ನೋಡುತ್ತ ಕೂರಬೇಕಷ್ಟೆ.. ಬೊಬ್ಬೆ ಹಾಕಿದರೂ ಬದಲಾಗುವುದಿಲ್ಲ.

5

ಶುದ್ಧ ಕನ್ನಡ ಎನ್ನುವ ಪದದಲ್ಲಿಯೇ 'ಶುದ್ಧ' ಅನ್ನುವ ಪದ ಸಂಸ್ಕೃತದ್ದು. ಆದರೂ ಶುದ್ಧ ಎಂಬ ಪದ ಉಪಯೋಗಿಸಿ ಹೇಳುವ 'ಮಾದರಿ ಕನ್ನಡ' ದ (ಮೊಡೆಲ್ ಲಾಂಗ್ವೇಜ್)  ಅಗತ್ಯವೂ ಖಂಡಿತಾ ಇದೆ. ಯಾವುದೇ ಭಾಷೆಯು ಪ್ರತಿ ಹತ್ತು ಕಿಲೋ ಮೀಟರ್ ಅಂತರದಲ್ಲಿ ತುಸು ವ್ಯತ್ಯಾಸವಾಗುತ್ತಾ ಹೋಗುತ್ತದೆ ಎಂಬುದು ಭಾಷಾ ವಿಜ್ಞಾನಿಗಳ ಅಂಬೋಣ. ಈ ರೀತಿಯ ಒಂದೇ ಭಾಷೆಯ ಬಳಕೆಯಲ್ಲಿರುವ ಭಿನ್ನತೆಯನ್ನು ಉಪಭಾಷೆ ಎಂದು ಕರೆಯಲಾಗುತ್ತದೆ. ಅದರಲ್ಲೂ ಲಿಪಿ ರಹಿತ ಭಾಷೆಯಾದರೆ ಈ ಪ್ರಕ್ರಿಯೆಯ ಇನ್ನು ಬಿರುಸಾಗಿ ನಡೆಯುತ್ತಿರುತ್ತದೆ. ತುಳು ಭಾಷೆ  ಇದಕ್ಕೊಂದು ನಿದರ್ಶನ.  ಹೀಗಿರುವಾಗ  ವಿಶಾಲ ಕರ್ನಾಟಕ ವ್ಯಾಪ್ತಿಯಲ್ಲಿ ಅದೆಷ್ಟು ಕನ್ನಡಗಳಿರಬಹುದು?!


ಕನ್ನಡ 'ಪ್ರಮುಖ'ವಾಗಿ ನಾಲ್ಕು ಉಪಭಾಷೆಗಳಿವೆ. ಹಳೆ ಮೈಸೂರು ಕನ್ನಡ, ಮಂಗಳೂರು ಕನ್ನಡ, ಧಾರವಾಡ ಕನ್ನಡ, ಕಲ್ಬುರ್ಗಿ ಕನ್ನಡ. ಇವು ಪ್ರಾಂತೀಯ ಉಪಭಾಷೆಗಳು. ಅಂದರೆ ಪ್ರಾಂತ್ಯಗಳ ಆಧಾರದಲ್ಲಿ ಮಾಡಿದ ವಿಭಾಗಗಳು. ಈಗ ನಾವು ಮಂಗಳೂರು ಕನ್ನಡಕ್ಕೆ ಬರೋಣ. ಇಲ್ಲಿ ಎಲ್ಲ ಜನರು ಮಂಗಳೂರು ಕನ್ನಡ ಉಪಯೋಗಿಸಿದರೂ ಅದರ ಬಳಕೆಯಲ್ಲಿ ವ್ಯತ್ಯಾಸವಿರುತ್ತದೆ. ಇದನ್ನು ಸಾಮಾಜಿಕ ಉಪಭಾಷೆ ಎನ್ನುತ್ತಾರೆ. ಮಾದರಿ ಕನ್ನಡಕ್ಕೆ ಹತ್ತಿರವಾಗಿ ಮಾತಾಡುವ ಬ್ರಾಹ್ಮಣರಿರಬಹುದು, ಪಠ್ಯವನ್ನು ಓದುವ ರೀತಿಯಲ್ಲಿ ಮಾತಾಡುವ ಕ್ಯಾಥೋಲಿಕರಿರಬಹುದು. ತುಳು ಭಾಷೆಯ ಪ್ರಭಾವದಲ್ಲಿ ಕನ್ನಡ ಮಾತಾಡುವ ಬ್ರಾಹ್ಮಣೇತರಿರಬಹುದು. ವಿಶಿಷ್ಟ ರೀತಿಯಲ್ಲಿ ಕನ್ನಡ ಪ್ರಯೋಗದ ಕುಂದಗನ್ನಡವಿರಬಹುದು. ಮಲೆಯಾಳಂ ಪ್ರಭಾವದಲ್ಲಿ ಮಾತಾಡುವ ಕಾಸರಗೊಡು ಕನ್ನಡಿಗರಿರಬಹುದು ಹೀಗೆ ಹಲವು. ಇನ್ನೂ ವೃತ್ತಿ ಉಪಭಾಷೆಗಳಿವೆ, ಅವು ಪ್ರತಿ ವೃತ್ತಿಯನ್ನು ಅನುಸರಿಸಿ ಬದಲಾಗುತ್ತಿರುತ್ತದೆ. ಅಷ್ಟೇ ಏಕೆ ಪ್ರತಿ ವ್ಯಕ್ತಿ ಮಾತಾಡುವ ರೀತಿಯಲ್ಲೂ ವ್ಯತ್ಯಾಸವಿರುತ್ತದಂತೆ. ಇದನ್ನು ವ್ಯಕ್ತಿ ಉಪಭಾಷೆ ಎನ್ನುತ್ತಾರೆ.  


ಉಪಭಾಷೆಗಳು ಹುಟ್ಟಲು ಪ್ರಮುಖ ಕಾರಣ ವಿಸ್ತಾರವಾದ ಭಾಷಿಕ ಪ್ರದೇಶ. ಹಿಂದೆಲ್ಲ ವ್ಯವಸ್ಥಿತ ಸಾರಿಗೆ ವ್ಯವಸ್ಥೆ ಇಲ್ಲದೇ ಇದ್ದುದರಿಂದ, ಸಹಜ ಪ್ರಾಕೃತಿಕ ಅಡೆತಡೆಗಳಿಂದ  ಜನರು ತಮ್ಮ ತಮ್ಮಲ್ಲೇ ವ್ಯವಹರಿಸಬೇಕಿತ್ತು. ಇದು ಭಾಷೆಯ ಕೊಡುಕೊಳ್ಳುವಿಕೆಗೆ ತಡೆಯೊಡ್ಡಿ ಒಂದೊಂದು ಗುಂಪು ಒಂದೊಂದು ತರಹ ಮಾತಾಡುವಂತೆ ಆಯಿತು. ಆದರೆ ಜಗತ್ತು ಆಧುನೀಕರಣಗೊಂಡಂತೆ ಜನರ ಪರಸ್ಪರ ಸಂವಹನವೂ ಹೆಚ್ಚಿತು. ಧಾರವಾಡ ಒಬ್ಬಾತ ಬೆಂಗಳೂರಿಗೆ, ಹಾಸನದವ ವಿಜಾಪುರಕ್ಕೆ ಕೆಲಸದ ಸಲುವಾಗಿ ಹೋಗಬೇಕಾಗಿ ಬರಬಹುದು. ವಿದೇಶಿಯಾತ್ರೆಗಳೇ ದಿನನಿತ್ಯದ ಸಂಗತಿಗಳಾಗಿರುವಾಗ ಇನ್ನು ನಮ್ಮ ರಾಜ್ಯದ ಒಳಗೆಯೇ ಇಂಥ ಚಟುವಟಿಕೆಗಳು ನಡೆಯುವುದಿಲ್ಲವೇ? ಅಷ್ಟೇ ಅಲ್ಲ ಮಕ್ಕಳು ಶಾಲೆಯಲ್ಲಿ ಕಲಿಯುವಾಗ, ವರ್ತಮಾನ ಪತ್ರಿಕೆಗಳು ಸುದ್ದಿಯನ್ನು ತಿಳಿಸುವಾಗ, ತುಮಕೂರಿನ ವ್ಯಕ್ತಿ ಬಾಗಲಕೋಟೆಯವನೊಂದಿಗೆ ಮಾತಾಡುವ ಕಮ್ಯುನ್ಯೂಕೇಶನ್ ಗ್ಯಾಪ್ ಆಗದಂತೆ ಇಬ್ಬರಿಗೂ ಒಂದು ಸಾಮಾನ್ಯ ಭಾಷೆಯ ಅಗತ್ಯವಿರುತ್ತದೆ. ಆಗ ಬಂದದ್ದೇ ಈ ಶುದ್ಧ ಕನ್ನಡದ ಕಲ್ಪನೆ.


