ಮಿರ ಮಿರ ಮಿರುಗುವ ಮೋಹದ ಮೋರೆ....

4

 

ಮಿರ ಮಿರ ಮಿರುಗುವ ಮೋಹದ ಮೋರೆ 
ಹಣ್ಣಾಗಲಿದೆ ಮಣ್ಣಾಗಲಿದೆ 
ನಾಳೆಗೆ ನೀರೆ! ಆ ಕಥೆ ಬೇರೆ !
 
ನಗುವಿನ ರೂಪದ ಮಾಯೆಯ ಜಾಲ 
ಸೊಬಗನು ಸಾರುವ ತೊಗಲಿನ ಚೀಲ 
ತೂಗುತ ಹಾರುವ ಹೆರಳಿನ ಮಾಲ 
ಮೊಗದಲಿ ಉಳಿಸದು ಕರಾಳ ಕಾಲ! 
 
ಹುಂಬನ  ಮಾಡುವ ಸಿಹಿ ಸಿಹಿ ಸೊಲ್ಲ 
ಹಂಬಲವಿಲ್ಲದೆ  ಅಡುಗುವುದಲ್ಲ!
ಚುಂಬಕವಾಗಿಹ  ಸಪೂರ ಗಲ್ಲ 
ಚುಂಬನವೊಂದನು ಪಡೆವುದೆ  ಇಲ್ಲ!
 
ಎಲೆ ಎಲೆ ನೀರೆ 
ವಯಸದು ಜಾರೆ 
ಉಳಿಯುವುದೊಂದೆ ಒಲವಿನ ಮೇರೆ!
 
ಅಂಕೆಯಲಿರಲಿ ರೂಪಿನ ಮೋಹ!
ತಿಳಿಯದೆ ನಿನಗೆ?!
ಅಷ್ಟಾವಕ್ರನ ಮೋಹಿತೆ  ಅವಳೇ,
ಸುಂದರಿ  ಕುವರಿ!
ಹೇಳುವುದಿನ್ನೇನಿದೆ ಬೇರೆ!
ಮಿರ ಮಿರ ಮಿರಗುವ ಮೋಹದ ಮೋರೆ 
ಹಣ್ಣಾಗಲಿದೆ ಮಣ್ಣಾಗಲಿದೆ 
ನಾಳೆಗೆ ನೀರೆ!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು