ಶ್ರೀಕೃಷ್ಣ ಕನ್ನಡಿಗನೇ?

3.57143

http://sampada.net/blog/savithru/06/12/2008/14402    ಇಲ್ಲಿಂದ ಮುಂದುವರೆದು...

 

ಮಹಾಭಾರತ ರಾಮಾಯನಗಳಸ್ಟು ಇಲ್ಲಿಯವರೆಗೆ ಬೇರೆ ಯಾವ ಕಾವ್ಯಗಳೂ ಜನಜನಿತವಾಗಿಲ್ಲ. ಸಾವಿರಾರು ವರುಷಗಳ ಹಿಂದೆ ಬರೆಯಲಾಗಿರುವ ಮಹಾಕಾವ್ಯಗಳು ಅಷ್ಟೇ ಏಕೆ ಕನ್ನಡದ ಕಾವ್ಯಗಳೂ ಮಹಾಭಾರತ ಕಥೆಯಷ್ಟು ವ್ಯಾಪಕ ಪ್ರಚಾರ ಹೊಂದಿಲ್ಲ. ಜನರ ಬಾಯಲ್ಲಿ ಹರಿದಾದುವಷ್ಟು ಜನಪ್ರಿಯತೆ ಇದೆ ಎಂದರೆ ಈ ಕಥೆಗಳಿಗೆ ಜನಪದ ಹಿನ್ನೆಲೆ ಇರಬೇಕು ಅಂತ ನನ್ನ ಊಹೆ. ಉಪಖಂಡ ಆದ್ಯಂತ ಈ ಕಥೆಗಳು ಬಹುತೇಕ ಒಂದೇ ರೀತಿ ಪ್ರಚಲಿತ ಇರುವುದನ್ನು ನೋಡಿದರೆ ಇದು ನಡೆದ ಘಟನೆಯ ಆಧಾರದ ಮೇಲೆಯೇ ಹುಟ್ಟಿದ ಕಥೆಗಳಿರಬೇಕು. ಹಾಗಾಗಿ ಮಹಾಭಾರತ ಇತಿಹಾಸ/ನಡೆದ ಘಟನೆ ಎಂದೇ ನನ್ನ ಅನಿಸಿಕೆ. ಇದಲ್ಲದೆ ಮಹಾಭಾರತ ನಡೆದ ಘಟನೆ ಎನ್ನುವುದಕ್ಕೆ ಎಸ ಆರ್ ರಾವ್ ಅವರ ಸಂಶೋಧನೆಗಳನ್ನು ಮತ್ತು ಭೈರಪ್ಪನವರ ಪರ್ವ ಕಾದಂಬರಿಯ ಮುನ್ನುಡಿಯ ಟಿಪ್ಪಣಿ ಗಳಲ್ಲಿ ರೆಫರಬಹುದು.

 ಮಹಾಭಾರತ 'ನಡೆದ ಘಟನೆ' ಎಂದಾದ ಮೇಲೆ ಕೃಷ್ಣಾ ದೈವಾಂಶ ಸಂಭೂತ ಎನ್ನುವ ಪ್ರಶ್ನೆ ಏಳುವುದಿಲ್ಲ. ಸಾಧಾರಣ ಮನುಷ್ಯನಾಗಿ ಹುಟ್ಟಿ ತನ್ನ ಅಸಾಧಾರಣ ಸಾಧನೆಯಿಂದ ದೈವತ್ವಕ್ಕೆ ಏರಿದವನು.

೩ಕಂಸನಂತಹ ಮಹಾ ಬಲಶಾಲಿ ಅರಸನ ಸೆರೆಮನೆಯಿಂದ ಮನುಷ್ಯನೊಬ್ಬ ತನ್ನ ಕೈಯ್ಯಲ್ಲಿ ಮಗುವನ್ನು ಎತ್ತಿಕೊಂಡು ಊರನ್ನು ದಾಟಿ ಯಮುನಾ ನದಿಯನ್ನು ದಾಟಿ ಯಾರಿಗೂ ಕಾಣದಂತೆ ಮಗುವನ್ನು ಬದಲ್ಲ್ಯಿಸಿಕೊಂಡು ಬರುವುದು ಕಥೆಯಲ್ಲಿ ಮಾತ್ರ ಸಾಧ್ಯ. ನೂರಾರು ಸೈನಿಕರು ಗಸ್ತು ತಿರುಗುವ ಸೆರೆಮನೆ ದಾಟಿ, ರಾಜಧಾನಿಯ ರಸ್ತೆಗಳ ಮೂಲಕ ಖೈದಿ ಊರು ದಾಟಿ ಹೋಗುವುದು ಅಸಾಧ್ಯವೇ ಸರಿ. ಹಾಗಾಗಿ ಕೃಷ್ಣ ವಸುದೇವನಿಗೆ ಹುಟ್ಟಿ ಸೆರೆಮನೆಯಿಂದ ತಪ್ಪಿಸಿಕೊಂಡು ಹೊರಹೋಗಿ ನಂದ ಗೋಕುಲದಲ್ಲಿ ಬೆಳೆದ ಎಂಬುದು ಕಟ್ಟು ಕಥೆಯಂತೆ ಭಾಸವಾಗುತ್ತದೆ. ಅಲ್ಲದೆ ತನ್ನನ್ನು ಕೊಳ್ಳುವವ ತನ್ನದೇ ರಾಜ್ಯದಲ್ಲಿ ಬೆಳೆಯುವುದು ತಿಳಿದೂ ಕೃಷ್ಣನನ್ನು ಕೊಲ್ಲಿಸುವುದು ಕಂಸನಿಗೆ ದೊಡ್ಡ ವಿಷಯವೇನೂ ಆಗಿರಲಿಲ್ಲ. ಅವನ ಸೈನ್ಯದಲ್ಲಿ ಒಂದು ಭಾಗ ಈ ಕೆಲ್ಸಕ್ಕೆ ಸಾಕಾಗಿತ್ತು! ಹಾಗಾಗಿ ಇತಿಹಾಸವೆಂದು ತಿಳಿದು ನೋಡುವಾಗ ಕೃಷ್ಣನ ಇರುವಿಕೆಯ ಅರಿವು ಕಂಸನಿಗೆ ಇರಲಿಲ್ಲ ಎಂದೇ ತೋರುತ್ತದೆ.

             ಕೃಷ್ಣ ಹಾಗಿದ್ದರೆ ಹುಟ್ಟಿದ್ದು ಯಾದವ ಕುಲದಲ್ಲಿ. ಹಾಲು ಮಾರುವವರ ಕುಲದಲ್ಲಿ! ಆಗ ಯಾದವರು ಅನಾರ್ಯರೆ ಆಗಿದ್ದರು.

            ಸಾಮಾನ್ಯವಾಗಿ ಕಂಡುಬರುವ ಕೃಷ್ಣನ ಚರ್ಯೆಯನ್ನು ನೋಡೋಣ .. ಕಪ್ಪು ಬಣ್ಣ ಗುಂಗುರು ಕೂದಲು.ಕೃಷ್ಣ ಅಜಾನುಬಾಹು, ದೊಡ್ಡ ದೇಹದವನು ಎಂಬ ವರ್ಣನೆಗಳು ಎಲ್ಲೂ ಸಿಗವು. ಹಾಗಾಗಿ ಕೃಷ್ಣ ಕುಳ್ಳ ಸಣಕಲ ಎಂದುಕೊಳ್ಳಲಾಗದಿದ್ದರೂ ಕವಿಗಳು ವರ್ಣಿಸಬಲ್ಲಂತಹ ದೈತ್ಯ ದೇಹಿಯಾಗಿರಲಿಲ್ಲ ಎಂಬುದು ತಿಳಿದು ಬರುತ್ತದೆ. ಆದರೆ ಪಾಂಡವರ ದೇಹದ ಬಗ್ಗೆ ಬಣ್ಣನೆಗಳಿವೆ.ಕುಂತಿಯ ಬಣ್ನ ದೊಡ್ಡ ದೇಹದ ಬಗ್ಗೆ ಹೇಳಿಕೆಯಿದೆ. ಕನ್ನಯ್ಯನ ಬಗ್ಗೆ ಇಲ್ಲ. ಕೃಷ್ಣನ ದೇಹದ ಬಹುತೇಕ ವರ್ಣನೆಗಳು ನಿಗ್ರಾಯಿಡಲ್ ಚರ್ಯೆಯನ್ನು (ನಿಗ್ರಾಯಿಡಲ್ + ಕಕೇಶಿಯನ್) ಹೋಲುತ್ತವೆ. ಮೂಲ ದ್ರಾವಿಡರು ನಿಗ್ರಾಯಿಡಲ್ ಹೋಲಿಕೆ ಇರುವವರು ಎಂದು ಹೇಳಲಾಗುತ್ತದೆ.. ಶಂ ಭಾ ಜೋಷಿ ಯವರ ಪ್ರಕಾರ ಮೂಲತಃ ಕನ್ನಡಿಗರು ಹಾಲು ಮಾರುವ ಕಸುಬಿನವರಿರಬೇಕು. ಕಳ್ ಎಂಬುದರಿಂದ ಕನ್ ಆಗಿ ಕನ್ನಡ ಹುಟ್ಟಿದೆ ಎಂಬುದು ಅವರ ಪ್ರತಿಪಾದನೆ . ಇದನ್ನು ನಾವು ನಂಬುವುದರಿಂದ, ಕೃಷ್ಣ ಆಡುಭಾಷೆಯಲ್ಲಿ ಕನ್ನಯ್ಯ ಆಗಿರುವುದರಿಂದ, ಅವನು ಹಾಲು ಮಾರುವ ಕುಲದವನಾದುದರಿಂದ ಕನ್ನಡಿಗನಿರಬೇಕು. ಅಥವಾ ಕೃಷ್ಣ ಹುಟ್ಟಿದ ಕುಲ ಮುಂದೆ ದ್ರಾವಿಡ ನುಡಿಯ ಕವಲುಗಳಲ್ಲಿ ಕನ್ನಡವನ್ನು ಅಪ್ಪಿಕೊಂಡಿರಬೇಕು.

                     ತನ್ನ ಗುಂಪನ್ನು ಸೇರಿಸಿ ಕಂಸನ ಮೇಲೆ ದಂಗೆಯೆದ್ದು ಗೆದ್ದೋ ಅಥವಾ ಕಥೆಗಳಲ್ಲಿ ಹೇಳಿರುವಂತೆ ಪಂದ್ಯದಲ್ಲಿ ಗೆದ್ದೋ ಕಂಸನನ್ನು ಕೆಳಗಿಳಿಸಿ ಉಗ್ರಸೆನನನ್ನು ಪಟ್ಟಕ್ಕೆ ಕೂರಿಸಿ ವಸುದೇವನನ್ನು ಬಿಡುಗಡೆ ಮಾಡಿದಾಗ ಕೃತಜ್ಞತೆ ಗಾಗಿ ಅಸ್ಸ್ಥಾನದಲ್ಲಿ ಕನ್ನಯ್ಯನು ಒಳ್ಳೆಯ ಸ್ಥಾನಮಾನವನ್ನು ಪಡೆದಿರಬೇಕು. ವಾಸುದೇವ ಅವನನ್ನು ತನ್ನ ಮಗನೆಂದು ಘೋಶಿಸಿರಲಿಕ್ಕೂ ಸಾಕು. ಇಲ್ಲಿಂದ ಕನ್ನಯನಿಗೆ ಪಾಂಡವರ ಸಂಬಂಧ ಬೆಳೆದಿರಬೇಕು ಹಾಗೂ ಕಂಸನಂತಹ ಬಲಶಾಲಿಯನ್ನು ಉರುಳಿಸಿದ ಕನ್ನಯ್ಯನ ಬಗ್ಗೆ ಪಾಂಡವರಿಗೆ ಭಕ್ತಿ ಬೆಳೆದಿರಬಹುದು. ಬಹುಷಃ ಕೃಷ್ಣನನ್ನು ದೇವರೆಂದು ಪೂಜಿಸುವ ಪರಿಪಾಠ ಇಲ್ಲಿಂದ ಆರಂಭವಾಗಿರಬಹುದು. ಕೃಷ್ಣನಿಗೆ ಸ್ಥಾನಮಾನ ದೊರೆಯಿತೇ ಹೊರತು ರಾಜನ ಪಟ್ಟ ಸಿಗಲಿಲ್ಲ (ಬಹಷಃ ಕ್ಷತ್ತಿಯನಲ್ಲದ್ದರಿಂದ?) ದ್ವಾರಕೆಗೆ ತೆರಳಿದ ಮೇಲೂ ಬಲರಾಮ ರಾಜನಾಗಲಿಲ್ಲ. ಉಗರಸೇನ ರಾಜನಾದ.

                   ಕೃಷ್ಣನ ಯುದ್ಧ ತಂತ್ರಗಳನ್ನು ನೋಡಿದರೆ ಅವು ಕ್ಷತ್ರಿಯ ತಂತ್ರಗಳೇ ಅಲ್ಲ. ಅವನ 'ರಣಚೋರ' ಪಾಲಿಸಿಯನ್ನು ಅವನ ಹಿಂದಿನ ಮತ್ತು ಮುಂದಿನ ಕ್ಷತ್ರಿಯರಾರೂ ಪಾಲಿಸಲಿಲ್ಲ. ಕ್ಷತ್ರಿಯರು ಎಲ್ಲದಕ್ಕಿಂತ ಮುಖ್ಯವಾಗಿ ಗರಿಮೆಗಾಗಿಯೇ ಹೊಡೆದಾಡುತ್ತಾರೆ. ಕೃಷ್ಣ ಬಹುತೇಕ ಸಮಯಗಳಲ್ಲಿ ಮುಂದೆ ನಿಂತು ಹೋರಾಡಿಲ್ಲ. ಸಾರಥಿಯಗುವಾಗಲೂ ಅವನಿಗೆ ಕ್ಷತ್ರಿಯನೆಂಬ ಹೆಮ್ಮೆ ಅಡ್ಡ ಬರಲಿಲ್ಲ. ಶಲ್ಯರನ್ನು ಬಿಟ್ಟರೆ ಒಬ್ಬನೇ so callded ಕ್ಷತ್ರಿಯ ಕೃಷ್ಣ.

                  ಧರ್ಮ ಕರ್ಮಗಳ ವಿಚಾರಕ್ಕೆ ಬಂದರೆ ಸುಯೋಧನ ನ್ಯಾಯಯುತವಾಗಿಯೇ ಪಟ್ಟಕ್ಕೇರಿದ್ದ. ಮನೆತನದ ಹಿರಿಯನ ಹಿರಿಮಗನೇ ರಾಜನಾಗಬೇಕಿತ್ತು. ( ಈ ವಾಕ್ಯ ತಪ್ಪಿದ್ದರೆ ಹಿಂತೆಗೆದುಕೊಳ್ಳುತ್ತೇನೆ) ಆದರೆ ಯುಧಿಷ್ಟಿರನಿಗೆ ಚುಚ್ಚಿ ಪಟ್ಟಕ್ಕೇರಲು ಹುರಿದುಂಬಿಸಿದ. ಭಗವದ್ಗೀತೆಯಲ್ಲಿ ಮಾನವ ಸಹಜವಾದ ತಪ್ಪುಗಳಿವೆ. ಇದರ ಬಗ್ಗೆ ಸಾಕಷ್ಟು ಜನ ಬುದ್ದಿಜೀವಿಗಳೆಂದು ಪಟ್ಟ ಪಡೆದವರು ಚರ್ಚಿಸಿದ್ದಾರೆ. ಸಂಬಂಧಿಕರನ್ನು ಕೊಲ್ಲಲು ಹಿಂಜರಿದ ಅರ್ಜುನನಿಗೆ ಬೋಧಿಸಿ ಯುದ್ಧಕ್ಕೆ ಅಣಿಗೊಳಿಸಿದ.

               ಮಹಾಭಾರತ ಯುದ್ಧದ ಬಗೆಗೆ ಹೆಳುವುದಾದರೆ ಅದೊಂದು ಅಪಾರ ಸಾವು ನೋವುಗಳಿಗೆ ಕಾರಣವಾದ ಯುದ್ಧವೇ ಸರಿ. ತಮಿಳು ಮಲಯಾಳಗಳ ಕೃತಿಗಳಲ್ಲಿ ಮಹಾಭಾರತದ ಹೆಚ್ಚಿನ ಚರ್ಚೆ ಇಲ್ಲ. ಹಾಗಾಗಿ ಆ ಜನಪದರು ಮಹಾಭಾರತದ ಸಮಯದಲ್ಲಿ ಹೆಚ್ಚಿನ ಆಸಕ್ತಿ ತೋರಿರರಿಲ್ಲ ಎನಿಸುತ್ತದೆ. ಯುದ್ಧದಲ್ಲಿ ಎರಡೂ ಕಡೆಯೂ ಅಪಾರ ಸಾವು ನೋವುಂಟುಗಳಾದವು. ಪಾಂಡವರ ಕಡೆ ಪಾಂಡವರು ಸಾತ್ಯಕಿ ಕೃಷ್ಟ ನಂತಹ ಕೆಲವೇ ಕೆಲವರು ಉಳಿದರೆ ಕೌರವರ ಕಡೆ ಕೃಪ, ಅಶ್ವತ್ಥಾಮನಂತಹ ಕೆಲವರು ಉಳಿದರು. ಯಾದವರು ಮಹಾಭಾರತ ಯುದ್ಧದಲ್ಲಿ ನಾಶ ಹೊಂದದೆ ನಂತರ ನಡೆದ ಯಾದವೀ ಕಲಹದಲ್ಲಿ ನಾಶವಾದರು. ಸಮಸ್ತ ಸೇನೆ ನಾಶವಾದ ಸಮಯದಲ್ಲಿ ಯಾದವರು ಮಾತ್ರ ಹೇಗೆ ಉಳಿದರು ಎಂಬುದು ಪ್ರಶ್ನೆಯಾಗಿಯೆ ಉಳಿಯುತ್ತದೆ.

           ಕೃಷ್ಣನ ಆಯುಧ ಚಕ್ರ. ಇದೂ ಒಂದು ಆಯುಧವೇ? ದೈವತ್ವವನ್ನು ಅವಲಂಬಿಸಿದರೆ ಆಯುಧವಾಗಿ ತೋರಬಹುದು. ನಾವಿಲ್ಲಿ ಸಾಮಾನ್ಯ ಮನುಷ್ಯನಾಗಿ ಕಣ್ಣನನ್ನು ನೋಡುತ್ತಿರುವಾಗ ಚಕ್ರ ಎಂಬುದು ಯಾತಕ್ಕೂ ಬಾರದ ಆಯುಧ. ಅವನ ಏಕೈಕ ಆಯುಧ ಬುದ್ಧಿ. ಬಲರಾಮನ ಆಯುಧ ನೇಗಿಲು.

