ಪ್ರತಾಪಸಿಂಹರ ಹೊಸ ಪ್ರಶ್ನೆಯ ಸುತ್ತ...

5

ಇಂದಿನ ಸಮಸ್ಯೆಗಳಿಗೆಲ್ಲ ಐಟಿ ಉದ್ಯೋಗಿಗಳೇ ಕಾರಣವೆಂಬಂತೆ ಬಿಂಬಿಸಿದ್ದ ಪ್ರತಾಪರು, ಇಂದು ನಮ್ಮಲ್ಲಿ ಗೇಟ್ಸ್, ಜಾಬ್ಸ್, ಡೆಲ್ ಯಾಕಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಅವರ ಹಿಂದಿನ ಲೇಖನ ಸೃಷ್ಟಿಸಿದ್ದ ಗೊಂದಲಗಳಿಗೆ ಈಗಿನ ಲೇಖನ ಉತ್ತರವೆಂಬಂತೆ ಭಾವಿಸಲಾಗಿದೆ. ಆದರೆ, ಆರ್ಥಿಕತೆಯ ಹಿನ್ನೆಲೆಯಲ್ಲಿ ಬಂದ ಅವರ ಕುರುಡು ಕಾಂಚಾಣ.... ಕ್ಕೂ, ತಾಂತ್ರಿಕತೆಯ ಆಧಾರದ ಮೇಲೆ ಅವರು ಇಂದು ಮುಂದಿಟ್ಟಿರುವ ಪ್ರಶ್ನೆಗೂ, ವೃತ್ತಿಪರತೆ, ಹಣದ ಮೌಲ್ಯದ ಅರಿವಿನ ಕುರಿತಾದ ಮೊದಲ ಲೇಖನಕ್ಕೂ, ಪರಿಶ್ರಮ, ಪ್ರತಿಭೆಯನ್ನಾಧರಿಸಿದ ಎರಡನೆಯ ಲೇಖನಕ್ಕೂ, ಸಂಬಳಕ್ಕಾಗಿ ದುಡಿಯುವ ಐಟಿ ಕಾರ್ಮಿಕರ ಕುರಿತಾದ ಮೊದಲ ಭಾಗಕ್ಕೂ, ಬಂಡವಾಳ ಹೂಡುವ ಐಟಿ ದೊರೆಗಳ ಕುರಿತಾದ ಎರಡನೆಯ ಭಾಗಕ್ಕೂ ಬಹಳ ವ್ಯತ್ಯಾಸವಿದೆ. ಅದಕ್ಕೂ ಇದಕ್ಕೂ ಐಟಿ ಕ್ಷೇತ್ರ ಎಂಬ ಪದವಷ್ಟೇ ಕೊಂಡಿ.

ಹೊಸ ಚಿಂತನೆಯನ್ನು ಮುಂದಿಟ್ಟಿರುವ, ಐಟಿ ಕ್ಷೇತ್ರದ ಸಮಸ್ಯೆಯನ್ನು ಗುರುತಿಸುವ ಪ್ರಯತ್ನಕ್ಕಾಗಿ ಪ್ರತಾಪರಿಗೆ ಅಭಿನಂದನೆಗಳು. ಕೇವಲ ನಮ್ಮ Open House, All Hands Meet ಗಳಲ್ಲಿ ಕಳೆದು ಹೋಗುತ್ತಿದ್ದ ಪ್ರಶ್ನೆ ಇಂದು ಸಾರ್ವಜನಿಕ ವೇದಿಕೆಯಲ್ಲಿದೆ. ಪ್ರತಾಪರೇ ಹೇಳುವಂತೆ, ಪರಸ್ಪರ ಹಳಿದುಕೊಳ್ಳದೆ ಮುಕ್ತ ಚರ್ಚೆಯಾಗಲಿ. ನಮ್ಮ ಆಶಯವೂ ಅದೇ.

ISRO, DRDO ಮೊದಲಾದವುಗಳ ಇತಿಹಾಸ ಕೆದಕಿದಾಗ, ಅಬ್ದುಲ್ ಕಲಮರ ’Wings of Fire’ ಓದಿದಾಗ, ಎಂತಹವರ ಜಂಘಾಬಲವೂ ಉಡುಗಿಬಿಡಬೇಕು. ಉಳಿಪೆಟ್ಟು ತಿಂದೂ, ತಿಂದೂ ರೂಪುಗೊಂಡ ಶಿಲ್ಪಗಳಿವು. ದೇಶದ ವೈಜ್ಞಾನಿಕ ಪ್ರಗತಿಯ ರೂವಾರಿಗಳು. ಸೋಲಿನಲ್ಲೂ ಅದರ Top Management ಅವರ ಮೇಲಿಟ್ಟ ನಂಬಿಕೆ, ವಿಶ್ವಾಸಗಳು ಉದಾತ್ತವಾದವುಗಳು. (ಇಂತಹುದೊಂದು ನಂಬಿಕೆಯನ್ನು ನಮ್ಮ ಐಟಿ ಕ್ಷೇತ್ರದ ಮೇಲೂ ಇಡುವಂತಾದಲ್ಲಿ??!!) ಸ್ವಾತಂತ್ರ್ಯಾಪೂರ್ವದಲ್ಲೇ, ಭಾರತೀಯರ ಪ್ರತಿಭೆ ಗುರುತಿಸಿ, ಅವರಿಗೆ ಒತ್ತಾಸೆಯಾಗಿರಲೆಂದು, ಶ್ರೀಯುತ Jamsetji Nusserwanji Tata ರವರು ಕಂಡ ಕನಸು, 'Research Institute' ಅಥವಾ 'University of Research' ಎಂದು ಪ್ರಾರಂಭವಾಯಿತು. ಅದೇ ಇಂದಿನ ನಮ್ಮೆಲ್ಲರ ಹೆಮ್ಮೆಯ ಭಾರತೀಯ ವಿಜ್ಞಾನ ಸಂಸ್ಥೆ (೧೯೦೯ ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅದರ ಬೆಳವಣಿಗೆಗೆ ಶ್ರಮಿಸಿದ ಎಲ್ಲರಿಗೂ, ಇಂದು ಅದರ ಫಲಾನುಭವಿಗಳಾದ ನಮ್ಮೆಲ್ಲರಿಂದ ಕೃತಜ್ಞತೆಗಳು, ಈ ಮೂಲಕ). ಅಂತಹುದೊಂದು vision ಇಟ್ಟುಕೊಂಡಿದ್ದ ಮತ್ತೊಬ್ಬ ಟಾಟಾ ಮತ್ತೆ ಬರಲಿಲ್ಲವೆಂಬುದೂ ಅಷ್ಟೇ ಖೇದಕರ. ಈ ಎಲ್ಲ ಸಂಸ್ಥೆಗಳಿಗೂ ಅವುಗಳದೇ ಆದ limitation ಗಳಿವೆ. ದೇಶದ ತಾಂತ್ರಿಕತೆಯ ಕೇಂದ್ರವಾದ ಇವುಗಳೊಳಗೆ ಎಲ್ಲರೂ ಹೋಗುವುದು ಸಾಧ್ಯವಿಲ್ಲ. ಅದು ಸೂಕ್ತವೂ ಅಲ್ಲ. ಅವು ತೋರಿಸಿದ ದಾರಿಯಲ್ಲಿ ನಡೆಯುವುದಷ್ಟೇ ಸೂಕ್ತ.

ಸ್ವಾತಂತ್ರ್ಯಾಪೂರ್ವದಲ್ಲಿ, ಟಾಟಾ, ಬಿರ್ಲಾ, ವಿಶ್ವೇಶ್ವರಯ್ಯನಂತಹವರು ದೇಶದ ಆರ್ಥಿಕ ಪ್ರಗತಿಗಾಗಿ ಕೈಗಾರಿಕೀಕರಣಗೊಳಿಸಿದರು. ಸ್ವಾತಂತ್ರ್ಯಾನಂತರ ಕೆಲವು ಸರ್ಕಾರಿ ಸ್ವಾಮ್ಯಗಳಾದವು. ಕೆಲವು ಹಾಗೆಯೇ ವ್ಯಕ್ತಿಯ/ಕುಟುಂಬದ ಆಡಳಿತದಲ್ಲಿಯೇ ನಡೆದುಕೊಂಡು ಬಂದವು. ಅವುಗಳ ಮಾರುಕಟ್ಟೆ ಭಾರತವೇ ಆಗಿದ್ದಿತು. ನಮ್ಮಲ್ಲಿಯೂ ವಿದೇಶೀ ಉತ್ಪನ್ನಗಳ ಹಾವಳಿ ಕಡಿಮೆಯಿದ್ದಿತು. ಹಾಗಾಗಿ ಇವು ಎಲ್ಲರಿಗೂ ಚಿರಪರಿತ. ನಾವು ಇಂದು ನೋಡುತ್ತಿರುವ ಆರ್ಥಿಕ ಚಿತ್ರಣಕ್ಕೂ, ಕೇವಲ ಸ್ವಾತಂತ್ರ್ಯಾನಂತರದ ಚಿತ್ರಣಕ್ಕೂ ವ್ಯತ್ಯಾಸವಿದೆ. ಈ ವಿಂಗಡನೆಯೇ ಸೂಕ್ತವಲ್ಲವೇನೋ. ಬಹುಶ:, ಭಾರತವನ್ನು ಜಾಗತಿಕ ಮಾರುಕಟ್ಟೆಗೆ ತೆರೆದಿಟ್ಟ ನಂತರದ ಹಾಗೂ ಅದರ ಮೊದಲಿನ ಕಾಲವಂದು ವಿಂಗಡಿಸಬಹುದೇನೊ. ೯೦ ರ ದಶಕದಲ್ಲಿ ನಾವು ಜಾಗತೀಕರಣವನ್ನು ಬರಮಾಡಿಕೊಂಡೆವು. ಆಗ, ವಿದೇಶಗಳಲ್ಲಿ ಆಗಲೇ ಸಾಕಷ್ಟು establish ಆಗಿದ್ದ, ಲಾಭದಲ್ಲಿ ನಡೆಯುತ್ತಿದ್ದ ಕಂಪನಿಗಳು, ಪ್ರಾಡಕ್ಟ್ ಗಳು ಭಾರತಕ್ಕೆ ಲಗ್ಗೆಯಿಟ್ಟವು. ಅವರ ಲಾಭಾಂಶದ ಸ್ವಲ್ಪ ಮಾತ್ರ ಹಣಹೂಡಿಕೆ ಸಾಕಾಗಿತ್ತು ಅವರು ಭಾರತದಲ್ಲಿ ಹೆಜ್ಜೆಯಿಡಲು ಅಥವಾ ತಳವೂರಲು (??). ಇವುಗಳಿಂದಾಗಿ ಬಹುಪಾಲು ನಮ್ಮ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಪೆಟ್ಟು ತಿಂದವು, ಮುಚ್ಚಿಯೇ ಹೋದವು. ಟೆಲೆಕಮ್ಯೂನಿಕೇಷನ್ ಕ್ಷೇತ್ರದಲ್ಲಿ ಸಂಪರ್ಕ ಕ್ರಾಂತಿ ಸಾಧಿಸಿದ್ದ, ಅಂದಿನ C-DoT, ಇಂದಿನ BSNL ನ ಏಕಾಧಿಪತ್ಯ ನಶಿಸಿಹೋಗಿದೆ. ಇಂದಿಗೂ ಮುಕ್ತ ಮಾರುಕಟ್ಟೆಯಲ್ಲಿ ತನ್ನನ್ನು ತಾನು ನಿರೂಪಿಸಲು ಹೆಣಗುತ್ತಿದೆ. ಸ್ವಲ್ಪ ಮಟ್ಟಿಗಾದರೂ ಸ್ಪರ್ಧೆ ನೀಡಿದ ವಿಡಿಯೋಕಾನ್, ಬಿಪಿಲ್ ನಂತಹ ಸಂಸ್ಥೆಗಳು ಏನಾದವು?

