ಕಾವೇರಿ ನೀರು ಹಂಚಿಕೆ ಬಗ್ಗೆ ತೀರ್ಪು ಹೊರಬಿದ್ದಿದೆ

0

ಕಾವೇರಿ ಪ್ಯಾನಲ್ ತೀರ್ಪು ಹೊರಬಿದ್ದಿದೆ. ತಮಿಳುನಾಡಿಗೆ 419 TMC ಮತ್ತು ಕರ್ನಾಟಕಕ್ಕೆ 270 TMC ಅಂತ ಇದೀಗ ನಿಗದಿಯಾಗಿರುವ ಪ್ರಮಾಣ. ಇದು ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಇದರ ಸಾಧಕ-ಬಾಧಕಗಳೇನು ಅಂತ ವಿವರವಾಗಿ ಗೊತ್ತಾ?

- ಶ್ಯಾಮ್ ಕಿಶೋರ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರ ಬಗ್ಗೆ ಮಾಹಿತಿ ಸಾಧಕ-ಬಾಧಕಗಳು ಹೆಚ್ಹಾಗಿ ಗೊತ್ತಿಲ್ಲ. ಆದ್ರೂ ಇದು ಕರ್ನಾಟಕದ ಪರವಂತೂ ಅಲ್ಲ.  ಮತ್ತೊಂದು ಪ್ರಮುಖವಾದ ವಿಷಯ ನಾಣಯ್ಯನವ್ರು ಉದಯ ಟೀವಿಯಲ್ಲಿ ಹೇಳಿದ್ರು.

೧೯೯೧ ರ Interim order  ಪ್ರಕಾರ ತಮಿಳ್ನಾಡಿಗೆ ಬಿಡ್ಬೇಕಿದ್ ನೀರಿನ ಪ್ರಮಾಣ ೨೦೫ TMC. ನೀರಿನ ಅಳತೆ ಮಾಡುವ ಪ್ರದೇಶ ಮೆಟ್ಟೂರ್ ಜಲಾಶಯ. ಅದರ ಪ್ರಕಾರ KRS ಜಲಾಶಯದಿಂದ ಬಿಡ್ಬೇಕಾಗಿದ್ ನೀರಿನ ಪ್ರಮಾಣ ೧೮೦ TMC. ಮಿಕ್ಕಿದ್ ೨೫ TMC ತಮಿಳ್ನಾಡ್ನಿಂದ್ಲೇ ಹರಿದು ಬಂದು ಕಾವೇರಿ ಸೇರ್ತಾ ಇತ್ತು. ಈಗಿನ Order ಪ್ರಕಾರ KRS ನಿಂದ ಬಿಡಬೇಕಾದ ನೀರಿನ ಪ್ರಮಾಣ 192 TMC. ಅಳತೆ ಮಾಡುವ ಪ್ರದೇಶ ಬಿಳಿಗುಂಡ್ಳು - ಇದು ಕರ್ನಾಟಕ ತಮಿಳ್ನಾಡು ಗಡಿಯಲ್ಲೇ ಇದೆ. ಇದರಿಂದ 12 TMC ನೀರು ಹೆಚ್ಹಾಗಿನೇ ಬಿಡ್ಬೇಕು.

ಪ್ರತಿ ಸಲದಂತೆ ಈ ಸಲವೂ ಸೋತಿದ್ದೇವೆ. ನಮ್ಮ ನಾಯಕರು ಅನ್ಸ್ಕೊಂಡೋರು ಮುಂಚೆನೇ ಸರಿಯಾಗಿ Homework ಮಾಡ್ಬೇಕಿತ್ತು. ಕೇಂದ್ರದಲ್ಲಿ influence ಮಾಡೊ capacity  ಇಟ್ಕೋಬೇಕಿತ್ತು. Real-estate agents ತರ  ಬೆಂಗಳೂರು ಮೈಸೂರಲ್ಲಿ ಎಷ್ಟೆಷ್ಟು ಜಾಗ ಕಬಳಿಸ್ಬೇಕು ಅನ್ನೋದನ್ನ ಬಿಟ್ಟು ಇನ್ನೇನು ಯೋಚೆನೆನೇ ಮಾಡಲ್ಲ ಬಡ್ಡಿಮಕ್ಳು.  ಈಗ ಕೂಗಾಡಿ ಏನೂ ಪ್ರಯೋಜನವಿಲ್ಲ.  ನಮ್ಮ ಕನ್ನಡಿಗರ ಗತಿ ಇಷ್ಟೇನೇ :(

