ಎದೆಯುಬ್ಬಿಸಲಿ ಹೇಗೆ...?

0

ಹೀಗೆ ಮೊನ್ನೆ ಬಸ್-ನಲ್ಲಿ ಹೋಗ್ತಾ ಇರ್ಬೇಕಾದ್ರೆ ಒಂದು ಗೋಡೆಯ ಮೇಲೆ ಹೀಗೆ ಬರೆಯಲಾಗಿತ್ತು..."ಎದೆಯುಬ್ಬಿಸಿ ಹೇಳು, ನಾನೊಬ್ಬ ಕನ್ನಡಿಗ" ಅಂತ...ಅದನ್ನೋದಿದ ಕ್ಷಣ ನನಗನ್ನಿಸಿದ್ದು ಹೀಗೆ...

ಎದೆಯುಬ್ಬಿಸಲಿ ಹೇಗೆ?
ಆಗಿರುವಾಗ ನಾನೊಬ್ಬನೆ;

ಎದೆಯುಬ್ಬಿಸಲಿ ಹೇಗೆ?
ನನ್ನ ಮನೆಯಲ್ಲಿ ಪರಕೀಯ ನಾನಾಗಿರುವಾಗ;

ಎದೆಯುಬ್ಬಿಸಲಿ ಹೇಗೆ?
ಮನೆಯವರೆ
ಕಾಲೆಳೆಯುತಿರುವಾಗ;

ಎದೆಯುಬ್ಬಿಸಲಿ ಹೇಗೆ?
ನಮ್ಮ ಮನೆಯೆ
ಒಡೆದು ಹೋಗುತಿರುವಾಗ;

ಎದೆಯುಬ್ಬಿಸಲಿ ಹೇಗೆ?
ಉಪ್ಪುತಿಂದ ಮನೆಗೆ
ಕೇಡು ಬಗೆಯುವವರಿರುವಾಗ;

ಎದೆಯುಬ್ಬಿಸಲಿ ಹೇಗೆ?
ನಮ್ಮ ಮನೆಗೆ ಬಂದವರಿಗೆ
ಈ ಮನೆಯವ ನಾನೆಂದು ಹೇಳಬೇಕಾಗಿರುವಾಗ;

ಎದೆಯುಬ್ಬಿಸಲಿ ಹೇಗೆ?
ಹೆತ್ತು-ಬೆಳೆಸಿದ ತಾಯಿ
ಕಣ್ಣೀರಿಡುತ್ತಿರುವಾಗ;

ಎದೆಯುಬ್ಬಿಸಲಿ ಹೇಗೆ?
ಮೆರೆದ ಪೇಟಕ್ಕೆ
ಕೆಸರ ಮೆತ್ತುತ್ತಿರುವಾಗ;

ಎದೆಯುಬ್ಬಿಸಲಿ ಹೇಗೆ?
ದಾಹದಿಂದ
ದೇಹ ದಹಿಸುತಿರುವಾಗ;

ಎದೆಯುಬ್ಬಿಸಲಿ ಹೇಗೆ?
ಮನೆಯ ಗೋಡೆ ಗೋಡೆಗೂ
ನಮ್ಮ ಮನೆಯೆಂದು ಹಾಕಬೇಕಿರುವಾಗ;

ಎದೆಯುಬ್ಬಿಸಲಿ ಹೇಗೆ?
ಮನೆಯ ಒಡೆಯ
ಯಾರೆಂದು ತಿಳಿಯದಿರುವಾಗ;

ಎದೆಯುಬ್ಬಿಸಲಿ ಹೇಗೆ?
ಮನೆಯ ಬೇಲಿ ಎಲ್ಲಿಂದ ಎಲ್ಲಿವರೆಗೆ
ಎಂದು ತಿಳಿಯದಿರುವಾಗ;

ಎದೆಯುಬ್ಬಿಸಲಿ ಹೇಗೆ?
ಎದೆಯುಬ್ಬಿಸಲು
ಜಾಗವೆ ಇರದಿರುವಾಗ;

-----ಅಮರ್

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಮರನಾಥ್ ...

ಎದೆಯುಬ್ಬಿಸಲಿ ಹೇಗೆ...? ನನಗೂ ಈ ಪ್ರಶ್ನೆ ಕಾಡುತ್ತಿದೆ!....