ಜಾಗತಿಕ ಮಾರುಕಟ್ಟೆಗೆ ಸರಿಯಾದ ತಯಾರಿಯಿಲ್ಲದೆ ನಾವು ಹೆಜ್ಜೆಯಿಟ್ಟೆವೇ? ತರಬೇತಿಗೊಳಿಸದೇ ನಮ್ಮನ್ನು ತಳ್ಳಲಾಯಿತೇ? ಗೊತ್ತಿಲ್ಲ. ಇಂತಹುದೊಂದು ಸಂದರ್ಭದಲ್ಲಿ, ಸಂಸ್ಥೆಯೊಂದನ್ನು ಕಟ್ಟಿ ಅದು ಲಾಭಗಳಿಸುವಂತೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ (ಸಿಕ್ಕ ಅವಕಾಶವನ್ನು ಬಳಸಿಕೊಂಡ ಪ್ರೇಮ್ ಜಿ, ನಾರಾಯಣ ಮೂರ್ತಿಯವರನ್ನು, ಗೇಟ್ಸ್, ಜಾಬ್ಸ್ ರಿಗೆ ಹೋಲಿಸಲು ಸಾಧ್ಯವಿಲ್ಲವೇ?). ಹಾಗಾಗಿ ’Service Orientation' ಕೇವಲ ಅಗತ್ಯವಾಗಿರಲಿಲ್ಲ, ಅನಿವಾರ್ಯವಾಗಿತ್ತು. ನಂತರವಾದರೂ ’Product Orientation' ಆಗಬಹುದಿತ್ತಲ್ಲ. ಇದಕ್ಕೆ ನನಗೆ ದೊರೆತ ಉತ್ತರ - "ಈಗಾಗಲೇ ಮಾರುಕಟ್ಟೆಯಲ್ಲಿರುವ ಕಂಪನಿಗಳಿಗೆ ನಾವು ಸರ್ವೀಸ್ ಕೊಡುತ್ತಿದ್ದೇವೆ. ಹೊಸ ಪ್ರಾಡಕ್ಟ್ ಒಂದನ್ನು ತಂದರೆ ಅವರೊಂದಿಗೇ ಸ್ಪರ್ಧೆಗಿಳಿಯಬೇಕು. ಆಗ Service business ಕೂಡ ಹೊಡೆಸಿಕೊಳ್ಳುತ್ತದೆ. ಅದನ್ನು ಬಿಟ್ಟು ಲಾಭಾಂಶ ಇಲ್ಲ. ಲಾಭಾಂಶವಿಲ್ಲದೇ ಹೊಸ ಪ್ರಾಡಕ್ಟ್ ಗೆ ಕೈ ಹಾಕುವಷ್ಟು ಬಂಡವಾಳವಿಲ್ಲ. ಅದು ಜಾಣತನವೂ ಅಲ್ಲ. ಯಾಕೆಂದರೆ ನಮ್ಮ ಪ್ರಾಡಕ್ಟ್ ಗಳ ಮಾರುಕಟ್ಟೆ ಭಾರತಕ್ಕೆ ಸೀಮಿತವಾಗಬಹುದು. ಜಾಗತಿಕ ಮಟ್ಟದಲ್ಲಿ client brand establish ಆಗಿದೆ."

ಹಾಗಾದರೆ ನಮ್ಮ Innovation ಏನೂ ಇಲ್ಲವೇ? ಹೊಸ ಹೊಸ ತಂತ್ರಾಂಶಗಳ ಕುರಿತಾದ ಈ Innovation Drive ಗೆ ಅರ್ಥವೇನೆಂದು ಕೇಳಿದಾಗ ಸಿಕ್ಕ ಉತ್ತರ - "ಇಂದು ನೊಕಿಯಾದ ಹೊಸ ಮೊಬೈಲ್ ಗೆ, HP ಪ್ರಿಂಟರ್ ಗೆ ನಾವಿನ್ನೊಂದು ಹೊಸ ಮೊಬೈಲ್, ಪ್ರಿಂಟರ್ ತರುವುದೇ Innovation ಅಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಬಹಳ ಪ್ರಾಡಕ್ಟ್ ಗಳಿದ್ದು, ಗ್ರಾಹಕ ಆಗಲೇ confuse ಆಗಿದ್ದಾನೆ. ಹೀಗಿರುವಾಗ ಹೊಸ ಪ್ರಾಡಕ್ಟ್ ಎಷ್ಟು sustain ಆಗುವುದೆಂದು ಹೇಳಬರುವುದಿಲ್ಲ. ಹಾಗಾಗಿ ಸ್ಪರ್ಧಿಸುವ ಬದಲು, ಸಹಯೋಗದೊಂದಿಗೆ ಹೊಸ ತಂತ್ರಜ್ಞಾನಗಳನ್ನು ತರುವುದು Innovation. ಆದ್ದರಿಂದ ಇಂದು service orientation ಎನ್ನುವುದು ಕೇವಲ cheap labour ಗೆ ಸೀಮಿತವಾಗಿಲ್ಲ. ಅದನ್ನೂ ಮೀರಿ ಬೆಳೆದಿದೆ."

ಗ್ರಾಹಕನೇ ಪ್ರಭುವಾಗಿರುವ, ಮುಕ್ತವಾಗಿರುವ ಮಾರುಕಟ್ಟೆಯಲ್ಲಿ, ಕೇವಲ ಪ್ರಾಡಕ್ಟ್ ಗಳನ್ನೇ ನಂಬಿಕೊಂಡಿದ್ದರೆ ಇಷ್ಟೊಂದು ಉದ್ಯೋಗಗಳ ಸೃಷ್ಟಿ ಸಾಧ್ಯವಿತ್ತೇ? ಸರಕಾರಿ ಸ್ವಾಮ್ಯದ ಸಂಸ್ಥೆಗಳು/ ಸಂಶೋಧನೆ ಆಧಾರವಾಗಿರಿಸಿಕೊಂಡ ಸಂಸ್ಥೆಗಳು ಸೃಷ್ಟಿಸಿರುವ ಉದ್ಯೋಗಗಳೆಷ್ಟು? ಪ್ರಾಂತೀಯ, ಜಾತಿಯ ಆಧಾರದ ಮೇಲೆ ನಿಂತಿರುವದರಿಂದ ಪ್ರತಿಭೆಗೆ ಮನ್ನಣೆ ದೊರಕದೆ ಹತಾಶವಾದವರೆಷ್ಟು? ಈ ನಿರ್ಬಂಧಗಳನ್ನು ಮೀರಿ ನಿಂತ ಐಟಿ ಕ್ಷೇತ್ರ ಜನರಿಗೆ ಹತ್ತಿರವಾದದ್ದು ಅಸಹಜವೇ? ದೂರದೃಷ್ಟಿಯಿಲ್ಲದೆ ಬೆಳೆದಿದ್ದರೆ, ಇಂದು ಕೇವಲ ಭಾರತೀಯ ಐಟಿ ಕ್ಷೇತ್ರ ಬವಣೆ ಅನುಭವಿಸಬೇಕಿತ್ತಲ್ಲವೇ? Product Oriented ಜಪಾನ್, ಚೀನಾ ದ ಆರ್ಥಿಕ ಸ್ಥಿತಿಯೂ ಏಕೆ ನಲುಗುತ್ತಿದೆ? ರಫ್ತು ಆಧಾರಿತ ಕ್ಷೇತ್ರಗಳೆಲ್ಲವೂ ಇಂದು ಬಳಲುತ್ತಿರುವುದು ಸತ್ಯವಲ್ಲವೇ? ಇದರಲ್ಲಿ ಜಾಗತೀಕರಣದ ಕೊಡುಗೆಯೆಷ್ಟು? ಇಂದು ತಪ್ಪೆಲ್ಲವೂ ಐಟಿ ಕ್ಷೇತ್ರದ ದಿಗ್ಗಜರದಾದರೆ, ಅವರಿಗೆ ದೂರದರ್ಶಿತ್ವ ಇಲ್ಲವೆಂದಾಗಿದ್ದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನೇಕೆ ಅವರಿಗೆ ನೀಡಬೇಕಿತ್ತು? ಎಲ್ಲಿ ಎಡವಬಹುದೆಂದರಿತವರು ಅವರಿಗೆ ಎಚ್ಚರಿಸುವ ಪ್ರಯತ್ನವನ್ನೇಕೆ ಮಾಡಲಿಲ್ಲ? ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ದೇವೆಯೇ? ತಪ್ಪು ಜರುಗಿದ್ದೇ ಆಗಿದಲ್ಲಿ, ಸರಿಪಡಿಸುವ ಬಗೆಗಳೆಂತು? ಸಾಮಾನ್ಯ ಕಾರ್ಮಿಕರಿಂದಲೂ ಸಾಧ್ಯವೇ ಅಥವಾ ಬಂಡವಾಳ ಹೂಡಲು ಸಾಧ್ಯವಿರುವವರಿಂದ ಮಾತ್ರ ಸಾಧ್ಯವೇ?(ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆತೀತೆಂದು ಭಾವಿಸುತ್ತೇನೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನು ಮತ್ತೆ ನನ್ನ ಗೆಳೆಯರು ಅವ್ರಿಗೆ ಮೈಲ್ ಮಾಡಿದ್ವಿ, ಅದು ಹೀಗಿದೆ...

Hi Pratap,

Just see the following link:

http://www.infosys.com/finacle/customers/customers.asp

Like this there are many.

ಮನೆ ಹೊರಗಡೆಯಿಂದ ನೋಡಬೇಡಿ, ಒಳಗೆ ಬಂದು, ಮನೆ ಹೇಗಿದೆ , ಮನಸುಗಳು ಹೇಗಿದೆ ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ ಒಳ್ಳೆಯದು...