ಕನ್ನಡ ಭಾಷೆಯ ಮೇಲೆ ಹಲವು ಭಾಷೆಗಳ ಪ್ರಭಾವವಿದೆ. ಅದರಲ್ಲೂ ಇಂಗ್ಲೀಷ್ ಮತ್ತು ಸಂಸ್ಕೃತದ್ದು ತುಸು ಹೆಚ್ಚು. ಕಂದಾಯ ಇಲಾಖೆಯಲ್ಲಿ ಬಳಕೆಯಾಗುವ ಪದಗಳಲ್ಲಿ ಪರ್ಶಿಯನ್ ಮತ್ತು ಅರೇಬಿಕ್ ಪದಗಳು ಸೇರಿವೆ. ಆದರೆ ನಾವು ಶುದ್ಧ ಎಂಬ ಪರಿಗಣಿಸುವಾಗ ಸಂಸ್ಕೃತದ ಮೊರೆಹೋಗುತ್ತೇವೆ. ಅದಕ್ಕೂ ಕಾರಣವಿದೆ. ಹೆಚ್ಚಿನ ನಮ್ಮ ವೈಯಾಕರಣಿಗಳು ಅನುಸರಿಸಿರುವುದು ಸಂಸ್ಕೃತ ವ್ಯಾಕರಣ ಪದ್ಧತಿಯನ್ನೇ. ಆಮೇಲೆ ಇಂಗ್ಲೀಷರು ಬಂದ ಮೇಲೆ ಇಂಗ್ಲೀಷ್  ವ್ಯಾಕರಣ ಪರಂಪರೆಯನ್ನು ಅನುಸರಿಸಿ ವ್ಯಾಕರಣ ರಚಿಸಲಾಯಿತು. ಯಾವಾಗ ನಮಗೆ ಭಾಷೆಯ ತಪ್ಪು ಸರಿಯ ಜಿಜ್ಞಾಸೆ ಬಂದಾಗಲೆಲ್ಲ  ನಾವು ಮೊರೆಹೋಗುವುದು ಈ ಪ್ರಭಾವಿ ಭಾಷೆಗಳ ಮೊರೆಯನ್ನು. ಅದರಲ್ಲೂ ಸಂಸ್ಕೃತದ ಮೂಲವನ್ನು ಹುಡುಕಿಕೊಂಡು.  
ಏನೇ ಆಗಲಿ ಕಾಲ ಕಾಲಕ್ಕೆ ಭಾಷೆಯು ಯಾರ ಅಡೆತಡೆಯನ್ನು ಲೆಕ್ಕಿಸದೇ ತನ್ನಷ್ಟಕ್ಕೆ ತಾನು ಬದಲಾಗುತ್ತಾ ಹೋಗುತ್ತದೆ. ನಾವು ನೋಡುತ್ತಾ ಹೋಗಬೇಕಷ್ಟೆ.  

