ಇನ್ನೂ ಕುಸಿಯುವ ಮುನ್ನ ವಿವೇಕ ಹೇಳಿ

0

ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಜೋಡಿಸಿಕೊಂಡಿದ್ದ ನನಗೆ ಈಗೇಕೋ ಏನೂ ಬೇಡವೆಂಬ ನಿರ್ಲಿಪ್ತ ಭಾವ.ಯಾವ ವಿಚಾರ ನನಗೆ ಒಂದು ದಿಕ್ಕು ತೋರಿಸಿತ್ತೋ, ಯಾವುದರಲ್ಲಿ ನನ್ನ ಜೀವನದ ಬಹುಪಾಲು ಸಮಯ ಹಾಸುಹೊಕ್ಕಿತ್ತೋ, ಯಾವ ವಿಚಾರಧಾರೆ ನನಗೆ ಸ್ಪೂರ್ತಿಯಸೆಲೆಯಾಗಿತ್ತೋ, ಅದೇ ಕುಸಿಯುತ್ತಿರುವ ಭಾವ. ಅದೇ ವಿಚಾರದಲ್ಲಿ ಇನ್ನೂ ತಮ್ಮನ್ನು ಸರ್ವಸಮರ್ಪಣೆ ಮಾಡಿಕೊಂಡಿರುವ ಹಿರಿಯರಲ್ಲಿ ನನ್ನ ಮನದಾಳದ ನೋವು ಹೇಳಿಕೊಂಡರೆ ಸಿಕ್ಕ ಉತ್ತರ " ಚಟುವಟಿಕೆಗಳಿಂದ ದೂರವಾದಾಗ ಸಹಜವಾಗಿ ಹಾಗೆನ್ನಿಸುತ್ತೆ. ಅಂತಾದ್ದೇನೂ ಆಗಬಾರದ್ದು ಆಗಿಹೋಗಿಲ್ಲ, ನೀನು ದೂರವಿದ್ದು ನೋಡುತ್ತಿದ್ದೀಯ. ಅದಕ್ಕೇ ಹಾಗೆ ಕಾಣುತ್ತೆ"................
ಅರೇ, ನಾನು ಕಾಣುತ್ತಿರುವ ದೃಶ್ಯಗಳೆಲ್ಲಾ ಸುಳ್ಳೇ? ಯಾವ ಸಭೆ ಸಮಾರಂಭಗಳು ಶಿಸ್ತಿಗೆ ಹೆಸರಾಗಿತ್ತೋ, ಯಾವ ಕಾರ್ಯಕರ್ತರು ಹಗಲಿರುಳು ನಿದ್ರೆಗೆಟ್ಟು, ಹೊಟ್ಟೆಗೆ ಅನ್ನವಿಲ್ಲದೆ ದೇಶದ ಹೆಸರಲ್ಲಿ, ಸಮಾಜದ ಹೆಸರಲ್ಲಿ ದುಡಿದು ಸಂಘಟನೆ ಕಟ್ಟಿದರೋ, ಅದೇ ಸಂಘಟನೆಯಾ ಇದು? ಪ್ರೀತಿ, ವಾತ್ಸಲ್ಯ, ಮಮಕಾರ ಎಲ್ಲಾ ಎಲ್ಲಿ ಹೋಯ್ತು? " ವ್ಯಕ್ತಿ ನಿರ್ಮಾಣದ" ಹೆಸರಲ್ಲಿ ವಿವೇಕಾನಂದ ರಾಮಕೃಷ್ಣರ ಆದರ್ಶಗಳನ್ನು ಕಣ್ಮುಂದೆ ಇಟ್ಟುಕೊಂಡು ರಾಷ್ಟ್ರಭಕ್ತ ಪಡೆಯನ್ನು ಕಟ್ಟುವುದರಲ್ಲಿ ಪ್ರಪಂಚಕ್ಕೇ ಸರಿ ಸಾಟಿ ಇಲ್ಲವೆಂಬ ಕೀರ್ತಿಗೆ ಭಾಜನವಾಗಿದ್ದ ಸಂಘಟನೆ ಎಲ್ಲಿ ಹೋಯ್ತು? ನಮ್ಮಂತ ಸಹಸ್ರಾರು ಕಾರ್ಯಕರ್ತರಿಗೆ ದೇಶಭಕ್ತಿಯ ಬೀಜಬಿತ್ತಿ, ಸಾಮಾಜಿಕ ಕಳಕಳಿಯ ಪರಿಚಯ ಮಾಡಿಸಿ ತಮ್ಮ ಜೀವನವನ್ನು ತಾಯಿ ಭಾರತಿಯ ಚರಣಕ್ಕೆ ಸಮರ್ಪಿಸಿ ಜೀವಿತದ ಕೊನೆಯ ಗಳಿಗೆಯಲ್ಲಿರುವ ನನ್ನ ಅಣ್ಣಂದಿರೇ, ಇನ್ನೂ ಕುಸಿಯುವ ಮುನ್ನ ವಿವೇಕ ಹೇಳಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆರೆಸ್ಸಸ್ಸ್ ಬಗ್ಗೆನಾ ಈ ಮಾತು?

ಆರೆಸ್ಸಸ್ಸ್ ಬಗ್ಗೆ ನನಗೆ ನನ್ನದೇ ಆದ ಸ್ಟ್ರಾಂಗ್ ಒಪಿನಿಯನ್ ಗಳು (ರಾಗ ದ್ವೇಷಗಳಲ್ಲ) ಇವೆ. ಯಾರಾದರೂ ಪ್ರೌಡರು ಸಿಕ್ಕರೆ ಸ್ವಲ್ಪ ಮಟ್ಟಿಗೆ ಮಾತನಾಡಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃ

ನಿಮಗೆ 'ಆ ಪ್ರೌಡರು' ಸಿಕ್ಕಿದರೆ,ಅವರೊಂದಿಗೆ ಮಾತಾಡಿ.
ಹಾಗೆ ಅದನ್ನ ನಮ್ಮೊಂದಿಗೆ ಹಂಚಿಕೊಳ್ಳಿ ಪ್ಲೀಸ್

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವ ಸಂಘಟನೆ ಯೆಂದು ತಿಳಿಸಿದರೆ ಸ್ವಲ್ಪ ಸಹಾಯವಾಗಬಹುದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕುಸಿದ ಮೇಲೆಯೇ ಬುದ್ದಿ ಬರುವುದು ಅನ್ನಿಸುತ್ತೆ. ಸರ್ ಯಾಕೆ ಇಷ್ಟೊಂದು ಭಾವುಕರಾಗ್ತಿರ? ... ಸ್ವಲ್ಪ ಬಿಸಿ ತಾಕಿದರೆ ಮತ್ತೆ ಎಲ್ಲ ಎದ್ದು ನಿಲ್ತಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್
ನಿಮ್ಮ ಈ ತುಮುಲವನ್ನು ತೀವ್ರವಾದ ಭಾವನಾತ್ಮಕ ಖಿನ್ನತೆ (Intense Emotional Depression) ಎ೦ದು ಕರೆಯೋಣವೇ?
ಸರಳತೆ, ಆದರ್ಶ, ಸ೦ಸ್ಕೃತಿಯ ಅಡಿಗಲ್ಲ ಮೇಲೆ ಅರಳಿದ ಸೌಧದಲ್ಲಿ ಬೆಳೆದು ತಯಾರಾದ ನಿಸ್ಪೃಹ ಕಾರ್ಯಕರ್ತನ ಪ್ರಾಮಾಣಿಕ ಅಳಲು ಸ೦ಕಟ ನಿಮ್ಮದು ಶ್ರೀಧರ್, ನಿಜ ನಾವು ಕ೦ಡುಕೊ೦ಡ ಆದರ್ಶ ಮತ್ತು ಅ೦ತಹ ಆದರ್ಶ ವ್ಯಕ್ತಿಗಳು ನಮ್ಮ ಕಣ್ಣೆದುರಿಗೇ ಕುಸಿದು ಮೆಲ್ಲ ಮೆಲ್ಲಗೇ ಕರಗುತ್ತಿರುವುದು, ಶಿಥಿಲವಾಗುತ್ತಿರುವುದು ಯಾವುದೇ ಸ೦ವೇದನಾಶೀಲ ಹೃದಯಕ್ಕೆ ಒ೦ದು ಹೃದಯವಿದ್ರಾವಕ ಸ೦ಗತಿಯೇ. ನಾನೂ ಇ೦ತಹುದೇ ಆತ್ಮ ಸ೦ಕಟವನ್ನು ಹಲವಾರು ಬಾರಿ ತೀವ್ರವಾಗಿ ಅನುಭವಿಸಿದ್ದೇನೆ. ಕೊನೆಗೆ ಈ ಅಸ್ತಿತ್ವದ ನೆಲೆ, ದೆಸೆ, ಅ೦ತ್ಯ ಯಾವುದು ಎ೦ಬುದು ಒ೦ದು ಬರೀ ಗೋಜಲಾಗೇ ಭಾಸವಾಗುವುದು ಸ೦ವೇದನಾಶೀಲರಿಗೆ ಒ೦ದು ಭರಿಸಲಾಗದ ಗೊ೦ದಲ. ಒ೦ದು