ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ

To prevent automated spam submissions leave this field empty.

ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ

ಮೊದಲು ಬಿ.ಏ. ಕಲಿತರು ಸಾಕು ಅದೇ ದೊಡ್ಡ ಪದವಿ, ಜತೆಗೆ ಒಳ್ಳೆಯ ನೌಕರಿ ಸಿಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಏನೇನೋ ಪದವಿಗಳನ್ನು ಕಲಿತರೂ ಕೆಲಸ ಬೇಗನೆ ಸಿಗುವುದಿಲ್ಲ. ಶಿಕ್ಷಣ ಹೇಗಿರಬೇಕು ಎಂಬುದರ ಬಗ್ಗೆ ಹಲವಾರು ಲೇಖನಗಳನ್ನು ನಾವೆಲ್ಲ ಓದಿದ್ದೇವೆ. ಮೊನ್ನೆ ನಮ್ಮ ಹಳೆಯ ಮಿತ್ರರ ಕೂಟದಲ್ಲಿ ಈ ಚರ್ಚೆ ನಡೆಯಿತು. ಹಳೆಯ ಮಿತ್ರರ ಕೂಟ ಇದೇನು ಸಂಘಟನೆಯಲ್ಲ, ಬೆಂಗಳೂರಿನಲ್ಲಿದ್ದ ನನ್ನ (ಗದುಗಿನ) ಊರಿನ ಮಿತ್ರರು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಿದಾಗ ಸ್ಪಷ್ಟ ವಾದದ್ದು ಪದವಿಯಲ್ಲಿ ಕಲಿತದ್ದೆ ಬೇರೆ ಪ್ರಾಯೋಗಿಕವಾಗಿ ಮಾಡುತ್ತಿರುವುದೇ ಬೇರೆ. ಇದು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಎಮ್.ಬಿ.ಎ ಹೀಗೆ ಅನೇಕ ವೃತ್ತಿಪರ ಕೋರ್ಸ್ ಗಳಿಗೂ ಅನ್ವಯಿಸುತ್ತದೆ. ಪದವಿಯಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ಕೆಲಸಕ್ಕೆ ಸೇರಿದಾಗ ಮತ್ತೆ ಕಲಿಯುವುದು ಬೇರೆಯದನ್ನೆ ಅಂದಮೇಲೆ ಪದವಿಯಲ್ಲಿರುವ ಪಠ್ಯಕ್ರಮವನ್ನು ಕೊಂಚವಾದರೂ ಬದಲಿಸಿದರೆ ಸಮಂಜಸ ಅನ್ನಿಸಿತು. ಪತ್ರಿಕೋದ್ಯಮ ಪದವಿ ಪಡೆದ ವಿದ್ಯಾರ್ಥಿಗೆ ಬರಹ ಅಥವಾ ನುಡಿ ತಂತ್ರಾಶಗಳ ಗೊತ್ತಿರದಿದ್ದರೆ ಹೇಗೆ? ಈ ಸಮಸ್ಯೆಯನ್ನು ಬಹಳ ಜನರು ಅನುಭವಿಸಿದ್ದಾರೆ. ಅದನ್ನು ಪದವಿಯಲ್ಲಿ ಕಲಿಸಿದರೆ ಈ ಚಿಂತೆ ಇರುವುದಿಲ್ಲ ಅಲ್ಲವೇ. ಚಲನಚಿತ್ರ ನಿರ್ಮಾಣದ ಕುರಿತು ತರಬೇತಿಯನ್ನು ನೀಡುತ್ತಾರೆ. ಆದರೆ ಚಿತ್ರಿಕರಣ ಸಮಯ ಎಲ್ಲವೂ ಹೊಸತಾಗಿಯೇ ಕಾಣುತ್ತದೆ. ಕಲಿತ ಒಂದು ಅಂಶಗಳು ಅಲ್ಲಿರುವುದಿಲ್ಲ. ಇದೆಲ್ಲ ನಮ್ಮ ಮಿತ್ರರ ಅನುಭವಗಳು. ವಾಣಿಜ್ಯ ಪದವಿಯನ್ನು ಕಲಿತವರಿಗೆ ಸಿ.ಎ. ಕಡೆಗೆ ಕೆಲಸ ಸೇರಿದಾಗ ಲೆಕ್ಕಶಾಸ್ತ್ರ ವೆಲ್ಲ ಹೊಸತೇ ಕಾಣುತ್ತದೆ. ೧ ರಿಂದ ೧೦ ನೇ ತರಗತಿಯ ವರೆಗೆ ಕಲಿಯುವುದು ಸಾಮಾನ್ಯ ಜ್ನಾನವನ್ನು ವೃದ್ಧಿಸಿಕೊಳ್ಳುವುದಕ್ಕೆ ಅದಿರಲಿ. ಆದರೆ ಪದವಿಯಲ್ಲಿ ಏನು ಕೆಲಸ ಮಾಡಬೇಕೊ ಅದನ್ನು ಹೇಳಿಕೊಟ್ಟರೆ ಕೆಲಸ ಕೊಡುವವರಿಗೂ ಸುಲಭ ಅಲ್ಲವೇ. ಇಂದಿನ ಪಠ್ಯಕ್ರಮದಲ್ಲಿ ಏನೇನು ಬದಲಾಗಬೇಕು ? ನಿಮ್ಮ ಅನಿಸಿಕೆಯ ಅಗತ್ಯವೂ ಇದೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮಪ್ಪ ಹೆಚಗಿ ಸಾಲಿ ಕಲ್ತವರಲ್ಲ. ’ಇದೆಲ್ಲ ಸಾಲಿಯಾಗ್ ಹೇಳಾಂಗಿಲ್ಲ’ ಅನ್ನೊದು ಅವರ ಕಾಮನ್ನ್ ಡಯಲಾಗು.

growing up we learnt all about the map of india, but knew nothing about the map of how our town. genghis khan, napolean and akbar we learnt about but nothing about abbakka, benki nawab and kempe gowda, who i now learn, via internet, was a pioneer in rainwater harvesting. the constitution of india and magna carta we learnt about but not who or what a mayor, a corporator or a panchayati head is. it is left to word of mouth learning post graduation to know how local governance works. what the byelaws and traffic rules are, what is meant by a revenue site or an agri land. what use is a education in civics without knowledge of these everyday essential facts?

(ಇದನ್ನ ಇನ್ನೊಂದ ಕಡಿ ಪೊಸ್ಟ ಮಾಡಿದ್ದೆ ಅದಕ ಹಂಗೆ ಇಳಶೀನಿ ಯೆನ್ ಅನಕೊಬ್ಯಾಡ್ರಿ)

ಸುಬ್ಬಣ್ಣಾರ, ನೀವು ಹೇಳಿದ್ದ ಖರೆ ಐತಿ. NCERT ಅಂಥಾ ಸಂಸ್ಥೆಗಳು ಎಲ್ಲಾರಿಗೂ ಒಂದ ಸೈಜಿನ ಅಂಗಿ ಹಾಕಬೇಕಂತಾವ. ಗಣಿತ ಮತ್ತ ವಿಜ್ಞಾನಕ್ಕ ಸರಿ, ಆದ್ರ ಇತಿಹಾಸ ಮತ್ತ ಸಮಾಜಶಾಸ್ತ್ರಕ್ಕ ಸರಿ ಹೋಗಂಗಿಲ್ಲಾ. ಸ್ಥಳೀಯ ಇತಿಹಾಸಾನ ನಾವು ಕಲಿಯೂದ ಕಮ್ಮಿ. ಬೆಂಗಳೂರಿನ ಎಷ್ಟ್ ಕನ್ನಡ ಮಕ್ಳಿಗೆ ಕೆಂಪೇಗೌಡನ ಬಗ್ಗೆ ಗೊತ್ತೈತಿ? ನಮ್ಮ ನಾಡಿನ್ಯಾಗ ಹರಿಯೋ ನದಿಗಳ ಬಗ್ಗೆ ಏಷ್ಟು ತಿಳ್ಕೊಂಡಿರ್ತಾರ ಈ ಮಕ್ಳು? ೧೮೫೭ರ ಸಿಪಾಯಿ ದಂಗೆ ಬಗ್ಗೆ ಎಲ್ಲಾರೂ ಓದಿರ್ತಾರ. ಆದ್ರ ಸುರಪುರದ ವೆಂಕಟಪ್ಪ ನಾಯಕ ಅಥವಾ ನರಗುಂದದ ಬಾಬಾಸಾಹೆಬನ ಬಗ್ಗೆ ಗೊತ್ತಿರೂದ ಕಮ್ಮಿ. ICSE/CBSE ಸಾಲಿಗಳಲ್ಲಿ ಸ್ಥಳೀಯ ಇತಿಹಾಸ, ಸಂಸ್ಕೃತಿ, ಭುಗೋಳದ ಬಗ್ಗೆ ಕಲಿಯೋದ ಇನ್ನೂ ಕಮ್ಮಿ.

ಕೊಪ್ಪರ್ ಸರ್, ಪಾಟೀಚೀಲಗಳು ಗೋಣಿಚೀಲದಷ್ಟು ವಜ್ಜ ಇರೂ ತನ್ಕಾ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಹೆಚ್ಚಿನ ನಿರೀಕ್ಷೆ ಇಟಗೋಬಾರ್ದ. ದಪ್ಪ ದಪ್ಪ ಪುಸ್ತಕಾ ಓದಿದ್ರ ಮಕ್ಳು "ಬುದ್ದಿವಂತ"ರಾಗ್ತಾರ ಅನ್ನೋ ಅಪನಂಬಿಕೀನೂ ಐತಿ. ನಮ್ಮ ವ್ಯವಸ್ಥೇಯೊಳಗ ಮಹತ್ವಾ ಕೊಡೋದು ಬರೆ quantatitative knowledgeಕ್ಕ ಮಾತ್ರ. ಸೃಜನಶೀಲತೆ (creativity), ಸ್ವತಂತ್ರವಾಗಿ ವಿಚಾರಾ ಮಾಡೋದು (independent thinking) ಮತ್ತು critical thinking (ವಿಮರ್ಶಾತ್ಮಕ ವಿಚಾರ?) ಗಳಿಗೆ ಹೆಚ್ಚಿನ ಮಹತ್ವಾನ ಇಲ್ಲ. ಕಾಲೇಜಗಳಲ್ಲಿ ಕೆಲಸಕ್ಕ ಬೇಕಾದ ಎಲ್ಲ skills ಕಲಿಸೊದು ಅಸಾಧ್ಯದ ಕೆಲ್ಸಾ. practical/project work ಗಳಿಗೆ ಸ್ವಲ್ಪ ಮಹತ್ವಾ ಇರಬೇಕ. Internship, apprenticeship and other forms of business/industry interactions should be encouraged. ಪಠ್ಯಕ್ರಮ ಬದಲ ಮಾಡಬಹುದು. ಅದಕ್ಕ ತಕ್ಕಂಗ ಹೆಚಗಿ ರೊಕ್ಕಾನೂ ಬೇಕು ನಮ್ಮ ಸಾಲಿ/ಕಾಲೇಜಗಳಿಗೆ.