ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?

To prevent automated spam submissions leave this field empty.

Openoffice.orgತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಕಂಪ್ಯೂಟರ್ ಅನ್ನ ಅವಲಂಬಿಸಿ ಕೊಂಡು ಬರಲಿಕ್ಕೆ ಸರ್ಕಾರಿ ಇಲಾಖೆಗಳು ಪ್ರಾರಂಭಿಸಿ ವರ್ಷಗಳು ಕಳೆದಿರಬಹುದು. ಅಂದಿನಿಂದ ಇಂದಿನವರೆಗೆ ಪತ್ರಗಳನ್ನ, ಇತರೆ ಕಡತಗಳನ್ನ ಸಂಪಾದಿಸಲಿಕ್ಕೆ ಸಮಾನ್ಯವಾಗಿ ಉಪಯೋಗಿಸಿ ಕೊಂಡು ಬಂದಿರುವ ತಂತ್ರಾಂಶ ಮೈಕ್ರೋ ಸಾಫ್ಟ್ ಆಫೀಸ್ ಅಲ್ವೇ? ಇದನ್ನ ಮೈಕ್ರೋಸಾಫ್ಟ್ ನಿಂದ ಕೊಂಡು ಉಪಯೋಗಿಸಿದವರನ್ನ ನಾನು ಕಂಡದ್ದೇ ಇಲ್ಲ. ಸರ್ಕಾರ ಇದನ್ನ ಉಪಯೋಗಿಸಲಿಕ್ಕೆ ಪ್ರತಿಯೊಂದು ಕಂಪ್ಯೂಟರ್ಗೆ ಲೈಸೆನ್ಸ್ ಕೊಂಡುಕೊಳ್ಳ ಬೇಕಾಗುತ್ತದೆ. ಸ್ವಲ್ಪ ಲೆಕ್ಕ ಹಾಕಿ, ಒಂದೊಂದು ಸರ್ಕಾರಿ ಆಫೀಸಿಗೆ ಈ ತಂತ್ರಾಂಶ ಕೊಳ್ಳಬೇಕೆಂದರೆ ಲಕ್ಷಗಟ್ಟಲೆ ಹಣ ಸುರಿಯ ಬೇಕಾಗುತ್ತದೆ. ಹಣ ಎಲ್ಲಿಂದ ಬರತ್ತೆ? ಇದೆಯಲ್ಲ ನಾನು, ನೀವು ಕೊಟ್ಟ ಟ್ಯಾಕ್ಸ್ ಹಣ. 

ಈ ರೀತಿ ಹೊರ ದೇಶದ ಒಂದು ಕಂಪೆನಿಗೆ ಹರಿದು ಹೋಗೋ ಹಣವನ್ನ ತಡೆಯೋದ್ ಹ್ಯಾಗೆ? ಟ್ಯಾಕ್ಸ್ ಹಣ ಉಳಿಸಿ ಅದನ್ನ ಅಭಿವೃದ್ದಿ ಕಾರ್ಯಗಳಿಗೆ ಬಳಸೋದ್ ಸಾಧ್ಯಾನಾ? ಕೆಲ ತಿಂಗಳುಗಳ ಹಿಂದೆ ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್ ನೊಂದಿಗೆ ಅದರ ತಂತ್ರಾಂಶಗಳನ್ನ ಉಪಯೋಗಿಸುವುದಕ್ಕೆ ಒಪ್ಪಂದವನ್ನ ಮಾಡಿಕೊಳ್ಳ ಹೊರಟಾಗ ಅದನ್ನ ವಿರೋಧಿಸಿ ಒಂದು ಹೋರಾಟವನ್ನ ಪ್ರಾರಂಭಿಸಿದ್ದೆವು. ವಿದೇಶಿ ತಂತ್ರಾಂಶದಿಂದಾಗ ಎದುರಾಗ ಬಹುದಾದ  ತೊಂದರೆಗಳನ್ನ ಎಲ್ಲರ ಮುಂದಿಟ್ಟಿದ್ದೆವು. ಸೆಕ್ಯೂರಿಟಿಯ ಮಟ್ಟಿಗೆ ಕೂಡ ಹಿಂದೆ ನೆಡೆದ ಲಾಜಿಕ್ ಬಾಂಬ್ ಘಟನೆಗಳನ್ನ ವಿವರಿಸಿದ್ದೆವು.

