ಗ್ರಹಣ

0

ಇವತ್ತು ಆಟಿ ಅಮಾವಾಸ್ಯೆ. ಗ್ರಹಣ ಬೇರೆ ನಡೆಯಲಿದೆ.
ಟಿವಿ ಚಾನೆಲ್‌ಗಳು ಜ್ಯೋತಿಷಿಗಳು ಕೆಟ್ಟದ್ದು ನಡೆಯಲಿದೆ ಎನ್ನುತ್ತಾರೆ.
ಬಹುಶ: ನೀವೂ ಉಪವಾಸ,ವ್ರತ ಮಾಡಲಿದ್ದೀರಿ.
ಗ್ರಹಣದ ಬಗ್ಗೆ ನಿಮ್ಮ ನಂಬಿಕೆಗಳೇನು?
ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಿರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಶೋಕ್ ಕುಮಾರರೆ,

ಒಂದು ಪ್ರಶ್ನೆ: ಆಡಿ ಅನ್ನುವ ಹೆಸರು ಕೇಳಿದ್ದೇನೆ. ಆಟಿ ಅನ್ನುವ ಪ್ರಯೋಗವೂ ಇದೆಯೆ?

ಅಂದ ಹಾಗೆ, ಸಂಪದದಲ್ಲಿ ನಾನು ಬರೆದಿದ್ದ ರಾಹು-ಕೇತು ಕಾಟ ಸರಣಿಯ ಭಾಗಗಳು, ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ:

ರಾಹುಕೇತು ಕಾಟ ಮತ್ತು ಗ್ರಹಣಚಕ್ರ:

http://thatskannada.oneindia.in/literature/articles/2008/0731-saros-cycl...

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ತುಳುವಿನಲ್ಲಿ ಆಟಿ ಅಮಾವಾಸ್ಯೆ ಎನ್ನುತಾರೆ.ಆಡಿ ಎಂಬುವುದು ತಮಿಳೇ?

ಹೌದು. ತಮಿಳಲ್ಲಿ ನಾಕನೇ ಸೌರಮಾನ ತಿಂಗಳು ಆಡಿ. ಸುಮಾರಾಗಿ, ಚಾಂದ್ರಮಾನ ತಿಂಗಳು ಆಷಾಢದ ಹೊತ್ತಿಗೇ ಬರುತ್ತೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ತುಳುವಿನಲ್ಲಿ ಆಷಾಢಕ್ಕೆ ಆಟಿ ಅಮಾವಾಸ್ಯೆ ಎನ್ನುತ್ತಾರೆ.ಸೌರಮಾನದ ಪ್ರಕಾರ ತಿಂಗಳು/ಮಾಸ ಬದಲಾಗುವುದು ಸಂಕ್ರಮಣದಿಂದ ಅಲ್ವ?ತಮಿಳರು ಸೌರಮಾನ ಯುಗಾದಿ ಅಚರಿಸುತ್ತಾರೆ.ನಮ್ಮ ಕರಾವಳಿಯಲ್ಲೂ ಸಹ ಸೌರಮಾನ ಯುಗಾದಿ ಅಚರಣೆಯಲ್ಲಿದೆ.ರಾಜ್ಯದೆಲ್ಲೆಡೆ ಚಾಂನ್ದ್ರರಮಾನ ಅಚರಿಸುವಾಗ ಈ ಭಾಗ ಮಾತ್ರ ಭಿನ್ನವೇಕೆ?ಇದಕ್ಕೂ ತಮಿಳು ಅಚಾರಕ್ಕೂ ಏನಾದರೂ ಸಂಬನ್ಧವಿದೆಯೆ?ಬಲ್ಲವರು ತಿಳಿಸಿ.

ನಿಮ್ಮ ಪ್ರಶ್ನೆಗೆ ಪ್ರಮೀಳಾರಿಂದ ಉತ್ತರ ಸಿಕ್ಕಿದೆಯಲ್ವೇ..
*ಅಶೋಕ್