ಕಾಗೆಯ ಮರಿಗೂ ಬಂತು ಗತ್ತು!!!

4.333335

ಸಖೀ,

ಕಾಗೆಯ ಗೂಡಿನಲಿ ಕೋಗಿಲೆ ಮರಿಗಿತ್ತು ಗಮ್ಮತ್ತು
ಅದರ ಸಂಗದಲಿ ಕಾಗೆಯ ಮರಿಗೂ ಬಂತು ಗತ್ತು

ಕೋಗಿಲೆ ಮರಿ ಹಾಡಲು ಕೇಳಿದವರಿಗೆಲ್ಲಾ ಆನಂದ
ಅದನ್ನು ಕೇಳಿ ಕಾಗೆ ಹಾಡಲು ಏನಿಹುದದರಲ್ಲಿ ಅಂದ

ಸಹವಾಸದಿಂದಲೇ ಸಾಧಿಸಲೇನೂ ಆಗದು ಇದು ಸತ್ಯ
ಸಹವಾಸವೇ ಎಲ್ಲರ ಕೆಡಿಸುವುದೆಂಬುದೂ ನಿಜ ಮಿಥ್ಯ

ನಾಯಿ ಬೆಕ್ಕುಗಳು ಒಂದೇ ಮನೆಯಲ್ಲಿ ಬದುಕಿದ್ದರೇನು
ನಾಯಿ ಬೆಕ್ಕಾಗುವುದೇನು ಆ ಬೆಕ್ಕು ಬೊಗಳುವುದೇನು

ತನ್ನ ಅರಿವು ತನಗಿದ್ದು ಸದಾ ತನ್ನ ಗುರಿಯ ನೆನಪಿದ್ದು
ಮುಂದೆ ಸಾಗುತಿರಲು ತೋರಿಸಬಹುದು ಎಲ್ಲರೂ ಗೆದ್ದು

ಅವರಿವರಂತೆ ನೀನಾಗ ಬೇಕೆಂದು ಎಂದಿಗೂ ಅನಬೇಡ
ಅವರಿವರು ನಿನ್ನಂತೆ ಇರಬೇಕೆಂದೂ ನೀನು ಕಾಡಬೇಡ

ನೀನು ನೀನಾಗಿರುವುದಕೇ ನಿನಗೆ ನಾನೀಡುತಿರುವೆ ಬೆಲೆ
ನಾ ಅವರಿವರಂತೆ ಇರಲು ಹೇಗರಿಯುತ್ತಿದ್ದೆ ನೀ ನನ್ನ ಕಲೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಕವನ ಓದಿ ನಾನು ಕವನ ಬರೆದೆ .........ಚೆನ್ನಾಗಿದೆ .

*********

ಸಂಪಿಗೆಯಂತೆ ಮಲ್ಲಿಗೆಯಿಲ್ಲ
ಮಲ್ಲಿಗೆಯಂತೆ ಗುಲಾಬಿಯಿಲ್ಲ
ವೈವಿಧ್ಯತೆಯೇ ಎಲ್ಲಾ.

ಸಂಪಿಗೆಯಂತೆ ಸಂಪಿಗಿಯೇ ಇಲ್ಲಾ
ಹಾಗೇ ಮನುಷ್ಯರಂತೆ ಮನುಷ್ಯರು
ನನ್ನಂತೆ ನೀನಿಲ್ಲ ನಿನ್ನಂತೆ ನಾನಿಲ್ಲ
ನಾವಿಬ್ಬರೂ ಸಮರಲ್ಲ
ವೈವಿಧ್ಯತೆಯೇ ಎಲ್ಲಾ.