Regards,
Chethan

From: Harsha K [mailto:harsha.kr@gmail.com]
Sent: Monday, March 02, 2009 11:29 AM
To: pratap deva
Cc: scorpioamar@yahoo.com; Chethan KG; Sowjanya Maragal
Subject: Re: Pls read this

A very simple answer for your article is that this industry in India is pretty new when compared to in US.

And do you know who Mr.NarayanaMurthy, Mr.Azim Premji, Mr.Nandan Nilekani is ??
These are just few of the people who lifted the flag high up in the air and told the whole world what India and Indians are capable of.

And why to forget people like Arun Sarin of Vodofone, Vinod Khosla of McKinsey, Amar Bose of BOSE corporation.... man the list would never stop.

And don't you update yourself with whats happening around you in your city.
Intel's next gen chip was designed and developed here in our own Bengaluru city and has been accepted worldwide in all its R & D and testing centers for the amazing multitasking it can perform.

On Sun, Mar 1, 2009 at 6:26 PM, pratap deva
wrote:
Dear Frens,

Pls go through my article

"Never confuse the size of your paycheck with the size of your talent. You are much more than your pay check". -Marlon Brando

ಆಮೇಲೆ 2 ವಾರದ ಲೇಖನಕ್ಕೂ ಸಂಬಂಧವೇ ಇಲ್ಲ....ಪ್ರೊಫೆಶನ್ ಬಗ್ಗೆ ಆದ್ರೆ ಇನ್ನೊಂದು ಪ್ರೊಫೆಶನಲ್ ಬಗ್ಗೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತ ರವರೆ,

ಬಹಳ ಚೆನ್ನಾಗಿ ಬರೆದಿದ್ದೀರಿ. ನಾನು ನಿಮ್ಮ ಉತ್ತರವನ್ನು ಪ್ರಾತಾಪನ ಬ್ಲಾಗಿನಲ್ಲೂ ನೋಡಿದೆ. ನಿಮ್ಮ ವಾದ ಚೆನ್ನಾಗಿದೆ. product developmentನಲ್ಲಿ ಭಾಗಿಯಾಗಿ service ಕೊಡುವುದು ಒ೦ದು ಒಳ್ಳೆಯ ಮಾರ್ಗವೆ. ಆದರೆ product developmentನಲ್ಲಿನ ಸಹಭಾಗಿತ್ವ ಈಗ ಕೇವಲ software, firmware ಮತ್ತು electronic hardwareನಲ್ಲಿ ಮಾತ್ರ ಹೆಚ್ಚಾಗಿ ಸಾಗುತ್ತಿದೆ. ಇದು ಬೇರೆ ಬೇರೆ ಉದ್ಯಮಗಳಲ್ಲೂ ಹರಡಿದರೆ ಉತ್ತಮವಲ್ಲವೆ? ಆದರೆ ಇನ್ನೊ೦ದು ರೀತಿ ನೋಡಿದರೆ ಬರಿ ಸಹಭಾಗತ್ವದಿ೦ದ ಬರುವ revenue ಕಡಿಮೆ ಹಾಗಾಗಿ ಎಲ್ಲರೂ ಪೂರ್ಣ design ಕೂಡ ತಮ್ಮದೆ ಆದರೆ ಆದಾಯ ಹೆಚ್ಚು ಅ೦ತ ಸ್ವ೦ತ ಉದ್ದಿಮೆ ಶುರುಮಾಡುವುದು. ಶುರುವಿನಲ್ಲಿ ಹೋರಾಟವಿರುತ್ತದೆ ಆದರೆ ಕ್ರಮೇಣ ಹೆಸರು ಮಾಡುತ್ತದೆ. OEM ಮಾರುಕಟ್ಟೆ ಕೂಡ ಚೆನ್ನಾಗಿಯೆ ಇದೆ ಭಾರತದಲ್ಲಿ.
ಕೆಲವು ಹೆಸರು ಮಾಡಿರುವ indian startups: Tejas Networks , Cosmic Circuits, Geodesic Technologies etc.,

ನಾನು ಕೂಡ ಅವರ ಬ್ಲಾಗನಲ್ಲಿ ಪ್ರತಿಕ್ರಿಯಿಸಿದ್ದೆ. ಅದನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ
-------------------------------------------------------------------------------------
ನಮಸ್ಕಾರ ಪ್ರತಾಪ್ ರವೆರೆ

ಅ೦ಕಣ ಚೆನ್ನಾಗಿದೆ. ನಿಮ್ಮ ಹಲವಾರು ಲೇಖನದಲ್ಲಿ ನಿಮ್ಮ ಒಬ್ಬ ಉತ್ತಮ ಅ೦ಕಣಕಾರರಿಗಿರಬಾರದ ಉದ್ರೇಕ ಎದ್ದು ಕಾನುತಿತ್ತು. ಆದರೆ ಈ ಲೇಖನ್ನ ನೀವು ಸಮಾನಚಿತ್ತರಾಗಿ ಬರೆದಿದ್ದೀರಿ. ಹಾಗಾಗಿ ಇದು ಚೆನ್ನಾಗಿ ಮೂಡಿಬ೦ದಿದೆ.

ಆದರೆ, ಮತ್ತೆ ಆ ವಾದ ನನಗೆ ಹಿಡಸಲಿಲ್ಲ. ಐ.ಟಿ ಯವರ ಸಾಫ್ಟವೇರ್ ಇಸ್ರೋದ ಉಪಗ್ರಹಗಳಿಲ್ಲದೆ ನಿಷ್ಪ್ರಯೋಜಕ ಎ೦ದು. ಉಪಗ್ರಹಗಳನ್ನು ಬಳಸಿಕೊಳ್ಳದ ತ೦ತ್ರಜ್ಞಾನವಿಲ್ಲದೆ ಉಪಗ್ರಹಗಳು ಕೇವಲ ಬಾಹ್ಯಾಕಾಶ ಕಸವಲ್ಲವೆ. ಸಾಫ್ಟವೇರ್ ನಿ೦ದ, ಸಾಫ್ಟವೇರ್ ಗಾಗಿ ಹಾರ್ಡವೇರ್ ಮತ್ತು ಹಾರ್ಡವೇರ್ ನಿ೦ದ, ಹಾರ್ಡವೇರ್ ಗಾಗಿ ಸಾಫ್ಟವೇರ್. ಇದನ್ನು ತಿಳಿದು ನಡೆಯುವುದು ಉತ್ತಮ.

ವರ್ಕ ಕಲ್ಚರ್ ಕೂಡ ಹಾಗೆ genericಆಗಿ ಹೇಳುವ೦ತಿಲ್ಲ. ನನ್ನ ಉನ್ನತ ವ್ಯಾಸ೦ಗದ ಹಲವಾರು ಸ್ನೇಹಿತರು ಡಿ.ಆರ್.ಡಿ.ಓ, ಹೆಚ್.ಎ.ಎಲ್ ಹಾಗು ಇಸ್ರೋ ದಿ೦ದ ಬ೦ದಿದ್ದರು. ಅವರಿಗೆ ಅನೇಕರಿಗೆ ಕಲಿಕೆಯಲ್ಲಿ ಆಸಕ್ತಿಯೇ ಇರಲಿಲ್ಲ. ಸುಮ್ಮನೆ ಬಡ್ತಿ ಹಾಗೂ ಹೆಚ್ಚು ಪಗಾರಕ್ಕಾಗಿ ಒದುತ್ತಿದ್ದರು. ಹಾಗಾಗಿ ಈ collectivist ದೃಷ್ಟಿಕೋನವನ್ನು ದಯವಿಟ್ಟು ಬಿಡಿ. ಈ ಕ೦ಪೆನಿಗಳೂ ಕೂಡ ಕೆಲವು module ಗಳನ್ನು ತಾವಾಯಾಗಿಯೆ ತಯಾರಿಸುವುದನ್ನು ಬಿಟ್ಟು israel, germany ಮತ್ತು u.k ಗಳಿ೦ದ ತರಿಸಿಕೊಳ್ಳುವುದು೦ಟು. ನಮ್ಮ ಸೇನೆಯವರು ಕೂಡ ಭಾರತದಲ್ಲಿ ಅದನ್ನು ತಯಾರುಮಾಡುವ ಸೌಲಭ್ಯಗಳಿದ್ದರೂ ಐದಾರು ಪಟ್ಟು ಹೆಚ್ಚಿನ ಬೆಲೆಗೆ ಪರದೇಶದಿ೦ದ ಅದನ್ನು ಖರೀದಿಸುವುದು೦ಟು. ನಮ್ಮಲ್ಲೆ ನಮ್ಮವರಿಗೇ ಮಾನ್ಯತೆಯಿಲ್ಲ. ಸೇನೆಯ ಒ೦ದು contract ಸಿಗಬೇಕಾದರೆ ಎಷ್ಟೋ ತಿ೦ಗಳು ತೆಗೆದುಕೊಳ್ಳುತ್ತದೆ. ಮೇಲಾಗಿ ಲ೦ಚ ಬೇರೆ. ಇದರಿ೦ದಾಗಿ ಎ೦ತಹ ಉತ್ಸಾಹಿಯಾಗಿದ್ದರೂ ಕ್ರಮೇಣ ಜಿಗುಪ್ಸೆ ಬ೦ದುಬಿಡುತ್ತದೆ.

ನೀವು ಇನೋವೆಷನ್ ಬಗ್ಗೆ ಹೇಳಿರುವುದು ಸರಿಯೆ. ಆದರೆ ನಮ್ಮಲ್ಲಿ ೨೦೦೦ ಇ೦ಜಿನೀಯರಿ೦ಗ್ ಕಾಲೇಜುಗಳಿರಬಹುದು. ಆದರೆ ಅಷ್ಟು ಅಪಾರ ಸ೦ಖ್ಯೆಯ ಕಾಲೇಜುಗಳಿರುವುದರಿ೦ದ ಹೊರಗೆ ಬರುವ ಅಭಿಯ೦ತರುಗಳ ಗುಣಮಟ್ಟ ಮು೦ಚಿನ೦ತೆ ಇಲ್ಲ. ಇ೦ತಹ ಕೆಲವು ಗುಣಮಟ್ಟವಿಲ್ಲದ ಅಭಿಯ೦ತರುಗಳಿಗೆ white-collared ಕೂಲಿ ಕೆಲಸ ಮಾಡದೆ ಬೇರೆ ದಾರಿಯಿಲ್ಲ. AICTE ಗೆ ಕಾಲೇಜುಗಳಿಗೆ ಪರವಾನಗಿ ನೀಡುವುದಕ್ಕಿ೦ತ ಮು೦ಚೆ ಇದರ ಬಗ್ಗೆ ಯೋಚನೆ ಮಾಡಬೇಕು. ಐ.ಐ.ಟಿ ವಿಷಯದಲ್ಲೂ ಹಾಗೆಯೆ, ಈಗಿರುವ ಏಳು ಸ೦ಸ್ಥಾನಗಳಲ್ಲೆ ಅಧ್ಯಾಪಕರ ಕೊರತೆ ಇದೆ. ಇವುಗಳಿ೦ದಲೆ ಭಾರತಕ್ಕೆ ಆಗುತ್ತಿರುವ ಲಾಭ ಅಷ್ಟರಲ್ಲೆ ಇದೆ. ಈಗ ಮತ್ತೆ ಆರು ಹೊಸ ಐ.ಐ.ಟಿ ಸ್ಥಾಪಿಸುತ್ತಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ? ನಮ್ಮಲ್ಲಿ ಯಾವಾಗಲೂ qualityಗಿ೦ತ quantityಯ ಮೇಲೆ ಗಮನ ಹೆಚ್ಚು. ನೀವು ಹೇಳಿದ ಹಾಗೆ ಸ್ವತ೦ತ್ರ entrepreneursನ ಸ೦ಖ್ಯೆ ಕಡಿಮೆಯೆ.

