ವಿಜಯ ಕರ್ನಾಟಕದ ಹೊಗಳು ಭಟ್ಟರು

0

ಕಳೆದ ಮೂರು ವಾರಗಳಿಂದ ಕರ್ನಾಟಕದ ಸುಮಾರು ಅರ್ಧ ಜಿಲ್ಲೆಗಳಲ್ಲಿ ಸುತ್ತಿದ ದೈಹಿಕ ಆಯಾಸ ಇನ್ನೂ ಹೋಗಿಲ್ಲ. ಅದರ ಜೊತೆಗೆ ಜೆಟ್ ಲ್ಯಾಗ್ ಸಮಸ್ಯೆ. ನಾಳೆ ಮತ್ತೆ ಪ್ರಯಾಣ ಹೊರಡಬೇಕಿದೆ, ಮೂರು ದಿನದ ಮಟ್ಟಿಗೆ. ವಾರಾಂತ್ಯದವರೆಗೆ ಮತ್ತೆ ಬಿಡುವಿಲ್ಲ.

ಕಳೆದ ಎರಡು ಭಾನುವಾರಗಳಲ್ಲೂ ವಿಜಯ ಕರ್ನಾಟಕದಲ್ಲಿ ನನ್ನನ್ನು ಹೊಗಳಿ ಬರೆದಿದ್ದರು. ಹೊಗಳುವುದು ಅಂದರೆ ಗೊತ್ತಲ್ಲ; ಸುಳ್ಳು ಮತ್ತು ಉತ್ಪ್ರೇಕ್ಷೆ ಸಹಜ. ಅದರ ಜೊತೆಗೆ "ನೂರೆಂಟು ಸುಳ್ಳು" ಸೇರಿಕೊಂಡರೆ ಇನ್ನೂ ಭರ್ಜರಿಯಾಗಿರುತ್ತದೆ. ಇಂತಹುದೊಂದು ಹೊಗಳಿಕೆಗಳಿಗೆ ಸಾರ್ವಜನಿಕವಾಗಿ ಸಕ್ರಿಯರಾಗಿರುವವರು ಸದಾ ಸಿದ್ಧರಾಗಿರಬೇಕಾಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ಹೊಗಳಿಕೆ ತಡವಾಯಿತು. ಅದೂ ಕನಿಷ್ಠ ಒಂದು ವಾರ. ನಾಲ್ಕು ವಾರಗಳ ಹಿಂದಿನ ನನ್ನ "ಜಾತಿಅಹಂ, ಸ್ಪೃಶ್ಯ/ಅಸ್ಪೃಶ್ಯ, ನಿಜವಾಗಿ ’ಹಿಂದುಳಿದವರು’, ಒಳಮೀಸಲಾತಿ, ’ಅನಂತ ನಿಷ್ಠ’ ಭಟ್..." ಲೇಖನದಲ್ಲಿ ಇದ್ದಿರಬಹುದಾದ "ಸುಳ್ಳು ಅಥವ ಸತ್ಯ" ಈ ದಿಢೀರ್ ಹೊಗಳಿಕೆಗೆ ಕಾರಣ. ಆ ಲೇಖನವನ್ನು ಓದಿದ್ದ ಎಲ್ಲರಿಗೂ ಇದು ಗೊತ್ತು.

ಭಟ್ಟಂಗಿಗಳ ಈ ಹೊಗಳು ಪತ್ರಗಳು ನನಗೆ ಮುಂದಕ್ಕೆ ಹಲವಾರು ಕಾರಣಗಳಿಗೆ ಬೇಕಾಗಿರುವುದರಿಂದ ಅವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಬೇಕೆಂದಾಗ ಹುಡುಕಿಕೊಳ್ಳಲು ಸುಲಭವಾಗುತ್ತದೆ.

ಮಾರ್ಚ್ 29, 2009 ರ ವಿಜಯ ಕರ್ನಾಟಕದಲ್ಲಿ:

ಏಪ್ರಿಲ್ 05, 2009 ರ ವಿಜಯ ಕರ್ನಾಟಕದಲ್ಲಿ:

ಇಲ್ಲಿ "ಬಲಿಪಶು"ವಾದ ಜಗದೀಶ್ ರಾವ್ ಕಲ್ಮನೆ ಯಾರು ಎಂದು ನನಗೆ ಗೊತ್ತಿಲ್ಲ. ಅವರಿಂದ ಕೆಲವು "ಸುಳ್ಳು ಮತ್ತು ನಿಜ"ವನ್ನು ತಿಳಿದುಕೊಳ್ಳುವ ಮನಸ್ಸಿದೆ. ಗೊತ್ತಿದ್ದವರು ಅವರ ವಿವರ ಕಳುಹಿಸಿದರೆ ಸಂತೋಷ. ಅಥವ ಅವರೆ ಇದನ್ನು ಓದಿ ನನ್ನನ್ನು ಸಂಪರ್ಕಿಸಿದರೆ ಇನ್ನೂ ಸಂತೋಷ. ನನ್ನ ಫೋನ್ ಸಂಖ್ಯೆ ಆಗಲಿ ಇಮೇಯ್ಲ್ ಆಗಲಿ ಹುಡುಕಿಕೊಳ್ಳುವುದು ಕಷ್ಟವಲ್ಲ.

