"ನಿಮ್ಮ ಮತ ಯಾರಿಗೇ???" ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಯ ಸುತ್ತಾ .............!!!!!!

0

ನಮಸ್ಕಾರ ಸ್ನೇಹಿತರೆ,

ಇನ್ನೇನು ಚುನಾವಣೆ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ. ಬಹುಷಃ ನಿಮ್ಮ ಮನೆಗಳಿಗೆಲ್ಲ ನಮ್ಮ ರಾಜ್ಯದ ಲೋಕಸಭಾ ಅಭ್ಯರ್ಥಿಗಳು ಒಂದು ರೌಂಡ್ ಬಂದು ನಮಗೆ ಓಟು ಕೊಡಿ ಅಂತ ಹಲ್ಲು ಗಿಂಜಿ ಹೋಗಿರುತ್ತಾರೆ. ನಿಮಗೆ ಅವರ ಮುಖಕ್ಕೆ ಒಂದು ಸಾರಿ ಚೆನ್ನಾಗಿ ಬಾರಿಸಿ ಬೈದು ಹೊರಗೆ ಅಟ್ಟಬೇಕು ಅಂತ ಅನ್ನಿಸುತ್ತೆ ಆದ್ರೆ ಮಾಡೋಕೆ ಆಗಲ್ಲ ಅಂತ ಅವರಿಗೆ ಒಂದು ಕೃತಕ ನಗೆ ತೋರಿಸಿ ಮನಸಿನಲ್ಲೇ ನೂರು ಜನ್ಮಕ್ಕಾಗುವಸ್ಟು ಬೈದಿರ್ತಿರ. ನಿಜ ತಾನೇ.

ಇದೋ ನಿಮಗೆ ಇಲ್ಲಿ ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದೆ. ಯಾವ ನಾಯಕನನ್ನು ನೀವು ಆಯ್ಕೆ ಮಾಡುತ್ತೀರ ಅನ್ನೋದರ ಮೇಲೆ ನಮ್ಮ ನಾಡಿನ ಭವಿಷ್ಯವಿದೆ ಅನ್ನೋದನ್ನ ಒಮ್ಮೆ ನೆನಪು ಮಾಡಿಕೊಂಡು ಮತ ಹಾಕಿ ಅನ್ನೋದು ನನ್ನ ಸವಿನಯ ಮನವಿ.

ಇಲ್ಲಿ ನಿಮ್ಮೊಂದಿಗೆ ಒಂದು ಸೂಕ್ಷ್ಮ ವಿಷಯದ ಬಗ್ಗೆ ಕೆಲವು ಮಾತುಗಳನ್ನ ಹೇಳಬೇಕು ಅಂತ ಇದೀನಿ:
ಈ ಕೆಳಗಿನ ಕೊಂಡಿಯಲ್ಲಿರುವ ಸುದ್ದಿಯನ್ನ ಮೊದಲು ಒಮ್ಮೆ ನೋಡಿಬಿಡಿ : http://karave.blogspot.com/2009/03/no-support-to-party-in-2009-election....

ಇದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣ ಗೌಡರು ನೀಡಿರುವ ಪತ್ರಿಕಾ ಹೇಳಿಕೆ. ಅದರ ಶೀರ್ಷಿಕೆಯನ್ನ ಇನ್ನೊಮ್ಮೆ ಓದಿಕೊಳ್ಳಿ "ರಾಜ್ಯದ ಪರ ದನಿಯೆತ್ತುವವರಿಗೆ ಮಾತ್ರ ನಮ್ಮ ಬೆಂಬಲ" .
ಈ ವರದಿಯನ್ನ ಓದಿದ ಮೇಲೆ ನನಗೆ ತೋಚಿದ ಕೆಲವು ವಿಷಯಗಳನ್ನ ನಿಮ್ಮ ಮುಂದೆ ಹೇಳಬೇಕು ಅಂತ ಇದೀನಿ.
ನೋಡಿ ನಮ್ಮ ರಾಜ್ಯದಲ್ಲಿರುವ ಒಟ್ಟು ಲೋಕಸಭಾ ಸದಸ್ಯರ ಸಂಖ್ಯೆ ೨೮, ಇಲ್ಲಿಂದ ಆಯ್ಕೆ ಆಗುವವರು ಬಿಜೆಪಿ, ಕಾಂಗ್ರೆಸ್ಸ್ ಮತ್ತೆ ಜನತಾದಳ ಹಾಗೆ ವಿರಳವಾಗಿ ಪಕ್ಷೇತರರು ಆಯ್ಕೆ ಆಗುತ್ತಾರೆ.