ಆದರೆ ಸ್ಥಿತಿ ಉತ್ತಮವಾಗುತ್ತಿದೆ. ನಮ್ಮ ಜನಗಳಿಗೂ ಯಾವುದೋ ವಿದೇಶಿ ಉದ್ದಿಮೆಗೆ ಕೆಲಸ ಮಾಡುವುದಕ್ಕಿ೦ತ ಸ್ವ೦ತ ಉದ್ದಿಮೆಯೇ ಲೇಸು ಎ೦ಬ ಭಾವನೆ ಬರುತ್ತಿದೆ. ನನ್ನ ಹಲವಾರು ಮಿತ್ರರು ಸ್ವ೦ತ ಉದ್ದಿಮೆ ಇದೆ. ಎಲ್ಲ ಐ.ಐ.ಟಿಗಳಲ್ಲಿಯೂ ಈಗ ಪ್ರಾಧ್ಯಾಪಕರಿಗೂ ತಮ್ಮ ಉದ್ದಿಮೆ ಶುರುಮಾಡಲು ಅನುಮತಿ ನೀಡಲಾಗಿದೆ. ಪ್ರತಿ ಐ.ಐ.ಟಿಗಳಲ್ಲಿಯೂ enterpreneurship parkನ ಅಡಿಯಲ್ಲಿ ಪ್ರಾಧ್ಯಾಪಕರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಎರಡು ವರ್ಷಗಳವರೆಗೆ ಹಣಸಹಾಯ ಮಾಡಲಾಗುತ್ತಿದೆ. ಐ.ಐ.ಟಿ (ಬಾ೦ಬೆ) ಯಲ್ಲಿಯೆ ಇದರಡಿಯಲ್ಲಿ ಕೆಲವು ಒಳ್ಳೆಯ ಹೆಸರು ಮಾಡಿರುವ ಕ೦ಪೆನಿಗಳು ಬ೦ದಿವೆ. ಇನ್ನೂ ಹೆಚ್ಚು ಈ ರೀತಿಯಾದ ಕಾರ್ಯವಾಗಬೇಕು. ಸರ್ಕಾರ ಕೂಡ ಈ ರೀತಿಯಾದ start-up ಕ೦ಪೆನಿಗಳಿಗೆ ವಿಶೇಷ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಲು ಮು೦ದಾಗಬೇಕು. ಕಡಿಮೆ ಬಡ್ದಿಯ ಜಾಗದಲ್ಲಿ ಕ೦ಪೆನಿಯ ಕೆಲವು ಸ್ಟಾಕ್ ಆಪ್ಷನ್ಸ್ ಸರ್ಕಾರಕ್ಕೆ ನೀಡಬಹುದು. ತಮ್ಮ೦ತಹ ಯುವ ಪತ್ರಕರ್ತರು ಈ ದಿಕ್ಕಿನಲ್ಲಿ ಸರ್ಕಾರದ ಮನವೊಲಿಸಬೇಕು. ನಿಮ್ಮ ನಿಲುವು ಸರಿಯಾಗಿದ್ದರೆ ಯುವಕರ ಬೆ೦ಬಲ ನಿಮ್ಮೊ೦ದಿಗೆ ಯಾವಾಗಲೂ ಇರುತ್ತದೆ.

ಉದ್ದಿಮೆದಾರರು ಎಡವಿದ್ದನ್ನು ಹೇಳಿದ್ದೀರಿ. ಆದರೆ ಸರ್ಕಾರ ನಿದ್ರಿಸುತ್ತಿದೆಯಲ್ಲ, ಅವರನ್ನು ಎಬ್ಬಿಸುವವರು ಯಾರು. ಉದ್ದಿಮೆದಾರರು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಸಿದ್ಧರಿದ್ದಾರೆ. ಆದರೆ ಸರ್ಕಾರ proactive ಆಗಬೇಕು. ನಮ್ಮ ತಪ್ಪುಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ಇನ್ನು ಸರ್ಕಾರದ ಸರದಿ.

ದಯವಿಟ್ಟು ಯಾವುದೆ ವಿಷಯದ ಬೆಗ್ಗೆ ಬರೆಯುವಾಗ ಸಮಾನಚಿತ್ತರಾಗಿರಿ. ವಿಷಯದ flipsideನ್ನು ಗಮನಿಸಿ. ತಮ್ಮಲ್ಲಿ ಅಪಾರ ಪ್ರತಿಭೆ ಇದೆ, ನಿರ್ಭೀತವಾಗಿ ಬರೆಯುವ ತಾಕತ್ತಿದೆ. ಆದರೆ ಸೂಕ್ಷ್ಮತೆ ಮತ್ತು ಆರ್ಧ್ರತೆಯನ್ನು ಬೆಳಸಿಕೊಳ್ಳಿ. ನಿಮ್ಮ ಲೇಖನಿಯನ್ನು ಬರಿ ಕ೦ಡವರ ಮೇಲೆ ರಾಡಿ ಎರಚಲು ಬಳಸಬೇಡಿ.

ಶುಭ ಹಾರೈಕೆಗಳೊ೦ದಿಗೆ,
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರವೀಂದ್ರರೇ, Given a chance ಪ್ರತಿಯೊಬ್ಬ ಇಂಜಿನಿಯರ್ ಕೂಡ ಭಾರತೀಯ ಕಂಪನಿಗಾಗಿ ದುಡಿಯಲಿಚ್ಚಿಸುತ್ತಾನೆ. ವಿದೇಶಿ ಪ್ರಾಡಕ್ಟ್ ಗಳಿಗೆ ಸಡ್ಡು ಹೊಡೆದು, ಮಾರುಕಟ್ಟೆಯನ್ನು ಎದುರಿಸಲು ಸಿಧ್ಧವಿರುವ ಬಂಡವಾಳ ಹೂಡಿಕೆದಾರರು, ಅವರಿಗೆ ಪೂರಕವಾದ ಆರ್ಥಿಕ ನೀತಿ ನಮಗಿಂದು ಬೇಕಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳು, ಅವುಗಳ ಗುಣಮಟ್ಟ, ಐಟಿ ಕ್ಷೇತ್ರದ ಸಮಸ್ಯೆಯಲ್ಲ. ದೂರದೃಷ್ಟಿಯಿಲ್ಲದ ನಮ್ಮ (ಅ)ವ್ಯವಸ್ಥೆಯ ಕೊಡುಗೆ. ಬಹುತೇಕ ಪದವೀಧರರು ಹೊರಬರುತ್ತಿದ್ದಾರೆಯೇ ಹೊರತು, ತಂತ್ರಜ್ಞರಲ್ಲ ಎನ್ನುವುದೂ ಅಷ್ಟೇ ವಿಷಾದನೀಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಅಗತ್ಯಕ್ಕಿಂತ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳು, ಅವುಗಳ ಗುಣಮಟ್ಟ, ಐಟಿ ಕ್ಷೇತ್ರದ ಸಮಸ್ಯೆಯಲ್ಲ. >>

ಇದು ಐಟಿಯ ಎಫ್ಫೆಕ್ಟೆ ಅಂತ ನಂಗೆ ಅನ್ಸುತ್ತೆ .... ಇಲ್ಲವಾದಲ್ಲಿ ದರ್ಶಿನಿಯಲ್ಲಿ ಸಿಗೋ ಫಾಸ್ಟ್ ಫುಡ್ ಥರ ಇಂಜಿನೀಯರುಗಳು ಸಿಗ್ತಾ ಇರ್ಲಿಲ್ಲ ....ಅಲ್ದೆ ಇಂಜಿನೀಯರುಗಳು ಅಂದ್ರೆ ಒಂದೆರಡು programming languages ಮತ್ತು ತಕ್ಕ ಮಟ್ಟಿಗೆ ಕಂಪ್ಯೂಟರ್ basics ಗೊತ್ತಿದ್ರೆ ಸಾಕು .... ಯಾವ್ದೋ ಕಂಪನಿಲಿ ಕೆಲಸ ಮಾಡ್ಕೊಂಡು ಹಾಯಾಗಿ ಇರ್ಬೋದು ಅಂತ ಎಲ್ರು ತಿಳಿದಿದ್ದಾರೆ ಮಾತು ಅದು ನಿಜ ಕೂಡ .....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕೇ ಹೇಳಿದ್ದು ಪದವೀಧರರು ಹೊರಬರುತ್ತಿದ್ದಾರೆಯೇ ಹೊರತು, ತಂತ್ರಜ್ಞರಲ್ಲ ಎಂದು. ಅಂಥದೊಂದು ಭ್ರಾಂತಿಯಿಂದ ಬೇಗ ಹೊರಬಂದಷ್ಟು ಒಳ್ಳೆಯದು. ಜೊಳ್ಳು ಕಾಳು ಬೇಗ ಬೇರ್ಪಡುತ್ತವೆ. ಅಷ್ಟೊಂದು ಕಾಲೇಜುಗಳನ್ನು ತೆರೆಯುವಾಗ ಸರ್ಕಾರವೂ ಒಮ್ಮೆ ಯೋಚಿಸಬಹುದಿತ್ತಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಅಷ್ಟೊಂದು ಕಾಲೇಜುಗಳನ್ನು ತೆರೆಯುವಾಗ ಸರ್ಕಾರವೂ ಒಮ್ಮೆ ಯೋಚಿಸಬಹುದಿತ್ತಲ್ಲವೇ?

