ನಾನು ಹಾಗೂ ಟಿ.ವಿ. ಪ್ರೋಗ್ರಾಮು!

2.5

ಇತ್ತೀಚೆಗಷ್ಟೆ ಕೆಲಸದ ಏಕತಾನತೆಯಿಂದ ಬೇಸರಗೊಂಡು ಬೇರೆ ಕೆಲಸ ಸೇರಿಕೊಂಡಿದ್ದೆ. ಎಲ್ಲರನ್ನೂ ಆಕರ್ಷಕವಾಗಿ ಕಾಣುವಂತೆ, ಅವರ ಸೌಂದರ್ಯವನ್ನು ಇನ್ನೂ ಹೆಚ್ಚಿಸುವ ಒಂದು ಸಂಸ್ಥೆ. ಅಲ್ಲಿ ಮ್ಯಾನೇಜರ್ ಎಂಬ ಪೋಸ್ಟ್ ಬೇರೆ ಆಕರ್ಷಕವಾಗಿ ಕಂಡಿತ್ತು. ಅಲ್ಲಿ ನನ್ನ ಪ್ರತಿಭೆಯನ್ನು ತೋರಿಸಲು ಒಂದು ಅವಕಾಶವೂ ಸಿಗ ಬಹುದೆಂಬ ಆಶಯದಿಂದ ಆ ಸಂಸ್ಥೆಗೆ ಸೇರಿದೆ. ನನಗೊಪ್ಪಿಸಿದ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಲು ಶುರುಮಾಡಿದೆ.

ಇದೇ ಸಂಸ್ಥೆಯ ಬಗ್ಗೆ ಒಂದು ಎಪಿಸೋಡ್ ಮಾಡಲು ಟಿ.ವಿ.ಯೊಂದು ಯೋಜನೆ ಮಾಡಿತು. ಸಂಸ್ಥೆಯಲ್ಲಿ ಕೆಲಸ ಮಾಡುವವರೆಲ್ಲರ ಮಾತೃಭಾಷೆ ಹಿಂದಿ (ನನ್ನನ್ನು ಬಿಟ್ಟು). ನಿರ್ದೇಶಕರು ಕೂಡಾ ಹಿಂದಿಯವರೇ. ಸರಿ! ಯಾರಿದ್ದಾರೆ ಕನ್ನಡದಲ್ಲಿ ಮಾತನಾಡಲು? ನಾನಿಲ್ಲವೇ? ನಾನೇ ಆಯ್ಕೆಯಾದೆ (ಸ್ಪರ್ಧಿಸಲು ಯಾರಾದರಿದ್ದಲ್ಲವೇ :-)) ಬಯಸದೇ ಬಂದ ಭಾಗ್ಯ! ಎಲ್ಲರೆದುರು ನನಗೇನೂ ಇಷ್ಟವಿಲ್ಲ, ನಿಮ್ಮ ದಾಕ್ಷಿಣ್ಯಕ್ಕಾಗಿ ಒಪ್ಪಿಕೊಂಡಿದ್ದೇನೆ ಎನ್ನುವ ಧೋರಣೆ ತೋರಿದರೂ ಒಳಗೊಳಗೆ ಬಹಳ ಖುಶಿ, ನಾನು ಟಿ.ವಿ.ಯಲ್ಲಿ ಬರುತ್ತೀನಿ ಅಂತಾ. ಟಿ.ವಿ. ಶೋಗಳಲ್ಲಿ ಭಾಗವಹಿಸುವುದು, ರೇಡಿಯೋಗಳಲ್ಲಿ ಪ್ರೋಗ್ರಾಮ್ ನೀಡುವುದು (ಚಿಕ್ಕವಳಾಗಿದ್ದಾಗ ಒಂದು ರೇಡಿಯೋ ಕಾರ್ಯಕ್ರಮ ಕೂಡಾ ನೀಡಿದ್ದೆ ;-)), ಪೇಪರಿನಲ್ಲಿ ಫೋಟೋ ಬರುವುದು (ಶ್ರದ್ಧಾಂಜಲಿಯಲ್ಲ ;-)), ಇದೆಲ್ಲವೂ ನಮಗೆ ಎಷ್ಟು ಖುಶಿ ಕೊಡುತ್ತೆ ಅಲ್ಲ್ವಾ :-) ನನಗಂತೂ ಬಹಳ ಖುಶಿಯಾಯಿತು. ಪೀಠಿಕೆನೇ ಜಾಸ್ತಿ ಆಯಿತಲ್ವಾ (ಏನು ಮಾಡೋದು? ಎಲ್ಲಾ ಈ ಧಾರಾವಾಹಿಗಳ ಪ್ರಭಾವ :-) ಹಾಗಂದ ಕೂಡಲೇ ಹೆದರಿಕೊಳ್ಳಬೇಡಿ! ಇದನ್ನಂತೂ ೨-೩ ಕಂತು ಮಾಡೋಲ್ಲ :-))

