ನಿಜಕ್ಕೂ ಈ ಸರಕಾರಕ್ಕೆ ಕನ್ನಡತನ ಅಂದರೆ ಏನು ಅಂತ ಗೊತ್ತಿದೆಯಾ?????

0

ಸುಮಾರು ಎರೆಡು ದಿನಗಳ ಹಿಂದೆ ಸರಕಾರ ಒಂದು ಸುತ್ತೋಲೆ ಹೊರಡಿಸುತ್ತದೆ ಇದರ ಒಕ್ಕರಣೆ ಹೀಗಿದೆ "ಇನ್ನು ಮೇಲೆ ಯಾವುದೇ ಸರಕಾರೀ ಮತ್ತು ಅರೆ ಸರಕಾರೀ ಕಟ್ಟಡಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬಾರದು". ನೋಡಿ ಇದು ನಮ್ಮ ಕರ್ನಾಟಕದ ಪರಿಸ್ಥಿತಿ. ಇಂತಹ ಘಟನೆಗಳು ಕೇವಲ ಕರ್ನಾಟಕದಲ್ಲಿ ನಡೆಯಲು ಮಾತ್ರ ಸಾಧ್ಯ. ನಿಜಕ್ಕೂ ಈ ಸರಕಾರಕ್ಕೆ ತಾವು ಆಡಳಿತ ನಡೆಸುತ್ತಿರುವುದು ಕರ್ನಾಟಕದಲ್ಲಿ ಅನ್ನೋದು ಮರೆತು ಹೋಗಿದೆ.

ಯಾಕೆ ಹೀಗೆ ಸರಕಾರ ಮಾಡುತ್ತಿದೆ ಅನ್ನೋದಕ್ಕೆ ಅವರೇ ಉತ್ತರ ಹೇಳಬೇಕು. ಬಹುಶಃ ಬಿ ಜೆ ಪಿ ಅನ್ನೋ ಪಕ್ಷಕ್ಕೆ ರಾಷ್ಟ್ರ ಧ್ವಜ ಬಿಟ್ಟು ಬೇರೆ ಧ್ವಜ ಹಾರಿಸೋದು ಸರಿ ಬರೋಲ್ಲ ಅಂತ ಕಾಣುತ್ತೆ. ಈ ಸರಕಾರಕ್ಕೆ ಕನ್ನಡಿಗರ ಭಾವನೆಗಳು ಅರ್ಥ ಮಾಡಿಸೋಕೆ ಹೋರಾಟವನ್ನೇ ಮಾಡಬೇಕು. ಬಹುಶಃ ಈ ಸರಕಾರಕ್ಕೆ ಒಂದು ನಾಡಿನ ಸ್ವಾಭಿಮಾನದ ಸಂಕೇತವಾದ ಭಾವುಟವನ್ನ, ಕನ್ನಡಿಗರ ಹೋರಾಟದ ಪ್ರತೀಕ ವಾದ ಧ್ವಜವನ್ನ ಮತ್ತು ಅದರ ಮಹತ್ವವನ್ನ ಅರಿತುಕೊಳ್ಳುವುದರಲ್ಲಿ ಸೋತಿದೆ ಅಂತ ಹೇಳಬಹುದು. ನಿಜಕ್ಕೂ ಈ ಸರಕಾರದ ಹೊಣೆಗೇಡಿತನಕ್ಕೆ ನಾಚಿಕೆ ಆಗಬೇಕು.

ಈ ಸುತ್ತೋಲೆ ಹೊರ ಬೀಳುತ್ತಿದ್ದಂತೆ ಮೊದಲು ಹೋರಾಟ ಶುರು ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆ, ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟಿಗೆ ಈ ಆದೇಶದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮುಖ್ಯ ಮಂತ್ರಿ ಚಂದ್ರು ಮತ್ತು ಇತರೆ ಕನ್ನಡ ಸಂಘಟನೆಗಳು ಧ್ವನಿ ಗೂಡಿಸಿದ ನಂತರ, ಈ ಸರಕಾರ ಈಗ ಈ ಆದೇಶವನ್ನ ಹಿಂಪಡೆದುಕೊಂಡಿದೆ. ಅದಕ್ಕೆ ಅವರ ಉತ್ತರ ನೋಡಿ "ಇದು ಈ ಸರಕಾರದಲ್ಲಿ ಮಾಡಿರುವ ನಿರ್ಧಾರವಲ್ಲ ಇದನ್ನ ಮುಂಚೆನೇ ಮಾಡಲಾಗಿತ್ತು". ಸರಕಾರಕ್ಕೆ ನಾವು ಕೇಳೋದು, ಇಂತಹ ಒಂದು ಆದೇಶವನ್ನ ಪ್ರಕಟಿಸುವುದಕ್ಕೆ ಮುಂಚೆ ಇದರ ಪರಿಣಾಮ ಏನು ಆಗುತ್ತೆ ಅನ್ನೋ ಅರಿವು ಇರುವುದಿಲ್ಲವೇ.

ಇದಕೆಲ್ಲ ಪರಿಹಾರ ಕರ್ನಾಟಕದ್ದೇ ಆದ ಒಂದು ಪ್ರಾದೇಶಿಕ ಪಕ್ಷ ಹುಟ್ಟಬೇಕು, ಅದು ಕನ್ನಡ, ಕನ್ನಡಿಗರ ಮತ್ತು ಕರ್ನಾಟಕದ ಹಿತಾಸಕ್ತಿಗೆ ಟೊಂಕ್ಕ ಕಟ್ಟಿ ದುಡಿಯುವಂತಹುದಾಗಿರಬೇಕು.