(ಭಾಗ್ವತ ಅವರ 'ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು' ಎಂಬ ಬರಹ ಮತ್ತು ಪ್ರತಿಕ್ರಿಯೆಗಳನ್ನು ನೋಡಿ ಇಷ್ಟನ್ನು ಹೇಳಬೇಕೆನಿಸಿತು)


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನೋಡುತ್ತ ಕೂರಬೇಕಷ್ಟೆ.. ಬೊಬ್ಬೆ ಹಾಕಿದರೂ ಬದಲಾಗುವುದಿಲ್ಲ. ಏನೇ ಆಗಲಿ ಕಾಲ ಕಾಲಕ್ಕೆ ಭಾಷೆಯು ಯಾರ ಅಡೆತಡೆಯನ್ನು ಲೆಕ್ಕಿಸದೇ ತನ್ನಷ್ಟಕ್ಕೆ ತಾನು ಬದಲಾಗುತ್ತಾ ಹೋಗುತ್ತದೆ. ನಾವು ನೋಡುತ್ತಾ ಹೋಗಬೇಕಷ್ಟೆ. ತಲೆಬರಹಕ್ಕೂ ಕೊನೆಯ ಸಾಲಿಗೂ ನಡುವೆ ಏಕಿಷ್ಟು ವೈರುಧ್ಯ? ಬದಲಾಗುವುದಿಲ್ಲ ಅನ್ನುವುದನ್ನು ಹೇಳುತ್ತಾ ಬದಲಾಗುತ್ತಾ ಹೋಗುತ್ತದೆ ಅಂದಿದೀರಲ್ಲಾ? ಶುದ್ಧ ಕನ್ನಡದ ಕಲ್ಪನೆ ಮತ್ತು ಅಗತ್ಯದ ಬಗೆಗಿನ ನಿಮ್ಮ ಅನಿಸಿಕೆಗೆ ಸಹಮತವಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್, ಕಡೆಯ ವಾಕ್ಯವು ಮನುಷ್ಯ ಪ್ರಯತ್ನವನ್ನು, ತಲೆಬರೆಹವು ಭಾಷೆ ತನ್ನಷ್ಟಕ್ಕೆ ತಾನು ಬದಲಾಗುವ ವಿಷಯವನ್ನು ತಿಳಿಸುತ್ತವೆ. ಇಲ್ಲಿ ಮನುಷ್ಯನ ವ್ಯರ್ಥ ಪ್ರಯತ್ನ ಮತ್ತು ಅಸಹಾಯಕತೆಯನ್ನು ಗಮನಿಸಬಹುದು. ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್, ಯಾವುದೇ ಒಂದು ಕನ್ನಡದ ಉಪಭಾಷೆಯನ್ನು "ಶುದ್ದ ಕನ್ನಡ" ಅಂತ ಸಾರಲು ನಾವು, ನೀವು, ಅತ್ವಾ ವೈಯಾಕರಣಿಗಳು ಯಾರು? ಶುದ್ದ ಕನ್ನಡದ ಕಲ್ಪನೆಯೇ ಅಸಂಬದ್ದ. ಅದರಲ್ಲೂ ಸಂಸ್ಕೃತಭೂಯಿಷ್ಠ ಕನ್ನಡವನ್ನು, ಕೇವಲ ನಮ್ಮ ಹಿಂದಿನ ವ್ಯಾಕರನಿಗಳು ತಲೆ ಮೇಲಿಟ್ಟು ಕೊಂಡಿದ್ದರು ಅನ್ನೋ ಕಾರಣಕ್ಕೆ , ಶುದ್ದ ಕನ್ನಡ ಅಂತ ಒಪ್ಪಿಕೊಳ್ಳುವುದು ಮೂರ್ಖತನ. ನಿಮ್ಮ ಬರವಣಿಗೆಯಲ್ಲಿನ "ಶುದ್ದ ಕನ್ನಡ" ದ ಬದಲು "reference ಕನ್ನಡ", "ಪ್ರಮಾಣ ಕನ್ನಡ", "ಮಾದರಿ ಕನ್ನಡ", ಅನ್ನೋ ಪದ ಬಳಸಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃ ಅವರೇ, >>>ನಿಮ್ಮ ಬರವಣಿಗೆಯಲ್ಲಿನ "ಶುದ್ದ ಕನ್ನಡ" ದ ಬದಲು "reference ಕನ್ನಡ", "ಪ್ರಮಾಣ ಕನ್ನಡ", "ಮಾದರಿ ಕನ್ನಡ", ಅನ್ನೋ ಪದ ಬಳಸಬಹುದು.