ಒಂದು ಒಳ್ಳೆಯ ದಿವಸ ಗೊತ್ತಾಯಿತು. ನಾನು ಕೂಡಾ ಜೀವನದಲ್ಲಿ ಮೊದಲ ಬಾರಿಗೆ ಮೇಕಪ್ ಮಾಡಿಕೊಳ್ಳುವ, ಟಿ.ವಿಯಲ್ಲಿ ಕಾಣಿಸಿಕೊಳ್ಳುವ ಸಂಭ್ರಮದಲ್ಲಿ ರಾತ್ರಿಯೆಲ್ಲಾ ನಿದ್ದೆ ಮಾಡದೇ, ಸಂಭಾಷಣೆಯನ್ನು ಪ್ರಾಕ್ಟೀಸ್ ಮಾಡುತ್ತಾ ಕುಳಿತೆ! ಮನೆಯವರ ಕೈಯಲ್ಲಿ ‘ನಿನ್ನದ್ಯಾಕೋ ಅತಿಯಾಯಿತು’ ಎಂದು ಬೈಸಿಕೊಂಡರೂ, ಆ ಬೈಗುಳ ಕಿವಿಯವರೆವಿಗೂ ತಲುಪಲೇ ಇಲ್ಲ :-) ಯಾವಾಗ ಬೆಳಗಾಗುವುದೋ, ಯಾವಾಗ ಮೇಕಪ್ ಮಾಡಿಕೊಳ್ಳುವುದೋ, ಸಂಭಾಷಣೆಯನ್ನು ಒಪ್ಪಿಸುವುದು, ಕನ್ನಡಿಯ ಮುಂದೆ ಪ್ರಾಕ್ಟೀಸ್ ಕೂಡಾ ಮಾಡಿದ್ದಾಯಿತು! ಬೆಳಗೆದ್ದ ಕೂಡಲೇ ಮಾಡಿದ ಮೊದಲ ಕೆಲಸ, ಗೆಳೆಯ-ಗೆಳತಿಯರಿಗೆಲ್ಲಾ ನನ್ನ ಪ್ರೋಗ್ರಾಮ್ ಇದೆ, ನೋಡಿ ಎಂದು ಮೆಸೇಜ್ ಕೂಡಾ ಕಳಿಸಿದ್ದಾಯಿತು. ನಂತರ ಬೇಗ ಬೇಗ ರೆಡಿಯಾಗಿ ಎಲ್ಲರಿಗಿಂತಲೂ ಮೊದಲಿಗೆ ನಮ್ಮ ಸಂಸ್ಥೆಗೆ ಹೋದೆ. ಮೇಕಪ್ ಮಾಡಿಸಿಕೊಂಡೆ. ನನ್ನ ಮುಖದ ಗುರುತು ನನಗೆ ಸಿಗಲಿಲ್ಲ :-) (ಮೊದಲ ಬಾರಿಗೆ ಮೇಕಪ್ ಮಾಡಿದ್ದರಿಂದ ಹೀಗನ್ನಿಸುತ್ತಿದೆ ಅಂತಾ ಎಲ್ಲರೂ ಸಮಾಧಾನ ಮಾಡಿದರು. ನಾನಿನ್ನು ಮಾತಾಡಬೇಕಿತ್ತಲ್ವಾ;-) ಅದಕ್ಕೆ ಬೆಣ್ಣೆ ಹಚ್ಚುತ್ತಿರಬೇಕಂದುಕೊಂಡೆ). ತಿಂಡಿ ತಿಂದು, ನೀರು ಕೂಡಾ ಕುಡಿದು ಮೇಕಪ್ ಗಾಗಿ ಕುಳಿತಿದ್ದೆ. (ಲಿಪ್ ಸ್ಟಿಕ್ ಹೋಗಿಬಿಟ್ಟರೆ) ನಾನು ರೆಡಿಯಾದೆ.

೧೧ ಗಂಟೆಗೆ ಬರುವುದಾಗಿ ತಿಳಿಸಿದ್ದ ರೆಕಾರ್ಡಿಂಗ್ ಟೀಮಿನವರು ೧೨.೩೦ ಯಾದರೂ ಬರಲೇ ಇಲ್ಲ. ಫೋನ್ ಮಾಡಿದ್ದಕ್ಕೆ ಬೇರೆ ಕಡೆ ರೆಕಾರ್ಡಿಂಗ್ ನಡೆಯುತ್ತಿದೆ. ಅದು ಮುಗಿದ ತಕ್ಷಣವೇ ಬರುವುದಾಗಿ ತಿಳಿಸಿದರು. ೩ ಗಂಟೆಯಾದರೂ ಪತ್ತೇ ಇಲ್ಲಾ. ಬೆಳಿಗ್ಗೆ ತರಾತುರಿಯಲ್ಲಿ (ಖುಶಿಯಲ್ಲಿ), ಸರಿಯಾಗಿ ತಿಂಡಿ ತಿಂದಿರಲಿಲ್ಲ. ಹೊಟ್ಟೆ ಚುರುಗುಟ್ಟುತ್ತಿತ್ತು. ಊಟ ಮಾಡೋಣವೆಂದುಕೊಂಡರೆ ಮೇಕಪ್ ಬೇರೆ ಕರಗಿಹೋಗುವುದೆಂಬ ಭಯ ಒಂದು ಕಡೆ, ಆತಂಕದಲ್ಲಿ ಪ್ರಾಕ್ಟೀಸ್ ಮಾಡಿದ್ದ ಮಾತುಗಳೆಲ್ಲವೂ ಮರೆತು ಹೋದಂತಾಗುತ್ತಿತ್ತು. ೫ ಗಂಟೆ ಆಯಿತು. ಯಾರ ಸುದ್ದಿಯೂ ಇಲ್ಲಾ. ಕಡೆಗೆ ಧೈರ್ಯ ಮಾಡಿ ನಾನೇ ಫೋನ್ ಮಾಡಿದೆ. ಇವತ್ತ್ಯಾಕೋ ಬರಲು ಸಾಧ್ಯವಾಗುತ್ತಿಲ್ಲಾ. ಕ್ಷಮಿಸಿ. ಇನ್ನೊಮ್ಮೆ ನೋಡುವ ಅಂತಾ ಹೇಳಿಬಿಡೋದಾ!

