"ಅಂದು ಅವಲಕ್ಷಣ ಅನ್ನಿಸಿಕೊಳ್ಳೋದು" ಅಥವ " ಆಡಿ ಅದ್ವಾನ(ನಿ) ಆಗುವುದು"

0

ಅದ್ವಾನಿ ಮತ್ತು ಮನಮೋಹನ್ ಸಿಂಗ ನಡುವೆ ನಡೆದ ವಾಕ್ ಚಕಮಕಿ ಚುನಾವಣೆಗೆ ಬೇಕಾದ ಮೆರಗು ನೀಡಿದೆ. ಅದ್ವಾನಿ ಪ್ರಧಾನ ಮಂತ್ರಿಗಳಾನ್ನು ’ನಿಕಮ್ಮ’ ಎಂದು ಕರೆದಾಗ ನನಗೆ ಅಯ್ಯೊ ಪಾಪ ಆ ಮೃದು ಭಾಷಿ, ರಾಜಕಾರಣಿ ಅಲ್ಲದಿದ್ದರೂ ಐದು ವರುಷ ಸರ್ಕಾರ ನಡೆಸಿ ಭಾರತವನ್ನು ಪ್ರಗತಿಯತ್ತ ತಿರುಗಿಸುವುದರಲ್ಲಿ ಒಂದು ಬಲವಾದ ಕೈ ನೀಡಿದ್ದ ವ್ಯಕ್ತಿಗೆ ಹೀಗೆ ಹಿಯ್ಯಾಳಿಸುವುದೆ? ಎಂದು ಬೇಜಾರಾಯಿತು. ಆದರೆ ಸಿಂಗ ನೀಡಿದ ಭಾರಿ ತಿರುಗೇಟು ಕಂಡು "ಪರವಾಗಿಲ್ಲವೆ, ಇವರೂ ಸಕತ್ತಾಗಿ ಪೊಲಿಟಿಕಲ್ ಡೈಲಾಗ್ ಬಿಡ್ತಾರೆ!!" ಎನಿಸಿ ನನ್ನಲ್ಲಿ ಒಂದು ರೀತಿಯ ಮೆಚ್ಚುಗೆ ಉಂಟಾಗದೆ ಇರಲಿಲ್ಲ. ಅದೂ ಲೆಫ್ಟ್ ರೈಟ್ ಪಂಚು. ಮೊದಲು "ಪುಂಡರು ಮಸೀದಿ ಕೆಡುವುತ್ತಿದಾಗ ನಾನು ಮೂಲೆಯಲ್ಲಿ ಕಣ್ಣೀರು ಸುರಿಸುತ್ತಿರಲಿಲ್ಲ" ಎಂದರು. ಅದರ ಒತ್ತೊಟ್ಟಿಗೆ ಇನ್ನೋದು ಗುದ್ದು "ಇವರು ಗೃಹ ಮಂತ್ರಿಯಾಗಿದ್ದಾಗಲೆ ಅಲ್ಲವೆ ಕಂದಾಹಾರ್ ನಡೆದಿದ್ದು. ಈ ಉಕ್ಕಿನ ನಾಯಕ ಅಂದು ಕರಗಿ ಹೋಗಿದ್ದು ನೆನಪಿಲ್ಲವೆ" ಎಂದು ಅದ್ವಾನಿಜಿ ಬಗ್ಗೆ ಸಿಂಗ್ ಹೇಳಿದರು. ಇದೂ ಸಹ ಕ್ರೂರವಾದ ಮಾತುಗಳೆ. ಪಾಪ ಅದ್ವಾನಿ ಇವರಿಗಿಂತ ಹಿರಿಯರು. ಅವರಿಗೆ ಇನ್ನೆಷ್ಟು ಬೇಜಾರಾಗಿರಬೇಡ. ಆದರೂ ಮ.ಮೋ. ಸಿಂಗ ಇಲ್ಲಿ ಅಂಡರ್ ಡಾಗ್. ಅದ್ವಾನಿಯಾದರೋ ನಾಲ್ಕೈದು ದಶಕಗಳಿಂದ ರಾಜಕೀಯ ಕಣದಲ್ಲಿ ಹೊಡೆದು ಬಡೆದು ಮಾಡಿ ಪಳಗಿದವರು. ಅದ್ವಾನಿ ನಮ್ಮ ದೇಶದ ರಾಜಕಾರಣಿಗಳ ಆಟಗಾರ. ಸಿಂಗ್ ಆದರೋ ಹೊಲಸು ರಾಜಜೀಯದಲ್ಲಿ ಹುಟ್ಟಿ ಬರದೇ, ಸಮಾಜದಲ್ಲಿ ಗೌರವಿಸಲ್ಪಟ್ಟ ಸಂಭಾವಿತ ಆದರ್ಶಪ್ರಾಯ ಪ್ರೊಫೆಶನಲ್. ನನಗೆ ಸಿಂಗ್ ಮೇಲೆ ಸ್ವಲ್ಪ ಸಾಫ್ಟ್ ಕಾರ್ನರ್. ಆದ್ದರಿಂದ ಈಗ ನಡೆಯುತ್ತಿರುವ ವಾಗ್ಯುದ್ದದಲ್ಲಿ ನಾನು ಆಶಿಸುವುದು ’ಸಿಂಗ್ ಕಮ್ಮಿ ಏಟು ತಿನ್ನಲಿ’ ಮತ್ತು ’ಇನ್ನೂ ಹೆಚ್ಚು ಹರಿತವಾದ ವಾಕ್ಬಾಣಗಳನ್ನು ಅದ್ವಾನಿಜಿ ಕಡೆಗೆ ಬುಡ್ಲಿ, ತಾನೂ ಅವಷ್ಯವಾದಗ ಕೆಟ್ಟವನಾಗಬಲ್ಲೆ ಎಂಬುದನ್ನು ತೋರಿಸಲಿ’ ಅಂತ.