>>> ನಾನು ಅದನ್ನು ಮೊದಲ ಸಾಲಿನಲ್ಲೇ ಹೇಳಿದ್ದೇನೆ. >>>ಯಾವುದೇ ಒಂದು ಕನ್ನಡದ ಉಪಭಾಷೆಯನ್ನು "ಶುದ್ದ ಕನ್ನಡ" ಅಂತ ಸಾರಲು ನಾವು, ನೀವು, ಅತ್ವಾ ವೈಯಾಕರಣಿಗಳು ಯಾರು? >>> ಈ "ಶುದ್ಧ" ಎಂಬ ಕಲ್ಪನೆ ಕೇವಲ ಭಾಷೆಗೆ ಸಂಬಂಧಿಸಿದ್ದು ಅಂತ ನನಗನಿಸುವುದಿಲ್ಲ. ಇದನ್ನು cultural context ನಲ್ಲಿಟ್ಟು ನೋಡಬೇಕು ಅನ್ನಿಸುತ್ತೆ. ನಮ್ಮ ಪರಂಪರಾಗತ ಮೌಲ್ಯಗಳಿಗೂ ಭಾಷೆಗೂ ತಳುಕು ಹಾಕಿ ಈ ರೀತಿಯ ನಿರ್ವಚನ ಬಂದಿರಬಹುದು. ಅದಕ್ಕಾಗಿಯೇ ನಾವು ಹಳ್ಳಿಗರಂತೆ ಮಾತಾಡದೇ ಓದುವ ಕನ್ನಡದಲ್ಲಿ ಮಾತಾಡಿ modern ಅಂದು ಕೊಳ್ಳುತ್ತೇವೆ. ಅಥವಾ ಶುದ್ಧ ಕನ್ನಡ ಮಾತಾಡುವವರ ಎದುರಿಗೆ ಕೀಳರಿಮೆ ಅನುಭವಿಸುತ್ತೇವೆ. ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದನ್ನು "ಎಲ್ಲರ ಕನ್ನಡ" ಅನ್ನಬಹುದೇ? ಇಲ್ಲಿ ನೋಡಿ.. http://ellarakannada...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉಮೇಶ್ ಶೆಟ್ಟಿಯವರೇ, ಭಾಷೆಯ ಶಂಕರಭಟ್ಟರ ವಿಚಾರಗಳು ತರ್ಕಬದ್ಧವಾಗಿದ್ದು, ಹೊಸ ಆಲೋಚನೆಗಳನ್ನು ಕೊಡುತ್ತವೆ. ಆದರೆ ಆ ವಿಚಾರಗಳ ಕುರಿತು ಇನ್ನೂ ಸಾಕಷ್ಟು ಚರ್ಚೆಯಾಗಲಿ, ಜನಾಭಿಪ್ರಾಯವಾಗಲಿ ರೂಪಿತವಾಗಿಲ್ಲ. ಇರುವ ಮಾದರಿಯನ್ನು ಒಡೆಯುವ ಮೊದಲು ಪರ್ಯಾಯಗಳನ್ನು ಆಲೋಚಿಸಿ ಹೊರಡುವುದು ಒಳ್ಳೆಯದಲ್ಲವೇ? ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸಾತ್ವಿಕ್: ಶಂಕರ ಭಟ್ಟರ ಬರಹಗಳ ಬಗ್ಗೆ ಹೆಚ್ಚಿನ ಚರ್ಚೆ ಆಗಬೇಕು. ಇತೀ, ಉಉನಾಶೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಷಾಯಿ, ಷರಾಯಿ, ಮೋಜಿಂದಾರ, ಗ್ರಾಮ ಲೆಕ್ಕಿಗ, ರಾಜಸ್ವ ನಿರೀಕ್ಷಕ,ದಂಡಾಧಿಕಾರಿ, ಲೇಖನಿ - ಇನ್ನು ಮುಂದೆ ಈ ರೀತಿ ಕನ್ನಡ ಮತ್ತೆ ಬರಬಹುದಾ. ದುಃಖಕರ ಸಂಗತಿಯೆಂದರೆ ನಮ್ಮ ರಾಜ್ಯವನ್ನು ಆಳುತ್ತಿರುವ ಹಲವರು "ರಾಜ್ಯೋತ್ಸವ"ಕ್ಕೆ ರಾಜ್ಯೋಸ್ತವ" ಅನ್ನುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್ ನಾಡಿಗ್ ಅವರೇ, "ರಾಜ್ಯೋತ್ಸವ"ಕ್ಕೆ ರಾಜ್ಯೋಸ್ತವ" ಎಂದರೂ ಪರವಾಗಿಲ್ಲ. ಅದು ಬೇರೆಯವರಿಗೆ ಕಮ್ಯೂನಿಕೇಟ್ ಆದ್ರೆ ಸಾಕು. ಬೇಕಾದ್ರೆ ಅಂಥ ತಪ್ಪುಗಳನ್ನು ತಿದ್ದಿಕೊಳ್ಳಬಹುದು. ಆದರೆ ಆ ವಿಮರ್ಶೆಯ ಹಿಂದೆ ಶ್ರೇಷ್ಠ ಕನಿಷ್ಠದ ಪ್ರಶ್ನೆ ಬರಬಾರದು ಅಷ್ಟೇ. ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿಗ್ ರೇ, ಆಸುಮನದ ಮಾತುಗಳಿಗೆ ನಮ್ಮ ಬೆ೦ಬಲವಿದೆ. ಒ೦ದು ಚರ್ಚೆಯ ವಿಚಾರ ವಾಗಲೀ, ಲೇಖನದ ವಿಚಾರವಾಗಲೀ, ವಾದ ಪ್ರತಿವಾದಗಳು ನಡೆಯುತ್ತಿರುವಾಗ, ಸ೦ಬ೦ಧವೇ ಇರದ ಇನ್ಯಾವುದೋ ವಿಚಾರದ ಬಗ್ಗೆ ``ನಮ್ಮದನ್ನೂ ಕೇಳಿ``ಎ೦ದು ಮೂಗುತೂರಿಸುವುದು ತಪ್ಪಲ್ಲವೇ? ನಿಮ್ಮ ಲೇಖನದಲ್ಲಿ ಮಾತ್ರವೇ ನಿಮ್ಮ ಲೇಖನದ ಪ್ರತಿಕ್ರಿಯೆಗಳನ್ನು ಬಯಸಬೇಕು. ಎಷ್ಟಿದ್ದರೂ ನೀವು ಪತ್ರಕರ್ತರು. ನಿಮಗೆ ನಾವು ಹೇಳಬೇಕೆ? ನಮಸ್ಕಾರ, ನನ್ನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಇದೇ ವಿಷಯವನ್ನು ಈಗಾಗಲೆ ಹೆಗಡೆಯವರು ಪ್ರಸ್ತಾಪಿಸಿದ್ದಾರೆ. ಅದಕ್ಕೆ ಅವರಿಗೆ ತಪ್ಪಾಗಿದ್ದಲ್ಲಿ...... ಎಂದು ಹೇಳಿದ್ದೇನೆ. ಇದೀಗ ನೀವು ಪುನಃ ಅದೇ ಪ್ರಶ್ನೆಯನ್ನು ಇಟ್ಟಿದ್ದೀರಿ. ತಪ್ಪಾಗಿದ್ದಲ್ಲಿ......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಪತ್ರಕರ್ತ ಕೂಡ ನಿಮ್ಮಂತೆಯೇ ಒಬ್ಬ ಸಾಮಾನ್ಯ ಮನುಷ್ಯ ಅಷ್ಟೆ, ವೃತ್ತಿ ವಿಷಯ ಅಂತ ಬಂದಾಗ ನಮ್ಮ ಸುತ್ತಮುತ್ತಲಿನ ಸತ್ಯ ಹೊರತೆಗೆಯಲು ಆತ ಪ್ರಯತ್ನಿಸುತ್ತಾನೆ . ಅದೂ ನಾಗರಿಕರು ಹೇಳಿದ ಆಧಾರದ ಮೇಲೆ. ನಾನು ಸಂಪದಕ್ಕೆ ಬಂದಿರುವುದು ಏನಾದರೂ ಹೊಸತನ್ನು ಕಲಿಯೋಣ ಎಂದು. ಗಮನಿಸಿದ್ದೀರೋ ಇಲ್ಲವೋ ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ಸುಖಾ ಸುಮ್ಮನೆ ಪ್ರತಿಕ್ರಿಯೆ ನೀಡುವುದಿಲ್ಲ. ನಾವಡರೆ ಇನ್ನೊಮ್ಮೆ "ಎಷ್ಟಿದ್ದರೂ ನೀವು ಪತ್ರಕರ್ತರು. ನಿಮಗೆ ನಾವು ಹೇಳಬೇಕೆ?" ಈ ಪದ ಬಳಕೆ ಮಾಡುವುದು ಸಂಪದದಲ್ಲಿ ಅಷ್ಟು ಸಮಂಜಸವಲ್ಲ ಅನ್ನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿಗರೇ, ಬೇಸರಿಸಬೇಡಿ. `` ನೀವು ಎಷ್ಟಿದ್ದರೂ ಪತ್ರಕರ್ತರು, ನಾವು ನಿಮಗೆ ಹೇಳಬೇಕೆ? ನೀವು ಹೊಸಬರೆ೦ದೇ ನಾನು ಹೇಳುತ್ತಿದ್ದೇನೆ. ನಾನೂ ಇಲ್ಲಿ ಹೊಸಬನೇ. ಸ೦ಪದ ಹಾಗೂ ಸ೦ಪದಿಗರ ಬಗ್ಗೆ ಉತ್ತಮ ಲೇಖಕರೆ೦ದು, ವಿಮರ್ಶಕರೆ೦ದು ಇ೦ಟರ್ ನೆಟ್ ಮಾಧ್ಯಮದಲ್ಲಿ ಸ೦ವಹನವನ್ನು ಮಾಡುವವರು ಮಾತಾಡಿಕೊಳ್ಳುವುದನ್ನು ನಾನು ಹಲವಾರು ಬಾರಿ ಗಮನಿಸಿದ್ದೇನೆ. ಅದೇ ಉದ್ದಿಶ್ಯವೇ ನನ್ನನ್ನು ಸ೦ಪದಕ್ಕೆ ಎಳೆದು ತ೦ದಿದ್ದು. ನಿಮ್ಮ೦ತಹ ಉತ್ತಮರ ಒಡನಾಟದಿ೦ದ ನನ್ನಲ್ಲಿನ ಬರಹಗಾರ ತನ್ನ ಬರವಣಿಗೆಯನ್ನು ಇನ್ನೂ ಉತ್ತಮಗೊಳಿಸಿಕೊಳ್ಳಲೆ೦ದು. ಮೇಲಿನ ವಾಕ್ಯವನ್ನು ನಾನು ಏಕೆ ಉಪಯೋಗಿಸಿದೆನೆ೦ದು ನೀವಿನ್ನೂ ಅರ್ಥ ಮಾಡಿಕೊ೦ಡಿಲ್ಲವಲ್ಲ! ಪತ್ರಕರ್ತನೂ ಒಬ್ಬ ಮನುಷ್ಯ ಅ೦ತ ನನಗೊತ್ತಿದೆ. ಆದರೆ ನೀವು ಹಿ೦ದಿನ ನಿಮ್ಮ ಲೇಖನದ ಪ್ರತಿಕ್ರಿಯೆಯ ವಿಭಾಗದಲ್ಲಿ ಸ೦ಪದಿಗರೊಬ್ಬರು ಪ್ರತಿಕ್ರಿಯಿಸಿದಾಗ ನೀವು ಅವರಿಗೆ ಪ್ರತಿಕ್ರಿಯಿಸುವಾಗ `` ನಾನು ಒಬ್ಬ ಪತ್ರಕರ್ತ, ಬೇಕಾದಷ್ಟು ಜನರನ್ನು ನಾನು ನೋಡಿದ್ದೀನಿ`` ಎ೦ಬ ಅಹ೦ಭಾವದ ಮಾತುಗಳನ್ನಾಡಿದಿರಿ. ಆ ಮಾತಿನಿ೦ದ ವೈಯಕ್ತಿಕವಾದ ತೇಜೋವಧೆ ಆರ೦ಭ ಗೊ೦ಡಿತಲ್ಲವೇ? ಲೇಖನವನ್ನು ಬರೆಯುವಾಗ ಹಾಗೂ ಅದಕ್ಕೆ ಪ್ರತಿಕ್ರಿಯಿಸುವಾಗ ಹೆಚ್ಚಿನ ಆವೇಶ ಸಲ್ಲದು. ನೀವು ಉಪಯೋಗಿಸಿದ ಮಾತು ನನಗೆ ಇಷ್ಟವಾಗಲಿಲ್ಲ.