ರೆಸೆಷನ್ ಸ್ವಾಮಿ, ರೆಸೆಷನ್, ಆರ್ಥಿಕ ಹಿಂಜರಿತ.....

5

ಏನು ಮಾಡಲಿ,, ನಾನು ಏನು ಮಾಡಲಿ,
ಎಲ್ಲಿ ಹೋಗಲಿ,  ನಾನು ಏನು ಕೊಳ್ಳಲಿ ?

ಈ ರೆಸೆಷನ್ ಸಮಯದಲ್ಲಿ
ಕೈಲಿರುವ ಈ ಪುಡಿಗಾಸಿನಲ್ಲಿ
ಅಕ್ಕಿ, ಬೇಳೆ, ತರಕಾರಿಗಳ ಬೆಲೆಗಳೆಲ್ಲ
ಮುಗಿಲು ಮುಟ್ಟಿರುವಾಗ,

ಏನು ಮಾಡಲಿ,, ನಾನು ಏನು ಮಾಡಲಿ ?
ಎಲ್ಲಿ ಹೋಗಲಿ,  ನಾನು ಏನು ಕೊಳ್ಳಲಿ ?

ಮಗನಿಗೆ ಕಬಾಬು, ಮಗಳಿಗೆ ಗೋಬಿ ಮಂಚೂರಿ,
ನಮ್ಮ ಟಾಮಿಗೆ ಬಿಸ್ಕತ್ತು, ಹೇಗೆ ತರಲಿ ?

ಪಕ್ಕದ ಮನೆಯವರು ತಂದ ಹೊಸ ಓವನ್ನು,
ಎದುರು ಮನೆಯವರು ತಂದ ಹೊಸ ಕಾರು,
ಹಿಂದಿನ ಮನೆಯವರು ತಂದ ರೇಷ್ಮೆ ಸೀರೆ,
ಹೇಗೆ ತರಲಿ, ನಾ ಹೇಗೆ ತರಲಿ ?

ಓ ರೆಸೆಷನ್ನೇ, ನೀನೇಕೆ ಬಂದೆ ?
ಹೋಗಿ ಕಾಡು ಜಾರ್ಜ್ ಬುಷ್ನನ್ನು,
ಬಾರಕ್ ಒಬಾಮಾನನ್ನು,
ನೀನು ಇಲ್ಲೇಕೆ ಬಂದೆ ?

ಏನು ಮಾಡಲಿ,, ನಾನು ಏನು ಮಾಡಲಿ ?
ಎಲ್ಲಿ ಹೋಗಲಿ,  ನಾನು ಏನು ಕೊಳ್ಳಲಿ ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಜೋರಾಗಿ,, ಇನ್ನೂ ಜೋರಾಗಿ ನಕ್ಕು ಬಿಡಿ, ಇದನ್ನು ಬರೆದಿದ್ದು ನಿಮ್ಮಂಥ ಮಧ್ಯಮ ವರ್ಗದ ಹೆಣ್ಮಕ್ಕಳ ಇಂದಿನ ಪಾಡನ್ನು ನೋಡಿ..............

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಗನಿಗೆ ಕಬಾಬು, (ನಾವು vegeterian) ಮಗಳಿಗೆ (ಮಗಳಿಲ್ಲ ಮಗ ಇರೋದು)ಗೋಬಿ ಮಂಚೂರಿ,
ನಮ್ಮ ಟಾಮಿಗೆ ಬಿಸ್ಕತ್ತು, ಹೇಗೆ ತರಲಿ ?(ನಾಯಿನು ಇಲ್ಲ)
ಪಕ್ಕದ ಮನೆಯವರು ತಂದ ಹೊಸ ಓವನ್ನು,(ನನು ಪಕ್ಕದ ಮನೆಗೆ ಹೋಗೋದೆ ಇಲ್ಲ)
ಎದುರು ಮನೆಯವರು ತಂದ ಹೊಸ ಕಾರು,(ನಮ್ಮನೆಯಲೆ ಕಾರಿದೆ೦
ಹಿಂದಿನ ಮನೆಯವರು ತಂದ ರೇಷ್ಮೆ ಸೀರೆ,(ಇದರ ಆಸೆನೆ ಇಲ್ಲ)
ಹೇಗೆ ತರಲಿ, ನಾ ಹೇಗೆ ತರಲಿ ?
ನನಿಗೆ ಇಂಥ ಆಸೆ ಎಲ್ಲ ಇಲ್ಲ ಬಿಡಿ......ಹಹ್ಹ ಹ್ಹ್ಹಹ್ಹ್ಹ ಹ್ಹ್ಹ ಹ್ಹ್ಹ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಜಿಟೇರಿಯನ್ ನಲ್ಲೂ ಕಬಾಬು ಸಿಗುತ್ತೆ, ಮಗಳಿಲ್ಲದಿದ್ದರೆ ಮಗನಿಗೇ ತಿನ್ನಿಸಿ, ದುಡ್ಡಿದ್ದರೆ ಎಂಥಾ ನಾಯಿಯನ್ನಾದರೂ ತರಬಹುದು, ಓವನ್ನು - ಹೊಸ ಕಾರು - ರೇಷ್ಮೆ ಸೀರೆಯ ಆಸೆ ಇಲ್ಲಾ ಅಂದರೆ,,,,,,ಬರಿ ಓಳು,,, ಬರಿ ಓಳು,,,,ನಾ ನಂಬಲ್ಲಪ್ಪ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.