ಕನ್ನಡಕ್ಕೂ ಮತ್ತು ಕೆನಡಾಕ್ಕೂ ವ್ಯತ್ಯಾಸ ಗೊತಾಗ್ತಿಲ್ಲ.... ಕ್ಷಮಿಸಿ ಸರ್!!!!!!!!!!!!

0

ಹೋದ ವಾರ ನಮ್ಮ ಭಾರತ ಸರಕಾರದ ಮಾನವ ಸಂಪನ್ಮೂಲ ಸಚಿವರಾದ ಶ್ರೀ ಕಪಿಲ್ ಸಿಬಲ್ ಅವರು ಸೂಚಿಸಿದ ಸಲಹೆಯನ್ನೇನಾದರು ಜಾರಿಗೆ ತಂದರೆ ಮೇಲೆ ಹೇಳಿರುವ ಮಾತುಗಳನ್ನ ನಾವುಗಳು ನಮ್ಮ ಮುಂದಿನ ಪೀಳಿಗೆಯ ಜನರಿಂದ ಕೇಳಬಹುದು. ವಿಷಯ ಏನಪ್ಪಾ ಅಂತ ಅಂದರೆ ಕಪಿಲ್ ಸಿಬಲ್ ಅವರು ಶಾಲಾ ಮತ್ತು ಉನ್ನತ ಕಲಿಕಾ ವ್ಯವಸ್ಥೆಗಳಲ್ಲಿ ಕ್ರಾಂತಿಕಾರೀ ಬದಲಾವಣೆಗಳನ್ನು ಮಾಡಲು ಕೆಲವು ಪ್ರಸ್ತಾವನೆಗಳನ್ನು ಸೂಚಿಸಿದ್ದಾರೆ.

ಹಾಗೆ ಇವರು ಈ ಪ್ರಸ್ತಾವನೆಗಳನ್ನು ಎಲ್ಲರ ಮುಂದೆ ಇಡೋದಕ್ಕೆ ಕಾರಣ ಪ್ರೊ|| ಯಶ್ಪಾಲ್ ಅನ್ನೋರ ಸಾರಥ್ಯದಲ್ಲಿ ಇದ್ದ "ಉನ್ನತ ಶಿಕ್ಷಣದ ನವೀಕರಣ ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದ ಸಲಹಾ ಸಮಿತಿ" ನೀಡಿರುವ ವರದಿ.

ಸೋಜಿಗದ ವಿಷಯಾ ಏನಂದ್ರೆ ಈ ವರದಿಯನ್ನು ಕೇಂದ್ರ ಸರಕಾರ ಯಾವುದೇ ರಾಜ್ಯಸರಕಾರಗಳ ಅಭಿಪ್ರಾಯವನ್ನು ಪಡೆಯದೆ ತಯಾರಿಸಿದೆ ಹಾಗು ಯಾವುದೇ ಸರಕಾರದ ನಡುಬಲೆ ತಾಣದಲ್ಲಿ ಪ್ರಕಟಿಸಿಲ್ಲ. ಇದಕ್ಕೆ ಕಾರಣ ಏನು ಅನ್ನೋದನ್ನ ಅವರನ್ನೇ ಕೇಳಿ ತಿಳಿಯಬೇಕು.

ಭಾರತ ಒಂದು ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ದೇಶ ಅನ್ನೋದನ್ನೇ ಮರೆತಂತಿರುವ ಕೇಂದ್ರ ಸರಕಾರ ತನ್ನ ಸರ್ವಾಧಿಕಾರಿ ಧೋರಣೆಯನ್ನು ಇಲ್ಲಿ ತೋರಿಸಿದೆ, ಹಾಗೆಯೇ ಕೇವಲ ಇಂಗ್ಲಿಷನಿಂದ ಮಾತ್ರ ಒಂದು ದೇಶ ಉದ್ಧಾರ ಆಗೋಕೆ ಸಾಧ್ಯ ಅನ್ನೋ ಹಸಿ ಹಸಿ ಸುಳ್ಳನ್ನ ಜನರ ಜನರ ಮೇಲೆ ಹೇರೋ ಪ್ರಯತ್ನವನ್ನ ಕೇಂದ್ರ ಸರಕಾರ ಮಾಡುತ್ತಿದೆಯಾ?????