ಪಕ್ಷೇತರರನ್ನು ಪಕ್ಕಕ್ಕಿಟ್ಟು ನೋಡೋದಾದ್ರೆ ಇಲ್ಲಿಂದ ಆಯ್ಕೆ ಆಗಿರುವ ರಾಷ್ಟ್ರೀಯ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಯಾವತ್ತು ನಮ್ಮ ನಾಡು, ನುಡಿ, ಜಲ ಮತ್ತು ನೆಲದ ವಿಷಯ ಬಂದಾಗ ಅಲ್ಲಿ ತಾನು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದೇನೆ ಅನ್ನೋ ಪ್ರಜ್ಞೆ ಇಟ್ಟುಕೊಂಡು ಆ ವಿಷಯಗಳಲ್ಲಿ ನಮ್ಮ ರಾಜ್ಯದ ಪರ ದನಿಯೆತ್ತಿ ಮಾತನಾಡಿದ್ದಾರೆ? ನಿಮಗೆ ಯಾವತಾದ್ರು ಲೋಕಸಭಾ ಕಲಾಪಗಳ ವರದಿಗಳು ಪತ್ರಿಕೆಗಳಲ್ಲಿ ಬಂದಾಗ ನಮ್ಮ ರಾಜ್ಯದ ಸಂಸದರ ಹೆಸರುಗಳು ಕಂಡಿದ್ದಾವಾ?. ಬೇಡದಿರುವ ಕೆಲಸಗಳಲ್ಲಿ ನಮ್ಮವರ ಹೆಸರುಗಳು ಇರುತ್ತವೆ ಅನ್ನೋದು ಬೇರೆ ಮಾತು. ಅವುಗಳ ಬಗ್ಗೆ ಇನ್ನೊಮ್ಮೆ ಚರ್ಚಿಸೋಣ.

ಯಾಕೆ ರಾಷ್ಟ್ರೀಯ ಪಕ್ಷಗಳಿಂದ ಆರಿಸಿ ಬರುವ ಸದಸ್ಯರಿಂದ ಕೆಲಸಗಳು ಆಗೋದಿಲ್ಲ ಅನ್ನೋ ಕಾರಣ ಹುಡುಕಿದರೆ ಸಿಗುವ ಸರಳ ಮತ್ತು ಸಿಧ್ಧ ಉತ್ತರ "ಹೈ ಕಮಾಂಡ್ ". ಅಲ್ಲಿಂದ ಬರುವ ಯಾವುದೇ ಆಜ್ಞೆಯನ್ನ ಧಿಕ್ಕರಿಸುವ ನೈತಿಕ ಧೈರ್ಯ ಇಲ್ಲಿನ ಯಾವುದೇ ನಾಯಕರು ಪ್ರದರ್ಶಿಸುವುದಿಲ್ಲ. ನಮ್ಮ ರಾಜ್ಯಕ್ಕೆ ಸಂಭಂದಿಸಿದ ವಿಷಯಗಳಾದ ಮಹದಾಯಿ ಯೋಜನೆ, ಕಾವೇರಿ ಜಲ ಹಂಚಿಕೆ ವಿವಾದ, ಬೆಳಗಾವಿ ಗಡಿ ಸಮಸ್ಯೆ , ಶಾಸ್ತ್ರೀಯ ಭಾಷೆ ಸ್ಥಾನ ಮಾನ , ಹೀಗೆ ಇದರ ಪಟ್ಟಿ ಮುಂದುವರಿಯುತ್ತೆ. ಈ ವಿಷಯಗಳು ಲೋಕ ಸಭೆಯಲ್ಲಿ ಚರ್ಚೆಗೆ ಬಂದಾಗ ನಮ್ಮ ಯಾವ ಸಂಸದರು ನಮ್ಮ ನಾಡ ಪರವಾಗಿ ಧ್ವನಿ ಎತ್ತಿದ್ದಾರೆ ನೀವೇ ಹೇಳಿ.
ಈ ವಿಷಯಗಳನ್ನ ಗಮನಿಸಿದರೆ ನಾರಾಯಣ ಗೌಡರು ಹೇಳಿರುವ ಮಾತುಗಳು ಮಹತ್ವ ಪಡೆಯುತ್ತವೆ. ಇವತ್ತು ರಕ್ಷಣಾ ವೇದಿಕೆ ನಮ್ಮ ನಾಡಿನಲ್ಲಿ ಒಂದು ಬೃಹತ್ ಸಂಘಟನೆಯಾಗಿ ಬೆಳೆದು ನಿಂತಿರುವುದನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ನಾಡ ನುಡಿ ವಿಷಯದಲ್ಲಿ ಅದು ತನ್ನ ಕನ್ನಡ ಪ್ರೇಮವನ್ನ, ನಾಡ ಪರ ಕಾಳಜಿಯನ್ನ ತೋರಿಸಿದೆ.