ಇನ್ನೂ ಯಾವತ್ತು ಮುಹೂರ್ತ ಕೂಡಿ ಬರುತ್ತೋ? :-(

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆದಷ್ಟು ಬೇಗನೆ ಮುಹೂರ್ತ ಬರಲಿ. ನಿಮ್ಮ ಕಾರ್ಯಕ್ರಮ ಬರುವ ದಿನ ಸಂಪದಿಗರಿಗೆಲ್ಲ ತಿಳಿಸಿ. ನಾವೂ ನೋಡುತ್ತೇವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಹೂರ್ತ ಕೂಡಿ ಬರುತ್ತೇ ಅಂತೀರಾ? ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿ ಹೀ ಹೀ :) ;) :(
ಪೇಪರಿನಲ್ಲಿ ಫೋಟೋ ಬರುವುದು (ಶ್ರದ್ಧಾಂಜಲಿಯಲ್ಲ)>>>
ಸಕ್ಕತ್. :)
<<ಏನು ಮಾಡೋದು?>>
ಏನು ಮಾಡ್ಬೇಡಿ ಮತ್ತು ಜಾಸ್ತಿಯಾಗಿಬಿಡುತ್ತೆ. ;)
<<ನಾನು ಕೂಡಾ ಜೀವನದಲ್ಲಿ ಮೊದಲ ಬಾರಿಗೆ ಮೇಕಪ್ ಮಾಡಿಕೊಳ್ಳುವ, ಟಿ.ವಿಯಲ್ಲಿ ಕಾಣಿಸಿಕೊಳ್ಳುವ ಸಂಭ್ರಮದಲ್ಲಿ ರಾತ್ರಿಯೆಲ್ಲಾ ನಿದ್ದೆ ಮಾಡದೇ, ಸಂಭಾಷಣೆಯನ್ನು ಪ್ರಾಕ್ಟೀಸ್ ಮಾಡುತ್ತಾ ಕುಳಿತೆ>>>
ಹಿ ಹೀ ಹೀ :) :)
<<ನನ್ನ ಮುಖದ ಗುರುತು ನನಗೆ ಸಿಗಲಿಲ್ಲ>>
ನಿಮ್ಮ ಆಫೀಸ್ ಅವರಿಗೆ ಹೇಗೆ ಗೊತ್ತಾಯಿತೋ ;)
<<ಇವತ್ತ್ಯಾಕೋ ಬರಲು ಸಾಧ್ಯವಾಗುತ್ತಿಲ್ಲಾ. ಕ್ಷಮಿಸಿ. ಇನ್ನೊಮ್ಮೆ ನೋಡುವ ಅಂತಾ ಹೇಳಿಬಿಡೋದಾ>>
ಛೇ ಛೇ ಹೀಗಾಗಬಾರದಿತ್ತು , ಲಿಪ್ ಸ್ಟಿಕ್ ಹಾಗೆ ಪೇಪರ್ಗೆ ವರೆಸಿ ಇಟ್ಟಿರಿ ಇನ್ನೊಂದು ದಿನ ಉಪಯೋಗಕ್ಕೆ ಬರುತ್ತೆ ;) :) :)

