ಕುಂಬಳಕಾಯಿ ಮರದಲ್ಲಿಟ್ಟನೂ...ನಮ್ಮ ಶಿವಾ!

4.833335

 ಕುಂಬಳ ಬಳ್ಳಿಯೊಂದು ನನ್ನ ನೆಂಟರ ಮನೆಯ ತೋಟ ತುಂಬಾ ಹಬ್ಬಿ, ಬಿಲ್ವಮರವನ್ನೂ ಏರಿ, ಅಲ್ಲಿ ಕಾಯಿಗಳನ್ನು ಬಿಟ್ಟಿದ್ದನ್ನು ನೋಡುವಾಗ, "ಅಪ್ಪು ಹಾಡು (ನೆಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ, ಕುಂಬಳಕಾಯಿ..)" ನೆನಪಾಯಿತು.
 ಒಂದು ಕಾಯಿ ಎತ್ತಿಕೊಂಡು ಹತ್ತು ನಿಮಿಷ ನಿಂತಿದ್ದಾಗ ಕೈ ನೋವು ಆಗಲು ಪ್ರಾರಂಭಿಸಿತು...ಆ ಬಳ್ಳಿ...ಆ ಎತ್ತರದಲ್ಲಿ.......ಆ ಮುಳ್ಳಿನ ಮರದಲ್ಲಿ... ಕುಂಬಳದ ಭಾರವನ್ನು ಹೊತ್ತುಕೊಂಡಿರುವುದು ನೋಡಿದಾಗ ಮತ್ತೊಂದು ಹಳೇ ಹಾಡು ನೆನಪಾಯಿತು-"ಬಳ್ಳಿಗೆ ಕಾಯಿ ಭಾರವೇ..ಹೆತ್ತ ತಾಯಿಗೆ ಮಗುವು ಭಾರವೇ..."
 ಈ  ದಸರಾ/ದೀಪಾವಳಿ ಹಬ್ಬಕ್ಕೆ ಬೆಂಗಳೂರಲ್ಲಿ ಪಟಾಕಿಗಿಂತ ಕುಂಬಳ ವ್ಯಾಪಾರನೇ ಭರ್ಜರಿಯಾಗಿತ್ತು. ಬೆಂಗಳೂರಿಗರು ಹಬ್ಬ ಮಾಡುವುದರಲ್ಲಿ, ಮಾರನೇ ದಿನ ಕಸದ ರಾಶಿ ಹಾಕುವುದರಲ್ಲಿ, ನಂತರ ಅದನ್ನೇ ನೋಡಿ ಬಿಬಿಎಮ್‌ಪಿಯನ್ನು ತೆಗಳುವುದರಲ್ಲಿ ಎತ್ತಿದ ಕೈ.  ಎಸೆದ ಬಾಳೆಯ ಗಿಡಗಳು, ಹೂಗಳು, ಕಡಿದ ಕುಂಬಳಕಾಯಿ ರಾಶಿ,ರಾಶಿ ಬಿದ್ದಿರುವುದನ್ನು ನೋಡುವಾಗ ಬೇಸರವಾಗುವುದು. ಪೂಜೆ ಮಾಡಿದ ತೆಂಗಿನಕಾಯಿ, ಬಾಳೆಹಣ್ಣು ಎಲ್ಲ ಉಪಯೋಗಿಸುವರು-ಅದೇ ಕುಂಬಳಕಾಯಿ ಒಡೆದು ಕುಂಕುಮ ಇತ್ಯಾದಿ ಹಾಕಿ ಎಸೆಯುವರು.
ಔಷಧಿಯಾಗಿಯೂ ( http://www.himalayawellness.com/herbfinder/benincasa-hispida.htm ) ಆಹಾರವಾಗಿಯೂ (  http://savioota.blogspot.in/2009/03/kumbalakai-sambar.html , http://www.ruchiruchiaduge.com/2010/10/kumbalakayi-halwa-kashi-halwa.html ) ಬಹಳ ಉಪಯುಕ್ತವಾದ ಕೂಷ್ಮಾಂಡ(ಬೂದುಗುಂಬಳ- http://kanaja.in/archives/45765) ವನ್ನು ದೇವರ ಹೆಸರಲ್ಲಿ ( http://www.boldsky.com/yoga-spirituality/faith-mysticism/2013/story-of-d... ) ಕೊಲ್ಲಬೇಡಿ..( http://kannada.oneindia.com/literature/articles/2007/1910-pumkins-pooje-... )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಗುರುತ್ವಾಕರ್ಷಣೆ ವಿರುದ್ಧ ಭಾರ ಸಹಿತ ಕುಂಬಳ ಕಾಯಿ ಮರದಲ್ಲಿ ನೇತಾಡುತ್ತಿರುವುದು ನೋಡಿ ಅಚ್ಚರಿಯೂ ಖುಷಿಯೂ ಆಯಿತು..ಈ ತರ್ಹದ್ದನ್ನು ತಮ್ಮ ಹಿತ್ತಲಲ್ಲಿ ಮನೆ ಮುಂದೆ ಬೆಳೆಯುವ ಸಹೃದಯಿ ಜನ ಇರುವರಲ್ಲ ಅಂತ...
