’ತುಳು’ವಿನ ಹುಟ್ಟು

5

ಡಾ| ಪಾದೂರು ಗುರುರಾಜ ಬಟ್ಟರು ಬರೆದಿರುವ ’ತುಳುನಾಡು’ ಹೊತ್ತಿಗೆ ಓದುತ್ತಿದ್ದೆ. ಅವರು ತುಳುವಿನ ಹುಟ್ಟಿನ ಬಗ್ಗೆ ಹೇಳಿರುವುದು:-


 "..."ತುಳು" ಎಂಬ ಪದವು ’ತುರು’ವಿನ ಪರ್ಯಾಯ ಪದವಾಗಿ ಬಂದಿರುವುದೆಂದೂ, ಕನ್ನಡದಲ್ಲಿ ’ತುಱು’ವೆಂದರೆ ದನ, ಗೋವು ಅಂತೂ ಆಕಳು ಎಂಬ ತಿಳಿವು ಇರುವುದೆಂದೂ ಹೇಳಿದ್ದಾರೆ.’ಱ’ "ಳ’ಗಳ ಉಲಿಕೆಯಲ್ಲಿ ಬೇರೆತನ ಹೋಗಿರುವುದರಿಂದ ತುರು ಪದವು ’ತುಳು’ ಎಂದು ಮಾರ್ಪಾಟು ಹೊಂದಿದೆ. ಈ ಮಾರ್ಪಾಟಿಗೆ ಸಾದ್ಯತೆಯೂ ಇದೆ. ತುರುಗಳೆ ಹೆಚ್ಚಾಗಿರುವ ನಾಡು ತುರುನಾಡು, ಅದೇ ತುಳುನಾಡು. ತುರುಗಳನ್ನು ಸಾಕುವವರು, ಅವುಗಳನ್ನು ಹೊಂದಿದವರು ತುರುಕಾರರು(ತುರುವರು) ಅವರೇ ತುಳವರೆಂದು ಹೆಸರನ್ನು ಪಡೆದರು. ಅವರ ನಾಡು ’ತುಳವ’ವಾಯಿತು. ತುರುವರ ನಾಡು ತುಳುನಾಡಾಯ್ತು...."


ಅಂದರೆ ’ತುಳು’ ಕನ್ನಡ ಪದವಾದ ’ತುಱು’ ಎಂಬುದರಿಂದ ಹುಟ್ಟಿತು ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ.


ಈ ವಿವರಣೆ ಶಂ.ಬಾ.ಜೋಶಿಯವರು ಕನ್ನಡದ ಹುಟ್ಟಿಗೆ ಕೊಟ್ಟ ವಿವರಣೆಯನ್ನೇ ಅನುಸರಿಸಿದಂತಿದೆ:-


ಕನ್ನರು, ಅವರ ನುಡಿ ಕಂನುಡಿ(ಕಂನಡ), ಅವರ ನಾಡು ಕಂನಾಡು. "ಕಳ್"(ಹಾಲು, ಕಳ್ಳಿ- ಹಾಲು ಒಸರಿಸುವ ಗಿಡ) => ’ಕನ್’/ಕಣ್ ( ಹಿಂದಿನ ನೊಳ ->ಇಂದು ನೊಣ ಆದಂಗೆ) ಆಗಿ ಕನ್ನರು ಅಂದರೆ ಹಾಲುಮತದವರು. ಅಂದರೆ ಹಯ್ನುಗಾರಿಕೆ ಅವರ ಮೊದಲ ಕಸುಬೆಂದು ಹೇಳಿದ್ದಾರೆ. ಹೆಚ್ಚು ಕಮ್ಮಿ ತುರುಕಾರರೆ.


 ಅಂದರೆ ಕನ್ನಡಿಗರ/ತುಳುವರ ಮೂಲ ಕಸುಬು ಹಸು ಸಾಕುವುದು/ಹಾಲು ಕರೆಯುವುದು.