ಕಟು ಸತ್ಯವನ್ನು ಬಹಳಷ್ಟು ಚೆನ್ನಾಗಿ ಬರೆದಿದ್ದೀರ...

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮನೆಯಲ್ಲಿ ನೀವು ಎಂದೂ ಪರಕೀಯರಲ್ಲ. ಪ್ರಪಂಚ ನೀವು ನೋಡಿದ ಹಾಗೆ. ಯಾವ ಬಣ್ಣದ ಕನ್ನಡಕ ಹಾಕ್ಕೋತೀರೋ ಆ ಬಣ್ಣ ಕಾಣುತ್ತೆ. ಮೆಜೆಸ್ಟಿಕ್‍ನಲ್ಲಿ ಫುಟ್‍ಪಾತ್ ಮೇಲೆ ಸಿಗೋ ಕಪ್ಪು ಕನ್ನಡಕ ಕೊಂಡರೆ ನಿಮಗೆ ಕಂಡ ಹಾಗೆ ಕಾಣುತ್ತೆ ಅಷ್ಟೆ!

ದಯವಿಟ್ಟು ಈ ತರಹದ ಯೋಚನೆಗಳನ್ನು ಬಿಟ್ಟು ಒಂದು ಆಶಾವಾದಿ ಮನೋಭಾವ ಬೆಳಸಿಕೊಳ್ಳಿ. ಕೀಳರಿಮೆ ಇರೋದು ಬೇಕಿಲ್ಲ. ಒಳ್ಳೇ ಸ್ನೇಹಿತರ ಸಂಗ ಮಾಡಿ. ಕನ್ನಡದಲ್ಲಿ ಉತ್ತಮ ಸಾಹಿತ್ಯ ಓದಿ. ಒಳ್ಳೇ ನಾಟಕಗಳನ್ನು ನೋಡಿ. ಹಾಡುಗಳನ್ನು ಕೇಳಿ. ನಿಮ್ಮ ನಾಡನ್ನು ಸುತ್ತಿ. ನಿಮ್ಮ ಆನಂದ ಬೇರೆಯವರೊಂದಿಗೆ ಹಂಚಿಕೊಳ್ಳಿ. ಸಂಪದ ಸಮುದಾಯ ಅಂತೂ ಇದ್ದೇ ಇದೆ. ಹಾಗೇನೆ ನಿರಾಶಾದಾಯಕ ಸುದ್ದಿ ಹಾಗು ಲೇಖನಗಳನ್ನು ಓದಿ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮದೇ ಒಂದು ಸ್ವಂತ ಅಭಿಪ್ರಾಯ ಬೆಳಸಿಕೊಳ್ಳೋ ಪ್ರಯತ್ನ ಮಾಡಿ.

ನಮ್ಮನ್ನ್ನು ನಾವು ಗೌರವಿಸಿಕೊಂಡರೆ ಪ್ರಪಂಚವೂ ನಮ್ಮನ್ನು ಗೌರವಿಸುತ್ತೆ. ಸ್ವಾಭಿಮಾನ ಬೆಳಸಿಕೊಂಡರೆ ಎದೆ ತಾನೆ ಉಬ್ಬುತ್ತೆ. ನೀವೇನೂ ಉಬ್ಬಿಸಬೇಕಾಗಿಲ್ಲ. ನಿಮಗೆ ಶುಭಾಶಯಗಳು.

-ನವರತ್ನ ಸುಧೀರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಷ್ಟೆಲ್ಲಾ ಹೇಳಿದ್ರೀ....ಚೆನ್ನಾಗಿ ಸರಿಯಾಗಿನೇ ಹೆಳಿದ್ದೀರಿ..

ಒಂದು ವಿಷಯವನ್ನು ಇಲ್ಲಿ ನಾನು ಹೇಳ್ಬೇಕು. ನನ್ನಂತೋವ್ರಿಗೆ ಯಾವತ್ತೂ ಕೀಳಿರಿಮೆ ಕಾಡೋದಿಲ್ಲ.!.. ಏಕೆಂದರೆ ಅವನ್ನು ಮೀರಿ ಬೇಳೆಯುವ / ಎದುರಿಸುವ ಒಂದು ವಿಲಕ್ಶಣ ಗುಣವನ್ನು ಆ ದೆವ್ರು ನನ್ನಂತಹವರಿಗೆ ಕೊಟ್ಟಿರ್ತಾನೆ!