           ಹಾಗಾಗಿ ಕೃಷ್ಣ ದ್ರಾವಿಡನೇ ಇರಬೇಕು ಎಂಬುದು ನನ್ನ ತರ್ಕ. ಮಹಾಭಾರತ ಯುದ್ಧದ ನಂತರ ದೈವ ಪಟ್ಟಕ್ಕೇರಿದ ಕೃಷ್ಣ ಕೆಳಜನಾಂಗದವನಾದರೆ ಸಹಿಸಲಾದೀತೆ? ಹಾಗಾಗಿ ಅವನನ್ನು ವಸುದೆವನ ಮಗನಾಗಿ ಕ್ಷತ್ರಿಯನಾಗಿ ಮಾಡಲಾಯಿತು. ದೈವಾಂಶ ಸಂಭೂತ ಎಂದು tag ಕೊಟ್ಟದ್ದರಿಂದ ಜೈಲಿನ ಕಥೆ ಹೆಣೆಯಲು ಸುಲಭವಾಯಿತು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅಲ್ಲಿಗೆ ನಿಮ್ಮ ಪ್ರಕಾರ .. ಗೌಳಿಗರು ( ಹಾಲು ಮಾರುವುದನ್ನೇ ಮೂಲ ಕಸುಬನ್ನಾಗಿ ಮಾಡಿಕೊ೦ಡವರು) ಈ ದೇಶದ ಎಲ್ಲೆಲ್ಲಿ ಇದ್ದಾರೋ ಅವರೆಲ್ಲರೂ ಕನ್ನಡಿಗರೇ ಅ೦ದ ಹಾಗೆ ಆಯ್ತು!!! ಹೌದೇ? ಕೃಷ್ಣ ಜೈಲಲ್ಲಿ ಹುಟ್ಟಿದ್ದು ಅಲ್ಲವೆ? ಮಹಾಭಾರತ ನಡೆದಿರುವುದು ಹೌದಾದರೆ.. ಆ ಜೈಲು ಎಲ್ಲಿತ್ತು? ಕೃಷ್ಣ ಕನ್ನಡ ಸೀಮೆಯಲ್ಲಿ ಹುಟ್ಟಿದ್ದಾದರೆ ಅವನು ಹುಟ್ಟಿದ ಕೂಡಲೇ ವಾಸುದೇವ ಯಶೋದೆಗೆ ನೀಡಿದ್ದು ಹೇಗೆ? ಅಷ್ಟು ದೂರ ದಕ್ಷಿಣದಿ೦ದ-ಉತ್ತರಕ್ಕೆ? ಹೋಗಲಿ... ಅಲ್ಲಿ ಹತ್ತಿರದಲ್ಲಿಯೇ ಜೈಲು ಇದ್ದು,ಒ೦ದು ಹತ್ತು ಯೋಜನ ಯಾ ಒ೦ದೆರಡು ದಿನಗಳ ಪ್ರಯಾಣದ ದೂರದಲ್ಲಿ ನ೦ದನ ಸೀಮೆ ಎ೦ದರೆ ನ೦ಬಬಹುದು.. ಕೃಷ್ಣನನ್ನು “ನೀಲಮೇಘ ಶ್ಯಾಮ“ ಎನ್ನುತ್ತಾರೆ.. ಅ೦ದರೆ ಕಪ್ಪು ಮತ್ತು ನೀಲಿ ಎರಡೂ ಮಿಶ್ರಿತ ಬಣ್ಣದವನೆ೦ಬ ಅರ್ಥವೆ೦ದಿರಬೇಕು... ಸ೦ಪೂರ್ಣ ಕಪ್ಪಲ್ಲ... ಬಹುಶ: “ಬ್ಲ್ಯಾಕ್ ಬ್ಲ್ಯೂ“ ಅಥವಾ “ಕಪ್ಪು ನೀಲಿ“ ಬಣ್ಣ... ಬಣ್ನದ ಮೇಲೆ ಜನಾ೦ಗವನ್ನು ಗುರುತಿಸುವುದಾದರೆ ಅಲ್ಲಿಗೂ ಅವನು ದ್ರಾವಿಡನಲ್ಲ.. ದ್ರಾವಿದ ಜನಾ೦ಗದವರು ಕಪ್ಪು...ಆರ್ಯರು ಬಿಳಿ ( ನಿಮ್ಮ ವಾದದ ಪ್ರಕಾರ) ಅಲ್ರೀ ಕ೦ಸ ಇದ್ದಿದ್ದು ಎಲ್ಲಿ ಸ್ವಾಮಿ? ಕೃಷ್ಣ ಹುಟ್ಟಿದ್ದು ಎಲ್ಲಿ ಸ್ವಾಮಿ? ಕನ್ನಡ ಸೀಮೆಯ ಯಾವುದಾದರೂ ಸ್ಠಳದಲ್ಲಿ ಆತ ಜನಿಸಿದ ಎ೦ಬುದಕ್ಕೇನಾದರೂ ದಾಖಲೆಗಳಿವೆಯೇ? ಯಾರದರೂ ಕೃಷ್ಣ ಹುಟ್ಟಿದ ಸ್ಠಳದ ಹೆಸರೇನಾದರೂ ಹೇಳಿದ್ದಾರೆಯೇ? ಅವನು ಕನ್ನಡಿಗನೆ೦ದರೆ ನನಗೂ ಹೆಮ್ಮೆಯೇ ... ಏಕೆ೦ದರೆ ಟೋಟಲಿ ನಮ್ಮವನೇ ಎ೦ಬ ಸ೦ತಸ... ಆದರೆ ಅವನ್ಯಾಕೋ “ಕನ್ನಡಿಗ“ ಎನ್ನಲು ನಿಮ್ಮಲ್ಲಿರುವ ಸಾಕ್ಷಾಧಾರಗಳು ಸಾಕಾಗವು! ಕುಮಾರಸ್ವಾಮಿ ಮೇಲೆ ಪುಕ್ಕಟೆ ಕೇಸು ಕೊಟ್ಟು ನ್ಯಾಯಾಧೀಶರಿ೦ದ ೧,೦೦,೦೦೦-೦೦ ದ೦ಡ ಕಕ್ಕುವ೦ತಾಗಬಾರದು..!!! ಎಲ್ಲಾ ಅಯುಧಗಳಿಗಿ೦ತ “ಚಕ್ರ“ ಸರ್ವಶೇಷ್ಟ.! ಏಕೆ೦ದರೆ ಚಕ್ರವು ಶೂನ್ಯವನ್ನು ಸಾ೦ಕೇತಿಸುತ್ತದೆ! ಶೂನ್ಯದಿ೦ದಲೇ ಎಲ್ಲವೂ ಆರ೦ಭ ಹಾಗೂ ಶೂನ್ಯದಲ್ಲಿಯೇ ಎಲ್ಲವೂ ಅ೦ತ್ಯವೆ೦ಬ ವಿಚಾರಲಹರಿಯನ್ನು ಮು೦ದಿಟ್ಟುಕೊ೦ಡರೆ ಚಕ್ರದಿ೦ದಲೇ ಆರ೦ಭ..ಚಕ್ರದಿ೦ದಲೇ ಅ೦ತ್ಯ.. ಅಲ್ಲಿಗೆ ಚಕ್ರವೇ ಸರ್ವಶೇಷ್ಠವೆ೦ದಾಯಿತಲ್ಲವೇ? ಮನೆಯ ಹಿರಿಮಗನೇ ರಾಜ್ಯವನ್ನಾಳುವವ ಎ೦ಬ ವಾದವನ್ನು ಒಪ್ಪತಕ್ಕದ್ದಾದರೂ.. ಒಮ್ಮೊಮ್ಮೆ ರಾಜ ತನ್ನ ಉತ್ತರಾಧಿಕಾರಿಯನ್ನು ಘೋಷಿಸುವ ಸ೦ಧರ್ಭಗಳೂ ಇದ್ದುದರಿ೦ದ ಅಯ್ಕೆಗಳಿದ್ದವು ಎ೦ದಾಯಿತು.. ಅಲ್ಲದೇ ಧರ್ಮ ಕರ್ಮಗಳ ಪ್ರಕಾರವೇ ಹೋದರೂ ( ಮದುವೆಗೆ ಮು೦ಚೆ ಹುಟ್ಟಿದ್ದಾದರೂ} ಕರ್ಣನೇ ಆಗಬೇಕಿತ್ತಲ್ಲ.. ಎಲ್ಲರಿಗೂ ಹಿರಿಯನಲ್ಲವೇ? ಆದ್ದರಿ೦ದ ಆ ವಾದವನ್ನು ಬಿಟ್ಟು ಬಿಡೋಣ... ಆರ್ಯರ ಆಕ್ರಮಣ ಹಾಗೂ ವಲಸೆ ಎ೦ಬ ವಾದವೇ ದಿಕ್ಕೆಟ್ಟು ಗೊ೦ದಲದಲ್ಲಿರುವಾಗ ( ಸ೦ಪೂರ್ಣವಾಗಿ ತಳ್ಳಿಯೂ ಹಾಕಲಾಗಿಲ್ಲ) ಈ ಆರ್ಯ ಮತ್ತು ಆನಾರ್ಯರ ಉಲ್ಲೇಖ ಬೇಡ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಲ್ಕು ಸಹಸ್ರಮಾನಗಳ ಹಿಂದಿನ ಇತಿಹಾಸವನ್ನು ಕೆದಕುವಾಗ ನಾಲ್ಕು ಸಾವಿರ ವರುಷಗಳ ಹಿಂದಿನ ಪರಿಸ್ಥಿತಿಯನ್ನು ಅವಲೋಕಿಸಬೇಕಾಗುತ್ತದೆ. ಒಂದೊಂದಾಗಿ ತಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. >>ಅಲ್ಲಿಗೆ ನಿಮ್ಮ ಪ್ರಕಾರ .. ಗೌಳಿಗರು ( ಹಾಲು ಮಾರುವುದನ್ನೇ ಮೂಲ ಕಸುಬನ್ನಾಗಿ ಮಾಡಿಕೊ೦ಡವರು) ಈ ದೇಶದ ಎಲ್ಲೆಲ್ಲಿ ಇದ್ದಾರೋ ಅವರೆಲ್ಲರೂ ಕನ್ನಡಿಗರೇ ಅ೦ದ ಹಾಗೆ ಆಯ್ತು!!! ಹೌದೇ?<< ನಿಮ್ಮ ತಂದೆ ವಿದ್ವಾಂಸರಾಗಿದ್ದರು. ನೀವು ಅಕೌಂಟೆಂಟ್. ನಿಮ್ಮ ಮಗ ಲಾಯರ್ ಆಗಬಹುದು. ನಿಮ್ಮ ಮೊಮ್ಮಗ ಮತ್ತೆ ಪಂಡಿತನಾಗಬಹುದು. ಕಾಲಕ್ಕೆ ತಕ್ಕಂತೆ ಜನರ ಉದ್ಯೋಗಗಳು ಬದಲಾಗುತ್ತವೆ. ನಿಮ್ಮ ತಂದೆಯ ಕಾಲದಲ್ಲಿ ನಿಮ್ಮ ಕುಟುಂಬದ ಉದ್ಯೋಗ ಬೋಧನೆ ಇತ್ಯಾದಿಗಳಾಗಿದ್ದವು. ಹಾಗೆಯೇ 5000 ವರುಷಗಳ ಹಿಂದೆ ಭಾಷೆಗಳು ರೂಪುಗೊಳ್ಳುವ ಸಂಧಿಕಾಲದಲ್ಲಿ ಕನ್ನಡಿಗರ ಕಸುಬು ಹಾಲುಮಾರುವುದಾಗಿತ್ತು ಎಂದುಕೊಳ್ಳಬಹುದು. ಕಳ್ ಎಂದರೆ ಹಾಲು ಕಳ್->ಕನ್->ಕನ್ನಡ ಆಗಿದೆ ಎಂಬುದನ್ನು ಶಂಭಾ ಜೋಶಿ ತಮ್ಮ ಸಂಶೋಧನೆಗಳಲ್ಲಿ ನಿರೂಪಿಸಿದ್ದಾರೆ. ಓದಬಹುದು. ಇನ್ನೊಂದು ಎತ್ತುಗೆ ಕೊಡಬೇಕೆಂದರೆ ದೆಹಲಿಯ ಸಾರ್ವಜನಿಕ ಶೌಚಾಲಯಗಳಲ್ಲಿ ತೊಳೆಯುವ ಕೆಲಸ ಮಾಡುತ್ತಿರುವವರಲ್ಲಿ ಶೇ60 ಬ್ರಾಹ್ಮಣರು. ಕಸುಬು ಬದಲಾಗುತ್ತಿರುತ್ತವೆ. ಇಂದಿನ ಸ್ಥಿತಿಗೇ ಎಲ್ಲವನ್ನೂ ಹೊಂದಿಸಲಾದು. >>ಕೃಷ್ಣ ಜೈಲಲ್ಲಿ ಹುಟ್ಟಿದ್ದು ಅಲ್ಲವೆ? ಮಹಾಭಾರತ ನಡೆದಿರುವುದು ಹೌದಾದರೆ.. ಆ ಜೈಲು ಎಲ್ಲಿತ್ತು? ಕೃಷ್ಣ ಕನ್ನಡ ಸೀಮೆಯಲ್ಲಿ ಹುಟ್ಟಿದ್ದಾದರೆ ಅವನು ಹುಟ್ಟಿದ ಕೂಡಲೇ ವಾಸುದೇವ ಯಶೋದೆಗೆ ನೀಡಿದ್ದು ಹೇಗೆ? ಅಷ್ಟು ದೂರ ದಕ್ಷಿಣದಿ೦ದ-ಉತ್ತರಕ್ಕೆ? ಹೋಗಲಿ... ಅಲ್ಲಿ ಹತ್ತಿರದಲ್ಲಿಯೇ ಜೈಲು ಇದ್ದು,ಒ೦ದು ಹತ್ತು ಯೋಜನ ಯಾ ಒ೦ದೆರಡು ದಿನಗಳ ಪ್ರಯಾಣದ ದೂರದಲ್ಲಿ ನ೦ದನ ಸೀಮೆ ಎ೦ದರೆ ನ೦ಬಬಹುದು..<< ಕೃಷ್ಣ ಜೈಲಲ್ಲಿ ಹುಟ್ಟಿ ಹೊರಗೆ ಹೋಗಿ ಬುದಕಿದ ಎಂಬುದನ್ನೇ ನಾನು ಪ್ರಶ್ನಿಸಿದ್ದೇನೆ. ಕಂಸನಂತಹ ಭಲಾಡ್ಯ ರಾಜನ ಸೆರೆಯಿಂದ ಊರನ್ನು ದಾಟಿ ಯಮುನೆಯನ್ನು ದಾಟಿ ಹೋಗುವುದ ಅಸಾಧ್ಯವೇ ಸರಿ. ಇದು ಕೃಷ್ಣನನ್ನು ದೈವತ್ವಕ್ಕೇರಿಸಲು ಕಟ್ಟಿದ ಕಥೆ ಎಂದು ನನ್ನ ಅನಿಸಿಕೆ. ಐದು ಸಾವಿ ವರುಷಗಳ ಹಿಂದೆ ದ್ರಾವಿಡರು ದೇಶದಾದ್ಯಂತ ಪಸರಿಸಿದ್ದರು ಎಂಬುದಕ್ಕೆ ಸಾಕಷ್ಟು ಕುರುಹುಗಳಿವೆ. ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸಿಗುವ ಬ್ರಹೂಯಿ ಭಾಷೆ, ಮದ್ಯಪ್ರದೆಶದ ಬುಡಕಟ್ಟುಗಳಲ್ಲಿ ಕನ್ನಡವನ್ನು ಹೋಲುವ ಭಾಷೆ ಇರುವುದು ಇದಕ್ಕೆ ಸಾಕ್ಷಿ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಎಮನ್ ಬರೋ ಅವರ ಸಂಶೋಧನೆಗಳ ಮೂಲಕ ತಿಳಿದುಕೊಳ್ಳಬಹುದು. ಹಾಗಾಗಿ ಕಂಸನ ರಾಜ್ಯದಲ್ಲಿ ದ್ರವಿಡ ಪ್ರದೇಶಗಳು ಇದ್ದಿರುವ ಸಾಧ್ಯತೆಗಳು ನಿಚ್ಚಳವಿದೆ. ಕೃಷ್ಣ ಹುಟ್ಟಿದ್ದು ಅದೇ ರೀತಿಯ ದ್ರವಿಡ ಪ್ರದೇಶದಲ್ಲಿ. >> ಚಕ್ರ ಶೂನ್ಯ ಸಂಕೇತ...ಇತ್ಯಾದಿ<<
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸಿಗುವ ಬ್ರಹೂಯಿ ಭಾಷೆ, ಮದ್ಯಪ್ರದೆಶದ ಬುಡಕಟ್ಟುಗಳಲ್ಲಿ ಕನ್ನಡವನ್ನು ಹೋಲುವ ಭಾಷೆ ಇರುವುದು ಇದಕ್ಕೆ ಸಾಕ್ಷಿ.>> ಮಧ್ಯಪ್ರದೇಶದಲ್ಲಿ ಕನ್ನಡವನ್ನು ಹೋಲುವ ಭಾಷೆ ಬಳಕೆಯಲ್ಲಿದ್ದರೂ ಅದು ಕನ್ನಡದ ಪೂರ್ವಜ ಭಾಷೆಯೇ... ಹಾಗೂ ತಥಾಕಥಿತ ಕನ್ನಡವೆನ್ನುವ ನಮ್ಮ ಭಾಷೆ ಆ ಭಾಷೆಯಿ೦ದಲೇ ಕವಲೊಡೆಯಿತೇ? ಎನ್ನುವ ಪ್ರಶ್ನೆಗಳೂ ಏಳುತ್ತವೆ!! ಕೃಷ್ಣನ ಭಾಷೆ ಯಾವುದು ಎ೦ಬುದರ ಬಗ್ಗೆ ಎಲ್ಲಿ ಆಧಾರವಿದೆ? >>ಕೃಷ್ಣ ಹುಟ್ಟಿದ್ದು ಅದೇ ರೀತಿಯ ದ್ರವಿಡ ಪ್ರದೇಶದಲ್ಲಿ. >> ದ್ರಾವಿಡರೆ೦ದರೆ ಕನ್ನಡಿಗರು ಮಾತ್ರವೇ? ಅಥವಾ ದ್ರಾವಿಡರ ಹಲವಾರು ಪ೦ಗಡಗಳಲ್ಲಿ ಕನ್ನಡಿಗರದೂ ಇದ್ದರೇ? ನೀವು ಬಳಸಿದ “ದ್ರಾವಿಡ“ ಪದ ಕುಲಸೂಚಕವೋ ಯಾ ಭಾಷಾ ಸೂಚಕವೋ? ಯಾವ ರೀತಿಯಲ್ಲಿದ್ದರೂ ನನ್ನ ಪ್ರಶ್ನೆ ಮಾತ್ರ ಒ೦ದೇ.... ನಿಮ್ಮ ಲೇಖನದಲ್ಲಿ ಬಳಸಲಾದ “ಅನಾರ್ಯ “ ಪದ ಯಾವ ಅರ್ಥದಲ್ಲಿ ಬಳಕೆಯಾಗಿದೆ? >>ಧರ್ಮರಾಜ ಸುಯೋಧನನಿಗಿಂತ ವಯಸ್ಸಲ್ಲಿ ದೊಡ್ಡವನು. ಹಿರಿಯ ರಾಜ ದೃತರಾಷ್ಟ್ರನ ಹಿರಿಯ ಮಗ ಸುಯೋಧನ. ಹಾಗಾಗಿ ಸುಯೋಧನನಿಗೆ ಪಟ್ಟ ದಕ್ಕಿದ್ದು ನ್ಯಾಯ>> ಇಲ್ಲಿಯೂ ಒ೦ದು ಎಡವಟ್ಟಿದೆ.. ದೊಡ್ಡಪ್ಪನ ಮಗನಾದರೂ ಚಿಕ್ಕಪ್ಪನ ಮಗನಾದರೂ ವಯಸ್ಸಿನಲ್ಲಿ ಹಿರಿಯವನು ಹಿರಿಯವನೇ... ತಮ್ಮನು ತಮ್ಮನೇ... ದೃತರಾಷ್ಟ್ರ ಹಿರಿಯವನಾದರೂ... ಮಕ್ಕಳಲ್ಲಿ ಧರ್ಮರಾಜ ದೊಡ್ಡವನು... ಹಾಗಿದ್ದ ಮೇಲೆ ಹಿರಿಯವನೇ ರಾಜನಾಗಬೇಕಲ್ಲವೇ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>ಮಧ್ಯಪ್ರದೇಶದಲ್ಲಿ ಕನ್ನಡವನ್ನು ಹೋಲುವ ಭಾಷೆ ಬಳಕೆಯಲ್ಲಿದ್ದರೂ ಅದು ಕನ್ನಡದ ಪೂರ್ವಜ ಭಾಷೆಯೇ... ಹಾಗೂ ತಥಾಕಥಿತ ಕನ್ನಡವೆನ್ನುವ ನಮ್ಮ ಭಾಷೆ ಆ ಭಾಷೆಯಿ೦ದಲೇ ಕವಲೊಡೆಯಿತೇ? ಎನ್ನುವ ಪ್ರಶ್ನೆಗಳೂ ಏಳುತ್ತವೆ!! ಕೃಷ್ಣನ ಭಾಷೆ ಯಾವುದು ಎ೦ಬುದರ ಬಗ್ಗೆ ಎಲ್ಲಿ ಆಧಾರವಿದೆ? << ಖಂಡಿತ! ಕನ್ನಡ ದ್ರಾವಿಡ ಭಾಷಾ ಕುಲಕ್ಕೆ ಸೇರಿದುದು ಎಂದು ಎಲ್ಲ ಭಾಷಾ ವಿದ್ವಾಂಸರೂ ಯಾವುದೆ ಅನುಮಾನಗಳಿಲ್ಲದೇ ಒಪ್ಪಿದ್ದಾರೆ. ಮದ್ಯಪ್ರದೇಶದ ಭಾಷೆ ಮತ್ತು ಬ್ರಹೂಯಿ ಭಾಷೆಗಳು ದ್ರಾವಿಡ ಕುಲಕ್ಕೆ ಸಂಬಂಧಿಸಿದ್ದು ಎಂದು ನಿರೂಪಿಸಲಾಗಿದೆ. ಇದರ ಬಗ್ಗೆ ಎಮನ್ ಬರೋ ಅವರ ಸಂಶೋಧನೆಗಳಲ್ಲಿ ತಾವು ಓದಬಹುದು. ಕೃಷ್ಣ ದ್ರವಿಡ ಕುಲದಲ್ಲಿ ಹುಟ್ಟಿದವನಾದುದರಿಂದ, ಅವನ ಕುಲವೃತ್ತಿ ಹಾಲು ಉತ್ಪಾದನೆಯಾದುದರಿಂದ ಶಂಭಾ ಜೋಶಿಯವರ ಸಂಶೋಧನೆಯ ಪ್ರಕಾರ ಕಳ್->ಕನ್->ಕನ್ನಡ ಆದುದರಿಂದ ಶ್ರೀಕೃಷ್ಣ ಜನಪದ ಆಡುಭಾಷೆಯಲ್ಲಿ ಕನ್ನಯ್ಯ (ಕನ್ನ->ಕನ್ನಯ್ಯ) ಆದುದರಿಂದ ಶ್ರೀಕೃಷ್ಣನ ತಾಯಿನುಡಿ ಕನ್ನಡ ಎಂಬುದು ನನ್ನ ಪ್ರತಿಪಾದನೆ. >>ನಿಮ್ಮ ಲೇಖನದಲ್ಲಿ ಬಳಸಲಾದ “ಅನಾರ್ಯ “ ಪದ ಯಾವ ಅರ್ಥದಲ್ಲಿ ಬಳಕೆಯಾಗಿದೆ?<< ಅನಾರ್ಯ ಎಂಬ ಪದವನ್ನು ಆರ್ಯರಲ್ಲದವರು ಎಂಬ ಅರಿಮೆಯಲ್ಲಿ ಬಳಸಿದ್ದೇನೆ. ಆರ್ಯರು ಹೊರಗಿನಿಂದ ಬಂದಿಲ್ಲ ಎಂದುಕೊಂಡರೂ ಆರ್ಯ ದ್ರಾವಿಡ ಎಂಬ ಎರಡು ಬೇರೆ ಬೇರೆ ಪಂಗಡಗಳಿದ್ದವು ಎಂಬುದು (ಕನಿಷ್ಠ ಪಕ್ಷ ಭಾಷೆಯ ಆಧಾರದಲ್ಲಿ) ತಿಳಿಯುತ್ತದೆ. ಆಗ ಸಮಾಜದ prominant ಭಾಗವಾಗಿದ್ದ ಆರ್ಯರಲ್ಲದ ಕುಲದಲ್ಲಿ ಕನ್ನಯ್ಯ ಹುಟ್ಟಿದ. >>ಇಲ್ಲಿಯೂ ಒ೦ದು ಎಡವಟ್ಟಿದೆ.. ದೊಡ್ಡಪ್ಪನ ಮಗನಾದರೂ ಚಿಕ್ಕಪ್ಪನ ಮಗನಾದರೂ ವಯಸ್ಸಿನಲ್ಲಿ ಹಿರಿಯವನು ಹಿರಿಯವನೇ... ತಮ್ಮನು ತಮ್ಮನೇ... ದೃತರಾಷ್ಟ್ರ ಹಿರಿಯವನಾದರೂ... ಮಕ್ಕಳಲ್ಲಿ ಧರ್ಮರಾಜ ದೊಡ್ಡವನು... ಹಾಗಿದ್ದ ಮೇಲೆ ಹಿರಿಯವನೇ ರಾಜನಾಗಬೇಕಲ್ಲವೇ? << ಈ ಧರ್ಮ ಸೂಕ್ಷ್ಮ ನನಗೆ ಗೊತ್ತಿಲ್ಲ. ಈಗಿನ ಲಾಜಿಕ್ ಪ್ರಕಾರ ಅಲ್ಲದೇ ಆಗಿನ ಧರ್ಮ ಆಚರಣೆಗಳ ಆಧಾರದಲ್ಲಿ ಯಾವುದು ಸರಿ ಎಂಬುದನ್ನು ನಾವು ನೋಡಬೇಕಿದೆ. ಈ ಅಂಶವನ್ನು ತೆಗೆದು ಹಾಕಿದರೂ ಕೃಷ್ಣ ದ್ರಾವಿಡನೆಂಬ ನನ್ನ ಹೇಳಿಕೆ ದುರ್ಬಲವಾಗದು ಎಂದು ನನ್ನ ಅನಿಸಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>ಖಂಡಿತ! ಕನ್ನಡ ದ್ರಾವಿಡ ಭಾಷಾ ಕುಲಕ್ಕೆ ಸೇರಿದುದು ಎಂದು ಎಲ್ಲ ಭಾಷಾ ವಿದ್ವಾಂಸರೂ ಯಾವುದೆ ಅನುಮಾನಗಳಿಲ್ಲದೇ ಒಪ್ಪಿದ್ದಾರೆ. ಮದ್ಯಪ್ರದೇಶದ ಭಾಷೆ ಮತ್ತು ಬ್ರಹೂಯಿ ಭಾಷೆಗಳು ದ್ರಾವಿಡ ಕುಲಕ್ಕೆ ಸಂಬಂಧಿಸಿದ್ದು ಎಂದು ನಿರೂಪಿಸಲಾಗಿದೆ. ಇದರ ಬಗ್ಗೆ ಎಮನ್ ಬರೋ ಅವರ ಸಂಶೋಧನೆಗಳಲ್ಲಿ ತಾವು ಓದಬಹುದು. ಕೃಷ್ಣ ದ್ರಾವಿಡ ಕುಲದಲ್ಲಿ ಹುಟ್ಟಿದವನಾದುದರಿಂದ, ಅವನ ಕುಲವೃತ್ತಿ ಹಾಲು ಉತ್ಪಾದನೆಯಾದುದರಿಂದ ಶಂಭಾ ಜೋಶಿಯವರ ಸಂಶೋಧನೆಯ ಪ್ರಕಾರ ಕಳ್->ಕನ್->ಕನ್ನಡ ಆದುದರಿಂದ ಶ್ರೀಕೃಷ್ಣ ಜನಪದ ಆಡುಭಾಷೆಯಲ್ಲಿ ಕನ್ನಯ್ಯ (ಕನ್ನ->ಕನ್ನಯ್ಯ) ಆದುದರಿಂದ ಶ್ರೀಕೃಷ್ಣನ ತಾಯಿನುಡಿ ಕನ್ನಡ ಎಂಬುದು ನನ್ನ ಪ್ರತಿಪಾದನೆ.>> ೧. ಮಹಾಭಾರತದ ಕಾಲವನ್ನು ಕ್ರಿ.ಪೂ ೩೦೦೦ ದಿ೦ದ ೫೦೦೦ ರದವರೆಗೆ೦ದು ಗುರುತಿಸುವುದಾದರೆ, ನಿಮ್ಮ ಪ್ರಕಾರ ಕನ್ನಡದ ಮೂಲ ಕ್ರಿ.ಪೂ. ೩೦೦೦ ವರ್ಷಗಳ ಹಿ೦ದೆ ಹೋದ ಹಾಗೆ ಆಯಿತು!! ಸರಿಯೇ...? ಭಾಷಾ ತಜ್ಞರ ಪ್ರಕಾರ ಕನ್ನಡದ ಮೂಲ ಕ್ರಿ.ಪೂ. ೩ ಮತ್ತು ನಾಲ್ಕನೇ ಶತಮಾನವೆನ್ನುತ್ತಾರಲ್ಲ.. ಇದು ಹೇಗೆ? ಕನ್ನಡ ಲಿಪಿ ಹಾಗೂ ಭಾಷೆ ಎರಡೂ ಎಷ್ಟು ಪುರಾತನವಾದದ್ದು? ಇದರ ಕಾಲ ಕ್ರಿಸ್ತಪೂರ್ವವೋ ಕ್ರಿಸ್ತಶಕವೋ? ೨. ಕನ್ನಡ ಭಾಷೆಯ ಮೂಲ ಯಾವುದು? ನೀವು ಹೇಳಿದ ಬ್ರಹೂಯಿಯೇ? ಅಥವಾ ಕನ್ನಡ ಭಾಷೆಯು ತನ್ನ೦ತಾನೇ ಬೆಳೆದಿದ್ದೇ ಅಥವಾ ಕನ್ನಡದ ತಾಯಿ ಭಾಷೆಯೆ೦ದು ಬೇರಾವುದಾದರೂ ಭಾಷೆಯನ್ನು ಗುರುತಿಸಲಾಗುತ್ತದೋ? >ಅನಾರ್ಯ ಎಂಬ ಪದವನ್ನು ಆರ್ಯರಲ್ಲದವರು ಎಂಬ ಅರಿಮೆಯಲ್ಲಿ ಬಳಸಿದ್ದೇನೆ. ಆರ್ಯರು ಹೊರಗಿನಿಂದ ಬಂದಿಲ್ಲ ಎಂದುಕೊಂಡರೂ ಆರ್ಯ ದ್ರಾವಿಡ ಎಂಬ ಎರಡು ಬೇರೆ ಬೇರೆ ಪಂಗಡಗಳಿದ್ದವು ಎಂಬುದು (ಕನಿಷ್ಠ ಪಕ್ಷ ಭಾಷೆಯ ಆಧಾರದಲ್ಲಿ) ತಿಳಿಯುತ್ತದೆ. ಆಗ ಸಮಾಜದ prominant ಭಾಗವಾಗಿದ್ದ ಆರ್ಯರಲ್ಲದ ಕುಲದಲ್ಲಿ ಕನ್ನಯ್ಯ ಹುಟ್ಟಿದ> ಆರ್ಯರೆ೦ದು ಹಾಗೂ ಅನಾರ್ಯರೆ೦ದು ಗುರುತಿಸುವ ನಿರ್ದಿಷ್ಟ ಮಾನದ೦ಡಗಳಿದ್ದುವೇ? ಇದ್ದರೆ ಯಾವುವು?.. ಸಾಮಾನ್ಯವಾಗಿ ಆರ್ಯರೆ೦ದು ಯಾರನ್ನು ಹಾಗೂ ಅನಾರ್ಯರೆ೦ದು ಯಾರನ್ನು ಗುರುತಿಸಲಾಗುತ್ತಿತ್ತು? ಅ೦ದರೆ ಬಣ್ಣ, ಕುಲ, ಭಾಷೆ ಮು೦ತಾದವುಗಳ ಮೇಲೆ ಆರ್ಯ ಹಾಗೂ ದ್ರಾವಿಡರೆ೦ದು ಗುರುತಿಸಲಾಗುತ್ತಿತ್ತೇ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕೇಳಿದ ಪ್ರಶ್ನೆಯನ್ನೇ ಮತ್ತೆ ಬೇರೆ ರೀತಿಯಲ್ಲಿ ಕೇಳುತ್ತಿದ್ದೀರಿ.. 1.ಕ್ರಿಪೂ 3000 ದಲ್ಲಿದ್ದ ಸಿಂಧೂ ನಾಗಿರಕತೆಯಲ್ಲಿ ಬಳಕೆಯಾಗಿದ್ದ ಭಾಷೆ ದ್ರವಿಡ ಭಾಷೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಆ ಕಾಲದಲ್ಲಿ (ಮಹಾಭಾರತ ನಡೆದ ಕಾಲ) ಕನ್ನಡ ಎಂಬುದೆ ನಿರ್ದಿಷ್ಟವಾಗಿ ಇಲ್ಲದಿದ್ದರೂ ದ್ರವಿಡ ಭಾಷೆ ಇತ್ತು. ಕನ್ನಡ ಈ ಮೂಲ ದ್ರವಿಡ ಭಾಷೆಯ ಕವಲು. ಕಷ್ಣನ ಕುಲದವರು ಕಾಲಾಂತರದಲ್ಲಿ ಈ ಕವಲನ್ನೇ ಅಪ್ಪಿಕೊಂಡರು ಎಂಬು ನನ್ನ ಪ್ರತಿಪಾದನೆ. 2. ಇದಕ್ಕೆ ಆಗಲೇ ಉತ್ತರ ಕೊಟ್ಟಿದ್ದೇನೆ. ಕನ್ನಡ ದ್ರವಿಡ ಭಾಷಾಕುಲಕ್ಕೆ ಸೇರಿದುದು. ಇದೇ ಕವಲಾಗಿ ತೆಲುಗು ತಮಿಳು ತುಳು ಮಲಯಾಳ ಕೊಡವ ಕೊರಂಬ ಬ್ರಹೂಯಿ ಇತ್ಯಾದಿ ಭಾಷೆಗಳಾಗಿವೆ. 3. ಇದಕ್ಕೇ ಸಹ ಉತ್ತರ ಕೊಟ್ಟಿದ್ದೇನೆ. ಕುಲ, ಬಣ್ಣ ಇತ್ಯಾದಿಗಳ ಬಗ್ಗೆ ನಾನು ಹೇಳಲಾರೆ. ಎರಡು ಬೇರೆ ಬೇರೆ ಭಾಷೆಗಳನ್ನಾಡುವ ಜನಗುಂಪು ಗಳೆಂದರೆ ಬೇರೆ ಬೇರೆ ಬೇರೆ ಜನಾಂಗಗಳೆಂಬುದು ತಿಳಿಯುತ್ತದೆ. ನಾನು ಇಲ್ಲಿಯ ಮಟ್ಟಿಗೆ ಕೇವಲ ಭಾಷೆಯನ್ನು ಮಾತ್ರ ಆಧಾರವನ್ನಾಗಿ ಮಾಡಿಕೊಂಡಿದ್ದೇನೆ. ದ್ರವಿಡ ಜನಾಂಗದ ಬಗ್ಗೆ ಸಾಹಿತ್ಯ ಸಾಕಷ್ಟು ಇದೆ ಓದಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸರಿಯಾಗಿ ಅರ್ಥವಾಗುವವರೆಗೂ ಕೇಳಿದ ಪ್ರಶ್ನೆಯನ್ನು ಹತ್ತು ಬಾರಿ ಕೇಳಿದರೂ ಉತ್ತರಿಸುವವರು ಬೇಸರಿಸಬಾರದು.. ಮಾಹಿತಿಗಾಗಿ ಕೇಳುತ್ತೇವೆಯೇ ವಿನ: ನಿಮ್ಮ ಜ್ಞಾನಮತ್ತೆಯನ್ನು ಪರೀಕ್ಷಿಸಲಲ್ಲ ಎ೦ಬುದು ನಿಮಗೆ ನನ್ನ ವಿಚಾರದಲ್ಲಿ ವೇದ್ಯವಿದೆಯೆ೦ಬುದು ನನ್ನ ಭಾವನೆ.. ಕನ್ನಡ ಭಾಷೆ ಹಾಗೂ ಲಿಪಿಗಳೆರಡೂ ಎಷ್ಟು ಪುರಾತನವಾದದ್ದು ಎ೦ಬ ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ.. >>.ಕ್ರಿಪೂ 3000 ದಲ್ಲಿದ್ದ ಸಿಂಧೂ ನಾಗಿರಕತೆಯಲ್ಲಿ ಬಳಕೆಯಾಗಿದ್ದ ಭಾಷೆ ದ್ರವಿಡ ಭಾಷೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಆ ಕಾಲದಲ್ಲಿ (ಮಹಾಭಾರತ ನಡೆದ ಕಾಲ) ಕನ್ನಡ ಎಂಬುದೆ ನಿರ್ದಿಷ್ಟವಾಗಿ ಇಲ್ಲದಿದ್ದರೂ ದ್ರವಿಡ ಭಾಷೆ ಇತ್ತು. ಕನ್ನಡ ಈ ಮೂಲ ದ್ರವಿಡ ಭಾಷೆಯ ಕವಲು. ಕಷ್ಣನ ಕುಲದವರು ಕಾಲಾಂತರದಲ್ಲಿ ಈ ಕವಲನ್ನೇ ಅಪ್ಪಿಕೊಂಡರು ಎಂಬು ನನ್ನ ಪ್ರತಿಪಾದನೆ.>> ನಾನು ಓದಿಕೊ೦ಡ ಪ್ರಕಾರ, ಮಹಾಭಾರತದ ಕಾಲದಲ್ಲಿ ಸಿ೦ಧೂ ನದಿ ನಾಗರೀಕತೆ ಇರಲಿಲ್ಲ. ಮಹಾಭಾರತದಲ್ಲಿ ಬರುವ ನದಿಗಳು ಸರಸ್ವತಿ.. ಗ೦ಗಾ ಮತ್ತು ಯಮುನಾ ನದಿಗಳು.. ಸರಸ್ವತಿ ನದಿ ಬತ್ತಿದ ಮೇಲೆ ಸಟ್ಲೆಜ್, ರಾವಿ ಮು೦ತಾದ ನದಿಗಳು ಸಿ೦ಧೂ ನದಿಯನ್ನು ಸೇರಿದ ನ೦ತರ ಆ ನದೀ ತೀರದಲ್ಲಿ ಹುಟ್ಟಿಕೊ೦ಡ ನಾಗರೀಕತೆ ಸಿ೦ಧೂ ನದಿ ನಾಗರೀಕತೆ. ಆದ್ದರಿ೦ದ ಸಿ೦ಧೂ ನದಿ ನಾಗರೀಕತೆಯ ಕಾಲದಲ್ಲಿ ದ್ರಾವಿಡ ಭಾಷೆಗಳು ಬಳಕೆಯಲ್ಲಿದ್ದವೆ೦ಬುದನ್ನು ಒಪ್ಪಿಕೊ೦ಡರೂ ಕೃಷ್ಣನ ಕುಲದವರು ದ್ರಾವಿಡ ಭಾಷೆಯನ್ನು ಅಪ್ಪಿಕೊ೦ಡರೆ೦ಬುದಕ್ಕೆ ದಾಖಲೆ ಏನಿದೆ? ದ್ರಾವಿಡ ಭಾಷೆಗಳ ಉಗಮವೇ ಸಿ೦ಧೂ ನದಿಯ ನಾಗರೀಕತೆಯ ಸಮಯದಲ್ಲಾಗಿರಬಹುದೆ೦ಬ ಅನುಮಾನ ಉ೦ಟಾಗುವುದಿಲ್ಲವೇ? >>ಕನ್ನಡ ದ್ರವಿಡ ಭಾಷಾಕುಲಕ್ಕೆ ಸೇರಿದುದು. ಇದೇ ಕವಲಾಗಿ ತೆಲುಗು ತಮಿಳು ತುಳು ಮಲಯಾಳ ಕೊಡವ ಕೊರಂಬ ಬ್ರಹೂಯಿ ಇತ್ಯಾದಿ ಭಾಷೆಗಳಾಗಿವೆ.>> ದ್ರಾವಿದ ಭಾಷೆಯ ಮೂಲ ಒ೦ದೇ ಆಗಿ, ಅವುಗಳ ಕವಲು ಬೇರೆಬೇರೆಯವಾದರೂ ಕಳ್.ಕನ್. ಮೂಲವೊ೦ದೇ ಆತ ಕನ್ನಡಿಗನೆ೦ಬುವುದಕ್ಕೆ ಸಾಕೇ? ಎ೦ಬುದು ನನ್ನ ಪ್ರಶ್ನೆ. ಅಕಸ್ಮಾತ್ ಬೇರೆಯವಾದರೂ ಆಗಿರಬಾರದೇಕೆ>> ಅ೦ದರೆ ತಮಿಳಿನಲ್ಲಿಯೂ ಆ ಪದದ ಬಳಕೆ ಇರುವುದರಿ೦ದ.. ತಮಿಳಿನಲ್ಲಿ “ಕಳ್ “ ಎನ್ನುವ ಪದ ಬಳಕೆ ಇದೆ.. ಮಳೆಯಾಳಿಯಲ್ಲಿಯೂ “ಕಳ್ಳ“ ಎನ್ನುವ ಪದ ಬಳಕೆ ಇದೆ ( ಅಡುಮಾತಿನಲ್ಲಿ “ಅವನೊರು ಕಳ್ಳನ್“ ಎ೦ದು ಉಚ್ಚರಿಸುವುದನ್ನು ಕೇಳಿದ್ದೇನೆ) >>ಎರಡು ಬೇರೆ ಬೇರೆ ಭಾಷೆಗಳನ್ನಾಡುವ ಜನಗುಂಪು ಗಳೆಂದರೆ ಬೇರೆ ಬೇರೆ ಬೇರೆ ಜನಾಂಗಗಳೆಂಬುದು ತಿಳಿಯುತ್ತದೆ. >>
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕನ್ನಡ ನುಡಿ ಸಂಪೂರ್ಣವಾಗಿ ಬರವಣಿಗೆಯ ರೂಪದಲ್ಲಿ ಮೊತ್ತಮೊದಲು ಸಿಗುವುದು ಹಲ್ಮಿಡಿ ಶಾಸನದಲ್ಲಿ. (ಇತ್ತೀಚೆಗೆ ಅದಕ್ಕಿಂತ ಹಳೆಯದು ಸಿಕ್ಕಿದೆಯಂತೆ. ನನಗೆ ಮಾಹಿತಿ ಇಲ್ಲ.) ಅಶೋಕನ ಶಾಸನದಲ್ಲಿ ಅನೇಕ ಕನ್ನಡ ಪದಗಳ ಇರುವಿಕೆಯನ್ನು ಗುರುತಿಸಲಾಗಿದೆ. ಅಶೋಕನ ಶಾಸನಗಳು ಭಾರತದಲ್ಲಿ ಸಿಕ್ಕ ಅತ್ಯಂತ ಹಳೆಯ ಬರವಣಿಗೆಗಳು ಎಂಬುದನ್ನು ಗಮನಿಸಬೇಕು. ಇದಕ್ಕಿಂತ ಮುಂಚೆ ಬರವಣಿಗೆಯ ರೂಪದಲ್ಲಿ ಸಕ್ಕದ ವೇದೋಪನಿಶತ್ತುಗಳನ್ನು ಹೊರತು ಪಡಿಸಿ ಬೇರೆಯ ಯಾವುದೇ ಸಾಹಿತ್ಯ ದೊರಕಿಲ್ಲ. ಸಕ್ಕದ ಬಿಟ್ಟರೆ ಬೇರೆ ಯಾವ ಭಾಷಾಪರಂಪರೆಯೂ ಈ ರೀತಿ ಮೂಲರೂಪದಲ್ಲೇ ಬೋಧನೆ ಮಾಡಿಕೊಂಡು ಬಂದಿಲ್ಲ. ಜನಪದ ಕಥೆ ಮತ್ತು ಹಾಡುಗಳು ಆಡು ನುಡಿಯ ಬದಲಾವಣೆಯೊಂದಿಗೆ ಬದಲಾಗಿ ಬಂದಿರುತ್ತವೆ. ಹಾಗಾಗಿ ಎರಡುಸಾವಿರ ವರುಷಕ್ಕಿಂತ ಮುಂಚೆಯೇ ದ್ರವಿಡದಿಂದ ಕನ್ನಡ ಕವಲೊಡೆದಿತ್ತು. ಅಂದರೆ ಕನ್ನಡ ಭಾಷೆ ಬಹುತೇಕ ಸ್ಪಷ್ಟರೂಪವನ್ನು ಪಡೆದಿತ್ತು. ದ್ರವಿಡ ಭಾಷೆಯು ಮಹಾಭಾರತ ಕಾಲದಲ್ಲಿ ಇದ್ದುದಕ್ಕೆ ಸಂಶಯವೇ ಇಲ್ಲ. ಯಾಕೆಂದರೆ ಅದು ಇಲ್ಲಿಯ ನೆಲದ ಭಾಷೆ. ಆ ನುಡಿಯು ಎಲ್ಲಿಂದಲೂ ಇಳಿದು ಬಂದಿರುವ ಸಾಧ್ಯತೆಗಳಿಲ್ಲ. (ಈ ವಿಷಯವನ್ನು ನಿರೂಪಿಸುವ ಬಗ್ಗೆ ಸಾಕಷ್ಟು ಸಾಹಿತ್ಯವಿದೆ. ಗೂಗಲಿಸಿದರೆ ಸಾಕು) ಲಿಪಿಯ ವಿಷಯಕ್ಕೆ ಹೇಳುವುದಾದರೆ ದೇವನಾಗರಿ ಮತ್ತು ಕನ್ನಡ ಲಿಪಿ ಬಹುತೇಕ ಒಂದೇ ವಯಸ್ಸಿನವು. (ಇದರ ಬಗ್ಗೆ ಸಾಕಷ್ಟು ಪ್ರಬಂಧಗಳು ಮಂಡನೆಯಾಗಿವೆ) <<ನಾನು ಓದಿಕೊ೦ಡ ಪ್ರಕಾರ, ಮಹಾಭಾರತದ ಕಾಲದಲ್ಲಿ ಸಿ೦ಧೂ ನದಿ ನಾಗರೀಕತೆ ಇರಲಿಲ್ಲ. ಮಹಾಭಾರತದಲ್ಲಿ ಬರುವ ನದಿಗಳು ಸರಸ್ವತಿ.. ಗ೦ಗಾ ಮತ್ತು ಯಮುನಾ ನದಿಗಳು.. ಸರಸ್ವತಿ ನದಿ ಬತ್ತಿದ ಮೇಲೆ ಸಟ್ಲೆಜ್, ರಾವಿ ಮು೦ತಾದ ನದಿಗಳು ಸಿ೦ಧೂ ನದಿಯನ್ನು ಸೇರಿದ ನ೦ತರ ಆ ನದೀ ತೀರದಲ್ಲಿ ಹುಟ್ಟಿಕೊ೦ಡ ನಾಗರೀಕತೆ ಸಿ೦ಧೂ ನದಿ ನಾಗರೀಕತೆ.>> ಇದನ್ನು ತಾವು ಎಲ್ಲಿ ಓದಿದ್ದಿರಿ? ಇದಕ್ಕೆ ತಕ್ಕ ದಾಖಲೆಗಳು ಅಥವಾ ತರ್ಕಗಳನ್ನು ಒದಗಿಸಬಲ್ಲಿರಾ? ಮೂರರಿಂದ ಐದು ಸಾವಿರ ವರುಷಗಳ ಹಿಂದಿನ ಭೌಗೋಳಿಕ ಸ್ಥಿತಿಗಳನ್ನು ಅಧ್ಯಯನ ಮಾಡಿ ಇಂತಹ ಸಾಧ್ಯತೆ ಇದೆಯೇ ದಯವಿಟ್ಟು ಪರಿಶೀಲಿಸಿ. <<ಸಿ೦ಧೂ ನದಿ ನಾಗರೀಕತೆಯ ಕಾಲದಲ್ಲಿ ದ್ರಾವಿಡ ಭಾಷೆಗಳು ಬಳಕೆಯಲ್ಲಿದ್ದವೆ೦ಬುದನ್ನು ಒಪ್ಪಿಕೊ೦ಡರೂ ಕೃಷ್ಣನ ಕುಲದವರು ದ್ರಾವಿಡ ಭಾಷೆಯನ್ನು ಅಪ್ಪಿಕೊ೦ಡರೆ೦ಬುದಕ್ಕೆ ದಾಖಲೆ ಏನಿದೆ? ದ್ರಾವಿಡ ಭಾಷೆಗಳ ಉಗಮವೇ ಸಿ೦ಧೂ ನದಿಯ ನಾಗರೀಕತೆಯ ಸಮಯದಲ್ಲಾಗಿರಬಹುದೆ೦ಬ ಅನುಮಾನ ಉ೦ಟಾಗುವುದಿಲ್ಲವೇ?>>
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರಗಳು.. ೧. ನಿಮ್ಮ ಪ್ರಕಾರ ಆಗಲೇ ಸ್ಪಷ್ಟರೂಪವನ್ನು ಕನ್ನಡ ಭಾಷೆಯು ಪಡೆದಿದ್ದಲ್ಲಿ.. ಸಕ್ಕದ ಬಿಟ್ಟರೆ ಆಡುನುಡಿಯಾಗಿದ್ದ ದ್ರಾವಿಡ ಭಾಷೆಯಲ್ಲೇಕೆ ಯಾವುದೇ ಕೃತಿಗಳು ರಚಿತವಾಗಿಲ್ಲ?ಅಷ್ಟೊ೦ದು ಪುರಾತನವಾಗಿದ್ದ ಈ ನಾಡಿನ ಮೂಲಭಾಷೆಯಲ್ಲಿ ಕೃತಿಗಳನ್ನು ರಚಿಸದೆ.. ಸ೦ಕೀರ್ಣ ಸಕ್ಕದದಲ್ಲೇಕೆ ಕೃತಿಗಳು ರಚನೆಗೊ೦ಡವು? ಕೃತಿಗಳು ರಚನೆಯಾಗಬೇಕಿದ್ದಲ್ಲಿ ಆಭಾಷೆಯೂ ಆಡು ಭಾಶೆಯೇ ಆಗಿರಬೇಕು.. ಯಾ ಜನ ಸಾಮಾನ್ಯರಿಗೆ ಅರ್ಥವಾಗುವ ಲಿಪಿಯಾಗಿರಬೇಕು! ೨. ಇತಿಹಾಸದಲ್ಲಿ ಸರಸ್ವತಿ ನದಿಯ ಉಚ್ಛ್ರಾಯಸ್ಥಿತಿ ಹಾಗೂ ಅದರ ಅವಸಾನದ ಬಗ್ಗೆ ಸಾಕಷ್ಟು ಗೂಗಲ್ ಕೊ೦ಡಿಗಳಿವೆ... ೧೫೦೦ ಕ್ರಿ.ಪೂ.ಸುಮಾರರ ಹೊತ್ತಿಗೆ ಭೂ ವಿಕೋಪ ಗಳಿ೦ದಾಗಿ ಸರಸ್ವತಿ ನದಿಯ ಮಾರ್ಗವು ಬದಲಾವಣೆಗೊ೦ಡು, ಕ್ರಮೇಣವಾಗಿ ಬತ್ತಿ ಹೋಯಿತೆ೦ಬುದಕ್ಕೆ ಉಪಗ್ರಹ ಆಧಾರಿತ ಚಿತ್ರಗಳೊ೦ದಿಗೆ ಲೇಖನಗಳೂ ಅ೦ತರ್ಜಾಲದಲ್ಲಿ ದಾಖಲಾಗಿವೆ. ಅದರ ಒ೦ದು ಕೊ೦ಡಿ ನಿಮಗಾಗಿ: http://sarojbala.blo... - 55k - Similar pages >>ಸಿಂಧೂ ನದಿಯ ನಾಗರಿಕತೆಯೊಂದಿಗೆ ದ್ರವಿಡ ನುಡಿ ಹುಟ್ಟಿದ್ದೆಂದು ನಿಮ್ಮ ಪ್ರತಿಪಾದನೆಯಾದರೆ ಅದನ್ನು ತರ್ಕಗಳೊಂದಿಗೆ ನಿರೂಪಿಸಿ ದ್ರವಿಡ ಭಾಷೆ ಮಹಾಬಾರತಕ್ಕಿಂತ ಹಳೆಯದಲ್ಲ ಎಂದು ನಿರೂಪಿಸಿ. ಬರೀ ಅನುಮಾನಗಳ ಮೇಲೆ ಸಿದ್ಧಾಂತಗಳು ತಿರುಗುಮುರುಗಾಗುವುದಿಲ್ಲ. ಇದೊಂದು ಪಾಯಿಂಟನ್ನು ನೀವು ನಿಸ್ಸಂದೇಹವಾಗಿ ನಿರೂಪಿಸದ್ದೇ ಆದರೆ ನನ್ನ ಸಂಪೂರ್ಣ ಥಿಯರಿಯೇ ಬಿದ್ದುಹೋಗುತ್ತದೆ. ನಾನು ಶರಣಾಗುತ್ತೇನೆ.>> ಇರುವುದನ್ನು ಇದೆ ಎನ್ನಬಹುದು.. ಇಲ್ಲದಿದ್ದುದ್ದನ್ನು ಇತ್ತು ಎನ್ನುವುದಾದರೂ ಹೇಗೆ ಸಾಲಿಮಠರೇ.. ಮಹಾಭಾರತ ಕಾಲದಲ್ಲಿಯೇ ದ್ರಾವಿದ ಭಾಷೆ ಇದ್ದಲ್ಲಿ... ನನ್ನ ಮೊದಲನೇ ಪಾಯಿ೦ಟ್ ಇಲ್ಲಿಯೂ ಅನ್ವಯವಾಗುತ್ತದೆ.. ಸಿ೦ಧೂ ನದಿ ನಾಗರೀಕತೆಯ ಕಾಲದಲ್ಲಿನ ಎಲ್ಲಾ ಅವಶೇಷಗಳೂ ದ್ರಾವಿಡ ಭಾಷೆಯನ್ನು ಒಳಗೊ೦ಡಿದ್ದವೆ೦ಬುದಕ್ಕೆ ದಾಖಲೆಗಳಿವೆ.. ಆದರೆ ಮಹಾಭಾರತದ ಕಾಲದಲ್ಲಿನ ಯಾವೊದೂ ಕೃತಿಗಳೂ ದ್ರಾವಿಡ ಭಾಷೆಯಲ್ಲಿ ರಚಿತವಾಗಿಲ್ಲ.. ದ್ರಾವಿದ ಬಾಷಾ ಸ೦ಕೇತಗಳನ್ನೊಳಗೊ೦ಡ ಯಾವೊ೦ದಾದರೂ ಅವಶೇಷಗಳು ದೊರೆತಿವಿಯೇ.. ಹಾಗೊ೦ದು ವೇಲೆ ಅವುಗಳ ಬಗ್ಗೆ ದಾಖಲೆಗಳು ಲಭ್ಯವಿದ್ದಲ್ಲಿ ಹಾಜರು ಪಡಿಸಿ..ನಮ್ಮೊಡನೆ ಹ೦ಚಿಕೊಳ್ಳಿ.. ನಾನೇ ಶರಣಾಗುತ್ತೇನೆ.. ನನ್ನದು ಯಾವುದೇ ಅನುಮಾನವಲ್ಲ.. ನಿಜವಾಗಿಯೂ ಮಸ್ತಿಷ್ಕದಲ್ಲಿ ಎದ್ದ ಪ್ರಶ್ನೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

೧. ಎರಡನೆಯ ಶತಮಾನದ ನಂತರ ಸಾಕಷ್ಟು ಕೃತಿಗಳು ಆಡುನುಡಿಯಲ್ಲಿ ಬಂದಿವೆ. ಶಾಸನಗಳಿವೆ. ವಡ್ಡಾರಾಧನೆ ಇದೆ, ಪಂಪನ ಭಾರತ ಇದೆ. ಮಹಾಭಾರತ ರಚನೆಯಾಗಿದ್ದು ಮಹಾಭಾರತ ನಡೆದ ಸಮಯದಲ್ಲಿ ಅಲ್ಲ. ಕೆಲವು ಭಾಷಾ ಬೆಳವಣಿಗೆಯ ಪರಿಕರಗಳನ್ನು ನೋಡಿ ಅನೇಕ ತಜ್ಞರು ಇದು ಕ್ರಿ ಪೂ ಎರಡನೆಯ ಶತಮಾನದಲ್ಲಿ ಬರೆಯಲಾಗಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ವೇದಗಳು ಹೇಗೆ ಬಾಯಿಂದ ಬಾಯಿಗೆ ಹರಿದು ಬಂದವೋ ಹಾಗೆಯೇ ಅದೇ ಸಮಯದಲ್ಲಿಹುಟ್ಟಿದ ದ್ರಾವಿಡ ಜನಪದ ಸಾಹಿತ್ಯ ಬಾಯಿಂದ ಬಾಯಿಗೆ ಹರಿದು ಬಂತು. ಕಾಲಾನಂತರದಲ್ಲಿ ದ್ರಾವಿಡ ಸಾಹಿತ್ಯದ ಭಾಷೆ ಕಾಲಕ್ಕೆ ತಕ್ಕಂತೆ ಬದಲಾವಣೆ ಕಂಡಿತಾದರೂ ಕಟ್ಟುನಿಟ್ಟಿನ ಚೌಕಟ್ಟಿಗೆ ಒಳಪಟ್ಟ ವೇದ ಮತ್ತು ಸಂಸ್ಕೃತ ಹಾಗೆಯೇ ಉಳಿದುಕೊಂಡವು. ಸಂಸ್ಕೃತದಲ್ಲಿ ಯಾವಾಗ ಬರವಣಿಗೆ ಆರಂಭವಾಯಿತೋ ಬಹುತೇಕ ಅದೇ ಸಮಯದಲ್ಲಿ (ಒಂದೆರಡು ಶತಮಾನ ಹಿಂದೆ ಮುಂದೆ) ದ್ರಾವಿಡ ಭಾಷೆಯಲ್ಲೂ ಕೃತಿಗಳು ರಚನೆಗೊಂಡವು. ಸಂಸ್ಕೃತದ ಪಾಂಡಿತ್ಯ ಬುದ್ದಿವಂತಿಕೆಯ ಸಂಕೇತ ಎನಿಸಿದ್ದರಿಂದ ರಾಜರುಗಳೂ ಸಹ ಅದಕ್ಕೆ ಮಣೆ ಹಾಕುತ್ತಿದ್ದುದರಿಂದ ಸಕ್ಕದದಲ್ಲಿ ಕೃತಿಗಳು ಬಂದವು. ಆದರೆ ಹಾಗೆಯೇ ಬೇರೆ ಭಾಷೆಗಳಲ್ಲೂ ಸಾಕಷ್ಟು ಬಂದಿವೆ. ೨. ಮಹಾಭಾರತದ ಸಮಯದಲ್ಲಿ ದ್ರಾವಿಡ ಅಷ್ಟೇ ಅಲ್ಲ ಸಂಸ್ಕೃತ, ಪಾಳಿ, ಪ್ರಾಕೃತ ಯಾವುದರ ದಾಖಲೆಗಳೂ ಸಿಕ್ಕಿಲ್ಲ. ಆಗ ಬರವಣಿಗೆ ಬೆಳೆದಿರಲಿಲ್ಲ. ಆಗ ಇದ್ದದ್ದು ಜನಪದ ಸಾಹಿತ್ಯ. ಮಹಾಭಾರತ ಕಥೆಯ ಬಗೆಗೂ ಜನಪದ ಕಥೆ ನಾಟ್ಯ ಹಾಡುಗಳಿರುವುದನ್ನು ತಮ್ಮ ಗಮನಕ್ಕೆ ತಂದಿದ್ದೇನೆ. ಲಿಪಿ ಬೆಳವಣಿಗೆಯೊಂದಿಗೆ ಬರವಣಿಗೆಯ ಸಾಹಿತ್ಯ ಬೆಳವಣಿಗೆಯಾಯಿತು. ಮಹಾಭಾರತ ಕಾಲದಲ್ಲಿ ದ್ರಾವಿಡ ಕೃತಿಗಳು ರಚನೆ ಆಗಿಲ್ಲ ಸರಿ. ಆದರೆ ಯಾವ ಸಂಸ್ಕೃತ ಕೃತಿಗಳು ರಚನೆಯಾದವು ಎಂದು ಹೇಳಬಲ್ಲಿರಾ? ಮಹಾಭಾರತ ಸಮಯದಲ್ಲಿ ಯಾವ ಕೃತಿಗಳೂ ರಚನೆಯಾಗಿಲ್ಲ. ಆಗಿದ್ರೂ ಅವು ಬಹಳ ದಿನಗಳ ವರೆಗೆ ಜನರ ಬಾಯಲ್ಲೇ ಇದ್ದು ನಂತರ ಬರವಣಿಗೆಯನ್ನು ಕಂಡಿವೆ ವೇದಗಳ ಹಾಗೆ! ಸರಿ. ಸರಸ್ವತಿ ನದಿ ಇತ್ತು. ಅದು ನಾಶವೂ ಆಯಿತು. ಒಪ್ಪಿಕೊಂಡೆ. ಇದರಿಂದ ದ್ರಾವಿಡ ಭಾಷೆಯು ಸಿಂಧೂ ನದಿ ನಾಗರಿಕತೆ ಬೆಳೆದ ನಂತರವೇ ಬಳಕೆಗೆ ಬಂತು ಎಂಬುದು ಹೇಗೆ ನಿರೂಪಿತವಾಗುತ್ತದೆ? <<ತೆಲುಗು ಭಾಷೆಯಲ್ಲಿ “ಕಣ್ಣಪ್ಪ“...“ಕಣ್ಣಮ್ಮ...“ ತಮಿಳಿನಲ್ಲಿ “ಕಣ್ಣನ್..“ ಮಳೆಯಾಳಿಯಲ್ಲಿ “ಕಣ್ಣ“ ಎ೦ಬ ಪದಗಳ ಬಳಕೆ ಇದೆ. ಅ೦ತೆಯೇ ತೆಲುಗಿನಲ್ಲಿ “ಕನ್ನಯ್ಯ“ ಎ೦ಬ ಪದದ ಬಳಕೆ ಇದೆ.. ಅರ್ಥ ವ್ಯತ್ಯಾಸಗಳಿರಬಹುದು.. ಆದರೆ ಪದಗಳ ಬಳಕೆಯ೦ತೂ ಇದೆ..ಮಳೆಯಾಳಿ ಬಾಷೆಯಲ್ಲಿ ಕೃಷ್ಣನನ್ನು “ಕಣ್ಣ“ ಎನ್ನುತ್ತಾರೆ ( ಅ೦ಬಾಡಿ ಕಣ್ಣ- ಗೋಪಾಲ) ತಮಿಳಿನಲ್ಲಿ ಯಥಾವತ್ ಕೃಷ್ಣ ಎ೦ಬ ಪದಕ್ಕೆ ‘ನ್‘ ಸೇರಿಸಿ ಕೃಷ್ಣನ್ ಎ೦ಬ ಪದವಿದ್ದರೂ.. “ಕಣ್ಣನ್“ ಎ೦ಬ ಪದದ ಬಳಕೆಯೂ ಇದೆ. ತೆಲುಗಿನಲ್ಲಿ ನೇರವಾಗಿ “ಕನ್ನಯ್ಯ“ ಎ೦ಬ ಪದ ಚಾಲ್ತಿಯಲ್ಲಿದೆ ಅ೦ತೆಯೇ “ಕಣ್ನಪ್ಪ“, “ಕಣ್ಣಮ್ಮ“ ಎ೦ಬ ಪದಗಳನ್ನು ವ್ಯಕ್ತಿಗಳಿಗೆ ಇಡುತ್ತಾರೆ.>>
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