ಇದಕ್ಕೆಲ್ಲ ಉತ್ತರ ಕೂಡ ಈಗಾಗಲೇ ಎಲ್ಲರ ಮುಂದಿದೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನ ಉಪಯೋಗಿಸೋದು. ಓಪನ್ ಆಫೀಸ್  ಉಪಯೋಗಿಸ್ಲಿಕ್ಕೆ ಶುರು ಮಾಡಿದ್ರೆ ಕಾಸ್ ಕೊಟ್ಟು ಮೈಕ್ರೋಸಾಫ್ಟ್ ಆಫೀಸ್ ಕೊಂಡುಕೊಳ್ಬೇಕಿಲ್ಲ. ಆಗಲೇ ಅನೇಕ ರಾಜ್ಯಗಳಲ್ಲಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನಉಪಯೋಗಿಸಿ ಕೊಳ್ಳಲಿಕ್ಕೆ ಶುರು ಮಾಡಿದ್ದಾರೆ.

ದೆಹಲಿಯಲ್ಲಿನ ಮಾಹಿತಿ ತಂತ್ರಜ್ಞಾನ ಇಲಾಖೆ, ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಕಛೇರಿಗಳಿಗೆ ಕಳಿಸಿದ ಒಂದು ಪತ್ರವನ್ನ ನಿಮ್ಮ ಮುಂದಿಡುತ್ತಿದ್ದೇನೆ.

ಅದರ pdf ಪ್ರತಿ ಇಲ್ಲಿದೆ

ಇದರಲ್ಲೇನಿದೆ ಅಂತ ಒಮ್ಮೆ ಓದಿ ನೋಡಿ ಸಾರ್! ದೆಹಲಿಯಲ್ಲಿ ಇನ್ಮುಂದೆ ಆಫೀಸ್ ತಂತ್ರಾಂಶವನ್ನ ಕೊಂಡು ಕೊಳ್ಳೋ ಹಾಗಿಲ್ಲ, ಓಪನ್ ಆಫಿಸ್ ಉಪಯೋಗಿಸ ಬೇಕು. 

ಕರ್ನಾಟಕ ಸರ್ಕಾರ ಇವುಗಳ ಬಗ್ಗೆ ತನ್ನ ಅರಿವನ್ನ ಹೆಚ್ಚಿಸಿ ಕೊಳ್ಳೋ ಕಾಲ ಬಂದಾಗಿದೆ. ಸರ್ಕಾರಿ ಕೆಲಸಗಳಿಗೆ ಬೇಕಿರೋ ತಂತ್ರಾಂಶಗಳನ್ನ ನಾವೇ ಅಭಿವೃದ್ದಿ ಪಡಿಸಿ ಸ್ವಾವಲಂಭನೆಯ ಹಾದಿ ತುಳಿಯುವುದಕ್ಕೆ ನಮ್ಮಲ್ಲಿರುವ ಪ್ರತಿಭೆಗಳನ್ನ ನಮ್ಮ ಸರ್ಕಾರ ಕಣ್ಬಿಟ್ಟು ನೋಡುತ್ತಾ? ಅಥವಾ ಲಭ್ಯವಿರುವ ಮುಕ್ತ ತಂತ್ರಾಂಶಗಳ ಕಡೆಗೆ ಗಮನ ಹರಿಸಿ  ಸಾರ್ವಜನಿಕರ ಹಣ ಪೋಲಾಗೋದನ್ನ ತಪ್ಪಿಸಲಿಕ್ಕೆ ಚಿಂತಿಸುತ್ತಾ ಅನ್ನೋದೇ ದೊಡ್ದ ಪ್ರಶ್ನೆ. 

ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರು, ಅದರ ಜೊತೆಗೇ ಮೈಸೂರು ಮತ್ತಿರೆಡೆಗಳಲ್ಲಿ ಪ್ರಪಂಚದ ಅನೇಕ ದೇಶಗಳಿಗೆ ಬೇಕಿರುವ ತಂತ್ರಜ್ಞಾನಗಳನ್ನ ನಾವು ಮಾಡಿ ಕೊಡೋದೇ ಆಗಿದೆ. ಕನ್ನಡಿಗರಿಗೆ ಕೆಲಸ ನೀಡಿ ಅಂತ ಕೂಡ ಹೇಳ್ತೀವಿ. ಇಲ್ಲಿ ಸರ್ಕಾರ ಕೊಡೋ ಟ್ರೈನಿಂಗ್ ಮಾತ್ರ ನಮ್ಮನ್ನ ಮತ್ತೆ ಇನ್ಯಾವುದೋ ದೇಶದ ತಂತ್ರಾಂಶದ ಗುಲಾಮರನ್ನಾಗಿ ಮಾಡ್ತದೆ. ಹೌದು ನಾನು ಇತ್ತೀಚೆಗೆ ಕೇಳ್ಪಟ್ಟ ಸುದ್ದಿಯ ಪ್ರಕಾರ ಐ.ಟಿ ಡಿಪಾರ್ಟ್ಮೆಂಟ್ ನೆಡೆಸ್ತಿರೋ ಒಂದು ಟ್ರೈನಿಂಗ್ ಪ್ರೋಗ್ರಾಮ್ ನಲ್ಲಿ ಕಲಿಸ್ತಿರೋದು ಮೈಕ್ರೋಸಾಪ್ಟ್ ಆಫೀಸ್. ಅದರ ಪರೀಕ್ಷೆ ಪಾಸಾದ್ರೆ ಸರ್ಕಾರಿ ಕೆಲಸ ಅಂತೆ. ನಿಮಗೆಲ್ಲಾ ಗೊತ್ತಿರೋ ಹಾಗೆ, ಕೇರಳ ತನ್ನ ರಾಜ್ಯದಲ್ಲಿರುವ ಸ್ಕೂಲ್, ಕಾಲೇಜ್ ಗಳಲ್ಲಿ ಲಿನಕ್ಸ್ ಬಳಸಿ ವಿಧ್ಯಾಭ್ಯಾಸದ ಜೊತೆಗೆಮುಕ್ತ ಹಾಗು ಸ್ವತಂತ್ರ ತಂತ್ರಾಂಶಗಳನ್ನ ಹೇಗೆ ಬಳಸೋದು ಅಂತ ಕೂಡ ಹೇಳಿ ಕೊಡ್ತಿದೆ. ಚಿಂತಕ ಛಾವಡಿಯಲ್ಲಿ ಈ ವಿಷಯಗಳು ಚರ್ಚೆಯಾಗಿ, ನಾವೂ ಏನಾದ್ರೂ ಮಾಡಕ್ಕಾಗತ್ತ ಅಂತ ನೋಡಬೇಕಿದೆ.

ನನ್ನ ಚಿಂತೆ ಏನಂದ್ರೆ ನಾವ್ಯಾಕೆ ಇಂತಹ ವಿಷಯಗಳಲ್ಲಿ ತುಂಬಾ ಹಿಂದೆ ಅನ್ನೋದು. ನೀವೇನಂತೀರಾ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರೀತಿಯ ಓಂ ಶಿವಪ್ರಕಾಶ್,
ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ನಿಮ್ಮ ಬರಹ ಓದಿದ ಕೂಡಲೇ ನಾನು ಈ ತಂತ್ರಾಂಶವನ್ನು ಇಳಿಸಿಕೊಂಡು ಬಳಸಲೂ ಶುರು ಮಾಡಿಬಿಟ್ಟೆ. :). ಎಷ್ಟು ಚೆನ್ನಾಗಿದೆ!! ಈಗ ನಾನು ಇಲ್ಲಿ ಬರೆದಿರುವ ಪ್ರತಿಕ್ರಿಯೆ ಕೂಡ ಅದನ್ನು ಬಳಸಿಕೊಂಡು ಟೈಪ್ ಮಾಡಿದ್ದೇ ಆಗಿದೆ. ತುಂಬಾ ಉಪಯೋಗ ಆಗತ್ತೆ ಇದು. ನನ್ನ ಸ್ನೇಹಿತರಿಗೆಲ್ಲ ಇವತ್ತೇ ಇದರ ವಿಷಯ ತಿಳಿಸಿ ಅವರೂ ಉಪಯೋಗಿಸುವಂತೆ ಮಾಡುತ್ತೇನೆ.

"ಏರಿದವನು ಚಿಕ್ಕವನಿರಬೇಕು"

ತುಂಬಾ ಸಂತೋಷ ಸರ್, ನಮಗೆ ದಿನ ಬಳಕೆಗೆ ಬೇಕಿರೋ ಎಲ್ಲ ಆಫೀಸ್ ಟೂಲ್ ಗಳು ಇದರಲ್ಲಿ ದೊರೆಯುತ್ತವೆ. ಎಲ್ಲರೂ ನಿಮ್ಮೆಂತೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನ ಉಪಯೋಗಿ ನೋಡ್ಲಿಕ್ಕೆ ಒಮ್ಮೆ ಪ್ರಯತ್ನಿಸಿ ನೋಡಿದರೂ ಸಾಕು, ಪೈರಸಿ ಸಾಫ್ಟ್ವೇರ್ ಉಪಯೋಗಿಸೋದೇ ಬೇಕಿರೋಲ್ಲ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ನನ್ನ ಖಾಸಗಿ ಲ್ಯಾಪ್ ಟಾಪಿನಲ್ಲಿ OpenOffice install ಮಾಡಿ ಉಪಯೋಗಿಸುತ್ತಿದ್ದೇನೆ.