ಇಂಗ್ಲೀಶ್ ಗಾದೆ ಇದೆ. "Let your words be sweet and soft. You never know when you have to eat them yourself". ಆದ್ರೆ ಈ ಗಾದೆ ನಂಬಿಕೊಂಡ್ರೆ ಈ ಪ್ರಪಂಚ ಅನ್ನೊ ಸಮ್ಮುದ್ರದಲ್ಲಿ ತಿಮ್ಮಿಂಗಲಗಳಿಗೆ ಆಹಾರವಾಗಿ ಹೋಗ್ತೀವಿ. ಸರ್ವೈವ್ ಆಗೋದಕ್ಕೆ ಆಗಾಗ ಕಟುವಾಗಿ ವರ್ತಿಸಬೇಕಾಗುತ್ತದೆ.

ಆದ್ರಿಂದ ಸಿಂಗ್ ನೀವು ನುಗ್ಗಿ ಸಾ. ನಮ್ಮೆಸ್ರಲ್ಲಿ ಇನ್ನೊಂದು ಬಾಣ ಬುಡಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>>ಅಯ್ಯೊ ಪಾಪ ಆ ಮೃದು ಭಾಷಿ, ರಾಜಕಾರಣಿ ಅಲ್ಲದಿದ್ದರೂ ಐದು ವರುಷ ಸರ್ಕಾರ ನಡೆಸಿ ಭಾರತವನ್ನು ಪ್ರಗತಿಯತ್ತ ತಿರುಗಿಸುವುದರಲ್ಲಿ ಒಂದು ಬಲವಾದ ಕೈ ನೀಡಿದ್ದ ವ್ಯಕ್ತಿಗೆ ಹೀಗೆ ಹಿಯ್ಯಾಳಿಸುವುದೆ?
-- ಭಾರತವನ್ನು ಪ್ರಗತಿಯತ್ತ ತಿರುಗಿಸಿಬಿಟ್ರೇ?? ನಿಜವಾಗ್ಲೂ?
ನಿಮ್ ತಮಾಷೆ ಚೆನ್ನಾಗಿದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್,

೧೯೯೧ರಲ್ಲಿ ಭಾರತದ ಹಣ ಕಾಸಿನ ಪರಿಸ್ಥಿತಿಗೆ ವಿಪತ್ಕಾಲ ಬಂದಾಗ ನರಸಿಂಹ ರಾವ್ ಮತ್ತು ಮನಮೋಹನ ಸಿಂಗ್ ಜೋಡಿ ತಂದ ಬದಲಾವಣೆಗಳು ಭಾರತವನ್ನು ಆ ಮುಗ್ಗಟ್ಟಿನಿಂದ ಹೊರತಂದಿತು. ಆದ್ದರಿಂದ ಭಾರತದ ಪ್ರಗತಿಗೆ ಸಿಂಗ ಅವರ ಕೊಡುಗೆ ನಮ್ಮ ದೇಶವನ್ನು ಪ್ರಗತಿಯತ್ತ ತಿರುಗಿಸಿತು ಎಂದು ಯಾವುದೆ ಸಂಕೋಚವಿಲ್ಲದೆ ಹೇಳಬಹುದು. ಕೆಳಗೆ ವಿಕಿಪೀಡಿಯದಲ್ಲಿನ ಮಾಹಿತಿಯನ್ನು ಉಲ್ಲೇಖಿಸುತ್ತಿದ್ದೇನೆ.

