ಎರಡನೆಯ ಸಂಚಿಕೆ - ಕಂಬಾರರೊಂದಿಗೆ

To prevent automated spam submissions leave this field empty.
ಸಂದರ್ಶನ ಇಲ್ಲೇ ಕೇಳಿ: 

"ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ. ಜಾನಪದವನ್ನು ತಮ್ಮ ಕೃತಿಗಳ ಕಸುವಾಗಿಸಿಕೊಂಡು ಜನಭಾಷೆಯಲ್ಲಿ ಕಾವ್ಯ ರಚಿಸಿದವರು ಕಂಬಾರರು. ಕನ್ನಡ ವಿಶ್ವ ವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ವಿಶ್ವ ವಿದ್ಯಾಲಯವನ್ನು ಕಟ್ಟಿದ ಕಂಬಾರರು ಈಗ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು. ಸಂಪದ ಬಳಗ ಇವರ ಸಂದರ್ಶನವನ್ನು ಪ್ರಸ್ತುತಪಡಿಸುತ್ತಿದೆ. ಚಂದ್ರಶೇಖರ ಕಂಬಾರರ ಸಂದರ್ಶನ ನಡೆಸಿಕೊಟ್ಟವರು:  ಎನ್.ಎ.ಎಂ.ಇಸ್ಮಾಯಿಲ್.

 > ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (18 MB) ಈ ಸಂದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನೂ, ಅದರಲ್ಲಿ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನೂ‌ ಸಂಪದದಲ್ಲಿ ಕಾಮೆಂಟ್ ಮೂಲಕ ನೀವು ಸೇರಿಸಬಹುದು.

ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು:
ck ಇಸ್ಮಾಯಿಲ್ ರವರೊಂದಿಗೆ ಕಂಬಾರರು.
ಚಂದ್ರಶೇಖರ ಕಂಬಾರ


ಚಂದ್ರಶೇಖರ ಕಂಬಾರ
ಸೂ: ನಿಮ್ಮ ಬಳಿಯೂ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಧ್ವನಿಮುದ್ರಣವಿದ್ದಲ್ಲಿ ಅದನ್ನು 'ಸಂಪದ'ದಲ್ಲಿ ಪ್ರಕಟಿಸಲು ನನಗೆ [:mailto:hpnadigATgmail.com|ಇ-ಮೇಯ್ಲ್ ಮೂಲಕ ಕಳುಹಿಸಿ].

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಂಪದ ಪಾಡ್‍ಕಾಸ್ಟ್ ತಂಡದಿಂದ ಎರಡನೆಯ ಬಾಲಿಗೂ ಸಿಕ್ಸರ್ ಹೊಡೆತ. ಭಾವಚಿತ್ರಗಳು ಬಹಳ ಚೆನ್ನಾಗಿವೆ. ಆದರೆ ಸ್ವಲ್ಪ ಡಾರ್ಕ್ ಆಯಿತು ಅನ್ನಿಸತ್ತೆ. ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ. ಇದನ್ನು ನಡೆಸಿಕೊಟ್ಟ ಇಸ್ಮಾಯಿಲ್ ಅವರಿಗೆ ವಂದನೆಗಳು. ಹಾಂ! ಇವೆಲ್ಲದರಲ್ಲೂ ಎಲೆ ಮರೆಯ ಕಾಯಿಯಂತಿರುವ ನಾಡಿಗರಿಗೂ ವಂದನೆಗಳು.

ಬಹಳ ಕಡಿಮೆ ಸಮಯದಲ್ಲಿ ಎರಡು ಸಂದರ್ಶನಗಳನ್ನು ಒದಗಿಸಿಕೊಟ್ಟಿದ್ದೀರಿ. ನನ್ನಿಂದಂತೂ ಏನೂ ಮಾಡಕ್ಕಾಗ್ತಿಲ್ಲ. ಮಾಡಿದ ನಿಮಗೆ ನನ್ನ ಕಡೆಯಿಂದ ವಿಶೇಷ ಧ್ಯಾಂಕ್ಸು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