ಏ, ಏನ್ರಿ ನೀವು! ಯಾರ್ಯಾರಿಂದ ಎಷ್ಟೆಷ್ಟ್ಕಮೀಶನ್ಕಿತ್ತೋದು ಅಂತ ಯೋಚ್ನೆ ಮಾಡ್ದೇ ಇರ್ತಾರ?‌ಚೆ ಚೆ ... ಅಷ್ಟೆಲ್ಲಾ ದಡ್ಡ್ರಲ್ಲ ಬಿಡಿ ನಮ್ನೇತಾರ್ರು! :) ಅದೆಲ್ಲಾ ಯೋಚ್ನೇ ಮಾಡೇ ಇಷ್ಟೊಂದಿಂಜಿನೀಯರಿಂಗ್ಕಾಲೇಜ್ಗಳನ್ತಂದು ಹದ್ಗೆಡ್ಸಿರೋದು ಅವ್ರು! ಹೀಗಂದ್ಬಿಟ್ಟ್ರೆ ಹೇಗೆ ನೀವು, ಅವ್ರ ಬುಧ್ಧಿವಂತಿಕೆ ಬಗ್ಗೆ !‌ ಪಾಪ ಬೇಜಾರಾಗೊಲ್ವೆ ನಮ್ನೇತಾರ್ರಿಗೆ!‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಛೆ, ಛೆ, ನಮ್ನೇತಾರ್ರ ಬುಧ್ದಿವಂತಿಕೆಯನ್ನ ಪ್ರಶ್ನಿಸಿದೋರುಂಟೇ? ಕಮೆಂಟ್ ವಾಪಸ್!! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂಥರಾ ಲವ್ವು ಅದ್ರ ಮೇಲೆ ಅಂದ್ಕೊಳಿ!
:)

/* ಚೇತನ್ ಕಮೆಂಟಿರೋದ್ರಲ್ಲಿ ಒಂದ್ಲಿಂಕಿದೆ, ನೋಡಿ */

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತ... 'ಫಿನಾಕಲ್' ಕಣ್ರಿ! ಅದು ಇನ್ಫೋಸಿಸ್ ಕಂಪೆನಿಯ ಪ್ರಾಡಕ್ಟ್. ಬಹುಶಃ ಆ ಕಂಪೆನಿಯ ಏಕೈಕ ಯಶಸ್ವಿ ಪ್ರಾಡಕ್ಟ್. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತ ಅವರೆ,

ಒಳ್ಳೆ ಟಾಪಿಕ್ ಎತ್ತಿದ್ದೀರಿ ಚರ್ಚೆಗೆ. ನಾನು ೯೬ರಲ್ಲಿ ವಿಪ್ರೋದಲ್ಲಿದ್ದಾಗ ಅದರಲ್ಲಿ Global R & D ಎನ್ನುವ ಭಾಗ ಇತ್ತು. ಈಗ ಎಲ್ಲೆಡೆ ಇರುವ 1394, Firewire ಆಗಿನ್ನೂ ಹೊಸತಾಗಿ ಬರುತ್ತಿತ್ತು. ವಿಪ್ರೋದಲ್ಲಿಯ ಒಂದು ಟೀಮ್ ಅದಕ್ಕಾಗಿ ತಮ್ಮದೇ ಒಂದು ಚಿಪ್ ಸೆಟ್ ಮಾಡುತ್ತಿದ್ದರು. ಅದನ್ನೇ ಬೆಳೆಸಿ ಹಾಗೂ ಮತ್ತೆ ಕೆಲವನ್ನೂ ಸೇರಿಸಿ ವಿಪ್ರೋ ಒಂದು ಏಸಿಕ್ ಡಿಸೈನ್ ಕಂಪನಿಯನ್ನು ಸ್ಪಿನ್ ಆಫ಼್ ಮಾಡಿತ್ತು. ಆದರೆ ಬಹುಶಃ ಮುಂದೆ ಹೆಚ್ಚೇನು ಆದಂತಿಲ್ಲ. ಅದೇ ರೀತಿ ಆಗ ವಿಪ್ರೋ ಏಸರ್ ಜೊತೆ ಸೇರಿ PC manufature ಮಾಡುತ್ತಿತ್ತು, ಮೈಸೂರಿನಲ್ಲಿ ಪ್ರಿಂಟರ್ ಇತ್ಯಾದಿ ಪೆರಿಫೆರಲ್ಲುಗಳ ಕಾರ್ಖಾನೆಯೂ ಇತ್ತು. ಅವೆಲ್ಲ ಯಾವ ಸ್ಥಿತಿಯಲ್ಲಿವೆಯೋ ಗೊತ್ತಿಲ್ಲ. ನಾವೆಲ್ಲ ಪ್ರೊಡಕ್ಟುಗಳನ್ನು ಮಾಡಲು ಹೋಗಿ ಕೈ ಸುಟ್ಟಿಕೊಂಡಿದ್ದೇವೆ ಅಂತಲೇ ಹೇಳ್ತಾರೆ ಅನಿಸುತ್ತೆ ವಿಪ್ರೊ ಇನ್ಫೋಸಿಸ್ಸುಗಳೆಲ್ಲ.

ರಾಘವ ಅವರ ಕಮೆಂಟಿನಲ್ಲಿ ಒಳ್ಳೆ ಪಾಯಿಂಟುಗಳಿವೆ. programmers ಜೊತೆಗೆ ನಮ್ಮಲ್ಲಿಯ ಇಂಜಿನಿಯರಿಂಗ್ ಕಾಲೇಜುಗಳು, IIT/IISc ಅಂತಹ ಸಂಸ್ಥೆಗಳು ಐಡಿಯಾ ಹಬ್ ಆಗಬೇಕು ಮತ್ತು ಅಲ್ಲಿ ಹುಟ್ಟಿದ ಐಡಿಯಾಗಳನ್ನು ಪ್ರೊಡಕ್ಟೈಸ್ ಮಾಡಲು ಬೇಕಾದ support system ಕೂಡ ಬೇಕು. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಅಮೇರಿಕದ ವೆಂಚರ್ ಕ್ಯಾಪಿಟಲಿಸ್ಟುಗಳು ಭಾರತದಲ್ಲಿ ಇನ್ವೆಸ್ಟ್ ಮಾಡಲು ಶುರು ಮಾಡಿದ್ದರು ಆದರೆ ಅದರಲ್ಲಿ ಹೆಚ್ಚಾಗಿ ಭಾರತದಲ್ಲಿ ಒಂದು ಬ್ಯಾಕ್ ಆಫೀಸ್ ತರಹ ಮಾಡಿ ಇಂಪ್ಲಿಮೆಂಟೇಶನ್ ಮತ್ತು ಟೆಸ್ಟಿಂಗ್ ಅಷ್ಟೇ ಇಡುತ್ತಿದ್ದರು ಅನಿಸಿದೆ.

C-Dot, ITI ನಂತಹ ಕಂಪನಿಗಳು ಹೊಸ ಮಾರುಕಟ್ಟೆಗಳಲ್ಲಿ ಪ್ರವೇಶಿಸಬಹುದಿತ್ತು. ಹಾಗಾಗಿದ್ದರೆ ಇವತ್ತು BSNL ಇಂಟರ್ನೆಟ್ ತೆಗೆದುಕೊಂಡಾಗ ಹುವಾವೇ ರೌಟರಿನ ಬದಲು ಭಾರತದ್ದೇ ರೌಟರ್ ಮಾರಬಹುದಿತ್ತು. ಆದರೆ ೯೦ರ ಉತ್ತರಾರ್ಧದಲ್ಲಿ ಈ ಕಂಪನಿಗಳಿಂದ ಜನರು ಹೊರಗೆ ಹೋಗಿದ್ದೇ ಹೆಚ್ಚು. ಸಾಫ್ಟವೇರ್ ಪ್ರೊಡಕ್ಟುಗಳಲ್ಲಾದರೂ ಇನ್ನು ಮೇಲೆ ಪರಿಸ್ಥಿತಿ ಬದಲಾಗಬಹುದೇನೋ, ಭಾರತದ್ದೇ ತಕ್ಕ ಮಟ್ಟಿಗಿನ ಮಾರ್ಕೆಟ್ ಇದೆ, ಸಾಫ್ಟವೇರಿನ ಪ್ರೊಡಕ್ಟುಗಳಿಗೆ ಭಾರತದ್ದೊಂದೇ ಮಾರ್ಕೆಟ್ ಆಗಬೇಕು ಅಂತೇನೂ ಇಲ್ಲ.

-
Anil

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅನಿಲ್.

ವಿಪ್ರೋದವರು ಈಗಲೂ PC, Laptop ಗಳನ್ನು ಮಾಡ್ತಾ ಇದಾರೆ. ವಿಪ್ರೊ ಇನ್ಫೊಟೆಕ್ ಅದರ ಪ್ರಾಡಕ್ಟ್ ವಿಭಾಗ.

ನಾನು ಕೆಲವೊಂದು Design Expo ಗಳಿಗೆ ಹೋದಾಗ ಕಂಡದ್ದೇನೆಂದರೆ, ಬಹುತೇಕ ವಿದ್ಯಾರ್ಥಿಗಳ ನವೀಕೃತ ತಂತ್ರಗಳು ವಿದೇಶಿ ಕಂಪನಿಗಳಿಂದ ಪ್ರಾಯೋಜಿಸಲ್ಪಟ್ಟಿದ್ದವುಗಳಾಗಿದ್ದವು, ಕಾರಣ ಮೂಲದಲ್ಲಿರುವುದು ಅವರ ಪ್ರಾಡಕ್ಟ್ ಗಳು. ನಮ್ಮಲ್ಲಿಯೇ ಇಂತಹ ಪ್ರಾಯೋಜಕತ್ವ ಬಂದರೆ ಒಳಿತಲ್ಲವೇ?

ಟೆಲೆಕಮ್ಯೂನಿಕೇಷನ್ಸ್ ಕ್ಷೇತ್ರ ಮುಕ್ತ ಮಾರುಕಟ್ಟೆ ಬಂದಮೇಲೆ ರಾಜಕೀಯದಿಂದ ನರಳಿದ್ದೇ ಹೆಚ್ಚು (ಪಾಸ್ವಾನ್, ಮಹಾಜನ್, ಎಲ್ಲರೂ ಹಗರಣ ಮಾಡಿದವರೇ). INSAT-2C ಯಂತಹ ಉಪಗ್ರಹಗಳಿದ್ದು, ಹಳ್ಳಿಹಳ್ಳಿಗೂ landline ಸಂಪರ್ಕ ಸಾಧಿಸಿದ್ದರೂ, ಬೇಡಿಕೆ ಹೆಚ್ಚಿದಾಗ infrastructure upgrade ಮಾಡಲಾರದೇ ಹಿಂದೆ ಬಿದ್ದರು. Motorola ಸ್ವಿಚಸ್ ಬಳಸೋದೋ, Nortel ಸ್ವಿಚಸ್ ಬಳಸೊದೋ ಅನ್ನೋ ಚರ್ಚೆಯಲ್ಲೇ ಕಾಲ ಕಳೆದರು. ’ಅಹರ್ನಿಶಿ ಸೇವಾಮಹೆ’ ಮರೆತೇ ಹೋಯಿತು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ್, ಏರ್ಟೆಲ್ ಮಾಡೆಮ್ ನೋಡಿದ್ದೀರಾ? ಹುವಾವೇಯಿ, ZTE, ಮುಂತಾದವರಿಗಿಂತ ಎಷ್ಟೋ ಉತ್ತಮ. ಭಾರತೀಟೆಲ್ ಭಾರತದಲ್ಲೇ ಜೋಡಿಸುವ ಮಾಡೆಮ್ ಅದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥವಾಯಿತು. ಆದರೆ, ಅಷ್ಟರಲ್ಲಿ ಕಮೆಂಟ್ ಎಡಿಟ್ ಮಾಡುವ ಹಂತ ಮೀರಿತ್ತು!! ಫಿನಾಕಲ್ ಮೇಲಿನ ರಾಘವರ ’ಪ್ರೀತಿ’ಗೆ ಅಭಿನಂದನೆಗಳು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಾಪ್ ಸಿಂಹರ ಈ ಲೇಖನದಲ್ಲಿ ಹುರುಳಿದೆ .ಹೀಗೆ ಸರ್ವಿಸ್ ಮಾತ್ರ ಅಂತ ನೆಚ್ಚಿಕೊಳ್ದೆ ಪ್ರಾಡಕ್ಟ್ ಅಂತಾನೂ ನಾವು ವಿಚಾರ ಮಾಡಿದ್ರೆ ಇನ್ನೊದು ದೇಶದ ಬಿಸಿನೆಸ್ ಮೆಲೆ ಇಷ್ಟೊಂದು ಅವಲಂಬಿತರಾಗೋದು ಬೇಕಾಗ್ತಿರ್ಲಿಲ್ಲ .... ಅಲ್ದೆ ಹೇಗೆ ನಮ್ಮ ಸರ್ವಿಸ್ cost effective ಆಗಿದೆಯೋ ಹಾಗೆ ನಮ್ಮ ಪ್ರಾಡಕ್ಟಗಳೂ ಕೂಡ cost effective ಆಗಿ ಇಂತಹ ಸಮಯದಲ್ಲೂ ಒಳ್ಳೆ ಲಾಭವನ್ನೇ ತಂದು ಹೆಚ್ಚೆಚ್ಚು ಔದ್ಯೋಗಿಕರಣಕ್ಕೆ ಅನುವು ಮಾಡಿ ಕೊಡ್ತಿದ್ವು ಅಂತ ನನಗೆ ಅನ್ಸುತ್ತೆ .....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ವ್ಯಾಸರಾಜರೇ ಅವರ ಈ ಲೇಖನದ ಪ್ರಶ್ನೆಗಳು ಚಿಂತನಾರ್ಹ. ಇವೇ ಪ್ರಶ್ನೆಗಳನ್ನು ಹಿಂದೊಮ್ಮೆ ನಮ್ಮಲ್ಲಿಯೇ ಕೇಳಿದ್ದಾಗ ದೊರೆತ ಉತ್ತರಗಳನ್ನು ಹಂಚಿಕೊಂಡಿದ್ದೇನೆ. ಅವನ್ನು ಜಾರಿ ಮಾಡುವಾಗ ಇರುವ ತೊಡಕುಗಳು, ಮತ್ತು ಪ್ರತಾಪರ ಪ್ರಶ್ನೆಗಳಿಗೆ ಪೂರಕವಾದ ಇನ್ನು ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದೇನೆಯಷ್ಟೆ. ಉತ್ತರ ಸಿಕ್ಕರೆ, ಸಮಸ್ಯೆ ಪರಿಹಾರವಾಗಿ, ನಮಗೂ ಸಂತೋಷವಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ, ಒಳ್ಳೆ ಮಾತುಕತೆ ಸರಣಿ ಹೊರತಂದಿದ್ದಕ್ಕೆ ತ್ಯಾಂಕ್ಸು!

ವಿಷ್ಯಕ್ ಬರ್ತೀನಿ. 'ಏನ್ನಮ್ದೇಶ್ದಲ್ಲಿ ಒಂದೆರ್ಡ್ಲಕ್ಷ ಸೋ ಕಾಲ್ಡ್ 'ಟೆಕಿ'ಗಳು ಇರ್ಬೋದಾ? ಆದ್ರೂ ಯಾಕ್ನಮ್ಮೋರು ಯಾವ್ದಾದ್ರೂ ಫೇಮಸ್ಸಾಗಿರೋ ಪ್ರಾಡಕ್ಟ್ಮಾಡಿಲ್ಲ?' ಅಂತ ಬಹಳ ಜನರ ಪ್ರಶ್ನೆ. ಇಲ್ಲಿ ನೋಡೋ ವಿಚಾರಗಳು ತುಂಬಾ ಇವೆ. ಒಂದ್ಪ್ರಾಡಕ್ಟ್ ಮಾಡ್ಬೇಕಾದ್ರೆ ಏನೇನ್ ಬೇಕು? ಒಳ್ಳೆ ಐಡಿಯಾ, ಸ್ವಲ್ಪ ಇನ್ವೆಸ್ಟ್ಮೆಂಟು, ಒಳ್ಳೆ ಮ್ಯಾನೇಜ್ಮೆಂಟು ಮತ್ತು ಸೇಲ್ಸ್ ಟೀಮು, ಆಮೇಲೆ ಅತೀ ಮುಖ್ಯವಾದದ್ದು ... passionate programmers. ಇಲ್ಲೆ ಇರೋದು ಮಜಾ. ನಾನ್ಕಂಡಿರೋ ಹಾಗಂತೂ ನಮ್ಮಲ್ಲಿ ನಿಜ್ವಾದ ಪ್ರೊಗ್ರಾಮರ್ಗಳು ಬಹಳ (ತುಂಬಾನೇ ಬಹಳ ಮತ್ತೆ) ಕಡಿಮೆ! ನೂರಕ್ತೊಂಭತ್ಜನ ಬರೀ ತಿಂಗ್ಳೆಂಡಿಗ್ಬರೋ paycheckಗೋಸ್ಕರ ಬೆಳ್ಗಿಂದಸಂಜೆವರ್ಗೂ ಆಫೀಸನ್ನೋ ಜಾಗ್ದಲ್ಲಿ zombieಗಳ ಥರ ಕೂತು ಕಾಲಹಾಕಿ mostly redundant && mundane ಕೆಲ್ಸ ಮಾಡಿ 'ಅಯ್ಯೋ, ಸಿಕ್ಕಾಬಟ್ಟೆ ಕೆಲ್ಸ' ಅಂತ ರಾತ್ರಿ ಸುಸ್ತಾಗಿ ವಾಪಸ್ಬರೋರೆ, ಅಲ್ವಾ? ಹೀಗ್ಯಾಕಾಯ್ತು?
imho, ಎರ್ಡ್ಕಾರ್ಣ್ಗಳು ಇವೆ.
ನಿಜ್ವಾಗ್ಲೂ ಆಸೆಪಟ್ಟು computers, programming, art ಬಗ್ಗೆ fascinate ಆಗಿ ಇಲ್ಲಿಗ್ಬರೋರು ತುಂಬಾ ಕಡ್ಮೆ. CETಲಿ ಒಳ್ಳೆ ಸ್ಕೋರ್ಬಂತೋ, ಮೊದ್ಲು ನೋಡೋದೇ E&C, CS, IS; ಯಾಕೆ? ಸಾಧಾರಣ್ವಾಗಿ ಕಾಣ್ಬರೋ ಕಾರಣಗಳು :: 'ಸುಲಭ್ವಾದ್ಕೆಲ್ಸಾ, ಕೈತುಂಬಾ ಸಂಬ್ಳ' || 'ಫಾರಿನ್ನಿಗ್ ಹೋಗೋ ಚಾನ್ಸು' || 'ನಮ್ಮಪ್ಪ ಹೇಳ್ದ್ರು ಅದ್ಕೆ ತಗೊಂಡೆ' || 'ಬೇರೇ ಏನೂ ಸಿಗ್ತಿಲ್ಲ ಅದ್ಕೆ ತಗೊಂಡೆ'. ಸರಿ, ಏನೋ ಒಂದ್ರೀಸನ್ನಿಗೆ ಸೇರಿದ್ದಾಯ್ತು, ಮುಂದೆ ನಾಕ್ವರ್ಷ ಬಿಇಲಿ ಬದ್ಲಾಗೋ ಸಾಧ್ಯತೆ ಇರುತ್ತೆ, ಆದ್ರೆ ಆಗಲ್ವೇ ... ಅದೇ ದುರಂತ. passion, enthusiasm ಇಲ್ಲದೇ ಒಳ್ಳೆ ಪ್ರಾಡಕ್ಟ್ ಮಾಡೊಕ್ಕೆ ಆಗತ್ತಾ?

>> ಬಹುತೇಕ ಪದವೀಧರರು ಹೊರಬರುತ್ತಿದ್ದಾರೆಯೇ ಹೊರತು, ತಂತ್ರಜ್ಞರಲ್ಲ ಎನ್ನುವುದೂ ಅಷ್ಟೇ ವಿಷಾದನೀಯ.
ನಿಜ. ಆದ್ರೆ ತಂತ್ರಜ್ನನಾಗಬೇಕು ಅನ್ನೋ ಹಠ ,ಆಸೆ (ಆಮೇಲೆ ಅದಕ್ಬೇಕಾದ್ಮೆಹನತ್ತು ) ಇದ್ದ್ರೆ ಮಾತ್ರ ತಂತ್ರಜ್ನನಾಗೋಕ್ಕೆ ಸಾಧ್ಯ. ಕಲಿಯೋ ಆಸೆನೇ ಇಲ್ಲದೇ, 'ignorance is bliss' ಅನ್ನೋರಿಗೇನ್ಮಾಡೋದು? :)‌ Paul Graham, Joel Spolsky ಈ ವಿಷ್ಯದ್ಬಗ್ಗೆ ತುಂಬಾ ಹೇಳಿದಾರೆ. ಒಬ್ಬ ನಿಜ್ವಾದ ಪ್ರೊಗ್ರಾಮರ್ರು ಸುಮ್ನೆ code ಗೀಚ್ಬಿಸಾಕಲ್ಲ. ಒಬ್ಬ ಕಲಾವಿದ ಅವನಲ್ಲಿ ಹೊರಗ್ಬರ್ತಾನೆ ಪ್ರೊಗ್ರಾಮ್ ಬರೀ ಬೇಕಾದ್ರೆ. ಅವನ ಬಹಳಷ್ಟು ಪ್ರೊಗ್ರಾಂಗಳು works of art ಆಗಿರತ್ವೆ. ಅವ್ನಿಗೆ programming ಖುಶಿ ಕೊಡತ್ತೆ, ಅದು ಕೆಲ್ಸಾ, ರೋದನೆ ಅಂತ ಯಾವತ್ತೂ ಅನ್ಸೊಲ್ಲ. ಆದ್ರೆ sadly ನಮ್ಮಲ್ಲಿ (ಸಾಫ್ಟ್ವೇರಿಂಜಿನೀಯರ್ಕಮ್ಯೂನಿಟಿಲಿ) ಇದಕ್ಕೆ ವ್ಯತಿರಿಕ್ತವಾಗಿರೋರೇ ಜಾಸ್ತಿ. ಜೆಫ್ ಕೂಡ ಇದ್ರ ಬಗ್ಗೆ ಬರ್ದಿದ್ದ.