ಯಾವುದೇ ಪಕ್ಷ ಸಾಚಾ ಅಲ್ಲ, ಹಾಗೆಯೇ ಎಲ್ಲಾ ಪಕ್ಷಗಳಲ್ಲು ಬರಿಯ ಕೆಟ್ಟವರೆ ಇದ್ದಾರೆ ಅಂತಲೂ ಹೇಳಬರುವುದಿಲ್ಲ. ಹಾಗಾಗಿಯೇ ಇಲ್ಲಿ ನಾರಾಯಣ ಗೌಡರು ಹೇಳಿರುವ ಹೇಳಿಕೆ ಪ್ರಾಮುಖ್ಯತೆ ಪಡೆಯುತ್ತದೆ. ನಾಡ ಪರ ಕಾಳಜಿಯುಳ್ಳ ಯಾವುದೇ ವ್ಯಕ್ತಿ ಇರಲಿ ಪಕ್ಷ ಭೇಧ ಮರೆತು ಅವರನ್ನ ಬೆಂಬಲಿಸುವುದು ನಿಜಕ್ಕು ಒಂದು ಒಳ್ಳೆಯ ನಡೆ ಅಂತಾನೆ ಹೇಳಬಹುದು.

ಇವತ್ತು ನಮಗೆ ಬೇಕಾಗಿರುವುದು ನಮ್ಮ ನಾಡು, ನುಡಿಯ ಬಗ್ಗೆ ಕಾಳಜಿ ಇರುವಂತಹ ನಾಯಕರು. ಅವರನ್ನ ಗುರುತಿಸಿ, ಆಯ್ಕೆ ಮಾಡಿ ಅವರನ್ನ ನಮ್ಮ ನಾಡನ್ನ ಮುನ್ನಡೆಸುವ ಅಧಿಕಾರ ನೀಡುವುದು ನಮ್ಮಗಳ ಕೈಯಲ್ಲಿದೆ.
ನೀವು ಏನು ಹೇಳ್ತಿರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾರಾಯಣಗೌಡರು 'ಅ' ಕ್ಕೂ 'ಹ' ಕ್ಕೂ ವ್ಯತ್ಯಾಸ ತಿಳಿದು ಮಾತಾಡಿದರೆ ಒಳ್ಳೆಯದು. ಭಾಷೆಯ ಬಳಕೆ ನೆಟ್ಟಗಿದ್ದರೆ ಇನ್ನೂ ಒಳ್ಳೆಯದು.

ಕಳ್ಳರ ಪೈಕಿ ಕಡಿಮೆ ಕಳ್ಳನನ್ನು ಹುಡುಕಿ ಆರಿಸಬೇಕು. ಅದೊಂದೇ ನಮಗಿರುವ ದಾರಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹದ ವಿಷಯ ಬಿಟ್ಟು ಚರ್ಚೆ ದೂರ ಸರಿಯುತ್ತಿದೆ .. ಎಚ್ಚರೆಚ್ಚರ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನ್ಯರೇ,
ತಾವು ಯಾಕೆ ಹೀಗೆ ಹೇಳ್ತಿದಿರೋ ನನಗೆ ಗೊತ್ತಿಲ್ಲ. ಕನ್ನಡ ಹೋರಾಟಕ್ಕೂ ಹಾಗು ಅವರ ಉಚ್ಚಾರಣೆಗೂ ಏನು ಸಂಭಂಧ ಅಂತ ತಿಳಿಯಲಿಲ್ಲ.
ಅದು ಅಲ್ಲದೆ ಒಂದು ಭೌಗೋಳಿಕ ಪ್ರದೇಶದಿಂದ ಇನ್ನೊಂದು ಭೌಗೋಳಿಕ ಪ್ರದೇಶಕ್ಕೆ ಇರುವ ಉಚಾರಣೆ, ವಾಕ್ಯ ರಚನೆ ಎಲ್ಲ ಬದಲಾಗುತ್ತೆ ಅನ್ನೋ ಸಾಮಾನ್ಯ ವಿಷಯವನ್ನ ನಿಮ್ಮ ಮುಂದೆ ಹೇಳೋದಕ್ಕೆ ಇಚ್ಛೆ ಪಡುತ್ತೇನೆ. ನನ್ನದು ಉತ್ತರ ಕರ್ನಾಟಕ ನಮ್ಮ ಕಡೆ ತಾಯಿಗೆ ಅವ್ವ ಅನ್ನುತ್ತಾರೆ, ಇಲ್ಲಿ ಬಹುಶಃ ಅಮ್ಮ ಅಂತಾರೆ. ಹಾಗಂತ ನಾನು ಕನ್ನಡಿಗನಲ್ಲವೇ?
ಇದು ಕೂಡ ಅಷ್ಟೇ, ಬಹುಶಃ ಹಾಸನದ ಕಡೆಯವರ ಮಾತುಗಳನ್ನ ನೀವು ಕೇಳಿಲ್ಲ ಅನ್ನಿಸುತ್ತೆ.
ಇನ್ನು ಹೆಚ್ಚಿನ ಮಾಹಿತಿಗೆ ಕೆಳಗಡೆ ಮಹೇಶ ಅವರ ಕೊಂಡಿಯನ್ನ ನೋಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ನಿಜ ಚೇತನ್,

ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಹಳ್ಳಿ ಹೆಣ್ಣುಮಕ್ಕಳು ಚೆನ್ನಾಗಿದಿಯಾ ಮಗನೇ ಅನ್ನಲು " ಸಂದಾಕಿದಿಯಾ ಕಂದಾ ?" ಅಂತ ಬಳಕೆ ಮಾಡ್ತಾರೆ, ಹಾಗಂತ, ಅವರೆಲ್ಲ ಕನ್ನಡ ಗೊತ್ತಿಲ್ಲದ ಗಮಾರರು ಅಂತ ಮಾತಾಡೋಕೆ ಆಗುತ್ತಾ?
ನೆನಪಿರಲಿ,, ಕನ್ನಡ ಇವತ್ತು ಉಳಿದಿದೆ ಅಂದರೆ ಅದು ಹಳ್ಳಿಯವರ ಬಾಯಲ್ಲೇ ಹೊರತು, ಪಟ್ಟಣದ ಎ.ಸಿ ರೂಮಲ್ಲಿ ಕೂತು ಪಟ್ಟಾಂಗ ಹೊಡೆಯುವವರಿಂದಲ್ಲ..

ಕನ್ನಡಿಗ ಆಡಿದ್ದೇ ಕನ್ನಡ. Plain and simple.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ, ಚೇತನ್ ಹಾಸನದ ಕಡೆ ಮಾತಾಡುವ ಕನ್ನಡದಲ್ಲಿ ಅ/ಹ ಕಾರಗಳಿಗೆ ಅಷ್ಟು ಮಹತ್ವ ಕೊಡುವುದಿಲ್ಲ. ಹೋರಾಟಕ್ಕೂ , ಉಚ್ಚಾರಣೆಗೂ ಸಂಬಂಧ ಕಲ್ಪಿಸುವುದೇ ಸರಿ ಇಲ್ಲ. ಸುರೇಶ್ ಅಂಗಡಿಯನ್ತವರನ್ನು ಮನೆಯಲ್ಲಿ ಕೂರಿಸಿದರೆ ಒಳ್ಳೆಯದು.

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ರಾಕೇಶ್,
ನೀವು ಹೇಳೋದು ಸರಿಯಾಗಿದೆ.

