ವಿಲಿಯಂ ಷೇಕ್ಸ್ ಪಿಯರ್ - ಸಾನೆಟ್ 29

0

ವಿಲಿಯಂ ಷೇಕ್ಸ್ ಪಿಯರ್

ಆಂಗ್ಲ ಸಾಹಿತ್ಯದಲ್ಲಿ ಒಂದು ಮಹಾನ್ ಹೆಸರು. ಅವರ ಜೀವನ, ಅವರ ಸಾಹಿತ್ಯ, ಅವರ ಭಾವನೆಗಳು, ಅವರನ್ನು ಬಹುಶ: ವರ್ಣಿಸಲು ನನಗೆ ಪದಗಳು ಹೊಳೆಯುತ್ತಿಲ್ಲ ಅಥವಾ ಅದು ವರ್ಣಿಸಲಸದಳ. ಆ ಮಹಾನ್ ವ್ಯಕ್ತಿಯ ಬರಹಗಳನ್ನ ಓದುವುದೇ ಒಂದು ಅಭೂತಪೂರ್ವ ಅನುಭವ. ಅವರ ಸುಮಾರು ಸಾನೆಟ್ ಗಳಲ್ಲಿ ನನಗೆ ತುಂಬಾ ಇಷ್ಟವಾದ ಒಂದು ಕವನವನ್ನ ಕನ್ನಡಕ್ಕೆ ಭಾವಾನುವಾದ ಮಾಡಲು ಇಲ್ಲಿ ಪ್ರಯತ್ನ ಪಟ್ಟಿದ್ದೇನೆ. ಅವರಿಗೆ ಸಾಟಿಯಾಗಿ ಬರೆಯುವುದು ಖಂಡಿತಾ ನನ್ನಂತ ಪಾಮರನಿಂದ ಸಾಧ್ಯವಿಲ್ಲ ಆದರೂ ಒಂದು ಚಿಕ್ಕ ಪ್ರಯತ್ನ.

ಸಾನೆಟ್ - 29 (http://www.shakespeare-online.com/sonnets/29.html)

ದುರ್ವಿಧಿಯ ಕೆಂಗಣ್ಣಿಗೆ ಗುರಿಯಾಗಿ, ಜಗವೆಲ್ಲಾ ಹೀಯಾಳಿಸುತ್ತಿರಲು,
ನಿರಾಶ್ರಿತ ಏಕಾಂಗಿಯಾಗಿ ನಾ ಕಂಬನಿ ಮಿಡಿದೆ.
ದೇವಾನು ದೇವತೆಗಳಿಗೆ ನನ್ನೆಲ್ಲಾ ಅರಿಕೆ ಕೋರಿಕೆಗಳು ಅರಣ್ಯರೋಧನವಾಗಿ,
ನನ್ನದೇ ಆತ್ಮ ನನ್ನನ್ನೂ ನನ್ನ ದುರದೃಷ್ಟವನ್ನೂ ಹಳಿಯಿತಿರಲು,
ಅಲ್ಲಿರುವ ಧನಿಕರೆಡೆ ಆಸೆ ಕಂಗಳಿಂದ ನೋಡುತ್ತಾ,
ಅವರಂತೆ ನಾನು, ಬಂಧು ಬಳಗದಿಂದ ಸುತ್ತುವರಿಯಲ್ಪಟ್ಟವನಾದಂತೆ,
ಆಲ್ಲಿ ಕಾಣುವ ಆ ಕಲೆಗಾರನ ಕಲೆ ಮತ್ತು ಆ ಶ್ರೀಮಂತನ ವ್ಯಭೋಗಕ್ಕಾಸೆ ಪಡುತ್ತಾ,
ನನ್ನಲ್ಲಿಲ್ಲದ ಈ ಎಲ್ಲವನ್ನೂ ನೋಡುತ್ತಾ ನಾ ಕೊರಗಿ,
ಕೀಳರಿಮೆಯ ಭಾವನೆಗಳು ನನ್ನನ್ನು ಘಾಸಿಗೊಳಿಸಿರುವಾಗ;
ಮನದಲ್ಲಿ ಸುಳಿವ ನಿನ್ನ ಒಂದು ಚಿಕ್ಕ ನೆನಪು ನನ್ನಲ್ಲಿ ಬಿತ್ತುವ ಸಂತೋಷ,
ಸೂರ್ಯನುದಯಿಸುವ ಕಾಲದಲಿ ಹಕ್ಕಿಗಳ ಚಿಲಿಪಿಲಿ ನಾದದಂತೆ,
ಬರಡಾಗಿರುವ ಭೂಮಿ ಚಿಗುರೊಡೆದು, ದೈವವಾಣಿಯು ಸ್ವರ್ಗದ ಬಾಗಿಲನು ತೆರೆದಂತೆ.
ನಿನ್ನ ಪ್ರೀತಿಯ ಆ ನೆನಪು ಇಷ್ಟೆಲ್ಲಾ ಸಿರಿ ಸಂಪತ್ತು ನನಗಾಗಿ ತರುವ
ಆ ಸಂತೋಷವನ್ನು ಯಾವ ರಾಜ ಮಹಾರಾಜರೊಡನೆ ನಾ ಬದಲಿಸಿಕೊಳ್ಳಲಾರೆ.

: ವಿಲಿಯಂ ಷೇಕ್ಸ್ ಪಿಯರ್

ವಿಜಯ್

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಷೇಕ್ಸ್ ಪಿಯರ್ ಸಾನೆಟ್ ಚೆನ್ನಾಗಿದೆ . ಕನ್ನಡದಲ್ಲಿ ನಮಗೆ ತಂದುದಕ್ಕೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾನೇ ಸಂತೋಷವಾಯ್ತು, ಬಹಳ ದಿನಗಳ ನಂತರ ಸಂಪದದಲ್ಲಿ " ವಿಜಿ" ಯ ಬರಹಗಳನ್ನು ನೋಡಿ. ತನ್ನ "ಸಾನೆಟ್" ಗಳಿಂದ, ಜಗತ್ಪ್ರಸಿದ್ಧ ನಾಟಕಗಳಿಂದ, ಓದುಗರ ಮನದಲ್ಲಿ ಅಚಲನಾಗಿ ಕುಳಿತಿರುವ ಶೇಕ್ಸ್ ಪಿಯರ್ ನನ್ನು ಯಾರು ತಾನೇ ಮರೆಯಲು ಸಾಧ್ಯ, ಅಂಥಾ ಮಹಾನ್ ಲೇಖಕನ ಕ್ರುತಿಗಳನ್ನು ಅನುವಾದ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅಂದಂತೆ ಅನುವಾದ ತುಂಬಾ ಅರ್ಥಗರ್ಭಿತವಾಗಿದೆ. ಆದಷ್ಟೂ ಪುರುಸೊತ್ತು ಮಾಡಿಕೊಂಡು ಇನ್ನೂ ಹೆಚ್ಚು ಬರೆಯಬೇಕೆಂಬುದು ನನ್ನಾಸೆ. "ಹ್ಯಾಟ್ಸಾಫ್ ಟು ಯೂ".

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.