(ತಮಾಷೆಗಾಗಿ )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೇನೋ ನನ್ನ ಕಷ್ಟ ತೋಡಿಕೊಂಡರೆ ಹೀಗಾ ಆಡಿಕೊಳ್ಳೋದು :-( ಆದರೂ ಲಿಪ್ ಸ್ಟಿಕ್ ಪೇಪರ್ ಗೆ ಒರೆಸಿ ಇಡುವ ಐಡಿಯಾ ಚೆನ್ನಾಗಿದೆ. ಆದ್ರೆ ಮುಖ ತೊಳೆದುಕೊಂಡು ಬಿಟ್ಟೆ. ಲಿಪ್ ಸ್ಟಿಕ್ ಹೊರಟು ಹೋಯಿತು :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಆದ್ರೆ ಮುಖ ತೊಳೆದುಕೊಂಡು ಬಿಟ್ಟೆ. ಲಿಪ್ ಸ್ಟಿಕ್ ಹೊರಟು ಹೋಯಿತು>>
ಛೇ ಛೇ ಎಂತ ಅನಾಹುತವಾಯಿತು , ನೀವು ಮೇಕಪ್ ಮಾಡಿರೋ ರೀತಿ ವಿವರಿಸೋದು ನೋಡಿದ್ರೆ ಇನ್ನೆರಡು ದಿನ ಮುಖ ತೊಳಿದೆ ಇದ್ರೂ ನಡೆಯುತ್ತಿತ್ತು , ಅವಾಗಲಾದ್ರು ನಿಮ್ ಆಫೀಸ್ ಅವರು ಗುರುತಿಸೋಕು ಸಹಾಯ ಆಗ್ತಾ ಇತ್ತು ;) :)

<ಎಲ್ಲ ಹಾಗೆ ಸುಮ್ಮನೆ ತಮಾಷೆಗಾಗಿ>>
ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರೆ! ಹೌದಲ್ವಾ. ಮೊದಲೇ ನನಗೆ ಇದು ಹೊಳಿದಿದ್ದರೆ ನೆಕ್ಸ್ಟ್ ಯಾವಾಗ ರೆಕಾರ್ಡಿಂಗ್ ಅಂತಿದ್ದರೋ ಅಲ್ಲಿಯವರೆವಿಗೂ ಮೇಕಪ್ ಅಳಿಸದೇ ಇರಬಹುದಿತ್ತು. ಛೇ! ಎಂತಹ ಕೆಲಸ ಮಾಡಿಬಿಟ್ಟೆ. :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಛೇ! ಎಂತಹ ಕೆಲಸ ಮಾಡಿಬಿಟ್ಟೆ>>
ಅಕ್ಷ್ಯಮ್ಮ್ಯ ಅಪರಾಧ ಮಾಡಿ ಬಿಟ್ಟಿದ್ದಿರಿ , ಗಟಾರದಲ್ಲಿರುವ ಕ್ರಿಮಿಕೀಟಗಳು ಅನಾವಶ್ಯಕವಾಗಿ ತಮ್ಮ ಮೇಲೆ ದಾಳಿ ಮಾಡಿದ್ದಾರೆ ಅಂತ ಕೇಸ್ ಹಾಕದಿದ್ದರೆ ಸಾಕು ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಮೇಕಪ್ ಮಾಡ್ಕೊಂಡಿದ್ದ ಫೋಟೋ ತೆಗೆದಿದ್ರೆ ಹಾಕಿ.. ನಾವ್ ಅದನ್ನ ನೋಡಿ ಖುಷಿ ಪಡ್ತೀವಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫೋಟೋ ತೆಗೆಸಿದ್ದೆ. ನನ್ನ ಜೊತೆಗೆ ರಿಸೆಪ್ಷನಿಸ್ಟ್ ಕೂಡಾ ಫೋಟೋ ತೆಗೆಸಿಕೊಂಡಿದ್ದಳು. ಅವಳ ಫೋಟೋ ಚೆನ್ನಾಗಿ ಬರಲಿಲ್ಲಾ ಅಂತಾ ಅದನ್ನು ಡಿಲೀಟ್ ಮಾಡೋಕೆ ಹೋಗಿ, ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿಬಿಟ್ಟಳು :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯವನ್ನು ಹೀಗೂ ಹೇಳಬಹುದೇ (ಕ್ಷಮಿಸಿ)
ಸುಳ್ಳು ಹೀಗೂ ಉಂಟೇ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾಗಲೂ ಫೋಟೋಗಳು ಡಿಲೀಟ್ ಆಗೋಯಿತು. ನನ್ನನ್ನು ನಂಬಿ ಪ್ಲೀಸ್ ಪ್ಲೀಸ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ನನ್ನನ್ನು ನಂಬಿ ಪ್ಲೀಸ್ ಪ್ಲೀಸ್ "

ಇಷ್ಟೊಂದು ಪ್ಲೀಸ್ಗಳು ಯಾಕೋ ಅನುಮಾನ ಮೂಡಿಸುತ್ತಿವೆ. ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನೋಪ್ಪಾ ... ಡಿಲೀಟ್ಮಾಡಿದ್ದು ಬೇರೇ ಯಾರೋ ಅಂತ ರಿಸೆಪ್ಷನಿಸ್ಟು ಹೇಳಿದ್ದಂಗಿತ್ತೂಂತೀನೀ ... :P
:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯವಾಗಲೂ ನಾನು ಡಿಲೀಟ್ ಮಾಡಿಲ್ಲ ;-) ನನ್ನ ಫೋಟೋ ಚೆನ್ನಾಗೆ ಬಂದಿತ್ತು. ಆದ್ರೆ ನಾನೇ ಅಂತಾ ಪ್ರೂವ್ ಮಾಡಬೇಕಾಗಿತ್ತು, ಅಷ್ಟೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಆದ್ರೆ ನಾನೇ ಅಂತಾ ಪ್ರೂವ್ ಮಾಡಬೇಕಾಗಿತ್ತು, ಅಷ್ಟೆ>>
ಬಿಡಿ ಅಷ್ಟೆಲ್ಲಾ ತ್ರಾಸ ಯಾಕೆ ಮತ್ತೆ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ

ನಿಮ್ಮೂರು ಕಡೆ ಕೋಲಾ ನೋಡಿಲ್ವೇನೂ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
"<<ಇವತ್ತ್ಯಾಕೋ ಬರಲು ಸಾಧ್ಯವಾಗುತ್ತಿಲ್ಲಾ. ಕ್ಷಮಿಸಿ. ಇನ್ನೊಮ್ಮೆ ನೋಡುವ ಅಂತಾ ಹೇಳಿಬಿಡೋದಾ! >>
ಇದು ಬರೀ ಶುರುವಾತ್ . ಬಣ್ಣದ ಮಾಯೆಯೇ ಅ೦ಥದ್ದು. ಇರಲಿ
ನಿಮ್ಮ ರೆಕಾರ್ಡಿ೦ಗ್ ಬೇಗನೇ ಮುಗಿಯಲಿ ,ನಾವೂ ನಿಮ್ಮನ್ನ ಟಿ.ವಿ ಪರದೆಯಮೇಲೆ ನೋಡಲು ಕಾಯುತ್ತಿದ್ದೇವೆ.
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ಯಾವಾಗ ರೆಕಾರ್ಡಿಂಗ್ ಆಗುತ್ತೋ ಆ ಅನುಭವವನ್ನು ಬರಿತೀನಿ :-) ಪ್ರೊಗ್ರಾಮ್ ಯಾವಾಗ ಅಂತ ಕೂಡಾ ಹೇಳ್ತೀನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರಾ

ಯಾವಾ ಟಿ.ವಿ ಪ್ರೋಗ್ರಾಂ, ಯಾವ ಚಾನೆಲ್ ಅಂತಾ ತಿಳಿಸಲೇಯಿಲ್ಲ. ಸುಮ್ಮನೆ ಟಿವಿ ಪ್ರೋಗ್ರಾಂ ಅಂದ್ರೆ ಹೇಗೆ ನಂಬೋದು ;) ಯಾವ ಚಾನೆಲ್ ಅಂತಾ ಹೆಸರು ಹಾಕಿ

ಎಷ್ಟು ಘಂಟೆಗೆ ಕಾರ್ಯಕ್ರಮ ಅಂತಾನೂ ಹಾಕಿ, ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮನ್ನು ಯಾಕ್ರಿ ನಾನು ನಂಬಿಸಬೇಕು? ಹಾಗೆಲ್ಲಾ ಆ ಟಿ.ವಿ. ಈ ಟಿ.ವಿ. ಅಂತಾ ಅವರ ಬಗ್ಗೆ ಹೇಳಿಕೊಂಡ್ರೆ ಆಮೇಲೆ ಕ್ರೈಮ್ ಡೈರಿಯಲ್ಲಿ ನಾನು ಬರಬೇಕಾದೀತೂ! ಅದಕ್ಕೆ ಯಾರು, ಯಾವ ಚಾನೆಲ್ ಅಂತಾ ಹೇಳ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಾದರೆ ನೀವು ಸುಳ್ಳು ಹೇಳ್ತಿದ್ದೀರಾ, ಇಲ್ಲಾಂದ್ರೆ ಯಾವ ಚಾನೆಲ್, ಯಾವ ಪ್ರೋಗ್ರಾಂ ಅಂತಾ ಹೇಳೋಕೆ ಹಿಂಜರಿಕೆ ಯಾಕೆ ?
:)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಿಮ್ಮನ್ನು ಯಾಕ್ರಿ ನಾನು ನಂಬಿಸಬೇಕು? ಹಾಗೆಲ್ಲಾ ಆ ಟಿ.ವಿ. ಈ ಟಿ.ವಿ. ಅಂತಾ ಅವರ ಬಗ್ಗೆ ಹೇಳಿಕೊಂಡ್ರೆ ಆಮೇಲೆ ಕ್ರೈಮ್ ಡೈರಿಯಲ್ಲಿ ನಾನು ಬರಬೇಕಾದೀತೂ!<<

ಇಂಚರ,
ಯಾವ ಡೈರಿ ಆದರೇನು...
ನೀವು ಟಿವೀಲಿ ಬಂದ್ರೆ ಸಾಕು..(ನಮಗೆ)...
ಮಾಮೂಲಿ ಕಾರ್ಯಕ್ರಮದಲ್ಲಿ ನಿಮ್ಮ "ಭರ್ಜರಿ ಮೇಕಪ್" ನೋಡಿ ಭಯ ಪಟ್ಟುಕೊಳ್ಳೋದಕ್ಕಿಂತ ಕ್ರೈಮ್ ಡೈರಿನೇ ಸೂಕ್ತ...
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಮಾಮೂಲಿ ಕಾರ್ಯಕ್ರಮದಲ್ಲಿ ನಿಮ್ಮ "ಭರ್ಜರಿ ಮೇಕಪ್" ನೋಡಿ ಭಯ ಪಟ್ಟುಕೊಳ್ಳೋದಕ್ಕಿಂತ ಕ್ರೈಮ್ ಡೈರಿನೇ ಸೂಕ್ತ...<<