ಕುಂಬಳ ಕಾಯಿ ಎಂದಾಗ -ಒಂದು ಗಾದೆ ನೆಂಪಿಗೆ ಬರುತ್ತೆ ಹಾಗೂ ಚಿತ್ರ ಒಂದರ ಸನ್ನಿವೇಶ (ಶಂಕರ್ ನಾಗ್ ಅವರ ಸಾಂಗ್ಲಿಯಾನ ಇರ್ಬೇಕು-ಅಥವಾ ಸೀ ಬಿ ಐ ಶಂಕರ್ ) ಕುಂಬಳಕಾಯಿಯಲ್ಲಿ ಬಾಂಬು ಉಂಟು ಎನ್ನುವ -ದಿನೇಶ್ ಅವರ ಹಾಸ್ಯ ಸನ್ನಿವೇಶ ....!! ಹಾಗೆಯೇ ಬಹು ಹಿಂದೆ ನಮ್ಮೂರಲ್ಲಿ ಬಯಲಾಟ ಆಡುವಾಗ ಪ್ರತಿ ಒಂದು ಪಾತ್ರ ಬರುವಾಗ ತೆಂಗಿನ ಕಾಯಿ ಹೊಡೆಯುವರು-ಅವುಗಳನ್ನು ಆರಿಸಿ ಒಂದು ಚೀಲದಲ್ಲಿ ಹಾಕಿ ಮನೆಯಲ್ಲಿ ಒಣಗಿಸಿ ಬೆಲ್ಲ ಸೇರಿಸಿ ಕುಟ್ಟಿ ತಿನ್ನುತ್ತಿದ್ದ್ವು-ಬಯಲಾಟದ ಅಂತ್ಯದಲ್ಲಿ ಒಂದು ಕುಂಬಳಕಾಯಿಯನ್ನು ಹೊಡೆಯುವರು (ನಿವಾಳಿಸಿ) ಅದನ್ನೂ ಅವರು ನನಗೆ ಹೊಯ್ಯಲು ಕೊಟ್ಟರು-ಮನೆಗೆ ತಂದು ಗಂಟೆ ಆಗಿಲ್ಲ -ಆಗಲೇ ಮೈ ಎಲ್ಲ ಸುಡು ಸುಡು ಜ್ವರ-ಇದಕ್ಕೆ ಆ ನಿವಾಳಿಸಿದ ಕುಂಬಳ ಕಾಯಿ ಕಾರಣ ಎಂದರು ಮನೆಯವರು-ಆಮೇಲೆ ಮಾತ್ರ ತಂತ್ರ ತಾಯಿತ ಹಾಕಿಸಿ ಸರಿ ಮಾಡಿದರು..!!
ಗಣೇಶ್ ಅಣ್ಣಾ ಅವರ ಗಮನ ಯಾವಾಗಲೂ 'ವಿಶೇಷ'ವಾದುದರತ್ತ.....!!
ಮುಂದಿನ ವಿಶೇಷ ಬರಹಕ್ಕೆ ಕಾಯುತ್ತಿರುವೆವು...
