ಡಾ. ರಾಜ್ ಇಲ್ಲಿ ತಪ್ಪಿದ್ದಾರೆಯೇ ?

4.5

ಕವಿರತ್ನ ಕಾಳಿದಾಸ ಚಿತ್ರದ "ಮಾಣಿಕ್ಯ ವೀಣಾ ಉಪಲಾಲಯಂತಿ" ಹಾಡನ್ನು ಡಾ.ರಾಜ್ ಹಾಡಿದ್ದಾರೆ. ಸಂಪೂರ್ಣ ಸಂಸ್ಕೃತದಲ್ಲಿರುವ ಈ ಹಾಡನ್ನು ಅಷ್ಟು ಸ್ಪಷ್ಟವಾಗಿ, ಅಮೋಘವಾಗಿ ಹಾಡಿದ್ದಾರೆ.
ಮೊದಲನೆಯ ಚರಣದಲ್ಲಿ
"ಚತುರ್ಭುಜೆ ಚಂದ್ರಕಲಾವತಂಸೆ
ಕುಚೋನ್ನತೆ ಕುಂಕುಮ ..."

ಹೀಗೆ ಸಾಗುತ್ತದೆ ಹಾಡು. ಅದು ಚತುರ್ಭುಜೆ "ಚಂದ್ರಕಲಾವತಂಸೆ" ಯೋ ಅಥವಾ "ಚಂದ್ರಕಲಾವಸಂತೆ " ಯೋ ತಿಳಿಯಲಿಲ್ಲ. ಇಷ್ಟು ದಿನ ನಾನು "ಚಂದ್ರಕಲಾ ವಸಂತೆ" ಎಂದೇ ತಿಳಿದಿದ್ದೆ. ನಿನ್ನೆ ಕೇಳುವಾಗ ಈ ಪದ ನನ್ನ ಗಮನ ಸೆಳೆಯಿತು.
"ಚಂದ್ರಕಲಾವತಂಸೆ" ಎಂದರೆ ಏನು ಎಂದು ನನಗೆ ಗೊತ್ತಿಲ್ಲ. ಇದು ಸರಿಯಾದ ಪ್ರಯೋಗವೇ ಅಥವಾ ರಾಜಣ್ಣ ತಪ್ಪು ಹೇಳಿದರೆ ಗೊತ್ತಿಲ್ಲ. ತಪ್ಪು ಹೇಳಿದ್ದರೂ ಟಿ.ಜಿ. ಲಿಂಗಪ್ಪನವರಂತಹ ಸಂಗೀತ ನಿರ್ದೇಶಕರು ಸುಮ್ಮನಿರಲಾರರು. ಅಥವಾ "ಚಂದ್ರಕಲಾವತಂಸೆ" ಎಂದರೆ ಬೇರೆ ಅರ್ಥ ಇರಬೇಕು.

ಸಂಪದದಲ್ಲಿ ಅನೇಕ ವಿದ್ವಜ್ಜನರನ್ನು ಕಂಡಿದ್ದೇನೆ. ಯಾರಾದರೂ ದಯವಿಟ್ಟು ಉತ್ತರಿಸಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಾಳಿದಾಸರ ಶ್ಯಾಮಲಾ ದಂಡಕ ನೋಡಿದಾಗ ಅಣ್ಣಾವ್ರು ಸರಿಯಾಗಿ ಹೇಳಿದ್ದಾರೆ.

http://www.sthothrarathnas.com/shyamala_dandakam
http://www.celextel.org/stotrasdevi/shyamaladandakam.html
http://www.hindupedia.com/en/Shyamala_Dandakam

ಶ್ಯಾಮಲಾ ದಂಡಕ ಪುಸ್ತಕದಲ್ಲೂ ಹೀಗೆ ಇದೆ. ಅರ್ಥ ನನಗೆ ತಿಳಿದಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನ೦ದಕುಮಾರ್ ರವರೆ

ನಾನು ಈ ಶ್ಲೋಕಗಳ ಮೂಲ ಹುಡುಕುತ್ತಿದ್ದೆ ಬಹಳ ದಿನಗಳಿ೦ದ. ಇದು ಶ್ಯಾಮಲ ದ೦ಡಕ ಎನ್ನುವ ಮಾಹಿತಿ ನೀಡಿದ್ದಕ್ಕೆ ಬಹಳ ಧನ್ಯವಾದಗಳು

ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಪ್ರಕಾರ ಕಾಳಿದಾಸರಿಗೆ ಸರಸ್ವತಿ ಒಲಿದಾಗ ಈ ಶ್ಲೋಕವನ್ನು ರಚಿಸಿರಬಹುದು. ಇದು ಬಹಳ ಉದ್ದದ ಶ್ಲೋಕ ಮಾಲೆ. ಅಣ್ಣಾವ್ರ ಚಿತ್ರದಲ್ಲಿ ಹಾಡಿದ್ದು ಶ್ಯಾಮಲಾ ದಂಡಕದ ಕೆಲ ಭಾಗಗಳು ಮಾತ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎರಡೂ ಪದಗಳ ತಿರುಳು ನಿಮಗೆ ತಿಳಿದಿಲ್ಲ. ಆದರೂ ರಾಜಣ್ಣ ತಪ್ಪಾಗಿ ಹಾಡಿದ್ದಾರೆಯೇ ಅನ್ನುವ ಅನುಮಾನ ಯಾಕೆ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.