ಎರಡು ಒಂದೇ ಎಫೆಕ್ಟ್ ಅಂತೀರಾ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೇನ್ಸಾರ್? ನನಗೆ ಸಪೋರ್ಟ್ ಮಾಡೋದು ಬಿಟ್ಟು ಈ ಅರವಿಂದ್ ಅವರಿಗೆ ಸಪೋರ್ಟ್ ಮಾಡ್ತಿದ್ದೀರಿ :-( ಅಷ್ಟೊಂದು ಭಯಾನಕವಾದ ಮೇಕಪ್ ಮಾಡಿಕೊಂಡಿರಲಿಲ್ಲ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೇ ಹೇಳ್ರಿ, ಯಾವ ಟಿವಿ ಕಾರ್ಯಕ್ರಮ, ಯಾವ ಚಾನೆಲ್ ಅಂತಾ, ನೀವು ಹೇಳದಿದ್ದರೆ ಅದು ಸುಳ್ಳು ಅಂತಾಗುತ್ತೆ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಬೆಂಬಲ ನಿಮಗೇ...ಆದರೆ ಹಾಸ್ಯ ಎಲ್ಲರಿಗಾಗಿ..

ಬೇಜಾರ್ ಮಾಡ್ಕೋಬೇಡಿ...
ಬೇಜಾರ್ ಮಾಡ್ಕೊಳ್ಳೋಲ್ಲಾಂತ ನಂಬಿಕೆಯಿಂದ ಬರೆಯುವ ಧೈರ್ಯ ಮಾಡಿದ್ದು ಅಷ್ಟೆ.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ! ಇಷ್ಟಕೆಲ್ಲಾ ಬೇಸರ ಪಟ್ಟುಕೊಳ್ಳುವ ಜಾತಿಯಲ್ಲ ನನ್ನದು. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನನ್ನ ಬೆಂಬಲ ನಿಮಗೇ...ಆದರೆ ಹಾಸ್ಯ ಎಲ್ಲರಿಗಾಗಿ..<<

ಹೆಗ್ಡೆ ಸಾರ್

ಹಾಗಾದರೆ ಅವರು ಟಿವಿ ಪ್ರೋಗ್ರಾಂ ಮಾಡ್ತಿಲ್ಲಾ, ಅನ್ನೋದು ಖರೆ ಆಗೋಯ್ತೇನು, ಅದು ಹಾಸ್ಯ ಅಂತೀರಾ, ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓದುತ್ತಾ ಹೋದಂತೆ, ಓಹೋ ಟಿವಿಯಲ್ಲಿ ಸಂಪದ ಬಂಧುವನ್ನು ನೋಡುವ ಸೌಭಾಗ್ಯ ನನಗೆ, ಅಂತ ಮನಸ್ಸಿನಲ್ಲಿ ಯೋಚಿಸುತ್ತಾ, ಮುಂದುವರೆದೆ.
ಕೊನೆಗೆ, ದೀಪಾವಳಿಗೆ ಕೊಂಡ ಪಟಾಕಿ ತುಳಸೀ ಪೂಜೆಯ ದಿನ ಟುಸ್ ಎಂದು ಕೈಕೊಟ್ಟ ಹಾಗೆ ಆಯ್ತು.