ಕೊನೆಯದಾಗಿ, ದ್ರಾವಿಡ ನುಡಿಗಂಟು ( ಇದಕ್ಕೆ ಸಮನಾಡ ತುಳು ಪದವನ್ನು ಕೊಟ್ಟಿಲ್ಲ ಎಂಬುದನ್ನ ಗಮನಿಸಿ)


http://dsal1.uchicago.edu/cgi-bin/philologic/getobject.pl?c.1:1:949.burrow


 Ka. tuṟu cow, kine; toṟu, tuṟupu, turuhu = tuṟu (Gai, Historical Grammar of Old Kannada, index); tuṟukāṟa cowherd, owner of cows; tuṟuvaḷa, tuṟuvāḷa cowherd

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಭರತ್ ಕುಮಾರ್ (ವೈಭವ), ಒಳ್ಳೆಯ ವಿಚಾರಗಳನ್ನು ತಿಳಿಸಿದಿರಿ. ಧನ್ಯವಾದಗಳು. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೈಭವರವರೆ , ಹೊಸ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ತಮಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡ ಕಾರ ಳ ಕಾರ ಆಗೋದು ಸಾಮಾನ್ಯ. ಅದರಲ್ಲೂ ಸಂದಿ ಸಮಾಸ ಆಗೋ ಸಮಯದಲ್ಲಿ ಇದು ಕಂಡುಬರುತ್ತೆ.


ಕಾಡು + ಕಿಚ್ಚು > ಕಾಳ್ಗಿಚ್ಚು ಇತ್ಯಾದಿ ಅನೇಕವು!


.........ಳ ಕಾರ ಱ ಎರಡೂ ಮೂರ್ಧನ್ಯಗಳೇ ಆದ್ದರಿಂದ ರ ಕಾರ ಳ ಕಾರವಾಗಿರಲೂ ಸಾಧ್ಯವಿದೆ.  ಆದರೂ ರ ಕಾರ ಳ ಕಾರ ಆಗೋದರ ಬಗ್ಗೆ ಕೆಲ ಉದಾಹರಣೆ ಹಂಚಿಕೊಳ್ಳಿ!


 ’ಱ’ "ಳ’ಗಳ ಉಲಿಕೆಯಲ್ಲಿ ಬೇರೆತನ ಹೋಗಿರುವುದರಿಂದ ತುರು ಪದವು ’ತುಳು’ ಎಂದು ಮಾರ್ಪಾಟು ಹೊಂದಿದೆ.


ಇಲ್ಲಿ ಏನೋ ಮಿಸ್ ಹೊಡಿತಾ ಇದೆ ಅನ್ಸುತ್ತೆ. ರ ಮತ್ತು ಱ (ಶಕಟ ರೇಫ )     ಗಳ ಬೇರೆತನ ಹೋಗಿದೆ. ಕುಳ ಮತ್ತು ’ಱಳ" ಗಳ ಬೇರೆತನ ಹೋಗಿದೆ. ಆದರೆ  ’ಱ’ "ಳ’ಗಳ ನಡುವೆ ಬೇರೆತನ ಇಂದಿಗೂ ಉಳಿದುಕೊಂಡು ಬಂದಿದೆ. 
  