ಹಾಗೇನೇ ಸುರೇಶ್ ಅಂಗಡಿ ಅಂತಹ ಕಳ್ಳ ಹಾಗು ಎರೆಡು ನಾಲಿಗೆ ಇರುವ ಮನುಷ್ಯರಿಗೆ ಈ ಸಾರಿಯ ಚುನಾವಣೆಯಲ್ಲಿ ಸರಿಯಾಗಿ ಬುಧ್ದಿ ಕಲಿಸಬೇಕು.
ಇದು ನಮ್ಮ ಕನ್ನಡಿಗರ ಸ್ವಾಭಿಮಾನಕ್ಕೆ ಬಿದ್ದ ದೊಡ್ಡ ಹೊಡೆತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾರಾಯಣ ಗೌಡರ ಮಾತು ಸಂತಸ ತಂದಿತು.
ಬೆಳಗಾವಿಯ ಪಾಲಿಕೆಯಲ್ಲಿ ೧೮ ವರ್ಷದ ನಂತರ ಕನ್ನಡತಿಯೊಬ್ಬಳು ಮೇಯರ್ ಆಗುವಲ್ಲಿ ಕ.ರ.ವೇ ಪಾತ್ರ ನಿಜಕ್ಕೂ ದೊಡ್ಡದು.
ನಾಡು-ನುಡಿ ಪರವಾಗಿರುವವರಿಗೆ ತಮ್ಮ ಬೆಂಬಲ ಎನ್ನುವ ಅವರ ಮಾತು ಸ್ವಾಗತಾರ್ಹ. ಬೆಳಗಾವಿಯಲ್ಲಿ ಕನ್ನಡಕ್ಕೆ ದ್ರೋಹ ಬಗೆಯತ್ತಿರುವ ಅಲ್ಲಿನ ಎಮ್.ಪಿ ಅಂಗಡಿ ಸಾಹೇಬರ ಅಂಗಡಿಯನ್ನು ಮುಚ್ಚಿಸೋ ಕೆಲಸವನ್ನು ಈ ಬಾರಿ ಆ ಭಾಗದ ಸ್ವಾಭಿಮಾನಿ ಕನ್ನಡಿಗರು ಮಾಡಬೇಕು.
ಇಲ್ಲಿ ನೋಡಿ, ಹೇಗೆ ಆ ಭೂಪ ಮರಾಠ ಬಾವುಟ ಹಾರಿಸಲು ಯತ್ನಿಸಿದ್ದಾನೆ ಎಂದು:
http://www.kannadaprabha.com/pdf/epaper.asp?pdfdate=3/17/2009

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾರಾಯಣ ಗೌಡರ ಕನ್ನಡ ಬಿಟ್ಟು ಇಲ್ಲಿ ನಾವು ಕನ್ನಡ ಕರ್ನಾಟಕದ ಸುದ್ದಿ ಬಗ್ಗ ಚರ್ಚೆ ಮಾಡೋಣ. ಈ ಚುನಾವಣೆನಲ್ಲಿ ಕನ್ನಡ ಕನ್ನಡಿ ಕಾರ್ನಾಟಕದ ಎಳಿಗೆಗಾಗಿ ಕೆಲಸ ಮಾಡುವರರು ಗೆಲ್ಲಬೇಕು. ಅವರು ಯಾವ ಪಕ್ಷವಾದರು ಸರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್, ಗಮನಿಸಬೇಕಾದ ಅಂಶವೆಂದರೆ ರಾಷ್ಟ್ರೀಯ ಪಕ್ಷಗಳಿಗೆ ದೇಶದ ಎಲ್ಲಾ ರಾಜ್ಯಗಳನ್ನ ಓಲೈಸುವ ಜರೂರತ್ತಿದೆ ..ಆ ಪಕ್ಷಗಳ ಸಂಸದರಿಗೆ ಹೈಕಮಾಂಡ್ ಅನ್ನೋ ಅಂಕುಶ ಬೇರೆ ..ನಾಡು ನುಡಿ ವಿಚಾರದಲ್ಲಿ ಮೊದಲು ನಾನೊಬ್ಬ ಕನ್ನಡಿಗ ನಂತರ ಆಯಾ ಪಕ್ಷದವ ಅನ್ನೋ ಮಾತು ಇಲ್ಲವೇ ಇಲ್ಲ , ಹೈಕಮಾಂಡ್ ಹೇಳಿದರೆ ಸಾಕು ಚೀನಿ ನಾಗರಿಕನನ್ನೂ ಕರ್ನಾಟಕದಿಂದ ರಾಜ್ಯ ಸಭೆಗೆ ಆರಿಸಿ ಕಳಿಸುತ್ತಾರೆ ..ಮರ್ಯಾದೆ ಇಲ್ಲದವರು. ಅಕ್ಕ ಪಕ್ಕದ ರಾಜ್ಯಗಳನ್ನು ನೋಡಿ, ಕೇಂದ್ರದಲ್ಲಿ ಯಾವುದೇ ಸರ್ಕಾರ ಬರಲಿ ಅವರು ಆಡಳಿತದಲ್ಲಿ ಪಾಲುದಾರರಷ್ಟೇ ಅಲ್ಲ ಸಮಯ ನೊಡಿ ತಮ್ಮ ಬೇಳೆ ಬೆಯಿಸಿ ಕೊಳ್ಳುತ್ತಾರೆ. ಕನ್ನಡಕ್ಕೆ ಬಾಧ್ಯತೆ ಇಲ್ಲದ ಅಭ್ಯರ್ಥಿಗಳ್ಳನ್ನು ಪಕ್ಷ ಬೇದವಿಲ್ಲದೆ ನಾವು ಸೋಲಿಸಬೇಕಿದೆ ,ಅಷ್ಟೇ ಅಲ್ಲ ಈ ವಿಚಾರವನ್ನು ಚುನಾವಣೆ ಪೂರ್ವ ಸಮಿಕ್ಷೆಯಲ್ಲಿ ಅಗತ್ಯಕ್ಕಿಂತಾ ಹೆಚ್ಚಾಗಿಯೇ ಒತ್ತಿ ಒತ್ತಿ ಹೇಳಬೇಕಿದೆ.