ಆಂಟೀ (ನಿಮ್ಮನ್ನಲ್ಲ ಕರೀತಿರೋದು) ಕ್ಲೈಮಾಕ್ಸ್ ಅಂತಾರಲ್ಲಾ ಹಾಗಾಯ್ತು.
:(

>>ಇನ್ನೂ ಯಾವತ್ತು ಮುಹೂರ್ತ ಕೂಡಿ ಬರುತ್ತೋ? <<
ನಾವೂ ಕಾಯ್ತೀವಿ.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆ..ಹೆ..ಹ್ಹೆ..ಒಳ್ಳೆ ತಮಾಷೆ...ಮತ್ತೆ ನೀವು ಮೇಕಪ್ ಮಾಡಿಕೊಳ್ಳುವ ಸಮಯ ಬರಲಿ...ಬ್ಯಾಸ್ರ ಮಾಡ್ಕೊಬೇಡಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ಬಿಸ್ಕೆಟ್... ;)
ಯಾರಿಗೆ ಅಂತ ಮಾತ್ರ ಕೇಳ್ಬೇಡಿ... ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕ್ರೀ ಹಾಗೆ ಹೇಳ್ತೀರಿ ಮಂಸೋರೆ?!! ನಿಜವಾಗಲೂ ನಡೆದ ಘಟನೆ :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೇ ಕತೇನೇ!
ಹೋಗ್ಲಿ, ಆಮೇಲೈದ್ಗಂಟೆಯಾದ್ಮೇಲಾದ್ರೂ ತಿಂದಿದ್ದಾಯ್ತೋ ಹೇಗೆ?
ಮನೇಲಿ ಈ ಇಂಸಿಡೆಂಟಿಗೇನಂದ್ರೋ? :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹು. ಐಸ್ ಕ್ರೀಮ್ ತಿಂದೆ. (ಹೊಟ್ಟೆ ಉರಿಯಾಗಿತ್ತಲ್ವಾ) ;-) ಮನೇಲಿ ಗೇಟ್ ಮುಂದೆ ಟಿ.ವಿ. ಆಕ್ಟ್ರೆಸ್ ಅಂತಾ ಬೋರ್ಡ್ ಹಾಕೋ ಪ್ಲಾನ್ ನಲ್ಲಿದ್ದರು, ಕ್ಯಾನ್ಸಲ್ ಮಾಡಿದ್ರು :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಮನೆಗೆ ಬಂದ ಮೇಲೆ ನಿಮ್ಮನೆಯವರು ಯಾರು ನೀವು ಅಂತ ಕೆಳಲಿಲ್ವ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಾ. ಐಸ್ ಕ್ರೀಮ್ ಜೊತೆಗೆ ಸ್ವಲ್ಪ ಲಿಪ್ ಸ್ಟಿಕ್ ತಿಂದಿದ್ದೆ. ಇನ್ನೂ ಬಂದಿಲ್ಲವಲ್ಲ ಅನ್ನುವ ಆತಂಕದಲ್ಲಿ ಸ್ವಲ್ಪ ಮೇಕಪ್, ಕಣ್ಣೀರಿನಲ್ಲಿ ಸ್ವಲ್ಪ ಮೇಕಪ್ ಅಳಿಸಿ ಹೋಗಿತ್ತು. ಹಾಗಾಗಿ ಅಷ್ಟು ಭಯಂಕರ ಅನುಭವ ನಮ್ಮನೆಯವರಿಗಾಗಲಿಲ್ಲ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) :-) ಅದಕ್ಕೆ ನನ್ನ ಫೋಟೋ ಇಲ್ಲೂ ಹಾಕಲಿಲ್ಲ. ಹಾಕಿದ್ರೆ ಇನ್ನೆಷ್ಟು ತಮಾಷೆ ಮಾಡ್ತಿದ್ರೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಛೆ ಛೇ ಹಾಗೆಲ್ಲ ಯಾರಾದ್ರೂ ಮಾಡ್ತಾರ ಇಂಚರಕ್ಕ ;) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿನ್ನೆಯಿಂದ ಎಲ್ಲರೂ ಗೋಳು ಹುಯ್ಕೊಂಡಿದ್ದೀರಾ. ಈಗ ಗಾಯದ ಮೇಲೆ ಬರೆ ಬೇರೆ! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಿನ್ನೆಯಿಂದ ಎಲ್ಲರೂ ಗೋಳು ಹುಯ್ಕೊಂಡಿದ್ದೀರಾ. ಈಗ ಗಾಯದ ಮೇಲೆ ಬರೆ ಬೇರೆ>>
ಕುರಿ ಕೊಬ್ಬಿದಷ್ಟು ಕಟುಕನಿಗೆ ಲಾಭ ಅಲ್ವಾ ಇಂಚರಕ್ಕ , ನೀವು ಗೋಳು ಅಂದ ತಕ್ಷಣ ಈ ಸಂಜೆ ಟೀ ಅಂಗಡಿ ಅಲ್ಲಿ ಕಂಡ ವೇದಾಂತ ನೆನಪಾಯಿತು "ಭಗವಂತ ಈ ಭೂಮಿಯನ್ನು ಗೋಳ ಮಾಡಿದ್ದಾನೆ , ನಾವು ಮನುಜರು ಇದನ್ನು ಗೋಳು ಮತ್ತು ಹೋಳು ಮಾಡಿದ್ದೇವೆ ಅಂತ ".

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಸ್ಕೆಟ್ಮೇಲ್ ಬಿಸ್ಕೆಟ್..... :D :P