ನಿರಂಕುಶಮತಿ ಓದುಗರಿಗೆ ಸತ್ಯ ಏನೆಂದು ಗೊತ್ತು. ಹಾಗಾಗಿ ಈ ವಿಷಯದ ಬಗ್ಗೆ ನನ್ನ ಪ್ರತಿಕ್ರಿಯೆ ಇಲ್ಲ. ಅದರ ಅಗತ್ಯವಾಗಲಿ, ಅದಕ್ಕೆ ಅವಸರವಾಗಲಿ ಇಲ್ಲ. ಒಂದಿಬ್ಬರು ಸ್ನೇಹಿತರಿಗೆ ಹೇಳಿದ್ದನ್ನೆ ಇಲ್ಲಿ ಸದ್ಯಕ್ಕೆ ಬರೆಯುತ್ತೇನೆ: "ನನ್ನ ಮುಂದೆ ಏನಿಲ್ಲವೆಂದರೂ ಇನ್ನೂ 40 ವರ್ಷಗಳ ಸುದೀರ್ಘ ಸಕ್ರಿಯ ಜೀವನವಿದೆ. ನನಗೆ ಯಾವುದೆ ಅಸಹಜವಾದ ಸಾವು ಬರದೆ ಇದ್ದರೆ ಮತ್ತು ನನ್ನ ಆರೋಗ್ಯ ಸರಿಯಾಗಿ ನೋಡಿಕೊಂಡರೆ ಈ ಹೊಗಳುಭಟ್ಟರಿಗಿಂತ ಕನಿಷ್ಟ 25 ವರ್ಷ ಹೆಚ್ಚು ಬದುಕುತ್ತೇನೆ. ಭವಿಷ್ಯ ಯಾರನ್ನು ಎಲ್ಲಿ ಇಡುತ್ತದೆ ಎಂದು ನೋಡುವ ಅವಕಾಶ ಇರುವುದು ನನಗೆ ಮಾತ್ರ. The last laugh will be mine."

ರವಿ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನು ಇದರ ಬಗ್ಗೆ ಒಂದು ಲೇಖನ ಬರೆಯುತ್ತ ಇದ್ದೆ, ಆತ್ಮೀಯ ಗೆಳೆಯನ ಅಕಾಲಿಕ ಮರಣದಿಂದ ಇನ್ನು ಚೇತರಿಸಿಕೊಳ್ಳಲು ಆಗಿಲ್ಲ.. ಆ ಅಪೂರ್ಣ ಲೇಖನವನ್ನ ಇಲ್ಲಿ ಕಾಮೇಂಟಿಸಿದ್ದೇನೆ..

ಎರಡು "ಜನಗಳ ಮನಗಳ" ನಡುವೆ

ವಿ.ಕ ದಲ್ಲಿ ಎರಡು ವಾರದಿಂದ ಜನಗಳ ಮನ ಓದಿದೆ.

http://vijaykarnatakaepaper.com/epaper/svww_zoomart.php?Artname=20090405...

ಹಾಗು

http://vijaykarnatakaepaper.com/epaper/svww_zoomart.php?Artname=20090329...