ನನ್ನಿ
ಶುಭವಾಗಲಿ
\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ತಾನಾಗಿಯೇ ಹುಟ್ಟಿ ಬೆಳೆದು ಮರಕ್ಕೆ ಹಬ್ಬಿದ ಒಂದೇ ಕುಂಬಳ ಬಳ್ಳಿಯಲ್ಲಿ ೨೫ ಕುಂಬಳಕಾಯಿ ಆಗಿತ್ತು (ಇದಕ್ಕೆ ಸೆಗಣಿಯ ಸ್ಲರಿ ಬಿಟ್ಟು ಬೇರೇನೂ ಗೊಬ್ಬರ ಹಾಕಿರಲಿಲ್ಲ). ಇದರಲ್ಲಿ ಎರಡು ಕುಂಬಳಕಾಯಿ ಈಗಲೂ ಇದೆ. ಅದೇ ರೀತಿ ಈ ವರ್ಷವೂ ಕುಂಬಳ ಬಳ್ಳಿ ಮರಕ್ಕೆ ಹಬ್ಬಿದ್ದು ನಾಲ್ಕೈದು ಕುಂಬಳಕಾಯಿ ಬೆಳೆಯುವ ಹಂತದಲ್ಲಿದೆ. ಇದಕ್ಕೆ ಯಾವುದೇ ಗೊಬ್ಬರ ಹಾಕಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಣಕಲ ಬಳ್ಳಿ ಮರವೇರಿ ೨೫ ಕುಂಬಳಕಾಯಿ ಹೊತ್ತುಕೊಂಡಿತ್ತು ಕೇವಲ ಸಗಣಿ ಬಲದಲ್ಲಿ.
ಕುಂಬಳಕಾಯಿ ಬಗ್ಗೆ ಇನ್ನೂ ಕೆಲ ಮಾಹಿತಿ- http://mumbai-magic.blogspot.in/2008/07/my-intimate-connections-with-ash...http://www.thehindu.com/2001/09/06/stories/0806002b.htm

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿನೇಶ್ "ಕುಂಬಳಕಾಯಿ" ಹಾಸ್ಯ ಪ್ರಸಂಗ :) :) ಮರೆಯಲು ಸಾಧ್ಯವಿಲ್ಲ. ಹಾಗೇ ನಿಮ್ಮ ಕುಂಬಳಕಾಯಿ ಪ್ರಕರಣವೂ ಚೆನ್ನಾಗಿತ್ತು. :)
ಮುಂದಿನ (ವಿಶೇಷ ಅಲ್ಲ) ಸಚಿತ್ರ ಬರಹ- ದೇವನಹಳ್ಳಿ ಕೋಟೆ,ಜಮಲಾಬಾದ್ ಕೋಟೆ ಸೆರೆಹಿಡಿದಿದ್ದೆ(ಕ್ಯಾಮರದಲ್ಲಿ). ಈಗ ಕರಾವಳಿ ತೀರದ ಕೋಟೆಗೆ ನನ್ನ ಸೈನ್ಯದೊಂದಿಗೆ ಧಾಳಿ ಮಾಡಿದ್ದೆ! ಸೆರೆಹಿಡಿದೂ ಆಯಿತು. ಯಾರದ್ದು ಕೋಟೆ ಇತ್ಯಾದಿ ವಿವರ ಸಂಗ್ರಹಿಸುತ್ತಿರುವೆ :). ಸದ್ಯದಲ್ಲೇ..
ಕ್ಲೂ : ತೂ..ಹೀ...ರೇ.....ತೂ..ಹೀ....ರೇ.... ತೆರೆ ಬಿನಾ ಮೈ ಕೈಸೆ ಜಿಯೂಂ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇ- ಬೇ ಕಲ್ಲ್ ಕೋಟೆ......!!
ನಮ್ಮವರು ಅಲ್ಲಿ ಮಪ್ತಿಯಲ್ಲಿರುವರು..!!
\|||/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) >>ನಮ್ಮವರು ಅಲ್ಲಿ ಮಪ್ತಿಯಲ್ಲಿರುವರು..!!
