ಕವಿತೆಯೆಂದರೇನು?

3

ಕವಿತೆ, ಕೆಲವು ಪದಗಳ ಸಾಲೇ
ಸಾಲಿನ ಕೊನೆಯ ಪ್ರಾಸವೇ
ಪ್ರಾಸದೊಳಗಿನ ಭಾವವೇ
ಭಾವದೊಳಗಿನ ಕಲ್ಪನೆಯೇ
ಕಲ್ಪನೆಗೊಂದು ಚಿಂತನೆಯೇ
ಚಿಂತಣದೊಂದಿನ ವಿಷಯವೇ
ವಿಷಯದ ಹಿಂದಿನ ಘಟನೆಯೇ
ಘಟನೆಗೊಂದು ತರ್ಕವೇ
ತರ್ಕಕ್ಕೆ ನಿಲುಕದ ಸತ್ಯವೇ
ಸತ್ಯದೊಳಗಿನ ಸೌಂದರ್ಯವೇ
ಸೌಂದರ್ಯವೆಂಬ ಕನಸೇ
ಕನಸಿಂದ ದೊರೆತ ಸ್ಪೂರ್ತಿಯೇ
ಸ್ಪೂರ್ತಿಯಿಂದ ಹುಟ್ಟಿದ ಶಿಲ್ಪವೇ
ಶಿಲ್ಪವ ವರ್ಣಿಸುವ ಪದಗಳೇ

(ಮತ್ತೆ ಮೊದಲಿನಿಂದ ಓದಿಕೊಳ್ಳಿ :) )

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಏನಿದು ವಿನುತಾಕ್ಕ?
ಸಾಕಾಯಿತು ನಿಮ್ಮ ತರ್ಕ!
ಪ್ರಾಸವೇ, ಕಲ್ಪನೆಯೇ, ಭಾವವೇ
ಏನಿದು ಇಷ್ಟೊಂದು ಗೊಂದಲವೇ?
ಏನೇ ಆಗಲಿ, ಸ್ಪೂರ್ತಿಯೊಂದಿರಲಿ
ಜೀವನದಲಿ ಕನಸುಗಳಿರಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೊಂದಲವೇನಿಲ್ಲ ತಂಗಿ :)
ಅದೇ ನನ್ನ ಭಾವಭಂಗಿ
ಕನಸುಗಳೇ ಜೀವನವೇ
ನನಸಾಗಿಸುವ ಪ್ರಯತ್ನ ಬೇಡವೇ
ಏನೇ ಆಗಲಿ ಹಸನಾಗಲಿ ಬಾಳು
ಸ್ಪೂರ್ತಿಯಿಂದ ಕಟ್ಟಿದ ಕನಸುಗಳು
ನನಸಾಗಲೆಂಬ ಶುಭಹಾರೈಕೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ನನಗಾಗುವುದಿಲ್ಲ ಇನ್ನೂ
ನಿಮಗೇ ಶರಣೋ ಶರಣು
ನಿಮ್ಮ ಹಾರೈಕೆಗಳೇ ನನಗೆ ಶ್ರೀರಕ್ಷೆ
ಇರಲಿ ಎಂದೆಂದಿಗೂ ಇದೇ ಹರಕೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಗದೆಂದರೆ ಆದೀತೆ
ಸಾಗೆನೆಂದರೆ ಸಾಗೀತೆ
ಯಾರೂ ಆಗಬೇಕಿಲ್ಲ ಶರಣಾರ್ಥಿ
ನಿಮ್ಮ ಬೆಂಬಲವೆನಗೆ ಸ್ಪೂರ್ತಿ
ಒಟ್ಟಿಗೆ ಸಾಗಬೇಕೆಂಬ ಆಕಾಂಕ್ಷೆ
ನಮ್ಮ ನಂಬಿಕೆಯೆಮಗೆ ಶ್ರೀರಕ್ಷೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.