ಮಲ್ಲಿಗೆಯಂತೆ ಮಲ್ಲಿಗೆಯಿಲ್ಲ
ಗುಲಾಬಿಯಂತೆ ಗುಲಾಬಿಯಿಲ್ಲ
ಸರಿಯಾಗಿ ನೋಡಿದರೆ
ಬೇರೆ ಬೇರೆಯೇ ಎಲ್ಲಾ
ಒಂದೇ ಹೂವಿನ ದಳಗಳೂ
ಒಂದಾಗಿಲ್ಲ ,ವೈವಿಧ್ಯತೆಯೇ ಎಲ್ಲಾ.
ಎಲ್ಲದರಲ್ಲೂ ಏಕರೂಪತೆಯಿದೆ
ಆದರೆ ಒಂದೇ ಅಲ್ಲಾ
ವೈವಿಧ್ಯತೆಯೇ ಎಲ್ಲಾ.

"ನಮ್ಮ ನಮ್ಮ ಸ್ವರೂಪ ಸ್ವಭಾವದ
ಪರಿಪೂರ್ಣ ಅಭಿವ್ಯಕ್ತಿಯೇ ನಮ್ಮ ಮೋಕ್ಷ "
ಜೀವಿಗಳಲಿ ಏಕರೂಪತೆ ಇದೆ
ಆದರೇ ಒಂದೇ ಅಲ್ಲಾ ,ವೈವಿಧ್ಯತೆಯೇ ಎಲ್ಲಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಸುಂದರವಾದ ಕವನಗಳು..ಹೆಸರಿಗೆ ಎರಡು ಕವನಗಳೆ ಆದರು ಇರುವುದಲ್ಲಿ ವಿಷಯಗಳ ವೈವಿಧ್ಯತೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಾಲತಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಭಾಕರ್,

ಧನ್ಯವಾದಗಳು.
ನಿಮ್ಮ ಕವನಕ್ಕೆ ಮೆಚ್ಚುಗೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಸರ್,

ಯಾವ ಕಾಗೆ’ಮರಿ’ಗೆ ಸಾರ್ ಗತ್ತು ಬಂದದ್ದು? :)

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್,

>>ಯಾವ ಕಾಗೆ’ಮರಿ’ಗೆ ಸಾರ್ ಗತ್ತು ಬಂದದ್ದು? <<

ಕೋಗಿಲೆಯ ಸಂಗದಲಿದ್ದ ಕಾಗೆ ಮರಿಗೆ ಗತ್ತು ಬಂದದ್ದಂತೆ.

ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಸು ಸರ್
ನಿಮ್ಮ ಕವನಗಳು ಅತಿ ಸು೦ದರವಾಗಿವೆ. ನಿಜ. ನಾವು ನಾವಾಗಿರಬೇಕು. ಯಾರೋ ಬೇರೆಯವರು ಹೇಳಿದ೦ತೆ ಅವರ೦ತಾಗುವುದು ಬೇಡ. ಕಾಗೆ ಕಾಗೆಯೇ. ಕೋಗಿಲೆ ಕೋಗಿಲೆಯೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಸಂಪದಕ್ಕೆ ಬಂದುದು ಒಂದೆರಡು ದಿನ ತಡವಾಗಿದೆ ಅಷ್ಟೆ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನೀವು ಸಂಪದಕ್ಕೆ ಬಂದುದು ಒಂದೆರಡು ದಿನ ತಡವಾಗಿದೆ ಅಷ್ಟೆ <<

ಯಾಕ್ರೀ ಈ ಮಾತು ನಾಗೇಂದ್ರ? ಗೂಡಾರ್ಥ ಏನು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವ ಕಾಗೆ’ಮರಿ’ಗೆ ಸಾರ್ ಗತ್ತು ಬಂದದ್ದು, ಗೊತ್ತಾಗ್ತಿತ್ತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗೇಂದ್ರ,

ನಾನು ದಿನಾ ಮುಂಜಾನೆ ನನ್ನ ಕೊಬ್ಬು ಕರಗಿಸಲು ವಾಯು ವಿಹಾರಕ್ಕೆ ಹೋಗುವಾಗ ಕೋಗಿಲೆಗಳ ಹಾಡುಗಳನ್ನು ಆಲಿಸುತ್ತಾ ಇರುತ್ತೇನೆ.
ಅಂತೆಯೇ ನಿನ್ನೆಯೂ ಕೂಡಾ ಆಯ್ತು, ಅದರೆ ಜೊತೆಗೆ, ಮನೆಯ ಮಾಡಿನ ಮೇಲೆ ಕೂತಿದ್ದ ಕಾಗೆಯ ಸ್ವರವೂ ಕೇಳಿಬಂದಾಗ ಈ ಕವನಕ್ಕೆ ಸ್ಪೂರ್ತಿ ಸಿಕ್ತು. ಕೋಗಿಲೆಯ ಮರಿ ಕಾಗೆಯ ಗೂಡಲ್ಲಿ ಇದ್ದರೂ ಅದರ ಸ್ವರ ಕಾಗೆಯ ಸ್ವರದಂತೆ ಇಲ್ಲವಲ್ಲಾ ಅಂತ ಪ್ರಶ್ನೆ ಮೂಡಿತು.
ಮುಂದೆ ಏನಾಯ್ತಂತ ನಿಮಗೆ ಗೊತ್ತೇ ಇದೆ.

ನಾನು ಹೆಚ್ಚಾಗಿ ಬರೆಯುವ ರಾಜಕೀಯ ನೇತಾರರ ಬಗ್ಗೆ ಪರೋಕ್ಷವಾಗಿ ಬರೆದ ಕವನ ಇದಲ್ಲ.
ಅವರ ಬಗ್ಗೆ ನಾನು ನೇರವಾಗಿಯೇ ಬರೆಯುತ್ತೇನಲ್ಲ.

ನಿಮಗೇಕೋ ಅನುಮಾನ ಬಂದಿದೆ.
ನಿಮ್ಮಂತೆಯೇ ಇನ್ನಾರಿಗೋ ಬಂದಂತಿದೆ.

ಹಾಗಾಗಿ ಈ ಕವನಕ್ಕೆ "ಧ್ವಜ ವಂದನೆ" ಸಲ್ಲಿಸಿದ್ದಾರೆ.
ಈ ಕವನಕ್ಕೆ ೨೧ ಸುತ್ತಿನ ತುಪಾಕಿ ಮರ್ಯಾದೆಯೂ ಸಿಗಬಹುದೇನೋ...
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾರ್,

ಧ್ವಜ ತೋರಿಸಿದ ಎಲ್ಲ ಬರಹಗಳು ಮಾಯ ಆಗಲ್ಲ...
ಕವನ ಚೆನ್ನಾಗಿದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸ್ ,

>>ಧ್ವಜ ತೋರಿಸಿದ ಎಲ್ಲ ಬರಹಗಳು ಮಾಯ ಆಗಲ್ಲ...>>
ಅಂದ್ರೆ ಏನು? ಕವನಕ್ಕೆ ಅಕ್ಷೇಪಗಳು ಬಂದಿವೆ ಅಂತ ಅರ್ಥನಾ? ಸಂಪದ ಟೀಂನವರ ಧ್ವಜ ತೋರಿಸಿ ಎಚ್ಚರಿಕೆ ನೀಡ್ತಾರಾ?

ಆಸು ಸರ್,

ನನ್ನ ತಮಾಷೆಯ ಪ್ರತಿಕ್ರಿಯೆಯಿಂದ ನಿಮಗೆ ತೊಂದರೆ ಆಗಿದ್ದೇಯೇ? ಹಾಗೇನಾದರೂ ಆಗಿದ್ದಲ್ಲಿ ಕ್ಷಮಿಸಿ ಸರ್.

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು...

ಬಾವುಟ ತೋರೋದು ಅಂದ್ರೆ ಬರೆದಿರೋ ಪೋಸ್ಟ್/ಪ್ರತಿಕ್ರಿಯೆಗೆ ಯಾರದೋ ಆಕ್ಷೇಪಣೆ ಇದೆ ಅಂತ ಅರ್ಥ...
ಬಾವುಟ ತೋರೋದು ಅಂದ್ರೆ "ಮಾಡರೇಟರ್‍ಗಳೇ, ಇಲ್ಲಿ ಬರೆದಿರೋದು ಸಂಪದದಂತ ಪಬ್ಲಿಕ್ ಫೋರಂ‍ನಲ್ಲಿ ಹಾಕೋ ಹಾಗಿಲ್ಲ, ನಿಮ್ಮ ಗಮನಕ್ಕೆ ಅಂತ"...
ಯಾರು ಬೇಕಾದ್ರೂ ಬಾವುಟ ತೋರಿಸಬಹುದು - "ನಿರ್ವಾಹಕರ ಗಮನಕ್ಕೆ" ಅಂತ ಕೊಂಡಿ ಇದೆ ನೋಡಿ...

ಮಾಡರೇಟರ್‍ಗಳು ಆಕ್ಷೇಪಣೆ ಸರಿ ಅನಿಸಿದರೆ, ಆ ಪೋಸ್ಟ್/ಪ್ರತಿಕ್ರಿಯೆ ಕಿತ್ತುಹಾಕ್ತಾರೆ...

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನನ್ನ ತಮಾಷೆಯ ಪ್ರತಿಕ್ರಿಯೆಯಿಂದ ನಿಮಗೆ ತೊಂದರೆ ಆಗಿದ್ದೇಯೇ? ಹಾಗೇನಾದರೂ ಆಗಿದ್ದಲ್ಲಿ ಕ್ಷಮಿಸಿ ಸರ್.<<

ಸಾತ್ವಿಕ್,

ತಮಾಷೆಯ ಪ್ರತಿಕ್ರಿಯೆಗಳಿಂದ ಯಾವತ್ತೂ ತೊಂದರೆ ಇಲ್ಲ ನನಗೆ.
ಅಲ್ಲದೆ ನಿಮ್ಮ ಪ್ರತಿಕ್ರಿಯೆಗೆ ನಾನು ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಮರು ಪ್ರತಿಕ್ರಿಯೆ ನೀಡಿದ್ದೇನೆ.
ಸಾತ್ವಿಕರ ಸಾತ್ವಿಕ ಪ್ರತಿಕ್ರಿಯೆಗಳಿಂದ ನನಗಾವ ತೊಂದರೆಯಾದೀತು ಹೇಳಿ.
ಹಾಗಾಗಿ ಕ್ಷಮಿಸುವ ಪ್ರಮೇಯವೇ ಇಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, ಇಳಾ, ಓದಿ, ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್ ಹೆಗ್ಡೆಯವರೇ..
ಚೆನ್ನಾಗಿದೆ ನಿಮ್ಮ ವಿಶ್ಲೇಷಣೆ..

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸತ್ಯಚರಣ್,

ನೀವೆಲ್ಲಾ ಮೆಚ್ಚುಗೆಯ ಮಾತಾಡಿದ್ದೀರಿ.
ಆದರೆ ಯಾರೋ ಇದಕ್ಕೆ "ಧ್ವಜ" ತೋರಿಸಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ತನ್ನ ಅರಿವು ತನಗಿದ್ದು ಸದಾ ತನ್ನ ಗುರಿಯ ನೆನಪಿದ್ದು
ಮುಂದೆ ಸಾಗುತಿರಲು ತೋರಿಸಬಹುದು ಎಲ್ಲರೂ ಗೆದ್ದು"

ಈ ಸಾಲುಗಳು ತುಂಬಾ ಅರ್ಥಪೂರ್ಣವಾಗಿವೆ. ನಿಮ್ಮ ಕವಿತೆಯ ಕಾಯಕ ಸದಾ ಹೀಗೇ ಮುಂದುವರೆಯಲಿ.

>>ಈ ಸಾಲುಗಳು ತುಂಬಾ ಅರ್ಥಪೂರ್ಣವಾಗಿವೆ.<<
ಧನ್ಯವಾದಗಳು ಮಂಜುನಾಥ್,

ನೀವೆಲ್ಲಾ ಮೆಚ್ಚುಗೆಯ ಮಾತಾಡಿದ್ದೀರಿ.
ಆದರೆ ಯಾರೋ ಇದಕ್ಕೆ "ಧ್ವಜ" ತೋರಿಸಿದ್ದಾರೆ.

>>ನಿಮ್ಮ ಕವಿತೆಯ ಕಾಯಕ ಸದಾ ಹೀಗೇ ಮುಂದುವರೆಯಲಿ.<<
ಅದು ನಿಲ್ಲುವುದಿಲ್ಲ. ಓದುಗರು ಇಲ್ಲದೇ ಮೂವತ್ತು ವರುಷ ಮುಂದುವರೆದದ್ದು, ಈಗ ನಿಮ್ಮಂತ ಸಹೃದಯಿ ಓದುಗರು ಇರುವಾಗ ಹೇಗೆ ನಿಲ್ಲುತ್ತದೆ ಹೇಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಂದಕರಿರಬೇಕಯ್ಯಾ,,,,,, ಹಂದಿಗಳಿದ್ದಂತೆ,, ಕೇಳಿದ್ದೀರಲ್ಲವೇ ? ನಿಂದಕರಿದ್ದಾಗಲೇ ನಮ್ಮ ತಪ್ಪುಗಳು ಗೊತ್ತಾಗಿ ನಾವು " ಪುಟಕ್ಕಿಟ್ಟ" ಚಿನ್ನದಂತಾಗುವುದು.
ಅಲ್ಲವೇ ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯಂ ಶಿವಂ ಸುಂದರಂ.ಇಷ್ಟೆ ಸಾಕಲ್ಲವೆ ನಿಮ್ಮ ಕಾವ್ಯ ವಿಶ್ಲೇಷಣೆಗೆ, ಜೊತೆಗೆ ಸೇರಿಸಬಹುದಾದರೆ 'ಸರಳಂ'.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಂಜುನಾಥ್, ನಿಮ್ಮ ಉಪಮೆಗಳನ್ನೊಳಗೊಂಡ ಮೆಚ್ಚುಗೆಯ ಮಾತುಗಳಿಗೆ,

ಆಶ್ಚರ್ಯ ಅಂದರೆ, ನೀವೆಲ್ಲಾ ಮೆಚ್ಚುಗೆಯ ಮಾತಾಡಿದ್ದೀರಿ, ಆದರೆ, ಯಾರೋ ಇದಕ್ಕೆ "ಧ್ವಜ" ತೋರಿಸಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್, ಕವನ ಚೆನ್ನಾಗಿದೆ, ಆದರೆ flag ಯಾಕೆ ಆಗಿದೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್ ಕವಿತೆ ಚೆನ್ನಾಗಿದೆ........

ಧ್ವಜ ಹಾಕುವವರು ಯಾರೆಂದು ಗೊತ್ತಾಗೊಲ್ಲವೇ? ಅದಕ್ಕೇ ಧೈರ್ಯದಿಂದ ಹಾಕುತ್ತಾರಾ? ಅಥವಾ ತುಂಬಾ ಚೆನ್ನಾಗಿದೆ ಎಂದು "ಧ್ವಜ" ಹಾಕಿದ್ದಾರಾ? ಏನಾದರಾಗಲೀ, ಮೆಚ್ಚುವವರೆಲ್ಲಾ ಮೆಚ್ಚೇ ಇದ್ದೀವಲ್ಲಾ ? ನಿಮ್ಮ ಕವಿತೆಗಳ ರಸದೌತಣ ಸದಾ ಮುಂದುವರೆಯುತ್ತಿರಲಿ........

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲ,

>>ಸುರೇಶ್ ಕವಿತೆ ಚೆನ್ನಾಗಿದೆ........

- ಧನ್ಯವಾದಗಳು

>>ಧ್ವಜ ಹಾಕುವವರು ಯಾರೆಂದು ಗೊತ್ತಾಗೊಲ್ಲವೇ?

- ನಿರ್ವಾಹಕರಿಗೆ ಮಾತ್ರ ಗೋತ್ತಾಗುತ್ತದೆ.

>>ಅದಕ್ಕೇ ಧೈರ್ಯದಿಂದ ಹಾಕುತ್ತಾರಾ? ಅಥವಾ ತುಂಬಾ ಚೆನ್ನಾಗಿದೆ ಎಂದು "ಧ್ವಜ" ಹಾಕಿದ್ದಾರಾ?
- ಏನೋ ಗೊತ್ತಾಗ್ತಾ ಇಲ್ಲ. ಹೇಳಿದ್ರೆ ತಾನೇ ಗೊತ್ತಾಗೋದು. ಏನೇ ಆಗಲಿ ಓದಿದ್ದಾರಂದ ಹಾಗಾಯ್ತು. ಮೆಚ್ಚಿಲ್ಲ ಅಂತನೂ ಗೊತ್ತಾಯ್ತು.

>>ಏನಾದರಾಗಲೀ, ಮೆಚ್ಚುವವರೆಲ್ಲಾ ಮೆಚ್ಚೇ ಇದ್ದೀವಲ್ಲಾ ? ನಿಮ್ಮ ಕವಿತೆಗಳ ರಸದೌತಣ ಸದಾ ಮುಂದುವರೆಯುತ್ತಿರಲಿ........

- ಇದು ಮುಂದುವರಿಯುತ್ತಲೇ ಇರುತ್ತದೆ. ಇದಕೆ ಸಂಶಯ ಬೇಡ. ಓದಿ ಪ್ರತಿಕ್ರಿಯಿಸುತ್ತಾ ಇರಬೇಕು ನಿಮ್ಮಂತಹ ಸಹೃದಯರು.

ಬಾವುಟ ಹಿಡಿದಿದ್ದಾರಾ? ತಲೆ ಕೆಡಿಸಿಕೊಳ್ಳಬೇಡಿ.
ನಿಮ್ಮ ಕವನ ಕೃಷಿಯನ್ನು ಮುಂದುವರಿಸಿ.
ಕವನ ಚೆನ್ನಾಗಿದೆ.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೀತಾ,

>>ಬಾವುಟ ಹಿಡಿದಿದ್ದಾರಾ? ತಲೆ ಕೆಡಿಸಿಕೊಳ್ಳಬೇಡಿ.

- ತಲೆ ಕೆಡಿಸಿಕೊಳ್ತಾ ಇಲ್ಲ. ನಗ್ತಾ ಇದ್ದೀನಿ...ನಗ್ತಾ ಇರ್ತೀನಿ...ಅದಕ್ಕಾಗೇ ಈ ನಗುವ ಹೊಸ ಚಿತ್ರ.

>>ನಿಮ್ಮ ಕವನ ಕೃಷಿಯನ್ನು ಮುಂದುವರಿಸಿ.

- ಮುಂದುವರಿಸುತ್ತೇನೆ. ನಿಮ್ಮೆಲ್ಲರ ಹಾರೈಕೆಯೊಂದಿಗೆ

>>ಕವನ ಚೆನ್ನಾಗಿದೆ.

- ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಸರಿ...
ನೀವು ನಿಮಗೆ ದ್ವಜ ತೋರಿಸಿರೋದನ್ನ... ನಿಜವಾಗಲೂ ಕಡೆಗಣಿಸಿದ್ದರೆ... ಅದನ್ನೇ ಪ್ರತಿ ಕಮೆಂಟಲ್ಲೂ ಒತ್ತಿ ಒತ್ತಿ ಹೇಳ್ತಾ ಇರ್ಲಿಲ್ಲಾ... :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ್,

>>ಎಲ್ಲಾ ಸರಿ...
ನೀವು ನಿಮಗೆ ದ್ವಜ ತೋರಿಸಿರೋದನ್ನ... ನಿಜವಾಗಲೂ ಕಡೆಗಣಿಸಿದ್ದರೆ... >>

ಅದನ್ನು ನಾನು ನಿಜವಾಗಿಯೂ ಕಡೆಗಣಿಸಿಲ್ಲ. ಯಾಕೆಂದರೆ ಅದು ಕಡೆಗಣಿಸುವ ವಿಷಯ ಅಲ್ಲ. ಮೆಚ್ಚುಗೆಯಂತೆ ಅದನ್ನೂ ಸ್ವೀಕರಿಸಿ ಪ್ರತಿಕ್ರಿಯಿಸಬೇಕು ಅನ್ನುವುದು ನನ್ನ ಅನಿಸಿಕೆ. ಆತ್ಮ ವಿಮರ್ಶೆಗೆ ಅದು ಅವಶ್ಯಕ. ಕಡೆಗಣಿಸಿ ಮುಂದುವರೆದರೆ, ನಮ್ಮನ್ನು ನಾವು ಅರಿಯುವುದು ಕಷ್ಟ.

>>ಅದನ್ನೇ ಪ್ರತಿ ಕಮೆಂಟಲ್ಲೂ ಒತ್ತಿ ಒತ್ತಿ ಹೇಳ್ತಾ ಇರ್ಲಿಲ್ಲಾ... <<

ನನ್ನ ೧೩ ಮರು ಪ್ರತಿಕ್ರಿಯೆಗಳ ಪೈಕಿ ಬರೇ ನಾಲ್ಕರಲ್ಲಿ ನಾನು ಒತ್ತಿ ಒತ್ತಿ ಹೇಳಿರಬಹುದು. ನನ್ನ ಪ್ರತಿಯೊಂದು ಪ್ರತಿಕ್ರಿಯೆಯಲ್ಲೂ ಅಲ್ಲ.

ನೀವು ಬೇಸರದ ಮುಖ ತೋರಿಸಿದ್ದೀರಿ. ನಿಮ್ಮ ಮನಸ್ಸಿಗೆ ಘಾಸಿಯಾಗಿದ್ದರೆ ಕ್ಷಮಿಸಿ. ಯಾರ ಮನಸ್ಸಿಗೂ ನೋವು ಮಾಡಲು ನಾನು ಬರೆಯುವುದಲ್ಲ. ಬರೆಯುವುದಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಟ್ಟಿನಲ್ಲಿ ದ್ವಜ ಜೋರಾಗಿಯೇ ಹಾರಡುತ್ತಿರುವಹಾಗಿದೆ ಅಲ್ವಾ ಸರ್ :)
ಕವನ ಅಂತು ಸಕ್ಕತ್ , ಮೆಚ್ಚುಗೆಯ ಧ್ವಜ ಕೊಡಬಹುದಾದರೆ ನನ್ನದು ೨ ಫ್ಲಾಗ್ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ವಿನಯ್.
ಮತ್ತೆ ಧ್ವಜದ ಮಾತು ಯಾಕೆ?

ಅದ್ರ ಬಗ್ಗೆ ಎಷ್ಟು ಬಾರಿ ಬರೆದೆನೆಂದು ಕಡೆಗೆಣಿಸುವುದಕ್ಕಿಂತ
ನಾನಿನ್ನು ಮುಂದೆ ಅದನ್ನು ಕಡೆಗಣಿಸುವುದೇ ನಿಜಕ್ಕೂ ಸೂಕ್ತ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.