ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ

3.333335

ಈಚೆಗೆ ಮಂಡ್ಯಗೆ ಹೋಗಿದ್ದಾಗ ಹಲವು ಸಲ ಕೇಳಿದ್ದ ಅದೇ ಮಾತುಗಳನ್ನು(ಆಡುನುಡಿಯನ್ನು) ಹೊಸದಾಗಿ ಕೇಳಿ - ಅವುಗಳಿಗೆ ಸೊಲ್ಲರಿಮೆಯನ್ನು ವಿವರಿಸುವ ಮೊಗಸು ಇದು:-


ತಿರುಳು: ಈ ಆಡುನುಡಿಯಲ್ಲಿ ’ಹ’ಕಾರ ಬಿದ್ದುವೋಗಿರುವುದು ಮತ್ತು ದ್->ಜ್ ಆಗಿ ಮಾರ್ಪಾಡಾಗುವುದು


ಈ + ಹಯ್ದ = ಈವಯ್ದ( ಎಲ್ಲರ ಕನ್ನಡ), ಆದರೆ ’ದ್’-->’ಜ್’ ಆಗುವುದು ಕನ್ನಡದಲ್ಲಿ(ಆಡುನುಡಿಗಳಲ್ಲೂ) ಹಲವು ಕಡೆ ಕಣ್ದೋರುತ್ತವೆ.


ಹಾಗಾಗಿ ಈ + ವಯ್ ಜ= ಈವಯ್ಜ (ಮಂಡ್ಯದ ಆಡುನುಡಿ) = ಈವಯ್ದ(ಎಲ್ಲರಕನ್ನಡ)


ಇನ್ನು ಕೆಲವು ಎತ್ತುಗೆಗಳು : ಸಂಧ್ಯಾ(ಸಂ) => ಸಂಜೆ, ವಂಧ್ಯಾ(ಸಂ) => ಬಂಜೆ


ಕೆಲವು ಬಳಕೆಗಳು ( ಬರೀ ಮಂಡ್ಯಜಿಲ್ಲೆಯಲ್ಲಿ ಮತ್ತು ಸುತ್ತಮುತ್ತ ಕೇಳಸಿಗುತ್ತವೆ):-
೧. ಬಜ.. ಮಂಡ್ಯಕ್ಕೆ ವೋಮ ( ಬಾ ಹಯ್ದ - ಮಂಡ್ಯಕ್ಕೆ ಹೋಗುವ)
೨. ಯಾವನ್ ಜ ಅಮ ( ಯಾವನೊ ಹಯ್ದ ಅವನು)
೩. ಅಜೊ...ಅಜೊ ಸುಳ್ಳು ಯೋಳ್ಬೇಡ ಕಜೊ ( ಹಯ್ದ... ಹಯ್ದ ..ಸುಳ್ಳು ಹೇಳ್ಬೇಡ ಕಣೊ ಹಯ್ದ)


ಗಮಿನಿಸಿ:
1.ಅಜೊ =  ಹಯ್ದ + ಓ ( ಹ ಕಾರ ಬಿದ್ದೋಗಿರುವುದರಿಂದ) = ಅಯ್ದ+ಓ ( ದ->ಜ)=> ಅಯ್ ಜೊ => ಅಜೊ
2. ಕಜೊ = ಕಣ್ ( ಗಣ್ ಡಿನ ಮೊದಲ ರೂಪ) + ಹಯ್ದ ==> ಕಣ್+ ಜೊ = ಕಜೊ


