ಯಾಕೆ ಹೀಗೆ ನನ್ನೊಳಗೆ?

0

ನಾನು ಜೀವನದಲ್ಲಿ ಮಿಂಚಬೇಕು. ಎಲ್ಲರೂ ಗುರುತಿಸುವಂತಹ ಕಾರ್ಯ ಮಾಡಬೇಕು. ನನ್ನದೇ ಆದಂತಹ ವೆಬ್ ಸೈಟ್ ಮಾಡಬೇಕು. ಅದು ಇದು... ಹೀಗೆ ಎಲ್ಲವನ್ನೂ ನನ್ನ ಒಳ ಮನಸ್ಸಿಗೆ ಸರಿ ಎನ್ನಿಸಿದ್ದೆಲ್ಲವನ್ನೂ ಮಾಡಬೇಕು. ಪ್ರತೀ ಕ್ಷಣವನ್ನೂ ಸದುಪಯೋಗಿಸಿಕೊಳ್ಳಬೇಕು. ಸದಾ ಲವಲವಿಕೆಯಿಂದರಬೇಕು. ಇತರರನ್ನು ನಗಿಸುತ್ತಿರಬೇಕು. ಅವರೇನೆ ಅಂದರೂ ನೊಂದು ಕೊಳ್ಳಬಾರದು. ಹೀಗೆ ಏನೇನೊ ಮಾಡಬೇಕೆಂದು ಅಂದು ಕೊಳ್ಳುತ್ತೇನೆ. ಹಲವು ಬಾರಿ ಮಾಡಿದ್ದೇನೆ ಕೂಡ. ಸ್ನೇಹಿತರಿಂದ ನಿನ್ನಷ್ಟು ಲವಲವಿಕೆಯಿಂದ ಇರೋರು ಈ ಪ್ರಪಂಚದಲ್ಲಿ ಯಾರೂ ಇಲ್ಲ ಅನ್ನೊ ಅಷ್ಟರ ಮಟ್ಟಿಗೆ ಅವರನ್ನು ನಗಿಸುತ್ತಿದೆ.

ಅದ್ರೂ ಯಾಕೆ ಕೆಲವೊಮ್ಮೆ ತೀರಾ ನಿರಾಶಿತಳಾಗುತ್ತೇನೆ. ಜೀವನವೇ ಬೇಡ ಅನ್ನಿಸುವಷ್ಟು ಬೇಸರವಾಗಿ ಬಿಡುತ್ತದೆ. ಯಾಕೆ ಹೀಗಾಗುತ್ತದೆ.

ಹಾಗೇ ನೋಡಿದ್ರೆ ...

ನನ್ನಷ್ಟು ಅದ್ರಷ್ಟವಂತೆ ಯಾರೂ ಇಲ್ಲ. ನನ್ನನ್ನು ಯಾವತ್ತೂ ನಿರಾಶೆಗೊಳಿಸದ ಅಪ್ಪಾಮ್ಮ, ಸದಾಕಾಲ ಸ್ಪಂದನೆಯಲ್ಲಿರುವ ಸ್ನೇಹಿತರು, ಸಹುದ್ಯೋಗಿಗಳು, ಪದವಿ ಮುಗಿದಾಕ್ಷಣ ಉದ್ಯೋಗಕ್ಕಾಗಿ ಅಲೆಡಾಡುವ ಅವಕಾಶವನ್ನೇ ನೀಡದ ಭಗವಂತ... ಎಲ್ಲವೂ ಇದ್ದು
ಕೆಲವೊಮ್ಮೆ ಇಲ್ಲವೆನ್ನಿಸುತ್ತಿದೆ.

ಯಾಕೆ ಹೀಗೆ... ನನಗೆ ಮಾತ್ರನ ಅಥವಾ ನಿಮಗೂ ಹೀಗೆ ಅನ್ನಿಸಿತ್ತೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ee koMDiyannomme nODi http://www.sampada.net/article/2183 :)

ನಿಮ್ಮವನೇ,
ಅರವಿಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕೊಂಡಿಯನ್ನೊಮ್ಮೆ ನೋಡಿ http://www.sampada.net/article/2183 :)

ನಿಮ್ಮವನೇ,
ಅರವಿಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ಅರವಿಂದ್... ೨೦೦೬ ರಲ್ಲಿ ಬಂದ ಹಳೆಯ ಬರಹವನ್ನು ಹೆಕ್ಕಿ ಕೊಟ್ಟಿದ್ದೀರಿ,... ಅದೂ ಸರಿಯಾದ ’ಹೊತ್ತಿ’ಗೆ....

