ಇಂಟರ್ನೆಟ್ ಗಾಗಿ ಏನೆಲ್ಲ (೧)

2

 

 

ಕಳೆದ ತಿಂಗಳು ಕಡಿಮೆ ಸಮಯದಲ್ಲೇ ಬನಶಂಕರಿಯ ಬಾಡಿಗೆ ಮನೆ ಖಾಲಿ ಮಾಡಿ ಹೊಸತೊಂದು ಬಾಡಿಗೆ ಮನೆಗೆ ಹೋಗುವ ಸನ್ನಿವೇಶ ಎದುರಾಯಿತು. ಹೆಚ್ಚು ಕಾಲ ಬಾಡಿಗೆ ಮನೆಗಳಲ್ಲೇ ಇದ್ದದ್ದರಿಂದ ಮನೆ ಬದಲಾಯಿಸುವುದು, ಸಾಮಾನು ಸಾಗಿಸುವುದು ಈಗ ಕಷ್ಟವೆನಿಸುವುದಿಲ್ಲ. ಕಷ್ಟವಾಗುವುದು ಹೊಸ ಜಾಗದಲ್ಲಿ ಇಂಟರ್ನೆಟ್ ಕನೆಕ್ಷನ್ ತೆಗೆದುಕೊಳ್ಳುವುದು!

ಹಿಂದಿದ್ದ ಮನೆಯಲ್ಲಿ ಏರ್ಟೆಲ್ ಬ್ರಾಡ್ ಬ್ಯಾಂಡ್ ಹಾಕಿಸಿಕೊಂಡಿದ್ದೆ. ಬಿ ಎಸ್ ಎನ್ ಎಲ್ ಶಿಫ್ಟ್ ಮಾಡೋದು ತಿಂಗಳುಗಟ್ಟಲೆ ಹಿಡಿಯಬಹುದೆಂದು ಅದರ ತರಲೆಯೇ ಬೇಡವೆಂದು ಅದರೊಂದಿಗೆ ಹಾಕಿಸಿಕೊಂಡಿದ್ದ ಬ್ರಾಡ್ ಬ್ಯಾಂಡ್ ಕನೆಕ್ಷನ್ ತೆಗೆಸಿಹಾಕಿಬಿಟ್ಟಿದ್ದೆ. ಈಗ ಹೊಸ ಜಾಗದಲ್ಲಿ ಏರ್ಟೆಲ್ ರವರ ಕವರೇಜ್ ಇಲ್ಲ. ಮರಳಿ .... ಪಾದಕ್ಕೆ ಎಂಬಂತೆ ಬಿ ಎಸ್ ಎನ್ ಎಲ್ ಗೆ ಹೊಸತೊಂದು ಅರ್ಜಿ ಹಾಕಿದೆ. ಅರ್ಜಿ ಹಾಕಿ ಒಂದು ತಿಂಗಳಾದರೂ ಏನೂ ಇಲ್ಲ.

ಈ ಮಧ್ಯೆ ಅನಿಲ್ ಅಂಬಾನಿ ಸಾರಥಿಯಾಗಿ ನಡೆಸುತ್ತಿರುವ ರಿಲಯನ್ಸ್ ನ (ವಿ)ಭಾಗ ಬೆಂಗಳೂರಿನಲ್ಲಿ [:http://en.wikipedia.org/wiki/Wimax|Wimax] ಹೊರತಂದಿದೆಯೆಂದು ಕೇಳಿದೆ. ಆ ದಿನವೇ ಹೋಗಿ ಅವರಿಗೊಂದು ಚೆಕ್ ಕೊಟ್ಟು, ಸಾಧ್ಯವಾದಷ್ಟು ಬೇಗ ಹಾಕಿಸಿಕೊಡಿ ಎಂದು ಕೇಳಿದೆ. ದುಡ್ಡು ಪಡೆದದ್ದಕ್ಕೆ ಚೀಟಿಯಿಲ್ಲ, ಪತ್ರವಿಲ್ಲ. ಒಂದು ವಾರದಲ್ಲೇ ಯಾವುದೋ ಕಂಪೆನಿಯ ಇಬ್ಬರು ನಾವು ರಿಲಯನ್ಸ್ ಕಂಪೆನಿಗೆ ಕಾಂಟ್ರಾಕ್ಟ್ ಮೇಲೆ ಕೆಲಸ ಮಾಡುವವರು ಎಂದು ಹೇಳಿಕೊಂಡು ಲ್ಯಾಪ್ ಟಾಪ್ ಹಿಡಿದು ಬಂದರು. ಬಂದವರು ಮೇಲೆ ಕೆಳಗೆ ಓಡಾಡುತ್ತ ಮಹಡಿಯ ಮೇಲೆ ಒಂದು ರಿಸೀವರ್ ಕುಳ್ಳಿರಿಸಿದರು. ಆ ರಿಸೀವರಿನಿಂದ ವೈರು ಕೆಳಗೆ ಎಳೆದು ತಂದು "ಸಿಗ್ನಲ್ ಸಿಗ್ತು, ಇಂಟರ್ನೆಟ್ ಬಂತು, ಹೋ" ಎಂದು ಕುಣಿದಾಡಿದರು. ರಿಲಯನ್ಸಿನ ಟವರ್ ಹತ್ತಿರವೇ ಇರೋದರಿಂದ ಬಹಳ ಒಳ್ಳೆಯ ಸಿಗ್ನಲ್ ಸಿಕ್ಕಿತ್ತಂತೆ.