ಯಾತನೆಯೂ ಆಗುವುದು. ಆದರೂ ನಾವು ವಾಸ್ತವದ ಕಠಿಣ ಹಿನ್ನೆಲೆಯಲ್ಲಿ ನಮ್ಮ ನಮ್ಮ ಮನಸ್ಸುಗಳನ್ನು ಹೃದಯಗಳನ್ನು ಘಟ್ಟಿ ಮಾಡಿಕೊಳ್ಳೋಣ. ನಮ್ಮ ವೈಯುಕ್ತಿಕ ಬದುಕಿನ ಆಳದಲ್ಲಿ ನಾವು ಇನೂ ಪ್ರಾಮಾಣಿಕರಾಗಿದ್ದೇವೆಯಾ? ಅಥವಾ ನಾವು ನ೦ಬಿಕೊ೦ಡು ಬ೦ದಿರುವ ನಮ್ಮ ಕನ್ವಿಕ್ಶನ್ ಗಳಿಗೆ ಬದ್ಧರಾಗಿದ್ದೇವೆಯಾ ಎ೦ಬುದನ್ನು ಸ್ವಲ್ಪ ಆತ್ಮಾವಲೋಕನ ಮಾಡಿಕೊ೦ಡು ನಾವು ಇದರ೦ತೆಯೇ ಬದುಕಿದ್ದಲ್ಲಿ ಅಥವಾ ಬದುಕುತ್ತಿದ್ದರೆ ನಾವು ವೃಥಾ ವ್ಯಥೆ ಪಡುವುದಕ್ಕೆ ಯಾವ ಅರ್ಥವೂ ಇಲ್ಲ ವೆ೦ದೇ ನನ್ನ ಗಾಢ ನ೦ಬಿಕೆ ಶ್ರೀಧರ್. ಅದೇ ನಮ್ಮ ಬದುಕುಗಳ ಒ೦ದು ನೆಮ್ಮದಿ ಅರ್ಥ ಎಲ್ಲವೂ . ನೀವು ಸ್ವಭಾವತಃ ಭಾವಜೀವಿ, ಇರಲಿ ನೀವು ತು೦ಬಾ ಆಪ್ತವಾಗಿ ನ೦ಬಿಕೊ೦ಡು ಬ೦ದ ಭಾವನೆಗಳನ್ನು ನೀವು ಗೌರವಿಸಿದಲ್ಲಿ ಅದೇ ಸಾರ್ಥಕ್ಯ. ಸಮಾಜವೆಲ್ಲವೂ ಬದಲಾಗಬೇಕು, ನಾವು ನ೦ಬಿದ ವ್ಯಕ್ತಿಗಳೆಲ್ಲರೂ ಬದಲಾಗಬೇಕು ಎ೦ಬ ಹುಸಿ ಆಕಾ೦ಕ್ಷೆಗಳನ್ನು ನಮ್ಮ ಒಡಲಿನಿ೦ದ ಕಿತ್ತೆಸೆಯೋಣ ಶ್ರೀಧರ್. ನಾವು ಬದಲಾಗೋಣ, ವೈಯುಕ್ತಿಕವಾಗಿ. ಭಾವನೆಗಳನ್ನು(ನಿರರ್ಥಕ) ಹೆಚ್ಚು ಹಚ್ಚಿಕೊಳ್ಳುವುದು ಬೇಡವೆ೦ಬುದೇ ಒಬ್ಬ ಸ್ನೇಹಿತನಾಗಿ, ಒಬ್ಬ ಸಹೃದಯ ಹಿತೈಶಿಯಾಗಿ ನಿಮ್ಮಲ್ಲಿ ನನ್ನ ಕೋರಿಕೆ. ನಿಮಗೆ ವಿವೇಕ ಹೇಳುವ೦ಥಾ ಅಗತ್ಯವೂ ಇಲ್ಲ ಶ್ರೀಧರ್. ಆ ಶೀಲತೆ ನಿಮ್ಮಲ್ಲಿಯೇ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್,
ಸಮಸ್ಯೆಗಳನ್ನು ಕಂಡು, ಪಟ್ಟಿ ಮಾಡಿ, ಮರುಕ ಪಡುವುದು ಮಾನವ ಸಹಜ ಗುಣ.
ಆದರೆ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಿ, ಪರಿಹಾರದತ್ತ ಶ್ರಮಪಡಲು ತನ್ನನ್ನು ಹೊಂದಿಸಿಕೊಳ್ಳುವುದು ಉತ್ತಮರ ಗುಣ.
ಆ ನಿಟ್ಟಿನಲ್ಲಿ ಪ್ರಯತ್ನಿಸಿ ನೋಡಿ. ನಿಮ್ಮ ಮನಸ್ಸಿಗೂ ನೆಮ್ಮದಿ ಸಿಗಬಹುದು.