ಇತ್ತೀಚೆಗೆ ಸಾಮಾನ್ಯವಾಗಿರುವ ಈ ರೀತಿಯ ವಿಶಯಗಳಿಗೆ ನನ್ನ ಅನಿಸಿಕೆಯನ್ನು ತಿಳಿಸಿದೆ... ಸುಳ್ಳು ಸುಳ್ಳೇ ಎದೆಯುಬ್ಬಿಸುವ ಅವಶ್ಯಕತೆಯೂ ಇಲ್ಲ.

ಇಲ್ಲಿ ಆಶಾದಾಯಕ - ನಿರಾಶಾದಾಯಕ ಆಟ ಏನೂ ಇಲ್ಲ. ಇದ್ದದ್ದು ಇದ್ದಂಗೆ ಅಶ್ಟೆ! ...

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು ಸುಧೀರ್ ಅವರೆ...
ಇಲ್ಲಿ ನಾನು ನಿರಾಶವಾದಿಯಾಗಿ ಬರೆದಿಲ್ಲ...ಈಗಿರೋ ಪರಿಸ್ಥಿಯ ಚಿತ್ರಣ ತೋರಿಸಲು ಪ್ರಯತ್ನ ಮಾಡಿದ್ದೇನೆ ಅಷ್ಟೆ...
ನಾನು ಕನ್ನಡಿಗ ಅಂತ ಹಿರಿಮೆ ನನ್ನಲ್ಲಿ ಇದ್ದೇ ಇದೆ...ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಅನ್ನೋದಕ್ಕೆ ನಿನ್ನೆ ನಡೆದ ಒಂದು ಘಟನೆಯೆ ನಿದರ್ಶನ (ಅದನ್ನ ಈ ಕೊಂಡಿಯಲ್ಲಿ ಓದಿ http://sampada.net/blog/vbamaranath/07/11/2007/6195)
ಕನ್ನಡ ರಾಜಧಾನಿಯಲ್ಲಿ ಇರೋರಿಗೆ ಜೋಳದ ರೊಟ್ಟಿ ಗೊತ್ತಿಲ್ಲ ಅಂದರೆ ಹೇಗೆ...ಮನಸ್ಸಿಗೆ ತುಂಬಾನೆ ಬೇಜಾರಾಯ್ತು.

ಅಮರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಗೆ 'ಕವಿರಾಜಮಾರ್ಗ' ಓದಿದಾಗ ಸಿಕ್ಕಾಪಟ್ಟೆ ಎದೆ ಉಬ್ಬಿತ್ತು :) :)
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗಳೂರಲ್ಲಿ ಇಂಗಲೀಸು ಎಲ್ಲೆಲ್ಲೂ ರಾಚುತ್ತೆ.

ಜೋಳ ಗೊತ್ತೋ ಇಲ್ಲವೋ, ಮೇಜ್ ಅಂತೂ ಎಲ್ರಿಗೂ ಗೊತ್ತು,
ಬೇಳೆ ಗೊತ್ತಿರಲ್ಲ, ದಾಲ್ ಗೊತ್ತು,
ಅಕ್ಕಿ/ಅನ್ನ ಅಂದರೆ ಏನು, ರೈಸಾ?
ರೊಟ್ಟಿ ಅನ್ನೋದು ರೋಟಿಯ ತಪ್ಪು ಉಚ್ಚಾರ ಅಂದುಕೊಳ್ಳೋರೆ ಹೆಚ್ಚು ಇಲ್ಲಿ,
ಹಾದಿ, ಓಣಿಗಳು ಇಲ್ಲಿಲ್ಲ, ಬರೀ ರೋಡು, ಕ್ರಾಸು, ಸ್ಟೇಜುಗಳೇ.
ಜಾಹಿರಾತುಗಳಲ್ಲಂತೂ ಕನ್ನಡ ಬೂತಕನ್ನಡಿ ಹಾಕೊಂಡ್ ಹುಡುಕಿದರೂ ಸಿಗಲ್ಲ, ಕನ್ನಡವನ್ನು ಆ ಕನ್ನಡಮ್ಮನೇ ಕಾಪಾಡಬೇಕು ಬೆಂಗಳೂರಲ್ಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.