ತುಳುನಾಡಿನ 'ಪಬ್ಬುಗಳು'

To prevent automated spam submissions leave this field empty.

ಭಾರತದ ಸಂಸ್ಕೃತಿಯ ರಕ್ಷಣೆಗೆ ಹೊರಟಿರುವ ಕೆಲವರು ಮೊನ್ನೆ ಮಂಗಳೂರಲ್ಲಿ ಹುಡುಗಿಯರ ಮೇಲೆ ಕೈಮಾಡಿದ್ದು, ಅಲ್ಲಿದ್ದ ಹುಡುಗರನ್ನು ಹಾಗೇ ಬಿಟ್ಟದ್ದು (ಅಡ್ಡ ಬಂದ ಒಬ್ಬನನ್ನು ಬಿಟ್ಟು) ಜಗತ್ತಿಗೇ ಗೊತ್ತಿದೆ. ಪಬ್ಬುಗಳಲ್ಲಿ ಕುಡಿಯುವುದು, ಅಲ್ಲಿಗೆ ಹುಡುಗಿಯರು ಹೋಗುವುದು ಭಾರತದ ಸಂಸ್ಕೃತಿ ಅಲ್ಲವೆಂಬುದು ಇವರ ತರ್ಕ, ವಿದೇಶೀ (ಕ್ರಿಶ್ಚಿಯನ್) ಸಂಸ್ಕೃತಿಯನ್ನು ಬರಗೊಡೆವೆಂಬುದು ಇವರ ಹಠವಂತೆ.

ಪಬ್ಬುಗಳು ಈ ಮೊದಲು ಮಂಗಳೂರಲ್ಲಿರಲಿಲ್ಲವೆ?

ಕರಾವಳಿಯುದ್ದಕ್ಕೂ (ದೇಶದುದ್ದಕ್ಕೂ ಎನ್ನಲಡ್ಡಿಯಿಲ್ಲ) ಹಳ್ಳಿ-ಹಳ್ಳಿಗಳಲ್ಲಿ ಶತ-ಶತಮಾನಗಳಿಂದ ಪಬ್ಬುಗಳಿದ್ದವು. ಎರಡೇ ವ್ಯತ್ಯಾಸ: ಆಧುನಿಕ ಪಬ್ಬುಗಳಂತೆ ಬಣ್ಣ-ಬಣ್ಣದ ಮಿಣುಕು ದೀಪಗಳು ಅವುಗಳಲ್ಲಿರಲಿಲ್ಲ, ಸರಬರಾಜಾಗುತ್ತಿದ್ದ ಪಾನೀಯವೂ ಬೇರೆ ತೆರನಾಗಿತ್ತು.ಒಳ್ಳೆ ಉಳಿ ಎಂಡ
ಸಣ್ಣದೊಂದು ಗೂಡಂಗಡಿ, ಹೆಚ್ಚಿನವಕ್ಕೆ ಹುಲ್ಲಿನ ಹೊದಿಕೆ. ಅದರ ಸುತ್ತಲೂ ಕೃಷಿ ಕಾರ್ಮಿಕರು, ಕೆಲಸಗಾರರು. ಹೆಣ್ಣು-ಗಂಡೆಂಬ ಬೇಧವಿಲ್ಲ. ಕೆಲಸಕ್ಕೆ ಹೋಗುವ ಮೊದಲೋ, ಕೆಲಸ ಮುಗಿಸಿ ಮನೆಗೆ ಮರಳುವಾಗಲೋ ಅಲ್ಲಿಗೊಂದು ಭೇಟಿ ಸಾಮಾನ್ಯ. ಕುಡಿಯುವುದಕ್ಕಿರಬಹುದು, ಗೆಳೆಯ-ಗೆಳತಿಯರೊಡನೆ ಹರಟುವುದಕ್ಕಿರಬಹುದು, ಕಷ್ಟ-ಸುಖ ಹಂಚಿಕೊಳ್ಳಲಿಕ್ಕಾಗಿರಬಹುದು. ಅಲ್ಲಿ ಸರಬರಾಜಾಗುತ್ತಿದ್ದುದೇನು ಅಂದಿರಾ? ತಾಳೆ ಮರದಿಂದ ಇಳಿಸಿದ ಹೆಂಡ. ಬುರ್ಬುರ್ನೊರೆ ಬಸ್ಯೋವಂತ ಒಳ್ಳೆ ಉಳಿ ಎಂಡ! ಅದೇ ರತ್ನನ್ ಪರ್ಪಂಚ!

ಪಬ್ಬು ಭಾರತದ ಸಂಸ್ಕೃತಿಯೇ ಅಲ್ಲ ಅಂದ್ರೆ ಹೇಗೆ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವಾದ ಸರಣಿ ಚೆನ್ನಾಗಿದೆ. ಆದರೆ, ಪ್ರಚಾರವನ್ನೇ ಪ್ರಧಾನವಾಗಿಟ್ಟುಕೊಂಡ ಶ್ರೀರಾಮಸೇನೆಯವರಿಗೆ ಈ ತರ್ಕ ಅರ್ಥವಾಗುತ್ತದಾ?

ಯಾವುದನ್ನೂ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಅವರಿಗೆ ಇದ್ದಂತಿಲ್ಲ, ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಅವರು ಮಂಡಿಸುವ ವಾದಗಳಿಗೂ ಅವರಲ್ಲಿ ಸರಿಯಾದ ತರ್ಕಗಳಾಗಲೀ, ವಿವರಣೆಗಳಾಗಲೀ ಇಲ್ಲ. ಆದರೆ, ಅವರೊಂದಿಗೆ, ಅವರ ವರ್ತನೆಯೊಂದಿಗೆ ಸಹಾನುಭೂತಿಯುಳ್ಳವರ ತರ್ಕಕ್ಕಾದರೂ ಇದು ನಿಲುಕಬಹುದೇನೋ ಎಂಬ ಹಾರೈಕೆ ಅಷ್ಟೆ.

>>ತಾಳೆ ಮರದಿಂದ ಹೊಸದಾಗಿ ಭಟ್ಟಿ ಇಳಿಸಿದ ಹುಳಿ ಹೆಂಡ.

ಹೊಸ ಹೆಂಡ ಹುಳಿಯಿರೋದಿಲ್ಲವಂತೆ,ಹೆಂಡವನ್ನು ಭಟ್ಟಿ ಇಳಿಸುವುದು ಇಲ್ಲ!

ತಮ್ಮ ಲೇಖನದ ಪ್ರಭಾವದಿನ್ದ ಎಲ್ಲರೂ ವಿಸ್ಕಿ, ರಮ್ಮು ತೊರೆದು ದೇಸಿ ಹುಳಿ ಹೆಣ್ಡ ಹೀರುವನ್ತಾಗಲಿ!

ವಿಸ್ಕಿ ರಮ್ಮಿನ ಗಮ್ಮತ್ತಿನಲ್ಲಿ ಉಳಿ ಎಂಡವನ್ನು ಓಡಿಸಿ ಬಹಳ ವರ್ಷಗಳೇ ಆದವು, ಈಗ ಕೆಲವು ಸಹಕಾರೀ ಸಂಘಗಳ ಮೂಲಕ ಮಾತ್ರ ಅವು ಲಭ್ಯವಂತೆ. ದೇಸ, ದೇಸಿ ಕಟ್ಟಿಕೊಂಡು ಯಾರಿಗೆ ಏನಾಗ್ಬೇಕು ಹೇಳಿ?