ನಗುತಿರುವ ಚಂದಿರ

0

ಈಗೀಗಂತೂ ವಾತಾವರಣ ತುಂಬಾ ಚೆನ್ನಾಗಿದೆ. ಆಹ್ಲಾದಕರವಾಗಿದೆ. ಒಂದು ಕಡೆ ಮೋಡ , ಮಳೆ, ಮುಂಗಾರಿನ ಗದ್ದಲ, ರಾತ್ರಿಯಾಯ್ತೆಂದರೆ ಅದೇ ಮೋಡಗಳ ನಡುವೆ ಆಗೊಮ್ಮೆ ಈಗೊಮ್ಮೆ ತನ್ನ ಇರವನ್ನು ತೋರುವ ಚಂದಾದ ಚಂದ್ರಾಮ.... ಕವಿತೆ ಹುಟ್ಟದಿದ್ದೀತೆ ? ಹಾಗೇ ಸುಮ್ಮನೆ ಬರೆದ ಸಾಲುಗಳಿವು ನಿಮಗಾಗಿ ...

ನಗುತಿರುವ ಚಂದಿರನು
ಹಾಲ್ಗಡಲನುಕ್ಕಿಸಿ
ಹರಿಸಿ ಬೆಳಕಿನ ಹೊನಲ
ಇಡಿ ಬಾನ ತುಂಬೆಲ್ಲ

ನಗುತಿರುವ ಚಂದಿರನು
ತನ್ನೊಡಲ ಒಳಗೆಮ್ಮ ಮೀಯಿಸಿ
ಒಲವ ಧಾರೆಯ ಮನಕೆ ಹಾಯಿಸಿ

ನಗುತಿರುವ ಚಂದಿರ
ಶಾಂತಿದೂತನ ಹಾಗೆ ಕಾಣಿಸಿ
ಬಸವ ಬುದ್ಧರ ಮನದೆ ನೆನಪಿಸಿ

ನಗುತಿರುವ ಚಂದಿರ
ಅಳುವ ಕೂಸಿಗು ಕಣ್ಣ ಮಿಟುಕಿಸಿ
ಪೋರ ಚಿಣ್ಣರಿಗೆಲ್ಲ ಎಟುಕಿಸಿ

ನಗುತಿರುವ ಚಂದಿರ
ಒಲವ ಜೋಡಿಗು ಮನವ ಅರಳಿಸಿ
ಹಳೆಯ ಕನಸುಗಳನ್ನೆ ಮರಳಿಸಿ

ನಗುತಿರುವ ಚಂದಿರನು ಹಾಲ್ಗಡಲನುಕ್ಕಿಸಿ
ಹರಿಸಿ ಬೆಳಕಿನ ಹೊನಲ
ಇಡಿ ಬಾನ ತುಂಬೆಲ್ಲ :)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ಅಕ್ಕ ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಗುತಿರುವ ಚಂದಿರನ, ಭವಾನೀ,
ನಮಗೆಲ್ಲಾ ನೆನಪಿಸಿದಿರಿ;
ಹಾಡುಹಗಲಲ್ಲೇ ನಮ್ಮ ಮನದ
ಅಂಗಳದಿ ಬೆಳದಿಂಗಳ ಹರಿಸಿದಿರಿ.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿ ಅವ್ರೆ
ಚೆನ್ನಾಗಿದೆ ಕವನ
....

ಹೆಗ್ಡೆ ಅವ್ರೆ
<ಹಾಡುಹಗಲಲ್ಲೇ ನಮ್ಮ ಮನದ
ಅಂಗಳದಿ ಬೆಳದಿಂಗಳ ಹರಿಸಿದಿರಿ>

ಸಾರ್ ನಿಮ್ಮದು ಸಕ್ಕಥ್ talent :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>"ಸಾರ್ ನಿಮ್ಮದು ಸಕ್ಕಥ್ talent "<<

ಅದಕ್ಕಿಂತಲೂ ಇದು ಸಖತ್ ಆಗಿದೆ ನೋಡಿ:

"ನಗುತಿರುವ ಚಂದಿರ"ಕೆ ಚಂದಿರನ (ಶಶಾಂಕನ) ನಗುವಿನ ಪ್ರತಿಕ್ರಿಯೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

talent redefined :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಆಸು ಅವರೇ ...
<<<ಹಾಡುಹಗಲಲ್ಲೇ ನಮ್ಮ ಮನದ
ಅಂಗಳದಿ ಬೆಳದಿಂಗಳ ಹರಿಸಿದಿರಿ.>>>
ನೀವೋ ಪ್ರತಿಕವನ ಬರೆಯುತ್ತ ಬರೆಯುತ್ತ
ಕಂಗಳ ತಿಂಗಳನನು ಮರೆಸಿದಿರಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿ, ಚೆನ್ನಾಗಿದೆ.
ಮೈಸೂರು ವಿಭಾಗೀಯ ಮಟ್ಟದ ಕ.ಸಾ.ಪ ಮಕ್ಕಳ ಸಾಹಿತ್ಯ ಸಮಾವೇಶವು ಈ ಭಾರಿ ಹಾಸನದಲ್ಲಿ ನಡೆಯಲಿರುವುದು ನಿಮಗೆ ತಿಳಿದಿರಬಹುದು. ಮಕ್ಕಳ ಸಾಹಿತ್ಯ ಬರೆಯುವ ಸಾಹಿತಿಗಳನ್ನು ಸಮಾವೇಶಕ್ಕೆ ಆಹ್ವಾನಿಸಲಿದ್ದಾರೆ. ಹಾಸನದಲ್ಲಿ ನಡೆದ ಸಭೆಯಲ್ಲಿ ನಿಮ್ಮ ಹೆಸರನ್ನು ಈಗಾಗಲೇ ಸೂಚಿಸಿರುವೆ. ಮಂಡ್ಯದ ಕ.ಸಾ.ಪ. ಅಧ್ಯಕ್ಷರು ನಿಮ್ಮನ್ನು ವಿಚಾರಿಸಿದರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಹೆಸರನ್ನು ಸೂಚಿಸಿರುವುದಕ್ಕೆ ಧನ್ಯವಾದಗಳು ಶ್ರೀಧರಣ್ಣಾ... ಮಂಡ್ಯದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಈ ವಿಚಾರವಾಗಿ ಇನ್ನೂ ತಿಳಿಸಿಲ್ಲ. ಅಲ್ಲದೆ ಜಿಲ್ಲಾ ಕ.ಸಾ.ಪ. ದಲ್ಲಿ ನಾನು ಜಂಟಿ ಕಾರ್ಯದರ್ಶಿಯಾಗಿದ್ದೇನೆ. ನೋಡೋಣಾ ... ಹೇಳಿದ್ರೆ ಬರಬೇಕು ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.