ರೆ ಅಕ್ಕಪಕ್ಕದ ಗ್ರಾಮಾಂತರ ಪ್ರದೇಶದಲ್ಲಿ ಭರ್ಜರಿ ಇರುತ್ತೆ ಕನಪ್ಪ :) ಬೇಕಾದ್ರೆ ಒಂದ್ ಸತಿ ನಮ್ ಊರಿಗೆ ಬನ್ರೀ.. :) ಆದ್ರೆ ಮಂಗಳೂರು ನಿಜ ಸಿಟಿನೇ ಕನಪ್ಪ. ಅದನ್ನು ಬರೆಯೋಕೆ ಹೊರಟ್ರೆ ಸಕತ್ ಟೇಮು ಬೇಕು. ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.