ನಿಜ, ನಾವು ಮತ್ತೊಮ್ಮೆ ಸೋತಿದ್ದೇವೆ. ನಮ್ಮ ನಾಯಕರು ಸರಿಯಾಗಿಲ್ಲ ಅಂದ್ರೆ, ಅವರನ್ನು ಆರಿಸಿ ಕಳಿಸುವ ನಮ್ಮದೂ ತಪ್ಪಿದೆ ತಾನೇ? ಇನ್ನು ಏನೇನಾಗುತ್ತೋ ಗೊತ್ತಿಲ್ಲ. ಖಂಡಿತ ನಮ್ಮ ವಿರುದ್ಧದ ತೀರ್ಪು ಇದು. ಒಟ್ಟಿನಲ್ಲಿ ನಮ್ಮ ನಾಯಕರು ಬೇಕು ಅಂತಲೇ ಹಾಗೆ ಮಾಡುತ್ತಾರೋ, ಒಂದೂ ಗೊತ್ತಿಲ್ಲ. ಒಟ್ಟಿನಲ್ಲಿ ತಮಿಳುನಾಡು-ಕರ್ನಾಟಕ ಸಂಬಂಧ (ಜನಸಾಮಾನ್ಯರ ಮಟ್ಟದಲ್ಲಿ) ಮತ್ತೊಮ್ಮೆ ಕದಡಿದ ನೀರಾಗುವುದು ಖಚಿತ.

ಇಷ್ಟರ ಮಧ್ಯೆ ಕಾರ್ನಾಡರು ತೀರ್ಪಿನ ಬಗ್ಗೆ ತಮ್ಮ "ಅನಿಸಿಕೆ"ಯನ್ನು ಹೊರಗೆಡವಿದ್ದಾರೆ. ದಟ್ಸ್ ಕನ್ನಡ ವರದಿ ಓದಿ ನೋಡಿ. ಇದರ ಬಗ್ಗೆ ಏನೆನ್ನಬೇಕು?

- ಶ್ಯಾಮ್ ಕಿಶೋರ್

ಕಾರ್ನಾಡ್ ರವರ ಹೇಳಿಕೆ "ಸಾಮಾರಸ್ಯದ" ಕಡೆಗೆ ಒತ್ತು ಕೊಟ್ಟಿದ್ದಾರೆ . ಆದರೆ ಅವರು ಕರ್ನಾಟಕದ ಪಾಲಿಗೆ ಈ ತೀರ್ಪು ಅಹಿತಕರ ಹಾಗೂ ಅನ್ಯಾಯ ಎಂದು ಚಿಂತಿಸಿಲ್ಲ.
ಕರ್ನಾಟಕದಲ್ಲಿ 381 ಕೀಲೋಮೆಟೆರ್, ತಮಿಳುನಾಡಿನಲ್ಲಿ 357 ಕೀಲೋಮೆಟೆರ್ ಕಾವೇರಿ ಹರಿಯುತ್ತದೆ. ಈ ಪ್ರಕಾರ ಕರ್ನಾಟಕಕ್ಕೆ ಹೆಚ್ಚು ನೀರು ಸಿಗಬೇಕು. ಕರ್ನಾಟಕದ ವಿರುದ್ಧನೆ ಎಲ್ಲ ತೀರ್ಪುಗಾಳು ಆಗುತ್ತಿವೆ. ಕರ್ನಾಟಕ ಅಂದರೆ ಬಾರಿ ಕೊಡುವುದಂತಾನೆ ಕರ್ನಾಟಕದ ಪರ ಏನು ಎಲ್ಲವೇ ನಮ್ಮ ಪಾಲಿಗೆ ಏನು ಬೇಡವೇ?
ಕಾವೇರಿ ನೀರಿನಿಂದ ನೀರಾವರಿ ನಮ್ಮ ನಾಡಿನಲ್ಲಿ ಹೆಚ್ಚು ಇದೆ.
ರಾಜಕೀಯ ನಾಯಕರು ಏನು ಮಾಡುತ್ತಿದ್ದಾರೋ? ಈ ಸಲವು ನಾವು ಸೋತಿದ್ದೀವಿ. ಯಾಕೆ ನಮಗೆ ಈ ಅನ್ಯಾಯ?

ಕಾವೇರಿ ನೀರು ಹಂಚಿಕೆಯ ಇತಿಹಾಸದ ಬಗ್ಗೆ ವಿವರವಾದ ಮಾಹಿತಿಯುಳ್ಳ ಒಂದು ಲೇಖನ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ. ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

- ಶ್ಯಾಮ್ ಕಿಶೋರ್

ಇದೇ ಲೇಖನವನ್ನು ಯೂನಿಕೋಡ್ ನಲ್ಲಿ ಓದಲು [:http://uni.medhas.org/unicode.php5?file=http://thatskannada.oneindia.in/...|ಇಲ್ಲಿ ಕ್ಲಿಕ್ಕಿಸಿ] ;)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"