ತಮ್ಮ ಹೊಗಳಿಕೆ, ಅಭಿನಂದನೆಗಳಿಗೆ ಧನ್ಯವಾದಗಳು. ಚೆನ್ನಾಗಿದೆ ಎಂದಷ್ಟೇ ಹೇಳಿದರೆ ನಮ್ಮ ಕೆಲಸದ ಗುಣಮಟ್ಟ ಎಂಥದ್ದು ಎಂಬುದು ಅರ್ಥವಾಗುವುದಿಲ್ಲ. ನಾನಂತೂ ಇದೇ ಮೊದಲ ಬಾರಿಗೆ ಈ ಬಗೆಯ ಸಂದರ್ಶನಗಳಲ್ಲಿ ತೊಡಗಿದ್ದೇನೆ. ಪತ್ರಿಕೆಗಳಿಗಾಗಿ ಸಂದರ್ಶಿಸುವಾಗ ನನ್ನ ಧ್ವನಿ ಹೇಗಿದೆ. ಎಷ್ಟು ಸ್ಪಷ್ಟವಾಗಿದೆ ಎಂಬ ಸಮಸ್ಯೆಗಳಿರುವುದಿಲ್ಲ. ಧ್ವನಿಮುದ್ರಿತ ಸಂದರ್ಶನವನ್ನು ಬರೆಹಕ್ಕೆ ಇಳಿಸುವಾಗ ಸರಿಪಡಿಸುವ ಅವಕಾಶವೂ ಇರುತ್ತದೆ. ಧ್ವನಿ ಮುದ್ರಣ ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಅದರಿಂದಾಗಿ ಕೆಲವು ಅನುಕೂಲಗಳು ಇವೆಯಾದರೂ ಮಾತಿನ ಧ್ವನಿಯನ್ನು ಬದಲಾಯಿಸಲು ಸಾಧ್ಯವೇ. ಮಾತಿನ prosodyಯನ್ನು ಹೇಗೆ ಬರೆಹದಲ್ಲಿ ತರಲು ಹೇಗೆ ಸಾಧ್ಯವಿಲ್ಲವೋ ಹಾಗೇ ಬರೆಹದ ಸ್ವಾತಂತ್ರ್ಯ ಧ್ವನಿ ಮುದ್ರಿತ ಸಂದರ್ಶನದಲ್ಲಿ ಇರುವುದಿಲ್ಲ.
ಈ ಮಿತಿಗಳ ಮಧ್ಯೆ ವೃತ್ತಿಪರ ಸಂದರ್ಶಕರಲ್ಲದ ನಾವು ಹಿರಿಯ ಸಾಹಿತಿಗಳನ್ನು ಸಂದರ್ಶಿಸುವ ಸಾಹಸ ಮಾಡುತ್ತಿದ್ದೇವೆ. ಇದನ್ನು ಇನ್ನಷ್ಟು ಚೆನ್ನಾಗಿ ಮಾಡುವುದಕ್ಕಾಗಿ ನಮಗೆ ನಮ್ಮ ಪ್ರಯತ್ನದ ಮೌಲ್ಯ ಮಾಪನ ಬೇಕಾಗಿದೆ.

ಇಸ್ಮಾಯಿಲ್

ಇಸ್ಮಾಯಿಲ್ಅವರೆ, ನಾನು ಸಾಮಾನ್ಯವಾಗಿ ಒಬ್ಬ tough critic, ಆದರೆ ಈ ಸನ್ನಿವೇಶದಲ್ಲಿ ನನಗೆ ಬರಿ positive ಅಭಿಪ್ರಾಯಗಳಿದ್ದಾವೆ... audio ತುಂಬ ಸ್ಪಷ್ಟವಾಗಿತ್ತು... ನಿಮ್ಮ ಧ್ವನಿ ನಿಜವಾಗಲೂ professional ಆಗಿತ್ತು - ಇದೇ ಮೊದಲನೆಯ ಬಾರಿ ಎಂದರೆ ನನಗೆ ನಿಜವಾಗಲೂ ಆಶ್ಚರ್ಯವಾಗುತ್ತೆ! :-)

ಇಸ್ಮಾಯಿಲ್ ಸ್ಫೂರ್ತಿ ಬಸವಣ್ಣರವರ ಈ ವಚನವೇ ??