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡ ಕಾರ ಳ ಕಾರ ಆಗೋದು ಸಾಮಾನ್ಯ. ಅದರಲ್ಲೂ ಸಂದಿ ಸಮಾಸ -- ಸರಿ ಆದರೆ ಳ(ೞ್)-->ಡ(’ಟ’ ವರ್ಗ) ಕಾಲಾನುಕ್ರಮದಲ್ಲಿ ಆಗಿರೋದಕ್ಕೆ ಮಾದರಿ ಇದೆ. ನೊಳ -> ನೊಣ, ಕಳ್-->ಕಣ್(ಕನ್) ಮಾೞ್ಪು --> ಮಾಡು ಮಾೞ್ಪುದು --> ಮಾಡುವುದು ಆದರೆ ಱ್(ರ್) - ಳ್ ಉಲಿಕೆಯಲ್ಲಿ ಬೇರೆತನ ಹೋಗಿರುವುದಕ್ಕೆ ಕನ್ನಡದಲ್ಲಿ ಮಾದರಿಗಳಿಲ್ಲ.. ಆದರೆ ತುಳುವಿನಲ್ಲಿ ಹೇಗಿದೆ ಗೊತ್ತಿಲ್ಲ. ಆದ್ದರಿಂದ ನಾನು ಗುರುರಾಜಬಟ್ಟರ ವಿವರಣೆಯನ್ನು ಸದ್ಯಕ್ಕೆ ಒಪ್ಪಿಕೊಂಡಿದ್ದೇನೆ. ತುಳು ಹೆಚ್ಚು ಗೊತ್ತಿರುವವರು ಹೇಳಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಳ ಕಾರ, ಟ ವರ್ಗದ ಅಕ್ಷರವಾಗಿ ಬದಲಾಗಿರೋದು ಸರಿ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟ ವರ್ಗ ದ ಅಕ್ಷರಗಳು ಮೂರ್ಧನ್ಯಗಳು. ರ, ಳ ಗಳೂ ಮೂರ್ಧನ್ಯಗಳೇ!. ಈ ತರ್ಕದಿಂದ ( ನಮಗೆ ಉದಾಹರಣೆ ಸಿಕ್ಕದೆ ಇದ್ದರೂ ) ರ ಕಾರ ಳ ಕಾರವಾಗಿದೆ ಅಂತ ತರ್ಕಿಸಬಹುದು. ..................... ನಿಮ್ಮನ್ನು ಸಂಪರ್ಕಿಸೋದು ಹೇಗೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರ ಬಗ್ಗೆ ಕೆಲವು ಹೊಳಹುಗಳು ಮತ್ತು ಎತ್ತುಗೆಗಳು:- http://dsal1.uchicag... Ta. vār̤ai plantain(A banana tree bearing hanging clusters of edible angular greenish starchy fruits; tropics and subtropics), Musa paradisiaca. Ka. bār̤e ( ಬಾಱೆ/ಬಾೞೆ) Tu. bārè, bāḷè (ಬಾರೆ, ಬಾಳೆ) ಮೇಲಿನ ಕನ್ನಡ/ತುಳು ಪದಗಳನ್ನು ವನ್ನು ಗಮನಿಸಿ ಎರಡು ಪದಗಳಿಗೆ ಬಾರೆ/ಬಾಱೆ= ಬಾಳೆ/ಬಾೞೆ ಇರುವ ತಿಳಿವು ’banana' ಅಂತಾನೆ. ಕೆಲವು ಪ್ರದೇಶಗಳಲ್ಲಿ ’ರ್’ ಇದ್ದರೆ ಇನ್ನು ಕೆಲವು ಪ್ರದೇಶಗಳಲಿ ’ಳ್’ ಇರಬೋದು. ಇಲ್ಲಿ ಸಿಗುತ್ತೇನೆ. ಮಿಂಚೆ: ybharath77@gmail.com http://ybhava.blogsp... ಕೊ.ಕೊ: ಬಾಳೆ ಎಂಬು ಮೀನು ಕೂಡ ಇದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಳು ಎಂದರೆ ತಿಳಿ. ಹಾಗೆಯೇ ತೆಲುಗು. ನೀಕು ತೆಲಿಯದಾ. ಅಂದರೆ ಸ್ಪಷ್ಟ. ತಿಳಿಯಾದ ಎಂದರ್ಥ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೞಗನ್ನಡದ ೞ್ ತುಳುವಿನಲ್ಲಿ ರ್ ಆಗುತ್ತದೆ. ಪುೞು=ಪುರಿ, ಬಾೞೆ=ಬಾರೆ ಬಾೞೆಯ ಪೞಂ= ಬಾರೆದ ಪರಂದು ಗುೞಿ=ಗುರಿ=ಗುಂಡಿ/ತಗ್ಗು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.