Microsoft Officeನ ಸಾಧಾರಣ ಎಲ್ಲಾ features ಇವೆ. ಆದರೆ ಅದರಕಿಂತ ಸ್ವಲ್ಪ ನಿಧಾನ. ಕೆಲವು ಬಾರಿ hang ಆಗಿದ್ದೂ ಉಂಟು. ಬಹುಶಃ ಮುಂದಿನ upgradeಗಳಲ್ಲಿ ಸುಧಾರಿಸಬಹುದು.

ಓಂ ಸರ್‍,
ನಮ್ಮ ಆಫೀಸ್ನಲ್ಲಿ ಈಗೇನಿದ್ರು open office. ನಮ್ಮ ಆಫೀಸ್ ಮಂದಿನ ಕೇಳಿದೆ open office ಹೆಂಗೆ ಅಂತ.
ಇದರಿಂದೇನೂ ಆಪರೇಟಿಂಗ್ ಕಷ್ಟ ಇಲ್ಲ ಬಿಡು ಅಂದ್ರು. ಚಕಚಕನೆ ಎಲ್ಲ ಸಿಸ್ಟಂನಿಂದ ms office ಅಳಿಸಿ ಹಾಕಿಬಿಟ್ಟೆ. ಈಗ ಬರೀ open office..
ಕರ್ನಾಟಕದಲ್ಲಿ ಮುಕ್ತ ತಂತ್ರಾಂಶದ ಬಳಕೆ ಆಗಬೇಕಾದರೆ ಮೊದಲು ಈಗಿನ ಐಟಿ ಮಂತ್ರಿಯಾಗಿರುವ ಕಟ್ಟಾನನ್ನು ಹಿಡಿದು ಅವರ ತಲೆಯಲ್ಲಿ ತುಂಬಿರೋ ms ತಂತ್ರಾಂಶವನ್ನ ಮೊದಲು ಅಳಿಸಿ ಹಾಕಬೇಕು..ಅಲ್ವೇ ಸರ್‍.
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

ಒಳ್ಳೆಯ ಮಾಹಿತಿ.
ಓಪನ್ ಆಫೀಸ್ internet ನಲ್ಲಿ ಸಿಗುತ್ತಾ?
ಅದರ ಉಪಯೋಗ ಹೇಗೆ ಅಂತೇನಾದರೂ ಮಾಹಿತಿ ಸಿಗುತ್ತಾ?
windows xp ಯಲ್ಲಿ ಅದನ್ನು instal ಮಾಡಿಕೊಳ್ಳಬಹುದಾ? ಅಥವಾ linux ಬೇಕಾ?

ಓಂ ಶಿವಪ್ರಕಾಶ್ ಅವರು ಕೊಟ್ಟಿರುವ ಲೇಖನದ ಬಳಿ ಇರುವ ಐಕನ್ ಮೇಲೆ ಕ್ಲಿಕ್ ಮಾಡಿ ನೇರ ಆ ವೆಬ್ ಸೈಟ್‌ಗೆ ಕರ್ಕೊಂಡು ಹೋಗತ್ತೆ. ಉಪಯೋಗವೂ ತುಂಬಾ ಸುಲಭ, ಮೈಕ್ರೋಸಾಫ್ಟ್ ಆಫೀಸ್ ಥರಾನೇ ಬಳಸಬಹುದು. ಅದರ ಹೆಚ್ಚಿನ ಎಲ್ಲ ಒಳ್ಳೇ ಬಳಕೆಗಳು ಇದರಲ್ಲಿವೆ. ವೆಬ್ ಸೈಟ್‌ನಲ್ಲಿ downloading Instructionನಲ್ಲಿ windows ಮತ್ತು Linux version ಎರಡಕ್ಕೂ ಆಗುವ ಲಿಂಕ್ ಇದೆ ನೋಡಿ.

"ಏರಿದವನು ಚಿಕ್ಕವನಿರಬೇಕು"

ಓಪನ್ ಆಫೀಸ್ ಸಿಕ್ಕಾಪಟ್ಟೆ ಚೆನ್ನಾಗಿದೆ. MS Access ನ alternative ಯಾವದು? ಸರಳವಾಗಿ ಡಾಟಾಬೇಸ್ ರಚಿಸಿಲಿಕ್ಕೆ ಬಂದರೆ ಸಾಕು. mdb ಓಪನ್ ಆಗಬೇಕು ಅಂತೇನಿಲ್ಲ.