<ಚಕ್ರವನ್ನು ಹಿಡಿದು ಯುದ್ಧ ಮಾಡಲು ಸಾಧ್ಯವಿಲ್ಲ> ಚಕ್ರವನ್ನು ಯುದ್ಧದಲ್ಲಿ ಬಳಸಲಾಗುತ್ತದೆ. ಮುಖ್ಯವಾಗಿ ನನಗೆ ಗೊತ್ತಿರುವ ಮಟ್ಟಿಗೆ ಸಿಕ್ಖ್ ಯೋಧರು ಚಕ್ರವನ್ನು ಬಳಸುತ್ತಿದ್ದರು. ಕೇವಲ ಅದನ್ನು ಮಾತ್ರ ಹಿಡಿದು ಯುದ್ದ ಮಾಡಲು ಸಾಧ್ಯವಿಲ್ಲ ಆದರೆ ಯುದ್ಧದಲ್ಲಿ ಚಕ್ರವನ್ನೂ ಬಳಸಲಾಗಿದೆ, ಆದ್ದರಿಂದ ಚಕ್ರವು ಆಯುಧ ರೂಪದಲ್ಲಿರುವುದು ಸಾಧ್ಯತೆಯೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಂತೋಷ್, ಚಕ್ರವನ್ನು ಆಯುಧವನ್ನಾಗಿ ಬಳಸುವ ಬಗೆಗೆ ಹೆಚ್ಚು ಮಾಹಿತಿ ನೀಡಬಲ್ಲಿರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

'Fox history' ಚಾನಲ್ಲಿನಲ್ಲಿ ಬರುತ್ತಿದ್ದ ಒಂದು ಕಾರ್ಯಕ್ರಮವಿತ್ತು. ಅದರ ಹೆಸರು 'Deadliest Soldier'. ಎರಡು ಯೋಧ ಪಡೆಗಳ ನಡುವೆ ನಿರ್ದಿಷ್ಟ ದೂರಗಳ ವ್ಯಾಪ್ತಿಯಲ್ಲಿ ಬಳಸುವ ಆಯುಧಗಳ ನಡುವೆ ನಡೆಯುವ ಸ್ಪರ್ಧೆ ಮತ್ತು ಅವುಗಳ ಸಾಮರ್ಥ್ಯದ ಮೇಲೆ ವಿಜಯಿ ಯಾವ ಪಡೆ ಎಂದು ಘೋಷಿಸಲಾಗುತ್ತದೆ. ಇದರಲ್ಲಿ ಒಮ್ಮೆ ರಾಜಪೂತ್ ಮತ್ತು ಇನ್ಯಾರೋ ಪಡೆಯ ನಡುವೆ ಸ್ಪರ್ಧೆಯಿಟ್ಟಿದ್ದರು. ಆಗ ಮೊದಲ ಬಾರಿಗೆ ನನಗೆ ಚಕ್ರದ ಬಳಸುವಿಕೆಯ ಮತ್ತು ಅದರ ಘಾತಕ ಪ್ರಹಾರದ ಅರಿವಾದದ್ದು. ಅಲ್ಲಿಯವರೆಗೆ ನಾನೂ ಚಕ್ರ ಜೀವನದ(ಕಾಲ ಚಕ್ರದ) ಸಂಕೇತ ಎಂದೇ ಭಾವಿಸಿದ್ದೆ. ಮೀಡಿಯಮ್ ರೇಂಜ್ ಆಯುಧವಾಗಿ ಚಕ್ರವನ್ನು ಬಳಸಲಾಗುತ್ತದೆ. ಹರಿತವಾದ ಅಲಗಿನಿಂದ ಮತ್ತು ಅದರಲ್ಲಿರುವ ಗರಗಸದಂತ ರೂಪದಿಂದ ಚಕ್ರ ಗುರಿ ಮುಟ್ಟಿದರೆ ಎದುರಾಳಿಯ ಜೀವವನ್ನೇ ತೆಗೆದುಬಿಡುವ ಶಕ್ತಿ ಅದಕ್ಕಿದೆ. ಗೂಗಲ್ಲಿನಲ್ಲಿ ಸಾಕಷ್ಟು ಹುಡುಕಾಡಿದರೂ ಈ ಬಗ್ಗೆ ಹೆಚ್ಚು ಮಾಹಿತಿ ನನಗೆ ಸಿಗಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಈ ಬಗ್ಗೆ ಮತ್ತೊಬ್ಬ ಸ್ನೇಹಿತರು ಒಂದು ಕೊಂಡಿಯನ್ನು ಕೊಟ್ಟಿದ್ದರು. ನಿಮ್ಮ ಬಣ್ಣನೆ ನೋಡಿದರೆ ಬೂಮರ್ಯಾಂಗ್ ಅನ್ನು ಉಪಯೋಗಿಸುವ ರೀತಿಯಲ್ಲಿ ಚಕ್ರವನ್ನು ಬಳಸುತ್ತಿದ್ದರು ಎನ್ನಬಹುದು. ಈ ಆಯುಧದ ಬಳಕೆಯಲ್ಲಿ ಕೃಷ್ಣ ಪರಿಣಿತಿಯನ್ನು ಸಾಧಿಸಿರಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಕೃಷ್ಣ ಮತ್ತು ಬಲರಾಮರ ಆಯುಧಗಳು ಆರ್ಯರು ಬಳಸುವ ಶಸ್ತ್ರಗಳಂತೆ ಇಲ್ಲ. ಯಾವ ಕ್ಷತ್ರಿಯರೂ ಸಹ ನೇಗಿಲು ಮತ್ತು ಚಕ್ರವನ್ನು ಆಯುಧವನ್ನಾಗಿ ಹೊಂದಿಲ್ಲ. ಸಾಂಪ್ರದಾಯಿಕವಾದ ಶಸ್ತ್ರಗಳನ್ನು ರಕ್ಕಸರು (ದ್ರಾವಿಡರು) ಉಪಯೋಗಿಸಿಲ್ಲ. ಕೃಷ್ಣ ಬಲರಾಮರದೂ ಸಹ ಅಸಂಪ್ರದಾಯಿಕ ಶಸ್ತ್ರಗಳು. ಹಾಗಾಗಿ ಇವರು ದ್ರಾವಿಡ ಜನಾಂಗಕ್ಕೆ ಸೇರಿದವರೆಂಬ ಊಹೆ ಬಲವಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಜಾವಾಣಿಯಲ್ಲಿ ಒಬ್ಬ ಅಂಕಣಕಾರರು ಇದರ ಬಗ್ಗೆ ಪ್ರಸ್ತಾವನೆ ಮಾಡಿದಾಗ ನಾನು ಶ್ರೀ ಸೋಮಶೇಖರಯ್ಯನವರಲ್ಲಿ ಈ ವಿಷಯವಾಗಿ ಪ್ರಶ್ನೆ ಕೇಳಿದ್ದೆ. ಅದಾದ ನಂತರ ಈ ಬಗ್ಗೆ ಸ್ವಲ್ಪ ಓದಿದ್ದೆ ಕೂಡ. ಈಗ ಹರ್ಷರಿಂದ ವಿಷಯ ಮತ್ತೆ ಪ್ರಸ್ತಾವನೆಯಾಗಿದೆ. ಈ ವಿಷಯ ಸಂಪದದಲ್ಲಿ ಉತ್ತಮ ಚರ್ಚೆಗೆ ಎಡೆ ಮಾಡಿಕೊಡಬಹುದು ಎಂಬ ನಿರೀಕ್ಷೆ :). 1. ಮೊದಲನೆಯದಾಗಿ ಕನ್ಹಯಾ ಕನ್ಡಡದ ಕನ್ನಯ್ಯನಾದ ಬಗ್ಗೆ. ಕನ್ಹಾ, ಕಿಶನ್, ಕೃಷ್ಣ ಇವು ಕ್ರಿಷ್ಣ ಕಪ್ಪು ವರ್ಣ ಹೊಂದಿದ್ದರಿಂದ ಬಂದ ಹೆಸರುಗಳು. ಯಶೋದೆ ತನ್ನ ಮಗನಿಗೆ ಮುದ್ದಿನಿಂದ ತನ್ನ ಮಗನನ್ನು ಕರೆಯುತ್ತಿದ್ದದ್ದು 'ಕನ್ಹಯಾ' ಎಂದು. ಇದು ಬಾಲಕ ಗಾತ್ರದಲ್ಲಿ ಕುಳ್ಳಾಗಿದ್ದರೆ 'ಕುಳ್ಳಪ್ಪ' ಎಂದು ಕರೆದಷ್ಟೇ ಸಹಜ. ಕನ್ಹಾ ಎಂದರೆ ಕಪ್ಪು. ಇನ್ನೊಂದು ಉದಾಹರಣೆ ಕೊಡಬೇಕೆಂದರೆ ವ್ಯಾಸ ಮಹರ್ಷಿಗಳನ್ನು ಕೃಷ್ಣ ದ್ವೈಪಾಯನ ಎಂದು ಕರೆಯುತ್ತಾರೆ ಎಂದು ಓದಿದ ನೆನಪು. 'ಕೃಷ್ಣ' ಅವರ ಮೈಬಣ್ಣಕ್ಕನುಗುಣವಾಗಿ ಮತ್ತು 'ದ್ವೈಪಾಯನ' ಅವರು ದ್ವೀಪದಲ್ಲಿ ಹುಟ್ಟಿದ್ದರಿಂದ ಬಂದದ್ದು. 2. ಕಳ್ ಎಂಬುದರಿಂದ ಕನ್ ಹುಟ್ಟಿದ್ದು ಯಾಕೆ? ಆ ಅವಶ್ಯಕತೆ ಏಕೆ ಬಂತು? ಕಳ್ ಉಚ್ಛರಿಸಲಾಗದೆ, ಉಚ್ಚಾರಣೆಯ ತೊಂದರೆಯಿಂದ ಕನ್ ಆಯಿತು ಎಂದಾದರೆ, ಇಂದಿಗೂ ಕಳ್ ಶಬ್ದ ಬಳಕೆಯಲ್ಲಿರುವುದು ಏಕೆ? ಅದರಲ್ಲೂ 'ಕಳ್ಳು' ಎಂಬ ಶಬ್ದ ಹೆಂಡ ಎಂಬ ಅರ್ಥದಲ್ಲಿ ಎಲ್ಲ ಗ್ರಾಮೀಣರು ಬಳಸುವುದು ಯಾಕೆ? 3. ಕಳ್ ಎಂಬುದು ಹಾಲಾದರೆ,ಈಗ ನಾವು ಬಳಸುತ್ತಿರುವ 'ಹಾಲು' ಎಂಬ ಶಬ್ದ ಹೊಸದಾಗಿ ಹುಟ್ಟಿಕೊಂಡಿದ್ದು ಏಕೆ? ಇದು ಯಾವ ಭಾಷೆಯ ಪ್ರಭಾವಿತ ಶಬ್ದ? 4. ರಾವ್ ಅವರ ಸಂಶೋಧನೆಯ ಪ್ರಕಾರ ದ್ವಾರಕೆ ಇತ್ತು. ಪುರಾಣದ ಕಥೆಗಳು ಸಹಜವಾಗಿ ವೈಭವಿಕರಣಗೊಂಡಿರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಮತ್ತು ಅವನ್ನೇ ವಾದ ಮಾಡಲು ಮುಖ್ಯ ಅಂಶಗಳನ್ನಾಗಿಸಿಕೊಳ್ಳದಿದ್ದರೆ.. ಕ್ರಿಷ್ಣ ಎಂಬ ತನ್ನ ಕಾಲದ ಎಲ್ಲರನ್ನೂ ಬಹುವಾಗಿ ಮೆಚ್ಚಿಸಿದ, ಪ್ರಖ್ಯಾತನಾದ, ಅಸಾಮಾನ್ಯದ ವ್ಯಕ್ತಿ ಬಾಳಿ ಬದುಕಿದ್ದ ಎಂಬುದನ್ನು ಅಲ್ಲಗೆಳೆಯಲಾರೆವು. ಈ 'ಕ್ರಿಷ್ಣ'ಪ್ರವೇಶ, ಪ್ರಭಾವ ಭೌದ್ಧ, ಜೈನ ಧರ್ಮದ ಗ್ರಂಥಗಳಲ್ಲಿಯೂ ಕಂಡು ಬರುತ್ತದೆ. 5. ಕ್ರಿಷ್ಣ ಹುಟ್ಟಿದ್ದು ಯಮುನೆಯ ತೀರದ ಮಥುರಾದಲ್ಲಿ ಮತ್ತು ಬೆಳೆದಿದ್ದು ಗೋಕುಲದಲ್ಲಿ. ಕಪ್ಪು ವರ್ಣವುಳ್ಳವರು ಭಾರತದ ಎಲ್ಲ ಕಡೆಯೂ ಇರಬಹುದಾದ ಸಾಧ್ಯತೆಯನ್ನು ನಾವು ನಿರಾಕರಿಸುವ ಅವಶ್ಯಕತೆ ಇದೆಯೆ? 6. ಹೆಸರುಗಳು ಗೊಂದಲ ಉಂಟು ಮಾಡುವ ಸಾಧ್ಯತೆಗಳಿವೆ. ಕ್ರಿ.ಪೂ 3 ನೇ ಶತಮಾನದಲ್ಲಿ ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಬಂದ ಮೆಗಸ್ಥಾನಿಸ್ ತನ್ನ ಇಂಡಿಕಾದಲ್ಲಿ ಹ್ಯಾರಿಕ್ಲೆಸ್, ಮೆಥೊರಾ, ಕ್ಲಿಸ್ ಬೊರಾ, ಯೊಬಾರೆಸ್, ಸೌರಾಸೆನೊಯ್ ಹೆಸರುಗಳ ಪ್ರಸ್ತಾಪ ಮಾಡಿದ್ದಾನಂತೆ. ಸಂಶೋಧಕರು ಹುಡುಕಿದಾಗ ತಿಳಿದುಬಂದದ್ದು ಅದು ಹರಿಕೃಷ್ಣ, ಮಥುರಾ, ಕೃಷ್ಣಪುರಾ, ಯಮುನಾ, ಶೂರಸೇನರು ಎಂದು!.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

