ಉಡುಪಿಯ ಬಳಿಯ, ' ಟರ್ಟಲ್ ಬೇ ರೆಸಾರ್ಟ್' !

To prevent automated spam submissions leave this field empty.

ಸೂರ್ಯ ಮುಳುಗುವ ದೃಷ್ಯ ಎಲ್ಲೆಡೆಯೂ ಸುಂದರವೇ. ಆದರೆ ಕಡಲಿನ ನೀರಿನ ಮೇಲೆ ಅದೆಷ್ಟು ರಮ್ಯ !

ಸಮುದ್ರದ ಬಳಿಯ ಕಲ್ಲಿನ ಚಿಕ್ಕ ಏರು ತಾಣ !

ಚಿಕ್ಕ ಪಕ್ಷಿಗಳ ಸಂಭ್ರಮಮಕ್ಕೆ ಕೊನೆಯುಂಟೇ !

ತೆಂಗಿನ ಮರಗಳು ಅಲ್ಲಿ, ಇಲ್ಲಿ ಎಲ್ಲೆಲ್ಲೂ  !

ದಕ್ಷಿಣ ಕನ್ನಡದ ಉಡುಪಿಯ ಬಳಿಯ, ' ಟರ್ಟಲ್ ಬೇ ರೆಸಾರ್ಟ್' ನ ಬಳಿಯ ಸಮುದ್ರದ ದಂಡೆಯ ಮೇಲೆ ನಾವು ಸೆರೆಹಿಡಿದ ಹಲವು ಸುಂದರ ಚಿತ್ರಗಳು ಮರೆಯಲಾರದ ನೆನೆಪನ್ನು ಮೆಲುಕುಹಾಕಲು ಸಹಾಯ ಮಾಡುತ್ತವೆ.

ಅದೇನು ನಿಸರ್ಗ ಸೌಂದರ್ಯ ! ೨೪ ಗಂಟೆಯೂ ಭೋರ್ಗರೆದು ತನ್ನ ಅಲೆಗಳನ್ನು ನಿರಂತರವಾಗಿ ದಡಕ್ಕೆ ಅಪ್ಪಳಿಸುವ ನೊರೆಹಾಲಿನ ರೀತಿಯಲ್ಲಿ ಸಂಭ್ರಮಿಸುವ ಅಲೆಗಳು,  ಕವಿಗಳಿಗೆ ಪ್ರೋತ್ಸಾಹ ನೀಡಿ ಕವಿತೆಗಳು ಹುಟ್ಟಿಯಾವು ! ನಮ್ಮಂತಹ ಸಾಮಾನ್ಯರ  ಬಾಯಿನಲ್ಲೂ  ಆ ಸಮಯದಲ್ಲಿ ಅಲ್ಲಿದ್ದಾಗ ಕೆಲವು ನವಿರಾದ ಕವಿತೆಗಳ ಸಾಲುಗಳು ನಮಗರಿವಿಲ್ಲದೆಯೇ ಹೊರಗೆ ಬಂದವು !

 

 

-ಚಿತ್ರಗಳು : ವೆಂಕಟೇಶ್.

 

 

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೌದು ಶಿವರಾಮ್ ರವರೆ, ಖಂಡಿತವಾಗಿಯೂ ! ಸರ್. ಏನೋ ತಾಂತ್ರಿಕದೋಷದಿಂದ ಒಮ್ಮೊಮ್ಮೆ ಅವು ಕಾಂಣಿಸದೆ ಹಾಗೆಯೇ ಒಂದು ಚುಕ್ಕಿಯಲ್ಲಿ ಅವಸಾನವಾಗುವುವೆ ಗೊತ್ತಿಲ್ಲ. ಈಗಂತೂ ನನಗೆ ಕಾಣಿಸುತ್ತಿದೆ. ನಂತರದ ವಿಷಯ ಹೇಳಲು ಸಾಧ್ಯವಿಲ್ಲ ! ನನ್ನ ಲೇಖನಗಳ ಹಲವು ಚಿತ್ರಗಳನ್ನು ನಾನು ಪುನಃ ’ಅಪ್ ಲೋಡ್’ ಮಾಡಬೇಕಾಯಿತು.

ಇಲ್ಲ; ನನಗೆ ಈಗಲೂ ಕಾಣಿಸುತ್ತಿಲ್ಲ. ನನ್ನ end ನಲ್ಲೇ ಏನೋ ತೊಂದರೆ ಇದೆಯೋ ಏನೋ? ಬೇರೆ ಪ್ರತಿಕ್ರಿಯೆಗಳು ಬರುವ ವರೆಗೆ ಕಾದು ನೋಡೋಣ. ಚಿತ್ರಗಳನ್ನು ಮೊದಲು http://sampada.net/n... ಅಲ್ಲಿ ಸೇರಿಸಿ ಪ್ರಯತ್ನಿಸಿ.

ಮರೆಯಲಾರದ ನೆನಪುಗಳನ್ನು ಮೆಲುಕುಹಾಕೋಣವೆ೦ದರೆ ಇವತ್ತೂ ನಿಮ್ಮ ಚಿತ್ರಗಳು ಕಾಣಿಸುತ್ತಿಲ್ಲ. ತಾ೦ತ್ರಿಕ ದೋಷವನ್ನು ದಯವಿಟ್ಟು ಸರಿಪಡಿಸಬೇಕಾಗಿ ವಿನ೦ತಿ.

ಸಂಧ್ಯಾರವರೆ, ನಿಮಗೆ ಕಾಣಿಸದೆ ಇರುವುದು ನನಗೂ ಬೇಸರ. ನನಗೆ ತುಂಬಾ ಮುಜುಗರವಾಗುತ್ತಿದೆ. ಈ ವಲಯದಲ್ಲಿ ನನ್ನ ತಿಳುವಳಿಕೆ ಬಹಳ ಕಡಿಮೆ.