ಬಯಿದವರೆನ್ನ ಬ೦ಧುಗಳೆ೦ಬೆ
ನಿ೦ದಿಸಿದವರೆನ್ನ ತ೦ದೆ ತಾಯಿ ಗಳೆ೦ಬೆ
ಆಳಿಗೊ೦ಡವರೆನ್ನ ಆಳ್ದವರೆ೦ಬೆ
ಜರಿದವರೆನ್ನ ಜನ್ಮ ಬ೦ಧುಗಳೆ೦ಬೆ
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆ೦ಬೆ
ಕೂಡಲ ಸ೦ಗಮದೇವ.

...ಕಲಿಯಲು ತುಂಬಾ ಇದೆ... ಅವರ unique ideas (esp creativity ಬಗ್ಗೆ) ನನಗೆ ತುಂಬ ಹಿಡಿಸಿದವು (ಪದೆ ಪದೆ ಕೇಳಿದೆ :-))

- "ಕಲೆ ಜೀವನದ ಪ್ರತಿಬಿಂಬ" ... ಇದರ ಬಗ್ಗೆ ತುಂಬ ಚೆನ್ನಾಗಿ ವಿವರಿಸಿದ್ದಾರೆ
- "ಅನುಭವೇ ಪ್ರಮಾಣ ಹೊರತು ಭೌಧಿಕತೆ ಅಲ್ಲ. ಭೌಧಿಕತೆಗೆ ಅರ್ಥಗಳಿರುತಾವೆ, ಅನುಭವವಿರೊಲ್ಲ"
- "creativity ನಾಶವಾದರೆ ನೀವು ಮನುಷ್ಯರೇನ್ರಿ?"

_____________________________

ismail ಮತ್ತು ಎಲ್ಲರಿಗು ತುಂಬ ತುಂಬ thanks! ಒಂದು ಚಿಕ್ಕ ಸಲಹೆ: podcast + ಚಿತ್ರಗಳೊಂದಿಗೆ,interviewee ಅವರ background summary ಇದೆ, ಅದರೊಂದಿಗೆ, ಅವರ biography/works/ಇತ್ಯಾದಿಗಳಿಗೆ links ಇದ್ದರೆ ಚೆನ್ನಾಗಿರುತಿತ್ತು ಅನ್ಸುತ್ತೆ.

---------------------------
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
---------------------------
typing/spelling ತಪ್ಪಿದ್ದರೆ ದಯವಿಟ್ಟು ತಿದ್ದಿ... ...ಇಲ್ಲದಿದ್ದರೆ ನಾನು ಕಲಿಯುವುದು ಹೇಗೆ! ---------------------------

ಒಂದೆರಡು ತಪ್ಪುಗಳನ್ನ ತಿದ್ದಿದೀನಿ ನೋಡ್ರಿ :)

ಅದರೊಂದಿಗೆ, ಅವರ biography/works/ಇತ್ಯಾದಿಗಳಿಗೆ links ಇದ್ದರೆ ಚೆನ್ನಾಗಿರುತಿತ್ತು ಅನ್ಸುತ್ತೆ.

ಇದನ್ನ ಮುಂದಿನ ಸರ್ತಿಯಿಂದ ಸೇರಿಸೋಣವಂತೆ. ಸಾಮಾನ್ಯವಾಗಿ ಕನ್ನಡ ಪುಸ್ತಕಗಳನ್ನೋದಿದವರಿಗೆ ಕಂಬಾರರು, ತೇಜಸ್ವಿಯವರು ಮತ್ತು ಅನಂತಮೂರ್ತಿಯವರಂತಹ ಸಾಹಿತಿಗಳ ಬಗ್ಗೆ ತಿಳಿಸುವ ಅಗತ್ಯ ಬರುವುದಿಲ್ಲ. ಆದರೆ ಇತ್ತೀಚೆಗೆ ನಮ್ಮ ನಿಮ್ಮಂತ ಕೆಲವರು ಕನ್ನಡ ಪುಸ್ತಕಗಳನ್ನು ಹೆಚ್ಚಾಗಿ ಓದಿಲ್ಲದಿರುವುದರಿಂದ ನೀವು ಕೊಟ್ಟಿರೋದು ಒಳ್ಳೆ ಐಡಿಯ. ಮುಂದಿನ podcast ನಿಂದ ತಪ್ಪದೇ ಚಾಲನೆಗೆ ತರುತೇವೆ. :)