1. ಕನ್ನಯ್ಯಾ ಎಂಬುದು ಕಪ್ಪು ಎಂಬ ತಿಳಿಮೆಯನ್ನು ಕೊಡುತ್ತದೆಯೇ? ಯಾವ ಭಾಷೆಯಲ್ಲಿ? ಸಕ್ಕದ ಮತ್ತು ಕನ್ನಡದಲ್ಲಂತೂ ಅಲ್ಲ. ಪ್ರಾಕೃತದಲ್ಲೆ? 2. ಳ್->ಣ್ ->ನ್ ಆಗಿ ಬದಲಾಗಿರುವ ನೂರಾರು ಉದಾಹರಣೆಗಳು ಕನ್ನಡ ಮತ್ತು ತಮಿಳಿನಲ್ಲಿವೆ. ನೊಳ->ನೊಣ ಈ ರೀತಿಯ ಒಂದು ಉದಾಹರಣೆ. ಹೆಚ್ಚಿನ ಉದಾಹರಣೆಗಳಿಗಾಗಿ ಶಂಕರಭಟ್ಟರ ಹೊತ್ತಗೆಗಳನ್ನು ಓದಿ. 3. ಪಾಲ್->ಹಾಲ್ ಆಗಿದೆ. ಒಂದು ಪದಕ್ಕೆ ಒಂದೇ ಅರಿಮೆ ಇರಬೇಕು ಅಂತ ಏನೂ ಇಲ್ಲ. ಹಾಗೆಯೇ ಒಂದೆ ವಸ್ತುವಿಗೆ ಹೆಚ್ಚಿನ ಪದಗಳಿರಬಹುದು. ಕಳ್ ಗಿಂತ ಹೆಚ್ಚಿನ ಬಳಕೆಯಲ್ಲಿ ಹಾಲು ಇದೆ ಅಷ್ಟೆ! ಕಳ್ಳಿ ಎಂದರೆ ಹಾಲು ಇರುವ ಗಿಡ ಎಂದು ತಮಗೆ ಗೊತ್ತಿರಬಹುದು. 4. ಬೌದ್ಧರು ಮತಾಂತರಕ್ಕಾಗಿ ಜನರನ್ನು ತಮ್ಮೆಡೆಗೆ ಸೆಳೆಯಲು ದೊಡ್ಡ ದೊಡ್ಡ ಮಂದಿರಗಳನ್ನೂ ಸ್ಥಾಪಿಸಿದರು. ಹಾಗೆಯೇ ಅನೇಕ ಹಿಂದು ಕಥೆಗಳನ್ನು ಕದ್ದು ಬೋಧಿಸತ್ವನಿಗೆ ಅಳವಡಿಸಿಕೊಂಡರು. ಅವನಿಗೂ ಅನೇಕ ಅವತಾರಗಳನ್ನು ಹುಟ್ಟಿಸಿಕೊಂಡರು. ಇದರ ಬಗ್ಗೆ ಸಾಕಷ್ಟು ಐತಿಹಾಸಿಕ ದಾಖಲೆಗಳಿವೆ. ಹಾಗೂ ಇವು ಬುದ್ಧ ತೀರಿ ಹೋಗಿ ಅದೆಷ್ಟೋ ಶತಮಾನಗಳ ನಂತರ ಹುಟ್ಟಿಕೊಂಡ ಕಥೆಗಳು. ಈ ಹೊತ್ತಿಗೆ ಕೃಷ್ಣ ದೇವರ ಪಟ್ಟ ಅಲಂಕರಿಸಿಯಾಗಿತ್ತು ಸರಿ ಕೃಷ್ಣನ ಬಗ್ಗೆ ಬೌದ್ಧ ಸಾಹಿತ್ಯದಲ್ಲಿ ಬರೆಯಲಾಗಿದೆ ಎಂದುಕೊಳ್ಳೋಣ. ಇದರಿಂದ ಕೃಷ್ಣ ದ್ರಾವಿಡನಲ್ಲ ಅಂತ ಹೇಗೆ ನಿರೂಪಿಸಿದಂತಾಗುತ್ತದೆ? ನಾನು ಪ್ರತಿಪಾದಿಸಿರುವುದಕ್ಕೂ ಈ ಪಾಯಿಂಟಿಗೂ ಸಂಬಂಧ ಏನು? 5. ಈ ಪ್ರಶ್ನೆ ನನಗೆ ಅರ್ಥವಾಗಲಿಲ್ಲ. ತಿಳಿದಷ್ಟು ಉತ್ತರ ಕೊಡುತ್ತೇನೆ. ಜಗತ್ತಿನಲ್ಲಿ ಮೂರು ರೀತಿಯ ಮನುಷ್ಯವರ್ಗಗಳಿವೆ. ಕಕೇಶಿಯನ್ (ಯುರೋಪಿನ ಬಿಳಿ ಜನ ಇರುತ್ತಾರಲ್ಲ ಹಾಗೆ. while line ಅಂತಾರೆ) ನಿಗ್ರಾಯಿಡಲ್ (ಉದಾ: ಒಬಾಮಾ, Black line ), ಮಂಗೋಲಿಯನ್ (ಉದಾ: ಜಾಕಿಚಾನ್ yellow line). ದ್ರಾವಿಡರು ನಿಗ್ರಾಯಿಡಲ್ ಚಹರೆ ಹೊತ್ತವರು ಎಂದು ಹೇಳಲಾಗಿದೆ. ಆರ್ಯರದು ಕಕೇಶಿಯನ್. ಉಪಖಂಡದ ಎಲ್ಲೆಡೆ ಕಪ್ಪು ಜನರೇ ಇದ್ದರೂ ಅವರು ದ್ರವಿಡರೇ ಆಗಿದ್ದರು. ಆರ್ಯರಾಗಿರಲಿಲ್ಲ. 6. ನಾನು ಇಲ್ಲಿ ಯಾವ ಹೆಸರಿನೊಂದಿಗೆ ಗೊಂದಲಗೊಂಡಿದ್ದೇನೆ ಎಂಬುದು ತಮ್ಮ ಅಭಿಪ್ರಾಯ? 7. ಹೆಸರೊಂದೇ ಅಲ್ಲದೇ ಇನ್ನೂ ಸಾಕಷ್ಟು ಪಾಯಿಂಟುಗಳನ್ನು ಕೊಟ್ಟಿದ್ದೇನೆ ಪರಾಂಬರಿಸಿ. ಒಂದು ಪಾಯಿಂಟನ್ನು ಅರೆಬರೆಯಾಗಿ ಅಲ್ಲಗಳೆದು ಪೂರ್ಣ ಪ್ರತಿಪಾದನೆಯೇ ತಪ್ಪು ಅಂದರೆ ಹೇಗೆ? ಆ ಕಾಲದಲ್ಲಿ ಎಲ್ಲಿದ್ದೆವೆಂದು ತಿಳಿದುಕೊಳ್ಳಲು ಪುನರ್ಜನ್ಮ ಕಾರ್ಯಕ್ರಮದ ಗಡ್ಡಧಾರಿಗಳನ್ನು ಸಂಪರ್ಕಿಸಬಹುದು. ಪ್ರಜಾವಾಣಿಯ ಅಂಕಣಕಾರರು ಹೇಳಿದ ಮಾತನ್ನು ಪುಷ್ಟೀಕರಿಸಿ ಕೆಲವು ರೆಫರೆನ್ಸ್ ಗಳನ್ನು ಕೊಟ್ಟಾಗ ನನ್ನನ್ನು ಜಾತೀವಾದಿ ಎಂದು ಒಕ್ಕೊರಲಿನಿಂದ ಘೋಷಿಸಿದರು. ಅವರ ಯೋಗ್ಯತೆ ಅಷ್ಟೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬೇರೆ ಕೆಲಸದಲ್ಲಿ ತೊಡಗಿದ್ದರಿಂದ ಪ್ರತಿಕ್ರಿಯಿಸುವದರಲ್ಲಿ ವಿಳಂಬವಾಯಿತು. ನನ್ನ ಪ್ರತಿಕ್ರಿಯೆಗಳಲ್ಲಿ ಒಂದೆರಡು ಅಂಶಗಳು ನಿಮ್ಮ ಲೇಖನಕ್ಕೆ ನೇರ ಉತ್ತರಗಳಲ್ಲ, ನನ್ನ ವಿಚಾರಗಳನ್ನು ಬಿಡಿಯಾಗಿ ದಾಖಲಿಸಿದ್ದೆ ಅಷ್ಟೆ. ಗೊಂದಲವಾಗಿದ್ದರೆ ಕ್ಷಮಿಸಿ. ಈಗ ಸ್ವಲ್ಪ ವಿಸ್ತಾರ ವಾಗಿಯೇ ಚರ್ಚೆ ಮಾಡೋಣ. 1) ಕಾಣ, ಕಣ ಇವೆರಡು ಶಬ್ದಗಳು ಸಂಸ್ಕೃತದಲ್ಲಿ ಇವೆ. ಕಾಗೆ, ಕಪ್ಪು, ಚಟುವಟಿಕೆಯಿಂದ ಕೂಡಿರುವವ ಎಂಬ ಅರ್ಥಗಳು ಉಳಿದ ಇತರ ಅರ್ಥಗಳ ಜೊತೆಗೆ ಇವೆ. 'ಕಾಣಿಯಾ' ಎಂಬ ಶಬ್ದವೂ ಕೂಡ ಇದೆ ಸಂಸ್ಕೃತದಲ್ಲಿ..ಅದರರ್ಥ 'ಒಂಟಿ ಕಣ್ಣಿನ ಮಹಿಳೆಯ ಮಗ' ಎಂದು. ನನ್ನ ಪ್ರಕಾರ ಕನ್ಹಯಾ, ಕಾನ್ಹಯಾ ಎಂಬುದು ಬಳಕೆಯಲ್ಲಿರುವ ಶಬ್ದ. ಅದೂ ಉತ್ತರ ಭಾರತದಲ್ಲಿ, ದಕ್ಷಿಣದಲ್ಲಲ್ಲ. ಸಂಸ್ಕೃತ ನಿಘಂಟು ಇಲ್ಲಿದೆ : http://spokensanskri... ಕಾನ್ಹಾ ಎಂಬುದು ಕಪ್ಪನ್ನು ಸೂಚಿಸುತ್ತೆ ಎಂಬುದನ್ನು ಈ ಇನ್ನೊಂದು ಕೊಂಡಿಯಲ್ಲಿ ನೋಡಬಹುದು : http://www.himalayan... 2) ಮಹಾಭಾರತದ ಕಾಲದಲ್ಲಿದಾಗಲಿ, ರಾಮಾಯಣದ ಕಾಲದಲ್ಲಾಗಲಿ ಆರ್ಯರು ಎಂದು ಹುಟ್ಟಿನಿಂದ, ಬಣ್ಣದಿಂದ ಮಾಡಲ್ಪಡುವ ವರ್ಗಿಕರಣ ಇರಲಿಲ್ಲ. ವೇದಗಳ ಓದಿನಿಂದ ಬರುವ ಪಟ್ಟವಾಗಿರಲಿಲ್ಲ.ಧರ್ಮ ಸಮ್ಮತವಾಗಿ ನಡೆಯುವವನನ್ನು ಆರ್ಯ ಎಂದು ಗೌರವಿಸುವುದಿತ್ತು. ರಾವಣ ಕೂಡ ತನ್ನನ್ನು ತಾನು ಆರ್ಯನೆಂದು ಕರೆದುಕೊಂಡ ಆದರೆ ಅವನ ನಡತೆಯಿಂದ ಉಳಿದವರಿಗೆ ಆತ ಅನಾರ್ಯನೆನಿಸಿದ. ಗಮನಿಸಬೇಕಾಗಿದ್ದು ರಾವಣ ನಾಲ್ಕು ವೇದಗಳ ಪಾರಂಗತನಾಗಿದ್ದ. ರಾವಣನ ಸಹೋದರ ವಿಭೀಷಣ ಆರ್ಯನೆನಿಸಿದ. ಇನ್ನೊಂದು ಉದಾಹರಣೆ ವಾಲಿ ಅನಾರ್ಯನಾದರೆ, ಸುಗ್ರಿವ ಆರ್ಯನಾಗಿದ್ದ. ಮಹಾಭಾರತಕ್ಕೆ ಬಂದರೆ ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ನಡೆದಾಗ ಪ್ರತಿಭಟಿಸಿದ ವಿದುರನೊಬ್ಬನೆ ಆ ಹೊತ್ತಿಗೆ ಆರ್ಯನಾಗುತ್ತಾನೆ, ಉಳಿದವರು ಅನಾರ್ಯರಾಗುತ್ತಾರೆ. ಇಲ್ಲಿ ಆರ್ಯನಲ್ಲದವನು ದ್ರಾವಿಡನಾಗುತ್ತಾನೆ ಎಂಬ ಹೇಳಿಕೆ ಪುರಾತನ ಗ್ರಂಥಗಳಲ್ಲಿ ಕಂಡು ಬರುವುದಿಲ್ಲ. 3) ಮಹಾಭಾರತದ ಕಾಲದಲ್ಲಿ ದ್ರಾವಿಡ ರಾಜ್ಯವೆಂಬುದು ಕುರು, ಪಾಂಚಾಲ, ಕಾಶಿ, ಕೋಸಲ, ಮಗಧಿ, ಅವಂತಿ, ಗಾಂಧಾರ ಮುಂತಾದ ಇನ್ನೂ ಹಲವು ಹತ್ತಾರು ರಾಜ್ಯಗಳೊಂದಿಗೆ ಒಂದಾಗಿತ್ತು. ದಕ್ಷಿಣದಲ್ಲೇ ದ್ರಾವಿಡರು ಜೊತೆಗೆ ಹಲವು ರಾಜ್ಯಗಳು ಇದ್ದವು. ನಮ್ಮ ಈಗಿನ ಕರ್ನಾಟಕ ಭಾಗದಲ್ಲೇ ಕಿಷ್ಕಿಂದಾ, ಮಹಿಷಕ ಮುಂತಾದ ರಾಜ್ಯಗಳಿದ್ದವು. 4) ಇನ್ನು ಈ 'ಆರ್ಯ' ಜನಾಂಗದವರು ಕೀಳು ಜಾತಿಯವರನ್ನು ದ್ರಾವಿಡರೆಂದು ಕರೆದರು ಎನ್ನುವುದಾದರೆ, ಮಹಾಭಾರತ ಸಮಯದಲ್ಲಿ ಮ್ಲೇಚ್ಛ, ಸುದ್ರ, ಪಿಶಾಚ ಮುಂತಾದ ಹೆಸರಿನ ಅನಾರ್ಯರು ಎನಿಸಿಕೊಂಡವರ ರಾಜ್ಯಗಳು ಇದ್ದವು ಎಂಬುದನ್ನು ಗಮನಿಸಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

೧. ಸಕ್ಕದ ನಿಘಂಟಿನಲ್ಲಿ 'ಕಾಣ' ಶಬ್ದಕ್ಕೆ ಕಾಗೆ, ಒಂಟಿ ಕಣ್ಣು, ಕುರುಡು ಎಂಬ ಅರ್ಥವಿದೆ. ಕಪ್ಪು ಎಂಬ ಅರ್ಥವಿಲ್ಲ. ಒಂದು ಪದದ ಬಳಕೆಯ ಬಗೆಗೆ ಹೇಳುವಾಗ ಅದು ಎಷ್ಟು ಪ್ರಚಲಿತವಾಗಿ ಪ್ರಯೋಗವಾಗಿದೆ ಎಂಬುದನ್ನು ನೋಡಬೇಕಾಗುತ್ತದೆ. 'ಕಾಣಿಯಾ' ಬಗ್ಗೆ ಹೇಳುವುದು ಇಲ್ಲಿ ಉಪಯೋಗವಿಲ್ಲ. ಉತ್ತರ ಭಾರತದಲ್ಲಿ ಬಳಕೆಯಲ್ಲಿದ್ದರೂ ಅವರು ಮೂಲ ದ್ರಾವಿಡ ಶಬ್ದವನ್ನೇ ಬಳಕೆ ಮಾಡುತ್ತಿದ್ದಾರೆ. ಅನೇಕ ದ್ರಾವಿಡ ಶಬ್ದಗಳು ಮೂಲರೂಪದಲ್ಲಿ ಉತ್ತರಭಾರತದಲ್ಲಿ ಬಳಕೆಯಲ್ಲಿವೆ. ಎರಡನೆಯ ಕೊಂಡಿಯಲ್ಲಿ ಕಾನ್ಹಾ ಎಂದರೆ ಕಪ್ಪು ಎಂದು ಹೇಳಲಾಗಿದೆ. ಇದು ಬೋಧಿಸತ್ವನ ಬಗೆಗೆ ಇರುವ ಮಿನ್ನೆಲೆ.( website ) ನುಡಿಯ ಬಗೆಗಿನದು ಅಲ್ಲ. ಇಲ್ಲಿ ಕಾನ್ಹಾ ಎಂದರೆ ಏಕೆ ಕಪ್ಪು, ಪದದ ನಿಷ್ಪತ್ತಿ ಏನು ಎಂಬುದನ್ನು ಹೇಳಲಾಗಿಲ್ಲ. ಹಾಗಾಗಿ ಭಾಷೆಯ ವಿಷಯಕ್ಕೆ ಬಂದಾಗ ಈ ಲಿಂಕನ್ನು ಆಥೆಂಟಿಕ್ ಎಂದು ತೆಗೆದುಕೊಳ್ಳಲಾಗುವುದಿಲ್ಲ. ಯಾರೋ ಎಲ್ಲೋ ನಿಂತು ಹೇಳಿದಂತಿದೆ ಇದರಲ್ಲಿ. ಹಾಗಾಗಿ ಕಾನ್ಹಾ ಎಂದರೆ ಕಪ್ಪು ಎಂಬುದನ್ನು ನಿರೂಪಿಸುವ ಜವಾಬ್ದಾರಿ ನಿಮ್ಮ ಹೆಗಲಿನಿಂದ ಇಳಿದಿಲ್ಲ. ಕಾನ್ಹಾ ಎಂಬುದು ಕಪ್ಪು ಎಂಬುದರ ಪರ್ಯಾಯ ಪದವಾಗಿ ಯಾವುದಾದರೂ ಗ್ರಂಥಗಳಲ್ಲಿ ಉಲ್ಲೇಖವಾಗಿದೆಯೇ ಎಂಬುದನ್ನು ಕೊಂಚ ತಿಳಿಸಿ ೨. ದ್ರಾವಿಡ ಎಂಬುದು ಇತ್ತೀಚಿಗೆ ಬಳಕೆಗೆ ಬಂದ ಪದ. ಆಗಿನ ಕಾಲದಲ್ಲಿ ಆರ್ಯರಲ್ಲದವರನ್ನು ದ್ರಾವಿಡರು ಎಂದು ಕರೆಯಲಾಗುತ್ತಿದ್ದಿಲ್ಲ. ಹಾಗೆಯೇ ಆರ್ಯ ಅನಾರ್ಯದ ಬಗೆಗೆ ನೀವು ಕೊಟ್ಟಿರುವ ವಿಶ್ಲೇಷಣೆಗಳು ಭೌತಿಕ ಅರ್ಥವನ್ನು ಮೀರಿ ಬರೆದಿರುವವು. ನಾನು ಇಲ್ಲಿ ಅನಾರ್ಯ ಅಥವಾ ದ್ರಾವಿಡ ಪದವನ್ನು ಮುಖ್ಯವಾಗಿ ಬಳಸಿರುವುದು ಭಾಷೆಯ ಆಧಾರದ ಮೇಲೆ. ದ್ರಾವಿಡ ಭಾಷೆಯನ್ನಾಡುವ ಜನಾಂಗದವರು ಎಂಬ ಅರ್ಥದ ಮೇಲೆ. ೩. ದ್ರಾವಿಡ ಪ್ರದೇಶಗಳು ಎಲ್ಲ ರಾಜ್ಯಗಳಲ್ಲೂ ಇದ್ದವು. ಹಾಗೆಯೇ ಕಂಸನಾಳುತ್ತಿದ್ದ ಪ್ರದೇಶದಲ್ಲೂ ಇತ್ತು ಎಂದು ಹಿಂದಿನ ಪ್ರತಿಕ್ರಿಯೇಯಲ್ಲೇ ಹೇಳಿದ್ದೇನೆ. ೪. ನನ್ನ ಎರಡನೆಯ ಪಾಯಿಂಟನ್ನು ಮತ್ತೆ ಓದಿ. ೫. ಬಲರಾಮನ ಬಗೆಗೆ ಹೇಳಿದ್ದು ಒಳ್ಳೆಯದಾಯಿತು. ಅವನನ್ನು out of context ನಲ್ಲಿ ಇಟ್ಟಿದ್ದೆ. ಬಲರಾಮ ಕೃಷ್ಣನ ಜೊತೆಯೇ ಬೆಳೆದಿದ್ದು. ರೋಹಿಣಿ ಯಾರು? ಪಟ್ಟದ ಅರಸಿಯೇ? ಆಕೆ ವಾಸುದೇವನ ಹೆಂಡತಿಯಾಗಿ ಸಹ ಗೋಕುಲದಲ್ಲಿ ಏಕೆ ಜಿವಿಸಿದಳು ? ರೋಹಿನಿಯಿದ್ದೂ ಸಹ ಪಟ್ಟದ ಅರಸಿಯಾಗಿ ದೇವಕಿಯನ್ನು ವಾಸುದೇವ ಏಕೆ ಮದುವೆಯಾದ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ಗೋಕುಲದಲ್ಲಿ ವಾಸಿಸಿದ ರೋಹಿನಿಯೂ ದ್ರಾವಿಡ ಹೆಂಗಸೇ ಆಗಿರಬೇಕು. ಅಥವಾ ಬಲರಾಮ ತನ್ನ ಮಗನೆಂದು ಹೇಳಿಕೊಳ್ಳಲಾಗದ ಸಂಬಂಧ ವಾಸುದೇವ ಮತ್ತು ರೋಹಿನಿಯರದು ಆಗಿರಬೇಕು. ಯಾಕೆಂದರೆ ಬಲಭದ್ರ ಪಟ್ಟಕ್ಕೆ ಬರಲಿಲ್ಲ. ಅಂದರೆ ಅವನೂ ರಾಜನಾಗಲು ಅರ್ಹನಲ್ಲ ಎಂಬ ಕಾರಣಕ್ಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಲ್ಲಿಯವರೆಗೆ ಚರ್ಚಿಸಿದ್ದನ್ನು ಒಟ್ಟು ಹಾಕೋಣ...ಗೊಂದಲ ಕಡಿಮೆ ಮಾಡಿಕೊಳ್ಳೊಣ :). ನಿಮ್ಮ ಊಹೆಗಳು ಮತ್ತು ನೀವು ಲೇಖನದ ಮೂಲಕ ಹೇಳಲು ಬಯಸಿದ್ದು : 1) ಶ್ರೀಕೃಷ್ಣ ಕನ್ನಡಿಗ. 2) ಶ್ರೀಕೃಷ್ಣ ದ್ರಾವಿಡ. 3) ಶ್ರೀಕೃಷ್ಣ ಯಾದವನಲ್ಲ. ವಸುದೇವನ ಮಗನೂ ಅಲ್ಲ. ಕಂಸನನ್ನು ಕೊಂದು ಉಪಕಾರ ಮಾಡಿದ್ದರಿಂದ ಅವನನ್ನು ವಸುದೇವ ಮಗನಾಗಿ ಸ್ವೀಕರಿಸಿದ. 4) ಕೆಳಜಾತಿಯವನನ್ನು ದೇವರೆಂದು ಕೊಂಡಾಡುವುದು ಸರಿಯಾಗಲಾರದೆಂದು, ಅವನನ್ನು 'ಯಾದವ'ನನ್ನಾಗಿ ಮಾಡಿಕೊಳ್ಳಲಾಯಿತು. 5) ಕೆಳ ಜಾತಿಯವನಾದದದ್ದರಿಂದ ಅವನಿಗೆ ರಾಜಪಟ್ಟ ನಿರಾಕರಿಸಲಾಯಿತು. ಇದಕ್ಕೆ ನೀವು ಕೊಟ್ಟ ಆಧಾರ/ ಸಮರ್ಥನೆಗಳು : 1) ಕನ್ನಯ್ಯಾ ಎಂಬುದು ಕನ್ನಡದಿಂದ ಪಡೆದುಕೊಂಡ ಹೆಸರು. ಕಳ್ (ಹಾಲು) -ಕನ್ ಆಗಿ, ಹಸು ಸಾಕುವವರ ಬೀಡಾಗಿದ್ದರಿಂದ ನಮ್ಮ ನಾಡು ಕನ್ನಡ ನಾಡಾಯ್ತು..ನುಡಿ ಕನ್ನಡವಾಯ್ತು. ಕೃಷ್ಣ ಈ ಕುಲಕ್ಕೆ ಸೇರಿದ್ದರಿಂದ ಕನ್ನಯ್ಯಾ ಎಂಬ ಹೆಸರು ಪಡೆದುಕೊಂಡ. 2) ಆರ್ಯರು ಕಕೆಶಿಯನ್., ಅವರ ಮೈಬಣ್ಣ ಬಿಳಿ. ದ್ರಾವಿಡರು ನಿಗ್ರಾಯಿಡಲ್, ಅವರ ಬಣ್ಣ ಕಪ್ಪು. ಆದ್ದರಿಂದ ಕೃಷ್ಣ ದ್ರಾವಿಡ. 3) ಕಂಸನನ್ನು ಕೊಂದ ಮೇಲೂ ಕೃಷ್ಣನಿಗೆ ರಾಜ ಪಟ್ಟ ಸಿಗಲಿಲ್ಲ. ಕಾರಣ ಅವನ ಕೀಳು ಜಾತಿಯಿಂದರಬಹುದೆ? ನಾನು ಒಪ್ಪಿಕೊಳ್ಳದ್ದು: ನಿಮ್ಮ 1ರಿಂದ 5 ಊಹೆಗಳಿಗೆ ನನ್ನ ಸಹಮತಿ ಇಲ್ಲ. ಒಪ್ಪಿಕೊಳ್ಳಬಹುದಾದದ್ದು: 1) ಕೃಷ್ಣನ ಕುಲದಲ್ಲಿ ಕೆಲವರು ಕನ್ನಡ ನಾಡಿಗೆ ಬಂದರೆ, ಆಳಿದರೆ? ಹೌದು. ಸೇವುಣರು, ದನಗರ/ದಂಗರ ಪಂಗಡದವರು ತಮ್ಮನ್ನು ದ್ವಾರಕಾ ಮೂಲದವರು, ಕೃಷ್ಣವಂಶದವರು ಎಂದೇ ಕರೆದುಕೊಂಡರು. ಈಗಿನ ಕಾಲದಲ್ಲಿಯೂ ಉತ್ತರ ಕನ್ನಡ ಪ್ರದೇಶಕ್ಕೆ ಬಂದರೆ ಕಾಡಿನಲ್ಲಿ ವಾಸಿಸುವ, ಗೋಪಾಲನ್ನೇ ಮುಖ್ಯ ಕಸುಬು ಮಾಡಿಕೊಂಡಿರುವ ಗವಳಿ ಜನಾಂಗದವರನ್ನು ಕಾಣಬಹುದು. 2) ವೇದಕಾಲದಲ್ಲಿ ಆಗಿನ ವೇದ ಧರ್ಮದ ನಿತ್ಯ ಆಚರಣೆಗಳನ್ನು ಪಾಲಿಸುವವರು ಮತ್ತು ವೇದ ಧರ್ಮ ನಿತ್ಯ ಆಚರಣೆಗಳನ್ನು ಪಾಲಿಸದವರು ಎಂಬ ಎರಡು ಕುಲ/ಪಂಗಡಗಳಿದ್ದವು. ಈ ಪಾಲಿಸದವರಲ್ಲಿಯೂ ಕೆಲವು ಪಂಗಡಗಳಿಗೆ ಯಾವುದೇ ರಾಜಕುಟುಂಬದಲ್ಲಿ ಅನಿರ್ಭಂದಿತ ಪ್ರವೇಶವಿತ್ತು. ಯದು ಕುಲ ಅಂಥಹ ಕುಲಗಳಲ್ಲಿ ಒಂದು. ( ವೃತ್ಯಾ ಎಂಬದೊಂದು ಅವರಿಗೆ ಅವರೆ ಸಾಟಿ ಎಂಬಂತಹ 'ಅದ್ಭುತ' ಪಂಗಡವಿತ್ತು ಮಧ್ಯಭಾರತ ಪ್ರದೇಶದಲ್ಲಿ. ಕೃಷ್ಣನ ಕುಲವಾದ ಯದು/ವೈಷ್ಣಿ ಈ ಪಂಗಡಕ್ಕೆ ಸೇರಿರಬಹುದು/ ಪ್ರಭಾವಿತವಾಗಿರಬಹುದು ಎಂಬಂತ ಉಲ್ಲೇಖ ಹಲವು ಪುರಾತನ ಗೃಂಥಗಳಲ್ಲಿದೆ. ಕೃಷ್ಣನ ವರ್ತನೆ, ಸ್ವಭಾವ ಈ ಪಂಗಡದವರನ್ನು ತುಂಬಾ ಹೋಲುತ್ತದೆ.) ------------ ಇನ್ನು ನಿಮ್ಮ ಕೆಲವೊಂದು ಪ್ರಶ್ನೆಗಳಿಗೆ ಸ್ಪಷ್ಟಿಕರಣ. 1) ಕಾನ್ಹಾ, ಕನ್ಹಯಾ ಹೆಸರಿನ ಬಗ್ಗೆ :
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇನ್ನೊಂದು ವಿಷಯ ಸಣ್ಣ ಉದಾಹರಣೆಯೊಂದಿಗೆ.. ನಮ್ಮ ಅಂದರೆ ಗೌಡ ಸಾರಸ್ವತ / ಸಾರಸ್ವತ ಸಮಾಜದವರ ಮೂಲ ಇರುವುದು ಸರಸ್ವತಿ ನದಿ ತೀರದಲ್ಲಿ ಅನ್ನುತ್ತಾರೆ. ಸಾರಸ್ವತ ಮುನಿಗಳು ನಮ್ಮ ಮೂಲ ಪುರುಷರು ಅಥವಾ ನಾವು ಅಲ್ಲಿ ಅವರ ಅನುಯಾಯಿಗಳಾಗಿದ್ದೆವು ಅನ್ನುವ ಹೇಳಿಕೆಯೂ ಇದೆ. ಸರಸ್ವತಿ ನದಿ ಬತ್ತಿ, ಭೀಕರ ಬರಗಾಲ ಪ್ರಾರಂಭವಾದ ವರುಷಗಳಲ್ಲಿ ಅಲ್ಲಿದ್ದ ಜನ ನೀರು, ಆಹಾರ ಹುಡುಕಿಕೊಂಡು ಬೇರೆ, ಬೇರೆ ಪ್ರದೇಶಗಳಿಗೆ ವಲಸೆ ಹೋಗಲು ಪ್ರಾರಂಭ ಮಾಡಿದರು. ಹೆಚ್ಚಿನ ಜನ ಕೊಂಕಣ/ ಗೋಮಾಂತಕ (ಈಗಿನ ಗೋವಾ) ಪ್ರದೇಶದತ್ತ ವಲಸೆ ಹೋದರೆ..ಕೆಲವರು ಪ. ಬಂಗಾಳ, ಕಾಶ್ಮೀರದತ್ತ ವಲಸೆ ಹೋದರು. ಹಾಗೆ ಹೋದವರಲ್ಲಿ, ಈಗ ಪ್ರಸ್ತುತದದಲ್ಲಿ ಯಾರ್ಯಾರು ಯಾವ ಯಾವ ಭಾಷೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಗೋವಾಕ್ಕೆ ಬಂದವರಂತು ಕೊಂಕಣಿ ಮಾತನಾಡುತ್ತಿದ್ದಾರೆ. ಈಗ ಹೇಳಿ ನಾನು 'ಸಾರಸ್ವತ ಮುನಿಗಳು ಕೊಂಕಣಿಗರೆ?' ಎಂಬ ಪ್ರಶ್ನೆ ಹಾಕಿ , ಪ್ರತಿಪಾದಿಸಬಹುದೆ?. ನನ್ನ 'ಈಗಿನ' ಭಾಷಾ ಸ್ಥಿತಿಯನ್ನು .. 'ಆಗಿನ' ವೇದ ಕಾಲದ ಸರಸ್ವತಿ ಮುನಿಗಳಿಗೆ ಅನ್ವಯಿಸಬಹುದೆ? ಇದರಲ್ಲಿ ಹುರುಳಿದೆ ಅನಿಸುತ್ತದೆಯೆ? ( ಇದಕ್ಕೆ ನಾನು ನನ್ನ ಮೊದಲ ಪ್ರತಿಕ್ರಿಯೆಯಲ್ಲಿ 'ಈಗ ಇಲ್ಲಿರುವ ನಾವು ಆಗ ಎಲ್ಲಿದ್ದೇವೊ' ಎಂಬ ಪ್ರಶ್ನೆ ಹಾಕಿದ್ದು..ನೀವು ಯಾವುದೊ ಗಡ್ಡದಾರಿಗಳ ದಾರಿ ತೋರಿಸಿದಿರಿ! :) )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

<<ದಕ್ಕೆ ನಾನು ನನ್ನ ಮೊದಲ ಪ್ರತಿಕ್ರಿಯೆಯಲ್ಲಿ 'ಈಗ ಇಲ್ಲಿರುವ ನಾವು ಆಗ ಎಲ್ಲಿದ್ದೇವೊ' ಎಂಬ ಪ್ರಶ್ನೆ ಹಾಕಿದ್ದು..ನೀವು ಯಾವುದೊ ಗಡ್ಡದಾರಿಗಳ ದಾರಿ ತೋರಿಸಿದಿರಿ! >> ಒಂದು ಪಂಚ್ ಕೊಟ್ಟು ಉತ್ತರ ಕೊಡು ಎಂದರೆ ಹೇಗೆ? confuse ಆಗಿ ಹೋಗುತ್ತದೆ. ಬರವಣಿಗೆ ಇಲ್ಲದ ಕಾಲದ ಇತಿಹಾಸವನ್ನು ಕೆದಕುವಾಗ ಜನಪದ ಕಥೆ ಕಾವ್ಯ ಮತ್ತು ಬಾಷಾಶಾಸ್ತ್ರದ ಆಧಾರದ ಮೇಲೆಯೇ ಕೆದಕಬೇಕು. ನುಡಿನಿಯಮ, ಬೆಳವಣಿಗೆ ಮತ್ತು ಕಥೆಗಳ ಸಾಮ್ಯತೆ ಇತ್ಯಾದಿಗಳು ಇತಿಹಾಸವನ್ನು ಗುರುತಿಸುವಲ್ಲಿ ಸಹಾಯಕವಾಗುತ್ತವೆ. ಪುರಾತತ್ವ ಶಾಸ್ತ್ರಜ್ಞರು ಇದನ್ನೆ ಅನುಸರಿಸುತ್ತಾರೆ. ಆ ಕಾಲದಲ್ಲಿ ನಾವಿದ್ದೆವೆ ? ಎಂದು ಪ್ರಶ್ನೆ ಕೇಳಿಕೊಂಡು ಸುಮ್ಮನಿದ್ದರೆ ಚರಿತ್ರೆ ನಿಲುಕೀತೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

<<ಕೃಷ್ಣನ ಕುಲದಲ್ಲಿ ಕೆಲವರು ಕನ್ನಡ ನಾಡಿಗೆ ಬಂದರೆ, ಆಳಿದರೆ?>> ಹಾವೇರಿ ಜಿಲ್ಲೆಯಲ್ಲಿ ಸವಣೂರು ಅಂತ ಇದೆ. ಆದರೆ ಗವುಳ->ಗವುಡ->ಗೌಡ ಆಗಿದೆ. ದನಕರ->ದಂಕರ->ದಂಗರ ಆಗಿದೆ. ಮೂಲ ಹೆಸರಲ್ಲೆ ಇದೆ ನೋಡಿ ಕನ್ನಡದ ಇರುವಿಕೆಯ ಸಾಕ್ಷಿ! <<ವೃತ್ಯಾ ಎಂಬದೊಂದು ಅವರಿಗೆ ಅವರೆ ಸಾಟಿ ಎಂಬಂತಹ 'ಅದ್ಭುತ' ಪಂಗಡವಿತ್ತು ಮಧ್ಯಭಾರತ ಪ್ರದೇಶದಲ್ಲಿ.>> ಇದರ ಬಗ್ಗೆ ಹೆಚ್ಚಿಗೆ ತಿಳಿದಿಲ್ಲ. ಗೂಗಲಿಸಿದರೂ ದೊರೆಯಲಿಲ್ಲ. ಕೊಂಚ ಕೊಂಡಿಯಿದ್ದರೆ ಹಂಚಿಕೊಳ್ಳಿ. 1. ಅ., ಆ, no comments. ಇ. ಇದು ನಂಬಲಸಾಧ್ಯ. ಈ. 'ಕಳ್' ಶಬ್ದ ಬಳಕೆಯಲ್ಲಿದೆ. ಕಳ್ಳಿ ಎಂದರೆ ಹಾಲಿರುವ ಗಿಡ. ಪದ ಬದಲಾದ ಮೇಲೆ ಮೂಲ ತಿಳಿಮೆಯಲ್ಲಿಯೇ ಬಳಕೆಯಲ್ಲಿರಬೇಕೆಂಬ ನಿಯಮವಿಲ್ಲ. ಉ. ಮಹಿಷಕ ಕಿಷ್ಕಿಂದಾ ಕರ್ನಾಟಗಳು ದ್ರಾವಿಡ ರಾಜ್ಯಗಳು. ಆರ್ಯ ರಾಜ್ಯಗಳಲ್ಲ. ಹಾಗಾಗಿ ದ್ರಾವಿಡ ಪ್ರಭಾವದಿಂದ ಆರ್ಯ ಹೆಸರು ಬದಲಾಗುವ ಸಾದ್ಯತೆಗಳಿಲ್ಲ. ಕರುನಾಡಿಗರ್->ಕನ್ನಡಿಗರ್ ಎಂಬುದು ಸಾಧ್ಯತೆಯಿದೆಯಾದರೂ ಕನ್ನಡಿಗರ್ ದಿಂದ ಕನ್ನಡ ಆಗುವುದಿಲ್ಲ. ಭಾಷೆಯಿಂದ ಜನಾಂಗದ ಹೆಸರು ಬರುತ್ತದೆಯೇ ಹೊರತು ಜನಾಂಗದಿಂಧ ಭಾಷೆಗಲ್ಲ. ಕರ್ನಾಡಿಗರ್ ನಾಡು ನಿಂದ ಕನ್ನಡ ಆಗುವುದು ಬಹಳ ದೂರದ ಮಾತು. ಯಾವ ನುಡಿನಿಯಮಗಳೂ ಇದನ್ನು ಪುಷ್ಟೀಕರಿಸುವುದಿಲ್ಲ. ಇದೇ ತಮಿಳಿನ ಚಂಗಸಾಹಿತ್ಯದಲ್ಲಿ 'ಕಳಭ್ರರ್' (ಆಡು ಭಾಷೆಯಲ್ಲಿ ಕಳಪ್ಪಿರಾರ್) ಬಗ್ಗೆ ಬಣ್ಣನೆಯಿದೆ. ಇದು ಕನ್ನಡಿಗರೇ ಆಗಿರಬಹುದು ಎಂಬುದು ನನ್ನ ಊಹೆ. ಇದರ ಬಗ್ಗೆ ಶಂಭಾ ಜೋಶಿಗಳೂ ತಮ್ಮ ಸಂಪುಟದಲ್ಲಿ ಬರೆದಿದ್ದಾರೆ. 2. ಬಲರಾಮನ ಬಗ್ಗೆ: ಸರಿ ನೀವು ಹೇಳಿದ್ದು ಒಪ್ಪಿಕೊಂಡೆ. ಕಂಸನಂತಹ ಬಲಶಾಲಿ ರಾಜನ ಸೆರೆಮನೆಯಿಂದ ಕೃಷ್ಣನನ್ನು ಹೇಗೆ ಹೊರಗೆ ಸಾಗಿಸಲಾಯಿತು? (ಕೃಷ್ಣನ ದೈವತ್ವದ ಕಾರಣ ಬೇಡ.) ವಸುದೇವ ಆರ್ಯನಾದುದರಿಂದ ಬಲರಾಮನಿಗೆ ಬಿಳಿ ಬಣ್ಣ ಬಂದಿರುವ ಸಾಧ್ಯತೆಯಿದೆ. (ರಾವಣನ ಉದಾಹರಣೆ ನೋಡಿ). ನನಗೆ ಏಳುತ್ತಿರುವ ಪ್ರಶ್ನೆಗಳೆಂದರೆ, ಅ. ಹಿರಿಯ ಹೆಂಡತಿ ರೋಹಿಣಿ ಪಟ್ಟದರಸಿಯಾಗಲಿಲ್ಲ ಏಕೆ? ಆಕೆ ನಂದಗೋಕುಲದಲ್ಲಿ ಏಕೆ ನೆಲೆಸಿದಳು? ಆಕೆ ನಂದಗೋಕುಲದಲ್ಲಿ ನೆಲೆಸಿದುದು ಕಂಸನಿಗೆ ತಿಳಿಯಲಾರದೇ ಹೋಯಿತೆ? ಆ .ದ್ವಾರಕೆಗೆ ಹೋದ ಮೇಲೆಯೂ ಉಗ್ರಸೇನನೇ ಯಾಕ ರಾಜನಾದ? ಮೂಲತಃ ಅಲ್ಲಿಯವನಾದ ವಸುದೆವ ಯಾಕಾಗಲಿಲ್ಲ? ಕೃಷ್ಣನಿಗೆ ರಾಜ್ಯದಾಹ ಇರದಿದ್ದರೂ ದ್ವಾರಕೆಗೆ ನ್ಯಾಯಬದ್ಧವಾಗಿ ವಾರಸುದಾರನಾಗಬೇಕಿದ್ದ ವಸುದೇವನ ಹಿರಿಯ ಮಗ ಬಲರಾಮ ಏಕೆ ರಾಜನಾಗಿಲ್ಲ? ಉಗ್ರಸೇನನನ್ನು ಇಲ್ಲಿಯೂ ಪಟ್ಟದಲ್ಲಿ ಕೂರಿಸುವುದು ಹೇಗೆ ಸರಿ? ದ್ರವಿಡ ಭಾಷೆಯ ಬಗ್ಗೆ : ಅ. ಇದು ನನ್ನ ಮಾತನ್ನೇ ಪುಷ್ಟೀಕರಿಸುತ್ತದೆ. ಆ. ಸಕ್ಕದ ಒಂದೇ ಆರ್ಯ ಭಾಷೆ ಅಲ್ಲ. ಸಾಕಷ್ಟು ಆರ್ಯ ಭಾಷೆಗಳಿದ್ದವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