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ ಅವರೇ..ನಿಮ್ಮ ತಟ್ಟೀಲಿ ಹೆಗ್ಗಣ ಬಿದ್ದಿದ್ದರೂ ಬೇರೆ ಅವರ ತಟ್ಟೇಲಿ ಜಿರಳೆ ಹುಡುಕ್ಕೂತ್ತೀರಲ್ರೀ.. " ನಾನು ಹಾಗೂ ಟಿ.ವಿ ಪ್ರೋಗ್ರಾಮು" ಅನ್ನೊದ್ರಲ್ಲಿ ಪ್ರೋಗ್ರಾಮು ಅನ್ನೊದು ಆಂಗ್ಲ ಪದ ಅನ್ನೋ ಸಾಮಾನ್ಯ ಜ್ನಾನ ನಿಮಗೆ ಇಲ್ವೆ? ಆಡೋ ಮಾತಲ್ಲಿ ನೀವೇ ಈ ಥರ ಆಂಗ್ಲ ಪದ ಬಳಸಿದರೆ ನಮ್ಮ ಕನ್ನಡ ಹೇಗೆ ಉದ್ಧಾರವಾದೀತು? ಕಾರ್ಯಕ್ರಮ ಅಂಥ ಸರಳವಾದ ಪದ ನಿಮಗೆ ಹೊಳೀಲಿಲ್ವೆ? ಪಾಪ ನಮ್ಮ ಬಾಳಿಗಾ ಅವರಿಗೆ ನಿಮ್ಮ ಬ್ಲಾಗ್ ನೋಡುವುದಕ್ಕೆ ಪುರುಸೊತ್ತಾಗಿಲ್ಲ ಅನ್ಸುತ್ತೆ..ಬಹುಶಃ ನಿಮಗೆ ಅರ್ಥವಾಗಿರಬೇಕು ನಾನು ಯಾಕೆ ಹೀಗೆ ಹೇಳಿದೆ ಎಂದು..ಅರ್ಥ ಅಗಿಲ್ಲ ಅಂದರೆ ನಿಮ್ಮದೇ ಆದ ಟೀಕೆಯನ್ನು ಇಲ್ಲಿ ಕೆಳಗೆ ಮತ್ತೆ ಹಾಕಿದ್ದೇನೆ. ಒಮ್ಮೆ ಕಣ್ಣು ಹಾಯಿಸಿ..ನಮಸ್ಕಾರ..
http://sampada.net/article/22037
"ಇಲ್ಲಿ ಯಾರೂ ಹೋಟೆಲಿನವನನ್ನು ದೂಷಿಸಿದ್ದು ತಪ್ಪು ಅನ್ನುತ್ತಿಲ್ಲ. ಆತ ಉದ್ದಿನ ವಡೆಯನ್ನು ಮೆದು ವಡೆ ಎಂದದ್ದು ತಪ್ಪೇ. ಎಲ್ಲರೂ ಒಪ್ಪುತ್ತೇವೆ. ಆದರೆ ಕನ್ನಡದ ಬಗ್ಗೆ ಅಷ್ಟು ಕಾಳಜಿ ಇರುವವರು, ಕನ್ನಡವನ್ನು ಮಾತಾಡುವಾಗಲೂ, ಬರೆಯುವಾಗಲೂ ಕನ್ನಡವನ್ನೇ ಬಳಸಿ ಎನ್ನುತ್ತಿದ್ದೇವೆ. ಕಂಗ್ಲೀಶಿನ ಬಳಕೆ ಏಕೆ ಬೇಕು? ಕಂಗ್ಲೀಶಿನ ಬಳಕೆ ನಿಮಗೆ ಇಷ್ಟವಾದರೆ, ಹೋಟೆಲಿನವನ ಬಗ್ಗೆ ದೂಷಣೆ ಮಾಡುವ ನೈತಿಕ ಹಕ್ಕು ನಿಮಗೆಲ್ಲಿ ಇರುತ್ತದೆ? ಈಗ ನಾನು ನಿಮ್ಮೊಂದಿಗೆ ಮಾತನಾಡುವಾಗ ಹಿಂದಿ ಮಿಶ್ರಿತ ಕನ್ನಡವನ್ನೋ, ತಮಿಳು ಮಿಶ್ರಿತ ಕನ್ನಡವನ್ನೋ ಮಾತಾನಾಡುವುದು ತಪ್ಪಾದರೆ, ಆಂಗ್ಲ ಮಿಶ್ರಿತ ಕನ್ನಡವೂ ಕೂಡ ತಪ್ಪಲ್ಲವೇ?"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಾನು ಹಾಗೂ ಟಿ.ವಿ ಪ್ರೋಗ್ರಾಮು"<<

ಪ್ರದೀಪ್

ಇನ್ನೊಬ್ಬರಿಗೆ ನೀತಿ ಕಥೆ, ಹೇಳೋವಾಗ ನೀವು ಅದೇ ಸಾಲನ್ನು ಬಳಸ್ತಿರಲ್ರೀ, ತಪ್ಪಾಗಿದ್ರೆ ಆ ತಪ್ಪಿನ ಪದ ನೀವು ಪ್ರತಿಕ್ರಿಯೆ ಮಾಡೋವಾಗಲಾದ್ರೂ ಸರಿಯಾಗಿ ಬರೆಯಬಾರ್ದಾ,
ಬಹುಶಃ ನಿಮಗೂ ಇದೇ ಅನ್ವಯಿಸುತ್ತೇನೋ >>ನಿಮ್ಮ ತಟ್ಟೀಲಿ ಹೆಗ್ಗಣ ಬಿದ್ದಿದ್ದರೂ ಬೇರೆ ಅವರ ತಟ್ಟೇಲಿ ಜಿರಳೆ ಹುಡುಕ್ಕೂತ್ತೀರಲ್ರೀ<<

;)

"ನಾನು ಹಾಗೂ ಮಾಯಾಪೆಟ್ಟಿಗೆ ಕಾರ್ಯಕ್ರಮ"

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages