ಸಕಲಕಲಾವಲ್ಲಭ

0

ಅರುವತ್ನಾಲ್ಕು ವಿದ್ಯೆಗಳಂತೆ!, ಅವೆಲ್ಲವನ್ನೂ ತಿಳಿದವನು ಸಕಲಕಲಾವಲ್ಲಭನಂತೆ, ಎಲ್ಲಾ ಚಂದಮಾಮನ ಕಾಗಕ್ಕ ಗುಬ್ಬಕ್ಕನ ಕಂತೆ.

ಅರುವತ್ನಾಲ್ಕು ವಿದ್ಯೆಗಳಲ್ಲಿ ನಿಮಗೆಷ್ಟು ಗೊತ್ತು? 

ವೇದ, ವೇದಾಂಗ, ಇತಿಹಾಸ, ಆಗಮ, ನ್ಯಾಯ, ಕಾವ್ಯ, ಅಲಂಕಾರ, ನಾಟಕ, ಗಾನ, ಕವಿತ್ಯ, ಕಾಮಶಾಸ್ತ್ರ, ದೂತನೈಪುಣ್ಯ, ದೇಶಭಾಷಾಜ್ಞಾನ, . . 

 

ಪ್ರೀತಿಯಿಂದ

ಸಿ ಮರಿಜೋಸೆಫ್ 

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> "ಅರುವತ್ನಾಲ್ಕು ವಿದ್ಯೆಗಳಂತೆ!, ಅವೆಲ್ಲವನ್ನೂ ತಿಳಿದವನು ಸಕಲಕಲಾವಲ್ಲಭನಂತೆ, ಎಲ್ಲಾ ಚಂದಮಾಮನ ಕಾಗಕ್ಕ ಗುಬ್ಬಕ್ಕನ ಕಂತೆ."

ನಿಮಗೆಷ್ಟು ವಿದ್ಯೆ ಗೊತ್ತು?
ಅದು ಚಂದಮಾಮನ ಕಾಗಕ್ಕ ಗುಬ್ಬಕ್ಕನ ಕಂತೆ ಅಂತ ನಿಮಗ್ಯಾರು ಹೇಳಿದ್ದು?
ನಿಮ್ಮ ಹೇಳಿಕೆಗೆ ಏನಾದರೂ ಆಧಾರ ಇದೆನಾ?

ಸೂರ್ಯ ಭೂಮಿಯನ್ನು ಸುತ್ತುತ್ತಾನೆ ಅಂತ ಎಲ್ಲೋ ಹೇಳಿದೆ... ಅದು ಗುಬ್ಬಕ್ಕ ಕಾಗಕ್ಕನ ಕಥೆ.
ಇಂದು ೫-೬ ಕಲೆ ಗೊತ್ತಿದ್ದರೆ ಅವನನ್ನು ಸಕಲಕಲಾವಲ್ಲಭ ಅಂತ ಕರೀತಾರೆ ಅನ್ನೋದನ್ನ ನೋಡಿದ್ದೇನೆ.. ೬೪ ವಿದ್ಯೆ ಗೊತ್ತಿದ್ದರೆ ಹಾಗೆ ಕರೆಯುವುದರಲ್ಲಿ ಏನು ತಪ್ಪಿದೆ?

ನಿಮ್ಮ ಲೇಖನಗಳನ್ನು ನೋಡಿದರೆ ಹೆಗ್ಡೆ ಅವರು ಬರೆದ ಪ್ರತಿಕ್ರಿಯೆ ನೆನಪಾಗುತ್ತಿದೆ http://sampada.net/forum/21245#comment-77881

5, 6 ವಿದ್ಯೆ ಗೊತ್ತಿದ್ದವರೂ ಸಕಲಕಲಾ ಪಾರಂಗತರೆನಿಸಿಕೊಂಡರೆ ಅದು ಸಂತೋಷದ ವಿಷಯ ತಾನೇ?

ನಾನು ಹೇಳ್ತಾ ಇರೋದು, ಈ 64 ವಿದ್ಯೆಗಳಲ್ಲಿ ಎಂಥೆಂಥ ವಿಷಯಗಳಿವೆ ನೋಡಿ ಅನ್ತ. ಕೆಲವಂತೂ ಆಚರಣೆಗೆ ತರುವುದೇ ಮುಜುಗರದ ಸಂಗತಿಯಾಗಿದೆ.

ಹಿಂದೆ ಭೂಮಿ ಚಪಾತಿ ಹಾಗೆ ಇತ್ತಂತೆ ಈಗ ರಾಗಿಮುದ್ದೆ ಆಕಾರದಲ್ಲಿ ಇದೆಯಂತೆ.

ಇನ್ನು ಆಸು ಹೆಗಡೆ ಬಗ್ಗೆ ನೀವೇನೂ ಸಾಕ್ಷಿ ಹೇಳಬೇಕಿಲ್ಲ.

ಪ್ರೀತಿಯಿಂದ
ಸಿ ಮರಿಜೋಸೆಫ್

"ನಾನು ಹೇಳ್ತಾ ಇರೋದು, ಈ 64 ವಿದ್ಯೆಗಳಲ್ಲಿ ಎಂಥೆಂಥ ವಿಷಯಗಳಿವೆ ನೋಡಿ ಅನ್ತ. ಕೆಲವಂತೂ ಆಚರಣೆಗೆ ತರುವುದೇ ಮುಜುಗರದ ಸಂಗತಿಯಾಗಿದೆ"

ಯಾರೋ ಹೇಳಿದ್ದು...
ಕೆಲ ವಿಷಯಗಳಲ್ಲಿ ತಪ್ಪನ್ನು ಹುಡುಕುವುದೇ ಕೆಲಸ ಮಾಡಿಕೊಳ್ಳಬೇಡಿ, ಅದನ್ನು ಸರಿಪಡಿಸಿ ಇಲ್ಲಾ ಅದರಲ್ಲಿರೋ ಒಳ್ಳೇವಿಷಯಗಳನ್ನ ೧೦ ಜನಕ್ಕೆ ತಿಳಿಸಿ...

ಇನ್ನೊಂದು..
ನಿಮಗೆ ಯಾರೂ ಆಚರಣೆಗೆ ತರಲು ಹೇಳಿಲ್ಲ.. ನೀವೇನು ಸಕಲಕಲ ಪಾರಂಗತರು ಅನ್ನಿಸಿಕೊಳ್ಳೋದು ಬೇಡ.. ಖುಷಿನಾ?

>> ಇನ್ನು ಆಸು ಹೆಗಡೆ ಬಗ್ಗೆ ನೀವೇನೂ ಸಾಕ್ಷಿ ಹೇಳಬೇಕಿಲ್ಲ. => ಧನ್ಯವಾದ..... :-)

ಮರಿ,

ತನಗೆ ಅರಿವಿಲ್ಲದುದರ ಬಗ್ಗೆ ತಿಳಿದುಕೊಳ್ಳುವ ಜಿಜ್ಞಾಸೆಗಿಂತ, ಅನ್ಯರನ್ನು, ಅನ್ಯರ ಆಚಾರ-ವಿಚಾರ, ನಂಬಿಕೆಗಳನ್ನು ಹೀಗಳೆಯುವ ಉದ್ದೇಶ ಎದ್ದು ಕಾಣುತ್ತಿದೆ ನಿಮ್ಮ ಈ ಬರಹದಲ್ಲಿ.

ತಿಳಿದುಕೊಳ್ಳುವ ಇಚ್ಚೆಯಿದ್ದವನು ಪ್ರಶ್ನೆಗಳನ್ನಷ್ಟೇ ಕೇಳುತ್ತಾನೆ, ಅಲ್ಲವೇ? ತನಗೆ ತಿಳಿಯದ್ದರ ಬಗ್ಗೆ ಟೀಕಾ ಪ್ರಹಾರ ಏಕೆ ಮಾಡುತ್ತಾನೆ?

ಇಲ್ಲಿ ನಿಮ್ಮ ಈ ಪ್ರಶ್ನೆಗೆ ಉತ್ತರ ಸಿಗುವುದರ ಬದಲಾಗಿ ನಿಮ್ಮ ಕೊಂಕಿಗೆ ಮೂದಲಿಕೆಗಳೆ ಜಾಸ್ತಿ ಸಿಗಬಹುದು, ಅಂತ ನನ್ನ ಅನಿಸಿಕೆ.

ಬೆಳಗಿನ ವಂದನೆಗಳು ಜೊಸೆಫ್,
ಈ ಕೊಂಡಿಯಲ್ಲಿ ಅರವತ್ತು ನಾಲ್ಕು ವಿದ್ಯೆಗಳ ಹೆಸರು ಕೊಡಲಾಗಿದೆ. http://groups.yahoo.com/group/14vidya_64kala/message/395
ನಿಮಗೆ ಉತ್ತರ ದೊರಕಿದೆ ಎಂದು ಬಾವಿಸಿದ್ದೇನೆ.

ಇತಿ,
ಪವಿತ್ರ

ಅಯ್ಯೋ ಪವಿತ್ರಾ, ನನ್ನಲ್ಲಿ ಈ ವಿದ್ಯೆಗಳ ಪಟ್ಟಿ ಇದೆಯಮ್ಮ. ಮೊನ್ನೆಮೊನ್ನೆ ಯಾವುದೋ ಪೇಪರಿನಲ್ಲಿ ಬಂದಿತ್ತು,
ಕೆಲವರು ತಿಳಿದಂತೆ ನಾನು ಇದರಲ್ಲಿ ಯಾವುದೇ ವ್ಯಂಗ್ಯವಾಡುತ್ತಿಲ್ಲ.
ಈ ಪಟ್ಟಿಯಲ್ಲಿನ ಕೆಲ ವಿದ್ಯೆಗಳು ಎಷ್ಟು ವಿಚಿತ್ರವಾಗಿವೆ ಅಲ್ವಾ?
ಕೆಲವರಿಗೆ ಕೆಲವು ವಿದ್ಯೆಗಳು ರಕ್ತದಲ್ಲೇ ಬಂದಿರುತ್ತವೆ ಬಿಡಿ. ಆದರೆ ಸಾಧಕನಿಗೆ ಇಷ್ಟೂ ವಿದ್ಯೆಗಳನ್ನು ಸಾಧಿಸಲು ಎಷ್ಟು ಕಷ್ಟದ ಜೊತೆಗೇ ಎಷ್ಟು ಮುಜುಗರವಾಗಿರಬೇಡ ಅಲ್ಲವೇ?
ಶಲ್ಯನು ಅಶ್ವಹೃದಯ ಅರಿತಿದ್ದನೆಂದು ಓದಿದ್ದೇವೆ, ಇಲ್ಲಿ ಅಶ್ವಲಕ್ಷಣ ಅನ್ತ ಇದೆ. ದುರ್ಯೋಧನ ಜಲಸ್ತಂಭನ ವಿದ್ಯೆ ಪ್ರಯೋಗಿಸಿದನೆಂದು ತಿಳಿದಿದ್ದೇವೆ, ಸ್ವರವಂಚನೆ ಅಂದರೆ ಮಿಮಿಕ್ರಿ ಇರಬಹುದಾ, ಕಾಲವಂಚನೆ ಅನ್ನೋದು ಕಷ್ಟಪಟ್ಟು ಸಾಧಿಸಬೇಕಾದ ವಿದ್ಯೇನಾ? ಪಾದುಕಾಸಿದ್ಧಿ ಅಂದರೆ ಏನು?

1. ವೇದ
2. ವೇದಾಂಗ
3. ಇತಿಹಾಸ
4. ಆಗಮ
5. ನ್ಯಾಯ
6. ಕಾವ್ಯ
7. ಅಲಂಕಾರ
8. ನಾಟಕ
9. ಗಾನ
10. ಕವಿತ್ವ
11. ಕಾಮಶಾಸ್ತ್ರ
12. ದೂತನೈಪುಣ್ಯ
13. ದೇಶಭಾಷಾಜ್ಞಾನ
14. ಲಿಪಿಕರ್ಮ
15. ವಾಚ
16. ಸಮಸ್ತಾವಧಾನ
17. ಸ್ವರಪರೀಕ್ಷೆ
18. ಶಾಸ್ತ್ರಪರೀಕ್ಷೆ
19. ಶಕುನಪರೀಕ್ಷೆ
20. ಸಾಮುದ್ರಿಕಪರೀಕ್ಷೆ
21. ರತ್ನಪರೀಕ್ಷೆ
22. ಸ್ವರ್ಣಪರೀಕ್ಷೆ
23. ಗಜಲಕ್ಷಣ
24. ಅಶ್ವಲಕ್ಷಣ
25. ಮಲ್ಲವಿದ್ಯೆ
26. ಪಾಕಕರ್ಮ
27. ದೋಹಳ
28. ಗಂಧವಾದ
29. ಧಾತುವಾದ
30. ಖನಿವಾದ
31. ರಸವಾದ
32. ಅಗ್ನಿಸ್ತಂಭ
33. ಜಲಸ್ತಂಭ
34. ವಾಯುಸ್ತಂಭ
35. ಖಡ್ಗಸ್ತಂಭ
36. ವಶ್ಯಾ
37. ಆಕರ್ಷಣ
38. ಮೋಹನ
39. ವಿದ್ವೇಷಣ
40. ಉಚ್ಛಾಟನೆ
41. ಮಾರಣ
42. ಕಾಲವಂಚನೆ
43. ವಾಣಿಜ್ಯ
44. ಪಶುಪಾಲನೆ
45. ಕೃಷಿ
46. ಸುಮಶರ್ಮ
47. ಲಾವುಕಯುದ್ಧ
48. ಮೃಗಯಾ
49. ಪುತಿಕೌಶಲ
50. ದೃಶ್ಯಶರಣಿ
51. ದ್ಯೂತಕರಣಿ
52. ಚಿತ್ರಲೋಹ, ಪಾರ್ಷಾಮೃತ್, ದಾರುವೇಣುಚರ್ಮ ಅಂಬರಕ್ರಿಯೆ
53. ಚೌರ್ಯ
54. ಔಷಧಸಿದ್ಧಿ
55. ಮಂತ್ರಸಿದ್ಧಿ
56. ಸ್ವರವಂಚನೆ
57. ದೃಷ್ಟಿವಂಚನೆ
58. ಅಂಜನ
59. ಜಲಪ್ಲವನ
60. ವಾಕ್ ಸಿದ್ಧಿ
61. ಘಟಕಾಸಿದ್ಧಿ
62. ಪಾದುಕಾಸಿದ್ಧಿ
63. ಇಂದ್ರಜಾಲ
64. ಮಹೇಂದ್ರಜಾಲ

ಅಯ್ಯೋ ಮರಿ

ನಿಮಗೂ ಈ ವಿದ್ಯೆಗಳೆಲ್ಲಾ ಗೊತ್ತು. ನೀವು ಸಕಲಕಲಾವಲ್ಲಭರೇ,

ಅದರೂ ಯಾಕೀ ಸಂಕಟಕಲಾರಸಿಕರ ಭಾವ ;)

ಅರವಿಂದ್

ಅಯ್ಯೋ ಮರಿ

ನಿಮಗೂ ಈ ವಿದ್ಯೆಗಳೆಲ್ಲಾ ಗೊತ್ತು. ನೀವು ಸಕಲಕಲಾವಲ್ಲಭರೇ,

ಅದರೂ ಯಾಕೀ ಸಂಕಟಕಲಾರಸಿಕರ ಭಾವ ;)

ಅರವಿಂದ್

ಅರವಿಂದ ನೀವು ಎರಡೆರಡು ಸಲ ಹೇಳೋ ಅಗತ್ಯವಿಲ್ಲ.
ನನಗಂತೂ ಈ ಎಲ್ಲಾ ವಿದ್ಯೆಗಳು (ನೀವು ಹೇಳೋ ಹಾಗೆ) ಗೊತ್ತಿಲ್ಲಪ್ಪ.

ಪ್ರೀತಿಯಿಂದ
ಸಿ ಮರಿಜೋಸೆಫ್

ಒಹ್. ನೀವು ಸಕಲಕಲಾವಲ್ಲಭನ ಬಗ್ಗೆ ಕೆಲಿದ್ದೆರ..ಇಲ್ಲಿ ಚರ್ಚೆಯ ವಿಷ್ಯನೆ ಬೆರೆ. ಹೇಗೇ ಇರಲಿ ಇನ್ನೊಂದ್ಸಲ 64 ವಿದ್ಯೆಗಳ ಲಿಸ್ಟ್ ನೊಡಿದಾಗೆ ಆಯಿತು.

ಈ ಪಟ್ಟಿಯ ವಿಷಯಗಳೆಲ್ಲ ಔಟ್ಡೇಟೆಡ್ ಆಗಿವೆ . ಕಂಪ್ಯೂಟರ್ರು , ಇಂಗ್ಲೀಷು ಇಂಥವನ್ನೆಲ್ಲ ಸೇರಿಸಿ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಮಾಡಬೇಕು .

ಇನ್ನೂ ಒಂದ್ ವಿಷ್ಯ, ಇಂಥ ಔಟ್ಡೇಟೆಡ್ ವಿಷ್ಯಗಳ ಬಗ್ಗೆ ತಲೆಕೆಡ್ಸಿಕೊಳ್ಳೋದನ್ನ , ( ತಲೆಕೆಡಿಸೋದನ್ನೂ ) ಬಿಡಬೇಕು

>>ಈ ಪಟ್ಟಿಯ ವಿಷಯಗಳೆಲ್ಲ ಔಟ್ಡೇಟೆಡ್ ಆಗಿವೆ . ಕಂಪ್ಯೂಟರ್ರು , ಇಂಗ್ಲೀಷು ಇಂಥವನ್ನೆಲ್ಲ ಸೇರಿಸಿ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಮಾಡಬೇಕು .

ನಾನೂ ಅದನ್ನೇ ಹೇಳೋಣ ಅನ್ತಲೇ ಇರೋದು. ರಾಜಕಾರಣ, ಸ್ತೇಯ, ಭ್ರಷ್ಟಾಚಾರ, ಕೋಮುವಾದ, ಕಪ್ಪುಹಣ ಇವನ್ನೆಲ್ಲ ಸೇರಿಸ್ಕೋಬೇಕು.

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮ್ಮ ಪಟ್ಟಿಯಿಂದ "ಮತಾಂತರ" ಬಿಟ್ಟು ಹೇಗಿದೆ...
ಅದು ತುಂಬಾ HOT Topic....

ವಿನಾಯಕ

ಧಾರಾಳವಾಗಿ ಸೇರಿಸ್ಕೊಳ್ಳಿ ಮುತಾಲಿಕರೇ?
ಯಾಕೇ ಅಂದ್ರೆ ಸಮ್ರಾಟ ಅಶೋಕ ಮಾಡಿದ್ದೂ ಅದನ್ನೇ, ಅವನ ಮಕ್ಕಳು ಮತ್ತು ಇತರರು ಬರ್ಮಾ, ಚೀನಾ, ಶ್ರೀಲಂಕಾಗಳಲ್ಲಿ ಮಾಡಿದ್ದೂ ಅದನ್ನೇ, ತಮಿಳುನಾಡಿನ ರಾಮಾನುಜಾಚಾರ್ಯರು ಕರ್ನಾಟಕದಲ್ಲಿ ಮಾಡಿದ್ದೂ ಅದನ್ನೇ, ವಿವೇಕಾನಂದ ಸ್ವಾಮಿಗಳು ಚಿಕಾಗೋದಲ್ಲಿ ಮಾಡಿದ್ದೂ ಅದನ್ನೇ, ಪ್ರಭುಪಾದರು ಅಮೆರಿಕಾದಲ್ಲಿ ಮಾಡಿದ್ದೂ ಅದನ್ನೇ

ಪ್ರೀತಿಯಿಂದ
ಸಿ ಮರಿಜೋಸೆಫ್

:) ನಿಮಗೆ ಭಾಷಣಗಳಿಗೂ ಮತಾಂತರಗಳಿಗೂ ವ್ಯತ್ಯಾಸ ಗೊತ್ತಿಲ್ಲ ಅನ್ನಿಸುತ್ತದೆ. ನಡೆಯಲಿ ನಿಮ್ಮ Bigotory!!

ನಾನು ಹೇಳೋಕೆ ಹೊರಟ ಮಾತನ್ನ ಶ್ರೀನಿಧಿ ಹೇಳಿದ್ದಾರೆ.

ಮರಿಯವರೇ 'ಚಿಕಾಗೋ' ಬಗ್ಗೆ ಸ್ವಲ್ಪ ಮಾಹಿತಿ ಕೊಡ್ತಿರಾ... ನಿಮ್ಮ ಲಿಸ್ಟ್ನಲ್ಲಿ ಆಫ್ರಿಕ,ಮಣಿಪುರ ಮತ್ತು ಅಸ್ಸಾಮ್ನ ಗುಡ್ಡಗಾಡು ಇವೆಲ್ಲ ಬಿಟ್ಟುಹೋಗಿದೆ ಸೇರಿಸಿಕೊಳ್ಳಿ ;)

ರಾಕೇಶ್ ಅದೆಲ್ಲಾ ಯಾವ ಲೆಕ್ಕಕ್ಕೂ ಇಲ್ಲ. Amalek, Midian ಬಗ್ಗೆ ಓದಿದವರು ಸುಸ್ತಾದಾರು!!

ಧನ್ಯವಾದ ಅರವಿಂದ್,,, ಸೇರಿಸುತ್ತ ಹೋದರೆ ಇನ್ನು ಎಷ್ಟೊ! ೧ ವರ್ಷದಿಂದ ಮಂತ್ರಾಲಯಕ್ಕೆ ಹೋಗಲು ಅಗಿಲ್ಲ,,, ಆಗಸ್ಟ್ ನಲ್ಲಿ ಹೋಗಬೇಕು ಎಂದುಕೊಂಡಿದ್ದೇನೆ, ನೋಡೋಣ ಹೊಸ ಕಟ್ಟಡಗಳು, ಬೋರ್ಡ್ ಗಳು ಎಶ್ಟು ಬಂದಿವೆ ಎಂದು, ಕಳೆದ ೪ ವರ್ಷದಲ್ಲಿ ಬಹಳ ಬದಲಾವಣೆ ಗಮನಿಸಿದ್ದೇನೆ ಅಲ್ಲಿ....

ಭಾಸ್ಕರ್

ಮಂಚಾಲೆ ಮಂತ್ರಾಲಯವಾಗಿ ಉಳಿದಿಲ್ಲ ಅನ್ನೋದು ಜಗಜ್ಜಾಹಿರ ಅಲ್ವೇ

ಅರವಿಂದ್

ಭಾಸ್ಕರ್ ಅವರೆ, ಬೇಜಾರ್ ಮಾಡ್ಕೋಬೇಡಿ.. ನೀವ್ ಎಲ್ಲಾ ತಲೆಹರಟೆಗಳಿಗೂ ಉತ್ತರಿಸಲಿಕ್ಕೆ ಹೋಗ್ತೀರ..
ಸಗಣಿಯ ಸಂಗಕ್ಕಿಂತ ಗಂಧದೊಡನೆ ಗುದ್ದಾಟವೇ ಮೇಲು.. ನಿಮ್ಮಂತವರು ಏನೊ ತಿದ್ದಿಕೊಳ್ಳಲಿ ಅಂತ ಬರೆದರೆ, ಇವ್ರಂತು ತಿದ್ದಿಕೊಳ್ಳಲ್ಲ, ವಿನಾಕಾರಣ ಪುಕ್ಕಟೆ ಪಬ್ಲಿಸಿಟಿ ತೊಗೊತಾರೆ ಅಷ್ಟೆ..

ನಾಗೇಂದ್ರ ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ.

ಪ್ರೀತಿಯಿಂದ
ಸಿ ಮರಿಜೋಸೆಫ್

ಅದೇನ್ ರಾಕೇಸಾ, ಅದೆಂಥದೋ ಪ್ರಸ್ನೆಗೆ ಉತ್ರಾನೇ ಗೊತ್ತಿಲ್ಲ ಅನ್ತ ಮಳ್ಳಿ ಅಂಗೆ ನುಲೀತೀರಾ? ಊರ್ಗೆಲ್ಲ ಗೊತ್ತಿರಾ ಉತ್ರ ನಿಂಗೊತ್ತಿಲ್ವರಾ?

>>ಮರಿಯವರೇ 'ಚಿಕಾಗೋ' ಬಗ್ಗೆ ಸ್ವಲ್ಪ ಮಾಹಿತಿ ಕೊಡ್ತಿರಾ... ನಿಮ್ಮ ಲಿಸ್ಟ್ನಲ್ಲಿ ಆಫ್ರಿಕ,ಮಣಿಪುರ ಮತ್ತು ಅಸ್ಸಾಮ್ನ ಗುಡ್ಡಗಾಡು ಇವೆಲ್ಲ ಬಿಟ್ಟುಹೋಗಿದೆ ಸೇರಿಸಿಕೊಳ್ಳಿ

ರಾಮಚಂದ್ರಾಪುರ ಮಠದಾಗೆ ಮೇಘಾಲಯದ ನೂರು ಮಕ್ಕಳನ್ನ ಗುರುಕುಲದ ವಿದ್ಯೆ ಕೊಡ್ತೀವಿ ಅನ್ತ ಮಡಿಕ್ಕಂಡವರಲ್ಲಾ ಅವುರ‍್ ತಾವ ಓಗಿ ಕ್ಯೋಳ್ಕಳಿ ನಿಮ್ಮ ಉತ್ರಾವ.

ಪ್ರೀತಿಯಿಂದ
ಸಿ ಮರಿಜೋಸೆಫ್

ಮರಿ,
ವ್ಯಂಗ್ಯಕ್ಕೆ ಉತ್ತರ ವ್ಯಂಗ್ಯವೇ.... ಓದ್ಕಳಿ

[quote]ಮಳ್ಳಿ ಅಂಗೆ ನುಲೀತೀರಾ?[/quote]

ಮಳ್ಳಿ ಅಂಗೆ ನುಲೀಯೋದು ಅಂದ್ರೆ ಏನು? ನಾ ನುಲಿದೆನಾ? ;)

[quote]ಊರ್ಗೆಲ್ಲ ಗೊತ್ತಿರಾ ಉತ್ರ ನಿಂಗೊತ್ತಿಲ್ವರಾ?[/quote]

ಗೊತ್ತಿಲ್ಲ ಅಂತಾನೆ ಅಲ್ವರ ಕೇಳಿದ್ದು

[quote]ರಾಮಚಂದ್ರಾಪುರ ಮಠದಾಗೆ ಮೇಘಾಲಯದ ನೂರು ಮಕ್ಕಳನ್ನ ಗುರುಕುಲದ ವಿದ್ಯೆ ಕೊಡ್ತೀವಿ ಅನ್ತ ಮಡಿಕ್ಕಂಡವರಲ್ಲಾ ಅವುರ‍್ ತಾವ ಓಗಿ ಕ್ಯೋಳ್ಕಳಿ ನಿಮ್ಮ ಉತ್ರಾವ.[/quote]

ಒಹ್ , ತಕ್ಕಳ್ಳಿ ಮತ್ತೊಂದು ಹೊಸ ವಿಸಾರ! ವಿದ್ಯಾದಾನ ತಪ್ಪೇ? ... ಸರ್ರಿ ಬುಡಿ ನಾ ಅವರತ್ರ ನೆ ಅದನ್ನ ಕೇಳ್ತೀನಿ.. ನೀವ್ ನಿಮಗೆ ಕೇಳಿದ್ನನಲ್ಲ ಅದ್ರ ಬಗ್ಗೆ ವೊಸಿ ಯೋಳಿ.

ಆದರೆ ವಿದ್ಯಾದಾನದ ಹೆಸರಲ್ಲಿ, ಬಳೆ ಹಾಕಬೇಡಿ, ಕುಂಕುಮ ಇಡಬೇಡಿ, ನಮ್ಮವರ ಮಾತ್ರ ದೇವರು, ಬೇರೆಯೋರು ಅಲ್ಲ,, ಅಂತೆಲ್ಲ ರಾಮಚಂದ್ರಾಪುರದ ಮಠ್ದಲ್ಲಿ ಮಾಡುತ್ತಾ ಇಲ್ಲವಲ್ಲ :)

ಸರಿಯಾಗಿದೆ ಅವರು ಮಾಡಿದ್ದು...
೧೦೦ ಮಕ್ಕಳು ಬೇರೇ ಧರ್ಮಕ್ಕೆ ಮತಾಂತರಗೊಳ್ಳುವುದು ತಪ್ಪಿತು....
ನಿಜವಾಗಲೂ ರಾಮಚಂದ್ರಪುರ ಮಠದ ಕಾರ್ಯ ಶ್ಲಾಘನೀಯ....

ಬಿಜಾಪುರದಲ್ಲಿ ನಮ್ಮ ಮನೆಯ ಹತ್ತಿರ ಹತ್ತಿರ ಹತ್ತಿರ ೨೦೦ ಮಕ್ಕಳನ್ನು ಕೂಡಿಸಿ ಆಶ್ರಮ(?) ಕಟ್ಟಿದ್ದಾರೆ, ಅವರೆಲ್ಲರ ಮನೆಯಲ್ಲಿ ಇವತ್ತು ಹಿಂದೂದೇವರ ಮೂರ್ತಿ, ಫೋಟೋ ಮಾಯವಾಗಿ.. ಶಿಲುಬೆ ಬಂದಿದೆ.. ಇದನ್ನು ನಾನೇ ಖುದ್ದಾಗಿ ನೋಡಿದ್ದೇನೆ.. ಅವರಲ್ಲಿ ಕೆಲವರು ಮತ್ತೆ ಹಿಂದೂಧರ್ಮಕ್ಕೆ ಮರಳಿ ಬಂದಿದ್ದಾರೆ... ದೇವರು ಅವರಿಗೆ ಒಳ್ಳೆಯ ಬುಧ್ಧಿ ಕೊಟ್ಟು ಹಿಂದೂ ಧರ್ಮಕ್ಕೆ ಮರಳಲು ಹೇಳಿರಬಹುದೆ? ಬೇರೆಯವರಿಗೂ ಒಳ್ಳೆಯ ಬುಧ್ಧಿ ಬೇಗ ಕರುಣಿಸಲಿ....

ಅನುಮಗಿರಿಗುಡ್ಡ ಅನೇನನ್ತ ವಸಿ ಯೋಳ್ತೀರಾ?

ಪ್ರೀತಿಯಿಂದ
ಸಿ ಮರಿಜೋಸೆಫ್

ಹನುಮಗಿರಿ ಬೆಟ್ಟ ಉಳಿಸಿಕೊಳ್ಳ ಲು ಒಬ್ಬ ಪ್ರಚಾರಕರು ತುಂಬ ಪ್ರಯತ್ನಪಟ್ಟರು... ಆದರೆ ವಿಧಿ, ಅವರು ಅಕಾಲ ಮರಣಕ್ಕೆ ತುತ್ತಾದರು :-(
ಈಗಲೂ ಹನುಮಗಿರಿಯನ್ನು ಮರಳಿ ಪಡೆಯಲು ಪ್ರಯತ್ನ ಆಗಬೇಕಿದೆ.

ವಿನಾಯಕ

>>ಹನುಮಗಿರಿ ಬೆಟ್ಟ ಉಳಿಸಿಕೊಳ್ಳ ಲು ಒಬ್ಬ ಪ್ರಚಾರಕರು ತುಂಬ ಪ್ರಯತ್ನಪಟ್ಟರು... ಆದರೆ ವಿಧಿ, ಅವರು ಅಕಾಲ ಮರಣಕ್ಕೆ ತುತ್ತಾದರು

ಅದು ಯಾವ ಸಂಗತಿ? ಮಾಹಿತಿ ಹಂಚಿಕೊಳ್ಳುವಿರಾ?

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಜ, ವಿನಾಯಕ್ , ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದೆ ನಾನು,,

ಈ ಹಳಸಲು ವಾದಗಳಿಂದ ಏನೂ ಸಾಧಿಸಲಾಗದಿದ್ದರೂ, ನಿಮ್ಮ ಇಂಗ್ಲಿಶ್ ಜ್ಞಾನ ಭಂಡಾರ ನನಗೆ ಉಪಯೋಗವಾಗುತ್ತಿರುವುದಂತು ಸತ್ಯ...
ನೀವೆ ಹೇಳಿದ್ದು.. ಅನಗತ್ಯ ಟ್ರೊಲ್ಗಳನ್ನು ಬೆಳಸಬಾರದೆಂದು.. :)

೬೪ ವಿದ್ಯೆಗಳಲ್ಲಿ ಇದೂ ಒಂದು ಇರಬಹುದಲ್ವೇ?

ಪ್ರೀತಿಯಿಂದ
ಸಿ ಮರಿಜೋಸೆಫ್

ಕನ್ನಡ ಜ್ನಾನದ ಬಗ್ಗೆ ಕೆಲವು ಲೇಖನಗಳನ್ನ ಓದಿ ಎಂದು ಎಲ್ಲೋ ಓದಿದ್ದೆ... :)

>>>ವಿವೇಕಾನಂದ ಸ್ವಾಮಿಗಳು ಚಿಕಾಗೋದಲ್ಲಿ ಮಾಡಿದ್ದೂ ಅದನ್ನೇ
ಸರಿಹೋಯ್ತು!!!!!!

ನನ್ನಿ :)

ಮರಿ

ಹಾಗೆಂದೆ ನಿಮ್ಮ ಸಂತೋಷಕ್ಕೆ ಒಪ್ಪೋಣ, ಅದರಿಂದ ನಮಗೇನು ನಷ್ಟವಿಲ್ಲ. ನೀವು ಅದನ್ನು ಹೇಗೆ ಮಾಡುತ್ತಿದ್ದೀರಿ ಹೇಳಿ ?

ಸಿದ್ದಲಿಂಗಯ್ಯನವರ ನನ್ನ ಕವನ ನೆನಪಾಗ್ತಿದೆ ............. ಉಂಬುಡುವುದಕ್ಕಿಲ್ಲ ಅರಸನೋಲಗಕ್ಕಿಂತ ಹಾಳೂರಲಿ ತಿರುಬಿಂಬುದೇ ಲೇಸು (ಮೊದಲ ಭಾಗ ಬೇಡ ಅಲ್ವೇ ;)

ಅರವಿಂದ್

>>> ಯಾಕೇ ಅಂದ್ರೆ ಸಮ್ರಾಟ ಅಶೋಕ ಮಾಡಿದ್ದೂ ಅದನ್ನೇ..................ಪ್ರಭುಪಾದರು ಅಮೆರಿಕಾದಲ್ಲಿ ಮಾಡಿದ್ದೂ ಅದನ್ನೇ................
ನೀವು ಯಾಕೋ ತುಂಬಾ important point(s) miss ಮಾಡ್ತಿದಿರಾ.... :-)
ಕ್ರಿಶ್ಚಿಯನ್ ಮಿಶಿನರಿಗಳು ಮಾಡುತ್ತಿರುವುದು ಮರೆತಹಾಗಿದೆ... ಪರವಾಗಿಲ್ಲ...

ಮರಿ ಜೋಸೆಫ್ ರೆ,

ಹಿಂದೆ ರಾಜನಾಗುವವನು ಈ ಎಲ್ಲ ವಿದ್ಯೆಗಳನ್ನು ಕಲಿಯಬೇಕೆಂಬ ನಿಯಮವಿತ್ತು. ಪೂರ್ಣವಲ್ಲದಿದ್ದರೂ ಆಂಶಿಕವಾಗಿಯಾದರೂ ಕಲಿಸಲಾಗುತ್ತಿತ್ತು. ಇಂದು ಇವು ನಮಗೆ ಗೊತ್ತಿಲ್ಲದೇ ಇರಬಹುದು ಆದರೆ ಬೇರೊಂದು ಹೆಸರಿನಲ್ಲಿ ಕಲಿಯುತ್ತಿದ್ದೇವೆ ಅಷ್ಟೇ. ಇದರಲ್ಲಿರುವ ಅನೇಕ ವಿಷಯಗಳನ್ನು ನಮ್ಮ ಸಾಮಾನ್ಯ ಜೀವನದಲ್ಲೇ ಕಲಿತಿರುತ್ತೇವೆ. ಪ್ರಾಚೀನ ಭಾರತೀಯರ ಬದುಕಿನ ಶೈಲಿಗೆ ಅನುಗುಣವಾಗಿ ಈ ವಿದ್ಯೆಗಳು ನಿರ್ಮಿತಿ ಹೊಂದಿದ್ದವು. ಅವು ಕಾಲಕ್ರಮೇಣ ಬದಲಾಗುವ ಕಾಲಕ್ಕೆ ಅಥವಾ ಆಪ್ ಡೇಟ್ ಆಗುವ ಕಾಲಕ್ಕೆ ನಮ್ಮ ದೇಶಕ್ಕೆ ಮೆಕಾಲೆಯ ಶಿಕ್ಷಣ ಕಾಲಿಟ್ಟಿತು. ಇದರಿಂದ ಹಳೆಯ ವಿಚಾರಗಳು ಔಟ್ ಡೇಟ್ ಆದುವಲ್ಲದೇ, ನಮ್ಮ ವಿಚಾರಗಳೇ ನಮಗೆ ಪರಕೀಯವೆಂಬಂತೆ ಕಾಣತೊಡಗಿತು.

ಮಾಯ್ಸಪ್ಪ,

ಯಾಕೆ ಮರಿ ಜೋಸೆಫ್ ರ ಈ ಲೇಖನ ಮಾಯವಾಗುತ್ತದೆ?

ಸಾತ್ವಿಕ್

ಒಳ್ಳೆ ವಿಶ್ಲೇಷಣೆ ಸಾತ್ವಿಕ್

ಪ್ರೀತಿಯಿಂದ
ಸಿ ಮರಿಜೋಸೆಫ್

ಸಾತ್ವಿಕ್,
>>>ಅವು ಕಾಲಕ್ರಮೇಣ ಬದಲಾಗುವ ಕಾಲಕ್ಕೆ ಅಥವಾ ಆಪ್ ಡೇಟ್ ಆಗುವ ಕಾಲಕ್ಕೆ ನಮ್ಮ..
-ಅಪ್‌ಡೇಟ್!! :(
ನಮ್ಮ ಈಗಿನ 'ಸಕಲ ಕಲಾ ವಲ್ಲಭರು'ಗಳ ಪಾಂಡಿತ್ಯ ಹಳೆಯ ಗ್ರಂಥಗಳಲ್ಲಿರುವ ತಪ್ಪುಗಳನ್ನು ಹುಡುಕಿ ವ್ಯಂಗ್ಯವಾಗಿ ಆಡುವುದರಲ್ಲೇ ವೇಸ್ಟ್ ಆಗುತ್ತಿದೆಯಲ್ಲ ಎಂಬ ಬೇಸರ.
-ಗಣೇಶ.

>>..ಹಳೆಯ ಗ್ರಂಥಗಳಲ್ಲಿರುವ ತಪ್ಪುಗಳನ್ನು ಹುಡುಕಿ ವ್ಯಂಗ್ಯವಾಗಿ ಆಡುವುದರಲ್ಲೇ ...

ಏನ್ರೀ ಹಾಗೆಂದರೆ? ಯಾರು ವ್ಯಂಗ್ಯವಾಗಿ ಆಡಿರೋದು? ಮತ್ತೊಮ್ಮೆ ಮೊದಲಿನಿಂದ ಓದಿ.

ವಿಷಯದ ಬಗ್ಗೆ ಚರ್ಚೆಯಾಗಲಿ ಅನ್ತ ನಾನು ಹಾಕಿದ್ದರೆ ನೀವೊಳ್ಳೆ . . .

ಪ್ರೀತಿಯಿಂದ
ಸಿ ಮರಿಜೋಸೆಫ್

೧೬ ಕಲೆಗಳು ಮತ್ತು ೬೪ ವಿದ್ಯೆಗಳ ಬಗ್ಗೆ ಕೇಳಿದ್ದೇನೆ.
..........

ಅದು ಬಿಟ್ಟು
>ಕಲೆಗಳ ಬಗ್ಗೆ!
ನನಗೆ ೧೬ಕ್ಕೋ ಹೆಚ್ಚು ಕಲೆಗಳು ಇರಬಹುದು ಎಣಿಸಿಲ್ಲ. ( ಚಿಕ್ಕವಯಸ್ಸಿನಲ್ಲಿ ಆಡಬಾರದ ಆಟವನ್ನೆಲ್ಲ ಆಡಿದ್ದೀನಿ ಹಾಗಾಗಿ.)

>ವಿದ್ಯೆಗಳ ಬಗ್ಗೆ
ನನಗೆ ೬೪ ಕ್ಕೂ ಹೆಚ್ಚು ವಿದ್ಯೆಗಳು ಗೊತ್ತು. ಆದರೆ ನನ್ನ ೬೪ ವಿದ್ಯೆಗಳೇ ಬೇರೆ! ;)