ಕೆಟ್ಟಿರುವುದು ನಿಮ್ಮ ಆ ಸಂಘ ಒಂದೇ ಅಲ್ಲ.
ಕೆಟ್ಟಿರುವುದರ ಪಟ್ಟಿ ಮಾಡಲು ಕೂತರೆ ಪುಸ್ತಕವೇ ಬೇಕಾಗಬಹುದು.
ಕೆಡದೇ ಉಳಿದುದರ ಪಟ್ಟಿ ಮಾಡಲು ಒಂದು ಪುಟವೂ ಜಾಸ್ತಿ ಎನಿಸಬಹುದು.

ನಮ್ಮ ದೇಶದಲ್ಲಿ ಸಮರ್ಥ ನಾಯಕತ್ವದ ಕೊರತೆ, ಅಲ್ಲದೆ ನಾಯಕರನ್ನು ಮನಸಾರೆ ಒಪ್ಪಿ ಹಿಂಬಾಲಿಸುವ ಹಿಂಬಾಲಕರ ಕೊರತೆ ಎರಡೂ ಸರಿ ಸಮನಾಗೇ ಇದೆ. ಇದೇ ಇಂದಿನ ಸಮಸ್ಯೆಗಳಿಗೆ ಪ್ರಮುಖ ಕಾರಣ. ಇಂದು ಇಡೀ ದೇಶದ ಜನತೆಯನ್ನು ತನ್ನ ಹಿಂದೆ ಕಟ್ಟಿಕೊಂಡು ನಡೆಯಬಲ್ಲ ಸಮರ್ಥ ನಾಯಕ ಎಲ್ಲಿದ್ದಾನೆ ಹೇಳಿ. ನಾಯಕನಿಲ್ಲದಿರೆ ಹಿಂಬಾಲಕರೆಲ್ಲಿರುತ್ತಾರೆ.