3. ಕಣ್ =>(ಕ --> ಗ) ಗಣ್ => ಗಣ್+ಡು =ಗಣ್ಡು=> ಗಂಡು
4. ಪೆಣ್=> ಹೆಣ್+ಣು => ಹೆಣ್ಣು


ಶಂಕರ ಬಟ್ಟರ ಮತ್ತು ಕೆ.ವಿ.ನಾರಾಯಣರ ಹೊತ್ತಿಗೆ/ಬರಹಗಳಿಂದ ಕಲಿತ ಅರಿಮೆಗಳನ್ನು ಒರೆಗೆ ಹಚ್ಚುವ ಮೊಗಸು.
ಒಟ್ಟಿನಲ್ಲಿ ಎಲ್ಲಾ ಆಡುನುಡಿಗಳ ಸೊಲ್ಲರಿಮೆಯನ್ನು ವಿವರಿಸುಬಹುದು..ಯಾವ ಆಡುನುಡಿ ಕೀಳಲ್ಲ :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಓರೆಗೆ ಹಚ್ಚುವ >> ಒರೆಗೆ ಹಚ್ಚುವ ಎಂದಗಬೇಕಲ್ವಾ ಇದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹವ್ದು ...ತಿದ್ದಿದ್ದೀನಿ. ..ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏಂಜ ನಮ್ಮೂರ ಬಾಸೆ ಮೇಲೆ ಸಂಸೋದ್ನೆ ಮಾಡ್ತಿದ್ಯೆ. ಮಾಡು ಸಿವ ಮಾಡು, ಇನ್ನು ಏನೇನ್ ಬರ್ದಿಯೆ ನೋಡುಮ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರತ, ಉತ್ತಮ ಗಮನಿಸುವಿಕೆ. ಬರಹಕ್ಕೆ ಧನ್ಯವಾದಗಳು. ............. ಅಜ ಅನ್ನೋ ಪದಕ್ಕೆ ಸಂಬಂಧಿಸಿದಂತೆ ... ನಮ್ಮೂರ ಭಾಷೆಗೂ ಮಂಡ್ಯ ಸುತ್ತಮುತ್ತಲಿನ ಭಾಷೆಗೂ ಅಜಗಜಾಂತರ ವ್ಯತ್ಯಾಸ. ನಮ್ಕಡೆ "ಹ" ಬಿದ್ದು ಹೊಗಿಲ್ಲದಿದ್ದರೂ ಹೈದ ಪದ ಗೂತೆ ಇಲ್ಲವೇನೋ ಅನ್ನುವಷ್ಟು ಬಳಕೆ ಕಡಿಮೆ. ನಾವೂ "ಹುಡುಗು" ಭಾಷೆಯಲ್ಲಿ ಅಜ ಅಂತ ಮತ್ತೆ ಮತ್ತೆ ಬಳುಸ್ತೀವಿ. ಏನ್ ಶಿವ, ಏನು ಗುರು ಅನ್ನೋ ರೀತಿನೇ ಏನಜ ನಮ್ಮಲ್ಲಿ ಸಹಜ! ನನ್ನ ಇದುವರೆಗಿನ ತಿಳುವಳಿಕೆ ಪ್ರಕಾರ ಅಜ ದ ಮೂಲ ( ಕಡೆ ಪಕ್ಷ ನಮ್ಮಲ್ಲಿ ) ಹೈದ ಅಲ್ಲ. ಗುರು , ಶಿವ ಅನ್ನೋ ರೀತಿನೇ ಅಜ ಅಂತ ನನ್ನೆಣಿಕೆ. ಅತ್ವ ಇದು "ಅಜ್ಜ" (< ಆರ್ಯ) ನ ಬದಲಾದ ರೂಪವೂ ಇರಬಹುದು. ಆದರೆ ಯಾರೂ ಅಜ್ಜ ಅಂತ ಜ ಗೆ ಒಟ್ಟು ಕೊಟ್ಟು ಮಾತಾಡಿರೋದು ನಾ ಕಾಣೆ. ........................... ವೆಂಕಟ ಸುಬ್ಬಯ್ಯನವರ ಓರೆಗಂಟಿನ ಪ್ರಕಾರ ಅಜ ನಾಮಪದ (ಸಂ) ೧ ಪರಮಾತ್ಮ ೨ ಜೀವ ೩ ಬ್ರಹ್ಮ ೪ ವಿಷ್ಣು ೫ ಶಿವ ೬ ಸೂರ್ಯ ೭ ಚಂದ್ರ ೮ ಮನ್ಮಥ ೯ ಹೋತ ೧೦ ಟಗರು ೧೧ ಮೇಷ ರಾಶಿ ಅಜ ಗುಣವಾಚಕ (ಸಂ) ಹುಟ್ಟು ಇಲ್ಲದ ................. ಅಜ ಅಂದರೆ ಆಡು ಅನ್ನೋ ಅರ್ಥವೂ ಇದೆಯಾದರೂ ಅದು ಇಲ್ಲಿ ಹೊಂದಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಮನಿಸಿ: ಗೆಜ್ಜ/ದ್ದಲು, ಇದ್ದಿ/ಜ್ಜಿಲು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.