ಇನ್ನೊಂದು ಮಾಹಿತಿ : ಮುಂದಿನ podcast ಅನಂತಮೂರ್ತಿಯವರೊಂದಿಗಿನ ಸಂದರ್ಶನ ;) ಸದ್ಯದಲ್ಲೇ ನಿರೀಕ್ಷಿಸಿ!

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಹರಿಯವರೆ, ಕಂಬಾರರು ಒಳ್ಳೇ ಹಾಡುಗಾರರೂ ಕೂಡ...ಅವರ ಒಂದು ಗೀತೆಯೊಂದನ್ನೂ ಧ್ವನಿಮುದ್ರಿಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಅವರ ಕಂಠಸಿರಿ ಕೇಳುವ ಭಾಗ್ಯ ಎಲ್ಲರಿಗೂ ಲಭ್ಯವಾಗುತ್ತಿತ್ತು...

ಮತ್ತೊಮ್ಮೆ ಕಂಬಾರರನ್ನು ಸಂದರ್ಶನ ಮಾಡುವಾಗ ಖಂಡಿತ ಕೇಳಿ ನೋಡಬಹುದು. ಅವರ ಮನೆಯಿರುವುದು ನಮ್ಮ ಮನೆಯ ಹತ್ತಿರವೇ. ಹೋಗೋದೇನೂ ಕಷ್ಟ ಆಗೋದಿಲ್ಲ. ಅವರು ಸೈ ಅಂದ್ರೆ ಆಯ್ತು, ನಮ್ಗೇನು ರೆಕಾರ್ಡ್ ಮಾಡ್ಲಿಕ್ಕೆ? ;)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಹರಿಯವರ ಮತ್ತು ಇಸ್ಮಾಯಿಲ್ ಅವ್ರ ಶ್ರಮ ಸಾರ್ಥಕ. ಒಂದೊಳ್ಳೆಯ ಸಂದರ್ಶನ. ಕೆಲವೊಮ್ಮೆ ಸಣ್ಣ -ಪುಟ್ಟ ತಪ್ಪುಗಳಾಗುವುದು ಸಹಜ, ತಿದ್ದಿಕೊಂಡರೆ ಸಾಕಸ್ಟೆ. (ಚಿತ್ರಗಳು ಡಾರ್ಕ್ ಆಗಿದೆ ಎನುವ ಪ್ರತಿಕ್ರಿಯೆಗೆ ) ಬರಹದೊಂದಿಗೆ ಇರುವ ಚಿತ್ರಗಳು ಮತ್ತು ಸಂದರ್ಶನದ ಧ್ವನಿ ಮುದ್ರಿಕೆ ಲಿಂಕ್ ಕೊಟ್ಟಿದ್ದು, ಚಿಕ್ಕ ಬರಹದಲ್ಲಿ ಚುಟುಕಾಗಿ ಕಂಬಾರರರ ಬಗ್ಗೆ ತಿಳಿಸಿದ್ದು ನನಗೆ ಹಿಡಿಸಿತು . ನಾಡು ನುಡಿ ಬಗ್ಗೆ ಕಂಬಾರರ ಅಭಿಮಾನ ಮತ್ತು ಹರಿ ಇಸ್ಮಾಯಿಲ್ ಅವ್ರ ಸೇವೆಯೂ ಸ್ತುತ್ಯಾರ್ಯ .. ಒಂದೊಳ್ಳೆಯ ಸಮಯೋಚಿತ- ಸಾಂದರ್ಭಿಕ ಲೇಖನ ಧನ್ಯವಾದಗಳು..