ಮೊದ್ಲಿನ ಹಾಗೆ ಇದ್ದ ಬಡತನ, ಕಷ್ಟ ಅಷ್ಟಾಗಿ ಈಗ ಇಲ್ಲ. ತಮಗನ್ನಿಸಿದ್ದನ್ನ/ಆಸಕ್ತಿ ಇರೋದನ್ನ pursue ಮಾಡೋಕ್ಕೆ ಅವಕಾಶಗಳಿವೆ, ಆದ್ರೆ, ಮಾಸ್ ಮೆಂಟಾಲಿಟಿನಾ ಫಾಲೋ ಮಾಡಿ, ಒಬ್ಬ reluctant ಇಂಜಿನೀಯರ್ ಆದ್ರೆ, ಅವ್ನಿಗೂ ಸುಖ್ವಿಲ್ಲ , ಆ ಕೆಲ್ಸಕ್ಕೂ ಇಲ್ಲ. ಏನ್ಹೇಳ್ತೀರ? ಬಿ ಇ ಲಿ ಓದೋದೇ ಬೇರೇ ಬ್ರ್ಯಾಂಚು, ಆದ್ರೂ ಸಾಫ್ಟ್ವೇರಿಗೆ ಬರ್ತಾರೆ. ಏನೂ ಬೇಜಾರಿಲ್ಲ, ಒಳ್ಳೇದೇ. ಆದ್ರೆ ಸಮಸ್ಯೆ ಬರೋದು, ಬಹಳಷ್ಟು ಮಂದಿ, ನಾಕೈದ್ವರ್ಷಾ ಆದ್ರೂ ಯಾವ್ದಾದ್ರು fundamental ವಿಷ್ಯದ್ಬಗ್ಗೆ ಕೇಳ್ದಾಗ ಬರೋ ರೆಡಿ ಉತ್ರ, "ನಾನು CSನೋನಲ್ಲ, ನಂಗ್ಗೊತ್ತಿಲ್ಲ". ಬಹಳಷ್ಟು ನೋಡಿದೀನಿ ನಾನಿದನ್ನ ನನ್ನ ಸುತ್ತ. ಎಲ್ಲಾ ಹೋಗ್ಲಿ, ನಮ್ CS/IS ಹುಡುಗ್ರೂ ಹೀಗೆನೇ. ("ಏನ್ಪಾ ರಾಜಾ, ೯೯೯೯೯ ಯಾಕೆ valid ಪೋರ್ಟ್ ನಂಬರ್ ಆಗಲ್ಲ ಅಂತ ಕೇಳಿ", ನಮ್ಮೆಷ್ಟು 'ಟೆಕಿ'ಗಳು ಉತ್ರಾ ಕೊಡ್ತಾರೋ ನೋಡಿ) "I do not need to know." ಅನ್ನೋ ಮನೋಭಾವ ಜಾಸ್ತಿ. ಆಮೇಲೆ, ಎರ್ಡ್ಮೂರ್ವರ್ಷ code ಮಾಡಿ ಆಮೇಲೆ ಹಾಯಾಗಿ TL/PM ಆಗಿ ಪ್ರೊಗ್ರಾಮಿಂಗ್ನಿಂದ ತಪ್ಸ್ಕೊಂಡ್ರೆ ಸಾಕು ಅಂತ ಅನ್ನೋರೆ ಜಾಸ್ತಿ. ನಾನಂತು ಇವ್ರ್ಗಳಿಂದ ಪ್ರೊಡಕ್ಟ್ expect ಕೂಡ ಮಾಡೊಲ್ಲ. :) /* ಇಂಥೋರು ಮಾಡಿರೋ ಪ್ರೊಡಕ್ಟಂದ್ರೆ ನಂಗೆ ಭಯ ಆಗತ್ತೆ ಬಳ್ಸೊಕ್ಕೆ ! */

ಇನ್ನೊಂದ್ಮುಖ್ಯವಾದ ರೀಸನ್ನು ಸಾಫ್ಟ್ವೇರ್ ಬರ್ಯೋದು (programming ಅಂತೀವಲ್ಲ, ಅದೇ) ಒಂದು ಕಲೆ . ಹೇಗೆ ದೋಸೆ ಹುಯ್ಯೋದು, ಚಪ್ಪಲಿ ಹೊಲಿಯೋದು, ಮರ ಕಡಿಯೋದು ಕಲೆಗಳೋ ಹಾಗೇನೇ. ಯಾವಾಗ ಜನ ಅದನ್ನ ಮರ್ತು ಅದೇನು ಕಲೆ ಅಲ್ಲ, ಬರೀ ಕಾರ್ಯ ಮಾತ್ರ, ಒಂದಾರು ಚೆಕ್ಲಿಸ್ಟ್ ಕೊಟ್ಟು ಮಾಡ್ಸಿದ್ರೆ ಸಾಕು ಅನ್ನೋ ಮನೋಭಾವ ಬೆಳ್ಸ್ಕೊಂಡಾಗ, ಕೆಡ್ತು ಕೆಲ್ಸ. ಎಮ್ಮೆನ್ಸೀಗಳು ಇರೋದು ದೇಶ ಉಧ್ಧಾರ ಮಾಡೋಕಂತೂ ಅಲ್ವೇ ಅಲ್ಲ. ಅವ್ಗಳಿರೋದು ಹೂಡಿಕೆದಾರರನ್ನು ಖುಶಿಯಾಗಿಟ್ಟು ಒಳ್ಳೆ ವ್ಯಾಪಾರ ಮಾಡಿ ಅದ್ರಿಂದ ಲಾಭ ಮಾಡೋದೆ ಅವ್ರ ಪರಮ ಗುರಿ, ಅಷ್ಟೆ. end-to-end services ಇವ್ರ ಬ್ಯಾನರ್ರು, ಯಾಕಂದ್ರೆ ಅದು ಪ್ರಾಡಕ್ಟಿಗ್ಲೆಕ್ಕ ಹಾಕಿದ್ರೆ ಕಡ್ಮೆ ರಿಸ್ಕು.ಮತ್ತೆ ಈಗ ಕಾಣ್ತಿರೋ ಹಾಗೆ ,ಚೆಕ್ಲಿಸ್ಟ್ ಕೊಟ್ಟ ಹಾಗೆ ಕೆಲ್ಸಾ ಮಾಡೋದೂ ಸುಲಭ , ಸಂಬ್ಳನೂ ಹೌದು ಅಂತ ನಮ್ಜನಾನೂ ಅದ್ರ ಹಿಂದೆ ಓಡ್ತಾರೆ. ಅವ್ರವ್ರ ಇಷ್ಟ, ಅವ್ರವ್ರ priorities, ಅದ್ಕೆ ನಾನೇನೂ ಹೇಳೋಲ್ಲ.

ಎಲ್ಲಾರೂ ಕಾಸಿನ||ಮೈನೋವಿಲ್ಲದ್ಕೆಲ್ಸದ್ ಹಿಂದೆ ಹೋದ್ರೆ, ರಿಸರ್ಚು ಯಾರ್ಮಾಡೋರು? (ಹಾಗ್ನೋಡಿದ್ರೆ research, sponsorship, award ಬಗ್ಗೆ ಹೇಳ್ದಾಗ ironyಗಳಿಗೇನೂ‌ ಕೊರತೆ ಇಲ್ಲ. ;) )

ಆದ್ರೆ ಈಗ ಸ್ವಲ್ಪ ಬದಲಾವಣೆ ಗಾಳಿ ಬೀಸ್ತಾ ಇದೆ. ನಮ್ಜನರಲ್ಲೂ enterpreneurs ಹುಟ್ಟ್ತಾ ಇದಾರೆ! :) SaaS/Web 2.0 ಬಂದಾಗ್ನಿಂದ ಒಂದಿಷ್ಟು startupಗಳು ಬಂದಿವೆ ಕೂಡ. ಅವು ಜಾಸ್ತಿ ಆಗ್ಲಿ ಅಂತ ಹಾರೈಸ್ತೀನಿ (ಸಾಧ್ಯ ಆದ್ರೆ ಒಂದ್ಶುರು ಮಾಡೋಣ ಅಂತಾನೂ ಅಂದ್ಕೋತೀನಿ :)) !

PS:‌ ಇದೊಂದು ಹಳೇ ಲೇಖ್ನ, ಓದಿ.
PPS:‌ ಓಹ್, ತುಂಬಾ ದೊಡ್ಕಮೆಂಟು ಕಣಾ ! :)‌
PPPS: ಆದ್ರೂ ಪ್ರತಾಪ್ಸಿಂಹ ಬರ್ಯೋದೇನು ಅಂಥಾ depth ಇದೆ ಅಂತ ನಂಗನ್ಸೊಲ್ಲ. yet another ಧೂಳ್ಹಾರಿಸೋ ಸುದ್ದಿ ಶೂರ ಅಂತ , imho.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘು,
ನಡುರಾತ್ರೀಲಿ ಬರೆದ್ರೂ ಒಳ್ಳೆ ಕಾಮೆಂಟ್ ಬರೆದಿದೀಯ! ಕೆಲವು ಉತ್ತಮ ಪಾಯಿಂಟುಗಳನ್ನು ಓದುಗರ ಮುಂದಿಟ್ಟಿದ್ದೀಯ. ಹೆಚ್ಚಿನ ಓದುಗರು ಈ ಕಾಮೆಂಟು ಓದಲಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಳ್ಗಿರೋದನ್ನ ಪ್ರತಾಪ್ಸಿಂಹನ್ಸೈಟಲ್ಲಿ ಕಮೆಂಟಿದ್ದೆ, ಯಾಕೋ ಪ್ರತಾಪ ಅದ್ನ ಡಿಲೀಟ್ಮಾಡಿರೋ ಹಂಗಿದೆ. :)

ಕೇಳ್ಬಾರ್ದ್ದೇನೂ ಕೇಳಿಲ್ಲಪ್ಪ ನಾನು :)

/*------------ ಕಮೆಂಟ್ # 23 : 2 49 am (approx) ಗೆ ಹಾಕಿದ್ದು -----------*/
ಅಣ್ಣಾ, ಪ್ರಶ್ನೆಗೆ ಉತ್ರಾ ತುಂಬಾ ಸುಲಭ. ಎಷ್ಟ್ ಜನ ಸಾಫ್ಟ್ವೇರಿಂಜಿನೀಯರ್ಗಳು computers,programming,softwareಇಂದ fascinate ಆಗಿ ಅದನ್ನೆ profession/course of study ಆಗಿ ತಗೊಂಡಿರೋದು?, ಬರೀ ಸಂಬ್ಳಕ್ಕಲ್ದಲೇ :)

ಸಮಸ್ಯೆ ಎಮ್ಮೆನ್ಸಿಗಳಿಂದನೂ ಹೌದು, (ಆದ್ರೆ ಬರೀ ಎಮ್ಮೆನ್ಸಿಗಳಿಂದ ಮಾತ್ರಾನೆ ಅಲ್ವೇ ಅಲ್ಲ) ಅಷ್ಟೇ ನಮ್ಮ ಜನ ಕೂಡ ಹೊಣೆ ಇದ್ಕೆ. ಕಡ್ಮೆ ಬೆಲೆಗೆ ಕೂಲಿ ಸಿಗ್ತಾರೆ ಅಂದ್ರೆ ನೀನೇನು, ನಾನೇನು; ಎಲ್ರೂ ಬಳ್ಸ್ಕೊಂಡೇ ಬಳ್ಸ್ಕೋತೀವಿ, ಅಲ್ಲ್ವಾ?