ರಾಜಕೀಯ ಅನ್ನುವುದು ಎಲ್ಲಾ ಸಂಘ ಸಂಘಟನೆಗಳಲ್ಲಿ ಹಾಸು ಹೊಕ್ಕಾಗಿ, ಭ್ರಷ್ಟಾಚಾರದ ರೂಪ ತಳೆದು, ಒಳಗಿಂದೊಳಗೇ ತಿಂದು ಹಾಕುತ್ತಿದೆ, ಗೆದ್ದಲಿನಂತೆ. ಇದಕ್ಕೆಲ್ಲಾ ಕಾಲವೇ ಉತ್ತರ ಕೊಡಬೇಕು.

ಒಂದು ವೇಳೆ ನಮ್ಮ ದೇಶದ ಮೇಲೆ ಹೊರಗಿನಿಂದ ಆಕ್ರಮಣ ನಡೆದರೆ ಈ ದೇಶದಲ್ಲಿ ಒಗ್ಗಟ್ಟು, ನಾಯಕತ್ವ, ಹಿಂಬಾಲಕರು ಎಲ್ಲರೂ ಹುಟ್ಟಿಕೊಳ್ಳಬಹುದು.

ಇಲ್ಲವೋ ಬರೇ ಸಮಾಜಸೇವೆಯನ್ನೇ ತಮ್ಮ ಜೀವನದ ಉದ್ದೇಶವನ್ನಾಗಿರಿಸಿಕೊಂಡ ಬ್ರಹ್ಮಚಾರಿಗಳು ಮುಂದೆ ಬರಬೇಕು. ಬ್ರಹ್ಮಚಾರಿಗಳಲ್ಲದವರಿಗೆ ಅವರದೇ ಆದ ಸಾಂಸಾರಿಕ ಜಂಜಾಟಗಳು ಅವರನ್ನು ಕುಬ್ಜರನ್ನಾಗಿಸುತ್ತದೆ. ಇಲ್ಲವೇ ಭ್ರಷ್ಟರನ್ನಾಗಿಸುತ್ತವೆ.