ನಮಗೆ ಬೇಕಿರುವವರು ಕನ್ನಡದ ಮಕ್ಕಳೇ ಹೊರತು ಬಿಡ್ಡ, ಬಾಬು,ಮಚ್ಚಾ, ಮೋನೆ, ಕಸ್ಲ ಪಸ್ಲ ಗಳಲ್ಲ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಯಾಕೆ ರಾಷ್ಟ್ರೀಯ ಪಕ್ಷಗಳಿಂದ ಆರಿಸಿ ಬರುವ ಸದಸ್ಯರಿಂದ ಕೆಲಸಗಳು ಆಗೋದಿಲ್ಲ ಅನ್ನೋ ಕಾರಣ ಹುಡುಕಿದರೆ ಸಿಗುವ ಸರಳ ಮತ್ತು ಸಿಧ್ಧ ಉತ್ತರ "ಹೈ ಕಮಾಂಡ್ "[/quote]

ಮಾಜಿ ಪ್ರಧಾನಿಗಳಾದ ದೇವೇಗೌಡರು ಲೋಕಸಭೆಯ ಸದಸ್ಯರಾಗಿದ್ದ ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆಯಲನ್ನೂ ಕೇಳಲಿಲ್ಲವೆಂದು ವರದಿಯಾಗಿದೆ. ಅವರಿಗೆ ಯಾವ ಹೈಕಮಾಂಡ್ ತೊಂದರೆಯಿತ್ತು? ಸದಸ್ಯರ ಕಾರ್ಯಕ್ಷಮತೆಯು ಅವರು ಯಾವ ಪಕ್ಷದವರು ಎನ್ನುವುದಕ್ಕಿಂತಲೂ ಅವರ ವೈಯಕ್ತಿಕ ಸಾಮರ್ಥ್ಯ, ಆಸಕ್ತಿ, ವಿದ್ಯಾರ್ಹತೆ, ಲೋಕಸಭೆಯಲ್ಲಿ ಇಡೀ ದೇಶದ ಮುಂದೆ ನಿಂತು ಮಾತಾಡಬಲ್ಲ ಧೈರ್ಯ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಇಂದಿನ ಜನಪ್ರತಿನಿಧಿಗಳು 'ತಲೆಲೆಕ್ಕಕ್ಕೆ' ಸಲ್ಲುವ ತಲೆಯಾಗುವುದು, ತಮ್ಮ ಸ್ವಂತದ ಹಾಗೂ ಪಕ್ಷದ ತಿಜೋರಿ ತುಂಬುವುದು, ಜಾತಿ-ಧರ್ಮಗಳ ಹೆಸರಲ್ಲಿ ಸಮಾಜವನ್ನು ಒಡೆಯುವುದು, ತಾವೇ ಕಾನೂನು ಮಾಡುವವರಾದ್ದರಿಂದ ತಾವು ಅದಕ್ಕಿಂತ ದೊಡ್ದವರೆನ್ನುವಂತೆ ವರ್ತಿಸಿ ಒಂದಷ್ಟು ಗಲಭೆಗಳನ್ನು ಹುಟ್ಟಿಸುವುದು ಯಾ ಗೂಂಡಾಗಳನ್ನು ಸಾಕುವುದು ಇವೇ ಮುಂತಾದ ಕೆಲಸಗಳಲ್ಲಿ ಸದಾ ತೊಡಗಿರುತ್ತಾರೆ, ನಾಡು-ನುಡಿಯ ಉಸಾಬರಿ ಅವರಿಗೇಕೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.