ನನಗೂ "ಅರೆರೆ ಎಷ್ಟು ಸುಲಭವಾಗಿ ಆಗಿಹೋಯ್ತು" ಎಂದನಿಸಿದರೂ "ಎಲ್ಲಿ, ಒಮ್ಮೆ ನೆಟ್ವರ್ಕ್ ಟೆಸ್ಟ್ ಮಾಡಿ ನೋಡಿ" ಎಂದೆ. ಏನೇ ಮಾಡಿದರೂ ಅವರು ತಂದಿದ್ದ ಲ್ಯಾಪ್ ಟಾಪ್ ನಿಂದ ಇಂಟರ್ನೆಟ್ ಕನೆಕ್ಟ್ ಆಗಲೇವಲ್ದು! ನನ್ನ ಲ್ಯಾಪ್ ಟಾಪ್ ಬಳಸಿ ನೋಡುವೆವು ಎಂದು ಕೇಳಿ ಪಡೆದರು. ಅದರಲ್ಲೂ ಆಗಲಿಲ್ಲ. ಕೊನೆಗೆ ಮತ್ತೆ ಮೇಲೆ ಕೆಳಗೆ ಓಡಾಡುತ್ತ ಅಲ್ಲೊಂದ್ ಸಾರಿ ಇಲ್ಲೊಂದ್ ಸಾರಿ ಟೆಸ್ಟ್ ಮಾಡುತ್ತ ಏನೂ ತೋಚದೆ ಹೆಣಗಾಡಿದರು. ಹಲವು ಗಂಟೆಗಳು ಕಳೆದ ಬಳಿಕ ಸೋತು "ಏನೋ ಸಾರ್, ಯಾಕೋ ಇಂಟರ್ನೆಟ್ ಬರ್ತಿಲ್ಲ. ಸೋಮವಾರ ಬಂದು ಮತ್ತೆ ನೋಡ್ತೀವಿ" ಎಂದುಕೊಂಡು ರಿಲಯನ್ಸ್ ಕಂಪೆನಿಯನ್ನು ಶಪಿಸುತ್ತ ಹೊರಟುಹೋದರು.

ಸೋಮವಾರ ಬೆಳಿಗ್ಗೆ ಇವರುಗಳು ಬರುವ ಮುನ್ನ ನಾನೊಮ್ಮೆ ಲಿನಕ್ಸಿನಿಂದ ಪ್ರಯತ್ನಿಸಿ ನೋಡಿದಾಗ ಕನೆಕ್ಟ್ ಆಗಿಬಿಡ್ತು. ನಡೆದದ್ದೇನೆಂದರೆ ಶನಿವಾರ ಭಾನುವಾರ ಎರಡೂ ದಿನ ಅವರ ನೆಟ್ವರ್ಕೇ ಎಗರಿಹೋಗಿತ್ತಂತೆ. ಸದ್ದಿಲ್ಲದೆ ಸೋಮವಾರದಷ್ಟೊತ್ತಿಗೆ ಸರಿಪಡಿಸಿದ್ದರು. ಈ ಸರ್ವೀಸಿನಡಿ ಪ್ರತಿ ಸಾರಿ ಇಂಟರ್ನೆಟ್ ಗೆ ಕನೆಕ್ಟ್ ಆಗುವಾಗ ರಿಲಯನ್ಸ್ ಪುಟದಲ್ಲಿ ಒಮ್ಮೆ ಲಾಗಿನ್ ಆಗಬೇಕಾಗುತ್ತದೆ. ಮೇಲೆ ಸಿಗಿಸಿರುವ ರಿಸೀವರಿನಲ್ಲಿ ಒಂದು ಮಾಡೆಮ್ ಅವಿತುಕೊಂಡಿರುತ್ತದೆ.

(ಮುಂದುವರೆಯುವುದು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹರಿ
ಅನುಭವ ಚೆನ್ನಾಗಿ ವಿವರಿಸಿದ್ದೀರ...
ಅದ್ಯಾಕೋ ನಾವು ಕೆಲಸ ಮುಗಿಯುವ ಮೊದಲೇ ಕುಣಿದು ಬಿಡುತ್ತೇವಲ್ಲ...?
ಮೊನ್ನೆ ಕೆಲಸದಲ್ಲಿ ಹೀಗೇ ಆಯ್ತು.. ಯಾವುದೋ ಡಿಪ್ಲಾಯ್‌ಮೆಂಟ್... ಚೆನ್ನೈನ ಒಂದು ಗುಂಪು ಮಾಡುತ್ತಿತ್ತು. ಅವರಿಗೆ ಸಹಾಯ ಮಾಡ್ತಿದ್ದೆ. ನಾನು ನನ್ನ ಭಾಗದ ಕೆಲಸ ಬೇಗ ಮುಗಿಸಿಬಿಟ್ಟೆ. ಆನಂದದಿಂದ 'ವಂಡರ್‍ಪುಲ್' ಅಂತ ಚಿಟಕಿ ಹೊಡೆದು ಹೊರಡಲು ತಯಾರಾದರು... ಟೆಸ್ಟ್ ಮಾಡೊಲ್ವ? ಅಂದಿದ್ದಕ್ಕೆ-ಸರಿಯಾಗಿರ್‍ತ್ತೆ ಸಾರ್‍... ಎಲ್ಲಾ ಮುಂಚೇನೇ ಟೆಸ್ಟ್ ಮಾಡಿದೀವಿ ಅಂದರು. "ಅಯ್ಯೋ ಇರಲಿ, ಒಂದು ಸಲ ನೋಡ್ರಪ್ಪ" ಅಂತ ನಕ್ಕೊಂಡು ಅಂದೆ. ಟೆಸ್ಟ್ ಮಾಡಿ ನೋಡಿದರೆ, ಏನೋ ಎಡವಟ್ಟು ಮಾಡಿಕೊಂಡಿದ್ದರು. ಮುಖ ಹುಳಿ ಮಾಡಿಕೊಂಡು, ನೋಡಿಕೊಂಡು ಬರ್‍ತೀವಿ ಅಂತ ಹೋದರು... ಹೀಗೆ.
ನಿಮ್ಮದಂತೂ ಸುಖಾಂತವಾಯ್ತಲ್ಲ...ಸಂತೋಷ. ಮುಂದಿನ ಭಾಗಕ್ಕೆ ಕಾಯ್ತಾ ಇದ್ದೀನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು.
ಈ ಕಾಮೆಂಟ್ ಓದಿಯೇ ಇರಲಿಲ್ಲ.

ಹೌದು, ಕೆಲಸವಾಗುವ ಮುನ್ನವೇ ಕುಣಿದು ಕುಪ್ಪಳಿಸಿರುತ್ತೇವೆ. ತದನಂತರದ ಘಳಿಗೆ awkward.

ರಿಲಯನ್ಸ್ ಅನುಭವ ಸುಖಾಂತ್ಯವಾಗಲಿಲ್ಲ. [:http://sampada.net/blog/hpn/23/12/2007/6763|ಈ ಬಗ್ಗೆ ಬರೆದಿರುವ ಮುಂದಿನ ಭಾಗ ಇಲ್ಲಿದೆ]. ವಿವಿಧ ಇಂಟರ್ನೆಟ್ ಸರ್ವೀಸುಗಳನ್ನು ಕೆಲವೇ ದಿನಗಳ ಅಂತರದಲ್ಲಿ ಬಳಸಿದ ಅನುಭವದ ಒಂದು ಲಾಗ್ ಇದು. ಬೆಂಗಳೂರಲ್ಲಿ ಹೊಸ ಇಂಟರ್ನೆಟ್ ಕನೆಕ್ಷನ್ ಪಡೆಯೋದಕ್ಕೆ ಹೊರಟಿರುವ ಹಲವರಿಗೆ ಉಪಯೋಗವಾಗಬಹುದು ಎಂಬ ಆಶಯದಿಂದ :-)

ಜೊತೆಗೊಂದು ನಾನೇ ಬರೆದ ಕಾರ್ಟೂನ್ ಕೂಡ ಸೇರಿಸಿರುವೆ ;-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.