-ಮಫ್ತಿ ಜನ ಬೇಕಲ್ ಕೋಟೆ ಸೌಂದರ್ಯ ಸವಿಯುವುದರಲ್ಲಿ ಮಗ್ನ.!!.......ನಾನು ಹೋಗಿ ಬಂದುದು ಅವರಿಗೆ ಗೊತ್ತೇ ಆಗಲಿಲ್ಲಾ...:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಜಿ ನಮಸ್ಕಾರ, ನಿಮ್ಮ ಮರವನೇರಿದ 'ಕುಂಬಳ' ಮಹಿಮೆ ಓದುತ್ತ ಈ ಕುಂಬಳ ಎಷ್ಟೊಂದು ಗಾದೆಗಳನ್ನ, ನಾಣ್ಣುಡಿಗಳನ್ನು ಸುಳ್ಳು ಮಾಡಲೆ ಹುಟ್ಟಿದೆಯೇನೊ ಅನಿಸಿಬಿಟ್ಟಿತು (1. ಆಳು ನೋಡಿದರೆ ಆಕಾರ, ಬಾಳು ನೋಡಿದರೆ ಭಂಡ ಬಾಳು, 2. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು, 3. ಅಟ್ಟ ಹಾರದ ಬಡ್ಡಿ ಬೆಟ್ಟ ಹಾರ್ಯಾಳೆ? ಇತ್ಯಾದಿ). ನಿಮ್ಮ ಹಾಗೆಯೆ ನನಗೂ ಅಪ್ಪು ಹಾಡಿನ ಜೊತೆಗೆ ಪಂಡರಿಬಾಯಿಯವರ ನಟನೆಯ ಅದೇ ಹಾಡನ್ನು ನೆನಪಿಸಿತು (ಧರಣಿಗೆ ಗಿರಿ ಭಾರವೆ, ಗಿರಿಗೆ ಮರವು ಭಾರವೆ, ಬಳ್ಳಿಗೆ ಕಾಯಿ ಭಾರವೆ? ಹೆತ್ತ ತಾಯಿಗೆ ಮಗುವು ಭಾರವೆ...). ನಮ್ಮಲ್ಲೂ ಕುಂಬಳಕಾಯಿ ಆರಾಮವಾಗಿ ಸಿಗುವುದಾದರು, ಬರಿ ಅಡುಗೆಯ ತರಕಾರಿಯಾಗಿ ಮಾತ್ರ - ದೃಷ್ಟಿ ತೆಗೆದು, ರಸ್ತೆಯಲ್ಲಿ ಒಡೆಯುವಂತಿಲ್ಲ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ದೃಷ್ಟಿ ತೆಗೆದು, ರಸ್ತೆಯಲ್ಲಿ ಒಡೆಯುವಂತಿಲ್ಲ :-) ಈ "ದೃಷ್ಟಿ" ಬಾಧೆ ನಮ್ಮಲ್ಲೇ ಜಾಸ್ತಿ. ಯಾರನ್ನಾದರೂ ಹೊಗಳುವಾಗ, ಅಥವಾ ಮಗುವನ್ನು ಮೆಚ್ಚುವಾಗಲೂ ಜಾಗ್ರತೆಯಿರಬೇಕು. ಮಾರನೇದಿನ ಅವರಿಗೆ ಜ್ವರ... ಬಂದರೆ ನಿಮ್ಮ "ದೃಷ್ಟಿ" ದೋಷ!
ಕೆಟ್ಟ "ದೃಷ್ಟಿ" ಬಗ್ಗೆ - https://in.answers.yahoo.com/question/index?qid=20100306052305AAzASVQ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮಲ್ಲಿ ನಾಗರಿಕ ಪ್ರಜ್ಞೆ ಎಂದು ಮೂಡೀತು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜರೆ, ಸಾಧ್ಯ...ಆದರೆ ಸಮಯ ಬೇಕು. ನಮ್ಮ ರಕ್ತದಲ್ಲೇ ಅಂಟಿದ ಚಟ ಬಿಟ್ಟು ಹೋಗುವುದಿಲ್ಲ. ಕೆಲ ವರ್ಷಗಳ ಹಿಂದೆ( ಈಗಲೂ ಸಹ ಸ್ಕೂಲ್‌ಡೇ ಡ್ಯಾನ್ಸ್ಗಳಲ್ಲಿ) ದೇಶ ಭಕ್ತಿ ಗೀತೆಯಂತೆ ಈ ಹಾಡು ಹಿಟ್ ಆಗಿತ್ತು- Suno gaur sey duniya walon buree najar naa humpe dalo..! ಬುರೀ ನಜರ್ ನಮ್ಮ ಮೇಲೆ ಹಾಕಬೇಡಿ ಎಂದು ವಿಶ್ವಕ್ಕೇ ಹೇಳಲಿಲ್ಲವೆ!:)
ವಿಧಾನಸೌಧದ ಎದುರು, ಮಂಗಳೂರಲ್ಲೂ..ಕೆಲ ವರ್ಷಗಳ ಹಿಂದೆ ಕುಂಬಳ+ಕುಂಕುಮ ಎಲ್ಲಾ ಚೆಲ್ಲಿ ಮಾಟ ಇತ್ಯಾದಿ ಮಾಡಿದ್ದರಲ್ಲ. ನಿರ್ಲಕ್ಷಿಸುವ ಬದಲು ವಿಚಾರವಂತರು ಇದರ ಬಗ್ಗೆ ಜನಸಾಮಾನ್ಯರಿಗೆ ಅರಿವಾಗುವಂತೆ ಇನ್ನಷ್ಟು ವಿವರಿಸಿ ಹೇಳುವುದು ಒಳ್ಳೆಯದು- http://sampada.net/article/18286

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.