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ಝೆನ್ ಕಥೆ ಬಹಳ ಪ್ರಸ್ತುತ. :-)

ಓ ಎಲ್ ಎನ್ ಬರೆದ [:books/3235|ಕೆಲವು ಝೆನ್ ಕಥೆಗಳು ಇಲ್ಲಿವೆ].
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೆ ಹೇಳಿದಿರಲ್ಲ ನನ್ನಷ್ಟು ಅದ್ರಷ್ಟವಂತೆ ಯಾರೂ ಇಲ್ಲ ಅ೦ತ ಅದನ್ನ ನೆನಪು ಮಾಡಿಕೊಳ್ಳಿ ಆಗಾಗ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೂ ಹೀಗೆ ಆಗುವುದುಂಟು... ಎಲ್ಲ ಇದ್ದೂ ಏನೂ ಇಲ್ಲದಿರುವಂತೆ... ಕೆಲವೊಮ್ಮೆ ಅಷ್ಟೆ.
ಸುಮಾರು ಜನಕ್ಕೆ ಕೇಳಿದ್ದೇನೆ.. ಒಂದೊಂದು ಹಂತದಲ್ಲಿ ಎಲ್ಲರಿಗೂ ಹೀಗೆ ಆಗುತ್ತದಂತೆ !

**************************
http://vikasavada.blogspot.com/
**************************

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರೇನೆ ಅಂದರೂ 'ನೊಂದುಕೊಳ್ಳಬಾರದು' ಅಲ್ಲ, ಕಿವಿಗೇ ಹಾಕಿಕೊಳ್ಳಬಾರದು. ಯಾರು ಏನಂದರೇನು? :-)
ನೂರಾರು ಜನ - ಒಬ್ಬೊಬ್ಬರದು ಒಂದೊಂದು ರೀತಿಯ ಆಲೋಚನೆ, ವಿಚಾರ, ಅಭಿಪ್ರಾಯ. ಕೇಳಬೇಕು, ಆದರೆ ಸರಿಯೆನಿಸಿದ್ದನ್ನು ಮಾತ್ರ ತಲೆಗೆ ಹಾಕಿಕೊಳ್ಳುವುದು ಬೆಸ್ಟು!
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವೊಮ್ಮೆ ಎಲ್ಲರಿಗು ಹಾಗೆ ಅನಿಸುತ್ತೆ ಕಣ್ರೀ ..
ನಾವು ಎಷ್ಟೇ ಉತ್ಸಾಹದಿಂದ ಇದ್ರೂ ಎಲ್ಲೋ ಒಂದು ಕಡೆ ಏನೋ ಕೊರತೆ ಇರೋ ಹಾಗೆ ಅನ್ನಿಸ್ತಾ ಇರುತ್ತೆ . ಎಲ್ಲರು ಇದ್ರೂ ಯಾರು ಇಲ್ವಲ್ಲ ಅನಿಸುತ್ತೆ ..
"ಹೀಗೆ ಎಲ್ಲವನ್ನೂ ನನ್ನ ಒಳ ಮನಸ್ಸಿಗೆ ಸರಿ ಎನ್ನಿಸಿದ್ದೆಲ್ಲವನ್ನೂ ಮಾಡಬೇಕು" ಇದು ಬಹಳ ಕಷ್ಟದ ಕೆಲಸ ಯಾಕಂದ್ರೆ ನಮ್ಮೊಳಗೆ ನಾವೇ ಬೇಲಿ ಹಾಕ್ಕೊಂಡಿರ್ತೀವೆ, ಅದು ನಮಗೆ ಗೊತ್ತೇ ಆಗೋಲ್ಲ . ಅನಿಸಿದರು ಹಾಗೆ ಮಾಡೋಕೆ ಆಗೋಲ್ಲ . ಕೆಲವೊಂದು ಸಂಗತಿಗಳು ನಮ್ಮನ್ನು ಕಟ್ಟಿ ಹಾಕುತ್ವೆ .

ನನಗೂ ಈ ರೀತಿ ಆಗುತ್ತೆ , ಚಿಂತೆ ಮಾಡಿ ಮಾಡಿ ಸುಸ್ತಾಗ್ತೀನಿ .ಕೊನೆಗೆ ಇವೆಲ್ಲ ಇದ್ದೀದೆ ಅಲ್ವ ಅನ್ಕೊಂಡು ಸುಮ್ನೆ ಆಗ್ತೀನಿ ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್ ಅವರೇ ನಿಮ್ಮ ಲಿಂಕ್ ಗೆ ಧನ್ಯವಾದಗಳು. ನಾಡಿಗ್ ಅವರೇ ನನಗಾರೂ ಬೇಸರ ಬರುವಂತಹ ಮಾತುಗಳನ್ನು ಹೇಳಿಲ್ಲ... ಸದ್ಯಕ್ಕೆ ಮತ್ತೆ ಲವಲವಿಕೆ ಬಂದಿದೆ. ಸಲಹೆ, ಪ್ರೋತ್ಸಾಹ ನೀಡಿದ ಹರೀಶ್ ಮತ್ತು ನಿಮ್ಮೆಲ್ಲರಿಗೂ ಧನ್ಯವಾದಗಳು.

veenadsouza
http://veenamanasu.blogspot.com/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.