ಈ ಕೆಳಗಿನ ಕೊಂಡಿಯಲ್ಲಿ ನೋಡಿ:
http:/ /enguru.blogspot.com/2009/06/eega-kapil-sibal-avaru-enu-maadabeku.html

ಈ ಲೇಖನ ಓದಿದ ಮೇಲೆ ನನಗೆ ಅನಿಸಿದ್ದು ಏನೆಂದರೆ ಕಪಿಲ್ ಸಿಬಲ್ ಮತ್ತು ತಂಡದವರು ಅಂದುಕೊಂಡ ಪ್ರಕಾರ ಬದಲಾವಣೆಗಳಾದಲ್ಲಿ ನಮ್ಮ ಮಕ್ಕಳು ಕನ್ನಡಕ್ಕೂ ಕೆನೆಡಾಕ್ಕು ವ್ಯತ್ಯಾಸ ಗೊತ್ತಾಗುತ್ತಿಲ್ಲ ಕ್ಷಮಿಸಿ ಸಾರ್ ಅನ್ನೋ ದಿನಗಳನ್ನ ನಾವು ಕಾಣಬಹುದು......

ನೀವು ಏನಂತೀರಾ???????

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಲ್ಲಿ ಕೆಲವೊಂದು ಗಮನಿಸಬೇಕಾದ ಅಂಶಗಳಿವೆ :
೧ ) ಏಕ ರೂಪ ಶಿಕ್ಷಣ ಹೇಗೆ ರೂಪುಗೊಳಿಸುತ್ತಾರೆ : ಇದುವರೆಗಿನ ಶಿಕ್ಷಣ ಹೇಗಿದ್ದು ಎಂದರೆ ಆಯಾ ರಾಜ್ಯದ ವಿಷಯಗಳಿಗೆ ಪಠ್ಯಪುಸ್ತಕದಲ್ಲಿ ಜಾಸ್ತಿ ಮೀಸಲಾತಿ ಇತ್ತು , ಒಂದೊಮ್ಮೆ ಏಕ ರೂಪ ಶಿಕ್ಷಣವಾದರೆ ವಿಷಯ ವರ್ಗೀಕರಣ ಹೇಗೆ ಮಾಡ್ತಾರೆ ಅನ್ನೋದು .
೨ ) ರಾಜಕೀಯ ಅನ್ನೋದು ಎಲ್ಲ ಕಡೆ ಸರ್ವೇ ಸಾಮನ್ಯವಾಗಿರುವಾಗ ಕೇಂದ್ರ ತನ್ನ ಆಡಳಿತ ಇರುವ ರಾಜ್ಯಗಳನ್ನಿನ ವಿಷಯಗಳಿಗೆ ಹೆಚ್ಚಿನ ಆಧ್ಯತೆ ನೀಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ (ತುಂಬಾ ಬಾಲಿಶ ಯೋಚನೆ ಅನ್ನಿಸಿದರೂ ಯೋಚಿಸಬೇಕಾದದ್ದೇ , ಪಕ್ಷ ಬಿಟ್ಟು ಸಾರ್ವರ್ತಿಕವಾಗಿ ಯೋಚಿಸಿ ).
೩ ) ಇದುವರೆಗೂ ಕೇವಲ ಗ್ರಾಮಾಂತರ , ಪಟ್ಟಣದ ಮಕ್ಕಳು ಅಂತ ಇಬ್ಬಾಗವಾಗಿ ಹೋಗಿರುವ ಶಿಕ್ಷಣ , ರಾಜ್ಯವಾರು ಹೋಲಿಕೆಗಳಿಗೆ ಕಾರಣವಾಗಬಹುದು .
೪) ಪರೀಕ್ಷೆ ಅನ್ನೋದು ಇದ್ದರೂ ಕೆಲವು ಸಮಾಜ ಘಾತುಕರಿಂದ ಕೆಟ್ಟು ಕೆರ ಹಿಡಿಯಹೊರಟಿರುವ ಶಿಕ್ಷಣ , ಅದು ಇಲ್ಲದೆ ಎಷ್ಟು ಪರಿಣಾಮಕಾರಿಯಾಗಿ ಇರಲು ಸಾಧ್ಯ .

ಇವೆಲ್ಲಕ್ಕೂ ಸಮರ್ಪಕ ಉತ್ತರ ಸಿಕ್ಕಿದ್ದೇ ಆದಲ್ಲಿ ಇದು ಉತ್ತಮ ಅಂತ ಹೇಳಬಹುದು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಪಿ (ಲ್) ಚೇಷ್ಟೆಯಿಂದ ಆಗೋ ಅನಾಹುತಗಳ ಬಗ್ಗೆ ಇಲ್ಲೊಂದು ಬರಹ ಓದಿದೆ:
http://glocalfunda.blogspot.com/2009/06/blog-post_30.html

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.