I am quoting Wikipedia here "Rao, also called the "Father of Indian Economic Reforms,"[3] is best remembered for launching India's free market reforms that rescued the almost bankrupt nation from economic collapse."
ಅದೇ ಪುಟದಲ್ಲಿ ಇನ್ನೊಂದು ಕಡೆ ಈ ರೀತಿ ಇದೆ. ಜೊತೆಗೆ ಮನಮೋಹನ್ ಸಿಂಗರ ಫೋಟೋ ಸಹ ಇದೆ. ಅಂದ್ರೆ ನರಸಿಂಹ ರಾವ್ ಬಗ್ಗೆ ಮಾತಾಡುವಾಗ ಮನಮೋಹನ್ ಬಗ್ಗೆ ಹೇಳುವುದು ಎಷ್ಟು ಮುಖ್ಯ ಅಂತ ತೋರಿಸುತ್ತದೆ.
"Rao's finance minister, Manmohan Singh, an acclaimed economist, played a central role in implementing these reforms."

http://en.wikipedia.org/wiki/P._V._Narasimha_Rao

ಈ ಎರಡು ಉಲ್ಲೇಖನಗಳು ಒಟ್ಟಿಗೆ ಇಲ್ಲದ್ದಿದ್ದ್ರರೂ ಒಂದೆ ವಿಶಯದ ಬಗ್ಗೆ ಒಂದೆ ವೆಬ್ ಪೇಜಿನಲ್ಲಿದೆ.
ವಿಕಿಪೀಡಿಯ ಹೇಳುವುದೆಲ್ಲ ನಂಬಬೇಕು ಎಂದೇನಿಲ್ಲ. ಆದರೆ ಅಲ್ಲಿ ಯಾರು ಬೇಕಾದರೂ ಹೋಗಿ ಅದನ್ನು ಚಾಲೆಂಜ್ ಮಾಡಬಹುದು. ಆದರೆ ಯಾರು ಚಾಲೆಂಜ್ ಮಾಡಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಹಿತಿಗೆ ಧನ್ಯವಾದ. ಸಿಂಗರ ಪೂರ್ವ ಸಾಧನೆಗಳು ಗೊತ್ತಿರುವಂತದ್ದೆ. ಅವರ ಯೋಗ್ಯತೆಯ ಬಗ್ಗೆ ಪ್ರಶ್ನಿಸುತ್ತಿಲ್ಲ. ಗಮನಿಸಿ . ...
"ರಾಜಕಾರಣಿ ಅಲ್ಲದಿದ್ದರೂ ಐದು ವರುಷ ಸರ್ಕಾರ ನಡೆಸಿ ಭಾರತವನ್ನು ಪ್ರಗತಿಯತ್ತ ತಿರುಗಿಸುವುದರಲ್ಲಿ ಒಂದು ಬಲವಾದ ಕೈ ನೀಡಿದ್ದ ವ್ಯಕ್ತಿಗೆ ಹೀಗೆ ಹಿಯ್ಯಾಳಿಸುವುದೆ?"
ಕಳದ ಐದು ವರ್ಷದಲ್ಲಿ ಸಿಂಗರು ಮಾಡಿರುವ ಸಾಧನೆಯಾದರೂ ಏನು? ಅವರ ಆಡಳಿತದಲ್ಲಿ ನಿಜವಾಗಲೂ ದೇಶ ಪ್ರಗತಿ ಅನ್ನೋದನ್ನೇನಾದ್ರೂ ಕಂಡಿದ್ಯ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ನಾನು ಹೇಳಬೇಕಾದ್ದು ಹೀಗಿರಬೇಕಾಗಿತ್ತು. "ಭಾರತವನ್ನು ಪ್ರಗತಿಯತ್ತ ತಿರುಗಿಸುವುದರಲ್ಲಿ ನರಸಿಂಹ ರಾವ್ ಅವರಿಗೆ ಒಂದು ಬಲವಾದ ಕೈ ನೀಡಿದ್ದ, ಹಾಗು ರಾಜಕಾರಣಿ ಅಲ್ಲದಿದ್ದರೂ ಐದು ವರುಷ ಸರ್ಕಾರ ನಡೆಸಿದ ಮನಮೋಹನ ಸಿಂಗರನ್ನು ಹೀಗೆ ಹಿಯ್ಯಾಳಿಸುವುದೆ?". Your point is well taken. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಡ್ವಾನಿಯವರ ಹೇಳಿಕೆಗಳನ್ನು ಸಮರ್ಥಿಸುತ್ತಿಲ್ಲವಾದರೂ ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿ ಅನ್ನೋ ಮಾತು ನಿಜವೇ.

"ಅಯ್ಯೊ ಪಾಪ ಆ ಮೃದು ಭಾಷಿ, ರಾಜಕಾರಣಿ ಅಲ್ಲದಿದ್ದರೂ ಐದು ವರುಷ ಸರ್ಕಾರ ನಡೆಸಿ ಭಾರತವನ್ನು ಪ್ರಗತಿಯತ್ತ ತಿರುಗಿಸುವುದರಲ್ಲಿ ಒಂದು ಬಲವಾದ ಕೈ ನೀಡಿದ್ದ ವ್ಯಕ್ತಿಗೆ ಹೀಗೆ ಹಿಯ್ಯಾಳಿಸುವುದೆ? ಎಂದು ಬೇಜಾರಾಯಿತು. "

ನನಗೂ ಬೇಜಾರಾಯಿತು. ಆದರೆ ನೀವು ಹೇಳಿದ ಕಾರಣಗಳಿಗಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.