ಒಂದು ವಾರದಲ್ಲಿ ಒಬ್ಬ ವ್ಯಕ್ತಿ ಚುನಾವಣೆಯಲ್ಲಿ ತನ್ನ ಸೋಲು ಗೆಲವನ್ನು ನಿಶ್ಚಯಿಸಲು ಸಾಧ್ಯವೆ? ಅದೂ ಇನ್ನು ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯೆ ಮುಗಿದಿಲ್ಲ. ಒಂದು ಪತ್ರಿಕೆಯಲ್ಲಿ ಲೇಖನ ಬಂತು ಅಂತ ೪ ಜನ ಸ್ನೇಹಿತರು ಈ ಮಟ್ಟಕ್ಕೆ ಪ್ರಚಾರಕೆ ಬರಲ್ಲ ಅನ್ನುವುದೆ? ೪ ಜನ ಸ್ನೇಹಿತರು ಇಲ್ಲ ಅಂದರೆ ಗೆದ್ದೆ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸ ಕುಂದುವುದೆ? ಇದೆಲ್ಲಾ ಹೇಗೆ ಸಾಧ್ಯ? ನನಗಂತೂ ಬಹಳ ಗೋಜಲಾಗಿ ಕಂಡಿದೆ ಇದು.
ರ ಕೃ ರೆಡ್ಡೀ ಅವರ ಬಗ್ಗೆ ಬರೆದಿದ್ದಾರೆ.. ಅವರು ಚುನಾವಣೆಯಲ್ಲಿ ನಗಾರಿ ಅನ್ನುವ ಚಿನ್ಹೆ ಬದಲಾಗಿ ಬೇರೆ ಏನೋ ಚಿನ್ಹೆ ಕೊಟ್ಟು ಅವರ ಸೋಲಿಗೆ ಕಾರಣ ಎನ್ನುವುದು ಹಲವರ ಅಭಿಪ್ರಾಯ. ಇದರ ಬಗ್ಗೆ ರೆಡ್ಡಿ ಅವರು ಆಯೋಗಕ್ಕೆ ದೂರು ಸಹ ಸಲ್ಲಿಸಿದ್ದಾರೆ , ಇದನ್ನು ಅವರ ವೆಬ್ ಸೈಟ್ ನಲ್ಲಿ ನೋಡಬಹುದು. ಆದರೂ ೨೪೪ ಮತಗಳು ಬಂದಿವೆ ಅವರಿಗೆ. EVM ನಲ್ಲಿ ಕ್ರಮಸಂಖ್ಯೆ, ಹೆಸರೂ ಕೂಡ ಇರುತ್ತದೆ ಚಿನ್ಹೆ ಜೊತೆ. ಕಡೆಪಕ್ಷ ೨೪೪ ಜನ ಹೆಸರನ್ನು ಓದಿ ಮತ ಹಾಕಿದ್ದಾರೆ.
http://www.techgoss.com/fullstory.aspx?storyid=c6025410478051508051508%2...

ಇಲ್ಲಿ ಹೀಗೆ ಬರೆಯಲ್ಪಟ್ಟಿದೆ.

"Ravi Krishna Reddy is a disappointed man. A goof up by the authorities may cause him to lose the election which he was contesting to the Karnataka State Assembly from Jayanagar, Bangalore. Reddy was allotted the election symbol of the ‘nagara’ or the drum."
"When the ballot proceedings commenced on May 10, Ravi got the shock of his life when his symbol appeared nowhere on the sheet. Instead another smaller percussion instrument, the ‘tabla’ was marked next to his name."

ಜಯನಗರದ ಪ್ರಜ್ನಾವಂತ ಮತದಾರರಿಗೆ ಹೆಸರು ಕೂಡ ಒಮ್ಮೆ ನೋಡಬೇಕು ಎಂದು ಅನಿಸಲಿಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಯನಗರದ ಪ್ರಜ್ಙಾವಂತ ಜನರು ಹೆಸರು ನೋಡದೆ ಓಟು ಹಾಕಿದಾರೆ ಅಂತ ನಿಮಗೆ ಹೇಗೆ ಗೊತ್ತು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಲ್ಪ ಮೇಲೆ ಬರೆದಿರಿವುದನ್ನು ಓದಿ. ನಗಾರಿ ಬದಲು ತಬಲ ಕೊಟ್ಟಿರುವುದು ರವಿ ಅವರ ಸೋಲಿಗೆ ಕಾರಣ ಇದ್ದಿರಬಹುದು ಎಂದು techgoss ನಲ್ಲಿ ಬರೆಯಲಾಗಿದೆ. ಮತದಾರ ಹೆಸರು ಓದಿದ್ದರೆ ಈ ರೀತಿ ತಪ್ಪು ಆಗುತ್ತಿರಲಿಲ್ಲವೇನೊ ಅನ್ನುವುದು ನನ್ನ ಪ್ರಶ್ನೆ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ಜಯನಗರ ವಿಧಾನಸಭೆ ಅಭ್ಯರ್ಥಿಗೇ ಮತ ಹಾಕಿದ್ದು ... ನಂಗಾಗ್ಲಿ ಅಥ್ವಾ ನಮ್ಮನೆ ಯಾರ್ಗಾಗ್ಲಿ, ಸ್ನೇಹಿತ ಬಳಗದಲ್ಲಾಗ್ಲಿ ಇಂಥವ್ರೊಬ್ರು ಎಲೆಕ್ಶನ್ ಗೆ ನಿಂತಿದ್ದಾರೆ ಅಂತಾನೆ ಗೊತ್ತಿರ್ಲಿಲ್ಲ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.