ಕನ್ನಡದ ಸಿನೆಮ 'ಯೋಧ'ದಲ್ಲಿ 'ಕಾಜೋಲ್ ' ಇದ್ದಾಳೆ ಗೊತ್ತಾ!!

0

ಹ್ಞೂ ರೀ , 'ಕಾಜೋಲ್' ದರ್ಶನ್ ಅವರ 'ಯೋಧ'ದಲ್ಲಿ ಕುಣಿದಿದ್ದಾಳೆ.ಅದ್ಯಾಕೆ ಈ ವಿಷಯನ ಮುಚ್ಚಿಟ್ಟವ್ರೋ ಗೊತ್ತಿಲ್ಲಪ್ಪ ;) . ಆಕೆಯ ಮುಖವನ್ನು ತೋರಿಸುವುದಿಲ್ಲ, ಕ್ಯಾಮೆರಾ ಎತ್ತರದಲ್ಲಿ ಇಟ್ಟು ಶೂಟ್ ಮಾಡಿರಬೇಕು ಅನ್ನಿಸುತ್ತೆ, ನೋಡ್ತಾ ನೋಡ್ತಾ ಅದು 'ಫನಾ' ಚಿತ್ರದ 'ದೇಸ್ ರಂಗೀಲಾ' ಹಾಡಿನ ತರ ಕಾಣಿಸಿದ್ರೆ ಅದು ನಮ್ಮ ತಪ್ಪಲ್ಲ, ಯಾಕೆಂದ್ರೆ ಅದೇ ಹಾಡಿನ ಸೆಟ್ಟು,ಅದೇ ಡ್ರೆಸ್ಸು ಅದೇ ಪಟಾಲಮ್ಮಿನೊಂದಿಗೆ ಕಾಜೋಲ್ ಕುಣಿದಿದ್ದಾಳೆ, ಕ್ಯಾಮೆರಾ ಎತ್ತರದಲ್ಲಿದ್ದರೆ ಸ್ಟೇಜ್ನಲ್ಲಿ 'ಕಾಜೋಲ್' ತಲೆ ಬಗ್ಗಿಸಿ
ಕುಣಿಯುತ್ತಾಳೆ (ಗೊತ್ತಾಗದಿರಲಿ ಅಂತ ಇರ್ಬೇಕು ;) ) ಅದೇ ಕ್ಯಾಮೆರಾ ಕೆಳಗೆ ಬಂದ ತಕ್ಷಣ ಅಲ್ಲಿ ಚಿತ್ರದ ನಾಯಕಿ 'ನಿಖಿತ' ಹಾಜರ್!!. ನಿರ್ದೇಶಕರು ಕೇವಲ ಸ್ಟೇಜ್ನ ಮೇಲೆ ಮಾತ್ರ ಗಮನವಿಟ್ಟಿದ್ದರಿಂದಲೋ ಏನೋ , ಅವಳ ನೃತ್ಯವನ್ನು ಹಿಂದೆಯಿಂದ ನೋಡುತ್ತಾ ನಿಲ್ಲುವ 'ಆಮೀರ್ ಖಾನ್'ಗೆ ಕನ್ನಡ ಸಿನೆಮಾದಲ್ಲಿ ಕಾಣಿಸುವ ಭಾಗ್ಯ ಸಿಕ್ಕಿಲ್ಲ ;). ಹಿಂಗೆ ಹೇಳದೆ ಕೇಳದೆ 'ಕಾಜೋಲ್' ಬಂದು ಹೋಗಿದ್ದಕ್ಕೆ ಕಾರಣ 'ಆರ್ಥಿಕ ಹಿಂಜರಿತ'ವಿರಬೇಕು ;)

ಇಡಿ ಚಿತ್ರದಲ್ಲಿ ನನಗೆ ಹಿಡಿಸಿದ್ದು 'ಅವಿನಾಶ್' ಅವರ 'ರಾಜಕಾರಣಿಗಳ' ಜನ್ಮ ಜಾಲಾಡುವ ಮಾತುಗಳು ಮಾತ್ರ.
ನಿರ್ದೇಶಕ ಮಹಾಶಯ ಚಿತ್ರವನ್ನು ರೀಲುಗಟ್ಟಲೆ ಸುತ್ತಿ ,ಸುತ್ತಿದ್ದನ್ನು ಒಮ್ಮೆಯೂ ನೋಡದೆ ನಮಗೆ 'ದರ್ಶನ' ಭಾಗ್ಯ ಕರುಣಿಸಿದನೋ ಏನೋ?

ಕಡೆಗೆ ಚಿತ್ರ ಮಂದಿರದಿಂದ ಹೊರ ಬರುವಾಗ ಗೆಳೆಯ ಹೇಳಿದ 'ಇನ್ಮೆಲೇ ಕನ್ನಡ ಚಿತ್ರ ಸ್ವಲ್ಪ ದಿನ ಥಿಯೇಟರ್ನಲ್ಲಿದ್ದರೆ ಮಾತ್ರ ನೋಡುವುದು'

ರಾಕೇಶ್ ಶೆಟ್ಟಿ :)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

D :-D :lol: :ಹಹಾ:

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾಗಿ ನೋಡಿದ್ರ ರಾಕೇಶಣ್ಣ , ಇನ್ನು ಯಾರು ಯಾರು ಮಧ್ಯದಲ್ಲಿ ಬಂದು ಹೋಗಿದ್ದಾರೋ ;)
ಅಂದಹಾಗೆ ಇಂದು ರಾಖಿ ಸ್ವಯಂವರ ಶುರು ಅಂತೆ :) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಸರಿಯಾಗಿ ನೋಡಿದ್ರ ರಾಕೇಶಣ್ಣ , ಇನ್ನು ಯಾರು ಯಾರು ಮಧ್ಯದಲ್ಲಿ ಬಂದು ಹೋಗಿದ್ದಾರೋ>>

ಇನ್ಯಾರು ಬಂದಿಲ್ಲಪ್ಪ , ಬಂದ್ರೆ ನಾನ್ ನೋಡದೆ ಇರ್ತಿದ್ನ? ;)

<<ಅಂದಹಾಗೆ ಇಂದು ರಾಖಿ ಸ್ವಯಂವರ ಶುರು ಅಂತೆ>>

'ಏನ್ ಬಹಳ ಖುಷಿ ಆಗಿದ್ದಿಯಾ, ನೀನು ಹೋಗ್ತಾ ಇದ್ದೀಯ? ಏನ್ ಕತೆ? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಏನ್ ಬಹಳ ಖುಷಿ ಆಗಿದ್ದಿಯಾ, ನೀನು ಹೋಗ್ತಾ ಇದ್ದೀಯ? ಏನ್ ಕತೆ?>>>
ಮಿಸ್ ಆಯಿತು , ಮೊದಲ ಸುತ್ತು ಮುಗಿದು ಹೋಗಿದೆ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೈಲ್ಡ್ ಕಾರ್ಡ್ ಎಂಟ್ರಿ ಕೊಡು ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ವೈಲ್ಡ್ ಕಾರ್ಡ್ ಎಂಟ್ರಿ ಕೊಡು>>
ನಮಗೆಲ್ಲಿ ಸಿಗಬೇಕು ಈ ಕಾರ್ಡ್ ಗಳ ಎಂಟ್ರಿ , ನಿಮಗೆ ಸಿಕ್ಕರೆ ಸಿಗಬಹುದು . ;)
ಅಂದ ಹಾಗೆ ಸಿಕ್ಕರೂ ರೆಡ್ ಕಾರ್ಡ್ ಸಿಗಬಹುದು :) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವ್ದು ಸಿಕ್ರು, ನಿಂಗೆ ಕೊಡ್ತೀನಿ ಬಿಡು .. ಚಿಂತೆ ಮಾಡ್ಬೇಡ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಏನ್ ಕೊಟ್ರು ಕಷ್ಟನೇ ಇನ್ನು , ಅಬ್ಬ ಅಬ್ಬ ನಿನ್ನೆ ನೋಡಬೇಕಿತ್ತು ನೀವು ಆ ೧೪ ಮಂದಿಯ ಅವತಾರ , ಅವಾಂತರ ಎಲ್ಲ . :)
ಅವರು ಕೊಟ್ಟಷ್ಟು ದುಬಾರಿ ವಸ್ತು ನನ್ನಿಂದ ಆಗದು ಬಿಡಿ :(
ಅಂದಹಾಗೆ ನಿನ್ನೆಯ ರಾಖಿಯ ನಾಟಕ ಸಕತ್ ಆಗಿ ಇತ್ತು . :) ;)

ಇಂತಿ
ವಿನಯ :) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.