ಇವುಗಳ ಕೂಡುಒರೆ/ಸಮಾಸದ ಬಗೆ/ವಿಧ ತಿಳಿಸಿ ?

0

೧) ಮರಗಾಲು
೨) ಹತ್ತಾರು
೩) ಅರಿಕೆನಾಯಕ
೪) ಮಲ್ಲಿಗೆಹೂವು
೫) ಮೂಗೇಟು( moogEtu)
೬) ನೂರಡಿ
೭) ಒಳ್ಳೆಗೆಳೆಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಸಮಾಸ ಬಿಡಿಸೋದು ಅಲುವಾಟ ತಪ್ವೋಗಿದೆ. ಒಂದು ಕೈನೋಡ್ತೀನಿ.. :)

ಮರಗಾಲು = ಮರದ ಕಾಲು( ಮರಕ್ಕಿರುವ ಕಾಲಲ್ಲ :) ) = ಮರದಿಂದ ಮಾಡಿರುವ ಕಾಲು ಇಲ್ಲಿ ಮರ ಅನ್ನೋದು ಗುಣವಾಚಕ ಅದಕ್ಕೆ ಇದು ಕರ್ಮಧಾರಯ!

ಹತ್ತಾರು = ಹತ್ತು ಇಲ್ವೇ ಆರು = ದ್ವಿಗು;ದ್ವಂದ್ವ( ದ್ವಂದ್ವ ಸರಿ ಅನ್ನಿಸ್ತದೆ )

ಅರಿಕೆನಾಯಕ = ಅರಿಕೆಯ/ಅರಿಕೆಗೆ ನಾಯಕ = ತತ್ಪುರುಷ; ಅರಿ ಸಮಾಸ ( ಅರಿಕೆ ಕನ್ನಡ, ನಾಯಕ ಸಕ್ಕದ )
ಮಲ್ಲಿಗೆಹೂವು = ಮಲ್ಲಿಗೆಯ ಹೂವು = ತತ್ಪುರುಷ
ಮೂಗೇಟು = ಇದು ಏಟಗಳಲ್ಲಿ ಒಂದು ಬಗೆ, ಇಲ್ಲಿ ಮೂಗ್ ಇದು ಒಂದು ಗುಣವಾಚಕ ಅದಕ್ಕೆ ಕರ್ಮಧಾರಯ

ನೂರಡಿ = ನೂರು + ಅಡಿ = ದ್ವಿಗು

ಒಳ್ಳೆಗೆಳೆಯ = ಒಳ್ಳೆಯ ಗೆಳೆಯ = ಒಳ್ಳೆಯ ಗುಣವಾಚಕ = ಕರ್ಮಧಾರಯ

ಸರಿಯಾ?? ( ಪಾಪ ಹಲವರಿಗೆ ಇದು boring :) )

ಸರಿ ಇವಕ್ಕೆ ಹೇಳಪ್ಪ..!!

ಅತ್ಯಂತ, ಹಲವಣ್ಣು, ಕಡೆಗಣ್ಣು, ಬಾನಂಚು, ಮೇಲ್ಗೈ, ತುಂಟಾಟ!! :)

ಅಯ್ಯೋ ಮಾರಾಯ!!

ವಿಗ್ರಹ ಮಾಡಿ ಸಮಾಸದ ಹೆಸರು ಹೇಳಬೇಕು!!

ನೀವು ಸಮಾಸದ ಹೆಸರೇ ಹೇಳಿಲ್ಲ, ಅದೇ ಮುಕ್ಯ!

"ಇವುಗಳ ಕೂಡುಒರೆ/ಸಮಾಸದ ಬಗೆ/ವಿಧ ತಿಳಿಸಿ ?" ಅಂತ ಇರೋದು!

ಹಲವು ಹಣ್ಣು - ಹಲವಣ್ಣು - ದ್ವಿಗು ಸಮಾಸ
ಕಡೆ ಕಣ್ಣು - ಕಡೆಗಣ್ಣು - ಅಂಶಿ ಸಮಾಸ
ಬಾನ ಅಂಚು - ಬಾನಂಚು -ಅಂಶಿ ಸಮಾಸ
ಮೇಲ್ ಕೈ - ಮೇಲ್ಗೈ-ಅಂಶಿ ಸಮಾಸ
ತುಂಟ ಆಟ - ತುಂಟಾಟ. - ಕ್ರಿಯಾ ಸಮಾಸ
ಅತ್ಯಂತ - ?