ಹಾಗ೦ತ ನಿಮಗೆ ಪ್ರತಿಕ್ರಿಯಿಸಿದವರದು ಸರಿ ಎ೦ದೂ ನಾನು ಹೇಳಲಿಲ್ಲ. ಅವರ ಪ್ರತಿಕ್ರಿಯೆಯಲ್ಲಿನ ಹಾಸ್ಯವನ್ನು ತಾವು ಗಮನಿಸಲಿಲ್ಲ. ನಿಮ್ಮ ಉದ್ಯೋಗ ನಮಗೆ ಬೇಡ, ನೀವು ಯಾರಾದರೇನು? ನಮಗೆ ಅದು ಅಗತ್ಯವಿಲ್ಲ. ನಿಮ್ಮ ಲೇಖನಿಯಿ೦ದ ಹರಿದು ಬರುವ ಅನುಭವಾಮೃತ ಮಾತ್ರವೇ ನಮಗೆ ಸಾಕು. ನಿಮಗೆ ಪ್ರತಿಕ್ರಿಯಿಸಿದವರಿ೦ದಾಗಲೀ ಯಾ ನಿಮ್ಮಿ೦ದಾಗಲೀ ನಾವು ಬಯಸುವುದೇನನ್ನೆ೦ದರೆ, ವೈಯಕ್ತಿಕ ಪ್ರದರ್ಶನ ಮತ್ತು ತೇಜೋವಧೆ ಮಾಡುವುದು ಬೇಡ. ನಿಮ್ಮ ಕಸುವು ಏನಿದ್ದರೂ ನೀವು ಬರೆಯುವ ಲೇಖನದಲ್ಲಿ ಯಾ ನೀವು ನಮಗೆ ನೀಡುವ ಅಮೃತ ಧಾರೆಯಲ್ಲಿ ಪ್ರವಹಿಸಿ. ಕುಡಿದು ಧನ್ಯರಾಗುತ್ತೇವೆ. ಯಾರೊಬ್ಬರೂ ಪರಿಪೂರ್ಣರಲ್ಲ! ``ಎಲ್ಲರಿಗಿ೦ತಲೂ ನಾನು ಚಿಕ್ಕವನು ಎ೦ಬ ಭಾವನೆಯನ್ನು ನಾನು ಇಟ್ಟುಕೊ೦ಡಿದ್ದರಿ೦ದಲೇ ನನಗೆ ಎಲ್ಲರೊ೦ದಿಗೂ ಸಮಾನ ಸ೦ವಹನ ಸಾಧ್ಯವಾಗಿದೆ``ಎ೦ಬ ನನ್ನ ಅನುಭವವನ್ನು ಇಲ್ಲಿ ಒತ್ತಿ ಹೇಳುತ್ತಿದ್ದೇನೆ. ಅನ್ಯಥಾ ಭಾವಿಸಬೇಡಿ. ನಮಸ್ಕಾರ, ನನ್ನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸಲಹೆಗೆ ಧನ್ಯವಾದಗಳು. " ನಾನು ಒಬ್ಬ ಪತ್ರಕರ್ತ, ಬೇಕಾದಷ್ಟು ಜನರನ್ನು ನಾನು " ಇದನ್ನು ಯಾಕೆ ಬಳಸಿದ್ದೇನೆ. ಎನ್ನುವುದಕ್ಕೆ. ನನಗೆ ಪ್ರತಿಕ್ರಿಯೆ ನೀಡಿದಂತಹ ಬರಹದಲ್ಲಿ ವ್ಯಂಗ್ಯ ಇದ್ದ ಕಾರಣ ಅಲ್ಲಿ ಅನಿವಾರ್ಯವಾಗಿ ವೃತ್ತಿ ಹೇಳಲೇಬೇಕಾಯಿತು. ಇದೀಗ ನೀವೇ ನೋಡುತ್ತಿದ್ದೀರಿ ಸಾಫ್ಟ್ ವೇರ್ ಮೇಲೆ ಎಷ್ಟೆಲ್ಲಾ ಚರ್ಚೆ ನಡೆಯುತ್ತಿದೆ ಎಂದು. ಹಾಗಂತ ನಾನು ಕೇವಲ ಪತ್ರಕರ್ತನಾಗಿ ಮಾತ್ರ ಬರೆಯಬೇಕೆಂದಿದ್ದರೆ ಬರೀ ರಾಜಕೀಯ ಅಥವಾ ಸಮಸ್ಯೆಯನ್ನು ಮಾತ್ರ ಬರೆಯುತ್ತಾ ಇರಬಹುದಾಗಿತ್ತು. ಅದನ್ನು ಸಂಪದದ ಮಿತ್ರರು ಓದುತ್ತಿದ್ದರೋ ಇಲ್ಲವೋ ಎನ್ನುವುದು ಆಮೇಲಿನ ಪ್ರಶ್ನೆ. ಆದರೆ ಇಲ್ಲಿ ನಾನು ಕೂಡ ನನ್ನ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇತರರ ಚರ್ಚೆಯನ್ನು ಕೂಡ ಗಮನಿಸುತ್ತಿದ್ದೇನೆ. ಧನ್ಯವಾದಗಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.