ಹೆಚ್ಚಿನ ಮಾಹಿತಿಗೆ :
http://karave.blogspot.com/2009/06/kannadadwajakke-nirbanda-krv-viroda.html
http://www.kannadaprabha.com/pdf/epaper.asp?pdfdate=6/6/2009

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಓರಾಟ ಈಗೆಯೆ ಮುಂಧುವ್ಹರೆಯಲಿ ಹೆಂದು ಸರ್ಖಾರದ ಹ್ಯೋಚನೆ ಹಿರಬೇಕು ,,,,

ಹಿದೆಲ್ಲಾ ಹೆಂದು ಖೊನೆ ಹಾಗುತ್ತೋ..:(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕನ್ನಡ ಬಾವುಟದ ಕಲ್ಪನೆಯನ್ನು ಮೊದಲಿಗೆ ತಂದವರ್ಯಾರು? ಭಾರತದ ಎಷ್ಟೋ ರಾಜ್ಯಗಳಿಗೆ ಧ್ವಜ ಇಲ್ಲ.ಹಾಗಂತ ಅವರಿಗೆ ರಾಜ್ಯಾಭಿಮಾನವಿಲ್ಲವೆಂದಂತಲ್ಲ. ಇಷ್ಟಕ್ಕೂ ನಿಶೇಧ ಹೇರಿರೋದು ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ. ಸರ್ಕಾರ ಎಂದರೆ ಅದು ದೇಶವನ್ನು ಪ್ರತಿ ನಿಧಿಸುತ್ತದೆ.ನಿಶೇಧ ಹೇರಿರೋದರಲ್ಲಿ ತಪ್ಪೇನೂ ಇಲ್ಲ.ಇದು ನನ್ನ ಅಭಿಪ್ರಾಯ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತೀಶ್,
ನಾನಿಲ್ಲಿ ಬೇರೆ ರಾಜ್ಯದವರ ಅಭಿಮಾನದ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಒಂದು ಜವಾಬ್ದಾರಿಯುತ ಸರಕಾರ ಒಂದು ನಾಡಿನ ಬಾವುಟವನ್ನ ಇನ್ನು ಮೇಲೆ ಹಾರಿಸಬಾರದು ಅಂತ ಅಪ್ಪಣೆ ಮಾಡಿದರೆ ಅದು ತಪ್ಪಲ್ಲ ಅಂತ ಹೇಗೆ ಹೇಳ್ತಿರಿ?
<<ಸರ್ಕಾರ ಎಂದರೆ ಅದು ದೇಶವನ್ನು ಪ್ರತಿ ನಿಧಿಸುತ್ತದೆ.ನಿಶೇಧ ಹೇರಿರೋದರಲ್ಲಿ ತಪ್ಪೇನೂ ಇಲ್ಲ>>
ಸರ್ಕಾರ ನಮ್ಮ ದೇಶವನ್ನ ಪ್ರತಿನಿಧಿಸುತ್ತಿಲ್ಲ, ಇದು ರಾಜ್ಯ ಸರಕಾರ ಇದು ನಮ್ಮ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ದೇಶವನ್ನ ಪ್ರತಿನಿಧಿಸೋಕೆ ಅಂತ ಕೇಂದ್ರ ಸರಕಾರವಿದೆ. ನಿಮ್ಮ ಪ್ರಕಾರ ಕರ್ನಾಟಕ ಭಾರತದಲ್ಲಿ ಇಲ್ಲವೇ? ಕರ್ನಾಟಕಕ್ಕೆ ತನ್ನದೇ ಆದ ಹೋರಾಟದ ಇತಿಹಾಸವಿದೆ, ಅವುಗಳೆಲ್ಲದರ ಸಂಕೇತ ಈ ನಮ್ಮ ಕನ್ನಡ ಬಾವುಟ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

http://thatskannada.oneindia.in/news/2009/06/08/karnataka-government-wit...
ನೀವು ಯಾವಾಗ ನ್ಯೂಸ್ ಓದಿದ್ದು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೬ ನೆ ತಾರಿಕ್ಕು ಕನ್ನಡ ಪ್ರಭದಲ್ಲಿ.
http://www.kannadaprabha.com/pdf/epaper.asp?pdfdate=6/6/2009

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಣು ಕೊಟ್ಟ ಲಿಂಕ್ ನೋಡಿದಿರ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಂ ನೋಡಿದ್ದೇನೆ.
ಎಲ್ಲರು ಸರ್ಕಾರದ ವಿರುದ್ಧ ತಿರುಗಿಬಿದ್ದಾಗ ಈ ಆದೇಶವನ್ನ ಸರಕಾರ ವಾಪಸ್ ಪಡೆದುಕೊಂಡಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D ಅಂದ್ಮೇಲೆ ಇವತ್ತು ಯಾಕೆ ನಿಮ್ಗೆ ಹೊರಾಟ ಮಾಡೊ ಮನಸ್ಸು ಬಂತು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಹೋರಾಟ ಮಾಡಿ ಅಂತ ಹೇಳ್ತಿಲ್ಲ. ಆದ್ರೆ ಸರಕಾರಗಳ ಎಡಬಿಡಂಗಿತನ ಹೇಗಿರುತ್ತೆ ಅಂತ ಬರಿಯಬೇಕು ಅಂತ ಇದ್ದೆ. ಇವತ್ತು ಸಮಯ ಸಿಕ್ತು ಬರೆದೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇದಕೆಲ್ಲ ಪರಿಹಾರ ಕರ್ನಾಟಕದ್ದೇ ಆದ ಒಂದು ಪ್ರಾದೇಶಿಕ ಪಕ್ಷ ಹುಟ್ಟಬೇಕು

ಇದು ಪರಿಹಾರವಲ್ಲ-ಸಮಸ್ಯೆ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.