ನಮ್ಜನರಲ್ಲಿ ದುಡ್ಡಿನ್ದುರಾಸೆ ಕಡ್ಮೆ ಆಗಿ ಜ್ನಾನದಾಸೆ ಹೆಚ್ಚಾದಾಗ ಎಲ್ಲ ಸರಿ ಹೋಗ್ಬೋದು, ಅಷ್ಟೆ.

ಏನ್ಹೇಳ್ತೀಯ? ;)

/*-------------------------------------------------------*/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾಗಿ ಹೇಳಿದೀರ _ರಾಘವ_
ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ಕಥೇನೂ ಹಿಂಗೇ ಅನ್ಸುತ್ತೆ. ಕಲೀಬೇಕು ಅಂದ್ರೆ ಇವತ್ತು ನಿಜವಾಗ್ಲೂ ತುಂಬಾನೇ ಅವಕಾಶಗಳಿವೆ. ಉಪಯೋಗಿಸಿಕೊಳ್ಳೋರಿಲ್ಲ ಅಷ್ಟೆ.
ಅಲ್ಲಿನ sustenence coding ಗೂ, ಇಲ್ಲಿನ product programming ಗು ವ್ಯತ್ಯಾಸ ಕಾಣಿಸ್ತಾ ಇದೆ :) ಇಲ್ಲಿ ಕೆಲಸಕ್ಕೆ degree ಅವಶ್ಯಕತೆ ಇಲ್ಲ ಅಂದಾಗ ಆಶ್ಚರ್ಯ ಪಟ್ಟಿದ್ದೆ. ಆದ್ರೆ ಪದವೀಧರರ ಕೆಲಸಕ್ಕೂ, ಕೆಲಸಗಾರರ ಕಲೆಗೂ ವ್ಯತ್ಯಾಸ ನೋಡಿದ್ಮೇಲೆ, ಯಾಕೆ ಆಶ್ಚರ್ಯ ಪಟ್ಟೆ ಅಂತ ಆಶ್ಚರ್ಯ ಪಡ್ತಾ ಇದೀನಿ :)

ಬದಲಾವಣೆ ಗಾಳಿ ಇನ್ನೂ ಜೋರಾಗಿ ಬೀಸ್ಲಿ. ನಿಮ್ಮ startup ಗೂ ಸಹ ಶುಭಾಕಾಂಕ್ಷೆಗಳು.

PS: ಏನೋ ಇದರ ಒಳ ಹರಿವು ಸ್ವಲ್ಪ ಗೊತ್ತಿದ್ದರಿಂದ, ಪ್ರತಾಪರು ಹೇಳೋದೆಲ್ಲ ನಗ್ನ ಸತ್ಯ ಅಲ್ಲ ಅಂತ ಗೊತ್ತಾಯ್ತು. ಇನ್ಮೇಲೆ ಹುಶಾರಾಗಿರ್ತೀನಿ :)
PPS: ಕೆಳಗೆ ಯಾರೊ ಸತ್ಯ ಹಿಂದಿರುತ್ತೆ, ಸುಳ್ಳು ಮುಂದಿರುತ್ತೆ ಅಂದಿದಾರೆ. ಬಹುಶ: ನಿಮ್ಮ ಕಮೆಂಟ್ ಹಿಂದಕ್ಕಿರೋದು ಬಿಟ್ಟು ಮುಂದಕ್ಕೆ ಹೋಯ್ತೇನೋ, ಅದಕ್ಕೆ Delete ಮಾಡಿದಾರೆ. ಸತ್ಯ ಹೇಳ್ತೀನಿ ಅನ್ನೋರು ಕೇಳೋದು ಮರ್ತಿರ್ಬೇಕು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾಗಿ ಬರ್ದಿದ್ದೀ ರಾಘವ.
೬ ತಿಂಗಳ ಹಿಂದೆ ನಮ್ಮ ಕಂಪನಿಗೋಸ್ಕರ ಒಂದಿಷ್ಟು ಜನರನ್ನ ಇಂಟರ್‍ವ್ಯೂ ಮಾಡ್ತಾ ಇದ್ವಿ. ಅಭ್ಯರ್ಥಿಗಳಲ್ಲಿ ಬಹಳಷ್ಟು ಜನ "ಹೆಸರಾಂತ" ಕಂಪನಿಗಳಿಂದ ಬಂದವರೇ. ೫-೬ ವರ್ಷ ದೊಡ್ಡ ದೊಡ್ಡ ಕ್ಲೈಂಟ್ ಗಳಿಗೆ ಕೆಲಸ ಮಾಡಿದವರು. ಆದರೆ ಅವರ basics ನೋಡಿ ಗಾಬರಿ ಆಗೋಯ್ತು :). ಕೆಲ್ಸ ಮಾಡಿರೋ projects ವಿವರಿಸಲು ಹೇಳಿದಾಗ ಗುಂಡು ಹೊಡೆದಂತೆ ಉತ್ತರ ಕೊಡ್ತಾ ಇದ್ದೋರು, Operating System, networking, C programming ಮುಂತಾದವುಗಳಲ್ಲಿ (Resume ನಲ್ಲಿ ದೊಡ್ಡದಾಗಿ ಹಾಕ್ಕೊಂಡಿದ್ರು ಬೇರೆ :) ) ತೀರಾ ಬಾಲಿಶವಾದ ಉತ್ತರಗಳನ್ನು ಕೊಡ್ತಾ ಇದ್ರು.
ಇಷ್ಟು ದೊಡ್ಡ project ಅಲ್ಲಿ ಕೆಲಸ ಮಾಡ್ತಾ ಇದ್ದೀರಾ, ನಿಮಗೆ ಬೇಸಿಕ್ಸ್ ಗೊತ್ತಿರಬೇಕು ಅಂತ ಅನ್ನಿಸ್ಲಿಲ್ವಾ ಅಂತ ಕೇಳಿದ್ರೆ "we never came across this" ಅನ್ನೋ ರೆಡಿಮೇಡ್ ಉತ್ತರ.
ಹಾಗೆಂದು ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡೋ ಎಲ್ಲರೂ ಹಾಗೆ ಅಂತ ನನ್ನ ಅಭಿಪ್ರಾಯ ಅಲ್ಲ. ನನ್ನ sample space ಬಹಳ ಚಿಕ್ಕದು. ಆದರೂ ಈ ರೀತಿಯ ಮನೋಭಾವ ಬಹಳ ಹಾನಿಕಾರಕ.

ಕೇಶವ ಮುರಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಾಪ್ ಮೇಲೆ ಈಗ ಹಿರಿಕಿರಿ "ಐಟಿಗರು" ಹರಿಹಾಯುತ್ತಿದ್ದಾರೆ. ಅಲ್ಲವೇ ಮತ್ತೆ ಅವರ ಒಳಗು ಬಗೆದು ಬೆತ್ತಲಾಗಿ ಮಾಡಿದರೆ ಸುಮ್ಮನೇ ಬಿಟ್ಟಾರೆಯೇ ಐದಂಕಿಯವರು......!

ಪ್ರತಾಪ್ ಈ ದೇಶದಲ್ಲಿ ಸತ್ಯ ಯಾವಾಗಲೂ ಹೀಗೆಯೇ ಹಿಂದೆ ಬಿದ್ದಿರುತ್ತದೆ....ಸುಳ್ಳು ಮೆರೆಯುತ್ತಿರುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ದೇಸಾಯಿಯವರೇ, ಸತ್ಯ ಯಾವಾಗಲೂ ಕಠೋರ. ಹೇಳುವ/ಕೇಳುವ ಧೈರ್ಯವಿರಬೇಕಷ್ಟೆ. ಅದು ಐದಂಕಿಯವರಾದರೇನು, ಹತ್ತಂಕಿಯವರಾದರೇನು ಅಲ್ಲವೇ?
ಅವರ ವಿರುಧ್ಧ ಹರಿಹಾಯ್ದವರು, ಯಾವ ಕಾರಣಕ್ಕೆ ಹರಿಹಾಯ್ದರು, ಇಂದು ಅವರೊಡಗೂಡಿ ಯಾವ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ಸಮಯವಿದ್ದಲ್ಲಿ ಪರಾಮರ್ಶಿಸಿ. ಸಾಧ್ಯವಿದ್ದಲ್ಲಿ ಉತ್ತರಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ರಿ, ನೀವು quotes embed ಮಾಡಿ ಬರೆದಿರುವ "ಐಟಿಗರು" ಇಲ್ಲದೇ ಹೋಗಿದ್ದಿದ್ದರೆ ನಿಮ್ಮ ಕಂಪ್ಯೂಟರಿನಲ್ಲಿ ಕನ್ನಡ ಫಾಂಟ್ ಬರುತ್ತಿರಲಿಲ್ಲ, ಬರಹ ಇರುತ್ತಿರಲಿಲ್ಲ, ನ್ಯೂಸ್ ಪೇಪರ್ ಇಷ್ಟು ಚೆಂದವಾಗಿ ಬರುತ್ತಿರಲಿಲ್ಲ. ಅದೆಲ್ಲ ಹೋಗಲಿ, ಸಂಪದ ಕೂಡ ಇರುತ್ತಿರಲಿಲ್ಲ. ಜೆನರಲೈಸ್ ಮಾಡಿ ಬರೆಯೋದು ಯಾಕೆ? ಹೀಯಾಳಿಸಿ ಬರೆಯೋದು ಯಾಕೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಐಟಿಗರು
ಐದಂಕಿಯವರು

??‌

ಈ ರೀತಿ ಕೊಂಕ್ನುಡಿ ಯಾಕೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆ ಸಮರ್ಥಿಸಿಕೊಳ್ಳುತ್ತೀರ? ಲಘುವಾಗಿ ಮಾತಾಡುವುದು ಬಹಳ ಸುಲಭ!
ನನಗೇಕೋ ಇದು ಹೊಟ್ಟೆಯುರಿ ಮಾತು ಅನ್ನಿಸುತ್ತದೆ! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.