1. ಅ. ಸವಣೂರಿನ ಮೂಲ ಗೊತ್ತಿಲ್ಲ ಆದರೆ ಸೇವುಣರು ಆಳಿದ್ದು ಉತ್ತರಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗವನ್ನೆ. ತುಂಗಭದ್ರಾದಿಂದ ನರ್ಮದಾವರೆಗೆ. ಆದ್ದರಿಂದ ಸಾಧ್ಯತೆಯೂ ಇದೆ. ಸವಣೂರಿನಲ್ಲಿ ನವಾಬರ ಮೊದಲು ಮರಾಠರ ಆಳ್ವಿಕೆಯಿತ್ತು. ಸೇವುಣರ ರಾಜಧಾನಿ ಮಹಾರಾಷ್ಟ್ರದ ದೇವಗಿರಿ (ದೌಲತಾಬಾದ). ಕನ್ನಡ, ಮರಾಠಿ, ಸಂಸ್ಕೃತ ಆಡಳಿತ ಭಾಷೆಗಳಾಗಿದ್ದವು. ಆ. ದನಗರ/ದಂಗರ ಪಂಗಡದ ಮೂಲ ಸಂಸ್ಕೃತದಲ್ಲಿದೆ ಸಂಶೋಧಕರ ಪ್ರಕಾರ. ಈಗಿನ ಕುರುಬ ಸಮಾಜದವರನ್ನು ದಂಗರ ಕುಲಕ್ಕೆ ಸೇರಿದವರು ಎನ್ನುತ್ತಾರೆ (?). ಮರಾಠಿ ಮಾತನಾಡುವ, ದನ ಸಾಕುವ ಕಸುಬು ಮಾಡಿಕೊಂಡವರು ಗವಳಿಗಳಾದರು. ಇವರನ್ನು ನೀವು ಉತ್ತರಕನ್ನಡದ ಮುಂಡಗೋಡ, ಹಳಿಯಾಳ, ಯಲ್ಲಾಪೂರ ತಾಲೂಕುಗಳು ಮತ್ತು ಬೆಳಗಾಂ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ನೋಡಬಹುದು. ಈ ದಂಗರಲ್ಲಿಯೇ ಹತ್ತು ಪಂಗಡಗಳಿವೆ. ಅದರಲ್ಲಿ ಒಂದು ಪಂಗಡವಾದ ಉರಾಣ ದಂಗರರ ಭಾಷೆ ಕುರುಕ್ ಮಾತ್ರ ದ್ರಾವಿಡ ಭಾಷಾ ಸಂಕುಲಕ್ಕೆ ಸೇರಿದ್ದು. ವಿಜಯನಗರ ಸ್ಥಾಪಕರಾದ ಹಕ್ಕ-ಬುಕ್ಕ, ರಾಷ್ಟ್ರಕೂಟರು, ಹೊಯ್ಸಳರು ಇವರೆಲ್ಲ ದಂಗರ ಕುಲದವರು. 2. ವೃತ್ಯಾ ಪಂಗಡದ ಬಗ್ಗೆ ಇಲ್ಲಿ ಓದಿ. ಯಾವುದೇ ವಿವರವನ್ನು ಹಾರಿಸಿ ಓದಬೇಡಿ.. ಯಾಕೆಂದರೆ ವಿವರಗಳು ಕುತೂಹಲಕಾರಿಯಾಗಿವೆ. http://ssubbanna.sul... 3. ಬಲರಾಮನ ಬಗ್ಗೆ : ಅ. >> ಕಂಸನಂತಹ ಬಲಶಾಲಿ ರಾಜನ ಸೆರೆಮನೆಯಿಂದ ಕೃಷ್ಣನನ್ನು ಹೇಗೆ ಹೊರಗೆ ಸಾಗಿಸಲಾಯಿತು? << ಇದಕ್ಕೆ ಬಹುಶ: ನೇರ ಉತ್ತರ ಹುಡುಕಲು ಬರುವುದಿಲ್ಲವೇನೊ? ಇದನ್ನು ನಮ್ಮ ಈಗಿನ ಸೆರೆಮನೆ ಕಥೆಗಳಿಗೆ ಹೋಲಿಸಬಹುದು. ಅಬ್ದುಲ ಕರೀಮ ತೆಲಗಿ ಅಧಿಕೃತವಾಗಿ ಮುಂಬೈ ಜೈಲಿನ ದಾಖಲಾತಿಯಲ್ಲಿದ್ದೂ, ಹತ್ತು ದಿನ ಗೋವಾದ ಕೊಲ್ವಾದಲ್ಲಿ ಮಜಾ ಮಾಡಿದ ಹಾಗೆ (ಅದೂ ಸಬ್ ಇನಸ್ಪೆಕ್ಟರ ಸಾಥ್ ನಲ್ಲಿ! ), ನಮ್ಮ ಯಡಿಯೂರಪ್ಪನವರು ಜೈಲಿನಿಂದಲೇ ತಮ್ಮ ಪಕ್ಷದ ಸಚಿವರಿಗೆ ಕರೆ ಮಾಡಿ ದೀಪಾವಳಿ ಶುಭಾಷಯ ಹೇಳಿದ ಹಾಗೆ! 'ಕಾಯು'ವವನು ದಯಾಳುವಾಗಿದ್ದರೆ ಕೊಲ್ಲುವವನೇನು ಮಾಡಬಲ್ಲ? :). ಹಾಗೇ ಕೇಳಬೇಕೆಂದರೆ, ಕಂಸನಿಗೆ ದೇವಕಿಯ ಮಗನಿಂದ ತನಗೆ ಮರಣ ಬರುವುದೆಂದು ಗೊತ್ತಿತ್ತಲ್ಲವೆ?..ಹಾಗಾದರೆ ವಸುದೇವ- ದೇವಕಿಯರನ್ನು ಒಂದೇ ಕೋಣೆಯಲ್ಲಿಡುವ ಮೂರ್ಖತನ ಏಕೆ ಮಾಡಿದ ಎಂದು ಕೇಳಬಹುದು. ! ;). ಆ. ರೋಹಿಣಿಯ ಮಕ್ಕಳಿಂದ ಕಂಸನಿಗೆ ಅಪಾಯ ವಿರಲಿಲ್ಲ. ಅಪಾಯವಿದ್ದದ್ದು ದೇವಕಿಯ ಹೊಟ್ಟೆಯಲ್ಲಿ ಹುಟ್ಟುವ ಎಂಟನೆಯ ಶಿಶುವಿನಿಂದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

1. ಅ. ಕಡೆಗೂ ತಿರು ತಿರುಗಿ ನಾನು ಹೇಳಿದಂತೆಯೇ ಆಗುತ್ತಿದೆಯಲ್ಲ...!! ಆ.ಸವುಣರ ಆಡಳಿತ ಭಾಷೆಗಳಲ್ಲಿ ಒಂದು ಕನ್ನಡ. ದಂಗರು ದ್ರಾವಿಡರು. ಕನ್ನಡ ಸಾಮ್ರಾಜ್ಯವನ್ನು ಸ್ಥಾಪಿಸಿದವರು. 2. ವೃತ್ಯಾ ಪಂಗಡದವರು ಅಲೆಮಾರಿಗಳು. ಹೊಟ್ಟೆಪಾಡಿಗಾಗಿ ದೈಹಿಕ ಕಸರತ್ತುಗಳು ಸೇರಿದಂತೆ ಅನೇಕ ಕಸುಬುಗಳನ್ನು ನಂಬಿಕೊಂಡವರು. ಜೀವನ ಶೈಲಿಯನ್ನು ನೋಡಿದರೆ ಜಿಪ್ಸಿಯರನ್ನು ಹೋಲುತ್ತದೆ. ಇವರು ಮಧ್ಯ ಯುರೊಪಿಗೆ ಸೇರಿದವರು ಎಂದು ಹೇಳಲಾಗಿದೆ. ಸಾಕಷ್ಟು ಅಲೆಮಾರಿ ಪಂಗಡಗಳು ಉಪಖಂಡದಲ್ಲೂ ಇವೆ. ಆದರೆ ಇವು ಕೃಷ್ಣನ ಪಂಗಡದ ಜೀವನ ಶೈಲಿಯನ್ನು ಹೇಗೆ ಹೋಲುತ್ತವೆ ಎಂಬುದು ತಿಳಿಯಲಿಲ್ಲ. ಯಾದವರು ವಲಸೆ ಬಂದಿದ್ದರಷ್ಟೇ ಹೊರತು ಅಲೆಮಾರಿಗಳಾಗಿರಲಿಲ್ಲ. 3. ಅ. ಈ ತರ್ಕವನ್ನು ಮನಸಾರೆ ಮೆಚ್ಚಿದೆ :). ಆದರೆ ಕಂಸನಂತಹ ಕ್ರೂರಿಯ ಕೆಳಗೆ ಕೆಲಸ ಮಾಡುವವರು ಇಷ್ಟು ರಿಕ್ಸ್ ತೆಗೆದುಕೊಳ್ಳಬಲ್ಲರೇ? ಆ. ಇದು ನನ್ನ ಪ್ರಶ್ನೆಗೆ ಉತ್ತರವಲ್ಲ! ಇ. no comments. 4. 'ಕಳ್' ಎಂದರೆ ಹಾಲು ಅಂದೇ ಅರ್ಥ. ಬಳಕೆಯಲ್ಲಿ ಇಲ್ಲ ಅಷ್ಟೇ! ಒಂದು ಉದಾಹರಣೆಯಾಗಿ ಕಳ್ಳಿ ಹೇಳಿದೆ ಅಷ್ಟೇ. ಒಂದು ನುಡಿ,ಊರು ಹೆಸರಿನ ಹುಟ್ಟಿಗೆ ಸಾಕಷ್ಟು ಥಿಯರಿಗಳನ್ನು ಹೇಳಬಹುದು. ಶಂಭಾ ಜೀಶಿಯವರೇ ಸಾಕಷ್ಟು ಥಿಯರಿಗಳನ್ನು ಇಟ್ಟಿದ್ದಾರೆ. ಒಂದೇ ಥಿಯರಿಯ ಹಿಂದೆ ಬೀಳುವುದಕ್ಕಿಂತ ಯಾವ ಥಿಯರಿಗೆ ಹಿನ್ನೆಲೆ ಮತ್ತು ಸಂದರ್ಭಗಳು ಹೆಚ್ಚಿರುತ್ತವೋ ಅವನ್ನು ಹಿಂಬಾಲಿಸುವುದು ಸಂಪ್ರದಾಯ. ಇದು ನಿಜಕ್ಕೂ ಒಳ್ಳೆಯ ಚರ್ಚೆ. ಸಂತಸವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಹರ್ಷರವರೆ, ನಮಸ್ಕಾರ. ಮೊದಲಿಗೆ ದೀಪಾವಳಿಯ ಶುಭಾಶಯಗಳು. ತುಂಬ ಒಳ್ಳೆಯ ಬರೆಹವನ್ನು ಬರೆಯುವ ಮೂಲಕ ಒಳ್ಳೆಯ ಚರ್ಚೆಯನ್ನು ಹುಟ್ಟಿಹಾಕಿದ್ದೀರಿ. ರಾಮಾಯಣ ಮಹಾಭಾರತಗಳ ಬಗ್ಗೆ ಆಳವಾದ ಜ್ಞಾನವಿಲ್ಲವಾದರೂ, ಅದರ ಬಗ್ಗೆ ತಕ್ಕಮಟ್ಟಿಗೆ ಓದಿಕೊಂಡಿದ್ದೇನೆ. ಪುರಾಣಗಳಿಗಿಂತ ಇತಿಹಾಸದ ತಿಳಿವಳಿಕೆ ಚೆನ್ನಾಗಿರುವುದರಿಂದ ಅದರ ಬಗ್ಗೆ ಹಂಚಿಕೊಳ್ಳಬಯಸುತ್ತೇನೆ. "ಕೃಷ್ಣ ದ್ರಾವಿಡನೇ ಇರಬೇಕು ಎಂಬುದು ನನ್ನ ತರ್ಕ. ಮಹಾಭಾರತ ಯುದ್ಧದ ನಂತರ ದೈವ ಪಟ್ಟಕ್ಕೇರಿದ ಕೃಷ್ಣ ಕೆಳಜನಾಂಗದವನಾದರೆ ಸಹಿಸಲಾದೀತೆ? ಹಾಗಾಗಿ ಅವನನ್ನು ವಸುದೆವನ ಮಗನಾಗಿ ಕ್ಷತ್ರಿಯನಾಗಿ ಮಾಡಲಾಯಿತು. ದೈವಾಂಶ ಸಂಭೂತ ಎಂದು tag ಕೊಟ್ಟದ್ದರಿಂದ ಜೈಲಿನ ಕಥೆ ಹೆಣೆಯಲು ಸುಲಭವಾಯಿತು." ನಮ್ಮ ದೇಶದಲ್ಲಿ ಅಶ್ಟೇ ಯಾಕೆ ಇಡೀ ವಿಶ್ವದಲ್ಲೇ ಜನಪ್ರಿಯರಾದ ದೇವರುಗಳು - ಶ್ರೀಕೃಷ್ಣನಾಗಲಿ, ಶ್ರೀಗಣೇಶನಾಗಲಿ, ಶಿವನಾಗಲಿ ಮೇಲ್ಜಾತಿಯವರಾಗಲು ಸಾಧ್ಯವಿಲ್ಲವಾದರೂ ಮೇಲ್ಜಾತಿಯವರು ಇವರನ್ನು ತಮ್ಮ ಆಸ್ತಿಗಳನ್ನಾಗಿ ಮಾಡಿಕೊಂಡು ದೇವರುಗಳ ಹೆಸರಿನಲ್ಲೇ ನಮ್ಮ ರಾಜಕೀಯ ಪಕ್ಶವೊಂದು ರಾಜ್ಯಭಾರವನ್ನು ಮಾಡಿದ್ದಾಯ್ತು. ಇನ್ನು ಮುಂದೆಯೂ ಮಾಡುವ ಬಯಕೆಯಿಟ್ಟುಕೊಂಡಿದೆ. ನಮ್ಮ ರಾಜ್ಯದ ಬಗ್ಗೆಯೇ ಮಾತನಾಡುವುದಾದರೆ, "ಆನು ದೇವ ಹೊರಗಣವನು" ಕೃತಿಗೆ ಎದುರಾದ ವಿರೋಧಗಳು ತಮಗೆ ತಿಳಿದೇ ಇದೆ. 12ನೇ ಶತಮಾನದಲ್ಲೇ ಬಾಳಿ ಹೋದ ಬಸವಣ್ಣನನ್ನು ಮಾದಿಗರವನು ಎಂದು ಅವರ ವಚನಗಳ ಮೂಲಕವೇ ನಿರೂಪಿಸಹೊರಟಿದ್ದಕ್ಕೆ ರಾಜ್ಯದ ಬಹುಸಂಖ್ಯಾತ ಸಮುದಾಯ ಏನೆಲ್ಲ ಮಾಡಿತು! ರಾಮಾಯಣ, ಮಹಾಭಾರತವನ್ನು ಬರೆದ ವಾಲ್ಮೀಕಿ, ವ್ಯಾಸರೇ ಕೆಳಜಾತಿಯವರಾದರೂ ಅವರನ್ನು ಮರೆಮಾಚಿ(ಭೈರಪ್ಪನವರ ಮಾತಿನಲ್ಲಿ ಹೇಳುವಾದದರೆ "ಆವರಣ" ಗೊಳಿಸಿ) ಅವರು ಹೇಳಿದನ್ನು ತಮಗೆ ಬೇಕಾದಂತೆ ತಿರುಚಿ, ಅದನ್ನೇ ಸತ್ಯ ಎಂದು ನಿರೂಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಿರುವ ಪಟ್ಟಭದ್ರ ಹಿತಾಸಕ್ತಿಗಳು ಇನ್ನೂ ತಮ್ಮ ಆಟ ಬಿಟ್ಟಿಲ್ಲ. ಇಂತಹವರ ಹಿತಾಸಕ್ತಿಗಳು ಇತಿಹಾಸವನ್ನೇ ತಮಗೆ ಬೇಕಾದಂತೆ ಬರೆಸಿ ಇಡೀ ಶಿಕ್ಶಿತ ಸಮುದಾಯವನ್ನೇ ತಮ್ಮಂತೆ ಮಾಡಹೊರಟಿದ್ದನ್ನು ನಾವಿಲ್ಲಿ ನೆನಪುಮಾಡಿಕೊಳ್ಳಬೇಕಾಗಿದೆ. ಇನ್ನು ಬಹಳಶ್ಟು ವಿಶಯಗಳಿವೆ. ಮತ್ತೆ ಚರ್ಚಿಸುವೆ. ತಾವು ತಮ್ಮ ಈ ಚರ್ಚೆಯನ್ನು ಬೆಳೆಸಿ. ಒಳ್ಳೆಯದಾಗಲಿ. ನಮಗೆ ಸತ್ಯವೊಂದೇ ಮುಖ್ಯವಾಗಬೇಕೇ ಹೊರತು, ಯಾವುದೇ ಜಾತಿ, ಮತ, ಧರ್ಮಗಳಲ್ಲಿ ಎನ್ನುವುದು "ಗೋವಿನ ಹಾಡು" ಜನಿಸಿದ ಕನ್ನಡನಾಡಿನಲ್ಲಾದರೂ ಜಾರಿಗೆ ಬರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಾ..ಹಾ..! ಸರಿಯಾದ ಮಾತು. ನಮ್ಮ ತರ್ಕ ಹೇಳಲು ಹೊರಟರೆ ಒಬ್ಬರು ಜಾತಿವಾದಿ ಎನ್ನುತ್ತಾರೆ ಇನ್ನೊಬ್ಬರು ಎಡಪಂಥೀಯ ಅಂತಾರೆ ಮತ್ತೊಬ್ಬರು ಬುದ್ದಿಜೀವಿ ಅಂತಾರೆ. ಇದು ಇದ್ದದ್ದೇ. ಮೊನ್ನೆ ಒಬ್ಬರು ನನ್ನನ್ನು ಪರಿಚಯ ಮಾಡಿಕೊಡುತ್ತಾ ಇವರು ಒಮ್ಮೆ ಪ್ರಗತಿ ಪರ ಇನ್ನೊಮ್ಮೆ ಪ್ರಗಿತಿವಿರೋಧಿಯಾಗಿ ಮಾತನಾಡುತ್ತಾರೆ ಎಂದರು. ಪ್ರಗತಿ ಎಂದರೇನು ಅದರ definition ಏನು ಎಂಬುದರ ಬಗ್ಗೆ ಯೋಚಿಸತೊಡಗಿದೆ. ಇನ್ನೂ ಉತ್ತರ ಸಿಕ್ಕಿಲ್ಲ. ಅಂದ ಹಾಗೆ ಬಂಜಗೆರೆ ಯವರ ಸಂಶೋಧನೆಯಲ್ಲಿ ಸಾಕಷ್ಟು ಹುಳುಕುಗಳಿವೆ ಎಂಬುದು ನನ್ನ ಅನಿಸಿಕೆ. ಇದು ವಿವಾದವಾಗುವುದು ಸಹಜ. ಆದರೆ ವಸ್ತುನಿಷ್ಠ ಚರ್ಚೆ ನಡೆಸದೇ ಜಾತಿಲೇಪನ ಕೊಡುವ trend ನೋಡಿದರೆ ನಾವು ನಾಗರಿಕರಾಗುತ್ತಿದ್ದೇವಾ ಎಂಬ ಸಂಶಯ ಬರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು. "ಪ್ರಗತಿ" "ಶೀಲ" ಎರಡೂ ಸ್ತ್ರೀನಾಮಗಳು ಅನ್ನೋದು ಬಿಟ್ಟರೆ ವಿವರಣೆ ಕೊಡಿ ಎಂದರೆ ಕೊಡಲಾರರು. ಇನ್ನು ನಮ್ಮ ಜನರಿಗೆ "ತರ್ಕ"ನೂ ಬೇಕಾಗಿಲ್ಲ. "ಉತ್ಕರ್ಶ"ನೂ ಬೇಕಾಗಿಲ್ಲ. ಅವರು "ರಮ್ಯಚೈತ್ರಕಾಲ"ದವರು. "ಬಂಜಗೆರೆ ಯವರ ಸಂಶೋಧನೆಯಲ್ಲಿ ಸಾಕಷ್ಟು ಹುಳುಕುಗಳಿವೆ." ಇರಬಹುದು. ನಾನು ಮತ್ತೊಮ್ಮೆ ಓದಿ ಇದಕ್ಕೆ ಪ್ರತಿಕ್ರಿಯಿಸುತ್ತೇನೆ. ತಾವೂ ಇದರ ಬಗ್ಗೆ ಬರೆಯಿರಿ. "ವಸ್ತುನಿಷ್ಠ ಚರ್ಚೆ ನಡೆಸದೇ ಜಾತಿಲೇಪನ ಕೊಡುವ trend ನೋಡಿದರೆ ನಾವು ನಾಗರಿಕರಾಗುತ್ತಿದ್ದೇವಾ ಎಂಬ ಸಂಶಯ ಬರುತ್ತದೆ." ತಮಗೆ ತಿಳಿದಿರುವ ಹಾಗೆ, ಇಂದಿನಭಾರತ ಅಥವಾ ಇಂಡಿಯಕ್ಕೆ ತುಂಬ ಹತ್ತಿರವಿದ್ದ ನಾಗರಿಕತೆ ಅಂದರೆ, ಸಿಂಧೂ ಬಯಲಿನ ನಾಗರಿಕತೆ. ಅಲ್ಲಿ "ಜಾತಿ ವ್ಯವಸ್ಥೆ" ಇರಲಿಲ್ಲ ಅಂದ್ಕೊತೀನಿ. ಆದರೆ, ನಾವು ನಾಗರಿಕರು ಅಂತ ಕರೆದುಕೊಳ್ಳುವುದಕ್ಕೆ ಶುರು ಮಾಡಿದ ಮೇಲೆಯೇ ಈ ಜಾತಿವ್ಯವಸ್ಥೆ ಪ್ರಬಲವಾಗತೊಡಗಿದ್ದು. ಅದರಲ್ಲೂ ಕೋಮುಸಂಘರ್ಶ ಶುರುವಾಗಿದ್ದು ನಮ್ಮ ಆರ್ಥಿಕ ಉದಾರೀಕರಣದ ನಂತರವೇ ಅಲ್ಲವೇ?! ಅಂದರೆ, ನಾವು ಸೋ ಕಾಲ್ಡ್ ಪ್ರಗತಿ ಅಥವಾ ಅಭಿವೃದ್ಧಿಯನ್ನು ಹೊಂದಿದ ಮೇಲೆಯೇ. ನಾವು "ನಗರವಾಸಿ"ಗಳಾಗಿದ್ದೇವೆಯೇ ಹೊರತು, "ನಾಗರಿಕ"ರಾಗಿಲ್ಲ. ಆಗಲು ಸಾಧ್ಯ. ಆದರೆ, ಅಗುತ್ತೇವೆಯೇ ಅನ್ನೋದು "ದೊಡ್ಡ ಯಕ್ಶ ಪ್ರಶ್ನೆ." ಯಾರದೋ ಟೀ ಶರ್ಟ್ ಮೇಲೆ ಓದಿದ್ದು ನೆನಪಾಯ್ತು. "I was born intelligent but education ruined me." ಹಾಗಾಗಿದೆ ನಮ್ಮ ಪರಿಸ್ಥಿತಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.