ಹತ್ತು ಹತ್ತು ಇಪ್ಪತ್ತು...

0

ನಾವು ಚಿಕ್ಕವರಾಗಿದ್ದಾಗ ಹೀಗೊಂದು ಹಾಡು ಕಲಿಸಿದ್ರು...
ಸರಿಯಾಗಿ ಜ್ಞಾಪಕ ಇಲ್ಲ. ತಪ್ಪಿದ್ದರೆ, ಸರಿಯಾದದ್ದನ್ನು ತಿಳಿಸಿ...
ಮಕ್ಕಳಿಗೆ ಕಲಿಸಲು ಉಪಯೋಗ ಆಗುತ್ತೆ...

--------~ *~ ---------
ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು

ಇಪ್ಪತ್ತು ಹತ್ತು ಮೂವತ್ತು
ತೋಟದಿ ಮಾವಿನ ಮರವಿತ್ತು

ಮೂವತ್ತು ಹತ್ತು ನಲವತ್ತು
ಮಾವಿನ ಮರದಲಿ ಕಾಯಿತ್ತು

ನಲವತ್ತು ಹತ್ತು ಐವತ್ತು
ಮಾವನು ಕಂಡನು ಸಂಪತ್ತು

ಐವತ್ತು ಹತ್ತು ಅರವತ್ತು
ಕಲ್ಲನು ಬೀರಿದ ಸಂಪತ್ತು

ಅರವತ್ತು ಹತ್ತು ಎಪ್ಪತ್ತು
ಮಾವಿನ ಹಣ್ಣು ಉದುರಿತ್ತು

ಎಪ್ಪತ್ತು ಹತ್ತು ಎಂಬತ್ತು
ಮಾಲಿಯ ಕಂಡನು ಸಂಪತ್ತು

ಎಂಬತ್ತು ಹತ್ತು ತೊಂಬತ್ತು
ಸಂಪತ್ತು ಕಂಡನು ಆಪತ್ತು

ತೊಂಬತ್ತು ಹತ್ತು ನೂರು
ಓಡಿ ಮನೆಯ ಸೇರು...
--------~ *~ ---------

--ಶ್ರೀ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾನ್ಯರೆ,

ತಾವು ಬರೆದಿರುವ ಪದ್ಯದಂತೆ ಇದೆ ಆದರೆ ಇಲ್ಲಿ ಒಂದರಿಂದ ಹತ್ತು ಎಣಿಕೆ ಮಾತ್ರ
ಒಂದು ಎರಡು ಬಾಳೆಲೆ ಹಾರಡು
ಮೂರು ನಾಲ್ಕು ಅನ್ನವ ಹಾಕು
ಐದು ಆರು ಭೇಳೆಯ ಸಾರು
ಏಳು ಎಂಟು ಪಲ್ಲ್ಯಕೆ ದಂಟು
ಒಂಬತ್ತು ಹತ್ತು ಊಟದ ಆಟವು ಮುಗಿದಿತ್ತು.

ಈ ಪದ್ಯವನ್ನು ನಮ್ಮ ಅಕ್ಕೋರು (ಟೀಚರು) ಒಂದನೇ ಕ್ಲಾqಸಿನಲ್ಲಿ ಹೆಳಿಕೊಟ್ಟಿದ್ರು.
ಹೇಗಿದೆ ಸಾರ್ ಪದ್ಯ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು...
ನನಗೆ ತಿಳಿದ ಮಟ್ಟಿಗೆ ಇದು ಬಹು ಪ್ರಚಲಿತವಾದದ್ದು...

English ನಲ್ಲಿರುವ ಪದ್ಯಕ್ಕೆ ಹೋಲಿಸಿ ನೋಡಿ...
One two buckle my shoe ಇಂದ ಶುರು ಮಾಡಿ, Big Fat Hen ಗೆ ನಿಲ್ಲಿಸ್ತಾರೆ...ಏನು ಸಂಬಂಧಾನೋ ಗೊತ್ತಿಲ್ಲ Shoeಗೂ Henಗೂ :)

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೀಗೂ ಹೇಳುವರು...ಕೊನೆಯಲ್ಲಿ ಮಾತ್ರ ಬದಲಾಗಿದೆ...
(ಕೀಲಿಸಿದ ಕೆಲವ್ಉ ತಪ್ಪುಗಳನ್ನು ಸರಿ ಪಡಿಸಿದ್ದೇನೆ)

ಒಂದು ಎರಡು ಬಾಳೆಲೆ ಹರಡು
ಮೂರು ನಾಲ್ಕು ಅನ್ನವ ಹಾಕು
ಐದು ಆರು ಬೇಳೆಯ ಸಾರು
ಏಳು ಎಂಟು ಪಲ್ಲ್ಯಕೆ ದಂಟು
ಒಂಬತ್ತು ಹತ್ತು ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗಿದಿತ್ತು.

-ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಐವತ್ತರಲ್ಲಿ ನಾನು ಮುಗ್ಗರಿಸಿದೆ ಎನಿಸಿತು...ಇದು ಸರಿ ಅನ್ನಿಸುತ್ತೆ.... :)
-------------------

:

ಐವತ್ತು ಹತ್ತು ಅರವತ್ತು
ಸಂಪತ್ತು ಕೈಲಿ ಕಲ್ಲಿತ್ತು

ಅರವತ್ತು ಹತ್ತು ಎಪ್ಪತ್ತು
ಕಲ್ಲನು ಬೀರಿದ ಸಂಪತ್ತು

ಎಪ್ಪತ್ತು ಹತ್ತು ಎಂಬತ್ತು
ಮಾವಿನ ಹಣ್ಣು ಉದುರಿತ್ತು

ಎಂಬತ್ತು ಹತ್ತು ತೊಂಬತ್ತು
ಮಾಲಿಯ ಕಂಡನು ಸಂಪತ್ತು

ತೊಂಬತ್ತು ಹತ್ತು ನೂರು
ಓಡಿ ಮನೆಯ ಸೇರು

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೇ ರೀತಿ ಮತ್ತೊಂದು ಒಂದರಿಂದ - ಹತ್ತರ ಪದ್ಯ ಇದೆ. ಬಹುಶಃ ರಾಜರತ್ನಂ ಬರೆದದ್ಧು... ?

"ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಮಲಗಿ
ಮೂರು ಕರಡಿಗಳಾಡುತ್ತಿದ್ದವು
ನಾಲ್ಕು ಮರಿಗಳ ಸೇರಿಸಿ.
ಐದು ಜನರಾ ಬೇಟೆಗಾರರು
ಆರು ಬಲೆಗಳನೆಳೆದು ತಂದು
ಏಳು ಕರಡಿಯ ಹಿಡಿದು ನೋಡದೆ
ಎಂಟು ಹಿಡಿದೆವು ಎಂದರು.
ಒಂಬತ್ತು ಎಂದನು ಅವರಲ್ಲೊಬ್ಬ
ಹತ್ತು ಎಂದನು ಬೇರೆಯವನು
ಎಣಿಸಿ ನೋಡಿದರೇಳೆಯೇಳು
ಇಲ್ಲಿಗೀ ಕಥೆ ಮುಗಿಯಿತು."

ಕಥೆ, ಗಣಿತ, ಮನುಷ್ಯ ಸ್ವಭಾವ ಎಲ್ಲಾ ಇದೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.