ಅಲ್ಲೀ ತನಕ ಇದು ಹೀಗೆಯೇ ಮುಂದುವರೆಯುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಪಕ್ಕದೂರಿನ ಶ್ರೀಧರಣ್ಣನವರೇ, ಏಕೆ ಹೀಗೆ ಅಲವತ್ತುಕೊಳ್ಳುತ್ತಿದ್ದೀರಿ ? ಜಗತ್ತಿನ ಎಲ್ಲಾ ಕಡೆಯೂ ಇಂದು ನೈತಿಕ ಮೌಲ್ಯಗಳು ಕುಸಿದು ಬಿದ್ದಿವೆ. ನಿಮ್ಮ ಸಂಘಟನೆಯೊಂದೇ ಅಲ್ಲ, ಜಗಕೆ ತಾನೇ ದೊಡ್ಡಣ್ಣನೆಂದು ಡಂಗೂರ ಸಾರಿಕೊಂಡು ಬಂದ ಅಮೇರಿಕ ಸಹ ಇಂದು ಕುಸಿದು ಬಿದ್ದಿದೆ. "ಪರಿವರ್ತನೆ ಪ್ರಕ್ರುತಿಯ ನಿಯಮ". ನಾವು ಅದನ್ನು ಒಪ್ಪಿಕೊಳ್ಳಬೇಕು ಮತ್ತು ಜೀವನವನ್ನು ಅದು ಬಂದಂತೆ ಸ್ವೀಕರಿಸಬೇಕು. ದಯವಿಟ್ಟು ಕುಸಿಯಬೇಡಿ, ಧೈರ್ಯದಿಂದಿರಿ: " ಬಂದದ್ದೆಲ್ಲಾ ಬರಲಿ, ಆ ಧರ್ಮಸ್ಥಳದ ಮಂಜುನಾಥನ ದಯೆಯೊಂದಿರಲಿ" ಎಂದು ಶಾಂತರಾಗಿ. ನಿಮಗೆ ಇನ್ನೂ ಕುಸಿಯುವ ಶಂಕೆಯಿದ್ದರೆ ದಯ ಮಾಡಿ ನನ್ನೂರಿನ ಹೇಮಾವತಿಯ ದಡದಲ್ಲಿ ಕುಳಿತು ಕಣ್ಮುಚ್ಚಿ, ಆ ನೀರಿಗಿದೆ ಆ ದೈತ್ಯ ಶಕ್ತಿ, ಖಂಡಿತ ನಿಮ್ಮನ್ನು ಕುಸಿತದಿಂದ ಮೇಲೆತ್ತಿಬಿಡುವಳು ತಾಯಿ ಹೇಮಾವತಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಗುರುಬಾಳಿಗಾ,ಸವಿತೃ,ರಾಕೇಶ್, ಪ್ರಭಾಕರ್,ಸುರೇಶ್,ಜ್ಞಾನದೇವ್...
ನಿಮ್ಮೆಲ್ಲರ ಪ್ರತಿಕ್ರಿಯೆಗೆ ಕೃತಜ್ಞ.
ನನ್ನ ಭಾವನೆ ನಿಮಗರ್ಥವಾಗಿದೆ.ಹೀಗೆಯೇ ಹಲವರಿಗೆ ತಿಳಿದು ಏನಾದರೂ ಪರಿಣಾಮ ಆಗುವುದಾದರೆ ಆಗಲೀ, ಅಷ್ಟೆ.ಇಡೀ ಜೀವನವನ್ನು ಸಮಾಜಕ್ಕಾಗಿ ತೇದಿರುವ ನನ್ನ ಅಣ್ಣಂದಿರು ನನಗೆ ಸದಾಕಾಲ ಸ್ಪೂರ್ಥಿ. ಅನೇಕರು ಈ ಸಮಾಜಯಜ್ಞದಲ್ಲಿ ಹವಿಸ್ಸಾಗಿ ಜೀವನ್ಮುಕ್ತರಾಗಿರುವುದನ್ನು ನೋಡಿದ್ದೇನೆ.ಅನೇಕರು ತಮ್ಮ ಜೀವಿತದ ಅಂತ್ಯಭಾಗದಲ್ಲಿದ್ದು ಇದಾವುದಕ್ಕೂ ತಲೆಕೆಡಸಿಕೊಳ್ಳದೆ ಇಂದಿಗೂ ಸಹಸ್ರಾರು ಜನರಿಗೆ ಸ್ಪೂರ್ಥಿದಾಯಕರಾಗಿ ಸಕ್ರಿಯರಾಗಿಯೇ ಇದ್ದಾರೆ. ಆದರೆ ನಮ್ಮಂತಹ ಕೆಲವರು ಮರುಗುವವರೂ ಇದ್ದಾರೆ. ಆದರೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವವರು ವಿರಳ. ಇಷ್ಟಾದರೂ ನನಗೊಂದು ಜೀವನದ ಸಾರ್ಥಕತೆಯ ಪಾಠ ಕಲಿಸಿದ ವಿಚಾರಧಾರೆಯಿಂದ ಪಕ್ಕಕ್ಕೆ ಸರಿಯುವ ಮಾತೇ ಇಲ್ಲ.ನಾನು ನಿರಾಳವಾಗೇ ಇದ್ದೇನೆ, ಭಾವನೆಯನ್ನು ಹಂಚಿಕೊಂಡೆ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.